Sunday, 17th November 2024

₹ 15 ಕೋಟಿ ಮೌಲ್ಯದ ಡ್ರಗ್ಸ್‌ ವಶ

ದಿಫು : ಕರ್ಬಿ ಅಂಗ್‌ಲಾಂಗ್‌ ಜಿಲ್ಲೆಯಲ್ಲಿ ಸುಮಾರು ₹ 15 ಕೋಟಿ ಮೌಲ್ಯದ ಡ್ರಗ್ಸ್‌ ವಶಕ್ಕೆ ಪಡೆಯಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎಂದು ಅಸ್ಸಾಂ ಪೊಲೀಸರು ತಿಳಿಸಿದ್ದಾರೆ.

ಇಲ್ಲಿನ ದಿಲ್ಲಾಯ್‌ ಚೆಕ್‌ ಪೋಸ್ಟ್‌ ಬಳಿ ತಪಾಸಣೆ ನಡೆಸಲಾಯಿತು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಉತ್ತರ ಪ್ರದೇಶ ನೋಂದಣಿ ಸಂಖ್ಯೆ ಹೊಂದಿದ್ದ ಹಾಗೂ ಮಣಿಪುರ ಕಡೆ ಯಿಂದ ಬೆಳಗ್ಗೆ ಬಂದ ವಾಹನವನ್ನು ತಪಾಸಣೆ ನಡೆಸಲಾಯಿತು. ಈ ವೇಳೆ ವಾಹನ ಹಿಂಬದಿಯಲ್ಲಿ ಅಡಗಿಸಿಟ್ಟಿದ್ದ ಸುಮಾರು 4 ಕೆ.ಜಿ.ಯಷ್ಟು ಮಾದಕ ವಸ್ತು ವಶಕ್ಕೆ ಪಡೆಯ ಲಾಗಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಇಬ್ಬರೂ ಮಣಿಪುರದವರು ಎಂದು ತಿಳಿಸಿದ್ದಾರೆ.

ವಶಕ್ಕೆ ಪಡೆಯಲಾದ ಮಾದಕ ವಸ್ತುವಿನ ಬೆಲೆ ₹ 15 ಕೋಟಿ ಎಂದು ಅಂದಾಜಿಸಲಾಗಿದೆ.