Sunday, 15th December 2024

ಮುನಿಯನ ಮಾದರಿ !

ತುಂಟರಗಾಳಿ

ಸಿನಿಗನ್ನಡ

ಎಲ್ಲಾ ಸಿನಿಮಾಗಳೂ ಎಂಟರ್‌ಟೈನ್ ಮೆಂಟ್‌ಗೋಸ್ಕರ ಅಲ್ಲ, ಕೆಲವು ಸಿನಿಮಾಗಳು ಎನ್‌ಲೈಟನ್‌ಮೆಂಟ್‌ಗೆ ಕೂಡಾ ಇರ್ತವೆ. ಕಳೆದವಾರ ಬಿಡುಗಡೆ  ಆದ ಮನ್ಸೋರೆ ನಿರ್ದೇಶನದ ೧೯.೨೦.೨೧ ಅಂಥದ್ದೇ ಚಿತ್ರ. ಇದು ಕಾಡಿನ ಕಥೆ ಮತ್ತು ಕಾಡುವ ಕಥೆ. ಪ್ರಜಾಪ್ರಭುತ್ವಕ್ಕಾಗಿ, ಮನುಷ್ಯತ್ವಕ್ಕಾಗಿ ಹುಡುಕಾಡುವ ಕಥೆ.

ಒಂದು ಸರಳ ಬದುಕಿಗಾಗಿ ತಡಕಾಡುವ ಕಥೆ. ವಾಸ್ತವ ಬದುಕಿನ ಬಗೆಗಿನ ಸತ್ಯಗಳನ್ನು ಹೇಳುವ ಇಂಥ ಚಿತ್ರಗಳು ಬರೀ ಸ್ಟಾರ್ ಡಮ, ಹೀರೋಯಿಸಂ ತುಂಬಿಸಿ, ತೆರೆಯ ಮೇಲೆ ಪಾತ್ರಗಳು ಕಾಣದೇ ಬರೀ ಸ್ಟಾರ್‌ಗಳು ಕಾಣುವಂತೆ ಮಾಡುವ ‘ಫ್ಯಾಂಟಸಿ’ ಸಿನಿಮಾಗಳ ಬಗ್ಗೆ ಒಂದು ರೀತಿಯ ಜಿಗುಪ್ಸೆ ಹುಟ್ಟಿಸಿಬಿಡುತ್ತವೆ. ಮಾನವ ಜನ್ಮ ದೊಡ್ಡದು ಅಂತ ದೊಡ್ಡವರು ಹೇಳಿರಬಹುದು. ಆದರೆ ಇಂಥ ಮಾನವ ಜನ್ಮದಲ್ಲಿ ಯಾವ ಸುಖ ಇದೆ ಎನ್ನುವ ಮಟ್ಟಕ್ಕೆ ವೈರಾಗ್ಯ ಹುಟ್ಟಿಸುವಂತೆ ಬದುಕುತ್ತಿರುವವರ ಕಥಾನಕ ಇದು.

ಕಾಡಿನಲ್ಲಿ ವಾಸಿಸುವ ಚಿತ್ರದ ಪ್ರಮುಖ ಪಾತ್ರಧಾರಿ ತನ್ನ ಕಷ್ಟ ಹೇಳಿಕೊಳ್ಳಲು ಮಾಧ್ಯಮದವರ ಸಹಾಯ ತೆಗೆದುಕೊಳ್ಳುತ್ತಾನೆ. ನಿರ್ದೇಶಕ ಮನ್ಸೋರೆ ಇಂಥವರ ಕಥೆ ಹೇಳಲು ಸಿನಿಮಾ ಮಾಧ್ಯಮದ ಸಹಾಯ ತೆಗೆದುಕೊಂಡಿದ್ದಾರೆ. ಮನ್ಸೋರೆ ಅವರ ಆP ೧೯೭೮ ಚಿತ್ರದಲ್ಲಿದ್ದ ಕೊಂಚ ಮಟ್ಟಿಗಿನ ಸಿನಿಕತೆ ಇಲ್ಲಿಲ್ಲ, ಇಲ್ಲಿ ಬರೀ ಕತೆ, ಕತೆ, ಕತೆ. ಆದರೆ ಅದು ಸತ್ಯಕಥೆ ಅನ್ನೋದು ಭಯ ಹುಟ್ಟಿಸುತ್ತದೆ. ಆ ಲೆಕ್ಕದಲ್ಲಿ ಇದು ದೆವ್ವಗಳಿಲ್ಲದ ಹಾರರ್ ಸ್ಟೋರಿ ಅಂದ್ರೂ ತಪ್ಪಿಲ್ಲ.

