Sunday, 15th December 2024

ಭಾರತೀಯರೆಲ್ಲಾ ಒಂದಾಗಲು ಬೇಕು,ಆರ್‌ಎಸ್‌ಎಸ್ ಸಿದ್ಧಾಂತ!

ಜಾತಿ-ಧರ್ಮ ಭೇದವಿಲ್ಲದೇ ಸತ್ಯವನ್ನು ಸತ್ಯವೆಂದು, ಸುಳ್ಳನ್ನು ಸುಳ್ಳೆೆಂದು ನಂಬುವುದೇ ಆರ್‌ಎಸ್‌ಎಸ್‌ನ ಸಿದ್ಧಾಾಂತ. ರಾಷ್ಟ್ರೀಯತೆಯನ್ನು ಅದು ಹಿಂದುತ್ವ ಎಂದು ಪರಿಗಣಿಸುತ್ತದೆ.

ಸಿದ್ಧಾಾರ್ಥ ವಾಡೆನ್ನವರ, ಲೇಖಕರು

‘ರಾಮ ಒಳ್ಳೆೆಯವನಾದರೆ ರಾವಣ ಕ್ರೂರಿ, ಕೃಷ್ಣ ಒಳ್ಳೆೆಯವನಾದರೆ ಕಂಸ ಕ್ರೂರಿ, ಪಾಂಡವರು ಒಳ್ಳೆೆಯವರಾದರೆ ಕೌರವರು ಕ್ರೂರಿಗಳು…’-ಇದು ಸಂಸ್ಕೃತಿ. ಈ ಸಂಸ್ಕೃತಿ ನಮಗೆ ಬೇಕು. ಇದನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ-ಆರ್‌ಎಸ್‌ಎಸ್ ಕಲಿಸುತ್ತದೆ. ಜಾತಿ-ಧರ್ಮ ಭೇದವಿಲ್ಲದೇ ಸತ್ಯವನ್ನು ಸತ್ಯವೆಂದು, ಸುಳ್ಳನ್ನು ಸುಳ್ಳೆೆಂದು ನಂಬುವುದೇ ಆರ್‌ಎಸ್‌ಎಸ್‌ನ ಸಿದ್ಧಾಾಂತ. ರಾಷ್ಟ್ರೀಯತೆಯನ್ನು ಹಿಂದುತ್ವ ಎಂದು ಪರಿಗಣಿಸಬೇಕು.

ಎಲ್ಲಾಾ ಹಿಂದೂಗಳು ಒಂದಾಗಬೇಕು ಬಲಿಷ್ಠ ಭಾರತ ಕಟ್ಟಬೇಕು. ಅದರಿಂದ ಜಗತ್ತಿಿಗೆ ಒಳಿತಾಗಬೇಕು. ಮಾನವ ಕುಲ ಒಂದೇ, ಮಾನವರಲ್ಲಿ ಭೇದ ಸೃಷ್ಟಿಿಸಿ ಭಿನ್ನತೆ ಹುಡುಕುವುದು ಬೇಡ, ಅದು ಅಪರಾಧ. ಜಾತಿ, ಪಂಗಡ, ಭಾಷೆ, ಗಡಿ ಇವುಗಳೇ ಮುಖ್ಯ ಆಗಬಾರದು, ಇವುಗಳಿಗೆ ಎರಡನೇ ಸ್ಥಾಾನ ಸಿಗಬೇಕು. ಇಂತಹ ವಿಚಾರಗಳನ್ನು ಪ್ರತಿಯೊಬ್ಬರ ಮನದಲ್ಲಿ ಮೂಡಿಸುವ ಕೆಲಸವನ್ನು ಆರ್‌ಎಸ್‌ಎಸ್ ಕಳೆದ 94 ವರ್ಷಗಳಿಂದ ಮಾಡುತ್ತಿಿದೆ. ಜಗತ್ತಿಿನ ಯಾವ ಸಂಸ್ಥೆೆಯೂ ಇಷ್ಟೊೊಂದು ಪ್ರಯತ್ನ ಮತ್ತು ಶಿಸ್ತುಬದ್ಧ ಸಿದ್ಧಾಾಂತಗಳಿಗೆ ನಾಂದಿ ಹಾಡಿಲ್ಲ. ಆರ್‌ಎಸ್‌ಎಸ್ ಸ್ಥಾಾಪನೆಯಾಗಿ ಇಂದಿಗೆ 94 ವರ್ಷಗಳಾಗುತ್ತವೆ.

