– ವೆಂಕಟೇಶ ಆರ್. ದಾಸ್
ಕಣ್ಣೀರಿದು…ಕಣ್ಣೀರಿದು…..ಗೌಡ್ರು ಫ್ಯಾಾಮಿಲಿಗಂಟಿದ ಶಾಪ ಇದು…ಕರ್ಮ ಇದು ನಮ್ಮ ಕರ್ಮ ಇದು…ಅಂತ ಪದ ಹೇಳ್ಕೊೊಂಡು ಪಡ್ಡೆೆ ಹೈಕ್ಳೆೆಲ್ಲ ಆಟ ಆಡ್ತಿಿದ್ದ ಅರಳಿ ಕಟ್ಟೆೆ ಮ್ಯಾಾಕ್ ಬಂದ ಗುಡ್ದಳ್ಳಿಿ ಸೀನ.
ಕತ್ತೆೆ ರಾಗ್ದಲ್ಲಿ ಸೀನ ಹಾಡೋದ್ ನೋಡಿ ಟೀ ಅಂಗ್ಡಿಿ ತಾವ್ ಕುತ್ತಿಿದ್ದ ಪಟೇಲಪ್ಪ ಎದ್ದು ಬಂದು, ಲೇ ಸೀನಾ ಏನ್ಲಾಾ ನಿನ್ ಗೋಳು, ಯಾಕ್ಲಾಾ ಯಾವ್ದೋೋ ಪ್ಯಾಾಥೋ ಸಾಂಗ್ ಹಾಡ್ಕೊೊಂಡು ಬತ್ತಾಾಯಿದ್ದೀಯಾ, ಎಲೆಕ್ಸನ್ ಟೈಮ್‌ನಾಗಿ ಹೆಂಗ್ ಇರ್ಬೇಕು ಬಡ್ಡಿಿ ಮಗಾ ನೀನು. ಎಣ್ಣೆೆ, ಬಿರಿಯಾನಿ ಸಿಗೋ ಟೈಮ್‌ನಾಗೂ ನೀನ್ ಇಷ್ಟೊೊಂದ್ ಡಲ್ ಆಗಿರೋದ್ ನೋಡಿದ್ರೆೆ ನಂಗೆ ಬೇಜಾರಾಯ್ತದೆ ಕಣ್ಲಾಾ ಅಂತ ಸೀನನ್ ಕೆಣಿಕ್ದಾಾ.
ದೊಡ್ಡಪ್ಪೋೋ, ನಂಗೇನಾಗ್ಯದೆ ದೊಡ್ ರೋಗಾ, ಏನಿಲ್ಲ ನಾ ಚೆಂದಾಗೇ ಇದ್ದೀನಿ. ನಮ್ ದೊಡ್ಡ ಗೌಡ್ರು ಪಾರ್ಟಿನೋರೆಲ್ಲ ದೊಡ್ಡೋೋರ್ನೆೆ ಫಾಲೋ ಮಾಡೋಕ್ ಹತ್ಯಾಾರೆ. ವೋಟ್ ಕೇಳೋವಾಗ ಏನಾದ್ರೂ ಸಾಧ್ನೆೆ ಮಾಡ್ತೀನಿ ಅಂತ ಕೇಳ್ರಪ್ಪೋೋ ಅಂದ್ರೆೆ ಕರ್ಚಿಫ್ ಕೈಲೆ ಹಿಡ್ಕೊೊಂಡ್ ಗೊಳೋ ಅಂತ ಅಳ್ತಾಾವ್ರೆೆ ಕಣ್ ದೊಡ್ಡಪ್ಪೋೋ, ಅದ್ಕೆೆ ನಂಗೆ ಹಾಡು ಗೆಪ್ತಿಿಗ್ ಬಂದು ಹೇಳ್ತಿಿದ್ದೀನಿ ಕಣ್ ಬಾ ಅಂದ ಸೀನ.
