Saturday, 14th December 2024

ಗೂಳಿ- ಅವ್ರು ನನಗೆ ಒಳಗೆ ಬಿಡ್ಲಿಲ್ಲ: ಮೋದಿ- ಯೇ ತೋ ಹೋತಾ ರೆಹ್ತಾ ಹೈ

ತುಂಟರಗಾಳಿ

ಸಿನಿಗನ್ನಡ

ಸೋಷಿಯಲ್ ಮೀಡಿಯಾ ಗಳಲ್ಲಿ 90’s ಕಿಡ್ಸ್ ಎಷ್ಟು ಫೇಮಸ್ಸೋ, ಹಾಗೇ ಚಿತ್ರರಂಗ ದಲ್ಲಿ ಈ 80’s ಕಿಡ್ಸ್ ಅಷ್ಟೇ ಫೇಮಸ್. ಯಾಕಂದ್ರೆ ಆಗಾಗ ಇದು ೮೦ರ ದಶಕದ ಕಥೆ ಅಂತ ಹೇಳಿಕೊಳ್ಳೋ ಅನೇಕ ಸಿನಿಮಾಗಳು ಬರ್ತಾನೇ ಇರ್ತಾವೆ. ಈ ವಾರ ಬಿಡುಗಡೆ ಆದ ಕೈವ ಸಿನಿಮಾ ನೋಡಿದಾಗ ಆ ದಿನ ಗಳು ನೆನಪಾಗಬಹುದು. ಅಂದ್ರೆ ೮೦ರ ದಶಕದ ಆ ದಿನಗಳು ಅಂತಲ್ಲ, ಇದೇ ರೀತಿಯ ಆ ದಿನಗಳು ಸಿನಿಮಾ ನೆನಪಾಗಬಹುದು ಅಂತ ಹೇಳಿದ್ದು. ಇಂಥ ೮೦ರ ದಶಕದ ಸಿನಿಮಾಗಳಲ್ಲಿ ನಮಗೆ ವಿಶುವಲಿ ಎದ್ದು ಕಾಣೋದು ಅಂದ್ರೆ ಉದ್ದ ಕೂದಲಿನ ಹ್ಟೇಊ ಸ್ಟೈಲ್ ಇಟ್ಕೊಂಡು ಸುತ್ತ ಹುಡುಗರನ್ನ ಹಾಕ್ಕೊಂಡ್ ಓಡಾಡೋ ಜುಟ್ಟುಗಳು ಮತ್ತು ಅಲ್ಲಲ್ಲಿ ಕಾಣೋ ಹಳೆಯ ಸಿನಿಮಾ ಪೋಸ್ಟರ್‌ಗಳು, ಒಂದೆರಡು ಹಳೆಯ ಕಾಲದ ಅಂಗಡಿಗಳು.

ಈ ಚಿತ್ರದಲ್ಲೂ ಅದನ್ನ ಶ್ರದ್ಧೆಯಿಂದ ಮಾಡಿದ್ದಾರೆ. ಸಿನಿಮಾ ತಂಡ ಇದು ಸತ್ಯ ಕತೆ ಅಂತ ಹೇಳಿದೆ. ಆದ್ರೆ ಅವ್ರು ಸತ್ಯ ಹೇಳಿದ್ದಾರಾ, ಇಲ್ಲ ಬರೀ ಕಥೆ ಹೇಳಿ ದ್ದಾರ  ಗೊತ್ತಿಲ್ಲ. ಆದ್ರೆ ಸತ್ಯವಾಗ್ಲೂ ಬರವಣಿಗೆ ಮತ್ತು ಎಕ್ಸಿಕ್ಯೂಷನ್ ವಿಷಯದಲ್ಲಿ ಒಂದು ನೀಟ್ ಸಿನಿಮಾ ಮಾಡಿದ್ದಾರೆ. ಇದು 80’s ಕಿಡ್ಸ್ ಸಿನಿಮಾ. ಹಂಗಂತ ಮಕ್ಕಳು ನೋಡೋ ಸಿನಿಮಾ ಖಂಡಿತಾ ಅಲ್ಲ. ರೇಪ್ ಮತ್ತು ಆಸಿಡ್ ಅಟ್ಯಾಕ್ ಸಂತ್ರಸ್ತರ ಮೇಲೆ ತಮಗೆ ತುಂಬಾ ಕನ್ಸರ್ನ ಇದೆ ಅಂತ ತೋರಿಸೋಕೆ ಹೋಗಿ ನಿರ್ದೇಶಕ ಜಯತೀರ್ಥ ಅತಿರೇಕ ಮಾಡಿದ್ದಾರೆ. ತನ್ನ ಹುಡುಗಿ ಮೇಲೆ ಅತ್ಯಾಚಾರ, ಆಸಿಡ್ ಅಟ್ಯಾಕ್ ಆದಾಗ ಇದರಲ್ಲಿ ಯಾರ ಕೈವಾಡ ಅಂತ ಹುಡುಕೋ ಕೈವ ಕೊನೆಗೆ ಅವರನ್ನ ಕೈಮಾ ಮಾಡ್ತಾನೆ.

