Saturday, 14th December 2024

’5ಜಿ’ ತಂತ್ರಜ್ಞಾನದತ್ತ ಭಾರತದ ಹೆಜ್ಜೆ !

ವೀಕೆಂಡ್ ವಿತ್ ಮೋಹನ್

camohanbn@gmail.com

ಹತ್ತು ವರ್ಷಗಳ ಹಿಂದೆ ಭಾರತದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನದಲ್ಲಿ ಈ ಮಟ್ಟದ ಬದಲಾವಣೆಯಾಗುತ್ತದೆಯೆಂದು ಯಾರೂ ಊಹಿಸಿರಲಿಲ್ಲ. ‘ಅಂಗೈಯಲ್ಲಿ ಆಕಾಶ ತೋರಿಸುತ್ತಾನೆಂಬ’ ಗಾದೆ ಮಾತಿನಂತೆ ಸಣ್ಣ ಮೊಬೈಲ್ ಫೋನಿನಿಂದ ಕುಳಿತಲ್ಲಿಯೇ ಲಕ್ಷಾಂತರ ರುಪಾಯಿಯ ವ್ಯವಹಾರ ಮಾಡಬಹುದೆಂಬುದನ್ನು ಯಾರೂ ಊಹಿಸಿರಲಿಲ್ಲ.

ಇಂಟರ್ನೆಟ್ ಯುಗದಲ್ಲಿ ಜಗತ್ತಿನ ಮೂಲೆ ಮೂಲೆಗೆ ಮಾಹಿತಿಗಳು ಕ್ಷಣಾರ್ಧದಲ್ಲಿ ತಲುಪು ತ್ತಿವೆ. ಒಂದು ಕಾಲದಲ್ಲಿ ವಿದ್ಯುತ್ ಬಿಲ್ ಪಾವತಿಸಲು ಗಂಟೆಗಟ್ಟಲೆ ಕ್ಯೂನಲ್ಲಿ ನಿಲ್ಲಬೇ ಕಿತ್ತು. ದೂರವಾಣಿ ಬಿಲ್ ಕಟ್ಟಲು ದಿನಗಟ್ಟಲೆ ನಿಂತಿರುವ ನೆನಪಿನ್ನೂ ಮಾಸಿಲ್ಲ. ಈಗ ಕ್ಷಣಾರ್ಧದಲ್ಲಿ ಕುಳಿತಲ್ಲಿಯೇ ಹಣವನ್ನು ಪಾವತಿಸಬಹುದು. ಇಂಟರ್ನೆಟ್ ಮೂಲಕ ಇಡೀ ವಿಶ್ವವೇ ಅಂಗೈ ಯಲ್ಲಿ ಸಿಗುವಂತಾಗಿದೆ. 2ಜಿ ಆಯಿತು. ನಂತರ 3ಜಿ ಬಂತು. ಆಮೇಲೆ 4ಜಿ. ತಂತ್ರಜ್ಞಾನದ ಮುಂದುವರಿದ ಭಾಗವಾಗಿ ಈಗ 5ಜಿ ಬರುತ್ತಿದೆ.

‘ಕೃತಕ ಬುದ್ಧಿಮತ್ತೆ’ ಯ ಕಾಲದಲ್ಲಿ ಎರಡು ಯಂತ್ರಗಳ ನಡುವೆ ಸಂವಹನ ನಡೆಸಲು 5ಜಿ ತಂತ್ರಜ್ಞಾನ ಅತ್ಯವಶ್ಯ. ಕಾರ್ಖಾನೆ ಗಳಲ್ಲಿ ಮನುಷ್ಯ-ಮನುಷ್ಯ ಮಾತನಾಡಿಕೊಂಡು ಕೆಲಸ ಮಾಡುವ ಕಾಲ ಹೋಗಿ ಎರಡು ಯಂತ್ರಗಳು ತಮ್ಮ ನಡುವೆ ಸಂವಹನ ನಡೆಸಿ ಕಾರ್ಯನಿರ್ವಹಿಸುವ ತಂತ್ರಜ್ಞಾನಗಳು ಸಿದ್ಧವಾಗಿವೆ. ಅಮೆರಿಕದಲ್ಲಿ ಕುಳಿತಿರುವ ವೈದ್ಯರು ಭಾರತದಲ್ಲಿನ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡುತ್ತಾರೆ. ಈ ತಂತ್ರಜ್ಞಾನ ಯಶಸ್ವಿಯಾಗ ಬೇಕಾದರೆ ಅತ್ಯಂತ ವೇಗವಾಗಿ ಚಲಿಸುವ ಇಂಟರ್ನೆ ಟ್ಟಿನ ಅಗತ್ಯವಿದೆ.

