Thursday, 12th December 2024

ಎಲ್ಲರಲ್ಲೂ ವಿವೇಚನೆಯಿರಲಿ; ಪೋಲಿಸರು ಕೂಡ ಮನುಷ್ಯರಲ್ಲವೆ? ಪ್ರಸ್ತುತ

ನರೇಂದ್ರ ಎಸ್ ಗಂಗೊಳ್ಳಿ
ಪೊಲೀಸರು ಲಾಕ್ ಡೌನ್ ಆದೇಶ ಉಲ್ಲಂಸುತ್ತಿರುವ ಜನರ ವಿರುದ್ಧ ಅವರ್ಯಾರೇ ಆಗಿದ್ದರೂ ಸೂಕ್ತ ಕ್ರಮ ತೆಗೆದುಕೊಳ್ಳುತಿದ್ದಾರೆ. ಇದು ಕಣ್ಣಿಗೆ ಕಾಣಿಸುತ್ತಿರುವಾಗ ಇದರಲ್ಲೂ ತಪ್ಪನ್ನು ಬಿಟ್ಟು ಧರ್ಮವನ್ನು ಹುಡುಕುವ ಕೆಟ್ಟ ಜನರಿಗೆ ಧಿಕ್ಕಾಾರವಿರಲಿ.
……………………………………..

ಕರೋನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿ ಆದಂದಿನಿಂದ ಫೇಸ್ ಬುಕ್, ವಾಟ್ಸಾಪ್, ಇನ್‌ಸ್ಟ್ರಾಗ್ರಾಾಂ ಸೇರಿದಂತೆ ಹತ್ತಾರು ಜಾಲತಾಣಗಳಲ್ಲಿ ಈ ಸಮಯದಲ್ಲಿ ಪೊಲೀಸರ ಕರ್ತವ್ಯ ನಿರ್ವಹಣೆ ರೀತಿಯ ಬಗೆಗೆ ಪರ ವಿರೋಧ ಅಭಿಪ್ರಾಯಗಳು ಕೇಳಿ ಬರುತ್ತಲೇ ಇವೆ. ವಿಶೇಷವಾಗಿ ಲಾಕ್ ಡೌನ್ ಆದೇಶ ಧಿಕ್ಕರಿಸಿದವರನ್ನು ಪೊಲೀಸರು ಲಾಠಿಯ ಮೂಲಕ ಬಲವಾಗಿ ಹೊಡೆಯುವಂತಹ ಚಿತ್ರಗಳನ್ನು ಶೇರ್ ಮಾಡಿಕೊಂಡು ಅದಕ್ಕೊೊಂದಿಷ್ಟು ಕಾಮೆಂಟುಗಳನ್ನು ಸೇರಿಸಿಕೊಂಡು ಕೆಲವರು ಸಂಭ್ರಮದಿಂದ, ಇನ್ನು ಕೆಲವರು ಜನತೆಯ ನಿರ್ಲಕ್ಷ್ಯದ ವಿರುದ್ಧದ ಆಕ್ರೋಶದಿಂದ, ಮತ್ತೆ ಕೆಲವಷ್ಟು ಜನ ಪೋಲಿಸರ ಈ ತೆರನಾದ ಕ್ರಮಗಳನ್ನೇ ವಿರೋಧಿಸಿ ಪೋಸ್ಟಗಳನ್ನು ವಿಡಿಯೋಗಳನ್ನು ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ.