ಅಲ್ಲ ಕಣ್ಲಾಾ, ದೊಡ್ಡಗೌಡ್ರು, ಮಾತೆತ್ತಿಿದ್ರೆೆ ಕಣ್ಣೀರ್ ಹಾಕಕೆ ಫೇಮಸ್, ಅವ್ರ ಪಾರ್ಟಿನಲ್ಲಿ ಇಷ್ಟು ವರ್ಷ ಇದ್ದದ್ದಕ್ಕೆೆ ಅಷ್ಟುನೂ ಕಲೀನಿಲ್ಲ ಅಂದ್ರೆೆ ಹೆಂಗ್ಲಾಾ, ನೋಡು ನೆನ್ನೆೆ ನಮ್ ಕುಮಾರಣ್ಣ ಕಿಕ್ಕೀರಿಲಿ ಹೆಂಗ್ ಕಣ್ಣೀರ್ ಹಾಕ್ಯದೆ. ಕುಮಾರಣ್ಣ ನನ್ ಮಗನ್ನ ನಡುನೀರಲ್ ಕೈಬುಟ್ರು ಅಂದ್ಬುಟ್ಟು ಮಂಡ್ಯ ಜನದ್ ಮುಂದೆ ನಿಂತ್ಕಂಡು ಗೊಳೋ ಅಂದೈತೆ. ಕುಮಾರಣ್ಣನೆ ಅತ್ತಮ್ಯಾಾಲೆ ಇವ್ರೆೆಂಗ್ಲಾಾ ಸುಮ್ನಿಿರ್ತಾಾರೆ. ಹಿರಿಯಕ್ಕನ್ ಚಾಳಿ ಮನೆ ಮಂದಿಗೆಲ್ಲ ಅಂದಂಗೆ ಮುಂದ್ಲಾಾರು ಹೋದತ್ತಾಾ ತಾನೇ ಹಿಂದ್ಲಾಾರು ಹೋಗದು. ಹಿಂಗಾಗಿ, ಯಾರೋ ಗೋಳೋ ಅಂದಿರ್ಬೇಕು. ಅಷ್ಟಕ್ಕೂ ಯಾವ್ ಲೀಡ್ರೋೋ ಈಗ ಗೊಳೋ ಅಂದಿದ್ದು ಅಂದ ಪಟೇಲಪ್ಪ.
ಯಸ್ವಂತ್ಪುರದ್ ಜವ್ರಾಾಯಿ ಗೌಡ್ರು ಕಣ್ ದೊಡ್ಡಪ್ಪೋೋ, ಸೋಮ್‌ಶೇಖ್ರು ಮುಂದೆ ನಿಂತ್ಕಂಡ್ ಎಲ್‌ಡ್ ಕಿತಾ ಸೋತಿದ್ದೀನಿ. ಮೂರ್ನೇ ಕಿತಾ ಸೋಲ್ದಂಗೆ ನೋಡ್ಕಳ್ಳ ಜವಾಬ್ದಾಾರಿ ನಿಮ್ದೆೆ ಕಣ್ರಪ್ಪೋೋ, ನಾ ಕಟ್ತಿಿರೋ ಮನೆ ಇನ್ನಾಾ ಮುಗ್ದಿಿಲ್ಲ, ನನ್ ಮಗಂಗೆ ಒಂದು ಮದ್ವು ಅಂತ ಮಾಡ್ನಿಿಲ್ಲ. ಇವೆಲ್ಲ ಮಾಡಕ್ಕೆೆ ನಿಮ್ ಸಪೋರ್ಟ್ ಬೇಕು. ಹೆಂಗಾರ ಇದೊಂದ್ ಸಲ ನನ್ನ ಗೆಲ್ಲಿಸ್ಬುಡಿ ಎಂತ ಗೋಳಾಡ್ಕಂಡ್ ಗೋಗರಿತೈತೆ ಅಂದ ಸೀನ.
