Sunday, 15th December 2024

ಪೂರ್ವಭಾವಿ ಸಭೆ

ಕೊಲ್ಹಾರ: ಗುರುವಾರ ಬಾಡಗಂಡಿ ಸಕ್ಕರೆ ಕಾರ್ಖಾನೆ ಹಾಗೂ ಮುಳವಾಡ ಬಸವೇಶ್ವರ ಸಕ್ಕರೆ ಕಾರ್ಖಾನೆಗೆ ರೈತರ ನಿಯೋಗ ತೆರಳಿ ಕಬ್ಬಿನ ದರ ನಿಗದಿಗೆ ಆಗ್ರಹಿಸಿ ಮನವಿ ಸಲ್ಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತಸಂಘ ಹಸಿರು ಸೇನೆ ಕಬ್ಬು ಬೆಳೆಗಾರರ ಒಕ್ಕೂಟದ ತಾಲ್ಲೂಕ ಅಧ್ಯಕ್ಷ ಸೋಮು ಬಿರಾದಾರ ಹೇಳಿದರು.

ಕರ್ನಾಟಕ ರಾಜ್ಯ ರೈತಸಂಘ ಹಸಿರು ಸೇನೆ ಕಬ್ಬು ಬೆಳೆಗಾರರ ಒಕ್ಕೂಟ ದಿಂದ ಕಬ್ಬಿನ ದರ ನಿಗದಿಗೆ ಆಗ್ರಹಿಸಿ ಕಾರ್ಖಾನೆಗೆ ರೈತರೊಂದಿಗೆ ತೆರಳಿ ಮನವಿ ಸಲ್ಲಿಸುವ ಕುರಿತು ಕರೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಕಾರ್ಖಾನೆಗಳು ದರ ನಿಗದಿಮಾಡಿ ತದನಂತರ ಕಬ್ಬು ನುರಿಸುವ ಕಾರ್ಯಾ ಪ್ರಾರಂಭ ಮಾಡಬೇಕು ಎನ್ನುವುದು ಅವಳಿ ಜಿಲ್ಲೆಯ ರೈತರ ಆಗ್ರಹವಾಗಿದೆ ಪ್ರತಿ ಟನ್ ಕಬ್ಬಿಗೆ 5,500 ರೂಪಾಯಿ ದರ ನಿಗದಿಮಾಡಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ.

ಹಾಗಾಗಿ ನಾಳೆ ಗುರುವಾರ ಬಾಡಗಂಡಿ ಸಕ್ಕರೆ ಕಾರ್ಖಾನೆ ಹಾಗೂ ಮುಳವಾಡ ಬಸವೇಶ್ವರ ಸಕ್ಕರೆ ಕಾರ್ಖಾನೆಗೆ ರೈತರೊಂದಿಗೆ ತೆರಳಿ ಮನವಿ ಸಲ್ಲುಸುವ ಮೂಲಕ ಒತ್ತಾಯ ಮಾಡಲಾಗುವುದು ಎಂದು ಹೇಳಿದರು. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗಿಯಾಗಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ರೈತ ಮುಖಂಡ ನಂದಬಸಪ್ಪ ಚೌಧರಿ ಸಹಿತ ಅವಳಿ ಜಿಲ್ಲೆಯ ರೈತ ಮುಖಂಡರು ಭಾಗಿಯಾಗಿದ್ದರು.