ಮನರಂಜನೆಯ ಕೈಗೆ ಬೇಡಿ ಹಾಕಿ ಕೂರಿಸಿ, ಸತ್ಯದರ್ಶನದ ಸತ್ವಪರೀಕ್ಷೆ ಬರೆದಿದ್ದಾರೆ ಮನ್ಸೋರೆ. ಸಿನಿಮಾ ನೋಡೋ ಪ್ರೇಕ್ಷಕರಿಗೆ ತೆರೆಯ ಮೇಲಿನ ಪಾತ್ರಗಳ ಜೀವನ ನೋಡಿ ಬೇಸರ ಪಡಬೇಕೋ, ಸದ್ಯ ನಮಗೆ ಇಂಥ ಕಷ್ಟ ಇಲ್ಲ ಅನ್ನೋ ಸ್ವಾರ್ಥದಲ್ಲಿ ಸಮಾಧಾನದ ನಿಟ್ಟುಸಿರು ಬಿಡಬೇಕೋ ಅಂತ ಗೊಂದಲ ಹುಟ್ಟುತ್ತದೆ. ಬಾಲಾಜಿ ಮನೋಹರ್, ರಾಜೇಶ್ ನಟರಂಗ, ಸಂಪತ್, ಕೃಷ್ಣ ಹೆಬ್ಬಾಳೆ, ವಿನಯ್ ಕೃಷ್ಣಸ್ವಾಮಿ, ಗಿರಿರಾಜ್, ಎಂ.ಡಿ ಪಲ್ಲವಿ, ಅವಿನಾಶ್ ಅವರ ಜೊತೆ ಹೆಸರು ಗೊತ್ತಿಲ್ಲದ ಅನೇಕ ಪ್ರಬುದ್ಧ ನಟನಟಿಯರ ‘ಶೃಂಗ’ಸಭೆಯೇ ಇಲ್ಲಿದೆ. ಚಿತ್ರದಲ್ಲಿ ನೊಂದವರು ಕಾನೂನನ್ನ ಕೈಗೆ ತಗೋಳ್ಳೋದಿಲ್ಲ, ಆದ್ರೆ ಪ್ರೇಕ್ಷಕ ಸಿನಿಮಾವನ್ನ ಮನಸ್ಸಿಗೆ ತಗೋತಾನೆ.

ಅಮಾಯಕ ಹುಡುಗ ಜೈಲಲ್ಲಿ ಹನಿ ನೀರಿಗೂ ಪರದಾಡುವ ಕಥೆಯನ್ನ ಪಾಪ್ಕಾರ್ನ್ ತಿಂತಾ, ಪೆಪ್ಸಿ ಕುಡಿತಾ ನೋಡಿದರೆ ಪಾಪಪ್ರಜ್ಞೆ ಕಾಡುತ್ತೆ. ವೀರೇಂದ್ರ ಮಲ್ಲಣ್ಣ, ಅವಿನಾಶ್ ಮಾಸ್ ಡೈಲಾಗ್‌ಗಳ ಮೂಲಕ ಬರೀ ಹೀರೋಗಷ್ಟೇ ಅಲ್ಲ ಕಥೆಗೂ ಬಿಲ್ಡಪ್ ಕೊಡಬಹುದು ಅಂತ ತಮ್ಮ ಬರವಣಿಗೆಯಲ್ಲಿ ತೋರಿಸಿಕೊಟ್ಟಿದ್ದಾರೆ. ಕೊನೆಯ ಶಾಟ್‌ನಲ್ಲಿ ನಟ ಶೃಂಗ ಅವರು ಮಾತಿಲ್ಲದೇ ಕೊಡೋ ಎಕ್ಸ್ ಪ್ರೆಷನ್ ಇಡೀ ಸಿನಿಮಾದ ಸಮ್ಮರಿಯಂತಿದೆ. ಮಾಡದ ತಪ್ಪಿಗೆ ಬಲಿಪಶು ಆಗಿ, ಪೊಲೀಸರ ಕಾಟದಿಂದ ಬೇಸತ್ತು, ನಂಗೆ ಬಿಡುಗಡೆನೂ ಬೇಡ, ಬೇಲ್ ಕೂಡಾ ಬೇಡ. ಕೋರ್ಟ್ ನಿಂದ ಒಂದು ರಾತ್ರಿ ನಿz ಮಾಡೋಕೆ ಅನುಮತಿ ಕೊಡಿಸ್ತೀರಾ ಅಂತ ಶೃಂಗ ಕೇಳಿದಾಗ, ಇದು ನಿಜಕ್ಕೂ ನಮ್ಮ ಸಮಾಜದಲ್ಲಿ ಕಂಫರ್ಟ್ ಝೋನ್‌ನಲ್ಲಿ ಬದುಕುತ್ತಿರುವ ನಮ್ಮಂಥವರ ನಿದ್ದೆಗೆಡಿಸುವ ಚಿತ್ರ ಅನ್ನಿಸುತ್ತೆ.

