Monday, 16th December 2024

ಖಿನ್ನರಾಗಬೇಡಿ ಎಲ್ಲ ಸಮಸ್ಯೆಗೂ ಪರಿಹಾರಗಳಿವೆ

ಪರಿಶ್ರಮ

parishramamd@gmail.com

ದಿನದಲ್ಲಿ ಒಂದು ಕ್ಷಣವಾದರೂ ನಿಮಗೋಸ್ಕರ ಬದುಕಿ ಒಬ್ಬರೆ ಶಾಪಿಂಗ್‌ಗೆ ಹೋಗೋದನ್ನು ಕಲಿಯಿರಿ, ಒಬ್ಬರೆ ಸಿನಿಮಾಗೆ ಹೋಗಿ ನಿಮ್ಮ ತಲೆಯಲ್ಲಿ ಬರೋ ನೆಗೆಟಿವ್ ಆಲೋಚನೆಗಳನ್ನು ಅದಷ್ಟು ದೂರ ಇಡೋಕೆ ನೋಡಿ, ಅಪ್ಪ-ಅಮ್ಮನ ಜೊತೆ ಕಾಲ ಕಳೆಯಿರಿ, ನಿಮ್ಮನ್ನು ನೀವು ಸುಂದರವಾಗಿ ಕಾಣಿಸಿಕೊಳ್ಳೋಕೆ ಪ್ರಯತ್ನ ಮಾಡಿ ಹಾಗೆ ಸಮಸ್ಯೆ ಪರಿಹಾರ ಆಗುವುದಕ್ಕೆ, ಅದಕ್ಕೂ ಸ್ವಲ್ಪ ಸಮಯ ಕೊಡಿ.

ನಮ್ಮ ಜೀವನ ಹೇಗೆ ಹೋಗುತ್ತೆ ಅಂತ ಯಾರಿಗು ಗೊತ್ತಿಲ್ಲ, ಇವತ್ತು ಸಿಕ್ಕ ಗೆಳೆಯ-ಗೆಳತಿ ನಾಳೆ ಶತ್ರುಗಳಾಗಿ ಬಿಡ್ತಾರೆ, ನಮ್ಮವರು ಅಂತ ನಂಬಿ ನಮ್ಮೆಲ್ಲ ಸೀಕ್ರೇಟ್ ಶೇರ್ ಮಾಡಿಕೊಂಡವರು ನಾಳೆ ನಮ್ಮ ವಿರುದ್ಧಾನೆ ಕತ್ತಿ ಮಸಿಯುತ್ತಾರೆ.

ಜೀವನದ ದೊಡ್ಡ ಗುರು ಮಂತ್ರ ಏನ್ ಗೊತ್ತಾ? Don’t Share Your Secret with Anyone, ನೋಡಿ ಸ್ನೇಹಿತರೆ ನಿಮ್ಮ ಪ್ರೇಮ, ಜೀವನ, ನಿಮ್ಮ ಸಂಬಳ, ನಿಮ್ಮ ಮುಂದಿನ ನಡೆ, ಯಾರಿಗೂ ಗೊತ್ತಾಗದ ಹಾಗೆ ಒಮ್ಮೆ ಬದುಕಿ ನೋಡಿ, ಆಗ ಜೀವನ ಎಷ್ಟು ಸುಂದರ ಅನಿಸುವುದಕ್ಕೆ ಶುರುವಾಗುತ್ತೆ.

ನಾವು ಯಾಕೆ ಖಿನ್ನತೆ ಅಥವಾ ಖಿನ್ನ ಮನಸ್ಕರಾಗುತ್ತೇವೆ ಅಂತ ಯಾವ ತ್ತಾದರೂ ಒಂದು ದಿನ ಯೋಚನೆ ಮಾಡಿದ್ದೇವಾ? ಎಲ್ಲ ಸಮಸ್ಯೆಯ ಉದ್ಭವವಾಗುವುದೇ, ಅವಶ್ಯಕತೆಗಿಂತ ಹೆಚ್ಚಾಗಿ ಒಬ್ಬರನ್ನು ನಂಬೋದಲ್ಲ, ಅವರ ಮೇಲೆ ಅವಲಂಭಿತ ರಾಗೋಗುವುದೇ ನಾವು ಮಾಡೋ ಮೊದಲನೇ ತಪ್ಪು. ಯಾವಾಗ ಇದನ್ನ ಮಾಡುತ್ತೀವೋ ಆಗಲೇ ನಾವು ಡಿಪ್ರೆಸ್ಸನ್‌ಗೆ ಹೋಗುವ ಮೊದಲ ಹೆಜ್ಜೆ ಇಟ್ಟ ಹಾಗೆ.