ಲಾಕ್ ಡೌನ್ ಎನ್ನುವುದು ಜನ ತೀರಾ ಅಗತ್ಯ ಸಂದರ್ಭಗಳನ್ನು ಹೊರತುಪಡಿಸಿ ಜನ ಮನೆಯಲ್ಲೇ ಇರಬೇಕು ಎಂದು ಸಾಮಾಜಿಕ ಆರೋಗ್ಯದ ಕಾಳಜಿಯಿಂದಲೇ ತೆಗೆದುಕೊಂಡಂತಹ ದಿಟ್ಟ ನಿರ್ಧಾರ. ಒಂದು ದೇಶದ ನಾಗರಿಕನಾಗಿ ಸರಕಾರದ ಇಂತಹ ನಿರ್ಧಾರಗಳನ್ನು ಕೊನೇ ಪಕ್ಷ ತಮ್ಮ ಮತ್ತು ತಮ್ಮವರ ಒಳಿತಿಗಾದರೂ ನೂರು ಶೇಕಡ ಪಾಲಿಸಬೇಕಾದ್ದು ನಮ್ಮೆಲ್ಲರ ಜವಾಬ್ದಾರಿ. ಕೆಲವರು ಪೊಲೀಸರು ಒಂದು ನಿರ್ದಿಷ್ಟ ಸಮುದಾಯವನ್ನು ಮಾತ್ರ ದಂಡಿಸುತ್ತಿದ್ದಾರೆ. ಅವರು ನಮ್ಮ ಧರ್ಮಕ್ಕೆ ಸೇರಿದವರೆನ್ನುವ ಕಾರಣಕ್ಕೆ ಅರೆಸ್‌ಟ್‌ ಮಾಡಿದ್ದಾರೆ ಎನ್ನುವಂತಹ ಹೇಳಿಕೆಗಳನ್ನು ಮತ್ತು ಕೇವಲ ತಮ್ಮ ಸಮುದಾಯದವರಿಗೆ ಹೊಡೆಯುತ್ತಿರುವ ಚಿತ್ರಗಳನ್ನು, ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಜನರನ್ನು ತಪ್ಪುದಾರಿಗೆಳೆದು ಕೋಮು ದ್ವೇಷವನ್ನು ಹರಡುವಂತಹ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಿರುವಂತೆ ಕಂಡುಬರುತ್ತಿದೆ.

ಪೊಲೀಸರು ಲಾಕ್ ಡೌನ್ ಆದೇಶ ಉಲ್ಲಂಸುತ್ತಿರುವ ಜನರ ವಿರುದ್ಧ ಅವರ್ಯಾಾರೇ ಆಗಿದ್ದರೂ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿರುವುದು ಕಣ್ಣಿಗೆ ಕಾಣಿಸುತ್ತಿರುವಾಗ ಇದರಲ್ಲೂ ತಪ್ಪನ್ನು ಬಿಟ್ಟು ಧರ್ಮವನ್ನು ಹುಡುಕುವ ಕೆಟ್ಟ ಜನರಿಗೆ ಧಿಕ್ಕಾರವಿರಲಿ. ಕೆಲ ದಿನಗಳ ಹಿಂದೆ ಪೊಲೀಸರ ಮೇಲೆಯೇ ಒಂದಷ್ಟು ಯುವಕರು ಹಲ್ಲೆ ಮಾಡಿದ್ದರ ಸಿಸಿ ಟಿವಿ ಫೂಟೇಜುಗಳನ್ನು ಬಳಸಿ ಪೊಲೀಸರು ಮತ್ತು ಯುವಕರು ಎಳೆದಾಡಿದ ಆಡಿಯೋ ಇಲ್ಲದ ದೃಶ್ಯಗಳನ್ನೇ ತೋರಿಸಿಕೊಂಡು ಪೊಲೀಸರೇ ಅವರನ್ನು ರೊಚ್ಚಿಗೆಬ್ಬಿಸಿದ್ದು, ಅದಕ್ಕೆ ಅವರು ಹಲ್ಲೆ ಮಾಡಿದ್ದು ಎಂದೆಲ್ಲಾ ಹಲ್ಲೆ ನಡೆಸಿದವರ ಪರವಾಗಿ ಮಾತನಾಡುವ ಜನರೂ ನಮ್ಮಲ್ಲಿರುವುದು ವಿಪರ್ಯಾಾಸ. ಯಾರೇ ಆಗಲಿ ಕಾನೂನನ್ನು ಗೌರವಿಸಲು ಮೊದಲು ಕಲಿಯಬೇಕಿದೆ. ಮತ್ತು ಇಂತಹ ಸಂದರ್ಭಗಳಲ್ಲಿ ಒಂದಷ್ಟು ತಗ್ಗಿ ಬಗ್ಗಿ ನಡೆಯುವುಯದನ್ನು ಕಲಿಯಬೇಕಿದೆ.