ಮಾನವನ ಜೀವಿತಾವಧಿಯ ಕೆಲವು ಸತ್ಯಗಳನ್ನು ನಾವೆಲ್ಲ ನೆನಪಿಡಬೇಕು. ಸೂರ್ಯ, ವಾಯು, ಅಗ್ನಿಿ ಇವುಗಳನ್ನು 5,000 ವರ್ಷಗಳ ಹಿಂದೆಯೇ ಜಗತ್ತಿಿನಾದ್ಯಂತ ಮಾನವ ಜನಾಂಗವೆಲ್ಲಾಾ ಪೂಜಿಸುತ್ತಿಿತ್ತು. ಯಾವಾಗ ಈ ಭೂಮಿಯ ಮೇಲೆ ಏಕದೇವತಾ ಆರಾಧಕರು ಜನಿಸಿದರೋ ಅಂದಿನಿಂದಲೇ ಬಹುದೇವತಾ ಆರಾಧಕರ ಸಂಖ್ಯೆೆ ಕಡಿಮೆಯಾಗಲು ಪ್ರಾಾರಂಭವಾಯಿತು. ಬಹುದೇವತಾ ಆರಾಧಕರ ಸಂಖ್ಯೆೆ 5,000 ವರ್ಷಗಳಲ್ಲಿ ಶೇ.100 ರಿಂದ ಶೇ.15ಕ್ಕೆೆ ಬಂದು ತಲುಪಿದೆ. ಅತಿಯಾದ ನಂಬಿಕೆಗಳನ್ನು ಜನರ ಮನಸ್ಸಿಿನಲ್ಲಿ ಬಿತ್ತಿಿದ ಏಕದೇವತಾ ಆರಾಧಕರು ಖಡ್ಗ ಮತ್ತು ಪ್ರೀತಿ ಬಳಸಿ ಜನರ ಮನ ಪರಿವರ್ತನೆ ಮಾಡಿದರು. ಕೇವಲ ಎರಡು ಸಾವಿರ ವರ್ಷಗಳಲ್ಲಿ ಬಹುತೇಕ ಭೂಮಿಯನ್ನು ಆಕ್ರಮಿಸಿದರು. ಸದ್ಯ ಜಗತ್ತಿಿನ ಪೂರ್ವಜರು ಸೃಷ್ಟಿಿಸಿದ ವ್ಯವಸ್ಥೆೆಯನ್ನು ಕಾಪಾಡಿಕೊಂಡು ಹೋಗುತ್ತಿಿರುವ ಏಕಮಾತ್ರ ದೇಶವೆಂದರೆ ಭಾರತ. ಈ ದೇಶದ ಸಿದ್ಧಾಾಂತಗಳನ್ನು ವಿಸ್ತರಿಸಲು ಬಹುದೇವತಾ ಆರಾಧಕರು ಪ್ರಯತ್ನಿಿಸುತ್ತಿಿದ್ದಾಾರೆ. ಬಹುದೇವತಾ ಆರಾಧನೆ ವಿಸ್ತರಿಸಲು ರಾಜಕೀಯ ಅಧಿಕಾರ ಅತ್ಯಗತ್ಯವಾಗಿ ಬೇಕು. ಆ ಅಧಿಕಾರವನ್ನು ಭಾರತೀಯರು ಇಂದು ದೇಶಭಕ್ತರ ಕೈಯಲ್ಲಿ ಕೊಟ್ಟಿಿದ್ದಾಾರೆ. ಸಂಘದ ಪ್ರಾಾಯೋಜಿತ ರಾಜಕೀಯ ಪಕ್ಷ ಬಿಜೆಪಿ ಕಳೆದ 6 ವರ್ಷಗಳಿಂದ ಸ್ವಂತ ಬಲದ ಮೇಲೆ ಅಧಿಕಾರದಲ್ಲಿದೆ. ಬಲಿಷ್ಠ ಭಾರತ ಕಟ್ಟಲು ಪ್ರಯತ್ನಿಿಸುತ್ತಿಿದೆ.

ಹಿಂದೂಗಳೆಂದರೆ ಯಾರು? ಭಾರತೀಯ ಜೀವನ ಶೈಲಿಯಲ್ಲಿ ಬದುಕುತ್ತಿಿರುವವರೆಲ್ಲರೂ ಹಿಂದೂಗಳೇ, ಬಹುದೇವತಾ ಆರಾಧನೆ ಯಾರೇ ಮಾಡಲಿ ಅವರು ಹಿಂದೂಗಳೇ! ಸಿಖ್‌ರು, ಜೈನರು, ಬುದ್ಧರು, ಅಲೆಮಾರಿಗಳು, ದಲಿತರು, ಆರ್ಯ ಸಮಾಜದವರು ಎಲ್ಲರೂ ಹಿಂದೂಗಳೇ. ಭಾರತದ ಬಹುತೇಕ ಮುಸ್ಲಿಿಮರು ಹಿಂದೂಗಳೇ ಆಗಿದ್ದಾಾರೆ. ಈ ಸತ್ಯವನ್ನು ಯಾರೂ ಮರೆಮಾಚಲು ಸಾಧ್ಯವಿಲ್ಲ.

