Friday, 22nd November 2024

ತೆಲಂಗಾಣದಲ್ಲಿ ಕಾಂಗ್ರೆಸ್‌ ಭಾರತ್ ಜೋಡೋ ಯಾತ್ರೆ ಆರಂಭ

ಹೈದರಾಬಾದ್‌: ನಾಲ್ಕು ದಿನಗಳ ವಿರಾಮದ ನಂತರ ತೆಲಂಗಾಣದಲ್ಲಿ ರಾಹುಲ್‌ ಗಾಂಧಿ ನೇತೃತ್ವದ ಕಾಂಗ್ರೆಸ್‌ ಭಾರತ್ ಜೋಡೋ ಯಾತ್ರೆ ಆರಂಭ ವಾಗಿದೆ.

ತೆಲಂಗಾಣ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಎ.ರೇವಂತ್ ರೆಡ್ಡಿ, ಸಂಸದ ಉತ್ತಮ್ ಕುಮಾರ್ ರೆಡ್ಡಿ, ಸಿಎಲ್‌ಪಿ ನಾಯಕ ಭಟ್ಟಿ ವಿಕ್ರಮಾರ್ಕ ಮತ್ತು ಪಕ್ಷದ ಹಲವಾರು ಮುಖಂಡರು ರಾಹುಲ್‌ ಗಾಂಧಿಯವರೊಂದಿಗೆ ಯಾತ್ರೆ ಬೆಳಗ್ಗೆ ಮಕ್ತಲ್‌ನಿಂದ ಯಾತ್ರೆ ಪ್ರಾರಂಭಿಸಿದರು.

ನಾಲ್ಕು ದಿನಗಳ ಅಂತರದ ನಂತರ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಗುರುವಾರ ತೆಲಂಗಾಣದ ನಾರಾಯಣಪೇಟ್ ಜಿಲ್ಲೆಯ ಮಕ್ತಲ್‌ನಿಂದ ಪುನರಾರಂಭಗೊಂಡಿದೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಇದು ಎರಡನೇ ದಿನದ ಯಾತ್ರೆ. ಭಾರತ್ ಜೋಡೋ ಯಾತ್ರೆ ಅ.23ರಂದು ಬೆಳಿಗ್ಗೆ ರಾಯಚೂರಿನಿಂದ ಕರ್ನಾಟಕ ದಿಂದ ನಿರ್ಗಮಿಸಿದ ನಂತರ ಗುಡೆಬೆಳ್ಳೂರು ಮೂಲಕ ರಾಜ್ಯವನ್ನು ಪ್ರವೇಶಿಸಿತ್ತು. ಚಿಕ್ಕದೊಂದು ಮೆರವಣಿಗೆಯ ನಂತರ ಇದು ಅಕ್ಟೋಬರ್ 26 ರವರೆಗೆ ವಿರಾಮ ತೆಗೆದುಕೊಂಡಿತ್ತು.

ಮಕ್ತಾಲ್‌ನಿಂದ 16 ದಿನಗಳ ಕಾಲ ತೆಲಂಗಾಣ ರಾಜ್ಯದಲ್ಲಿ ಯಾತ್ರೆ ಮುಂದುವರೆಯಲಿದ್ದು, 19 ವಿಧಾನಸಭಾ ಮತ್ತು 7 ಸಂಸದೀಯ ಕ್ಷೇತ್ರಗಳಲ್ಲಿ 375 ಕಿ.ಮೀ ದೂರದಲ್ಲಿ ಸಂಚರಿಸಲಿದ್ದು, ನವೆಂಬರ್ 7ರಂದು ಮಹಾರಾಷ್ಟ್ರ ಪ್ರವೇಶಿಸಲಿದೆ.