ನೀವೇ ನೋಡಿ. ನಾವೆಲ್ಲಾ ಆರಾಮವಾಗಿ ಮನೆಯಲ್ಲಿ ಕುಳಿತಿದ್ದರೆ ಪೊಲೀಸರು ತಮ್ಮ ಆರೋಗ್ಯವನ್ನು ಪ್ರಾಣವನ್ನು ಲೆಕ್ಕಿಸದೆ ಸಮಾಜದ ಹಿತವನ್ನು ಕಾಪಾಡುವ ದೃಷ್ಟಿಯಿಂದ ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಬೆಳಗ್ಗೆಯಿಂದ ಸಂಜೆಯ ತನಕ ಉರಿ ಬಿಸಿಲಲ್ಲಿ ಎಲ್ಲೆೆಲ್ಲೋ ನಿಂತುಕೊಂಡು ಕೆಲವೊಮ್ಮೆ ಹೊಟ್ಟೆಗೂ ಒಂದಷ್ಟು ಹಿಟ್ಟು ಬೀಳದೆ ಕಾನೂನು ಪಾಲನೆಗೆ ನಿಲ್ಲುವ ಪೊಲೀಸರು ಅದೆಷ್ಟು ಅಂತ ತಾಳ್ಮೆ ವಹಿಸಿಯಾರು? ಅವರು ಕೂಡ ಮನುಷ್ಯರೇ ತಾನೇ? ಅವರಿಗೂ ಅಪ್ಪ- ಅಮ್ಮ, ಅಣ್ಣ- ತಂಗಿ, ಹೆಂಡತಿ- ಮಕ್ಕಳು ಅಂತೆಲ್ಲಾ ಇರುತ್ತಾರಲ್ಲವೆ? ಅವರ ಆರೋಗ್ಯದ ಬಗ್ಗೆೆಯೂ ಕಾಳಜಿ ಬೇಕಲ್ಲವೆ? ‘ಅಪ್ಪ ಹೊರಗೆ ಹೋಗಬೇಡಪ್ಪಾ. ಕರೋನಾ ಬರುತ್ತೆ… ಎಂದೆಲ್ಲಾ ಪುಟ್ಟ ಮಗುವೊಂದು ಪೊಲೀಸ್ ತಂದೆಯ ಬಳಿ ಅಳುತ್ತಾ ಅಂಗಲಾಚುತ್ತಿರುವಂತಹ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೃಶ್ಯ ಎಂತವರ ಮನವನ್ನೂ ಕಲಕುತ್ತದೆ. ಅವರು ಕರ್ತವ್ಯ ಮಾಡುತ್ತಿರುವುದೇ ಜನರಿಗಾಗಿ ಎನ್ನುವಾಗ ಜನ ಕೂಡ ಅವರಿಗೆ ಸಹಕರಿಸಬೇಕಲ್ಲವೆ? ಅದು ಬಿಟ್ಟು ಉಡಾಫೆಯ ವರ್ತನೆ ತೋರುವುದು ಸರಿಯೆ? ಬೆಳಗ್ಗೆೆಯಿಂದ ಹೇಳಿ ಹೇಳಿ ಬೇಸರವಾದಾಗ ಜನರು ಮಾತನ್ನು ಕೇಳದೆ ಹೋದಾಗ ಮನಸ್ಸು ರೋಸಿಹೋಗುತ್ತದೆ. ಆಗ ಲಾಠಿ ಹೆಚ್ಚು ಮಾತನಾಡತೊಡಗುತ್ತದೆ. ಹಾಗಾದಾಗ ಕೆಲವಷ್ಟು ಸಲ ಅಮಾಯಕ ಜನರಿಗೂ ಪೆಟ್ಟು ಬಿದ್ದಿದೆ. ಪೊಲೀಸರು ತಾಳ್ಮೆ ಕಳೆದುಕೊಳ್ಳಬಾರದೆಂದು ಹೇಳುವುದು ಸುಲಭ. ಆದರೆ ಆ ಪರಿಸ್ಥಿತಿಯಲ್ಲಿ ಇದ್ದು ನೋಡಿದಾಗಲೆ ಅದು ಅನುಭವಕ್ಕೆೆ ಬರುವಂತಾದ್ದು.