ದೂರವಾಣಿಯ ಮೂಲಕ ವೈದ್ಯ ಸಲಹೆಗಳನ್ನು ನೀಡುವ ತಂತ್ರeನ ಈಗಾಗಲೇ ಚಾಲ್ತಿಯಲ್ಲಿದ್ದರೂ, ಕೆಲವೊಂದು ಸಲಹೆ ಗಳನ್ನು ನೀಡಲು ಮತ್ತಷ್ಟು ವೇಗದ ಇಂಟರ್ನೆಟ್ ಅವಶ್ಯಕತೆಯಿದೆ. ಮೊಬೈಲ್ ನಲ್ಲಿನ ಕೇವಲ ಒಂದು ‘ಅಪ್ಲಿಕೇಶನ್’ ಮೂಲಕ ರಕ್ತ ಪರೀಕ್ಷೆ ಹಾಗೂ ದೇಹದಲ್ಲಿನ ಸಕ್ಕರೆ ಅಂಶ ಪರಿಶೀಲಿಸುವ ತಂತ್ರಜ್ಞಾನಗಳೂ ಬಂದಿವೆ. ಇಂಟರ್ನೆಟ್ ಸೇವೆಯಗುತ್ತಿರುವ ದಿನನಿತ್ಯದ ಬದಲಾವಣೆಯನ್ನು ಬಹಳ ವೇಗವಾಗಿ ಅಳವಡಿಸಿಕೊಳ್ಳುತ್ತಿರುವ ವೈದ್ಯಕೀಯ ಕ್ಷೇತ್ರಕ್ಕೆ ಮತ್ತಷ್ಟು ವೇಗದ  ಇಂಟರ್ನೆಟ್ ಸೇವೆ ಒದಗಿಸಿದರೆ ಮತ್ತಷ್ಟು ಕ್ರಾಂತಿಕಾರಕ ಬದಲಾವಣೆಗಳನ್ನು ನಿರೀಕ್ಷಿಸಬಹುದು.

ಜಗತ್ತಿನ ಮುಂದುವರಿದ ರಾಷ್ಟ್ರಗಳು ‘ಸ್ಮಾರ್ಟ್ ಕಾರ್ಖಾನೆ’ ಗಳೆಡೆಗೆ ಸಾಗುತ್ತಿವೆ. ದೊಡ್ಡ ದೊಡ್ಡ ಕಾರುಗಳ ತಯಾರಿಕೆ ಉದ್ದಿಮೆ ಗಳಲ್ಲಿ ‘ರೋಬೋಟ್’ಗಳನ್ನು ಬಳಸಿ ಕಾರಿನ ಪ್ರಮುಖ ಭಾಗಗಳನ್ನು ಉತ್ಪಾದಿಸುತ್ತಿವೆ. ದೂರದ ಊರಿನಲ್ಲಿ ಕುಳಿತು ಮೊಬೈಲ್ ಅಪ್ಲಿಕೇಶನ್ ಮೂಲಕ ತನ್ನ ಕಾರ್ಖಾನೆಯ ಇಡೀ ಪ್ರಕ್ರಿಯೆಯನ್ನು ಮಾಲೀಕ ನಿಯಂತ್ರಿಸುವ ಕಾಲಕ್ಕೆ 5ಜಿ ಇಂಟರ್ನೆಟ್ ಸೇವೆಯ ಅಗತ್ಯವಿದೆ. ಇನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ತಂತ್ರಜ್ಞಾನಗಳ ಬಳಕೆ ಕೋವಿಡ್ ಸಮಯದಲ್ಲಿ ಉತ್ತುಂಗದಲ್ಲಿತ್ತು.