ಎಲ್ಲದಕ್ಕಿಂತ ಲವ್ ಅಲ್ಲಿ ಇರೋ ಹುಡುಗ ಹುಡುಗಿಯರೇ ಇದಕ್ಕೆ ಬೇಗ ಬಲಿ ಆಗುವುದು, ಏಕೆಂದರೆ ಅವನಿಗೆ ಇವಳು, ಅವನ ಹುಡುಗಿ, ಇವಳಿಗೆ ಅವನು ಇವಳ ಹುಡುಗ. ಇಂತಹ ಸುಂದರ ಭ್ರಮೆಯಲ್ಲೇ ಬದುಕುವ ಹಲವು ಯುವ ಜನತೆಗೆ ಒಂದು ಸಣ್ಣ
ಮೆಸ್ಸೇಜ್/ರಿಪ್ಲೈ ಬರೋದೂ ತಡವಾದಾಗ, ಒಂದು ದಿನ ಸಿಗದೆ ಇದ್ದರಂತೂ, ಡಿಪ್ರೆಸ್ಸನ್‌ಗೆ ಜಾರಿಯೇ ಹೋಗಿರುತ್ತಾರೆ. ಇನ್ನು ತಂದೆ-ತಾಯಿಗಳು ಮಾಡೋ ತಪ್ಪನ್ನು ಇಲ್ಲಿ ಹೇಳಲೇಬೇಕು, ಅದು ನಾವು ಮೊದಲು ನಮ್ಮ ಕನಸನ್ನು ನಮ್ಮ ಮಕ್ಕಳ ಮೇಲೆ ಹೇರುವುದನ್ನು ಬಿಡಬೇಕು.

ನಾನು ಮಾಡುವುದಕ್ಕೆ ಆಗಲಿಲ್ಲ, ನೀನಾದರೂ ಅದನ್ನು ಮಾಡು ಅಂತ ಹೇಳೋ ತಂದೆ-ತಾಯಿ ತಮ್ಮ ಮಕ್ಕಳ ಕನಸನ ಬಗ್ಗೆ ಯಾವತ್ತು ಯೋಚನೆ ಮಾಡಿರೋದೆ ಇರಲ್ಲ, ಇಲ್ಲಿ ಇನ್ನೊಂದು ವಿಷಯ ಹೇಳಲೇಬೇಕು ಅದೇನೆಂದರೆ, ನಾವು ನಮ್ಮ ಮಕ್ಕಳನ್ನು ಬೇರೆ ಮಕ್ಕಳ ಜೊತೆ ಕಂಪೇರ್ ಮಾಡೋದನ್ನು ಬಿಡಬೇಕು. ಅವರ ಮಗ ಡಾಕ್ಟರ್ ಆದ ಅಂತ, ನಿಮ್ಮ ಮಗ
ಆಗಬೇಕು ಅಂತ ಏನಿಲ್ಲ. ನಿಮ್ಮ ಮಗನಿಗೆ ವಿಜ್ಞಾನಿ ಆಗುವ ತಾಕತ್ತು ಇರಬಹುದು. ಯಾರಿಗೆ ಗೊತ್ತು, ಮಕ್ಕಳನ್ನು ಕೇರ್ ಟೇಕರ್ ಹತ್ತಿರ ಬಿಟ್ಟು ಹೋಗೋ ಪಾಲಕರು, ಅವರ ಬುದ್ಧಿ ಕಲಿಯಲಿ, ಅವರಂತೆಯೇ ಜೀವನ ನಡೆಸಲಿ ಅಂತ ಯೋಚನೆ ಮಾಡೋದು ತಪ್ಪೇ.