ಅಲ್ ಕಲ್ಲಾಾ, ಮೊದ್ಲಿಿಗೆ ಏನೋ ಈ ವಯ್ಯನೆ ಗೆಲ್ಬೋೋದು, ಕಾಂಗ್ರೆೆಸ್ಸು, ಜೆಡಿಎಸ್ಸು ಕೂಡಾವಳಿ ಮಾಡ್ಕಂಡವೆ ಅಂತಿದ್ರು, ಈಗ ಯಾಕೆ ಈಯಪ್ಪಂಗೆ ಇಷ್ಟೊೊಂದು ಭಯ ಆಗಕ್ ಶುರುವಾಗ್ಯದೆ. ಅತ್ಬುಡ್ರೆೆ ಯಾವ್ ಬಡ್ಡೈದೆ ವೋಟ್ ಹಾಕ್ಯನಂತೆ ಅಂದ ಪಟೇಲಪ್ಪ. ದೊಡ್ಡಪ್ಪ, ಸೋಮಶೇಖ್ರುಗೆ ಟಿಕೆಟ್ ಕೊಡ್ತೀನಿ ಅಂತಿದ್ದಂಗೆ ತುರುವೇಕೆರೆ ಟ್ರೂ…ಬ್ಯಾಾ…..ನಂಗೆ ಬೇಕಿತ್ತು…ಆದ್ರೆೆ ನಮ್ ಪಾರ್ಟಿನೋರ್ ಹೇಳಿದ್ಮೇಲೆ ಮುಗೀತು, ನಾ ಹಳೇದ್ನೆೆಲ್ಲ ಮರ್ತು ಪಾರ್ಟಿ ಹೇಳ್ದೋೋರ್‌ಗೆ ಕೆಲ್ಸ ಮಾಡ್ತಿಿನಿ ಅಂದ್ಬುಡ್ತು. ಕೊನೆಗೆ ಎಲ್ರೂ ಸೇರ‌್ಕಂಡು ಹಳೇದೆಲ್ಲ ಊಫಿ ಅಂತ ಟೂ ಬಿಡ್ಡಿಿದ್ದನ್ನ ಸ್ಸೆೆ ಮಾಡ್ಕಂಡ್ರು.. ಇದನ್ ನೋಡ್ತಿಿದ್ದಂಗೆ ಗೌಡ್ರಿಿಗೆ ಯಾಕೋ ಒಂದ್ ಕಣ್ ಅದ್ರಕ್ಕೆೆ ಶುರುವಾಗ್ಯದೆ. ಅದ್ಕೆೆ ಹೆಂಗಾರ ಇರ್ಲಿಿ ಅಂತೇಳಿ ಕಣ್ಣೀರ್ ಹಾಕಕ್ ಶುರು ಮಾಡ್ಕಂಡಾವ್ರೆೆ ಕಣೇಳು ಅಂದ ಸೀನ.
ಏನಾಪ, ಗೌಡ್ರು ಎಲ್ಲನೂ ಬರೀ ವಂಶಪಾರಂಪರ್ಯ ಮಾಡ್ಕಂತರೆ. ಅದ್ಕೆೆ ಸಿಟ್ಟು, ಅಳೋದ್ನು ಅವ್ರ ಕಂಪನಿಗೆ ಕೊಟ್ರೆೆ ಹೆಂಗೆ.,.,..ಹೋಗ್ಲಿಿ ಬುಡು ಅತ್ತೇಟ್ಕೆೆ ಜನ ವೋಟ್ ಹಾಕ್ಯಾಾರಾ ಇಲ್ವಾಾ ಆಮ್ಯಾಾಲ್ ಗೊತ್ತಾಾಯ್ತದೆ….ಅದ್ನೆೆಲ್ಲ ಯಸ್ವಂತಪುರದ್ ಮಹಾಜನ್ತೆೆ ನೋಡ್ಕತ್ತದೆ. ಮಹಾರಾಷ್ಟ್ರ ಕಥೆ ಹೆಂಗ್ಲಾಾ ಇದು ಅಂದ ಪಟೇಲಪ್ಪ.
ಮಾರಾಷ್ಟ್ರದಾಗೆ ಎಲ್ಲ ಸರಿಯಾಗೆ ಇತ್ತು ದೊಡ್ಡಪ್ಪ, ನಮ್ ಚಾಣಕ್ಯಪ್ಪ ಎಲ್ನೂ ನೇರೂಪಾಗೆ ಅರೆಂಜ್ ಮಾಡಿತ್ತು. ಆಮ್ಯಾಾಕೆ ಅದೇನ್ ಯಡ್ವಟ್ಟು ಆಯ್ತೋ ಏನೋ, ಇದಕ್ಕಿಿದ್ದಂಗೆ ಪವಾರು ರಾಜೀನಾಮೆ ಕೊಟ್ಟು ಮರಳಿ ಮಣ್ಣಿಿಗೆ ಅಂತ ಹೊಂಟೋಗ್ ಬುಟ್ಟ. ಅವ್ರೆೆ ಹೋದ್ಮೇಕೆ ಪಡ್ನವೀಸ್ ಏನ್ ಗೆಣ್ಸು ಮೇದಾನೆ ಅದ್ಕೆೆ ರಾಜೀನಾಮೆ ಬರೆದ್ ಬಿಸಾಕಿ ಮನೆಕಡಿಕ್ ಹೊಂಟಾವ್ನೆೆ ಅಂದ ಸೀನ.
