Sunday, 15th December 2024

ಚೀನಾ ಮಾಡಿದ ಆ ಒಂದು ಸಣ್ಣ ಎಡವಟ್ಟಿನ ಪರಿಣಾಮ!

ವಿಶ್ವೇಶ್ವರ ಭಟ್

ಇಡೀ ಜಗತ್ತು ಚೀನಾದ ಮೇಲೆ ಮುರುಕೊಂಡು ಬಿದ್ದಿದೆ. ಇಷ್ಟೆೆಲ್ಲಾ ಅವಾಂತರಗಳಿಗೆ ನೀನೆ ಕಾರಣ ಎಂದು ಇಡೀ ಜಗತ್ತು ಆ ದೇಶದತ್ತ ಆಕ್ರೋಶದಿಂದ ಬೊಟ್ಟು ಮಾಡಿ ತೋರಿಸುತ್ತಿವೆ. ಎರಡನೇ ಮಹಾಯುದ್ಧದಲ್ಲಿ ಅಮೆರಿಕ, ರಷ್ಯಾ, ಬ್ರಿಟನ್ ಮತ್ತು ಇನ್ನಿತರ ದೇಶಗಳು ಸೇರಿ ಜಪಾನ್ ಮೇಲೆ ಅಣು ಬಾಂಬ್ ದಾಳಿ ಮಾಡಿದಾಗಲೂ, ಈ ಪ್ರಮಾಣದ ಆಕ್ರೋಶ ವ್ಯಕ್ತವಾಗಿರಲಿಲ್ಲ. ಇಡೀ ಜಗತ್ತು ‘ಇಷ್ಟಕ್ಕೆೆಲ್ಲಾ ನೀನೆ ಕಾರಣ. ಇದು ನೀನೇ ಮಾಡಿದ ಮಹಾಕಿತಾಪತಿ, ಷಡ್ಯಂತ್ರ’ ಎಂದು ಚೀನಾವನ್ನು ದೂಷಿಸುತ್ತಿದೆ. ಇಟಲಿ, ಜರ್ಮನಿ, ಅಮೆರಿಕ, ಬ್ರಿಟನ್ ಗಳಲ್ಲಿ ಚೀನಾಕ್ಕಿಿಂತ ಹೆಚ್ಚು ಮಂದಿಗೆ ಕರೋನಾ ವೈರಸ್ ಸೋಂಕಿದೆ. ಅಮೆರಿಕದಲ್ಲೊಂದೇ ಒಂದು ಲಕ್ಷಕ್ಕಿಿಂತ ಹೆಚ್ಚು ಮಂದಿ ಈ ವೈರಸ್‌ನಿಂದ ಪೀಡಿತರಾಗಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಂತೂ ಕರೋನಾವನ್ನು ‘ಚೈನೀಸ್ ವೈರಸ್’ ಎಂದು ಕರೆದು ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ. ದೊಡ್ಡಣ್ಣ ಅಮೆರಿಕದ ಸೊಕ್ಕನ್ನು ಮುರಿಯಲು ಚೀನಾ ಹೂಡಿದ ಕುತಂತ್ರ ಎಂದೂ ರಾಜತಾಂತ್ರಿಕ ವಲಯಗಳಲ್ಲಿ ಅಭಿಪ್ರಾಯಪಡಲಾಗುತ್ತಿದೆ. ಕರೋನಾ ವೈರಸ್ ಮೂಲಕ ಇಡೀ ಜಗತ್ತಿನಲ್ಲಿ ಬಿಕ್ಕಟ್ಟನ್ನು ಸೃಷ್ಟಿಸಿ ಅದರ ಲಾಭ ಪಡೆದುಕೊಂಡು, ತಾನು ಜಗತ್ತಿನ ಸೂಪರ್ ಪವರ್ ಆಗಬೇಕು ಎಂದು ಚೀನಾ ಹವಣಿಸುತ್ತಿದೆ ಎಂದು ಬಹಿರಂಗವಾಗಿ ಮಾತಾಡಿಕೊಳ್ಳಲಾಗುತ್ತಿದೆ. ಕರೋನಾ ತಡೆಗಟ್ಟಲು ಅಮೆರಿಕ ಚೀನಾದ ಮುಂದೆ ಮಂಡಿಯೂರಿ ಕುಳಿತುಕೊಳ್ಳುವ ಸಂದರ್ಭ ಬರಲಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.