ಮಕ್ಕಳ ಜೊತೆ ಯಾರು ಹೆಚ್ಚು ಸಮಯ ಕಳೆಯುತ್ತಾರೋ ಮಕ್ಕಳು ಅವರ ಬುದ್ಧಿಯನ್ನೇ ಕಲಿಯುತ್ತಾರೆ ಅನ್ನುವ
ಕಾಮನ್‌ಸೆನ್ಸ್ ನಮಗೆ ಯಾಕೆ ಬರಲ್ಲ. ಹೆಂಡತಿ ಜೊತೆ ಜಗಳ ಅಂತಾನೋ, ಗಂಡ ಕುಡುಕ ಅಂತಾನೋ ಡಿಪ್ರೆಸ್ಸನ್‌ಗೆ ಹೋಗೋ ನಾವು ಒಂದು ಸರೀ ಕೂತು ಮಾತಾನಾಡಿದರೆ, ಎಲ್ಲಾ ಸರೀ ಹೋಗುತ್ತಲ್ಲ ಅಂತ ಯಾಕೆ ಒಂದು ಸಾರಿಯೂ
ಯೋಚನೆ ಮಾಡುವುದಿಲ್ಲ? ಕೆಲಸದ ಟೆನ್ಸನ್ ಅನ್ನು ಸಂಸಾರದ ಸಮಸ್ಯೆ ಮಧ್ಯೆ ಸಿಲುಕಿಸಿ ಬದುಕುತ್ತಾ ಇರುವ ನಾವು. ಅದರಾಚೆ ಒಂದು ಬದುಕಿದೆ, ಆ ಬದುಕನ್ನು ನಾವು ಯಾಕೆ ಬದುಕುತ್ತಿಲ್ಲ. ಅಂತ ಒಂದು ಸಲನಾದ್ರೂ ಯೋಚನ ಮಾಡಿರಲಿಕ್ಕಿಲ್ಲ.

ನಿಮಗೆ ನಿಜವಾಗಲು ನೆಮ್ಮದಿ ಬೇಕೆಂದರೆ, ಒಂದು ಸಾರಿ ೬ ವರ್ಷದ ಮಕ್ಕಳ ಹತ್ತಿರ ದಿನ ೧ ಘಂಟೆ ಕಾಲ ಕಳೆಯಿರಿ, ಜೀವನದ ಗುಟ್ಟು ಗೊತ್ತಾಗಬೇಕಾ 60 ವರ್ಷ ವಯಸ್ಸಿನ ಮೇಲಿನವರ ಜೊತೆ 30 ನಿಮಿಷ ಮಾತಾನಾಡಿ ಯಾಕೆಂದರೆ ಎಲ್ಲವೂ ಗೂಗಲ್‌ನಲ್ಲಿ ಸಿಗುವುದಿಲ್ಲ, ಕೆಲವೊಂದು ವಿಷಯ ಮಕ್ಕಳಿಂದ ಕೆಲವೊಂದು ವಿಷಯ ದೊಡ್ಡವರಿಂದ ಕಲಿಯೋದು ಇದ್ದೇ ಇರುತ್ತದೆ.