ಬಹುದೇವತಾ ಆರಾಧಕರು ಉಳಿಯಬೇಕು ಮತ್ತು ಬೆಳೆಯಬೇಕೆಂದರೆ ಬಹುದೇವತಾ ಆರಾಧನೆಯಲ್ಲಿ ನಂಬಿಕೆ ಇರುವವರಿಗೆ ರಾಜಕೀಯ ಅಧಿಕಾರ ನೀಡಬೇಕು. ಆ ನಿಟ್ಟಿಿನಲ್ಲಿ ಕಳೆದ 94 ವರ್ಷಗಳಿಂದ ಆರ್‌ಎಸ್‌ಎಸ್ ಪ್ರಯತ್ನ ಮಾಡುತ್ತಿಿದೆ. ಆ ಪ್ರಯತ್ನದ ಫಲವೇ ಇಂದು ಬಹುದೇವತಾ ಆರಾಧಕರು ಯಶಸ್ಸಿಿನ ಉತ್ತುಂಗದಲ್ಲಿದ್ದಾಾರೆ. ಬಹುದೇವತಾ ಆರಾಧಕರನ್ನು ಕಡೆಗಣಿಸಿದರೆ ಅಧಿಕಾರ ಇಲ್ಲ ಎನ್ನುವ ಸೂಚನೆಯನ್ನು ಭಾರತೀಯರು ನೀಡಿದ್ದಾಾರೆ.

ಸಿಬಿಎಸ್‌ಸಿ ಮತ್ತು ಇತರೆ ಶಾಲಾ ಪುಸ್ತಕಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಬಹುಸಂಖ್ಯಾಾತ ಹಿಂದೂಗಳಿಗೆ ನೋವಿನ ಸಂಗತಿ ತಿಳಿದುಬರುತ್ತದೆ, ಅದೇನೆಂದರೆ ಹೊಂದಿಸಿ ಬರೆಯಿರಿ ಪ್ರಶ್ನೆೆಯಲ್ಲಿ ಬೈಬಲ್ ಎಂದರೆ ಏನು? ಹೋಲಿ ಬುಕ್ ಅಂತ ಇರುತ್ತದೆ, ಖುರಾನ್ ಎಂದರೇನು? ಹೋಲಿ ಬುಕ್ ಅಂತ ಇರುತ್ತದೆ. ಆದರೆ ಭಗವದ್ಗೀತೆಯ ಬಗ್ಗೆೆ ಪ್ರಸ್ತಾಾಪ ಇರುವುದಿಲ್ಲ. ಚರ್ಚ, ಮಸೀದಿಗಳ ಬಗ್ಗೆೆ ಪ್ರಸ್ತಾಾಪ ಇರುತ್ತದೆ, ದೇವಸ್ಥಾಾನ, ಮಂದಿರಗಳ ಬಗ್ಗೆೆ ಪ್ರಸ್ತಾಾಪ ಇರುವುದಿಲ್ಲ!

ಎಲ್ಲಾಾ ಧರ್ಮಗಳಲ್ಲಿ ಶೇ.70ರಿಂದ ಶೇ.80ರಷ್ಟು ಆಧ್ಯಾಾತ್ಮ ಪ್ರೇರಿತ ತತ್ವಗಳಿವೆ, ಅವುಗಳಿಗೆ ಮಾನ್ಯತೆ ಮತ್ತು ಮಹತ್ವ ನೀಡುವ ಕೆಲಸ ಭಾರತೀಯರಿಂದ ಆಗುತ್ತಿಿದೆ. ಮಾನವ ಕುಲ ಒಂದೇ ಎಂದು ಹೇಳುವ ಭಾರತೀಯರ ಚಿಂತನೆಗಳಿಗೆ ಜಗತ್ತಿಿನಾದ್ಯಂತ ಬೆಂಬಲ ಪಡೆಯುವ ಪ್ರಯತ್ನಗಳು ಇಂದು ಆಗುತ್ತಿಿವೆ. ಉದಾ: ‘ಯೋಗ’ ಅಂತಾರಾಷ್ಟ್ರೀಯ ಪ್ರಸಿದ್ಧಿಿಯನ್ನು ಪಡೆದುಕೊಂಡಿದೆ. ಭಾರತೀಯರ ಹಾಗೆ ಎಲ್ಲಾಾ ದೇಶದ ಜನರು ಯೋಚಿಸಿದರೆ ಜಗತ್ತೇ ಒಂದು ಆಶ್ರಮ ಆಗುತ್ತದೆ. ಆ ನಿಟ್ಟಿಿನಲ್ಲಿ ಆರ್‌ಎಸ್‌ಎಸ್ ಕಾರ್ಯೋನ್ಮುಖವಾಗಿದೆ, ಮುಂದೊಂದು ದಿನ ಜಯ ಸಿಗಲಿದೆ.

ನಂಬಿಕೆಗಳ ಅಡಿಯಲ್ಲಿ ಬದುಕುತ್ತಿಿರುವ ನಾವೆಲ್ಲಾಾ ನಂಬಿಕೆಗಳಿಗೆ ಮಹತ್ವ ನೀಡಬೇಕು. ಅಯೋಧ್ಯೆೆಯಲ್ಲಿಯೇ ರಾಮ ಮಂದಿರ ನಿರ್ಮಾಣ ಆಗಬೇಕು, ಇದು ಹಿಂದೂ ಧರ್ಮದ ನಂಬಿಕೆ. ಅದೇ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣ ಆಗಲಿಲ್ಲವೆಂದರೆ ಅದು ಹಿಂದೂ ಧರ್ಮಕ್ಕೆೆ ವಿರೋಧ. ಈ ದೇಶದಲ್ಲಿ ಧರ್ಮ ವಿರೋಧಿ ಕೆಲಸಕ್ಕೆೆ ಕುಮ್ಮಕ್ಕು ಕೊಡುತ್ತಿಿರುವವರು ಮುಸ್ಲಿಿಂರಲ್ಲ, ನಕಲಿ ಜಾತ್ಯತೀತವಾದಿಗಳು!

