Friday, 22nd November 2024

ಭಾರತ್ ಜೋಡೋ ಯಾತ್ರೆ: ರಾಹುಲ್‌ಗೆ ಜತೆಯಾದ ರೋಗಿತ್ ವೇಮುಲಾ ತಾಯಿ

ಹೈದರಾಬಾದ್: ತಮಗಾದ ಕಿರುಕುಳದಿಂದಾಗಿ ಆತ್ಮಹತ್ಯೆ ಮಾಡಿಕೊಂಡ ಹೈದರಾ ಬಾದ್ ವಿಶ್ವವಿದ್ಯಾಲಯದ ದಲಿತ ವಿದ್ಯಾರ್ಥಿ ರೋಗಿತ್ ವೇಮುಲಾ ಅವರ ತಾಯಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ ಇಲ್ಲಿ ನಡೆಸು ತ್ತಿರುವ ಭಾರತ್ ಜೋಡೋ ಯಾತ್ರೆಯನ್ನು ಸೇರಿಕೊಂಡರು.
ರಾಧಿಕಾ ವೇಮುಲ ಅವರು ಬೆಳಗಿನ ಜಾವ ಆರಂಭವಾದ ಯಾತ್ರೆಯಲ್ಲಿ ರಾಹುಲ್ ಗಾಂಧಿಯವರೊಂದಿಗೆ ಸ್ವಲ್ಪ ಕಾಲ ನಡೆದರು.
ಭಾರತ್ ಜೋಡೋ ಯಾತ್ರೆಗೆ ಬೆಂಬಲ ಸೂಚಿಸಿದ ಅವರು, ರಾಹುಲ್ ಗಾಂಧಿ ಅವ ರೊಂದಿಗೆ ನಡೆದರು. ಬಿಜೆಪಿ-ಆರ್ಎಸ್ಎಸ್ ದಾಳಿಯಿಂದ ಸಂವಿಧಾನವನ್ನು ಉಳಿಸಲು ಕಾಂಗ್ರೆಸ್ಗೆ ಕರೆ ನೀಡಿದರು. ರೋಹಿತ್ ವೇಮುಲಾಗೆ ನ್ಯಾಯ ಸಿಗಲಿ. ರೋಹಿತ್ ಕಾಯ್ದೆ ಯನ್ನು ಜಾರಿಗೊಳಿಸಿ, ದಲಿತರ ಪ್ರಾತಿನಿಧ್ಯವನ್ನು ಹೆಚ್ಚಿಸಿ, ಉನ್ನತ ನ್ಯಾಯಾಂಗ ದಲ್ಲಿ ದಲಿತರ ಪ್ರಾತಿನಿಧ್ಯ, ಎಲ್ಲರಿಗೂ ಶಿಕ್ಷಣ ಸಿಗಲಿ ಎಂದು ಸಭೆಯ ನಂತರ ರಾಧಿಕಾ ವೇಮುಲಾ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ನಿಂದ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಧಿಕಾ ವೇಮುಲಾ ಗಾಂಧಿಯೊಂದಿಗೆ ನಡೆಯುತ್ತಿರುವ ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ.

ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ 26 ವರ್ಷದ ದಲಿತ ವಿದ್ಯಾರ್ಥಿ ವೇಮುಲ, ತಮಗಾದ ಕಿರುಕುಳ ದಿಂದಾಗಿ ಜ.17, 2016 ರಂದು ಆತ್ಮಹತ್ಯೆ ಮಾಡಿಕೊಂಡರು. ಅವರ ಸಾವು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಜಾತೀಯತೆಯ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾರಣವಾಯಿತು.