Sunday, 15th December 2024

ಆ ರಹಸ್ಯ ಸಂದೇಶಕ್ಕೆ ಕಾಯುತ್ತಿದ್ದಾರೆ ಡಿಕೆಶಿ

ಮೂರ್ತಿ ಪೂಜೆ

ಮೊನ್ನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಂದು ದಾಳ ಎಸೆದರು. ಅದು ರಾಮನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಈ ಬಾರಿ ತಮ್ಮ ಸಹೋದರ, ಸಂಸದ ಡಿ.ಕೆ.ಸುರೇಶ್ ಅವರನ್ನು ಕಣಕ್ಕಿಳಿಸುವ ಯೋಚನೆ ಇದೆ ಎಂಬುದು. ಅಂದ ಹಾಗೆ ರಾಮನಗರ ಕ್ಷೇತ್ರದಿಂದ ಈ ಬಾರಿ ಮಾಜಿ
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸು ತ್ತಿದ್ದಾರೆ. ಹೀಗಿರುವಾಗ ಅವರ ವಿರುದ್ಧ ಡಿಕೆಶಿ ಸಹೋದರ ಸ್ಪರ್ಧಿಸಿದರೆ ನಿಶ್ಚಿತವಾಗಿ ಅದು ಹೈ ವೋಲ್ಟೇಜ್ ಕ್ಷೇತ್ರವಾಗತ್ತಿತ್ತು.

ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಈಗ ರಾಜ್ಯ ಸುತ್ತುವ ಅನಿವಾರ್ಯತೆ ಇರುವುದರಿಂದ ಅವರು ತಮ್ಮ ಕ್ಷೇತ್ರ ಚನ್ನಪಟ್ಟಣ, ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುವ ರಾಮನಗರ ಕ್ಷೇತ್ರಗಳ ಕಡೆ ಹೆಚ್ಚು ಗಮನ ಕೊಡುವುದು ಕಷ್ಟ. ಇಂತಹ ಸಂದರ್ಭದಲ್ಲಿ ತಮ್ಮ ಸಹೋದರ, ಸಂಸದ ಡಿ.ಕೆ.ಸುರೇಶ್ ಅವರನ್ನು ಕಣಕ್ಕಿಳಿಸಿ ನಿಖಿಲ್ ಅವರು ಪರಾಭವಗೊಳ್ಳು ವಂತೆ ಮಾಡಿದರೆ ಕುಮಾರಸ್ವಾಮಿ ಮಾನಸಿಕವಾಗಿ ಕುಗ್ಗುತ್ತಾರೆ ಎಂಬುದು ಡಿಕೆಶಿ ಯೋಚನೆ ಯಾಗಿತ್ತು.

ಆದರೆ, ಯಾವಾಗ ಡಿಕೆಶಿ ತಮ್ಮ ಸಹೋದರನನ್ನು ಕಣಕ್ಕಿಳಿಸುವ ಮಾತನಾಡಿದರೋ? ಆಗ ತಕ್ಷಣವೇ ರಹಸ್ಯ ಸಭೆ ನಡೆಸಿದ ಕುಮಾರಸ್ವಾಮಿ, ರಾಮನಗರದ ಕಣದಲ್ಲಿ ಡಿ.ಕೆ.ಸುರೇಶ್ ಸ್ಪರ್ಧಿಸಿದರೆ ಅವರ ವಿರುದ್ಧ ನಿಖಿಲ್ ಬದಲು ತಾವೇ ಸ್ಪಽಸಲು ನಿರ್ಧರಿಸಿದ್ದಾರೆ. ಆದರೆ ಇಷ್ಟೇ ಆದರೆ ಸಾಲದಲ್ಲ? ಯಾಕೆಂದರೆ ಆಟಕ್ಕಿಳಿದವರು ಡಿಕೆಶಿ.ಹೀಗಾಗಿ ಅವರಿಗೂ ಟಕ್ಕರ್ ಕೊಡಲು ನಿರ್ಧರಿಸಿದ ಕುಮಾರಸ್ವಾಮಿ ತಮ್ಮ ಪತ್ನಿ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರನ್ನು ಕನಕಪುರದ ಕಣಕ್ಕಿಳಿಸಲು ತೀರ್ಮಾನಿಸಿzರೆ.

ಅರ್ಥಾತ್, ತಮಗೆ ಟಕ್ಕರ್ ಕೊಡಲು ಹೊರಟಿರುವ ಡಿಕೆಶಿ ವಿರುದ್ಧ ಕನಕಪುರದ ಕಣದ ಚಕ್ರವ್ಯೂಹ ನಿರ್ಮಿಸುವುದು ಕುಮಾರಸ್ವಾಮಿ ಲೆಕ್ಕಾಚಾರ. ಅಂದ ಹಾಗೆ, ಕನಕಪುರದ ಕಣಕ್ಕೆ ಅನಿತಾ ಕುಮಾರಸ್ವಾಮಿ ಇಳಿದರೆ ಘನಘೋರ ಸಂಗ್ರಾಮ ನಡೆಯುವುದು ನಿಶ್ಚಿತ. ಯಾಕೆಂದರೆ ಇದುವರೆಗೆ ಕನಕಪುರದ ಕಣದಲ್ಲಿ ಡಿಕೆಶಿಗೆ ಸಮರ್ಥ ಎದುರಾಳಿಗಳೇ ಇರಲಿಲ್ಲ. ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಪವರ್ ಇದೆಯಾದರೂ ಇದನ್ನು ಎನ್ ಕ್ಯಾಶ್ ಮಾಡಿಕೊಳ್ಳುವ ಕ್ಯಾಂಡಿಡೇಟುಗಳು ಇಲ್ಲ. ಆದರೆ ಈಗ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸೊಸೆ ಕಣಕ್ಕಿಳಿಯುವಂತಾದರೆ ಕನಕಪುರ ರಣಾಂಗಣದ ಚಿತ್ರವೇ ಬದಲಾಗುತ್ತದೆ.

ಹೀಗಾಗಿಯೇ ಡಿಕೆಶಿ ಬಹಿರಂಗ ಮೆಸೇಜು ಕೊಟ್ಟ ಕೂಡಲೇ ಕುಮಾರಸ್ವಾಮಿ ಒಳಮೆಸೇಜು ಕಳಿಸಿದ್ದಾರೆ. ಅಂದ ಹಾಗೆ ಡಿಕೆಶಿ ಈ ಸಲ ಮುಖ್ಯಮಂತ್ರಿ ಕ್ಯಾಂಡಿಡೇಟು. ಸಹಜವಾಗಿಯೇ ಅವರನ್ನು ಸೋಲಿಸಲು ಕಾಂಗ್ರೆಸ್ ಮತ್ತು ಬಿಜೆಪಿಯ ಹಲ ನಾಯಕರು ಬಯಸಿzರೆ. ಇಂತಹ ಸಂದರ್ಭದಲ್ಲಿ ಅನಿತಾ ಕುಮಾರಸ್ವಾಮಿ ಸ್ಪರ್ಧಿಸಿದರೆ ಡಿಕೆಶಿ ಕಷ್ಟಪಡುವ ಪರಿಸ್ಥಿತಿ ನಿರ್ಮಾಣ ವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಚುನಾವಣೆಯ ಫಲಿತಾಂಶ ಕುಮಾರಸ್ವಾಮಿ ಯವರ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ. ಯಾಕೆಂದರೆ ಅವರು ಗೆಲ್ಲಲಿ, ಸೋಲಲಿ. ಆದರೆ ಅವರು ಜೆಡಿಎಸ್ ಪಕ್ಷದ ಏಕೈಕ ಸಿಎಂ ಕ್ಯಾಂಡಿಡೇಟು. ಆದರೆ ಡಿಕೆಶಿ ಪರಿಸ್ಥಿತಿ ಹಾಗಿಲ್ಲ, ಅವರು ಸಿಎಂ ಕನಸು ಕಾಣಬೇಕೆಂದರೆ ಚುನಾವಣೆಯಲ್ಲಿ ಗೆಲ್ಲಲೇಬೇಕು. ಒಂದು ವೇಳೆ ಸೋತರೆ ತೆರೆಯ ಹಿಂದೆ ಸರಿಯಬೇಕು.