ದೇಶಭಕ್ತನಾಗಲು ಒಂದನ್ನು ಮಾಡಬೇಕಿದೆ, ಅದೇನೆಂದರೆ ಇಲ್ಲಿನ ಮಣ್ಣು, ಗಾಳಿ, ಸಂಸ್ಕೃತಿ, ದೇವರುಗಳನ್ನು ಹೃದಯದಲ್ಲಿರಿಸಿಕೊಂಡು ಪೂಜಿಸಬೇಕು. ಮಹಾತ್ಮಾಾ ಗಾಂಧಿ, ಸುಭಾಷ್ ಚಂದ್ರ ಬೋಸ್, ಮಂಗಲ್ ಪಾಂಡೆ, ಚಂದ್ರಶೇಖರ ಆಝಾದ್, ಭಗತ್ ಸಿಂಗ್, ಡಾ.ಬಿ.ಆರ್ ಅಂಬೇಡ್ಕರ್, ಕೇಶವ ಬಲಿರಾಂ ಹೆಡ್ಗೆೆವಾರ್ ಇವರುಗಳನ್ನೆೆಲ್ಲಾಾ ತಲೆಯಲ್ಲಿಟ್ಟುಕೊಂಡು ಸ್ಮರಿಸಬೇಕು

1923ರಲ್ಲಿ ನಾಗ್ಪುರದಲ್ಲಿ ಪ್ರಕಟಣೆಗೊಂಡ ವ್ಹಿಿ.ಡಿ ಸಾವರ್ಕರ್ ಅವರ ಹಿಂದುತ್ವವಾದವನ್ನು ಓದಿದ ಕೇಶವ ಬಲಿರಾಂ ಹೆಡ್ಗೆೆವಾರ್ ಹಿಂದುತ್ವ ತತ್ವಗಳಿಗೆ ಮಾರುಹೋದರು. ಮುಂದೆ 1925ರಲ್ಲಿ ರತ್ನಗಿರಿ ಜೈಲಿನಲ್ಲಿ ವ್ಹಿಿ.ಡಿ ಸಾವರ್ಕರ ಅವರನ್ನು ಖುದ್ದು ಭೇಟಿಯಾದ ಮೇಲೆ ಕೇಶವ ಬಲಿರಾಂ ಹೆಡ್ಗೆೆವಾರ್ ಚಿಂತನೆಗಳಿಗೆ ಒಂದು ಹೊಸ ರೂಪ ದೊರಕಿತು. ಸೆ.27, 1925ರಂದು ‘ರಾಷ್ಟ್ರೀಯ ಸ್ವಯಂಸೇವಕ ಸಂಘ’ ಸ್ಥಾಾಪನೆಯಾಯಿತು. ಹಿಂದೂ ಸಮಾಜವನ್ನು ಬಲಿಷ್ಠಗೊಳಿಸುವುದೇ ಆರ್‌ಎಸ್‌ಎಸ್‌ನ ಮುಖ್ಯ ಉದ್ದೇಶ. ದೇಶಭಕ್ತಿಿ ಎಲ್ಲ ಭಾರತೀಯರ ಮನದಲ್ಲಿ ಬರಬೇಕು, ಎಲ್ಲರೂ ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳಬೇಕು ಎನ್ನುವ ಸಂದೇಶ ಇಂದು ಕೋಟಿ ಕೋಟಿ ಜನರಿಗೆ ತಲುಪುತ್ತಿಿದೆ. ವ್ಯಕ್ತಿಿತ್ವ ನಿರ್ಮಾಣ ಮತ್ತು ವ್ಯಕ್ತಿಿತ್ವ ವಿಕಸನಕ್ಕೆೆ ಅಗತ್ಯವಾಗಿ ಬೇಕಾದ ಕಾರ್ಯಚಟುವಟಿಕೆಗಳನ್ನು ಸಂಘ ನಿರ್ವಹಿಸುತ್ತಿಿದೆ. ಯೋಗ ಮತ್ತು ವ್ಯಾಾಯಾಮ, ನಾಗರಿಕ ಪ್ರಜ್ಞೆ, ಸಮಾಜ ಸೇವೆ, ಸಮುದಾಯ ಜೀವನ, ದೇಶಭಕ್ತಿಿ, ಪ್ರಥಮ ಚಿಕಿತ್ಸೆೆ, ಅಪಾಯದ ಸನ್ನಿಿವೇಶಗಳಲ್ಲಿ ಜನರನ್ನು ರಕ್ಷಿಸುವುದು, ಪುನರ್ವಸತಿ ಚಟುವಟಿಕೆಗಳಿಗೆ ತರಬೇತಿ ಮತ್ತು ಗ್ರಾಾಮಗಳಲ್ಲಿ ಸ್ವಚ್ಛತೆ ಮತ್ತು ಅಭಿವೃದ್ಧಿಿ ಕಾರ್ಯ ಕೈಗೊಳ್ಳುವುದು- ಈ ಎಲ್ಲ ಕೆಲಸಗಳಿಗೆ ಸ್ವಯಂ ಸೇವಕರಿಗೆ ಪ್ರೋೋತ್ಸಾಾಹ ನೀಡುತ್ತಿಿದೆ. ಸಂಘಕ್ಕೆೆ ಸ್ವಯಂಸೇವಕರೇ ಜೀವಾಳ ಮತ್ತು ಶಕ್ತಿಿ.

