ಘಟನೆಯ ಬಗ್ಗೆ ದಾರಿಹೋಕರು ಮಾಹಿತಿ ನೀಡಿದ್ದು, ಸೊಹಗಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಕೂಡಲೇ ಬಸ್ ನೊಳಗೆ ಸಿಲುಕಿದ್ದ ಪ್ರಯಾಣಿಕರನ್ನು ಹೊರತೆಗೆಯುವ ಕೆಲಸಕ್ಕೆ ಮುಂದಾದರು. ಮೂರರಿಂದ ನಾಲ್ಕು ಮಂದಿ ಬಸ್ ಕ್ಯಾಬಿನ್ ಒಳಗೆ ಸಿಲುಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಸ್ ಉತ್ತರ ಪ್ರದೇಶದ ಜಬಲ್ಪುರದಿಂದ ರೇವಾ ಮೂಲಕ ಪ್ರಯಾಗ್ ರಾಜ್ ಗೆ ಹೋಗು ತ್ತಿತ್ತು. ದೀಪಾವಳಿ ಆಚರಣೆಯಲ್ಲಿ ಪಾಲ್ಗೊಳ್ಳಲು ಪ್ರಯಾಣಿಕರು ಮನೆಗೆ ತೆರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.