ನಾವು ಜೀವನದಲ್ಲಿ ತಪ್ಪು ಹೆಜ್ಜೆ ಇಟ್ಟು, ನಂತರ ಅದಕ್ಕಾಗಿ ಕೊರಗುವುದು, ನಮ್ಮ ಹುಟ್ಟು ಗುಣ. ಯಾಕೆಂದರೆ ಕಷ್ಟ ಬಂದಾಗ ನಾವು ಯಾರ ಹತ್ತಿರ ಸಲಹೆ ತೆಗೆದುಕೊಳ್ಳುತ್ತೇವೆ ಅನ್ನೋದು ಕೂಡ ಮುಖ್ಯ ವಾಗುತ್ತದೆ. ಯಾಕೆಂದರೆ ಕಷ್ಟದ ಕಾಲದಲ್ಲಿ ಅರ್ಜುನ ಕೃಷ್ಣನ ಸಲಹೆ ತೆಗೆದುಕೊಂಡ, ದುರ್ಯೋಧನ ಶಕುನಿಯ ಸಲಹೆ ತೆಗೆದುಕೊಂಡ ನಂತರ ಏನಾಯ್ತು ಅನ್ನೋದು,
ಈಗ ಇತಿಹಾಸ ಅದಕ್ಕೆ ಹೇಳೋದು. ಸ್ನೇಹಿತರೇ ಒಬ್ಬ ಒಳ್ಳೆ ಸ್ನೇಹಿತ ನೂರು ಪುಸ್ತಕಕ್ಕೆ ಸಮಾನ ಅಂತ. ಪ್ರಪಂಚದಲ್ಲಿ
ಎಲ್ಲೂ ಸರಿಯಾದ ಜೋಡಿಯಾಗಲಿ, ಸ್ನೇಹಿತರಾಗಲಿ, ಸಿಗೋಲ್ಲ ಸರಿಯಾದ ಜೋಡಿ ಅಂತ ಏನಾದರೂ ಸಿಕ್ಕರೆ ಅದು ಚಪ್ಪಲಿಯಲ್ಲಿ ಮಾತ್ರ, ಉಳಿದಿದ್ದೆಲ್ಲ ಕಡೆ ನಾವು ಅಡ್ಜಸ್ಟ್ ಮಾಡಿಕೊಳ್ಳಲೇಬೇಕು.

ಜೀವನ ನಡೆಸೋಕೆ ಬಹಳ ಸುಲಭವಾದ ಸೂತ್ರಗಳಿವೆ. ಅದನ್ನು ನಾವು ರೂಢಿ ಮಾಡಿಕೊಂಡರೂ ಸಾಕು. ಈಗಿರುವ ಸಮಸ್ಯೆಗೆ ನಾವು ದೊಡ್ಡ ಸಮಸ್ಯೆ ತರ ಕಾಣಿಸೋಕೆ ಶುರುವಾಗಿ ಬಿಡ್ತೀವಿ. ಮೊದಲು ನಾವು ಬೇರೆಯವರ ಮೇಲೆ ಡಿಪೆಂಡ್ ಆಗೋದನ್ನು ಮೊದಲು ಬಿಡಬೇಕು, ನಮ್ಮ ಖುಷಿನ ಬೇರೆಯವರ ಕೈಯಲ್ಲಿ ಕೊಟ್ಟು ಅವರು ಸ್ವಲ್ಪ ವ್ಯತ್ಯಯ ಆದರೂ ಅದನ್ನು
ಸಹಿಸಿಕೊಳ್ಳೋಕೆ ಆಗದೆ ಇರೋ ಹಾಗೆ ಮಾಡಿಕೊಳ್ಳಬೇಡಿ.

ದಿನದಲ್ಲಿ ಒಂದು ಕ್ಷಣವಾದರೂ ನಿಮಗೋಸ್ಕರ ಬದುಕಿ ಒಬ್ಬರೆ ಶಾಪಿಂಗ್‌ಗೆ ಹೋಗೋದನ್ನು ಕಲಿಯಿರಿ, ಒಬ್ಬರೆ ಸಿನಿಮಾಗೆ ಹೋಗಿ ನಿಮ್ಮ ತಲೆಯಲ್ಲಿ ಬರೋ ನೆಗೆಟಿವ್ ಆಲೋಚನೆಗಳನ್ನು ಅದಷ್ಟು ದೂರ ಇಡೋಕೆ ನೋಡಿ, ಅಪ್ಪ-ಅಮ್ಮನ ಜೊತೆ ಕಾಲ ಕಳೆಯಿರಿ, ನಿಮ್ಮನ್ನು ನೀವು ಸುಂದರವಾಗಿ ಕಾಣಿಸಿಕೊಳ್ಳೋಕೆ ಪ್ರಯತ್ನ ಮಾಡಿ ಹಾಗೆ ಸಮಸ್ಯೆ ಪರಿಹಾರ ಆಗುವು ದಕ್ಕೆ, ಅದಕ್ಕೂ ಸ್ವಲ್ಪ ಸಮಯ ಕೊಡಿ.