ಅಲ್ಲ ಕಣ್ಲಾಾ, ಇರ್‌ನಾರದವ್ನು ಇರುವೆ ಬುಟ್ಕಂಡ ಅನ್ನಂಗೆ ಸಿವ್‌ಸೇನದವ್ರು ಬುಟ್ಟೋೋಯ್ತಿಿದ್ದಂತೆ ಸುಮ್ಕೆೆ ಇರದ್ ಬುಟ್ಟು, ಯಾಕಪ್ಪ ಹಿಂಗೆಲ್ಲ ಮಾಡ್ಬೇಕಿತ್ತು. ಆಡದ್ ಆಡ್ಕಳ್ಳಿಿ ಅದೇನ್ ಆಡ್ಕತ್ತೀರಾ ಅಂತ ಬುಟ್ಟುದ್ರೆೆ ಇಲ್ಲಿನ್ ಕುಮಾರಣ್ಣನ್ ಗೌರ್ಮೆಂಟ್‌ನಂಗೆ ವಸಿ ದಿನ ಮಾಡ್ಕಂಡಿರರು. ಆಮ್ಯಾಾಲೆ ಕಿತ್ತಾಾಡ್ಕಂಡು ಅವ್ರ ಕಾಲ್ ಮ್ಯಾಾಲೆ ಅವ್ರೆೆ ಚಪ್ಪಡಿ ಎಳ್ಕಳ್ಳರು. ಅದುನ್ ಬುಟ್ಟು ಅದೇನೋ ಕೆರ‌್ಕಂಡ್ ಉಣ್‌ಣ್ ಮಾಡ್ಕಂಡ ಅನ್ನಂಗೆ ಯಾಕಿಂಗೆಲ್ಲ ಮಾಡ್ಬೇಕಿತ್ತು ಅಂದ ಪಟೇಲಪ್ಪ.
ದೊಡ್ಡಪ್ಪೋೋ, ಏನನ್ನೂ ಕೆರ‌್ಕಳ್ಳಕ್ ಹೋಗಿರ್ನಿಿಲ್ಲ, ಸೆಂಟ್ರಲಲ್ಲಿ ನಾವಿದ್ದಿವಿ ಏನೋ ಮಾಡ್ಬೋೋದು, ಹಿಂದೆ ಕರ್ನಾಟಕದ್ ಎಮ್ಮೆೆಲ್ಲೆೆಗಳ್ನೆೆಲ್ಲ ಕೂಡ್ಯಾಾಕಿ ಸರಕಾರ ತಂದಿಲ್ವೇ. ಊರ್ ಉಸಾಬರಿ ನೋಡ್ಕಳ್ಳ ನಂಗೆ ನಮ್ ಗೌರ್ಮೆಂಟ್ ಮಾಡಕ್ ಆಗಾಕುಲ್ವಾಾ ಅಂತ ಹಠಕ್ಕೆೆ ಬಿದ್ದ ಪಡ್ನವೀಸು ಹಿಂಗೆಲ್ಲ ಮಾಡಕ್ ಹೋಗಿ ವೀಕ್ ಆಗ್ಯೋೋಗ್ಯದೆ ನೋಡು ಅಂದ ಸೀನ.
ಅದಿರ್ಲಿಿ, ಎಂಟಿಬಿ ಹೆಣ್ಮಕ್ಳಿಿಗೆಲ್ಲ ನಾನ್ ಕ್ಯಾಾರೆ ಅನ್ನಕ್ಕುಲ್ಲ, ಹಿಂಗಾಗಿ ನಾನ್ ಗೆಲ್ಲದು ಗೆಲ್ಲದೆಯಾ ಅಂದೈತಂತೆ. ಅದ್ಕೆೆ ಮೋಟಮ್ಮ, ಮೋಟ್ ಪೊರ್ಕೆೆ ಹಿಡ್ಕಂಡ್ ಕೆಪಿಸಿಸಿ ಮುಂದೆ ಕಸ ಗುಡ್ಸೋೋಕ್ ಬಂದಿತ್ತಂತೆ ನಿಜ್ವೇ ಅಂದ ಪಟೇಲಪ್ಪ.
