Sunday, 24th November 2024

ಸರ್ಕಾರ ಎಸ್.ಸಿ ಎಸ್.ಟಿ ಮೀಸಲಾತಿ ಹೆಚ್ಚಳಕ್ಕೆ ಮುಂದಾಗಿದ್ದು ಸ್ವಾಗತಾರ್ಹ: ರಘುವೀರ ನಾಯಕ

ರಾಯಚೂರು: ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮೀಸಲಾತಿ ಹೆಚ್ಚಳಕ್ಕೆ ಮುಂದಾಗಿರುವ ರಾಜ್ಯ ಸರಕಾರ ಕ್ರಮ ಸ್ವಾಗತಾರ್ಹ ವಾಗಿದ್ದು, ಕೂಡಲೇ ಅನುಷ್ಠಾನಗೊಳಿಸಬೇಕು ಎಂದು ಹೈದ್ರಾಬಾದ್ ಕರ್ನಾಟಕ ವಾಲ್ಮೀಕ ನಾಯಕದ ಸಂಘದ ವಿಭಾಗೀಯ ಕಾರ್ಯದರ್ಶಿ ರಘುವೀರ ನಾಯಕ ಒತ್ತಾಯಿಸಿ ದರು.

ಮೀಸಲಾತಿ ಹೆಚ್ಚಳ ೪೦ ವರ್ಷಗಳ ಹೋರಾಟಕ್ಕೆ ಸಿಕ್ಕಫಲವಾಗಿದೆ. ೪೦ ವರ್ಷಗಳಿಂದ ಮೀಸಲಾತಿ ಹೆಚ್ಚಳ ಸಾಕಷ್ಟು ಪ್ರತಿಭಟನೆಗಳನ್ನು ಮಾಡಿದರು ಕೂಡ ಆಡಳಿತರೂಢ ಸರಕಾರಗಳು ಸಕಾರಾತ್ಮಕವಾಗಿ ಸ್ಪಂದಿಸದಿರುವುದನ್ನು ಮನಗಂಡು ಕಳೆದ ೩ ವರ್ಷಗಳಲ್ಲಿ ರಾಜನಹಳ್ಳಿ ಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಪುರಿ ಸ್ವಾಮಿಗಳು ಹೋರಾಟವನ್ನು ತೀವ್ರಗೊಳಿಸಿ ರಾಜನಹಳ್ಳಿಯಿಂದ ರಾಜಧಾನಿಯವರೆಗೆ ಪಾದಯಾತ್ರೆ ಕೈಗೊಂಡಾಗ, ಮೀಸಲಾತಿ ಹೆಚ್ಚಳಕ್ಕಾಗಿ ವರದಿ ಸಲ್ಲಿಸುವುದಕ್ಕೆ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಡಾ. ನಾಗಮೋಹನದಾಸ್ ಆಯೋಗವನ್ನು ರಚನೆ ಮಾಡುವುದರ ಮೂಲಕ ಈ ಮೀಸಲಾತಿ ಹೆಚ್ಚಳಕ್ಕೆ ಮೂರು ಪಕ್ಷದ ಕೊಡುಗೆಯನ್ನು ಕಡೆ ಗಣಿಸುವಂತಿಲ್ಲ.

ಹಾಗಾಗಿ ಈ ಮೀಸಲಾತಿ ಹೆಚ್ಚಳದ ರಾಜಕೀಯ ಲಾಭಕ್ಕಾಗಿ ಮುಂದಾಗುವ ಬದಲು ಸರಕಾರ ಈ ಮೀಸಲಾತಿ ಹೆಚ್ಚಳ ಪ್ರಯೋಜನ ಅರ್ಹ ಜನತೆಗೆ ತಲುಪಿಸುವ ನಿಟ್ಟಿನಲ್ಲಿ ಮುಂದೆ ಹೆಜ್ಜೆ ಇಡಬೇಕು. ಶೀಘ್ರವಾಗಿ ಈ ಮೀಸಲಾತಿ ಹೆಚ್ಚಳದ ಮುಂದಿನ ಪ್ರಕ್ರಿಯೆಗೆ ವೇಗವನ್ನು ಕೊಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರಮೇಶ ನಾಯಕ, ಬೋಳಬಂಡಿ ನಾಯಕ, ರಾಮಕೃಷ್ಣ ನಾಯಕ ಇದ್ದರು.