ಅದನ್ನು ಬಿಟ್ಟು ಸಿಟ್ಟಿನ ಕೈಗೆ ಬುದ್ಧಿಕೊಟ್ಟು ಜೀವನ ಮುಗಿಸಿಕೊಳ್ಳಬೇಡಿ. ಜೀವನ ನೀವು ಅಂದುಕೊಂಡಷ್ಟು ಕೆಟ್ಟದಲ್ಲ, ನಾವು ಅದನ್ನು ಕೆಟ್ಟದಾಗಿ ಬಳಸಿಕೊಳ್ಳುತ್ತಿದ್ದೇವೆ ಅಷ್ಟೇ… ಎಲ್ಲಾ ಸರಿ ಹೋಗುತ್ತದೆ, ಸ್ವಲ್ಪ ರಿಲ್ಯಾಕ್ಸ್ ಆಗಿ ಇರಬೇಕು ಅಷ್ಟೇ… ಮನಸ್ಸು ಎಷ್ಟು ರಿಲ್ಯಾಕ್ಸ್ ಆಗಿ ಇರುತ್ತೋ ಅಷ್ಟು ನಮಗೆ ಹೊಸ ಹೊಸ ವಿಷಯಗಳ ಬಗ್ಗೆ ಆಲೋಚನೆ ಬರುತ್ತದೆ, ನಿಮಗೆ ನೀವು ನಿಮ್ಮನ್ನು ಎಲ್ಲೋ ಕಳೆದುಕೊಳ್ಳುತ್ತಿದ್ದೇವೆ ಅಂತ ಅನಿಸಿದರೆ.

ಒಮ್ಮೆ ಸ್ಮಶಾನದ ಕಡೆ ಹೋಗಿ ಬನ್ನಿ, ಅಲ್ಲಿ ನಾನು ನನ್ನದು ಎಂದು ಬೊಬ್ಬೆ ಹೋಡೆದವರೆಲ್ಲ ಪ್ರಶಾಂತವಾಗಿ ಎಲ್ಲವನ್ನು ಇಲ್ಲೇ ಬಿಟ್ಟು ಮಲಗಿಕೊಂಡಿದ್ದಾರೆ. ಬದುಕಲೇಬೇಕು ಎಂಬ ಆಸೆ ಇದ್ದರೆ ಒಮ್ಮೆ ಆಸ್ಪತ್ರೆಯ ಮಂಚದ ಮೇಲೆ ಮಲಗಿ ಆಗಲೋ ಈಗಲೋ ಅನ್ನೊ ರೋಗಿಯನ್ನು ಮಾತನಾಡಿಸಿ ಬನ್ನಿ. ಆಗ ನಿಮಗೆ ಬದುಕುವ ಚೈತನ್ಯ ಹೆಚ್ಚಾಗುತ್ತದೆ. ನೀವು ಬದುಕಿ
ನಿಮ್ಮನ್ನು ನಂಬಿದವರನ್ನು ಚೆನ್ನಾಗಿ ಬದುಕು ಕಟ್ಟಿಕೊಳ್ಳಲು ಬಿಡಿ ಆಗ ಜೀವನ ಸುಂದರವಾಗಿಯೇ ಇರುತ್ತದೆ.

ಅಪ್ಪ-ಅಮ್ಮ ನಿಮ್ಮನ್ನು ಈ ಭೂಮಿಗೆ ತಂದಿದ್ದು ಒಂದು ಕೆಟ್ಟ ಸಮಯಕ್ಕೆ ನನ್ನ ಮಗಾನೋ ಮಗಳು ಈ ಭೂಮಿ ಬಿಟ್ಟು ಹೋಗಲಿ ಅಂತ ಅಲ್ಲ. ಈ ಮಾತನ್ನು ಒಮ್ಮೆ ನೆನಪು ಮಾಡಿಕೊಳ್ಳಿ ಮತ್ತೆ ನೀವೂ ಎಂದಿಗೂ ಡಿಪ್ರಸ್ಸನ್‌ಗೆ ಹೋಗುವುದಿಲ್ಲ.