ಕರೋನಾ ವೈರಸ್ ಚೀನಾದ ವುಹಾನ್ ಎಂಬ ನಗರದಲ್ಲಿ ಹುಟ್ಟಿದರೂ, ಅದು ಚೀನಾದಲ್ಲಿ ಹೆಚ್ಚು ದುಪಳಿಯೆಬ್ಬಿಸದೇ, ಇಟಲಿ, ಅಮೆರಿಕ ಮತ್ತು ಯೂರೋಪಿನ ದೇಶಗಳಿಗೆ ಹಬ್ಬಿದ್ದು ಹೇಗೆ, ಈಗ ಚೀನಾ ಏನೂ ಆಗಿಯೇ ಇಲ್ಲ ಎಂಬಂತೆ ತನ್ನ ಪಾಡಿಗೆ ಕ್ರಿಯಾಶೀಲ ಆಗಿರುವುದು ಹೇಗೆ ಎಂಬ ಪ್ರಶ್ನೆಗಳು ಎಲ್ಲರ ಮನಸ್ಸಿನಲ್ಲಿ ಗೂಡು ಕಟ್ಟಿರುವುದಂತೂ ನಿಜ. ಕೆಲವರಂತೂ ‘ಇದೊಂದು ಜೈವಿಕ ಸಮರ, ಕರೋನಾ ವೈರಸ್ಸನ್ನು ಚೀನಾವೇ ಸೃಷ್ಟಿಸಿ, ತನ್ನ ಪಾರಮ್ಯ ಮೆರೆಯಲು ಬೇರೆ ದೇಶಗಳ ಮೇಲೆ ಹರಿಬಿಟ್ಟಿದೆ. ತಳಹಿಡಿದ ತನ್ನ ಅರ್ಥ ವ್ಯವಸ್ಥೆಯನ್ನು ಸರಿ ಮಾಡಿಕೊಂಡು ಜಗತ್ತಿನ ಮೇಲೆ ಹಿಡಿತ ಸಾಧಿಸಲು ಚೀನಾ ಹಾಕಿದ ಮನೆಹಾಳ, ಮಹಾ ಸ್ಕೆಚ್ ಇದು’ ಎಂದೂ ವ್ಯಾಖ್ಯಾನ ಮಾಡುತ್ತಿದ್ದಾರೆ. ಜಗತ್ತಿನಲ್ಲಿ ದೇಶಗಳೆಲ್ಲ ತತ್ತರಿಸಿದರೆ, ಅವುಗಳೆಲ್ಲ ತನ್ನ ಮುಂದೆ ‘ಅಂಬೋ’ ಎಂದು ನಿಂತುಕೊಳ್ಳಲೇಬೇಕು, ಅದಕ್ಕಾಗಿ ಚೀನಾ ಈ ಕರೋನಾ ವೈರಸ್ ಮಹಾಪ್ರಸಂಗವನ್ನು ಹೊಸೆಯಿತಾ ಎಂಬ ಸಂದೇಹವಂತೂ ಎಲ್ಲರ ತಲೆಯೊಳಗೆ ಹುಳು ಕೊರೆಯುತ್ತಿದೆ.

ಈ ಸಂದೇಹ, ಗುಮಾನಿ, ಒಳಸಂಚು ಥಿಯರಿ, ಗುಪ್ತ ಕಾರ್ಯಸೂಚಿಗಳು ಸುಖಾಸುಮ್ಮನೆ ಮೂಡಿದ್ದಲ್ಲ. ಚೀನಾದ ಕೆಲವು ನಡೆ, ನಿರ್ಧಾರಗಳನ್ನು ಗಮನಿಸಿದಾಗ ಇಂಥ ಅನುಮಾನಗಳು ಬರುವುದು ತೀರಾ ಸಹಜ. ‘ಸೌತ್ ಚೀನಾ ಮಾರ್ನಿಂಗ್ ಪೋಸ್‌ಟ್‌’ ಪತ್ರಿಕೆ ಚೀನಾ ಸರಕಾರದ ಅಧಿಕಾರಿಗಳು ಹೇಳಿದ್ದನ್ನು ವರದಿ ಮಾಡಿದಂತೆ, ಹಿಂದಿನ ವರ್ಷದ ನವೆಂಬರ್ ಹದಿನೇಳರಂದು ನ್ಯೂ ಕರೋನಾ ವೈರಸ್ ಮೊಟ್ಟ ಮೊದಲು ಕಾಣಿಸಿಕೊಂಡಿತು. ಅದಾದ ನಂತರ ಒಂದೊಂದೇ ಪ್ರಕರಣಗಳು ವರದಿಯಾಗಲಾರಂಭಿಸಿದವು. ಈ ಮಾಹಿತಿಯನ್ನು ಜಗತ್ತಿನ ದೇಶಗಳಿಗೆ ಹಂಚಿಕೊಳ್ಳುವುದನ್ನು ಬಿಟ್ಟು, ಚೀನಾ ಕಮ್ಯುನಿಸ್‌ಟ್‌ ಪಾರ್ಟಿ ಅಧಿಕಾರಿಗಳು ಮುಚ್ಚಿಡುವುದರಲ್ಲೇ ಮಗ್ನರಾದರು. ಈ ಮಹಾಮಾರಿ ವೈರಸ್ ಬಗ್ಗೆ ಕೆಲವು ಪತ್ರಿಕೆಗಳಲ್ಲಿ ವರದಿಯಾದಾಗ, ಆ ಸುದ್ದಿಯನ್ನು ನೀಡಿದ ವೈದ್ಯರನ್ನೇ ದಬಾಯಿಸಿದರು. ಸುದ್ದಿಯನ್ನು ಅಲ್ಲಗಳೆಯುವ ಪ್ರಯತ್ನ ಮಾಡಿದರು.
ಡಿಸೆಂಬರ್ ಕೊನೆಯಲ್ಲಿ, ವುಹಾನ್ ಸೆಂಟ್ರಲ್ ಆಸ್ಪತ್ರೆಯಲ್ಲಿ ನೇತ್ರ ತಜ್ಞನಾದ ಡಾ.ಲೀ ವೆನ್ಲಿಯಾಂಗ್ ತನ್ನ ಜತೆ ಕೆಲಸ ಮಾಡುತ್ತಿರುವ ಸಹೋದ್ಯೋಗಿ ವೈದ್ಯರಿಗೆ ಸಾರ್ಸ್ ಲಕ್ಷಣಗಳಿರುವ ಹೊಸ ರೋಗ ಹರಡುತ್ತಿದೆಯೆಂದೂ, ಇದು ಸಾರ್ಸ್‌ಗಿಂತ ಭೀಕರವಾಗಿದೆಯೆಂದೂ ಎಚ್ಚರಿಸಿದ. ಇದು ಚೀನಾ ಸರಕಾರದ ಅಧಿಕಾರಿಗಳಿಗೆ ಗೊತ್ತಾಯಿತು. ಅವರು ಪೊಲೀಸರನ್ನು ಕಳಿಸಿ ಡಾ.ಲೀ ವೆನ್ಲಿಯಾಂಗ್‌ಗೆ ಸುಮ್ಮನಿರುವಂತೆ ಹೇಳಿದರು. ಅಷ್ಟಾದರೂ ಆತ ಸುಮ್ಮನಾಗಲಿಲ್ಲ. ಅವನ ಜಾಗದಲ್ಲಿ ಬೇರೆ ಯಾವ ಜವಾಬ್ದಾರಿ ವೈದ್ಯರೂ ಸುಮ್ಮನಿರುವುದು ಸಾಧ್ಯವೇ ಇರಲಿಲ್ಲ. ಆದರೆ ಪೊಲೀಸರು, ‘ನೀನು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದೀಯಾ, ಸಮಾಜದಲ್ಲಿ ಕ್ಷೋಭೆಯನ್ನುಂಟು ಮಾಡಲು ಪ್ರಯತ್ನಿಸುತ್ತಿದ್ದೀಯಾ’ ಎಂಬ ಕೇಸು ಹಾಕಿ, ಸುಮ್ಮನಿರಿಸಲು ಪ್ರಯತ್ನಿಸಿದರು. ಬಲವಂತವಾಗಿ ಅವನ ಬಾಯಿಂದ ತಾನು ತಪ್ಪು ಮಾಡಿದ್ದೇನೆ, ತನ್ನ ವರ್ತನೆಗೆ ಕ್ಷಮಿಸಿ ಎಂದು ಬಹಿರಂಗವಾಗಿ ಹೇಳಿಸಿದರು. ಕೊನೆಗೆ, ತೀರಾ ವಿಪರ್ಯಾಸ ಎಂಬಂತೆ, ಮೂವತ್ಮೂರು ವಯಸ್ಸಿನ ಡಾ.ಲೀ ವೆನ್ಲಿಯಾಂಗ್ ಕರೋನಾ ವೈರಸ್ ಸೋಂಕಿನಿಂದಲೇ (ಫೆಬ್ರವರಿ ಏಳರಂದು) ದಾರುಣವಾಗಿ ಸತ್ತ.