ಹೀಗಾಗಿ ಸಹೋದರ ಡಿ.ಕೆ.ಸುರೇಶ್ ಅವರನ್ನು ನಿಖಿಲ್ ಕುಮಾರಸ್ವಾಮಿ ವಿರುದ್ಧ ಕಣಕ್ಕಿಳಿಸುವುದಾಗಿ ಅವರು ಮಾತನಾಡಿದ ಕೂಡಲೇ ಕುಮಾರಸ್ವಾಮಿ ಕಳಿಸಿದ ಒಳಸಂದೇಶ ಪರಿಣಾಮ ಬೀರಿದೆ. ಹೀಗಾಗಿ ಖುದ್ದು ಡಿ.ಕೆ.ಸುರೇಶ್ ಅವರೇ ನಿಖಿಲ್ ವಿರುದ್ಧ ತಾವು ಸ್ಪರ್ಧಿಸುವುದಿಲ್ಲ ಎಂದುಬಿಟ್ಟಿದ್ದಾರೆ. ಅಂದ ಹಾಗೆ ರಾಜಕಾರಣದಲ್ಲಿ ಇದನ್ನು ‘ಟಸ್ಕರ್ ವಾರ್’ ಎನ್ನುತ್ತಾರೆ. ಎರಡು ಸಲಗಗಳು ಪರಸ್ಪರ ಎದುರಾದಾಗ ಒಂದು ಸಲಗ ರಣೋತ್ಸಾಹದಿಂದ ಘೀಳಿಡುತ್ತದೆ. ತನ್ನ ಆರ್ಭಟಕ್ಕೆ ಎದುರಿಗಿದ್ದ ಸಲಗ ಬೆಚ್ಚಿ ಬಿದ್ದರೆ ಅದನ್ನು ಮತ್ತಷ್ಟು ಹೆದರಿಸುತ್ತದೆ. ಆದರೆ ಎದುರಿಗಿದ್ದ ಸಲಗ ಬೆಚ್ಚಿ ಬೀಳುವ ಬದಲು ಇನ್ನಷ್ಟು ರಣಾಕ್ರೋಶದಿಂದ ಘೀಳಿಟ್ಟರೆ ಈ ಸಲಗ ಎಚ್ಚರಿಕೆಯಿಂದಿರುತ್ತದೆ. ಡಿ.ಕೆ.ಶಿವಕುಮಾರ್ ಮತ್ತು ಎಚ್ .ಡಿ.ಕುಮಾರ ಸ್ವಾಮಿ ನಡುವೆ ಈಗ ನಡೆದಿದ್ದೂ ಇದೇ ರೀತಿಯ ಟಸ್ಕರ್ ವಾರ್.

ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣ, ಇಂತಹ ಅನೇಕ ಟಸ್ಕರ್ ವಾರ್‌ಗಳನ್ನು ನೋಡಲಿದೆ.

ಸೋಮಣ್ಣ ಅವರಿಗೆ ಪವರ್ ಬಂದಿದೆ

ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತವರ ಪುತ್ರ ವಿಜಯೇಂದ್ರ ವಿರುದ್ಧ ತಿರುಗಿ ಬಿದ್ದಿರುವ ವಸತಿ ಸಚಿವ ವಿ.ಸೋಮಣ್ಣ ಕಳೆದ ವಾರ ಅಮಿತ್ ಶಾ ಅವರನ್ನು ಭೇಟಿ ಮಾಡಲು ದಿಲ್ಲಿಗೆ ಹೋಗಿದ್ದರು. ಸಾಮಾನ್ಯವಾಗಿ ರಾಜ್ಯ ಬಿಜೆಪಿಯ ನಾಯಕರು ತಮ್ಮನ್ನು ಭೇಟಿ ಮಾಡಲು ದಿಲ್ಲಿಗೆ ಬಂದರೆ ಅವರನ್ನು ಕಾಯಿಸುವುದು, ಇಲ್ಲವೇ ಭೇಟಿಯಾಗಲು ನಿರಾಕರಿಸುವುದು ಅಮಿತ್ ಶಾ ಸ್ಟೈಲು. ಆದರೆ, ಕಳೆದ ಬುಧವಾರ ಸೋಮಣ್ಣ ದೆಹಲಿಗೆ ಬಂದಾಗ ಅಮಿತ್ ಶಾ ತುಂಬು ಉತ್ಸಾಹದಿಂದ ಅವರನ್ನು ಸ್ವಾಗತಿಸಿದ್ದಾರೆ. ಅರ್ಧ ಗಂಟೆಗೂ ಹೆಚ್ಚು ಕಾಲ ತಾಳ್ಮೆಯಿಂದ ಕುಳಿತು ಸೋಮಣ್ಣ ಅವರು ಹೇಳಿದ್ದನ್ನೆಲ್ಲ ಕೇಳಿಸಿಕೊಂಡಿದ್ದಾರೆ. ಸಾರ್, ಯಡಿಯೂರಪ್ಪ ಅವರೇನೋ ನಮ್ಮ ನಾಯಕರು.

