ಇಂಡಿ: ಸರಕಾರಗಳು ದುಡಿಯುವ ಕೈಗಳಿಗೆ ಉದ್ಯೋಗ ನೀಡದೆ ಕೇವಲ ದಿನಕ್ಕೊಂದು ಧರ್ಮ ಜಾತಿಗಳ ಮಧ್ಯ ವಿಷ ಬೀಜ ಬಿತ್ತಿ ದೇಶ ಹಾಳು ಮಾಡುತ್ತಿದ್ದು ಬಡವರ ಬಗ್ಗೆ, ದುಡಿಯುವ ವರ್ಗದ ಬಗ್ಗೆ ಚಿಂತನೆ ಇಲ್ಲ ಎಂದು ಸಿ.ಐ.ಟಿ.ಯು ನ ಜಿಲ್ಲಾ ಪ್ರಧಾನ ಕಾರ್ಯದರ್ಶೀ ಲಕ್ಷ್ಮಣ ಹಂದ್ರಾಳ ಹೇಳಿದರು.
ತಾಲೂಕಾ ಸರಕಾರಿ ನೌಕರರ ಭವನದಲ್ಲಿ ಆಯೋಜಿಸಿದ ಸಿ.ಐಟಿಯು ನ ೩ನೇ ತಾಲೂಕಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು ಜನರ ಸಮಸ್ಯಗಳು ಹೆಚ್ಚಾಗುತ್ತಿವೆ .ಉದ್ಯೋಗ ನಾಶವಾಗುತ್ತಿವೆ ಕೂಲಿ ಕಡಿಮೆಯಾಗಿದೆ ದಿನಸಿ ವಸ್ತುಗಳ ಬೆಲೆ ಗಗನ ಕ್ಕೇರಿದೆ ಹೀಗಾಗಿ ದುಡಿಮೆ ಜನರ ಕೂಲಿ ಕೂಡಾ ಹೆಚ್ಚಾಗಬೇಕು.
ಸರಕಾರಗಳು ಶ್ರೀಮಂತರ ಮತ್ತು ಉದ್ದಿಮೆದಾರರ ಆದಾಯ ಹೆಚ್ಚಿಸಲು ಬಡವರ ಕೂಲಿ ಕಸಿಯಲು ಮುಂದಾಗಿವೆ. ನನ್ನ ಮತ ಪಡೆದು ಅಧಿಕಾರಕ್ಕೆ ಏರಿದವರು ನಮ್ಮ ಬದುಕನ್ನೆ ನಾಶ ಮಾಡಲು ಹೊರಟ್ಟಿದ್ದಾರೆ ಇಂದು ದುರಂತ. ಬೆಲೆ ಏರಿಕೆ ನಿಯಂತ್ರಣ ಕನಿಷ್ಠ ಕೂಲಿ ನೀಡದ ಸರಕಾರ ಸಾಮಾಜಿಕ ಜಾಲತಾಣಗಳ ಸರ್ಕಾರದ ವೈಫಲ್ಯ ಮುಚ್ಚಿಡಲು ಪ್ರಚಾರ ತಂತ್ರ ಜನರಿಗೆ ಮೋಸ ಮಾಡುತ್ತಿದೆ. ಧರ್ಮದ ಹೆಸರಿನಲ್ಲಿ ಜನರ ನಡುವೆ ಜಗಳ ಮಾಡಿಸಿ ತಮ್ಮ ರಾಜಕೀಯ ಮಾಡುತ್ತಿದ್ದಾರೆ ಎಂದು ಸರಕಾರಗಳ ಕ್ರಮ ಟೀಕಿಸಿದರು.
ಸಮ್ಮೇಳನದ ಅಧ್ಯಕ್ಷತೆ ಭಾರತಿ ವಾಲಿ ವಹಿಸಿದರು. ಕಾಳಮ್ಮಾ ಬಡಿಗೇರ, ತುಕಾರಾಮ ಮಾರನೂರ, ಲಾಲಅಹ್ಮದಶೇಖ, ಈರಮ್ಮಾ ಪಾಟೀಲ,ಶೀವಶಂಕರ ಸಿಂಧೆ. ದಾಕ್ಷಾಯಣಿ ಅವಟಿ, ಶಂಕ್ರೇಮ್ಮ ಪುಟಾಣಿ, ಶಾರದಾ ತಾಂಬೆ, ದಾನಮ್ಮಾ ಮಸೂತಿ, ಶೂಭಾ ಕುಂಬಾರ, ದುಂಡಮ್ಮಾ ಸ್ಥಾವರಮಠ, ಸವಿತಾ ಜಾಡರ, ಸಂಗೀತಾ ಜಮಾದಾರ ಇದ್ದರು.
ತುಂಗಾ ಕುಲಕರ್ಣಿ ಪ್ರಾರ್ಥಿಸಿ, ಧಾನಮ್ಮಾ ಗುಗ್ಗರೆ ನೀರೂಪಿಸಿ, ಗಿರೀಜಾ ಸಕ್ಕರೆ ವಂದಿಸಿದರು.ಇದೇ ಸಂಧರ್ಬದಲ್ಲಿ ನೂನತ ಸಂಚಾಲಕ ಪದಾಧಿಕಾರಿಗಳ ಕಮೀಟಿ ನೇಮಿಸಲಾಯಿತು.