ಇಂಡಿ: ನಾಳೆ ೨೮ ರಂದು ಬಿ.ಜೆ.ಪಿ ಜಿಲ್ಲಾಉಪಾಧ್ಯಕ್ಷ ದಯಾಸಾಗರ ಪಾಟೀಲರವರ ಜನ್ಮದಿನವನ್ನು ಬಿಜೆಪಿ ಕಾರ್ಯಕರ್ತರು ಹಾಗೂ ದಯಾಸಾಗರ ಪಾಟೀಲ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದೆ.
ಅಂದು ಸಾಯಂಕಾಲ ೪-೦೦ ಗಂಟೆಗೆ ದಯಾಸಾಗರ ಪಾಟೀಲರ ೫೦ ನೇ ವರ್ಷದ ಸುವರ್ಣ ಮಹೋತ್ಸವ ಜನ್ಮದಿನದ ಪ್ರಯುಕ್ತ ಕಾರ್ಯಕರ್ತರು ಅಭಿಮಾನಿಗಳು ತಮ್ಮ ನಾಯಕನ ಜೊತೆ ಗೂಡಿ ಸೌಹಾರ್ದ ನಡಿಗೆ ಮೂಲಕ ಪಟ್ಟಣದ ಹೃದಯ ಭಾಗದಲ್ಲಿದ್ದ ಅಗಸಿ ಹನುಮಾನ ದೇವಸ್ಥಾನದಲ್ಲಿ ವಿಶೇಷ ಪೂಜ್ಯ ಸಲ್ಲಿಸಿದ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ನಂತರ ಬಸವೇಶ್ವರ ವೃತ್ತ್ದಿಂದ ನಗರದ ಆರಾಧ್ಯ ದೇವರಾದ ಶ್ರೀಶಾಂತೇಶ್ವರ ದೇವಸ್ಥಾನಕ್ಕೆ ತೆರಳಿ ದೇವರಿಗೆ ಪೂಜ್ಯ ಪುನಸ್ಕಾರ ಸಲ್ಲಿಸಿ ನಂತರ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿನ ಬಡರೋಗಿಗಳಿಗೆ ಹಣ್ಣು- ಹಂಪಲ ವಿತರಣೆ ಮಾಡಲಾಗುವುದು.
ಆದ್ದರಿಂದ ಕಾರ್ಯಕ್ರಮಕ್ಕೆ ಬಿಜೆಪಿ ಕಾರ್ಯಕರ್ತರು ಮತ್ತು ದಯಾಸಾಗರ ಪಾಟೀಲ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಉದ್ದಮಿ ಹಾಗೂ ಗುತ್ತಿಗೆದಾರ ಸೋಮಶೇಖರ ದೇವರ, ಪುರಸಭೆ ಸದಸ್ಯ ದೆವೇಂದ್ರ ಕುಂಬಾರ, ಬಿ.ಜೆ.ಪಿ ಮುಖಂಡ ಮಲ್ಲು ಹಾವಿನಾಳಮಠ ಪತ್ರೀಕಾಗೋಷ್ಠಿ ಉದ್ದೇಶಿಸಿ ಜಂಟಿ ಹೇಳಿಕೆ ನೀಡಿ ದ್ದಾರೆ.
ಶಾಂತುಗೌಡ ಬಿರಾದಾರ, ಶ್ರೀಶೈಲಗೌಡ ಬಿರಾದಾರ,ಪ್ರದೀಪ ಉಟಗಿ, ಪುರಸಭೆ ಸದಸ್ಯ ವಿಜಯಕುಮಾರ ಮೂರಮನ್ ,ದಯಾ ನಂದ ಪಾಟೀಲ, ಮಲ್ಲು ವಾಲೀಕಾರ, ಸಂತೋಷ ಮೇತ್ರಿ, ಆಕಾಶ ಖೇಡಗಿ, ಶಾಂತು ಕಂಬಾರ, ರಾಜು ತಾಂಬೆ, ಪ್ರಕಾಶ ಮಲಗಾಣ ಪತ್ರಿಕಾಗೋಷ್ಠಿಯಲ್ಲಿದ್ದರು.