ಚೀನಾ ಸರಕಾರ ಕರೋನಾ ವೈರಸ್ ಸೋಂಕಿರುವುದನ್ನು ಮುಚ್ಚಿಡುವ ಬದಲು, ಇಡೀ ಜಗತ್ತನ್ನು ಎಚ್ಚರಿಸಿದ್ದರೆ, ನೈಜ ಪರಿಣಾಮವನ್ನು ಬಿಚ್ಚಿಟ್ಟಿದ್ದರೆ ಇಷ್ಟೆಲ್ಲ ಸಮಸ್ಯೆೆಗಳೇ ಆಗುತ್ತಿರಲಿಲ್ಲ. ಈ ವೈರಸ್ ಹರಡದಂತೆ ನಿಯಂತ್ರಿಸಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚೀನಾ ಸರಕಾರ ಏನೂ ಮಾಡಲೇ ಇಲ್ಲ. ನವೆಂಬರ್‌ನಿಂದ ಜನವರಿ ತನಕ ಸುಮಾರು ಮೂರು ತಿಂಗಳು ಸಮಯವನ್ನು ವ್ಯರ್ಥ ಮಾಡಿತು. ಈ ಮಾರಣಾಂತಿಕ ವೈರಸ್ ವಿರುದ್ಧ ಹೋರಾಡುವ ಜಗತ್ತಿನ ಬಲಿಷ್ಠ ದೇಶಗಳ ಸಾಮರ್ಥ್ಯವನ್ನು ಚೀನಾ ಉದಾಸೀನ ಮಾಡಿತು.

ಆ ತರುಣ ವೈದ್ಯನನ್ನು ಹೆದರಿಸಿ, ಬೆದರಿಸಿ ಬಡಿಯುವ ಬದಲು, ಅದನ್ನೇ ಎಚ್ಚರಿಕೆಯ ಗಂಟೆ ಎಂದು ಭಾವಿಸಿದಿದ್ದರೆ, ಇಷ್ಟೆಲ್ಲಾ ಅನಾಹುತ ಆಗುತ್ತಲೇ ಇರಲಿಲ್ಲ. ಆತನನ್ನು ‘ವಿಶಲ್ ಬ್ಲೋೋವರ್’ (ಮೊದಲ ಬಾರಿಗೆ ದುರ್ವಾರ್ತೆ ಬಿತ್ತರಿಸಿದವ) ಎಂದು ಪರಿಗಣಿಸುವ ಬದಲು, ಡಾ.ಲೀ ವೆನ್ಲಿಯಾಂಗ್ ತನ್ನ ವೈರಿ ಎಂದು ಪರಿಗಣಿಸಿದ್ದು ಚೀನಾದ ಅತ್ಯಂತ ಬೇಜವಾಬ್ದಾರಿ ವರ್ತನೆ ಮತ್ತು ಶತಮೂರ್ಖತನ ನಡೆ. ಅದೊಂದು ನಡೆಯಿಂದ ಇಂದು ಇಡೀ ಜಗತ್ತು ಭಾರಿ ಬೆಲೆ ತೆರುತ್ತಿದೆ. ಈ ಮನುಕುಲದ ಶಾಶ್ವತ ಶಾಪಕ್ಕೆ ಗುರಿಯಾಗಿದೆ. ಕರೋನಾ ವೈರಸ್‌ಗಿಂತ ಅದರ ಅಡ್ಡಪರಿಣಾಮ ಇನ್ನೂ ಭೀಕರ. ಅದರಿಂದ ಕೋಟ್ಯಂತರ ಜನ ಮನೆ, ಮಠ, ಜೀವ ಕಳೆದುಕೊಳ್ಳಲಿದ್ದಾರೆ. ಈಗಿದ್ದಂತೆ ಇನ್ನು ಮುಂದಿನ ಜಗತ್ತು ಇರುವುದಿಲ್ಲ. ತನ್ನದಲ್ಲದ ತಪ್ಪಿಗೆ ಜಗತ್ತು ಸಂಕಟ, ಅನಿಶ್ಚಿತತೆಯಲ್ಲಿ ಬೇಯುವಂತಾಗಿದೆ.