ಅವರ ಮಾತನ್ನು ನಾವು ಕೇಳಬೇಕು.ಆದರೆ ವಿಜಯೇಂದ್ರ ಯಾರು? ಯಡಿಯೂರಪ್ಪ ಅವರ ಮಗಎಂಬುದನ್ನು ಬಿಟ್ಟರೆ ಪಕ್ಷ ಕಟ್ಟಲು ವರ ಕೊಡುಗೆ ಏನು? ಅಂತವರಿಂದ ನಾನೇಕೆ ಅವಮಾನ ಅನುಭವಿಸಬೇಕು? ನೀವೇ ಹೇಳಿ ಸಾರ್ ಅಂತ ತಮ್ಮ ಅಂಗಳಕ್ಕೇ ಸೋಮಣ್ಣ ಚೆಂಡು ಹಾಕಿದಾಗ ಅಮಿತ್ ಶಾ ಗಂಭೀರರಾದರಂತೆ. ಹೀಗಾಗಿಯೇ, ಸೋಮನ್ನಾಜೀ, ಅವರಿಬ್ಬರ ಬಗ್ಗೆ ನನಗೆ ಗೊತ್ತಿದೆ. ಆದರೆ ಚುನಾವಣೆ ಹತ್ತಿರದಲ್ಲಿದೆ. ಆದ್ದರಿಂದ,
ಇನ್ನೆರಡು ತಿಂಗಳು ಮೌನವಾಗಿರಿ. ಈಗ ಚುನಾವಣೆಯಲ್ಲಿ ಸ್ಪರ್ಧಿಸಲು ಯಾವ ಕ್ಷೇತ್ರ ಬೇಕೋ ಅದನ್ನು ಆರಿಸಿಕೊಳ್ಳಿ.

ನೀವು ಎಲ್ಲಿಂದ ಸ್ಪರ್ಧಿಸುತ್ತೀರೋ? ಅದರ ಅಕ್ಕ ಪಕ್ಕ ಇರುವ ಕ್ಷೇತ್ರಗಳನ್ನೂ ನೀವು ಗೆಲ್ಲಿಸಿ ಕೊಡಬಲ್ಲಿರಿ. ನೀವು ಪಕ್ಷದ ಭವಿಷ್ಯ ಅಂತ ನಮಗೆ ಗೊತ್ತಿದೆ ಎಂದಿದ್ದಾರೆ. ಅರ್ಥಾತ್, ಮುಂದೆ ಕರ್ನಾಟಕದಲ್ಲಿ ಪಕ್ಷಕ್ಕಾಗಬಹುದಾದ ಡ್ಯಾಮೇಜ್ ಏನು? ಅದನ್ನು ಒಂದು ಮಟ್ಟಕ್ಕಾದರೂ ಸರಿಪಡಿಸಿ ಕೊಳ್ಳಲು ಏನು ಮಾಡಬೇಕು ಅಂತ ಬಿಜೆಪಿ ವರಿಷ್ಠರು ಈಗಾಗಲೇ ಚಿಂತಿಸಿದ್ದಾರೆ. ಅವರ ಚಿಂತನೆಯ ಝಲಕ್ ಕಂಡು ಸಚಿವ ಸೋಮಣ್ಣ
ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಯೋಚನೆಗೆ ಬ್ರೇಕ್ ಹಾಕಿದ್ದಾರೆ.

ರಹಸ್ಯ ಸಂದೇಶಕ್ಕೆ ಕಾಯುತ್ತಿದ್ದಾರೆ ಡಿಕೆಶಿ

ಇನ್ನು ಭವಿಷ್ಯದ ಸಿಎಂ ಪಟ್ಟಕ್ಕಾಗಿ ಕದನ ನಡೆಸುತ್ತಲೇ ಇರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವ ಕುಮಾರ್ ಈಗ ಸೆಟಲ್‌ಮೆಂಟ್ ದಾರಿ ನೋಡುತ್ತಿದ್ದಾರೆ. ಅಂದ ಹಾಗೆ ಇವರಿಬ್ಬರ ನಡುವಣ ಕದನ ಹೀಗೇ ಮುಂದುವರಿದರೆ ಚುನಾವಣೆಯಲ್ಲಿ ನಾವು ಹೊಡೆತ ತಿನ್ನಬೇಕಾಗುತ್ತದೆ ಎಂಬುದು ರಾಜ್ಯ ಕಾಂಗ್ರೆಸ್ಸಿನ ಹಲ ನಾಯಕರ ಯೋಚನೆ.