ಮಾನವೀಯ ಕಾರ್ಯಗಳು ಮತ್ತು ಹಿಂದೂಪರ ಸಂದೇಶಗಳಿಂದ ಪ್ರತಿಯೊಬ್ಬರ ಮನದಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಸಂಘ ಮಾಡುತ್ತಿಿದೆ. ಈ ದೇಶ, ಈ ದೇಶದ ಜನರು, ಈ ದೇಶದ ಮಣ್ಣು, ಈ ದೇಶದ ಭಾಷೆಗಳು, ಈ ದೇಶದ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಅದು ಮಾಡಿದ ಪ್ರಯತ್ನಗಳಿಂದ ಇಂದು ಜಗತ್ತಿಿನ ಅತಿ ದೊಡ್ಡ ಎನ್‌ಜಿಓ ಆಗಿ ಪರಿವರ್ತನೆ ಹೊಂದಿದೆ. ಸಂಘದ ಪ್ರಾಾಯೋಜಿತ ರಾಜಕೀಯ ಪಕ್ಷ ಭಾಜಪ ಇಂದು ಜಗತ್ತಿಿನ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿಿದೆ. ಜಗತ್ತೇ ಮೆಚ್ಚುವಂತಹ ನಾಯಕರನ್ನು ಸೃಷ್ಟಿಿಸಿದ ಶ್ರೇಯಸ್ಸು ಈ ಸಂಘಕ್ಕೆೆ ಸಲ್ಲುತ್ತದೆ.

ಸಂಘದ ಮೂಲ ಸಿದ್ಧಾಾಂತಗಳಲ್ಲಿ ‘ಗುರುಪೂಜಾ ಉತ್ಸವ’ ಒಂದು, ಸಂಘದಲ್ಲಿ ಗುರು ಎಂದರೆ ಒಬ್ಬ ವ್ಯಕ್ತಿಿ ಅಲ್ಲ, ಅದು ಭಗವಾ ಧ್ವಜ. ಕೇಶವ ಬಲಿರಾಂ ಹೆಡ್ಗೆೆವಾರ್ ಅವರು ಭಗವಾ ಧ್ವಜವನ್ನೇ ಗುರುವೆಂದು ಪರಿಗಣಿಸಬೇಕೆಂದು ಹೇಳಿದರು. ಭಗವಾ ಧ್ವಜ ಸ್ಥಿಿರತೆ ಮತ್ತು ತ್ಯಾಾಗದ ಪ್ರತೀಕ.

ಭಾರತೀಯ ಜನತಾ ಪಕ್ಷ ಇಂದು ಅಧಿಕಾರದಲ್ಲಿದೆ. ಬಹುತೇಕ ಎಲ್ಲ ರಾಜ್ಯಗಳಲ್ಲಿ ಗೋಹತ್ಯೆೆ ನಿಷೇಧ ಕಾನೂನು ಜಾರಿಯಾಗಿದೆ. ಜೊತೆಗೆ ಅಯೋಧ್ಯೆೆಯಲ್ಲಿ ರಾಮಮಂದಿರ ನಿರ್ಮಾಣವೂ ಮುಖ್ಯ ವಿಷಯವಾಗಿದೆ. ಜನ ಮೆಚ್ಚುವ ಕಾರ್ಯಕ್ರಮಗಳನ್ನು ಹಾಕಿಕೊಂಡಿರುವ ಬಿಜೆಪಿ ಪಕ್ಷಕ್ಕೆೆ ಭಾರತೀಯರು ಅಧಿಕಾರ ನೀಡಿದ್ದಾಾರೆ. ಈ ಎಲ್ಲಾಾ ಯೋಜನೆಗಳ ಹಿಂದಿರುವ ಪ್ರೇರಕ ಶಕ್ತಿಿ ಆರ್‌ಎಸ್‌ಎಸ್. ಜನರ ಬಯಕೆಗಳನ್ನು ಪೂರೈಸುವ ಕೆಲಸ ಇಂದು ಆಗುತ್ತಿಿದೆ. ಇನ್ನೂ ಆಗಬೇಕಾಗಿದೆ.