*ಬಿಲ್ ಗೇಟ್‌ಸ್‌ ಹೆಸರಿನಲ್ಲಿ ಬರೆದಿದ್ದೇನು ?
ಇದನ್ನು ಬರೆದವರು ಮೈಕ್ರೋಸಾಫ್‌ಟ್‌ ಸಂಸ್ಥಾಪಕ ಆ ಬಿಲ್ ಗೇಟ್‌ಸ್‌ ಎಂದು ಜಗತ್ತಿನ ಪ್ರಮುಖ ಪತ್ರಿಕೆಗಳೆಲ್ಲಾ ಪ್ರಿಿಂಟ್ ಮಾಡಿದವು. ಅವರಿಗೆ ಈ ಬರಹ ವಾಟ್ಸಪ್‌ಪ್‌ ಮೂಲಕ ಬಂದಿತ್ತು. ಪ್ರಿಿಂಟ್ ಆದ ನಂತರವೇ ಗೊತ್ತಾಗಿದ್ದು, ಇದನ್ನು ಬರೆದವರು ಗೇಟ್‌ಸ್‌ ಅಲ್ಲ ಎಂದು. ಆನಂತರ, ಇದನ್ನು ಪ್ರಿಿಂಟ್ ಮಾಡಿದ ಪತ್ರಿಕೆಗಳೆಲ್ಲ ಪ್ರಮಾದಕ್ಕೆ ವಿಷಾದ ವ್ಯಕ್ತಪಡಿಸಿದವು. ಅಸಲಿಗೆ ಇದನ್ನು ಬರೆದವರು ಯಾರು ಎಂಬುದು ಯಾರಿಗೂ ಗೊತ್ತಿಲ, ಬರೆದವನ ಹೊರತಾಗಿ. ಅವನ ಹೆಸರಲ್ಲೇ ವಾಟ್ಸಪ್‌ಪ್‌ ನಲ್ಲಿ ಹರಿದಾಡಿದ್ದರೆ, ಈ ಬರಹ ಅಷ್ಟು ಜನಪ್ರಿಯ ಆಗುತ್ತಲೂ ಇರಲಿಲ್ಲ. ಹೀಗಾಗಿ ನಿಜವಾದ ಲೇಖಕ ಅಜ್ಞಾತವಾಗಿಯೇ ಉಳಿಯಲಿದ್ದಾನೆ. ಈಗ ಯಾರೇ ಮುಂದೆ ಬಂದು ಬರೆದವನು ನಾನೇ ಎಂದರೆ ಯಾರೂ ನಂಬುವುದಿಲ್ಲ.

*ಹಾಗಾದರೆ ಬಿಲ್ ಗೇಟ್‌ಸ್‌ ಬರೆದ ಎನ್ನಲಾದ ಆ ಬರಹದಲ್ಲಿ ಏನಿದೆ?
ಒಳ್ಳೆೆಯದು, ಕೆಟ್ಟದ್ದು ಎಲ್ಲದರ ಹಿಂದೆಯೂ ಒಂದು ಅಧ್ಯಾತ್ಮಿಕ ಉದ್ದೇಶವಿರುತ್ತದೆ ಎಂದು ಬಲವಾಗಿ ನಂಬುವವನು ನಾನು. ಹಾಗಿದ್ದರೆ ಕರೋನಾ ವೈರಸ್‌ನಿಂದ ಜಗತ್ತಿನಲ್ಲಿ ಸೃಷ್ಟಿಯಾದ ಬಿಕ್ಕಟ್ಟು ನಮ್ಮ ಮೇಲೇನೂ ಪರಿಣಾಮ ಬೀರುತ್ತಿದೆ? ನನ್ನ ಯೋಚನೆಯಲ್ಲಿ ಹೊಳೆದ ಕೆಲ ಸಂಗತಿಗಳು ಇಲ್ಲಿವೆ.

*ನಾವೆಲ್ಲರೂ ಸಮಾನರು. ನಮ್ಮ ಸಂಸ್ಕೃತಿ, ಧರ್ಮ, ಉದ್ಯೋಗ, ಆರ್ಥಿಕ ಸ್ಥಿತಿಗತಿ, ನಾವೆಷ್ಟು ಪ್ರಸಿದ್ಧರು ಎಂಬುದೆಲ್ಲವನ್ನೂ ಪಕ್ಕಕ್ಕಿಟ್ಟು ನಾವೆಲ್ಲರೂ ಸಮಾನರು ಎಂಬುದನ್ನು ಇದು ಹೇಳುತ್ತಿದೆ. ಏಕೆಂದರೆ ಈ ರೋಗ ನಮ್ಮನ್ನೆಲ್ಲ ಸಮಾನವಾಗಿ ಕಾಣುತ್ತಿದೆ. ಇದರಲ್ಲಿ ನಿಮಗೆ ನಂಬಿಕೆ ಬರುತ್ತಿಲ್ಲವಾದರೆ ಟಾಮ್ ಹ್ಯಾಾಂಕ್‌ಸ್‌‌ನನ್ನು ಕೇಳಿ.