ಇಂತಹ ಯೋಚನೆಯಿಂದ ಸೆಟಲ್‌ಮೆಂಟ್ ವಿಚಾರಕ್ಕೆ ಚಾಲನೆ ಕೊಟ್ಟವರು ಮಾಜಿ ಸಚಿವ ಕೆ.ಜೆ.ಜಾರ್ಜ್. ಕೆಲ ತಿಂಗಳ ಹಿಂದೆ ರಾಜಸ್ತಾನಕ್ಕೆ ಹೋದಾಗ ಡಿಕೆಶಿ ಜತೆ ಮಾತನಾಡಿದ ಜಾರ್ಜ್ ಅವರು; ಸಾರ್, ನಿಮ್ಮಿಬ್ಬರ ಜಗಳ ಬಿಜೆಪಿ, ಜೆಡಿಎಸ್‌ಗೆ ಲಾಭವಾಗಬಹುದು. ಹೀಗಾಗಿ ಚುನಾವಣೆಯ ನಂತರ ಮೊದಲ ಅವಧಿಯಲ್ಲಿ ಸಿದ್ದರಾಮಯ್ಯ ಎರಡನೇ ಅವಽಯಲ್ಲಿ ನೀವು ಸಿಎಂ ಆಗಲು ಒಪ್ಪಂದ ಮಾಡಿಕೊಂಡರೆ ಸಾಕು ಅಂತ ಬಿಜೆಪಿ ಯುವ ಹೇಳಿದಾಗ ಡಿಕೆಶಿ ಹೆಚ್ಚು ಪ್ರತಿಕ್ರಿಯಿಸಿರಲಿಲ್ಲ.

ಇದಾದ ನಂತರ ಇತ್ತೀಚೆಗೆ ಡಿಕೆಶಿಯನ್ನು ಭೇಟಿ ಮಾಡಿದ ಶಾಸಕ ದಿನೇಶ್ ಗುಂಡೂರಾವ್, ಕೃಷ್ಣ ಭೈರೇಗೌಡ, ರಿಜ್ವಾನ್ ಆರ್ಷದ್ ಮತ್ತು ಭೈರತಿ ಸುರೇಶ್ ಅವರು, ಮೊದಲ ಮೂರು ವರ್ಷ ಸಿದ್ದರಾಮಯ್ಯ, ನಂತರದ ಎರಡು ವರ್ಷ ನೀವು ಸಿಎಂ ಆಗಿ ಸಾರ್. ಈ ವಿಷಯದಲ್ಲಿ ನೀವಿಬ್ಬರೂ
ಒಮ್ಮತಕ್ಕೆ ಬಂದರೆ ಪಕ್ಷ ಚುನಾವಣೆಯಲ್ಲಿ ಗೆಲ್ಲುವುದು ಖಚಿತ ಎಂದರಂತೆ. ಅಂದ ಹಾಗೆ ಈ ಎಲ್ಲ ನಾಯಕರೂ ಸಿದ್ದರಾಮಯ್ಯ ಅವರ ಆಪ್ತರು ಎಂಬುದು ರಹಸ್ಯವೇನಲ್ಲ. ಹೀಗಾಗಿಯೇ ಸಿದ್ದರಾಮಯ್ಯ ಅವರಿಗೆ ಸಂದೇಶವೊಂದನ್ನು ಕಳಿಸಿರುವ ಡಿಕೆಶಿ; ಈ ವಿಷಯದ ಬಗ್ಗೆ ಮೂರನೆಯವರ ಮೂಲಕ ಮಾತನಾಡುವುದು ಬೇಡ.ನಾವಿಬ್ಬರೇ ಮಾತನಾಡೋಣ ಎಂದಿದ್ದಾರಂತೆ.

