ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವನ್ನು ಮೆಹಬೂಬಾ ಮುಫ್ತಿ ಟೀಕಿಸು ತ್ತಲೇ ಬಂದಿದ್ದಾರೆ. ‘ಬಿಜೆಪಿಯನ್ನು ಅಧಿಕಾರದಿಂದ ದೂರವಿಟ್ಟರೆ, ಅದು ಸ್ವಾತಂತ್ರ್ಯ ಹೋರಾಟಕ್ಕಿಂತ ದೊಡ್ಡದು’ ಎಂಬ ಹೇಳಿಕೆ ನೀಡಿದ್ದರು.
ಕಾಶ್ಮೀರ ಪ್ರತ್ಯೇಕವಾದಿ ನಾಯಕ ಯಾಸಿನ್ ಭಟ್ಕಳ್‌ಗೆ ಜೈಲು ಶಿಕ್ಷಿ ವಿಧಿಸಿದ್ದನ್ನು ಮುಫ್ತಿ ಖಂಡಿಸಿದ್ದರು. ಕಾಶ್ಮೀರ್ ಫೈಲ್ಸ್‌ನಂತಹ ಚಿತ್ರದಿಂದ ಕಾಶ್ಮೀರದಲ್ಲಿ ಹಿಂಸಾಚಾರ ಹೆಚ್ಚಲಿದೆ ಎಂದು ಹೇಳಿದ್ದರು.
ಆರ್ಟಿಕಲ್ 370 ರದ್ದು ಮಾಡಿದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮುಫ್ತಿ ಅವರಿಗೆ ನೋಟಿಸ್ ನೀಡಲಾಗಿದೆ ಎಂಬ ಶಂಕೆಗಳು ವ್ಯಕ್ತವಾಗಿದೆ.