ಇದರಲ್ಲಿ ಕ್ರೌರ್ಯ ಎದ್ದು ಕಾಣುತ್ತದೆ. ಮೊದಲನೇ ಕೊಲೆ ಅಂತೂ ಕೈವಾ ಉಂಡೆ. ಕೊನೆಯಲ್ಲೂ ಬರ್ಬರ ಕೊಲೆ ಮಾಡುವಾಗ ನಾಯಕ ಸ್ಕಿನ್ ಔಟಾ,
ಬರ್ನಿಂಗಾ ಅಂತ ಕೇಳಲ್ಲ ಅಷ್ಟೇ. ಒಟ್ಟಾರೆ, ಕೈವ ಚಿತ್ರದಲ್ಲಿ ಅಂಡರ್ ವರ್ಲ್ಡ್ಬ್ಯಾಕ್ ಡ್ರಾಪ್ ಇದ್ರೂ ಇದು ಅಂಡರ್ ವಲ್ಡ ಕಥೆ ಅಲ್ಲ, ಹಾಗಂತ ಔಟ್ ಆಫ್ ದಿವಲ್ಡ್ ಅನ್ನುವಂಥದ್ದೂ ಏನಿಲ್ಲ. ಇದೊಂದು ಮಾಮೂಲಿ ಸೇಡಿನ ಕಥೆ. ಇದು ಅವೆಂಜರ್ಸ್ ಥರಪ್ಯಾನ್ ವರ್ಲ್ಡ್ಸಿನಿಮಾ ಅಲ್ಲದಿದ್ರೂ, ವಿಲನ್‌ ಗಳ ಕಥೆ ಮುಗಿಸಿ ಸೇಡು ತೀರಿಸಿ ಕೊಳ್ಳೋ ರಿವೆಂಜರ್ಸ್ ಎಂಡ್ ಗೇಮ್ ಸಿನಿಮಾ.

ಲೂಸ್ ಟಾಕ್ – ಗೂಳಿಹಟ್ಟಿ ಶೇಖರ್‌
ಏನ್ ಸಾರ್, ಆರೆಸ್ಸೆಸ್ ನೋರು ನಿಮ್ಮನ್ನ ಮ್ಯೂಸಿಯಂ ಒಳಗೆ ಬಿಡ್ಲಿಲ್ಲ ಅಂತ ಮುನಿಸಿಕೊಂಡಿದ್ದೀರಂತೆ?

– ಮತ್ತೆ ಅವ್ರ್ ಗೂಳಿನೇ ಹಟ್ಟಿ ಒಳಗೆ ಬಿಟ್ಕಳಲ್ಲ ಅಂದ್ರೆ ಬಿಟ್ಬಿಡಕಾಗುತ್ತಾ.. ನಮ್ಮನ್ನ ಅಷ್ಟು ಸುಲಭವಾಗಿ ಬಿಟ್ಕೊಟ್ರೆ ಹೆಂಗೆ?

ಆದ್ರೂ ಶೇರ್ ಮಾರ್ಕೆಟ್ ಗೂಳಿಗಿಂತ ಈ ಗೂಳಿನೇ ಜಾಸ್ತಿ ಸೌಂಡ್ ಮಾಡ್ತಾ ಇದೆ ಅಲ್ವಾ?
– ಅಯ್ಯೋ, ಇದು ಮಾಮೂಲಿ ಶೇರ್ ಮಾರ್ಕೆಟ್ ಗೂಳಿ ಅಲ್ಲ, ಶೇರಿಗೆ ಸವ್ವಾ ಶೇರು ಹಾಕ್ತಿನಿ, ಬಿಡಲ್ಲ..