ರಿಲಾಯನ್ಸ್ ಸಂಸ್ಥೆಯ ಅಂಬಾನಿ ಕಡಿಮೆ ಬೆಲೆಯಲ್ಲಿ ಇಂಟರ್ನೆಟ್ ಸೇವೆ ನೀಡದಿದ್ದಿದ್ದರೆ, ಕೋವಿಡ್ ಸಮಯದಲ್ಲಿ ಮಕ್ಕಳ ಶೈಕ್ಷಣಿಕ ಭವಿಷ್ಯ ಅಧೋಗತಿಯಾಗುತ್ತಿತ್ತು. ಮಾತು ಮಾತಿಗೂ ಅಂಬಾನಿಯನ್ನು ರಾಜಕೀಯಕ್ಕೆ ಎಳೆತರುವ ಕಾಂಗ್ರೆಸ್, ಅವರ ಇಂಟರ್ನೆಟ್ ಸೇವೆಯಿಂದ ಶಾಲಾ ಮಕ್ಕಳಿಗೆ ಆದ ಅನುಕೂಲದ ಬಗ್ಗೆ ಹೇಳುವುದಿಲ್ಲ. ಕರೋನಾ ಕಾಲಘಟ್ಟಕ್ಕಿಂತಲೂ ಮುಂಚಿತ ವಾಗಿ ಭಾರತದಲ್ಲಿ ಆನ್‌ಲೈನ್ ಶಿಕ್ಷಣ ಕ್ಷೇತ್ರಕ್ಕೆ ಬಿಲಿಯನ್ ಗಟ್ಟಲೆ ಬಂಡವಾಳ ಹರಿದು ಬಂದಿತ್ತು.

ಬೈಜೂಸ್ ಕಂಪನಿಗಳು ದೂರದ ಊರಿನ ಮಕ್ಕಳಿಗೆ ತಮ್ಮ ಮನೆಯಲ್ಲಿಯೇ ಬೋಧನೆ ಮಾಡುವ ಕಲಿಕಾ ವಿಡಿಯೋಗಳನ್ನು ಒದಗಿಸುತ್ತ ಬಂದಿವೆ. ಆನ್‌ಲೈನ್ ಶಿಕ್ಷಣ ವ್ಯವಸ್ಥೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಹತ್ವ ಪಡೆದುಕೊಳ್ಳುವುದರಿಂದ 5ಜಿ ತಂತ್ರ ಜ್ಞಾನದ ಅವಶ್ಯಕತೆ ಇದ್ದೇ ಇದೆ. ‘ಸ್ಮಾರ್ಟ್ ಶಾಲೆ’, ‘ಸ್ಮಾರ್ಟ್ ಕಾಲೇಜು’, ‘ಸ್ಮಾರ್ಟ್ ವಿಶ್ವವಿದ್ಯಾಲಯ’ಗಳೇ ಶುರುವಾಗ ಬಹುದು.