ಅಂದಾಜು 60 ಲಕ್ಷ ಸ್ವಯಂ ಸೇವಕರನ್ನು ಹೊಂದಿರುವ ಈ ಬಲಿಷ್ಠ ಸಂಸ್ಥೆೆ ಜಗತ್ತಿಿನಾದ್ಯಂತ ಸುಮಾರು 84,877 ಶಾಖೆಗಳನ್ನು ಹೊಂದಿದೆ. ಸಂಘದ ಮುಖ್ಯ ಉದ್ದೇಶ ಸ್ವಯಂ ಸೇವಕರ ದೈಹಿಕ ಸಾಮರ್ಥ್ಯ ಹೆಚ್ಚಿಿಸುವುದು, ಸಮಾಜದಲ್ಲಿ ನಾಗರಿಕ ತಿಳಿವಳಿಕೆಯನ್ನು ವೃದ್ಧಿಿಪಡಿಸುವುದು. ಜನರಲ್ಲಿ ರಾಷ್ಟ್ರೀಯತೆಯನ್ನು ಬಿತ್ತುವುದು, ಪ್ರಥಮ ಚಿಕಿತ್ಸೆೆಯ ಬಗ್ಗೆೆ ಜನರಲ್ಲಿ ಅರಿವು ಮೂಡಿಸುವುದು, ಪುನರ್ವಸತಿ ಕಾರ್ಯಗಳಲ್ಲಿ ತೊಡಗುವುದು, ಸಮುದಾಯ ಅಭಿವೃದ್ಧಿಿಗೆ ಆದ್ಯತೆ ನೀಡುವುದು ಮುಂತಾಗಿ ಜಗತ್ತೇ ಒಂದು ಕುಟುಂಬವೆಂದು ಪರಿಗಣಿಸಿದ ಜಗತ್ತಿಿನ ಏಕೈಕ ಸಂಸ್ಥೆೆ ಆರ್‌ಎಸ್‌ಎಸ್. ದಲಿತರು ಮತ್ತು ಹಿಂದುಳಿದವರು ದೇವಾಲಯಗಳಲ್ಲಿ ಪೂಜಾರಿಗಳಾಗಬೇಕೆಂದು ಬಯಸಿ ತರಬೇತಿ ನೀಡಬೇಕಾದ ಅಗತ್ಯವಿದೆ ಎಂದು ಹೇಳಿದ ಮೊದಲ ಮಹಾನ್ ಸಂಸ್ಥೆೆ.

1934ರಲ್ಲಿ ಮಹಾತ್ಮಾಾ ಗಾಂಧೀಜಿಯವರು, ಮಹದೇವ ದೇಸಾಯಿ ಅವರೊಂದಿಗೆ ವಾರ್ಧಾದಲ್ಲಿ ಇರುವ ಸಂಘಕ್ಕೆೆ ಭೇಟಿ ನೀಡಿದಾಗ ಸ್ವಯಂಸೇವಕರಲ್ಲಿರುವ ಶಿಸ್ತು ಮತ್ತು ಅಲ್ಲಿ ಅಸ್ಪಶ್ಯತೆ ಇಲ್ಲದೇ ಇರುವುದನ್ನು ನೋಡಿ ಆನಂದ ಪಡುತ್ತಾಾರೆ. ವಾಯಿತು. ಲೋಕನಾಯಕ ಜಯಪ್ರಕಾಶ ನಾರಾಯಣ 1977ರಲ್ಲಿ ಸಂಘದ ಬಗ್ಗೆೆ ಹೀಗೆ ಹೇಳಿದ್ದರು: ‘ಆರ್‌ಎಸ್‌ಎಸ್ ಎಂದರೆ ಅದೊಂದು ಕ್ರಾಾಂತಿಕಾರಿ ಚಳವಳಿ. ಯಾವ ಸಂಘ ಸಂಸ್ಥೆೆಗಳೂ ಅದರ ಸಮೀಪ ಬರಲು ಸಾಧ್ಯವಿಲ್ಲ. ಬಡತನವನ್ನು ನಿರ್ಮೂಲನೆ ಮಾಡಿ ನಾವೆಲ್ಲ ಒಂದು ಎಂಬುದನ್ನು ಜಾರಿಗೆ ತರಲು ಸಾಧ್ಯವಿರುವ ಏಕೈಕ ಸಂಸ್ಥೆೆ. ನವಭಾರತ ಕಟ್ಟಲು ಸಾಧ್ಯವಿರುವ ಶಕ್ತಿಿ ಆರ್‌ಎಸ್‌ಎಸ್‌ಗೆ ಮಾತ್ರ ಇದೆ’.

