Sunday, 15th December 2024

ಭಗವದ್ಗೀತೆಯ 15 ಜೀವನ ಪಾಠಗಳು

ಸಾಂದರ್ಭಿಕ

ಡಾ.ಗುರುರಾಜ ಪೋಶೆಟ್ಟಿಹಳ್ಳಿ

ಭಗವದ್ಗೀತೆ ಕೇವಲ ಒಂದು ಧಾರ್ಮಿಕ ಗ್ರಂಥವಲ್ಲ. ಅದೊಂದು ಪರಿಪೂರ್ಣ ವ್ಯಕ್ತಿತ್ವ ವಿಕಸನದ (ಬೆಸ್ಟ್ ಪರ್ಸನಾಲಿಟಿ ಡೆವಲ ಪ್ಮೆಂಟ್ ಹಾಗೂ ಮೋಟಿವೆಷನಲ್ ಬುಕ್) ಅತ್ಯದ್ಭುತ ಗ್ರಂಥ ಆಗಿದೆ.

ಅದರಲ್ಲಿ ನಮ್ಮೆ ಸಮಸ್ಯೆಗಳಿಗೆ ಪರಿಹಾರಗಳಿವೆ. ನಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರಗಳಿವೆ. ನಮ್ಮಲ್ಲಿ ಕೆಲಸ ಮಾಡುವ ಇಚ್ಛಾಶಕ್ತಿ ಕಡಿಮೆಯಾದಾಗ ಪದೇ ಪದೆ ಭಗವದ್ಗೀತೆಯನ್ನು ಓದುವುದರಿಂದ, ಪ್ರತಿಸಲ ಓದಿದಾಗ ನಮಗೆ ಒಂದೊಂದು ಹೊಸ ವಿಷಯ ಗಳು ಹೊಳೆಯುತ್ತವೆ, ಹೊಸ ಶಕ್ತಿ ಸಿಗುತ್ತದೆ. ಆದ್ದರಿಂದ ನೀವು ಸಹ ತಪ್ಪದೇ ಆಗಾಗ ಭಗವದ್ಗೀತೆಯನ್ನು ಓದಿ. ಖಂಡಿತ ನಿಮ್ಮ ಲೈಫ್‌ ಸಕ್ಸೆಸ್  ಫುಲ್ಲಾಗುತ್ತದೆ. ಭಗವದ್ಗೀತೆಯಿಂದ ಕಲಿಯಬೇಕಾದ ಕೆಲವು ವಿಷಯಗಳು ಇಂತಿವೆ.

1 ಇಲ್ಲಿಯ ತನಕ ಆಗಿದ್ದೆಲ್ಲವೂ ಒಳ್ಳೆಯದೇ, ಸದ್ಯಕ್ಕೆ ಆಗುತ್ತಿರುವುದೆಲ್ಲವೂ ಒಳ್ಳೆಯದೇ, ಮುಂದೆ ಆಗುವುದೆಲ್ಲವೂ ಒಳ್ಳೆಯದೇ. ಆದ ಕಾರಣ ಯಾವುದಕ್ಕೂ ಜಾಸ್ತಿ ಚಿಂತಿಸದಿರಿ, ಜಾಸ್ತಿ ಕೊರಗದಿರಿ. ನಿಮ್ಮ ಕೆಲಸಗಳನ್ನು ನೀವು ಸರಿಯಾಗಿ ಮಾಡಿ ಎಲ್ಲವೂ ಒಳ್ಳೆಯದೇ ಆಗುತ್ತದೆ.