ಎಲ್ಲವನ್ನು ಕುಳಿತಲ್ಲಿಯೇ ನಿಯಂತ್ರಿಸುವ ತಂತ್ರಜ್ಞಾನ ಬಳಕೆಯಲ್ಲಿ 5ಜಿ ಪ್ರಮುಖ ಪಾತ್ರ ವಹಿಸುತ್ತದೆ. ವಿದೇಶಗಳಲ್ಲಿ ಚಾಲಕ ನಿಲ್ಲದ ಕಾರುಗಳು ರಸ್ತೆಗಿಳಿಯುತ್ತಿವೆ. ಅಮೆರಿಕದ ‘ಟೆಸ್ಲಾ’ ಕಂಪನಿ ಈಗಾಗಲೇ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ. ಭಾರತದಲ್ಲಿಯೂ ಮುಂದಿನ ದಿನಗಳಲ್ಲಿ ಚಾಲಕ ರಹಿತ ಕಾರುಗಳು ಬರಬಹುದು. ಇಂತಹ ಕಾರುಗಳನ್ನು ನಿಯಂತ್ರಿಸಲು ವೇಗವಾದ ಇಂಟರ್ನೆಟ್ ಸೇವೆಯ ಅವಶ್ಯಕತೆ ಇದ್ದೇ ಇದೆ.

‘ಡಿಜಿಟಲ್ ಇಂಡಿಯಾ’ಅಡಿಯಲ್ಲಿ ಭಾರತದಲ್ಲುಂಟಾದಂತಹ ಕ್ರಾಂತಿಯನ್ನು ಯಾರೂ ಮರೆಯುವಂತಿಲ್ಲ. ಜೇಬಿನಲ್ಲಿ ಹಣ ಇಟ್ಟುಕೊಂಡು ಹೊರಗೆ ಹೋಗಬೇಕಿಂತಿಲ್ಲ. ಮೊಬೈಲ್ ಫೋನ್ ಜೇಬಿನಲ್ಲಿದ್ದರೆ ಸಾಕು; ಸಾವಿರಾರು ರೂಪಾಯಿಯ ವ್ಯವಹಾರ ಮಾಡಬಹುದು. ಹಳ್ಳಿಗಳ ಗೂಡಂಗಡಿಗಳ ಬಳಿ ಇಂದು ‘ಗೂಗಲ್ ಪೇ’, ‘ಫೋನ್ ಪೆ’ಗಳಿವೆ. ದೇವಸ್ಥಾನದ ಮುಂದೆ ಚಪ್ಪಲಿ ಕಾಯುವವರ ಬಳಿ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಇದೆ.

ಸಂಸತ್ತಿನಲ್ಲಿ ಕಾಂಗ್ರೆಸಿನ ಚಿದಂಬರಂ ‘ಡಿಜಿಟಲ್ ಇಂಡಿಯಾ’ ಬಗ್ಗೆ ಅಣಕವಾಡಿದ್ದರು. ಆದರೆ ಇಂದು ದೇಶದ ಮೂಲೆಮೂಲೆ ಗಳಿಗೆ ಈ ತಂತ್ರಜ್ಞಾನ ತಲುಪಿದೆ. ಕಳೆದ ವರ್ಷದ ಕೇಂದ್ರ ಸರಕಾರದ ಆಯವ್ಯಯದಲ್ಲಿ ಮೂಲಭೂತ ಸೌಕರ್ಯಕ್ಕೆ ಸುಮಾರು
100 ಲಕ್ಷ ಕೋಟಿ ರು.ಗಳಷ್ಟು ಬಂಡವಾಳಕ್ಕೆ ಒತ್ತುನೀಡುವುದಾಗಿ ಹೇಳಲಾಗಿತ್ತು. ಕೇಂದ್ರ ಸರಕಾರ ಬಂಡವಾಳ ಹಿಂತೆಗೆತ, ತೆರಿಗೆ ಹಣದ ಮೂಲಗಳ ಜತೆಗೆ, 5ಜಿ ತರಂಗಾಂತರದ ಹರಾಜಿನಿಂದ ಬರುವ ಹಣದ ಮೂಲವನ್ನು ಬಳಸಿಕೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿತ್ತು.

ಇದೀಗ ಜುಲೈ 26 ರಿಂದ 5ಜಿ ತರಂಗಾಂತರದ ಹರಾಜು ಪ್ರಕ್ರಿಯೆ ನಡೆಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಹರಾಜಿನಿಂದ ಸುಮಾರು 4.30 ಕೋಟಿ ರು.ಗಳನ್ನು ನಿರೀಕ್ಷಿಸಲಾಗಿದೆ. 5ಜಿ ತಂತ್ರಜ್ಞಾನವನ್ನು ಭಾರತದಲ್ಲಿ ಅನಷ್ಠಾನಗೊಳಿಸುವ ನಿಟಿಲ್ಲಿ ಆಗಬೇಕಿದ್ದಂತಹ ಪರೀಕ್ಷೆಗಳು ಈಗಾಗಲೇ ಮುಗಿದುಹೋಗಿವೆ.  IISc,IIT ನಂತಹ ಪ್ರತಿಷ್ಠಿತ ಸಂಸ್ಥೆ ಗಳು 5ಜಿ ಅನುಷ್ಠಾನ ದ ಪರೀಕ್ಷೆಯಲ್ಲಿ ಭಾಗವಹಿಸಿದ್ದು ಮೊದಲ ಹಂತದಲ್ಲಿ ದೊಡ್ಡ ದೊಡ್ಡ ನಗರಗಳಲ್ಲಿ ಈ ತಂತ್ರಜ್ಞಾನ ವನ್ನು ಅನುಷ್ಠಾನಗೊ ಳಿಸಲು ನಿರ್ಧರಿಸಲಾಗಿದೆ.

ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್,ಲಖನೌ, ಅಹಮದಾಬಾದ್ ಮೊದಲ ಹಂತದ ನಗರಗಳಾಗಿವೆ. ಮೂರು ವಿಭಾಗಗಳಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ‘ಕಡಿಮೆ’, ‘ಮಧ್ಯಂತರ’ ಹಾಗೂ ‘ಹೆಚ್ಚು’ ತರಂಗಾಂತರ ವಿಭಾಗಗಳು ಒಳಪಟ್ಟಿವೆ. ಈಗಾಗಲೇ ನಷ್ಟದಲ್ಲಿರುವ ದೂರಸಂಪರ್ಕ ಕ್ಷೇತ್ರದ ಕಂಪನಿಗಳನ್ನು ಮೇಲೆತ್ತಲು 5ಜಿ ತಂತ್ರಜ್ಞಾನ ಸಹಕಾರಿ
ಯಾಗಿದ್ದು ಏರ್‌ಟೆಲ್, ವೊಡಾಫೋನ್, ಜಿಯೋ ಕಂಪನಿಗಳು ಈ ಹರಾಜಿನಲ್ಲಿ ಭಾಗವಹಿಸಲಿವೆ.

ಭಾರತ 2ಜಿ ತಂತ್ರಜ್ಞಾನ ಅಳವಡಿಸಿಕೊಂಡ ಸಂದರ್ಭದಲ್ಲಿ ಜಗತ್ತಿನ ಮುಂದುವರಿದ ದೇಶಗಳು 4ಜಿ ತಂತ್ರಜ್ಞಾನದಲ್ಲಿ ಕೆಲಸ ಮಾಡುತ್ತಿದ್ದವು. ಜಗತ್ತಿನ ವೇಗಕ್ಕನುಗುಣ ವಾಗಿ ಭಾರತ ಇಂಟರ್ನೆಟ್ ವೇಗ ಹೆಚ್ಚಿಸಿ ಕೊಳ್ಳುವುದಿಲ್ಲವೆಂದು ಮುಂದುವರಿದ ದೇಶ ಗಳು ಭಾವಿಸಿದ್ದವು. ಚೀನಾ ತನ್ನ ಮೊಟ್ಟಮೊದಲ 6ಜಿ ಆಧಾರಿತ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕಳುಹಿಸಿದೆ.

ಯೂರೋಪಿನ ನಾರ್ವೆ ತನ್ನ ದೇಶದ ನಾಗರಿಕರಿಗೆ 7ಜಿ ವೇಗದಲ್ಲಿ ಇಂಟರ್ನೆಟ್ ಒದಗಿಸುತ್ತಿದೆ. ರಷ್ಯಾ 2024ಕ್ಕೆ 6ಜಿ ಸೇವೆ ಒದಗಿಸುವ ಗುರಿಯನ್ನು ಹೊಂದಿದೆ. ಇತ್ತಕಡೆ ನೋಡನೋಡುತ್ತಲೇ ಭಾರತ 2ಜಿ ಇಂದ 5ಜಿ ವೇಗಕ್ಕೆ ಜಿಗಿದಿದೆ. 2ಜಿ ತಂತ್ರಜ್ಞಾನದ ಸಮಯದಲ್ಲಿ ಹಿಂದುಳಿದ್ದ ಭಾರತದ ಕಳೆದ 8 ವರ್ಷಗಳಲ್ಲಿ ಬಹಳಷ್ಟು ವೇಗವನ್ನು ಪಡೆದುಕೊಂಡಿದೆ. ಒಂದು ತಿಂಗಳ ಹಿಂದೆ 5ಜಿ ಟೆಸ್ಟಿಂಗ್ ಬೆಡ್‌ನಲ್ಲಿ ಯಶಸ್ವಿಯಾಗಿ 5ಜಿ ತಂತ್ರಜ್ಞಾನದ ಪರೀಕ್ಷೆ ನಡೆದಿದ್ದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದೆ.

‘ಸ್ಟಾರ್ಟ್  ಅಪ್’ ಕಂಪನಿಗಳು, ತಂತ್ರಜ್ಞಾನ ಆಧಾರಿತ ಕಂಪನಿಗಳು ಈ ಟೆಸ್ಟಿಂಗ್ ಬೆಡ್ ಬಳಸಿಕೊಂಡು ತಮ್ಮ ನೂತನ ತಂತ್ರ ಜ್ಞಾನಗಳನ್ನು ಪರೀಕ್ಷೆ ಮಾಡಬಹುದು. ಸುಮಾರು 220 ಕೋಟಿ ವೆಚ್ಚದಲ್ಲಿ ಟೆಸ್ಟಿಂಗ್ ಬೆಡ್ ನಿರ್ಮಾಣ ಮಾಡಲಾಗಿದ್ದು,
ಭಾರತದ ಕಂಪನಿಗಳು ತಮ್ಮ ತಂತ್ರಜ್ಞಾನದ ಪರೀಕ್ಷೆಗಾಗಿ ವಿದೇಶಕ್ಕೆ ತೆರಳಬೇಕಾದ ಅವಶ್ಯಕತೆ ಇಲ್ಲ. ಕೆಲ ಸಂಸ್ಥೆಗಳು ಈಗಾಗಲೇ ಆಯ್ದ ನಗರಗಳಲ್ಲಿ 5ಜಿ ತಂತ್ರಜ್ಞಾನದ ಪರೀಕ್ಷೆಗಳನ್ನು ನಡೆಸಿವೆ.

2ಜಿ ತರಂಗಾಂತರ ಹಂಚಿಕೆಯಲ್ಲಿ ಸುಮಾರು 2 ಲಕ್ಷ ಕೋಟಿ ರು.ನಷ್ಟು ಅವ್ಯವಹಾರ ನಡೆಸಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ, ಆಧುನಿಕ ತಂತ್ರಜ್ಞಾನದ ವಿಷಯದಲ್ಲಿ ಯೋಚಿಸಿರಲಿಲ್ಲ. ಜಗತ್ತಿನ ವೇಗಕ್ಕನುಗುಣವಾಗಿ ಭಾರತ ಬೆಳೆಯಬೇಕೆಂಬ ಹಂಬಲ ಅವರಲ್ಲಿದ್ದಿದ್ದರೆ ದೇಶದಲ್ಲಿ 5ಜಿ ಇಂಟರ್ನೆಟ್ ಸೇವೆ ಜಾರಿಗೆ ಬಂದು ಬಹಳ ವರ್ಷಗಳೇ ಆಗಿರುತ್ತಿತ್ತು. 5ಜಿ ತರಂಗಾಂತರದ ಹರಾಜು ಪ್ರಕ್ರಿಯೆಯನ್ನು ಬಹಳ ಪಾರದರ್ಶಕವಾಗಿ ನಡೆಸಲಾಗುತ್ತದೆ.

