ಇಂಡಿ : ಸಂಸ್ಕೃತಿ ಹಾಗೂ ಸಂಪ್ರದಾಯ ಪಾಲನೆಗೆ ಬಣಜಿಗ ಸಮಾಜ ಹೆಸರುವಾಸಿಯಾಗಿದೆ.ವ್ಯಾಪಾರ ವಹಿವಾಟು ಮಾಡುತ್ತಲೆ ಸಮಾಜದ ದೀನ ದಲಿತರ ಕಲ್ಯಾಣಕ್ಕಾಗಿ ದಾನ ಧರ್ಮ ಮಾಡಿದ ಸಮಾಜ ಬಣಜಿಗ ಸಮಾಜವಾಗಿದ್ದು, ತಾಲೂಕಿನ ಸಮಾಜದ ಎಲ್ಲ ಜನರು ಸೇರಿಕೊಂಡು ನನ್ನ ಮೇಲೆ ವಿಶ್ವಾಸ,ನಂಬಿಕೆ ಇಟ್ಟು ನನ್ನನ್ನು ಬಣಜಿಗ ಸಮಾಜದ ತಾಲೂಕು ಅಧ್ಯಕ್ಷರನ್ನಾಗಿ ಮಾಡಿದ್ದು,ಸಮಾಜದ ಜನಗೆಯ ವಿಶ್ವಾಸಕ್ಕೆ ಬದ್ದನಾಗಿ ಸಮಾಜದ ಜಾಗ್ರತಿಯ ಜೊತೆಗೆ ಸಮಾಜ ಸಂಘಟನೆ ಮಾಡುವುದಾಗಿ ಬಣಜಿಗ ಸಮಾಜ ಕ್ಷೇಮಾಭಿವೃದ್ದಿ ಸಂಘದ ನೂತನ ಅಧ್ಯಕ್ಷ ಚನ್ನುಗೌಡ ಪಾಟೀಲ(ರೋಡಗಿ) ಹೇಳಿದರು.
ಅವರು ಗುರುವಾರ ಪಟ್ಟಣದಲ್ಲಿ ಅಭಿಮಾನಿಗಳು ಹಮ್ಮಿಕೊಂಡ ಸನ್ಮಾನ ಸಮಾರಂಭ ದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ ದರು. ನಮ್ಮ ಸಮಾಜ ಸಂಘಟಿಸುವುದರ ಜೊತೆಗೆ ಇತರೆ ಸಮಾಜದ ಪ್ರೀತಿ,ವಿಶ್ವಾಸ ಗಳಿಸಿಕೊಂಡು ಸಮಾಜ ಸಂಘಟನೆ ಮುನ್ನಡೆಸಿ ಕೊಂಡು ಹೋಗುವುದಾಗಿ ಹೇಳಿದ ಅವರು,ಸಮಾಜದ ಎಲ್ಲ ವರ್ಗದವರನ್ನು ಸಮನ್ವಯ ದಿಂದ ಕರೆದೊಯ್ಯುವ ಸಾಮರ್ಥ್ಯ ಬಣಜಿಗ ಸಮಾಜಕ್ಕೆ ಇದೆ.
ಸಮಾಜದಲ್ಲಿ ಬಣಜಿಗ ಸಮಾಜ ಮುಂಚೂಣಿಯಲ್ಲಿ ಇದೆ.ಅದು ಸಮಾಜದ ಒಳಿತಿಗೆ ಹೆಚ್ಚು ಕೊಡುಗೆ ನೀಡಿದೆ. ಬಣಜಿಗ ಸಮಾಜ ಎಸ್,ನಿಜಲಿಂಗಪ್ಪ,ಜೆ.ಎಚ್.ಪಟೇಲ ಸೇರಿದಂತೆ ಅನೇಕ ಮಹಾನ್ ನಾಯಕರನ್ನು ಜಗತ್ತಿಗೆ ಕೊಟ್ಟಿದೆ.ಸಾಮಾಜಿಕ,ಆರ್ಥಿಕ,ಧಾರ್ಮಿಕ ನಾಯಕತ್ವದಲ್ಲಿ ನಮ್ಮತನ ಉಳಿಸಿಕೊಂಡು ಹೋಗುವ ಚಿಂತನೆ ಮಾಡಬೇಕು.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಮಾಜ ಮುನ್ನಡೆ ಹೇಗೆ ಸಾಧ್ಯ ಎಂಬುದರ ಬಗ್ಗೆ ಗಂಭಿರ ಚಿಂತನೆ ನಡೆಯಬೇಕು. ನಮ್ಮ ಧರ್ಮ ಮತ್ತು ನಮ್ಮ ಹಿರಿಯರು ತೋರಿದ ಮಾರ್ಗವೇ ನಮಗೆ ಆದರ್ಶ ಆಗಬೇಕು.ಈ ನಿಟ್ಟಿನಲ್ಲಿ ಸಮಾಜದ ಸಂಘಟನೆಯ ಜವಾಬ್ದಾರಿ ನನ್ನ ಮೇಲೆ ಹೊರಿಸಿದ್ದು,ಅವರ ವಿಶ್ವಾಸಕ್ಕೆ ಚ್ಯುತಿ ಬರದಂತೆ ಸಮಾಜ ಸಂಘಟನೆಯಲ್ಲಿ ತೊಡಗುವುದಾಗಿ ಹೇಳಿದರು.
ಕಾಸುಗೌಡ ಬಿರಾದಾರ, ಆರ್.ವಿ.ಪಾಟೀಲ, ರಾಜಶೇಖರ ಯರಗಲ್ಲ, ಎಂ.ಆರ್.ಪಾಟೀಲ ಗೊಳಸಾರ, ಬತ್ತು ಸಾಹುಕಾರ ಹಾವಳಗಿ, ಹಣಮಂತ್ರಾಯಗೌಡ ಪಾಟೀಲ, ಭೀಮರಾಯಗೌಡ ಪಾಟೀಲ, ಸಿಕಿಂದರ ಬೊರಾಮಣಿ, ಸಿದ್ದಣ್ಣ ಗುನ್ನಾಪೂರ, ಶಿವಾನಂದ ರಾವೂರ, ಬುರುಕುಲೆ, ಅಣ್ಣಪ್ಪ ಬಿದರಕೊಟಿ, ಸಿ.ಬಿ.ತಾವರಖೇಡ, ಅಂಬಣ್ಣ ದೊತ್ರೆ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.