ಮೋಟಮ್ಮ ಯಾಕೆ ಕಸ ಗುಡ್ಸಕ್ ಬಂದಾತು, ಹೆಣ್ಣೈಕ್ಳು ಬಗ್ಗೆೆ ಹಂಗೆಲ್ಲ ಯಡ್ವಟ್ಟಾಾಗಿ ಮಾತಾಡ್ಬೇಡ ಕಣಪ್ಪ ಎಂಟಿಬಿ ಅಂತ ಕಾಂಗ್ರೆೆಸ್‌ನ್ ಹಿರಿ ಜೀವ್ಗೋೋಳೆಲ್ಲ ವಾರ್ನಿಂಗ್ ಮಾಡಾವ್ರೆೆ. ಇದ್ಕೂ ಮೀರಿ ನಾ ಮಾಡದೆ ಹಿಂದೆ ಅಂದ್ರೆೆ, ದೊಡ್ಡದೊಡ್ಡೋೋರೆಲ್ಲ ಮಣ್ಣಾಾಗಿದ್ದು ಹೆಣ್ಣಿಿಂದ್ಲೇ ಮರೀಬ್ಯಾಾಡ ಅಂತ ಎಚ್ಚರಿಕೆ ಕೊಟ್ಟವ್ರೆೆ ಕಣ್ ದೊಡ್ಡಪ್ಪ ಅಂದ ಸೀನ.
ನೋಡು,,,,ಇಲ್ಲೊೊಬ್ರು ಎಮ್ಮೆೆಲ್ಲೆೆ ಹೆಣ್ಮಗಿನ್ ಸವಾಸ ಮಾಡೋಕ್ ಹೋಗಿ ಹನಿ ಟ್ರ್ಯಾಾಪ್ ಆಗ್ಯದೆ. ಅದ್ಕೆೆ ಹೇಳದು ಹೆಣ್ಮಕ್ಳು ಬಗ್ಗೆೆ ಮಾತಾಡ್ವಾಾಗ ಮತ್ತೆೆ ಅವ್ರು ಜತೆಗ್ ಯವಾರ ಮಾಡೋವಾಗ ಉಷಾರಾಗಿರ್ಬೇಕು ಅನ್ನದು ಗೊತ್ತಾಾಯ್ತ. ಹೇಳ್ಕೊೊಡು ನಿಮ್ ಬುಸ್ ನಾಗಣ್ಣಅಂಗೆ ಅಂದ ಪಟೇಲಪ್ಪ.
ಅದ್ ಬುಡು ದೊಡ್ಡಪ್ಪ ಮಾರಾಷ್ಟ್ರ ಸರಕಾರ ಬಿದ್ದೋೋಯ್ತಿಿದ್ದಂತೆ ಅನರ್ಹರಿಗೆಲ್ಲ ಭಯ ಸುರುವಾಗ್ಯದಂತೆ. ಅದ್ಕೆೆ ನಿಮ್ ದಮ್ಮಯ್ಯ ನಮ್ಮನ್ನೇ ಗೆಲ್ಸಿಿ ಅಂತ ಗೋಳಾಡಕ್ ಶುರು ಮಾಡ್ಕಂಡವ್ರೆೆ. ಕೌರವನ್ ಥರ ಇದ್ದ ಬಿ.ಸಿ. ಪಾಟೀಲ್ರು ಗೊಳೋ ಅಂತ ಅಳ್ತಿಿದ್ರಂತೆ. ಅದ್ಕೆೆ ಅವ್ನಾಾರೋ ಹಿರೇಕೆರೂರ್ ಹೈದ ‘ನಮ್ ಪ್ರೇಮ್ ಸಿನ್ಮಾಾದ ‘ಗರಡ್ನಂಗೆ ಇದ್ದೋೋನ್ ನೋಡ್ಲಾಾ …. ಆಗೋದ್ನೋೋ ಅಂತ ಹಾಡ್ ಹೇಳ್ಕೊೊಂಡು ಹೋಯ್ತಿಿದ್ನಂತೆ ಅಂದ ಸೀನ.