5ಜಿ ತಂತ್ರಜ್ಞಾನದ ಅಳವಡಿಕೆಯಿಂದ ಕೆಲವೊಂದಿಷ್ಟು ಅನನುಕೂಲಗಳನ್ನು ಆರಂಭಿಕ ದಿನಗಳಲ್ಲಿ ಎದುರಿಸಬೇಕಾಗುತ್ತದೆ. ಆರಂಭಿಕ ದಿನಗಳಲ್ಲಿ ಕೇವಲ ಆಯ್ದ ನಗರಗಳಲ್ಲಿ ಮಾತ್ರ 5ಜಿ ತಂತ್ರಜ್ಞಾನವನ್ನು ಅನುಷ್ಠಾನಗೊಳಿಸುತ್ತಿರುವುದರಿಂದ ಕೆಳಸ್ತರದ ನಗರಗಳಲ್ಲಿ ನೆಟ್ ವರ್ಕ್ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಹಳ್ಳಿಗಳನ್ನು ತಲುಪಲು ಕೆಲವೊಂದಿಷ್ಟು ಮೂಲಭೂತ ಸೌಕರ್ಯಗಳ ಕೊರತೆಯಿರುವುದರಿಂದ ಗ್ರಾಮಗಳಿಗೆ 5ಜಿ ನೆಟ್ ವರ್ಕ್ ತಲುಪಲು ಸಮಯ ಹಿಡಿಯುತ್ತದೆ.

ಕೆಲವು ಕಡೆಗಳಲ್ಲಿ ಮೊಬೈಲ್ ಟವರ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕಿದೆ. ಕೆಲವೆಡೆ ಮೊಬೈಲ್ ಟವರ್ ಗಳನ್ನು 5ಜಿ ತಂತ್ರಜ್ಞಾನ ಕ್ಕನುಗುಣವಾಗಿ ನವೀಕರಿಸಬೇಕಿದೆ. ಒಮ್ಮೆ 5ಜಿ ತರಂಗಾಂತರದ ಹರಾಜು ಪ್ರಕ್ರಿಯೆ ಮುಗಿದು ಹಂಚಿಕೆಯಾದ ನಂತರ, ಮೊಬೈಲ್ ಕಂಪನಿಗಳು ತಮಗೆ ಹಂಚಿಕೆಯಾದ ತರಂಗಾಂತರಗಳನ್ನು ಬಳಸಿಕೊಂಡು ಮೂಲಭೂತ ಸೌಕರ್ಯವನ್ನು ಅಭಿವೃದ್ಧಿಪಡಿಸಲು ಬಂಡವಾಳವನ್ನು ಆಕರ್ಷಿಸುತ್ತವೆ. ಕೆಲವರು ಈಗಾಗಲೇ ಬಂಡವಾಳ ಹೂಡಿ ೫ಜಿ ತರಂಗಾಂತರದ ಹಂಚಿಕೆಗಾಗಿ ಕಾಯು ತ್ತಿದ್ದಾರೆ.