40 ವರ್ಷಗಳ ಹಿಂದೆ ಹೇಳಿದ ಈ ಮಾತು ಇಂದು ನಿಜವಾಗುತ್ತಿಿದೆ. ಹೊಸ ಭಾರತ ನಿರ್ಮಾಣ ಆಗುತ್ತಿಿದೆ.
ಮೊದಲನೇ ಮಹಾಯುದ್ಧದ ಫಲವಾಗಿ ‘ಖಲೀಫಾ ಸಂಸ್ಕೃತಿ’ ನಿಂತಿತು. ಭಾರತವನ್ನೂ ಸೇರಿದಂತೆ ವಿಶ್ವಾಾದ್ಯಂತ ಮುಸ್ಲಿಿಂ ಜನರು ಪ್ರತಿಭಟನೆ ಮಾಡಿದರು, ಟರ್ಕಿ ರಾಜನಿಗೆ ಬೆಂಬಲ ನೀಡುವ ಚಳವಳಿ ಆರಂಭವಾಯಿತು. ಆದರೆ ಅದು ವಿಫಲವಾಯಿತು. ಕೇರಳದಲ್ಲಿ ಮುಸ್ಲಿಿಂರಿಂದ 1500 ಹಿಂದೂಗಳ ಹತ್ಯೆೆಯಾಯಿತು. ಅಂದಾಜು 20,000 ಬಹುದೇವತಾ ಆರಾಧಕರ ಮತಾಂತರ ಆಯಿತು. ಇದನ್ನೆೆಲ್ಲಾಾ ಹಿಂದೂಗಳು ಮರೆಯಲು ಸಾಧ್ಯವೇ?

1897ರಲ್ಲಿ ರಾಣಿ ವಿಕ್ಟೋೋರಿಯಾ ಅವರ ಪಟ್ಟಾಾಭಿಷೇಕದ 60ನೇ ವರ್ಷ ಪೂರೈಸಿದ ನೆನಪಿಗಾಗಿ ಬ್ರಿಿಟಿಷ್ ಸಾಮ್ರಾಾಜ್ಯ ವಜ್ರಮಹೋತ್ಸವ ಆಚರಿಸಲು ನಿರ್ಧರಿಸಿತು. ಭಾರತ ದೇಶ ಅವರ ಅಧೀನದಲ್ಲಿತ್ತು. ಸರಕಾರದ ಆದೇಶದ ಪ್ರಕಾರ ಎಲ್ಲಾಾ ಶಾಲೆಗಳಲ್ಲಿ ವಿಜೃಂಭನೆಯಿಂದ ಸಿಹಿ ಹಂಚಲು ನಿರ್ಧರಿಸಲಾಯಿತು. ಎಲ್ಲಾಾ ಮಕ್ಕಳು ಸಿಹಿ ತಿಂದರು ಆದರೆ ಆಗ ಬಾಲಕರಾಗಿದ್ದ ಕೇಶವ ಬಲಿರಾಂ ಹೆಡ್ಗೆೆವಾರ್ ಸಿಹಿ ತಿನ್ನಲಿಲ್ಲ.

1901ರಲ್ಲಿ ಕೇಶವ ಬಲಿರಾಂ ಹೆಡ್ಗೆೆವಾರ್ ಅವರಿಗೆ 12ವರ್ಷ, ಇಂಗ್ಲೆೆಂಡಿನ ರಾಜ, ಭಾರತದ ಸಾಮ್ರಾಾಟ್ ಅವರ ಪಟ್ಟಾಾಭಿಷೇಕದ ಆಚರಣೆ ದೇಶದೆಲ್ಲೆೆಡೆ ಆಚರಿಸಬೇಕು ಮತ್ತು ಎಲ್ಲರೂ ಭಾಗವಹಿಸಬೇಕೆನ್ನುವುದಿತ್ತು. ಕೇಶವ ಬಲಿರಾಂ ಹೆಡ್ಗೆೆವಾರ್ ಅವರು ಭಾಗವಹಿಸಲಿಲ್ಲ. ವಿದೇಶ ರಾಜ ನಮ್ಮ ರಾಜ ಆಗುವುದಿಲ್ಲ. ಆ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಅಪಮಾನ ಎಂದು ಹೇಳಿ ದೇಶಭಕ್ತಿಿ ಮೆರೆದರು. 1908ರಲ್ಲಿ ಕೇಶವ ಬಲಿರಾಂ ಹೆಡ್ಗೆೆವಾರ್, ತಮ್ಮ ಶಾಲೆಯಲ್ಲಿ ಎಲ್ಲಾಾ ಮಕ್ಕಳಿಗೆ ದೇಶ ಪ್ರೇಮದ ಬಗ್ಗೆೆ ಮನವರಿಕೆ ಮಾಡಿ ಬ್ರಿಿಟಿಷ್ ಅಧಿಕಾರಿಗಳು ಶಾಲೆಗೆ ಬಂದಾಗ ಎಲ್ಲರ ಬಾಯಿಂದ ನಿಷೇಧಿತ ‘ವಂದೇ ಮಾತರಂ’ ಬರುವ ಹಾಗೆ ನೋಡಿಕೊಂಡರು. ಇದಕ್ಕಾಾಗಿ ಅವರು ಶಾಲೆಯಿಂದ ಅಮಾನತು ಶಿಕ್ಷೆ ಅನುಭವಿಸಬೇಕಾಯಿತು. ಈ ರೀತಿ ಹೋರಾಟ ಮಾಡಿದ ಕೇಶವ ಬಲಿರಾಂ ಹೆಡ್ಗೆೆವಾರ್ ಎಲ್ಲರಿಗೂ ಆದರ್ಶ ಆಗಿದ್ದಾಾರೆ. ಅವರು ನಡೆದ ದಾರಿಯಲ್ಲಿ ಸಾಗುವುದೇ ಒಂದು ರೋಚಕ ಅನುಭವ.