ಲೂಸ್ ಟಾಕ್
ಮುನಿಸ್ವಾಮಿ (ಕಾಲ್ಪನಿಕ ಸಂದರ್ಶನ)
ಅ ಸ್ವಾಮಿ, ಚುನಾವಣೆಯಲ್ಲಿ ಕೈಗೆ ಬ್ಲೂ ಇಂಕ್ ಹಾಕೋ ಟೈಮಲ್ಲಿ, ಹಣೆ ಮೇಲಿರೋ ಕೆಂಪು ಇಂಕ್ ಬಗ್ಗೆ ಮಾತಾಡಿ ಮುಖ ಕೆಡಿಸಿಕೊಳ್ಳೋದು ಬೇಕಿತ್ತಾ?
-ನನಗನ್ನಿಸಿದ್ದು ನಾನ್ ಹೇಳ್ದೆ. ಅವ್ರ್ ಏನಾದ್ರೂ ಮಾಡ್ಕೊಳ್ಲಿ. ಅವರ ಹಣೆ, ಅವ್ರ್ ಹಣೆಬರಹ.

ಎಲಾ ಇವ್ನ, ಇನ್ನೂ ನೀವು ಹೇಳಿದ್ದೇ ಸರಿ ಅಂತ ವಾದಿಸ್ತೀರಲ್ಲ, ಅದನ್ನ ಕೇಳೋಕೆ ಅವ್ರ್ ಗಂಡ ಇರ್ತಾನೆ ನಿಮಗ್ಯಾಕ್ರೀ ಅದೆಲ್ಲ?
-ಅದಕ್ಕೇ ಕಣ್ರೀ, ಗಂಡ ಇದಾನಾ ಅಂತಾನೂ ಕೇಳಿ ಕನರ್ಮ್ ಮಾಡಿಕೊಂಡಿದ್ದು ಕರ್ಮ…

ಒಬ್ಬ ಎಂಪಿ ಆಗಿ ಆಡೋ ಮಾತೇನ್ರೀ ಇದು?

-ಅಲ್ರೀ, ನಾನೇನು ಈ ಮುನಿಯನ ಮಾದರಿಯನ್ನ ಎಲ್ಲರೂ ಅನುಸರಿಸಬೇಕು ಅಂತ ಹೇಳಿಲ್ಲ, ಸುಮ್ನೆ ಸಲಹೆ ಕೊಟ್ಟೆ ಅಷ್ಟೇ.

ಆದ್ರೂ ಈ ಘಟನೆಯಿಂದ ನಿಮ್ಮ ಇಮೇಜ್ ಕೆಟ್ಟು ಹೋಗುತ್ತೆ ಅಂತ ಅರಿವಿರಲಿಲ್ವಾ?
-ಏನ್ ಮಾಡೋದು, ಕೆಂಪು ಬೊಟ್ಟಿನ ಕಡೆ ಬೆಟ್ಟು ಮಾಡಿ ತೋರಿಸಿ, ನನ್ನ ಕೆರಿಯರ್ ಗೆ ಕಪ್ಪು ಬೊಟ್ಟು ಇಟ್ಕೊಂಡ್ ಬಿಟ್ಟೆ

ಹೋಗ್ಲಿ ಈ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಜನರಿಗೆ ಏನು ಭರವಸೆ ಕೊಡ್ತೀರಾ?
-ಮಾತೆತ್ತಿದರೆ ಸಿದ್ದರಾಮಯ್ಯ ಆ ಭಾಗ್ಯ ಕೊಟ್ರು ಈ ಭಾಗ್ಯ ಕೊಟ್ರು ಅಂತೀರಲ್ಲ, ಅದಕ್ಕೇ ನಾವು ಈ ಸಲ ಅಽಕಾರಕ್ಕೆ ಬಂದ್ರೆ ಹಣೆ ಬೊಟ್ಟು ಇಡದೇ ಇರೋ ಹೆಣ್ಮಕ್ಕಳಿಗೆ
ಕುಂಕುಮ ಭಾಗ್ಯ ಕೊಡೋ ಅಂತಿದ್ದೀವಿ.