ಅನರ್ಹರು ವೋಟ್ ಕೇಳೋಕ್ ಹೋದ್ ಕಡೆಯೆಲ್ಲ ನಾವ್ ನಿಮ್ಗೆೆ ಯಾವ್ ಸೀಮೆ ನಾಯುಕ್ರು ಅಂತ ವೋಟ್ ಹಾಕ್ಬೇಕು ಅಂತ ಬಾಯಿಗ್ ಬಂದಂಗ್ ಬೈಯ್ತಾಾವ್ರಂತೆ ಜನ. ನಮ್ ಜನ ಅಷ್ಟೊೊಂದ್ ಬುದ್ವಂತ್ರಾಾಗ್ಬುಟಾವ್ರೆೆ ಅನ್ನು ಅಂದ ಪಟೇಲಪ್ಪ.
ದೊಡ್ಡಪ್ಪ, ಇನ್ನೇನ್ ಮತ್ತೇ ದಿನ ಬೆಳ್ಗಾಾದ್ರೆೆ ಇವ್ರುದೆ ರಾಮಾಯ್ಣ ನೋಡ್ಕಂಡ್ ಎಷ್ಟು ದಿನ ಇರಾಕಾಯ್ತದೆ ಹೇಳು. ಗೆಲ್ಸಿಿ ಕಳ್ಸಿಿ ಹೆಂಗೋ ನಮ್ಗೆೆ ನಾಲ್‌ಕ್ ಕೆಲ್ಸ ಮಾಡ್ ಕೊಡ್ರಪ್ಪ, ನಿಮ್ಮನೆ ನೀವ್ ಹೆಂಗಾದ್ರೂ ಹಾಳ್ ಮಾಡ್ಕಂಡ್ ಹೋಗಿ ಅಂತ ಸುನ್ಮಿಿದ್ರೂ ದಿನಾ ಕಿತ್ತಾಾಡ್ಕೊೊಂಡು ಜನ್ರಿಿಗೆ ನೆಮ್ದಿಿ ಇಲ್ದಂಗೆ ಂಆಡೋದಲ್ದೆೆ, ಮೂರ್ ತಿಂಗ್ಳಿಿಗೊಮ್ಮೆೆ ಎಲೆಕ್ಸನ್ ಮಾಡ್ತಿಿದ್ದೀನಿ ಬನ್ರಿಿ ಅಂತ ಬಂದ್ರೆೆ ಜನ ಹೆಂಗ್ ಸುಮ್ನಿಿರ್ತಾಾರೆ ಹೇಳು ಅಂದ ಸೀನ.
ಬುಡ್ಲಾಾ, ನಿಮ್ ಜನ ಬುದ್ವಂತ್ರೋೋ ಇಲ್ಲ, ಜಾತಿ, ಧರ್ಮ ಅಂದ್ಕಂಡು ಮಾಡಿರೋ ಅನಾಚಾರನೆಲ್ಲ ಮರ್ತು ವೋಟಾಕ್ತಾಾರೋ ಅನ್ನೊೊದು ಮುಂದ್ವಾಾರದೊತ್ಗೆೆ ಗೊತ್ತಾಾಗಕುಲ್ವಾಾ, ಬಾ ಹಂಗೆ ಊರ್ ಮುಂದ್ಲು ತ್ವಾಾಟುಕ್ಕೋೋಗಿ ಎಳ್ನೀರ್ ಕಿತ್ಕಂಡ್ ಬರುಮಾ..ನಿಮ್ ದೊಡ್ಡವ್ವ ಯಾಕೋ ಜರ ಅಂತಿದ್ಲು ಅಂತ ತೋಟದ್ ಕಡಿಕ್ ಹೊಂಟ ಪಟೇಲಪ್ಪ. ಕ್ಯಾಾಂಪೇನ್ಗೋೋಗ್ಬೇಕ್ ಬನ್ರಲ್ಲೇ ಅಂತ ಹೈಕ್ಳುನ್ನೆೆಲ್ಲ ಕರ್ಕೊೊಂಡು ಲಗೇಜ್ ಆಟೋ ಹತ್ತಿಿದ ಗುಡ್ದಳ್ಳಿಿ ಸೀನ.