Saturday, 23rd November 2024

ಗುಜರಾತ್, ಹಿ.ಪ್ರದೇಶ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟ

ವದೆಹಲಿ: ಭಾರತೀಯ ಚುನಾವಣಾ ಆಯೋಗ ಶುಕ್ರವಾರ ದೆಹಲಿಯಲ್ಲಿ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಧಾನ ಸಭಾ ಚುನಾವಣೆಯ ದಿನಾಂಕಗಳನ್ನು ಪ್ರಕಟಗೊಳಿಸಿದೆ.

ಹಿಮಾಚಲ ಪ್ರದೇಶಕ್ಕೆ ಒಂದೇ ಹಂತದ ಚುನಾವಣೆ ನವೆಂಬರ್ 12 ರಂದು ನಡೆಯಲಿದೆ. ಮತಗಳ ಎಣಿಕೆ ಡಿಸೆಂಬರ್ 8 ರಂದು ನಡೆಯಲಿದೆ.

ನಾಮನಿರ್ದೇಶನಗಳನ್ನು ಮಾಡುವ ಕೊನೆಯ ದಿನಾಂಕ ಅ.25, ನಾಮನಿರ್ದೇಶನಗಳ ಪರಿಶೀಲನೆಯ ದಿನಾಂಕ ಅ.27,ಉಮೇದುವಾರಿಕೆಗಳನ್ನು ಹಿಂಪಡೆಯಲು ಕೊನೆಯ ದಿನಾಂಕ ಅ.29 ಆಗಿರುತ್ತದೆ.

ಗುಜರಾತ್ ಅಸೆಂಬ್ಲಿಯ ಅವಧಿಯು ಮುಂದಿನ ವರ್ಷ ಫೆಬ್ರವರಿ 18 ರಂದು ಕೊನೆ ಗೊಳ್ಳುತ್ತದೆ. ಹಿಮಾಚಲ ಪ್ರದೇಶದ ಅವಧಿ ಯು ಜನವರಿ 8, 2023 ರಂದು ಕೊನೆಗೊಳ್ಳು ತ್ತದೆ. ಚುನಾವಣಾ ಸಿದ್ಧತೆ ಪರಿಶೀಲಿಸಲು ಚುನಾವಣಾ ಸಂಸ್ಥೆಯು ಇತ್ತೀಚೆಗೆ ಎರಡು ರಾಜ್ಯಗಳಿಗೆ ಭೇಟಿ ನೀಡಿತ್ತು.

ಹಿಮಾಚಲ ಪ್ರದೇಶ 68 ವಿಧಾನಸಭಾ ಸ್ಥಾನಗಳನ್ನು ಹೊಂದಿದ್ದರೆ ಗುಜರಾತ್ 182 ಸ್ಥಾನಗಳನ್ನು ಹೊಂದಿದೆ.

ಪ್ರಸ್ತುತ ಬಿಜೆಪಿ ಆಡಳಿತದಲ್ಲಿರುವ ಗುಜರಾತ್‌ನಲ್ಲಿ ಮುಂಬರುವ ಚುನಾವಣೆಯಲ್ಲಿ ಆಮ್ ಆದ್ಮಿ ಗೆಲುವು ಸಾಧಿಸಿದರೆ ಮೂಲ ಸೌಕರ್ಯಗಳನ್ನು ಈಡೇರಿಸುವುದಾಗಿ ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.

ಇನ್ನೂ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಭೀತಿಯಿಂದ ಬಿಜೆಪಿ ಎಎಪಿ ಮೇಲೆ ದಾಳೀ ಮಾಡುತ್ತಿದೆ ಎನ್ನುವ ಆರೋಪಗಳಿವೆ. ಬಿಜೆಪಿ ಸತ್ಯೇಂದ್ರ ಜೈನ್ ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದೆ ಎಂದು ಎಎಪಿ ಆರೋಪ ಮಾಡಿದೆ. ಮುಂಬರುವ ಹಿಮಾಚಲ ಪ್ರದೇಶದ ಚುನಾವಣೆಗೆ ಎರಡೂ ಪಕ್ಷಗಳ ಬಲಾಬಲ ಪ್ರದರ್ಶನದ ನಿರೀಕ್ಷೆಗಳನ್ನು ಹೆಚ್ಚಿಸಿದೆ.