‘ಸಂಘ’ ದಿನದ 24 ಗಂಟೆಗಳಲ್ಲಿ 23 ಗಂಟೆಗಳನ್ನು ನಮಗೋಸ್ಕರ, ಒಂದು ಗಂಟೆ ಸಮಾಜ ಮತ್ತು ದೇಶ ಸೇವೆಗೋಸ್ಕರ ಮುಡಿಪಾಗಿಡುವ ಮೇಲ್ಪಂಕ್ತಿಿ ಹಾಕಿಕೊಟ್ಟಿಿತು. ‘ಸ್ವಯಂಸೇವಕ’ ಎಂದರೆ ಸೇವೆಯ ಬದಲಿಗೆ ಏನನ್ನೂ ನಿರೀಕ್ಷಿಸಬಾರದು! ಜಯಕಾರ ಭಾರತ ಮಾತೆಗಷ್ಟೇ ಮೀಸಲು: ‘ಭಾರತ್ ಮಾತಾಕೀ ಜೈ!’

ರಾಷ್ಟ್ರ ಮತ್ತು ದೇಶ ಅಂದರೆ ನೀರು ಮತ್ತು ಮೀನು ಇದ್ದಂತೆ. ರಾಷ್ಟ್ರ ಅಂದರೆ ಜನ ಮತ್ತು ಭೂ ಪ್ರದೇಶ, ಜೊತೆಗೆ ಆ ಪ್ರದೇಶದ ಇತಿಹಾಸ. ಒಬ್ಬ ವಿದೇಶಿಗ ಭಾರತೀಯನಿಗೆ ಅಂದರೆ ಹಿಂದೂ ಭಕ್ತನಿಗೆ ಒಂದು ಪ್ರಶ್ನೆೆ ಕೇಳುತ್ತಾಾನೆ, ನೀವು ಕಲ್ಲನ್ನು ಪೂಜೆ ಮಾಡುತ್ತೀರಿ ಅಲ್ಲವೇ? ಅದಕ್ಕೆೆ ನಮ್ಮ ಹಿಂದೂ ಭಕ್ತ ಹೇಳುತ್ತಾಾನೆ, ಏ..ಹುಚ್ಚಾಾ ನಾವು ಕಲ್ಲನ್ನು ಪೂಜಿಸುವುದಿಲ್ಲ, ಕಲ್ಲು ಸೃಷ್ಟಿಿಸಿದವನನ್ನು ಪೂಜೆ ಮಾಡುತ್ತೇವೆ!

ರಾಮಕೃಷ್ಣ ಪರಮಹಂಸರು ಜಾತಿ ತಾರತಮ್ಯವನ್ನು ಟೀಕಿಸಿದರು, ಅವರು ಹೀಗೆ ಹೇಳುತ್ತಾಾರೆ, ‘ದೇವರನ್ನು ಪ್ರೀತಿಸುವವರು ಯಾವುದೇ ಜಾತಿಗೆ ಸೇರುವುದಿಲ್ಲ, ದೇವರ ಮೇಲೆ ಪ್ರೀತಿ ಇರದ ಬ್ರಾಾಹ್ಮಣನು ಬ್ರಾಾಹ್ಮಣನಾಗಿ ಉಳಿಯುವುದಿಲ್ಲ ಮತ್ತು ದೇವರ ಪ್ರೀತಿ ಇರುವ ಅಸ್ಪಶ್ಯನು ಅಸ್ಪಶ್ಯನಾಗಿ ಉಳಿಯುವುದಿಲ್ಲ. ಭಕ್ತಿಿಯ ಮೂಲಕ ಒಬ್ಬ ಅಸ್ಪಶ್ಯ ಪರಿಶುದ್ಧನು ಮತ್ತು ಉತ್ತಮನೂ ಆಗುತ್ತಾಾನೆ’. ಆರ್‌ಎಸ್‌ಎಸ್ ಸಿದ್ಧಾಾಂತವೂ ಅದೇ ಆಗಿದೆ.

 ದಿನದ 24 ಗಂಟೆಗಳಲ್ಲಿ 23 ಗಂಟೆಗಳನ್ನು ನಮಗೋಸ್ಕರ, ಒಂದು ಗಂಟೆ ಸಮಾಜ ಮತ್ತು ದೇಶ ಸೇವೆಗೋಸ್ಕರ ಮುಡಿಪಾಗಿಡುವ ಮೇಲ್ಪಂಕ್ತಿಿಯನ್ನು ‘ಸಂಘ’ ಹಾಕಿಕೊಟ್ಟಿಿತು. ‘ಸ್ವಯಂಸೇವಕ’ ಎಂದರೆ ಸೇವೆಯ ಬದಲಿಗೆ ಏನನ್ನೂ ನಿರೀಕ್ಷಿಸಬಾರದು!