*ಜಗತ್ತಿನಲ್ಲಿ ಇರುವವರೆಲ್ಲರೂ ಪರಸ್ಪರ ಸಂಪರ್ಕ ಹೊಂದಿದ್ದಾರೆ. ನಮ್ಮೆಲ್ಲರ ನಡುವೆಯೂ ಒಂದು ಸಂಬಂಧವಿದೆ. ಹೀಗಾಗಿ ಒಬ್ಬ ವ್ಯಕ್ತಿಯ ಮೇಲೆ ಉಂಟಾಗುವ ಪರಿಣಾಮ ಇನ್ನೊಬ್ಬ ವ್ಯಕ್ತಿಯ ಮೇಲೂ ಉಂಟಾಗುತ್ತದೆ. ಅಂದರೆ, ಒಬ್ಬನಿಗಾಗುವುದು ಇನ್ನೊಬ್ಬನಿಗೂ ಆಗುತ್ತದೆ. ನಾವು ಸೃಷ್ಟಿಸಿಕೊಂಡ ಸುಳ್ಳು ಗಡಿಗಳಿಗೆ ಹೆಚ್ಚು ಮಹತ್ವವಿಲ್ಲ. ಏಕೆಂದರೆ ವೈರಸ್‌ಗೆ ಒಂದು ದೇಶದಿಂದ ಇನ್ನೊೊಂದು ದೇಶಕ್ಕೆ ಹೋಗಲು ಪಾಸ್‌ಪೋರ್ಟ್ ಬೇಕಿಲ್ಲ. ತಮ್ಮ ಇಡೀ ಬದುಕನ್ನು ಬೇರೆಯವರಿಂದ ದಮನ ಮಾಡಿಸಿಕೊಂಡೇ ಕಳೆದವರ ಸ್ಥಿತಿ ಹೇಗಿರುತ್ತದೆ ಎಂಬುದನ್ನು ಈ ವೈರಸ್ ಈಗ ನಮ್ಮೆಲ್ಲರಿಗೂ ತಿಳಿಸುತ್ತಿದೆ.

*ನಮ್ಮ ಆರೋಗ್ಯ ಎಷ್ಟು ಮಹತ್ವದ್ದು ಎಂಬುದನ್ನು ಕರೋನಾ ವೈರಸ್ ಮತ್ತೊಮ್ಮೆ ನಮಗೆಲ್ಲ ನೆನಪಿಸುತ್ತಿದೆ. ಸತ್ವವಿಲ್ಲದ ಅಪೌಷ್ಟಿಕ ಪ್ಯಾಕೇಜ್‌ಡ್‌ ಆಹಾರವನ್ನು ನಾವೆಲ್ಲಾ ತಿನ್ನುತ್ತಿದ್ದೇವೆ. ರಾಸಾಯನಿಕಗಳಿಂದ ಕಲುಷಿತವಾದ ನೀರನ್ನು ಕುಡಿಯುತ್ತಿದ್ದೇವೆ. ನಮ್ಮ ಆರೋಗ್ಯದ ಬಗ್ಗೆೆ ನಾವೇ ಗಮನ ನೀಡದಿದ್ದರೆ ಖಂಡಿತ ಅನಾರೋಗ್ಯಕ್ಕೆ ತುತ್ತಾಗುತ್ತೇವೆ.

*ಬದುಕು ಎಷ್ಟು ಕ್ಷಣಿಕ ಎಂಬುದನ್ನು ಇದು ನೆನಪಿಸುತ್ತಿದೆ. ಈ ಸಣ್ಣ ಬದುಕಿನಲ್ಲಿ ನಮಗೆ ಮುಖ್ಯವಾದುದು ಯಾವುದು? ಒಬ್ಬರಿಗೊಬ್ಬರು ಸಹಾಯ ಮಾಡುವುದು. ಮುಖ್ಯವಾಗಿ ವೃದ್ಧರು ಮತ್ತು ರೋಗಪೀಡಿತರಿಗೆ ಸಹಾಯ ಮಾಡುವುದು. ಈ ಬದುಕಿನ ಉದ್ದೇಶ ಮುಗಿಬಿದ್ದು ಟಾಯ್ಲೆಟ್ ರೋಲ್‌ಗಳನ್ನು ಬಾಚಿಕೊಳ್ಳುವುದಲ್ಲ.

*ನಮ್ಮ ಸಮಾಜ ಎಷ್ಟು ಕೃತಕವಾಗಿಬಿಟ್ಟಿದೆ ಎಂಬುದನ್ನಿದು ನೆನಪಿಸುತ್ತಿದೆ. ಕಷ್ಟ ಬಂದಾಗಲೇ ನಮಗೆ ಹೇಗೆ ಅಗತ್ಯ ವಸ್ತುಗಳಾದ ಆಹಾರ, ನೀರು ಮತ್ತು ಔಷಧದ ಮಹತ್ವ ಅರ್ಥವಾಗುತ್ತದೆ ಎಂಬುದನ್ನಿದು ತೋರಿಸಿಕೊಡುತ್ತಿದೆ. ಸಾಮಾನ್ಯ ದಿನಗಳಲ್ಲಿ ನಾವೆಲ್ಲ ಅನಗತ್ಯವಾಗಿ ಐಷಾರಾಮಿ ವಸ್ತುಗಳಿಗೆ ಎಷ್ಟೆೆಲ್ಲಾ ಮಹತ್ವ ನೀಡುತ್ತಿದ್ದೆೆವು. ಆದರೆ, ಈಗ ಎಲ್ಲರಿಗೂ ಅವಶ್ಯವಾಗಿ ಬೇಕಿರುವುದು ಬದುಕಿನ ಮೂಲಭೂತ ಅಗತ್ಯಗಳಷ್ಟೆೆ.

*ನಮ್ಮ ಕುಟುಂಬ ಹಾಗೂ ಮನೆ ಎಷ್ಟು ಮುಖ್ಯ ಎಂಬುದನ್ನು ಈ ವೈರಸ್ ನಮಗೆ ಮನವರಿಕೆ ಮಾಡಿಕೊಡುತ್ತಿದೆ. ನಾವು ನಮ್ಮ ಕುಟುಂಬವನ್ನು ಎಷ್ಟೆೆಲ್ಲಾ ಕಡೆಗಣಿಸುತ್ತಿದ್ದೆವು. ಈಗ ವೈರಸ್ಸೇ ನಮ್ಮನ್ನು ನಮ್ಮನಮ್ಮ ಮನೆಗಳಲ್ಲಿ ಕುಳ್ಳಿರಿಸಿದೆ. ಎಲ್ಲರೂ ಅವರವರ ಮನೆಗಳನ್ನು ಮತ್ತೆ ‘ಕಟ್ಟಿಕೊಳ್ಳಲಿ’, ಎಲ್ಲರೂ ಈ ಹಿಂದೆ ಕಳೆದುಕೊಂಡಿದ್ದ ಕೌಟುಂಬಿಕ ಸಂಪರ್ಕವನ್ನು ಮರುಸ್ಥಾಪಿಸಿಕೊಳ್ಳಲಿ ಎಂದು ಕರೋನಾ ಹೇಳುತ್ತಿದೆ.