ಆದ್ರೂ, ನಿಮ್ಮ ಆರೆಸ್ಸೆಸ್ ವಿರುದ್ಧ ನೀವೇ ಮಾತಾಡೋದು ಸರಿನಾ?
ಹೆಸರು ಮಾತ್ರ ಆರ್ ‘ಎಸ್ ಎಸ್’ ಅಂತ ಇಟ್ಕೊಂಡು, ಒಳಗೆ ಬರ್ಲಾ ಅಂದ್ರೆ ‘ನೋ, ನೋ’ ಅಂದ್ರೆ ಸುಮ್ನಿರಕಾಗುತ್ತೇನ್ರೀ?

ಇದರ ಬಗ್ಗೆ ಬಿ.ಎಲ್ ಸಂತೋಷ್ ಅವರಿಗೆ ಕಂಪ್ಲೇಂಟ್ ಮಾಡಿದ್ರಲ್ಲ, ಅವರಿಂದ ಏನಾದ್ರೂ ಉತ್ತರ ಬಂತಾ?
– ಅಲ್ರೀ ಗೂಳಿ, ಕಳೆದ ಚುನಾವಣೆಯಲ್ಲಿ ಜನ ನಿಮ್ಮನ್ನ ವಿಧಾನಸೌಧದ ಒಳಗೆ ಯಾಕೆ ಬಿಟ್ಕೊಳ್ಳಲಿಲ್ಲ ಅನ್ನೋದ್ರ ಬಗ್ಗೆ ಯೋಚನೆ ಮಾಡೋದ್ ಬಿಟ್ಟು,
ಅದ್ಯಾವುದೋ ಮ್ಯೂಸಿಯಂ ಒಳಗೆ ಬಿಟ್ಕೊಳ್ಳಲಿಲ್ಲ ಅನ್ನೋದ್ರ ಬಗ್ಗೆ ಯೋಚ್ನೆ ಮಾಡ್ತೀರಲ್ರೀ ಅಂತ ಬಯ್ದು ಕಳಿಸಿದ್ರು.

ಹೋಗ್ಲಿ ಕೊನೆಗೆ ಈ ವಿಷಯನಾ, ಮೋದಿ ಅವರಿಗೇ ಹೇಳಬೇಕಿತ್ತು ನೀವು..

– ಹೇಳಿದೆ, ಅವ್ರು ನಮ್ ಇಂಡಿಯನ್ ಕ್ರಿಕೆಟ್ ಟೀಮ್ ವರ್ಲ್ಡ್ ಕಪ್ ಸೋತಾಗ ಅವ್ರ್ ಡ್ರೆಸ್ಸಿಂಗ್ ರೂಮ್ ಗೆ ಹೋಗಿ ಸಮಾಧಾನ ಮಾಡಿದ ಥರಯೇ
ತೋ ಹೋತಾ ರೆಹ್ತಾ ಹೈ’ ಅಂದ್ಬಿಟ್ರು..
(ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್ಸ್
ಬಲ್ವಿಂದರ್ ಸಿಂಗ್ ಖೇಮು ಯಾವತ್ತೂ ಫೈವ್ ಸ್ಟಾರ್ ಹೊಟೇಲ್‌ಗಳ ಮುಖ ನೋಡಿದವನಲ್ಲ. ಒಂದು ಲಕ್ಕಿ ಡ್ರಾನಲ್ಲಿ ಅವನಿಗೆ ನಗರದ ಅತಿ ಪ್ರತಿಷ್ಟಿತ ಫೈವ್ ಸ್ಟಾರ್ ಹೊಟೇಲ್‌ನಲ್ಲಿ ಒಂದು ದಿನ ಕಳೆಯುವ ಉಚಿತ ಬಹುಮಾನ ಸಿಕ್ಕಿತು. ಫುಲ್ ಖುಷಿಯಾದ ಬಲ್ವಿಂದರ್ ಸಿಂಗ್ ಖೇಮು, ತನ್ನ ಹೆಂಡತಿ ಊರಿಗೆ ಹೋದ ದಿನ ಆ ಫೈವ್ ಸ್ಟಾರ್ ಹೊಟೇಲ್‌ನಲ್ಲಿ ಉಳಿದುಕೊಳ್ಳೋದು ಅಂತ ತೀರ್ಮಾನ ಮಾಡಿದ.

