Sunday, 15th December 2024

ಡಿ.೫ ರಂದು ಸರ್ವಧರ್ಮ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ

ಇಂಡಿ : ಪಟ್ಟಣದ ಆರಾದ್ಯ ದೇವರಾದ ಶ್ರೀ ಶಾಂತೇಶ್ವರ ದೇವರ ಜಾತ್ರಾಮಹೋತ್ಸವದ ನಿಮಿತ್ಯ ಡಿ.೫ ರಂದು ಸರ್ವಧರ್ಮ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ.

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುವ ವಧು,ವರ ಸೂಕ್ತ ದಾಖಲೆ ಗಳೊಂದಿಗೆ ತಮ್ಮ ಹೆಸರು ನೊಂದಾಯಿಸಿ ಕೊಳ್ಳಬೇಕು ಎಂದು ಶ್ರೀ ಶಾಂತೇಶ್ವರ ಟ್ರಸ್ಟ ಕಮಿಟಿ ಅಧ್ಯಕ್ಷ,ಬಿಜೆಪಿ ರೈತ ಮೊರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ವಯಸ್ಸಿನ ದಾಖಲೆ,ವಾಸಸ್ಥಳ ಪತ್ರ ಹಾಗೂ ಭಾವಚಿತ್ರದೊಂದಿಗೆ ಡಿ.೫ ಒಳಗಾಗಿ ತಮ್ಮ ಹೆಸರು ನೊಂದಾಯಿಸಿಕೊಳ್ಳ ಬೇಕು.

ಹೆಸರು ನೊಂದಾಯಿಸಿಕೊಳ್ಳಲು ,ಕಾಸುಗೌಡ ಬಿರಾದಾರ ಮೊ.೮೧೦೫೯೬೧೩೧೦ ಹಾಗೂ ಶಾಂತೇಶ್ವರ ಪತ್ತಿನ ಸಹಕಾರಿ ಬ್ಯಾಂಕಿನ ವ್ಯವಸ್ಥಾಪಕ ಶಂಕರಗೌಡ ಪಾಟೀಲ, ಮೋ.೯೯೦೨೭೪೫೧೯೪ ಸಂಖ್ಯೆಗೆ ಸಂಪರ್ಕಿಸಬೇಕು ಎಂದು ಹೇಳಿದರು.