*ನಮ್ಮ ನಿಜವಾದ ಕೆಲಸ ನಮ್ಮ ನೌಕರಿಯಲ್ಲ. ಆದರೆ ನಾವು ಇಷ್ಟು ದಿನ ಅದನ್ನೊೊಂದೇ ಮಾಡುತ್ತಿದ್ದೆವು. ವಾಸ್ತವವಾಗಿ ನಾವು ಹುಟ್ಟಿರುವುದು ಆ ನೌಕರಿ ಮಾಡುವುದಕ್ಕಲ್ಲ. ನಮ್ಮ ನಿಜವಾದ ಕೆಲಸ ಒಬ್ಬರನ್ನೊಬ್ಬರು ನೋಡಿಕೊಳ್ಳುವುದು. ಒಬ್ಬರನ್ನೊಬ್ಬರು ರಕ್ಷಿಸಿಕೊಳ್ಳುವುದು ಹಾಗೂ ಪರಸ್ಪರರ ಸಹಾಯಕ್ಕೆ ಒದಗಿಬರುವುದು.

*ನಮ್ಮ ಅಹಂಕಾರಗಳನ್ನೂ, ಸ್ವಪ್ರತಿಷ್ಠೆಯನ್ನೂ ಗಂಟುಕಟ್ಟಿ ಅಟ್ಟಕ್ಕೆಸೆಯಬೇಕು ಎಂದು ಕರೋನಾ ಒತ್ತಿ ಹೇಳುತ್ತಿದೆ. ನಾವು ಎಷ್ಟೇ ದೊಡ್ಡವರಾಗಿರಬಹುದು ಅಥವಾ ನಾವು ಬಹಳ ದೊಡ್ಡವರು ಎಂದು ನಾವೇ ಅಂದುಕೊಂಡಿರಬಹುದು. ಅಥವಾ ನಾವು ದೊಡ್ಡವರು ಎಂದು ಬೇರೆಯವರು ಭಾವಿಸಿರಬಹುದು. ಆದರೆ, ಕಣ್ಣಿಗೆ ಕಾಣದಷ್ಟು ಚಿಕ್ಕ ವೈರಸ್ ಈ ಜಗತ್ತನ್ನು ಸ್ತಬ್ಧಗೊಳಿಸಬಹುದು.

*ಬದುಕನ್ನು ಸುಂದರವಾಗಿಸಿಕೊಳ್ಳುವುದು ನಮ್ಮ ಕೈಲೇ ಇದೆ. ನಮ್ಮಲ್ಲಿ ಅಪರಿಮಿತ ಶಕ್ತಿಯಿದೆ. ನಾವು ಪರಸ್ಪರರಿಗೆ ಸಹಾಯ ಮಾಡುತ್ತಾ, ನಮ್ಮಲ್ಲಿರುವುದನ್ನು ಹಂಚಿಕೊಳ್ಳುತ್ತಾ, ಬೇರೆಯವರಿಗೆ ಅನುಕೂಲ ಮಾಡಿಕೊಡುತ್ತಾ ನೆಮ್ಮದಿಯಿಂದ ಬದುಕಬಹುದು. ಅಥವಾ ಸ್ವಾರ್ಥಿಗಳಾಗಿ ನಮ್ಮನ್ನೊೊಂದೇ ನಾವು ನೋಡಿಕೊಳ್ಳಲೂಬಹುದು. ಕಷ್ಟಗಳೇ ನಮ್ಮ ನಿಜವಾದ ಬಣ್ಣವನ್ನು ಹೊರಗೆಳೆದು ತೋರಿಸುತ್ತವೆ.

*ನಾವು ತಾಳ್ಮೆೆಯಿಂದಲೂ ಇರಬಹುದು ಅಥವಾ ಆತಂಕದಿಂದ ಪ್ಯಾನಿಕ್ ಆಗಬಹುದು. ಇಂತಹ ಸಂದರ್ಭಗಳು ಇತಿಹಾಸದಲ್ಲಿ ಈ ಹಿಂದೆಯೂ ಬಂದಿದ್ದವು ಮತ್ತು ಇದೆಲ್ಲ ಒಂದು ದಿನ ಕಳೆದುಹೋಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಹುದು ಅಥವಾ ಇಲ್ಲಿಗೆ ಜಗತ್ತು ಮುಗಿದುಹೋಯಿತು ಎಂದು ಹೆದರುತ್ತಾ ನಮಗೆ ನಾವೇ ತೊಂದರೆ ತಂದುಕೊಳ್ಳಬಹುದು. ಎಲ್ಲವೂ ನಮ್ಮ ಕೈಲಿದೆ.