ಅವತ್ತು ಬಳಗ್ಗೆ ಹೊಟೇಲಿಗೆ ಹೋಗಿ ಚೆಕ್ ಇನ್ ಆಗಿ, ರೂಮ್‌ನಲ್ಲಿ ಸ್ನಾನ, ಊಟ ಮಾಡಿ ಕಿಟಕಿಯಿಂದ ಹೊರಗೆ ನೋಡಿದವನಿಗೆ ಸ್ವಿಮ್ಮಿಂಗ್ ಪೂಲ್  ಕಾಣಿಸಿತು. ಸರಿ ಅಂತ ಅಲ್ಲಿಂದ ಸೀದಾ ಪೂಲ್ ಬಳಿಗೆ ಬಂದು ಅಲ್ಲಿ ಪೂಲ್ ಪಕ್ಕದಲ್ಲಿ ಹಾಕಿದ್ದ ಉದ್ದನೆಯ ಬೆಂಚ್ ಮೇಲೆ ಮೇಲೆ ಮಲಗಿಕೊಂಡ. ಆಗ ಅಲ್ಲಿಗೆ ಬಂದ ಒಬ್ಬ ಫಾರಿನರ್ ಇವನನ್ನು ನೋಡಿ, ಹಾಯ, ಆರ್ ಯೂ ರಿಲ್ಯಾಕ್ಸಿಂಗ್?’ ಅಂತ ಕೇಳಿದ.

ಇಂಗ್ಲಿಷ್ ಸರಿಯಾಗಿ ಬರದ ಬಲ್ವಿಂದರ್ ಸಿಂಗ್ ಖೇಮು, ನೋ ಐ ಆಮ್ ಬಲ್ವಿಂದರ್ ಸಿಂಗ್’ ಅಂದ. ಅದಕ್ಕೆ ಆ ವಿದೇಶಿಗ ಫನ್ನಿ ಗೈ ಅಂತ ನಕ್ಕು ಹೊರಟ. ಆದ್ರೆ ಬಲ್ವಿಂದರ್ ಸಿಂಗ್ ಖೇಮುಗೆ ಅವನು ಯಾಕೆ ನಕ್ಕ ಅನ್ನೋದು ಅರ್ಥ ಆಗಲಿಲ್ಲ. ಅದೇ ಗೊಂದಲದಲ್ಲಿ ಅಲ್ಲಿಂದ ಎದ್ದು ಹೊರಟ, ಅಲ್ಲಿ ಸ್ವಲ್ಪ ಮುಂದೆ ಇನ್ನೊಬ್ಬ ಫಾರಿನರ್ ಅವನಂತೆಯೇ ಪೂಲ್ ಪಕ್ಕದ ಬೆಂಚ್‌ನಲ್ಲಿ ಮಲಗಿದ್ದ. ಅವನನ್ನು ನೋಡಿದ ಖೇಮು ಆರ್ ಯೂ ರಿಲ್ಯಾಕ್ಸಿಂಗ್?’ ಅಂತ ಕೇಳಿದ. ಅದಕ್ಕೆ ಆತ ಎಸ್’ ಅಂದ. ಇದ್ದಕ್ಕಿದ್ದಂತೆ ರಾಂಗ್ ಆದ ಖೇಮು ಹೇಳಿದ ಅಯ್ಯೋ ಮಂಗ್ ನನ್ಮಗನೇ, ನೀನ್ ಇಲ್ ಮಲ್ಕೊಂಡಿದ್ದೀಯಾ, ಅಲ್ಲಿ ನಿನ್ ಹುಡುಕ್ಕೊಂಡ್ ಯಾರೋ ಬಂದಿದ್ರು’