ನೆಟ್ ಪಿಕ್ಸ್
ಸೋಮು ಖೇಮು ಮಾತಾಡ್ತಾ ಕೂತಿದ್ರು, ಖೇಮು ಹೇಳ್ದ, ಸೋಮು ಯಾಕೋ ಲೈಫ್ ಬೇಜಾರಾಗ್ತಿದೆ ಕಣೋ, ದಿನಾ ಅದೇ ಕೆಲಸ, ಅದೇ ಹೆಂಡ್ತಿ ಮಕ್ಕಳು, ಅದೇ
ರೊಟೀನ್, ಏನಾದ್ರೂ ಹೊಸಾದ್ ಮಾಡಬೇಕು ಅನ್ನಿಸಿದೆ. ಕಣೋ, ಲೈಫಲ್ಲಿ ಥ್ರಿಲ್ ಬೇಕು, ಅದಕ್ಕೆ ಸೋಮು ‘ಸರಿ, ನಾನು ನಿನ್ನ ಒಂದ್ ಹೊಸಾ ಜಾಗಕ್ಕೆ ಕರಕೊಂಡ
ಹೋಗ್ತಿನಿ’ ಅಂದ. ‘ಎಲ್ಲಿಗೆ?’ ಅಂತ ಬೇಕು ಕುತೂಹಲದಿಂದ ಕೇಳಿದ ಖೇಮು. ‘ಈ ನಾಚ್ವಾಲೀಗಳ ಘರ್ ಅಂತ ಇರುತ್ತೆ ಗೊತ್ತಾ ನಿಂಗೆ?’ ಅಂದ ಸೋಮು.

ಖೇಮುಗೆ ಅದೆಲ್ಲ ಗೊತ್ತಿರಲಿಲ್ಲ. ಸರಿ, ಸೋಮು ಹೇಳಿದ ‘ಅಲ್ಲಿ ಚೆಂದದ ಹುಡುಗೀರು ಡ್ಯಾ ಮಾಡ್ತಾರೆ ಕಣೋ’ ಅಂದ. ‘ಹೌದಾ? ಹಂಗಾದ್ರೆ, ಯಾವಾಗ ಹೋಗೋಣ?’ ಅಂತ
ಖೇಮು ರೆಡಿ ಆಗಿಬಿಟ್ಟ. ಅವನ ಅವಸರ ನೋಡಿ ಭಲೇ ರಸಿಕ ಅಂದ್ಕೊಂಡ ಸೋಮು, ಖೇಮುವನ್ನು ಕರಕೊಂಡು ಮರುದಿನವೇ ಒಂದು ಫೇಮಸ್ ನಾಚ್ವಾಲೀ ಘರ್‌ಗೆ
ಹೋದ. ಅಲ್ಲಿ ಇವರನ್ನು ಒಳಗೆ ಕರಕೊಂಡು ಹೋಗಿ, ಕಾರ್ಪೆಟ್ ಹಾಸಿ, ಕೈಗೊಂದು ಹೆಂಡದ ಬಟ್ಟಲು ಕೊಟ್ಟು ಕುಳಿತುಕೊಳ್ಳಲು ಹೇಳಿದರು. ಸರಿ ಒಂದು ಚೆಂದದ ಹುಡುಗಿ
ಬಂದು ‘ಡ್ಯಾ ಮಾಡೋಕೆ ಶುರು ಮಾಡ್ಲಾ ಹುಜೂರ್?’ ಅಂತ ಕೇಳಿದಳು.