*ಇದು ನಮ್ಮ ಬದುಕಿನ ಕೊನೆಯೂ ಆಗಿರಬಹುದು ಅಥವಾ ಹೊಸ ಆರಂಭವೂ ಆಗಿರಬಹುದು. ಇದು ನಮ್ಮ ತಪ್ಪುಗಳಿಂದ ನಾವು ಪಾಠ ಕಲಿತು, ಆತ್ಮಾವಲೋಕನ ಮಾಡಿಕೊಂಡು ನಮ್ಮನ್ನು ನಾವು ಸುಧಾರಿಸಿಕೊಳ್ಳಲು ಸೃಷ್ಟಿಯಾಗಿರುವ ಅವಕಾಶವಾಗಿರಬಹುದು ಅಥವಾ ನಾವು ಪಾಠ ಕಲಿಯುವವರೆಗೂ ಮರುಕಳಿಸುತ್ತಲೇ ಇರುವ ದುರ್ಭರ ದಿನಗಳ ಆರಂಭವೂ ಆಗಿರಬಹುದು. ನಮ್ಮ ಬದುಕಿನ ಉದ್ದೇಶವೇನು ಎಂಬುದನ್ನು ಈಗಲೂ ನಾವು ತಿಳಿದುಕೊಳ್ಳದಿದ್ದರೆ ಬಹುಶಃ ಇದು ಹೀಗೇ ಮುಂದುವರಿಯಬಹುದು.

*ಈ ಭೂಮಂಡಲ ಅನಾರೋಗ್ಯಪೀಡಿತವಾಗಿದೆ. ಸೂಪರ್ ಮಾರ್ಕೆಟ್‌ಗಳ ಶೆಲ್‌ಫ್‌‌ನಲ್ಲಿ ಟಾಯ್ಲೆಟ್ ರೋಲ್‌ಗಳು ಹೇಗೆ ಖಾಲಿಯಾಗುತ್ತಿವೆಯೋ ಹಾಗೆಯೇ ಶರವೇಗದಲ್ಲಿ ಭೂಮಿಯ ಮೇಲಿನ ಕಾಡು ಕೂಡ ನಾಶವಾಗುತ್ತಿದೆ ಎಂಬುದನ್ನು ನಮಗೆ ಕರೋನಾ ಬಿಕ್ಕಟ್ಟು ನೆನಪಿಸುತ್ತಿದೆ. ನಮ್ಮ ಮನೆಗೆ ರೋಗ ಬಂದಿರುವುದರಿಂದಲೇ ನಮಗೂ ರೋಗ ಬರುತ್ತಿದೆ.

*ಎಲ್ಲಾ ಕಷ್ಟಗಳ ನಂತರವೂ ಸುಖ ಬರುತ್ತದೆ. ಬದುಕು ಒಂದು ಚಕ್ರವಿದ್ದಂತೆ. ಈಗ ನಾವಿರುವುದು ಒಂದು ದೊಡ್ಡ ಚಕ್ರದ ಕೆಳಭಾಗದಲ್ಲಿ. ಇದೊಂದು ಹಂತ. ಇದಕ್ಕೆ ನಾವು ಹೆದರಬೇಕಿಲ್ಲ. ಏಕೆಂದರೆ ಚಕ್ರ ತಿರುಗುತ್ತದೆ. ಮತ್ತೆ ನಾವು ಮೇಲೆ ಬರುತ್ತೇವೆ.

*ಎಲ್ಲರೂ ಕರೋನಾ ವೈರಸ್ಸನ್ನು ದೊಡ್ಡ ವಿಧ್ವಂಸಕ ಎಂದು ನೋಡಿದರೆ ನಾನಿದನ್ನು ‘ಜಗತ್ತನ್ನು ಸರಿಪಡಿಸಲು ಬಂದಿರುವ ಸುಧಾರಕ’ ಎಂದು ಪರಿಗಣಿಸುತ್ತೇನೆ. ನಾವೆಲ್ಲ ಮರೆತು ಕುಳಿತಿರುವ ಬದುಕಿನ ಪ್ರಮುಖ ಪಾಠಗಳನ್ನು ಮತ್ತೆ ನಮಗೆಲ್ಲ ನೆನಪಿಸಲು ಈ ಬಿಕ್ಕಟ್ಟು ಬಂದಿದೆ. ಪಾಠ ಕಲಿಯುವುದು, ಬಿಡುವುದು ನಮಗೆ ಬಿಟ್ಟಿದ್ದು.


*ಕರೋನಾ ಕಾಲದಲ್ಲಿ ಕೀಟಲೆ

ಕರೋನಾ ವೈರಸ್ ಜಗತ್ತನ್ನು ಭೀಕರವಾಗಿ ಬಾಧಿಸುತ್ತಿರುವ ಈ ದಿನಗಳಲ್ಲಿ, ನನಗೆ ಸೋಜಿಗವಾಗಿ ಕಾಡಿದ್ದು ಜನರ ಸೆನ್‌ಸ್‌ ಆಫ್ ಹ್ಯೂಮರ್. ವಾಟ್ಸಪ್‌ಪ್‌ ತುಂಬಾ ಜೋಕುಗಳ ಚಂಡಮಾರುತ. ಇವುಗಳನ್ನು ಬರೆದವರು ಯಾರು ಎಂಬುದು ಗೊತ್ತಾಗುವುದಿಲ್ಲ. ‘ಆಲಸಿ ಮನಸ್ಸು ಭೂತದ ಕಾರ್ಯಾಗಾರ’ ಎಂಬ ಗಾದೆಯನ್ನು ಸುಳ್ಳು ಮಾಡಿರುವ ಕರೋನಾ, ಈ ಸಂಕಷ್ಟದ ಸಮಯದಲ್ಲೂ ಜನರ ಮನಸ್ಸನ್ನು ಖುಷಿಯಾಗಿಟ್ಟಿದೆ. ಆ ಪೈಕಿ ಒಂದೆರಡು..

ರಾಯರು: ಭಟ್ಟರೇ, ಕರೋನಾ ವೈರಸ್ ಬಾಧಿಸುತ್ತಿರುವ ಈ ಪರಿಸ್ಥಿತಿಯಲ್ಲಿ ಏನ್ಮಾಡೋದು?

ಭಟ್ಟರು : ನೋಡಿ ರಾಯ್ರೆ, ಈ ಸಮಯದಲ್ಲಿ ನಾವು ನಮ್ಮ ದೇವರುಗಳ ಥರ ಇರಬೇಕು.