2 ಈ ಜಗತ್ತು ನಶ್ವರವಾಗಿದೆ. ಈ ಭೂಮಿಗೆ ಬಂದಿದ್ದೆಲ್ಲವು ಒಂದಲ್ಲ ಒಂದಿನ ಮರಳಿ ಹೋಗುತ್ತದೆ. ನಮ್ಮ ದೇಹವು
ನಶ್ವರವಾಗಿದೆ. ಆದರೆ ನಮ್ಮ ಆತ್ಮ ಅಮರವಾಗಿದೆ. ನಮ್ಮ ಆತ್ಮಕ್ಕೆ ಆದಿ ಅಂತ್ಯವಿಲ್ಲ. ನಮ್ಮ ಆತ್ಮಕ್ಕೆ ಹುಟ್ಟು ಸಾವುಗಳಿಲ್ಲ.
ಸಾವಿಗೆ ಹೆದರಬೇಡಿ. ಏಕೆಂದರೆ ಅದೊಂದು ಪರಿವರ್ತನಾ Its a transitional phase between birth to death and death
to birth.
3 ಬರಿಗೈಯಲ್ಲಿ ಬಂದ ನಾವು ಬರಿಗೈಯಲ್ಲಿ ಮರಳಿ ಹೋಗುತ್ತೇವೆ. ಯಾವುದು ಮತ್ತು ಯಾರೂ ನಮ್ಮೊಂದಿಗೆ ಶಾಶ್ವತವಾಗಿರಲ್ಲ.
ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ಅದಕ್ಕಾಗಿ ನಾವು ಆಗುಹೋಗುಗಳಿಗೆ ತಲೆ ಕೆಡಿಸಿಕೊಳ್ಳದೇ ನಮ್ಮ ಧರ್ಮಕರ್ಮ ಗಳನ್ನು ಸರಿಯಾಗಿ ಮಾಡಬೇಕು. ಫಲಿತಾಂಶದ ಬಗ್ಗೆ ಹೆಚ್ಚಿಗೆ ಚಿಂತಿಸದೇ ನಾವು ನಮ್ಮ ಕೆಲಸವನ್ನು ನಿಯತ್ತಾಗಿ ಮಾಡಬೇಕು.

4 ನಮ್ಮ ಮನಸ್ಸು ನಮ್ಮ ಅಸಲಿ ಮಿತ್ರ ಹಾಗೂ ಅಸಲಿ ಶತ್ರುವಾಗಿದೆ. ನಮ್ಮ ಮನಸ್ಸು ನಮ್ಮ ನಿಯಂತ್ರಣದಲ್ಲಿದ್ದರೆ ಅದಕ್ಕಿಂತ ಒಳ್ಳೇ ಮಿತ್ರ ಬೇರೆ ಯಾರೂ ಇಲ್ಲ. ಅದೇ ಮನಸ್ಸು ನಮ್ಮ ನಿಯಂತ್ರಣ ತಪ್ಪಿ ಹೋದರೆ ಅದಕ್ಕಿಂತ ಕೆಟ್ಟ ಶತ್ರು ಬೇರೆ ಯಾರೂ ಇಲ್ಲ. ನಾವು ನಮ್ಮ ಮನಸ್ಸನ್ನು ಗೆದ್ದರೆ ಎಲ್ಲವನ್ನೂ ಗೆದ್ದಂತೆ.

5 ಬದಲಾವಣೆಗಳಿಗೆ ಹೆದರಬೇಡಿ. ಬದಲಾವಣೆ ನಿಸರ್ಗದ ನಿಯಮವಾಗಿದೆ. ನೀವು ಬದಲಾವಣೆಗಳಿಗೆ ಸದಾಕಾಲ ಸಿದ್ಧರಾಗಿರ ಬೇಕು. ನೀವು ನಿಮ್ಮ ಕರ್ಮಗಳ ಅನುಸಾರವಾಗಿ ಮುಂದೆ ನೀವು ಬಿಲೆನಿಯರ್ ಆಗಬಹುದು ಅಥವಾ ಭಿಕ್ಷುಕರಾಗಬಹುದು.

6 ಕಾಮ ಕ್ರೋಧ ಲೋಭಗಳು ನಿಮ್ಮನ್ನು ನಿಮ್ಮಿಂದಲೇ ಹಾಳು ಮಾಡುತ್ತವೆ. ಕಾಮ ನಿಮ್ಮನ್ನು ಕರ್ತವ್ಯ ಭ್ರಷ್ಟನನ್ನಾಗಿ ಮಾಡುತ್ತದೆ. ಕ್ರೋಧ ನಿಮ್ಮ ಸಂಬಂಧಗಳನ್ನು ಕೆಡಿಸಿ ನಿಮ್ಮನ್ನು ಒಬ್ಬಂಟಿಯಾಗಿಸುತ್ತದೆ. ನಿಮ್ಮ ಕೋಪದ ಜ್ವಾಲೆ ನಿಮ್ಮನ್ನೇ ಸುಡುತ್ತದೆ. ಲೋಭ ನಿಮ್ಮ ಸಂತೋಷವನ್ನು ಕಿತ್ತುಕೊಳ್ಳುತ್ತದೆ. ಈ ಕಾಮ ಕ್ರೋಧ ಲೋಭಗಳು (Lust,  Anger and Greed) ನರಕದ ಬಾಗಿಲುಗಳಿದ್ದಂತೆ. ಆದ್ದರಿಂದ ಇವುಗಳಿಂದ ದೂರವಿರುವುದು ಒಳ್ಳೆಯದು. ಕಾಮ ಕ್ರೋಧ ಲೋಭಗಳು ಎಂದೂ ಆರದ ಅಗ್ನಿಗಳಾಗಿವೆ. ನಮ್ಮ ಇಂದ್ರಿಯಗಳನ್ನು ನಿಯಂತ್ರಿಸುವ ಮೂಲಕ ಇವುಗಳನ್ನು ಹಿಡಿತದಲ್ಲಿಡಬಹುದು.