5ಜಿ ತಂತ್ರಜ್ಞಾನದ ತರಂಗಾಂತರದ ಪ್ರತಿಕೂಲ ಪರಿಣಾಮವು ಪಕ್ಷಿಗಳ ಮೇಲೆ ಬೀಳುತ್ತದೆಯೆಂದು ಹಲವರು ಆತಂಕ ವ್ಯಕ್ತ ಪಡಿಸಿದ್ದಾರೆ. ರಜನಿಕಾಂತ್ ಅಭಿನಯದ ‘ರೋಬೊ-2.0’ ಸಿನಿಮಾದಲ್ಲಿ ಪಕ್ಷಿಯೊಂದು ಮೊಬೈಲ್ ತರಂಗಾಂತರದ ಪ್ರತಿಕೂಲ ಪರಿಣಾಮವಾಗಿ ತನ್ನ ಸಂತತಿ ಯನ್ನು ಕಳೆದುಕೊಂಡು, ಸೇಡು ತೀರಿಸಿಕೊಳ್ಳುವ ಕಥೆಯನ್ನು ನೋಡಿರಬಹುದು. ಆದರೆ ತಂತ್ರಜ್ಞಾನದ ಯುಗದಲ್ಲಿ ಪರಿಸರ ಹಾಗೂ ಅಭಿವೃದ್ಧಿ ಎರಡನ್ನೂ ಸಮತೋಲನವಾಗಿ ನಿಭಾಯಿಸಬೇಕಿರುವುದರಿಂದ, ತಂತ್ರಜ್ಞಾನದ ಅನುಷ್ಠಾನಕ್ಕೆ ಸಮಾನಾಂತರವಾಗಿ ಪಕ್ಷಿಗಳ ರಕ್ಷಣೆಯು ಮುಖ್ಯವಾಗಿದೆ.

ಪ್ರಸ್ತುತ ಹಲವರು ಬಳಸುತ್ತಿರುವ ಮೊಬೈಲ್‌ಗಳು 5ಜಿ ತಂತ್ರಜ್ಞಾನಕ್ಕನುಗುಣವಾಗಿರುವುದಿಲ್ಲ. ಕೇವಲ ಕೆಲವು ಬ್ರಾಂಡಿನ
ಮೊಬೈಲ್‌ಗಳು ಮಾತ್ರ 5ಜಿ ತಂತ್ರಜ್ಞಾನವನ್ನು ಅಳವಡಿಸಿಕೊಂಡಿವೆ. ನೂತನವಾಗಿ ಉತ್ಪಾದನೆಯಾಗುತ್ತಿರುವ ಮೊಬೈಲ್‌ ಗಳಲ್ಲಿ ಈಗಾಗಲೇ 5ಜಿ ತಂತ್ರಜ್ಞಾನ ಅಳವಡಿಕೆ ಯಾಗುತ್ತಿದೆ. ಸಾಫ್ಟ್ ವೇರ್ ಆಧಾರಿತ ಮೊಬೈಲ್‌ಗಳಲ್ಲಿ ನೂತನ ಅಪ್ ಡೇಟ್‌ಗಳ ಮೂಲಕ ನೂತನ 5ಜಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಅವಕಾಶವಿರಬಹುದು.

ಕೇಂದ್ರ ಸರಕಾರದ ಬೊಕ್ಕಸದ ಹಣಕಾಸು ಕ್ರೋಡೀಕರಣ, ಮಾಹಿತಿ- ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದುವರಿದ ತಂತ್ರಜ್ಞಾನ, ಹಳ್ಳಿ ಹಳ್ಳಿಗೂ ವೇಗದ ಇಂಟರ್ನೆಟ್ ಸೇವೆ, ವಿದೇಶಿ ಬಂಡವಾಳ ಆಕರ್ಷಣೆ, ನೆಲಮಟ್ಟದಲ್ಲಿ ಸರಕಾರದ ಯೋಜನೆಗಳ ಅನುಷ್ಠಾನ, ವಿಜ್ಞಾನ, ವಿದ್ಯಾಭ್ಯಾಸ, ವೈದ್ಯಕೀಯ ವಲಯಗಳ ಮುಂದುವರಿದ ತಂತ್ರಜ್ಞಾನದ ಅಳವಡಿಕೆಯ ದೃಷ್ಟಿಯಿಂದ 5ಜಿ ತರಂಗಾಂತರದ ಹರಾಜು ಪ್ರಕ್ರಿಯೆ ಮಹತ್ವದ ವಿಷಯವಾಗಿದೆ.