ರಾಯರು: ಗೊತ್ತಾಗ್ಲಿಲ್ಲ, ನಾವು ದೇವರ ಥರ ಇರೋದು ಅಂದ್ರೆ ಹೇಗೆ?

ಭಟ್ಟರು : ಅಂದ್ರೆ ದೇವರು ಯಾವ ರೀತಿ ಗರ್ಭಗುಡಿ ಬಿಟ್ಟು ಹೊರಗೆ ಬರೋದಿಲ್ಲವೋ ಹಾಗೇ. ಅಲ್ಲೇ ಶುದ್ಧಿ, ಅಭಿಷೇಕ, ನೈವೇದ್ಯ, ಮಂಗಳಾರತಿ ಎಲ್ಲಾ. ಉತ್ಸವಾನೂ ಇಲ್ಲ, ಮೆರವಣಿಗೇನೂ ಇಲ್ಲ, ತೀರ್ಥನೂ ಇಲ್ಲ, ಪ್ರಸಾದನೂ ಇಲ್ಲ.

ರಾಯರು: ನಾವು ಆ ಥರ ಹೇಗೆ ಇರೋದು?

ಭಟ್ಟರು : ನೀವೂ ಅಷ್ಟೇ, ದೇವರ ಥರ ಮನೆ ಒಳಗೇ ಇದ್ದು, ಸ್ಯಾನಿಟೈಸರ್‌ನಿಂದ ಆಗಾಗ್ಗೆ ಕೈ ಶುದ್ಧಿ ಮಾಡ್ಕೊೊಂಡು, ಬೆಳಗ್ಗೆ ಬಾತ್ ರೂಮ್‌ಗೆ ಹೋಗಿ ಅಭಿಷೇಕ ಮಾಡ್ಕೊೊಂಡು, ಹೆಂಡ್ತಿ ಮಾಡಿ ಹಾಕೋ ನೈವೇದ್ಯ ತಿಂದ್ಕೊೊಂಡು, ಹೆಂಡ್ತಿ ಬಾಯಲ್ಲಿ ಮೂರು ಹೊತ್ತೂ ಮಂಗಳಾರತಿ ಮಾಡಿಸ್ಕೊೊಂಡು ಅಲ್ಲೇ ಇರಿ. ಉತ್ಸವ ಮೂರ್ತಿ ಥರಾ ತೀರ್ಥ ಸಿಗುತ್ತಾ ಅಂತ ಹುಡುಕ್ಕೊೊಂಡು ಬೀದಿ ಬೀದೀಲಿ ಮೆರವಣಿಗೆ ಬಂದ್ರೆ ಪೋಲಿಸರಿಂದ ಪ್ರಸಾದ ಸಿಗುತ್ತೆ, ಹುಷಾರು!

ಲಾಕ್ ಡೌನ್ ಆಗಿ ನಾಲ್ಕು ದಿನಗಳಾದವು. ನಾನು ಮನೆಯಲ್ಲೇ ಕುಳಿತಿದ್ದೇನೆ. ನನ್ನ ಹೆಂಡತಿ ಆತ್ತ ಇತ್ತ ಹೋಗುವಾಗ ಹೇಳುತ್ತಾಳೆ – ಈ ಬೇವರ್ಸಿ ಮುಂಡೇದು ಯಾವಾಗ ಇಲ್ಲಿಂದ ಹೋಗುತ್ತದೋ ಗೊತ್ತಾಗ್ತಾ ಇಲ್ಲ.

ಅವಳು ಆ ಮಾತನ್ನು ನನಗೆ ಹೇಳುತ್ತಾಳೋ ಕರೋನಾಕ್ಕೆ ಹೇಳುತ್ತಾಳೋ ನನಗೊಂದೂ ಅರ್ಥವಾಗುತ್ತಿಲ್ಲ.

ಲಾಕ್ ಡೌನ್ ಕಾಲದಲ್ಲಿ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಬೇಕೆಂದರೆ ಗಂಡಸ್ರು ಕಡ್ಡಾಯವಾಗಿ ಹೇಳಲೇಬೇಕಾದ ಆರು ಮಂತ್ರಗಳು : 1. ನೀನು ಈಚೆಗೆ ಬಹಳ ಸುಂದರವಾಗಿ ಕಾಣುತ್ತಿದ್ದೀಯಾ(ದಿನಕ್ಕೆೆ ಹತ್ತು ಬಾರಿ) 2. ಅಯ್ಯೋ ಪಾಪ ನೀನು ಎಷ್ಟೊೊಂದು ಕೆಲಸ ಮಾಡ್ತೀಯಾ (ದಿನಕ್ಕೆ ಆರು ಬಾರಿ) 3. ನೀನು ಈಚೆಗೆ ಸಣ್ಣಗಾಗ್ತಾ ಇದ್ದೀಯ ( ದಿನಕ್ಕೆ ಎಂಟು ಬಾರಿ) 4. ಬಹಳ ಕೆಲಸ ಮಾಡಿದರೆ ಸುಸ್ತಾಗುತ್ತೆ, ಸ್ವಲ್ಪ ರೆಸ್‌ಟ್‌ ತಗೋಬಾರ್ದಾ ? (ದಿನಕ್ಕೆ ಹತ್ತು ಬಾರಿ) 5. ಮನೆ ಕೆಲಸ ಇದ್ದೇ ಇರುತ್ತೆ.. ನಿನ್ನ ಆರೋಗ್ಯದ ಕಡೆ ಗಮನ ಕೊಡು (ದಿನಕ್ಕೆ ಹದಿನೈದು ಸಲ) ಮತ್ತು 6. ನಿನ್ನ ತವರು ಮನೆಯವರೆಲ್ಲ ಸುರಕ್ಷಿತವಾಗಿ ಇರಲಿ (ದಿನಕ್ಕೆೆ ಇಪ್ಪತ್ತು ಬಾರಿ)