7 ಎಲ್ಲದಕ್ಕೂ ಅನುಮಾನಪಡುವವರು ಎಂದಿಗೂ ಖುಷಿಯಾಗಿರಲಾರರು. ಸಂಶಯಾಸ್ಪದವಾದ ಮನಸ್ಸು ಎಂದಿಗೂ ಯಾವು ದರ ಮೇಲೆಯೂ ಫೋಕಸ್ ಮಾಡಲಾಗದು. ಸಂಶಯಾಸ್ಪದವಾದ ಮನಸ್ಸು ಎಂದಿಗೂ ನಿಮ್ಮನ್ನು ನಿಮ್ಮ ಗುರಿ ತಲುಪಿಸಲ್ಲ. ಆದ್ದರಿಂದ ಸಂಶಯದಿಂದ ಹೊರಬನ್ನಿ. ಕೆಟ್ಟ ಆಲೋಚನೆಗಳಿಂದ ಹೊರ ಬನ್ನಿ. ಉಚ್ಛ ಯೋಚನೆಗಳನ್ನು ಮಾಡಿ. ಉಚ್ಛ ಕೆಲಸಗಳನ್ನು ಮಾಡಿ.

8 ಮನುಷ್ಯ ತಾನು ಮಾಡಿದ ಒಳ್ಳೆಯ ಕರ್ಮಗಳಿಂದ ಮೇಲಕ್ಕೆರಬಹುದು. ಇಲ್ಲವೇ ತನ್ನ ಕೆಟ್ಟ ಕರ್ಮಗಳಿಂದ ಕೆಳಗೆ ಬೀಳಬಹುದು. ಆದ್ದರಿಂದ ಮನುಷ್ಯನ ನಿಜವಾದ ಮಿತ್ರ ಹಾಗೂ ಶತ್ರು ಮನುಷ್ಯನೇ. ನಿಮ್ಮ ಮಿತ್ರನೂ ನೀವೇ, ಶತ್ರುನೂ ನೀವೇ.

9 ನಿಮ್ಮ ಮನಸ್ಸಲ್ಲಿ ಸ್ವಾರ್ಥವನ್ನು ಬೆಳೆಯಲು ಬಿಟ್ಟರೆ ನಿಮ್ಮ ಬುದ್ಧಿ ಮಂಕಾಗುತ್ತದೆ. ಮೈಮನಸ್ಸಿನ ತುಂಬ ಸ್ವಾರ್ಥವನ್ನು ತುಂಬಿಕೊಂಡಿರುವ ಜ್ಞಾನಿಯ ವಿದ್ಯೆ ಬುದ್ಧಿ ಪ್ರಯೋಜನಕ್ಕೆ ಬಾರವು. ಸ್ವಾರ್ಥ ತುಂಬಿಕೊಂಡಿರುವ ಜ್ಞಾನಿ ಹಾಗೂ ಧೂಳು ಬಿದ್ದಿರುವ ಕನ್ನಡಿ ಎರಡೂ ಒಂದೇ, ಎರಡೂ ಹೊಳೆಯರಾರವು.

10 ನಿಮ್ಮ ಕರ್ತವ್ಯದಿಂದ ದೂರ ಓಡಬೇಡಿ. ಅದರ ಪರಿಣಾಮ ಒಳ್ಳೆಯದಾಗಿರದಿದ್ದರೂ ಸಹ ಅದನ್ನು ಪೂರ್ಣಗೊಳಿಸಿ. ನಿಮ್ಮ ಕರ್ತವ್ಯವನ್ನು ನೀವು ಪ್ರಾಮಾಣಿಕವಾಗಿ ಮಾಡಿ. ಫಲಿತಾಂಶವನ್ನು ಭಗವಂತನಿಗೆ ಬಿಟ್ಟು ಬಿಡಿ. ಕೇವಲ ಕರ್ಮ ನಿಮ್ಮ ಕೈಯಲ್ಲಿದೆ, ಫಲ ನಿಮ್ಮ ಕೈಯಲಿಲ್ಲ.