ದೇಶದ ಪ್ರತಿಯೊಬ್ಬನೂ ಒಂದಷ್ಟು ದಿನ ಅದೆಷ್ಟೇ ಕಷ್ಟವಾದರೂ ಸಹಿಸಿಕೊಂಡು ನಾನು ಮನೆಯಲ್ಲಿರುತ್ತೇನೆ. ತೀರಾ ಅಗತ್ಯ ಬಿದ್ದರೆ ಹೊರಬರುತ್ತೇನೆ ಮತ್ತು ಸರಕಾರ ಹಾಕಿರುವ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸುತ್ತೇನೆ ಎನ್ನುವಂತಹ ಧೃಡ ನಿರ್ಧಾರ ತಳೆದು ಅನುಸರಿಸಿದರೆ ಪೊಲೀಸರು ರಸ್ತೆೆ ರಸ್ತೆೆಗಳಲ್ಲಿ ಕಾವಲು ಕುಳಿತುಕೊಳ್ಳುವ ಮತ್ತು ಜನರನ್ನು ಹೊಡೆಯುವ ಪರಿಸ್ಥಿತಿಯೇ ಬರುತ್ತಿರಲಿಲ್ಲ. ರಾಜ್ಯದ ಕೆಲ ಮಸೀದಿಗಳಲ್ಲಿ ಲಾಕ್ ಡೌನ್ ಆದೇಶವನ್ನು ಧಿಕ್ಕರಿಸಿ ಜನ ಒಟ್ಟು ಸೇರಿ ನಮಾಜು ಮಾಡಿದ್ದು ಅಕ್ಷೇಪಾರ್ಹ. ಅಖಿಲ ಭಾರತೀಯ ಮುಸ್ಲಿಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯರು ಸೇರದಿಂತೆ ಪ್ರಖ್ಯಾಾತ ಧರ್ಮ ಗುರುಗಳು ಮುಸ್ಲಿಮರು ದಯವಿಟ್ಟು ತಮ್ಮ ಮನೆಗಳಿಂದಲೇ ನಮಾಜ್ ಸಲ್ಲಿಸಬೇಕು ಎಂದು ಕೇಳಿಕೊಂಡಿದ್ದರೂ ಅವರ ಮನವಿಗಳನ್ನು ಧಿಕ್ಕರಿಸಿ ಸಮಾಜದ ಒಟ್ಟು ಹಿತವನ್ನೂ ಕಡೆಗಣಿಸಿ ಈ ರೀತಿ ನಡೆದುಕೊಂಡಿರುವುದನ್ನು ಅದು ಹೇಗೆ ಸಮರ್ಥಿಸಿಕೊಳ್ಳಲಾದೀತು? ಕರೋನಾ ವೈರಸ್ ಹಾಗೆ ಸುಮ್ಮನೆ ಒಂದೇ ಸಲಕ್ಕೆ ತನ್ನ ಇರುವಿಕೆಯನ್ನು ತೋರಿಸುವುದಿಲ್ಲ. ಹಾಗಾಗಿ ಆರೋಗ್ಯವಂತನಂತೆ ಕಾಣುವ ಒಬ್ಬನಿಗೆ ಸೋಂಕಿದ್ದರೂ ನಾವು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದಿದ್ದಲ್ಲಿ ಅದು ಎಲ್ಲರಿಗೂ ಹರಡಬಹುದಾದ ಸಾಧ್ಯತೆ ಹೆಚ್ಚು ಎನ್ನುವಂತಹ ಸಾಮಾನ್ಯ ತಿಳುವಳಿಕೆಯಾದರೂ ಇವರಿಗೆ ಬೇಕಲ್ಲವೆ. ಮನುಷ್ಯನೆನ್ನಿಸಿಕೊಂಡವ ಜನರಿಗೆ ಒಳ್ಳೆಯದನ್ನು ಮಾಡದಿದ್ದರೆ ಪರವಾಗಿಲ್ಲ, ಆದರೆ ಕೆಟ್ಟದನ್ನಂತೂ ಮಾಡಲೇಬಾರದು. ಧಾರವಾಡ ಮತ್ತು ಹುಬ್ಬಳ್ಳಿಯ ಕೆಲ ಮಸೀದಿಗಳಲ್ಲಿ ನಮಾಜಿಗೆ ಮುಂದಾದವರನ್ನು ಪೊಲೀಸರು ಮನವೊಲಿಸಿ ಹಿಂದಕ್ಕೆೆ ಕಳುಹಿಸಿದ್ದರು ಎನ್ನುವ ಅಂಶವೂ ಗಮನಾರ್ಹ. ಈ ನಿಟ್ಟಿನಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡದ ಮುಸ್ಲಿಿಂ ಸಮುದಾಯದಲ್ಲಿ ಅರಿವು ಮೂಡಿಸಿ ತಮ್ಮ ಮನೆಗಳಲ್ಲೇ ನಮಾಜು ಮಾಡಿ ಸಾಮಾಜಿಕ ಕಾಳಜಿಯನ್ನು ಮೆರೆದದ್ದು ಪ್ರಶಂಸನೀಯ.