‘ಸರಿ ಶುರು ಹಚ್ಕ’ ಅಂದ ಖೇಮು, ಸುಮಾರು ಒಂದೂವರೆ ಗಂಟೆ ಸತತವಾಗಿ ಆ ಹುಡುಗಿ ಖೇಮು, ಸೋಮು ಮುಂದೆ ಡ್ಯಾ ಮಾಡಿದಳು. ಖೇಮುಗೆ ಸಖತ್ ಖುಷಿ ಆಯ್ತು.
ಅದನ್ನು ಗಮನಿಸಿದ ಆ ಹುಡುಗಿ ಡ್ಯಾ ಮಾಡಿದ ನಂತರ ಮೆಲ್ಲನೆ ಬಳುಕುತ್ತಾ ಖೇಮುನ ಬಳಿ ಬಂದು, ‘ಹುಜೂರ್, ಇಷ್ಟು ಹೊತ್ತು ನಾನು ನಿಮ್ಮನ್ನ ಖುಷಿಪಡಿಸಿದೆ. ಈಗ ನೀವು ಈ ನಿಮ್ಮ ಸೇವಕಿಯನ್ನು ಖುಷಿಪಡಿಸಬೇಕು’ ಎಂದು ನಾಜೂಕಾಗಿ ಕೇಳಿದಳು. ಅದಕ್ಕೆ, ಖೇಮು ಹೇಳಿದ ‘ಅಯ್ಯೋ, ಅದರನೈತೆ ಬಿಡು ತಂಗ್ಯಮ್ಮ, ಈವಾಗ್ ನೀನು ಕೂತ್ಕಂಡ್ ನೋಡು, ನಾನ್ ಡ್ಯಾ ಮಾಡ್ತೀನಿ’.

ಲೈನ್ ಮ್ಯಾನ್

ಓಯೋ ಗ್ರೂ ಮಾಲೀಕ ಮದುವೆ ಆದ್ನಂತೆ
–ನೈಟ್ ಓಯೋ ರೂಮ್ ನನಾ?
ವಿರೂಪಾಕ್ಷಪ್ಪ ಮಾಡಾಳ್ ಪ್ರಶ್ನೆ
-‘ನಾನು ಕೂತಿದ್ದೆ. ಯಾರೋ ಬಂದು ದುಡ್ ಕಿತ್ಕೊಂಡು ಓಡೋದ್ರು’ ಅನ್ನೋ ಪರಿಸ್ಥಿತಿಯಿಂದ, ‘ನಾನು ಕೂತಿದ್ದೆ. ಯಾರೋ ಬಂದು ದುಡ್ ಇಟ್ಟು ಓಡೋದ್ರು’ ಅನ್ನೋವರೆಗೂ ಬಂದಿದ್ದೀವಿ. ಇದಕ್ಕಿಂತ ಅಚ್ಚೇ ದಿನ್ ಬೇಕಾ?

ನೀರಿನಲ್ಲಿ ಮುಳುಗುತ್ತಿರುವ ಜನರನ್ನು ದಡ ಸೋರಿಸಲು ಹರಸಾಹಸ ಮಾಡುವ ಅಂಬಿಗ
-‘ಹುಟ್ಟು’ ಹೋರಾಟಗಾರ
ನಾನು ಬೀಡಿ ಸೇದೋದು ಬಿಟ್ಟಿದೀನಿ ಅಂತ ಸುಳ್ಳು ಹೇಳುವವರದು
-‘ಬೀಡಿ’ ನಾಟಕ
ಸಿಗರೇಟ್ ಬಿಟ್ಟೆ ಅಂತ ಹೇಳಿದ್ಯ ಮತ್ತೆ ಸೇದ್ತಾ ಇದ್ದೀಯಾ?
&Sorry I said it on a ‘lighter’ note

H3 N2 ತಳಿಯ ಜ್ವರ ಎಲ್ಲ ಕಡೆ ಹರಡ್ತಾ ಇದೆ. ಆದ್ರೆ, ಅದು ಯಾವ ಭಕ್ತನಿಗೂ ತಗುಲದೇ ಇದ್ರೆ ಸಾಕು.
-ಯಾಕಂದ್ರೆ, ವಿಷ್ಯ ಏನೇ ಇರಲಿ, ಅವರು ಸ್ಪ್ರೆಡ್ ಮಾಡೋದ್ರಲ್ಲಿ ಎಕ್ಸ್‌ಪರ್ಟ್ಸ್.

ಎಣ್ಣೆ ಹೊಡೆಯೋ ಪಂಜಾಬಿ ಹುಡುಗೀನ ಏನಂತಾರೆ?
-ಪಂಜಾಬಿ ‘ಕುಡಿ’

ನನ್ನ ಸಪೋರ್ಟ್ ಬಿಜೆಪಿಗೆ- ಸುಮಲತಾ
-ಪೇಪರ್‌ಗಳಲ್ಲಿ ಹೆಡ್ ಲೈನ್ -ಸುಮಲತ ಕಮಲದv