Saturday, 23rd November 2024

ಸಿವಿಲ್ ಡಿಪ್ಲೊಮಾದಲ್ಲಿ ರಾಜ್ಯಕ್ಕೆ ಪ್ರಥಮ‌ ರ್‍ಯಾಂಕ್: 71ರ ಹಿರಿಯರ ಸಾಧನೆ

ಕಾರವಾರ: 71ರ ಇಳಿ ವಯಸ್ಸಿನಲ್ಲಿಯೂ ಎಲ್ಲಾ ವಿದ್ಯಾರ್ಥಿಗಳಂತೆ ಸಮ ವಸ್ತ್ರದಲ್ಲಿ ಕಾಲೇಜಿಗೆ ತೆರಳಿ 3 ವರ್ಷ ಸಿವಿಲ್ ಡಿಪ್ಲೊಮಾ ವಿದ್ಯಾಭ್ಯಾಸ ಮಾಡಿ ಪರೀಕ್ಷೆ ಬರೆದಿದ್ದ ಹಿರಿಯರೊಬ್ಬರು ಇದೀಗ  ಬರುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.

ನಿವೃತ್ತಿ ಬಳಿಕ ಮನೆಯಲ್ಲಿ ವಿಶ್ರಾಂತಿ ಪಡೆಯುವ ಬದಲು ಹೊಸದೇನೋ ಕಲಿಯುವ ನಿಟ್ಟಿನಲ್ಲಿ ಕಾಲೇಜಿಗೆ ಸೇರಿ ರಾಜ್ಯವೇ ತಿರುಗಿ ನೋಡುವಂತಹ ಸಾಧನೆ ಮಾಡಿದವರು ನಾರಾಯಣ್‌ ಭಟ್‌.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಆದರ್ಶ ನಗರದ ನಾರಾಯಣ ಭಟ್ ಎನ್ನುವವರು ಈ ಸಾಧನೆ ಮಾಡಿದ್ದಾರೆ. ಇತ್ತೀಚೆಗೆ ಡಿಪ್ಲೊಮಾ ಪರೀಕ್ಷೆ ಫಲಿ ತಾಂಶ ಪ್ರಕಟಗೊಂಡಿದ್ದು, 71ರ ಈ ಹಿರಿಯ ವಿದ್ಯಾರ್ಥಿ ರಾಜ್ಯಕ್ಕೆ ಟಾಪರ್ ಆಗುವ ಮೂಲಕ ಎಲ್ಲರೂ ತಮ್ಮತ್ತ ತಿರುಗಿ ನೋಡು ವಂತಹ ಸಾಧನೆ ಮಾಡಿದ್ದರೆ.

ಅಲ್ಲದೇ, ದೇಶದ ಶಿಕ್ಷಣ ವ್ಯವಸ್ಥೆಯಲ್ಲೇ ಅತಿ ಹಿರಿಯ ಸಿವಿಲ್ ಡಿಪ್ಲೊಮಾ ವಿದ್ಯಾರ್ಥಿ ಯೂ ಆಗಿರುವ ಸಾಧ್ಯತೆ ಇದೆ ಎನ್ನಲಾ ಗುತ್ತಿದೆ. ನಾರಾಯಣ ಭಟ್ ಅವರನ್ನು ನವೆಂಬರ್‌ 2ರಂದು ಬೆಂಗಳೂರಿನಲ್ಲಿ ನಡೆಯಲಿರುವ ಡಿಪ್ಲೊಮಾ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮ ದಲ್ಲಿ ಮುಖ್ಯಮಂತ್ರಿಗಳು, ತಾಂತ್ರಿಕ ಶಿಕ್ಷಣ ಸಚಿವರು ಗೌರವಿಸಲಿದ್ದಾರೆ.