ಅಂದಹಾಗೆ ಪೊಲೀಸರು ಮಾಡುತ್ತಿರುವುದೆಲ್ಲಾ ಸರಿ ಎಂದು ನಾನು ಖಂಡಿತಾ ಹೇಳುತ್ತಿಲ್ಲ. ಕೆಲವು ಪೊಲೀಸರು ಜನರ ಜತೆ ಮಾತನಾಡುವ ರೀತಿಯೇ ಸರಿಯಾಗಿರುವುದಿಲ್ಲ. ಅನವಶ್ಯಕ ಅವಾಚ್ಯ ಪದಗಳ ಬಳಕೆಯನ್ನು ನಿಲ್ಲಿಸಬೇಕಿದೆ. ಅಂತಹ ಪೊಲೀಸರು ಸ್ವಲ್ಪ ಸೌಜನ್ಯದಿಂದ ವರ್ತಿಸುವುದನ್ನು ಕಲಿಯಬೇಕಿದೆ. ದಿನಬಳಕೆಯ ಮತ್ತು ತುರ್ತು ಪದಾರ್ಥಗಳನ್ನು ಖರೀದಿಸಲು ಹೋಗುವ ಮತ್ತು ಅನಿವಾರ್ಯ ಕೆಲಸಕ್ಕೆ ತೆರಳುವ ಜನರನ್ನು ವಿಚಾರಣೆ ನಡೆಸದೆ, ಹೊಡೆದು ಮಾತನಾಡಿಸುವಂತಹ ಪ್ರಕರಣಗಳು ನಡೆಯಬಾರದು. ಕೆಲ ಪೊಲೀಸರ ಅತಿರೇಕದ ವರ್ತನೆಯೂ ಆಕ್ಷೇಪಾರ್ಹ. ಉಳಿದಂತೆ ಪೊಲೀಸರು ಕಾರ್ಯ ನಿರ್ವಹಿಸುತ್ತಿರುವ ರೀತಿಗೆ ಕೋಟಿ ಕೋಟಿ ಅಭಿನಂದನೆಗಳನ್ನು ಸಲ್ಲಿಸಬೇಕಿದೆ. ಈ ಎಲ್ಲದರ ನಡುವೆ ಹಸಿದವರಿಗೆ ಅನ್ನವಿಕ್ಕುವುದೂ ಸೇರಿದಂತೆ ಪೊಲೀಸರು ಮಾಡುತ್ತಿರುವ ನೂರಾರು ಮಾನವೀಯ ಕಾರ್ಯಗಳನ್ನು ನಾವು ಹೃತ್ಪೂರ್ವಕವಾಗಿ ಅಭಿನಂದಿಸಬೇಕಿದೆ. ಅವರ ಮಾನವೀಯತೆಯನ್ನು, ಸಹೃದಯತೆಯನ್ನು, ಸಾಮಾಜಿಕ ಕಾಳಜಿಯನ್ನು ಜನರಿಗೆ ತಿಳಿಯಪಡಿಸಬೇಕಿದೆ.

ಈ ಮಧ್ಯೆೆ ಇತ್ತೀಚೆಗೆ ಸಾಮಾನ್ಯ ಪೊಲೀಸರು ಲಾಠಿ ಬಳಸದೆ ಕಾರ್ಯನಿರ್ವಹಿಸಿ ಎಂದು ಶುದ್ಧ ಅಪ್ರಯೋಜಕ ನಿರ್ಧಾರವೊಂದನ್ನು ಸರಕಾರ ತೆಗೆದುಕೊಂಡಿದ್ದು ಸಮಂಜಸವಲ್ಲವೇ ಅಲ್ಲ. ಪೊಲೀಸರು ಬೈದರೂ, ಅತ್ತರೂ ಕ್ಯಾರೇ ಎನ್ನದ ಜನಗಳ ಮುಂದೆ ದಯವಿಟ್ಟು ಪೊಲೀಸರ ಕೈಗಳನ್ನು ಕಟ್ಟಿ ಹಾಕದಿರಿ. ಪೊಲೀಸ್ ಮತ್ತು ಜನತೆ ಇಬ್ಬರೂ ವಿವೇಚನೆಯಿಂದ ವರ್ತಿಸಬೇಕಾದ್ದು ಈ ಹೊತ್ತಿನ ಅಗತ್ಯತೆ. ಜನರು ಕಾನೂನನ್ನು ಗೌರವಿಸುವುದನ್ನು ಕಲಿಯಬೇಕಿದೆ.