ಇದಾದ ನಂತರ ತಮ್ಮ ಆಪ್ತರ ಬಳಿ, ಅಜ್ಜಯ್ಯ ಅವರ ಪೀಠದಿಂದ ಆದೇಶ ಬರುವವರೆಗೆ ನಾನು ಯಾವ ತೀರ್ಮಾನ ಕೈಗೊಳ್ಳುವುದಿಲ್ಲ ಅಂತ ಡಿಕೆಶಿ ಹೇಳಿದ್ದಾರೆ. ಅಂದ ಹಾಗೆ ನೊಣವಿನಕೆರೆಯ ಅಜ್ಜಯ್ಯ ಎಂದರೆ ಡಿಕೆಶಿಗೆ ಬಹಳ ಗೌರವ.ಹೀಗಾಗಿ ಮಹತ್ವದ ವಿಷಯಗಳ ಬಗ್ಗೆ ತೀರ್ಮಾನ ತೆಗೆದು ಕೊಳ್ಳುವ ಮುನ್ನ ಅವರು ಅಜ್ಜಯ್ಯನವರ ಮೊರೆ ಹೋಗುತ್ತಾರೆ. ಈ ವಿಷಯದ ಬಗ್ಗೆ ಡಿಕೆಶಿ ತಮ್ಮ ಕಡೆ ನೋಡಿರುವುದರಿಂದ, ಹತ್ತು ದಿನ ಯಾವ ತೀರ್ಮಾನ ಮಾಡುವುದು ಬೇಡ ಅಂತ ಅಜ್ಜಯ್ಯ ಹೇಳಿದ್ದಾರಂತೆ. ಹೀಗಾಗಿ ಅವರ ಮಾತನ್ನೇ ಡಿಕೆಶಿ ಈಗ ಪಾಲಿಸುತ್ತಿದ್ದಾರೆ. ಮತ್ತು ಅವರಿಂದ ಬರುವ ಸಂದೇಶವನ್ನು ಕಾಯುತ್ತಿದ್ದಾರೆ.

ಕಡೂರಿನತ್ತ ಸಿದ್ರಾಮಯ್ಯ ಚಿತ್ತ?

ಮಹತ್ವದ ಬೆಳವಣಿಗೆಯೊಂದರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರದ ಕಣದಿಂದ ದೂರ ಸರಿದಿದ್ದಾರೆ. ಕೋಲಾರದ ಕಣದಲ್ಲಿ ನೀವು ಸ್ಪರ್ಧಿಸುವುದು ಬೇಡ. ಯಾಕೆಂದರೆ ವಿರೋಽಗಳೆಲ್ಲ ನಿಮ್ಮ ವಿರುದ್ಧ ಒಗ್ಗೂಡಬಹುದು ಅಂತ ರಾಹುಲ್ ಗಾಂಧಿ ಹೇಳಿದರಂತೆ. ಇದನ್ನು ಸ್ವತಃ ರಾಹುಲ್ ಗಾಂಧೀಯವರೇ ಯೋಚಿಸಿ ಹೇಳಿದರೋ? ಅಥವಾ ಇನ್ಯಾರಾದರೂ ಪ್ರಭಾವ ಬೀರಿ ಅವರ ಬಾಯಲ್ಲಿ ಹೇಳಿಸಿದರೋ ಗೊತ್ತಿಲ್ಲ. ಒಟ್ಟಿನಲ್ಲಿ ಸಿದ್ದರಾಮಯ್ಯ ಕೋಲಾರದಿಂದ ಬೇರೆ ಕಡೆ ಕಣ್ಣು ಹಾಯಿಸುವುದು ಅನಿವಾರ್ಯವಾಗಿದೆ. ಈ ವಿಷಯ ಬಂದಾಗ ಅವರು ಮೈಸೂರಿನ ವರುಣಾ ಕ್ಷೇತ್ರದ ಕಡೆ ಹೋಗಬಹುದು ಎಂಬುದು ಬಹುತೇಕರ ಅಭಿಪ್ರಾಯ.

ಆದರೆ ಸಿದ್ದರಾಮಯ್ಯ ಅವರಿಗೆ ವರುಣಾ ಕ್ಷೇತ್ರಕ್ಕಿಂತ ಚಿಕ್ಕಮಗಳೂರು ಜಿಯ ಕಡೂರು ಕ್ಷೇತ್ರದ ಮೇಲೆ ಮನಸ್ಸಾಗಿದೆಯಂತೆ. ಕುರುಬರು, ಮುಸ್ಲಿಮರು, ಪರಿಶಿಷ್ಟರ ಮತಗಳು ಕನ್‌ಸಾಲಿಡೇಟ್ ಆದರೆ ಈ ಕ್ಷೇತ್ರದಲ್ಲಿ ತಾವು ಗೆಲ್ಲುವುದು ಖಚಿತ ಎಂಬುದು ಸಿದ್ದರಾಮಯ್ಯ ಅವರ ನಂಬಿಕೆ.
ಮುಂದೇನೋ?