ಲೈನ್ ಮ್ಯಾನ್
ಉತ್ತರ ಭಾರತದ ೩ ರಾಜ್ಯಗಳಲ್ಲಿ ಬಿಜೆಪಿ ಗೆದ್ದಿದ್ದಕ್ಕೆ ಕರ್ನಾಟಕ ಕಾಂಗ್ರೆಸ್ ಪ್ರತಿಕ್ರಿಯೆ
– ಜನ ಪಟಾಕಿಗೆ ಬೆಂಕಿ ಹಚ್ಚಿ, ಹತ್ರ ಇರ್ರ‍ೋ ಹೊಗೆ ಹಾಕಿಸ್ಕೊಳ್ಲಿ ಅಂತ ದೂರ ಓಡಿಬರ್ತಾರೆ. ಹಂಗೇ ಈ ನಾರ್ತ್ ಇಂಡಿಯನ್ಸ, ಅವರ ಊರಲ್ಲಿ ಬಿಜೆಪಿಗೆ ಓಟ್ ಹಾಕಿ, ಅಲ್ಲಿರ್ರ‍ೋ ಅನುಭವಿಸ್ಲಿ ಅಂತ ಸೌತ್ ಇಂಡಿಯಾಗೆ ಓಡಿ ಬಂದು ಆರಾಮಾಗಿರ್ತಾರೆ.

ಯಶ್ ಹೊಸ ಸಿನಿಮಾ Sಟ್ಡಜ್ಚಿ ಸ್ಕ್ರೀನ್ ಮೇಲೆ ಅಪ್ರೋಡ್ ಆಗೋಕೆ ಇನ್ನೂ ಸುಮಾರು ಒಂದೂವರೆ ವರ್ಷ ಬೇಕಂತೆ. ಅಲ್ಲಿವರೆಗೂ ಯಶ್ – ಪಾಡು, ಈ ಹಾಡು

– ‘ಉಪವಾಸ ಈ ಕಣ್ಣಿಗೆ’

ಖಾರ ಸಂಸಾರ

‘ರೀ, ಸೊಳ್ಳೆ ಕಚ್ತಾ ಇದೆ, ಆವಾಗಿಂದ ಇ ಹಾರಾಡ್ತಿದೆ, ಸ್ವಲ್ಪ ನೋಡ್ರಿ ಎದ್ದು’ ‘ಯಾಕೆ? ನಾನೇನ್ ಎಂದೂ ಸೊಳ್ಳೆ ನೋಡಿಲ್ವಾ?’

ಇಬ್ಬನಿ ಬಿದ್ದ ಕಾರಣಕ್ಕೆ ಕ್ರಿಕೆಟ್ ಮ್ಯಾಚ್ ಸೋತ ಕ್ಯಾಪ್ಟನ್ ಏನು ಹೇಳ್ತಾನೆ?

– We couldn’t win due to dew

ಸಣ್ಣ ಮಕ್ಕಳೂ ಕೋಡಿಂಗ್ ಕಲಿಯುತ್ತಿರೋ ಈ ಸಮಯದಲ್ಲಿ ಅತಿಬುದ್ಧಿವಂತರಂತೆ ಮಾತಾಡೋ ರನ್ನ ಏನಂತ ಬಯ್ತಾರೆ ?

– ನಿಂಗೇನ್ ಎರಡ್ ಕೋಡಿದೆಯಾ?

ಭಾರತದ ನಾವೇ ತಯಾರಿಸಿದ ಆಪ್ ಗಳನ್ನ ಏನೆನ್ನಬಹುದು?

– ಅಪ್ ನೇ ಆಪ್

ಬಹಳ ವರ್ಷಗಳವರೆಗೆ ರಸ್ತೆಯಲ್ಲಿ ಓಡಾಡಿ ಸವೆದು ಹೋಗಿರುವ ಕಾರಿನ ಟೈರ್

– ಟೈರ್ಡ್

ಹೆಂಗಸರು ವಟ ವಟ ಅಂತ ಮಾತಾಡೋ ಜಾಗ

– ವಠಾರ

ಹಾಕಿಕೊಳ್ಳಲು ಕಷ್ಟ ಆಗುವ ಟೈಟ್ ಫಿಟ್ಟಿಂಗ್ ಇರೋ ಬಟ್ಟೆ
ಹಾರ್ಡ್ ವೇರ್

ಒಬ್ಬ ಶಿಲ್ಪಿಗೆ ಚಾಲೆಂಜ್ ಮಾಡೋದ್ ಹೆಂಗೆ?
– ನಿನ್ ಕೈಲಿ ಏನ್ ಗೋಕೆತ್ಕೊಳ್ಳೋಕಾಗುತ್ತೋ.. ಕೆತ್ಕೋ..!