11 ನೀವು ನಿಮ್ಮ ಜೀವನದಲ್ಲಿ ಯಶಸ್ವಿಯಾಗಬೇಕೆಂದರೆ ನೀವು ಜ್ಞಾನ ಮತ್ತು ಶಿಸ್ತನ್ನು ಬೆಳೆಸಿಕೊಳ್ಳಲೇಬೇಕು. ಜ್ಞಾನ ಮತ್ತು ಶಿಸ್ತುಗಳು ನಿಮ್ಮನ್ನು ಅನಾವಶ್ಯಕ ಸಮಸ್ಯೆಗಳಿಂದ ರಕ್ಷಿಸುತ್ತವೆ.

12 ದೇವರನ್ನು ಸೇರಲು ಹಲವಾರು ದಾರಿಗಳಿವೆ. ನೀವು ನಿಮಗೆ ಸರಿಯೆನಿಸಿದ ದಾರಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಕರ್ಮಯೋಗ, ಜ್ಞಾನಯೋಗ, ರಾಜಯೋಗ, ಭಕ್ತಿಯೋಗಗಳೆಲ್ಲವು ನಿಶ್ಚಿತವಾಗಿ ದೈವವನ್ನು ಸೇರುತ್ತವೆ. ನಿಮಗೆ ಸೂಕ್ತವಾದ ದಾರಿಯನ್ನು ನೀವು ಆಯ್ಕೆ ಮಾಡಿಕೊಳ್ಳಿ.

13 ಯಾವುದಾದರೂ ಅತಿಯಾದರೂ ಅಥವಾ ಕಮ್ಮಿಯಾದರೂ ನಿಮ್ಮ ಮನಸ್ಸಿನ ಸಮತೋಲನ ಕೆಡುತ್ತದೆ. ನಿಮ್ಮ ನೆಮ್ಮದಿ ಹಾಳಾಗುತ್ತದೆ. ಆದ್ದರಿಂದ ನೀವು ಸೇವಿಸುವ ಆಹಾರ, ತೆಗೆದುಕೊಳ್ಳುವ ವಿಶ್ರಾಂತಿ ಅಂದರೆ ನಿದ್ದೆ ಎಲ್ಲವೂ ಸಮತೋಲನದಲ್ಲಿರ ಬೇಕು. ಯುಕ್ತ ಆಹಾರ, ಯುಕ್ತ ವಿಹಾರ, ಯುಕ್ತ ವಿಚಾರಗಳನ್ನು ರೂಢಿಸಿಕೊಳ್ಳಿ.

14 ಭಾವನೆಗಳ ಆಧಾರದ ಮೇಲೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಏಕೆಂದರೆ ಭಾವನೆಗಳನ್ನು ಟೆಂಪರರಿ ಆಗಿವೆ. ಅತ್ಯಂತ ಖುಷಿಯಾಗಿದ್ದಾಗ ಅಥವಾ ದುಃಖದಲ್ಲಿದ್ದಾಗ ತೆಗೆದುಕೊಂಡ ನಿರ್ಧಾರಗಳಲ್ಲಿ ಹೆಚ್ಚಿನವು ತಪ್ಪಾಗಿರುತ್ತವೆ. ಆದ್ದರಿಂದ ನೀವು ನಾರ್ಮಲ್ ಆಗಿದ್ದಾಗ ಮಾತ್ರ ನಿರ್ಧಾರಗಳನ್ನು ತೆಗೆದುಕೊಳ್ಳಿ. ಕೋಪದಲ್ಲಿ ಅಥವಾ ಪ್ರೀತಿಯಲ್ಲಿ ಯಾವುದೇ ನಿರ್ಧಾರ ಗಳನ್ನು ತೆಗೆದುಕೊಳ್ಳಬೇಡಿ. ಎಮೋಷನಲ್ ಆದಾಗ ಮುಖ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.

15 ಬದುಕೊಂದು ಯುದ್ಧಭೂಮಿಯಾಗಿದೆ. ಧೈರ್ಯವಾಗಿ ಹೋರಾಡಿ. ಕಾಲ ಕೆಳಗಿನ ನೆಲ ಕುಸಿದು ಬಿದ್ದರೂ ಯಾರಿಂದಲೂ ಏನನ್ನೂ ಬಯಸದೆ, ಯಾರಿಗೂ ಹೆದರದೇ ಮುನ್ನುಗ್ಗಬೇಕು.