Thursday, 12th December 2024

ವಿದ್ವಾನ್ ಸರ್ವತ್ರ ಪೂಜ್ಯತೇ ಎಂಬ ಹಸಿ ಹಸಿ ಸುಳ್ಳು

ರಾವ್-ಭಾಜಿ

ಪಿ.ಎಂ.ವಿಜಯೇಂದ್ರ ರಾವ್

journocate@gmail.com

ಸುಮಾರು ಮೂರು ವರ್ಷಗಳ ಹಿಂದೆ ತೀರಿಕೊಂಡ ಮಾಜಿ ರಾಯಭಾರಿ ಸಿದ್ಧಾರ್ಥಾಚಾರಿ ಬಹುಭಾಷಾ ಪಂಡಿತರು. ಸಮಾಜಮುಖಿ ಚಿಂತಕರು. ಉತ್ತಮ ಸಮಾಜದ ಕಲ್ಪನೆಯಲ್ಲಿ ಆಚಾರ್ಯ ವಿದ್ಯಾ ಕುಲ ಎಂಬ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿ ತಮ್ಮ ಸುದೀರ್ಘ ನಿವೃತ್ತಿ ಜೀವನವನ್ನು ಸಹಸ್ರಾರು ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನಸಂಪತ್ತನ್ನು ಹಂಚುತ್ತಾ, ಅವರ ವ್ಯಕ್ತಿತ್ವವನ್ನು ರೂಪಿಸುವುದರಲ್ಲಿ ಕಳೆದರು.

ಅವರೊಂದು ಬಹುಸಂಪುಟದ ವಿಶ್ವಕೋಶ. ಗಂಟೆಗಟ್ಟಲೆ ಅವರ ಜತೆ ಕುಳಿತು ಅವರ ಮಾತನ್ನು ಆಲಿಸುತ್ತಾ ಅದರ ಒಂದು ಪುಟ್ಟ ಪಾಲನ್ನು ನಾನೂ ಪಡೆದಿ ದ್ದೇನೆ. ಒಮ್ಮೆ ಅವರು ಕೇಶವ ರಾಮ್ ಅಯ್ಯಂಗಾರ್ ಅಂತ ಒಬ್ಬ ಮೇಧಾವಿ ಇದ್ದಾರೆ. ಎಲ್ಲ ಮೇಧಾವಿಗಳಂತೆ ಅವರು ಕಡುಕಷ್ಟದಲ್ಲಿದ್ದಾರೆ. ನೀವು ಅವರನ್ನು ಭೇಟಿ ಮಾಡ ಬೇಕು. ಅವರ ಜೀವನ ಚರಿತ್ರೆ ದಾಖಲಿಸಲು ಯೋಗ್ಯ ಎಂದರು.

ಅಂತಲೇ, ಅಯ್ಯಂಗಾರ್‌ರನ್ನು ಭೇಟಿ ಮಾಡಿ ಪುನೀತನಾಗಿದ್ದೆ. ಎಂಜಿನಿಯರ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಅವರಿಗೆ ಶಿಲ್ಪಶಾಸ್ತ್ರದ ಅಪಾರ ಜ್ಞಾನವಿತ್ತು. ಕ್ಯಾಲಿಗ್ರಾಫಿ ಅವರಿಗೆ ಕರಗತವಾಗಿತ್ತು. ಧರ್ಮ ಶಾಸ್ತ್ರಗಳನ್ನು ಅರೆದು ಕುಡಿದಿದ್ದರು. ಗ್ವಾಲಿಯರ್ ಘರಾನಾ ಸಿದ್ಧಿಸಿದ್ದ ಬೆರಳಣಿಕೆಯಷ್ಟು ಹಿಂದೂಸ್ತಾನಿ ಗಾಯಕ ರಲ್ಲಿ ಅವರೊಬ್ಬರು. ಸಂಗೀತ ಶಾಸ್ತ್ರಜ್ಞರೂ ಹೌದು. ಸಾಹಿತ್ಯ-ಸಂಗೀತದಲ್ಲಿ ಅಭಿರುಚಿಯಿದ್ದ ಅಂದಿನ ಪೊಲೀಸ್ ಆಯುಕ್ತರಾಗಿದ್ದ ಚಂದ್ರಶೇಖರ್ ಮತ್ತು ನಾನು ಒಮ್ಮೆ ಅವರ ಗಾಯನ ಪ್ರತಿಭೆಯ ಕಿರುಪರಿಚಯವನ್ನು ಮಾಡಿಕೊಂಡು ಚಕಿತರಾಗಿದ್ದೆವು.

ನಮ್ಮ ದೇಶ ಯಾವ ದಿಕ್ಕಿನಲ್ಲಿ ಸಾಗಬೇಕೆಂಬುದರ ಬಗ್ಗೆ ಖಚಿತವಾದ ಆಲೋಚನೆ ಐಯಂಗಾರರಿಗಿತ್ತು. ಮಾಧ್ಯಮದ ಹಿಂದೂ ವಿರೋಧಿತ್ವದ ಕಹಿ ಅನುಭವ ಅವರದ್ದಾಗಿತ್ತು. ಆರ್ಥಿಕ ಸಂಕಷ್ಟದಲ್ಲಿದ್ದ ಆ ಹಿರಿಯರು ಒಮ್ಮೆ ಬೈಸಿಕಲ್ ಏರಿ ಹೋಗಿ ಶಾಲಾಮಕ್ಕಳಿಗೆ ಕೈಬರಹವನ್ನು ಕಲಿಸಿ ಅದಕ್ಕೆ (ಸಂಭಾವನೆಯಾಗಿ) ಒಂದಿನ್ನೂರು ರು. ಕೊಟ್ಟಿದ್ದರೆ ಅನುಕೂಲವಾಗುತ್ತಿತ್ತು ಎಂದು (ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ತಂದುಕೊಳ್ಳದೇ) ಇಪ್ಪತ್ತು ವರ್ಷಗಳ ಹಿಂದೆ ಹೇಳಿಕೊಂಡದ್ದನ್ನು ನೆನೆದರೆ ನನಗೆ ಈಗಲೂ ವೇದನೆಯಾಗುತ್ತದೆ.

ಅವರಲ್ಲಿದ್ದ ಅಪರೂಪದ ಉದ್ಗ್ರಂಥಗಳ ಸಂಗ್ರಹವನ್ನು ಮಾರುವುದಾಗಿ ಹೇಳಿದಾಗ ನಾನೊಂದಷ್ಟು ಪುಸ್ತಕಗಳನ್ನು ಕೊಳ್ಳುವುದಾಗಿ ಹೇಳಿದೆ. ಅದರಿಂದ ತಮ್ಮ ಮುಗ್ಗಟ್ಟು ನೀಗುವುದಿಲ್ಲ ಎಂದ ಅವರು ಅಷ್ಟೂ ಪುಸ್ತಕಗಳನ್ನು ಒಮ್ಮೆಗೇ ಮಾರಾಟ ಮಾಡಬೇಕಾದ ತುರ್ತು ಇದೆಯೆಂದು ಹೇಳಿದ್ದರು. ಗಿರಾಕಿ ಸಿಗುವ ಮೊದಲೇ ಕ್ಯಾನ್ಸರ್ ಕಾಯಿಲೆಗೆ ತುತ್ತಾದರು. ಬದುಕಿದ್ದಾಗಲೇ ಅವರು ಯಾರೆಂದು ತಿಳಿಯದ ನಮ್ಮ ಸುಡುಗಾಡು ವ್ಯವಸ್ಥೆಯಲ್ಲಿ ಸಾವಿನ ನಂತರ ಸಕಲ ಸರಕಾರಿ
ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ಮಾಡಿಸಿಕೊಳ್ಳಲು ಅವರೇನು ಕೆಲಸಕ್ಕೆ ಬಾರದ ಪತ್ರಕರ್ತನಾಗಿ ಸಿದ್ದರಾಮಯ್ಯನವರನ್ನು ಒಲಿಸಿಕೊಂಡಿದ್ದರೇ? ಹಿಂದೂ
ಧರ್ಮವನ್ನು ಹುಚ್ಚನಂತೆ ಬೈದಿದ್ದರೇ? ಅಥವಾ ಗಾಂಜಾ ಸೇವಿಸುತ್ತಿದ್ದರೇ? ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲುಗೊಳಿಸುವ ಅಜೆಂಡಾ ಹೊತ್ತ ನಕ್ಸಲರ ಜತೆ ಒಡನಾಟವಿರಿಸಿಕೊಂಡಿದ್ದರೇ? ಯು.ಆರ್.ಅನಂತಮೂರ್ತಿ ಅವರಿಗೆ ಜ್ಞಾನ ಪೀಠ ಪ್ರಶಸ್ತಿ ಬಂದಾಗ ಚಂದ್ರಶೇಖರ ಪಾಟೀಲ ಮುಂದಿನ ಕೆಲವು ವರ್ಷ ಗಳೂ ಸತತವಾಗಿ ಜ್ಞಾನಪೀಠ ಕನ್ನಡ ಲೇಖಕರಿಗೇ.

ಸಂಶಯ ಬೇಡ. ಏಕೆಂದರೆ, ಅನಂತ ಮೂರ್ತಿಗಿಂತಾ ಒಳ್ಳೆಯ ಲೇಖಕರು ನಮ್ಮಲ್ಲಿದ್ದಾರೆ. ಅವರಿಗೆ (ಪ್ರಶಸ್ತಿ) ಸಿಕ್ಕ ಮೇಲೆ ಉಳಿದವರಿಗೂ ಸಿಗುವುದರಲ್ಲಿ ಅನುಮಾನ ಬೇಡ ಎಂದು ತಮ್ಮ ಸಂಪಾದಕತ್ವದ ಸಂಕ್ರಮಣದಲ್ಲಿ ದಾಖಲಿಸಿದ್ದರು. ಆದರೆ ಹಾಗೇನಾಗಲಿಲ್ಲ. ಅದೇಕೋ, ಅನಂತಮೂರ್ತಿ ಅದನ್ನು ಪಡೆದು ಕೊಂಡಿದ್ದಲ್ಲ, ಹೊಡೆದುಕೊಂಡಿದ್ದು, ಅನ್ನಿಸುತ್ತದೆ ಎಂತಲೂ ಪಾಟೀಲರು ಬರೆದಿದ್ದರು. ಹಾಗೆ ಹೇಳುವ ