Saturday, 23rd November 2024

ಉತ್ತರ ಸಿಕ್ಕಿಂನಲ್ಲಿ ಭೂಕುಸಿತ: 550 ಪ್ರವಾಸಿಗರ ರಕ್ಷಣೆ

ಸಿಕ್ಕಿಂ: ತ್ತರ ಸಿಕ್ಕಿಂನಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿದೆ. ಸಿಲುಕಿರುವ 550 ಪ್ರವಾಸಿಗರನ್ನು ಭಾರತೀಯ ಸೇನೆ ರಕ್ಷಿಸಿದ್ದು, ಎಲ್ಲರಿಗೂ ವೈದ್ಯಕೀಯ ನೆರವು ಮತ್ತು ಆಹಾರ ಮತ್ತು ಕಠಿಣ ಹವಾಮಾನ ಪರಿಸ್ಥಿತಿಗಳಲ್ಲಿ ಸುರಕ್ಷತೆಗೆ ಮಾರ್ಗ ದರ್ಶನ ನೀಡಲಾಯಿತು.

ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ಸಿಲುಕಿರುವ ಪ್ರವಾಸಿಗರು ಮತ್ತು ಸ್ಥಳೀಯರಿಗೆ ಎಲ್ಲಾ ಸಹಾಯವನ್ನು ಒದಗಿಸುವಂತೆ ನಾಗರಿಕ ಆಡಳಿತದ ಕೋರಿಕೆಯ ಮೇರೆಗೆ ಲಾಚುಂಗ್‌ನಲ್ಲಿರುವ ಸೇನಾ ಶಿಬಿರ ತಕ್ಷಣವೇ ಕಾರ್ಯ ಪ್ರವೃತ್ತವಾಗಿ, ಅಗತ್ಯ ನೆರವನ್ನು ನೀಡುತ್ತಿದೆ ಎಂದು ಸೇನೆಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಚಳಿಯಿಂದಾಗಿ ನಡುಗುತ್ತಿದ್ದ ಕೆಲವು ಪ್ರವಾಸಿಗರನ್ನು ಹತ್ತಿರದ ವೈದ್ಯಕೀಯ ಸೌಲಭ್ಯಕ್ಕೆ ಕಳಿಸಲಾಗಿದೆ. ಬಾರ್ಡರ್ ರೋಡ್ ಆರ್ಗನೈಸೇಶನ್ (BRO) ಸಹ ಸ್ಥಳಕ್ಕಾಗಮಿಸಿದರೂ ಭಾರೀ ಭೂಕುಸಿತ ಮತ್ತು ಅಪಾರ ಮಳೆಯಿಂದಾಗಿ ಮಾರ್ಗವನ್ನು ತೆರೆವು ಗೊಳಿಸಲಾಗುತ್ತಿಲ್ಲ. ಭೂಕುಸಿತದಲ್ಲಿ ಸಿಲುಕಿರುವ ಪ್ರವಾಸಿಗರಿಗೆ ಸೇನೆ ನೀರು, ಆಹಾರ ಮತ್ತು ವೃದ್ಧರು ಮತ್ತು ಮಕ್ಕಳಿಗೆ ವೈದ್ಯಕೀಯ ಸೇವೆಯನ್ನು ನೀಡುತ್ತಿದೆ.

150 ಕ್ಕೂ ಹೆಚ್ಚು ವಾಹನಗಳ ಭಾರೀ ದಟ್ಟಣೆಯನ್ನು ನಿಯಂತ್ರಿಸಲು ಸಿಕ್ಕಿಂ ಪೊಲೀಸರಿಗೆ ಸೇನೆ ಸಹಾಯ ಮಾಡಿದೆ.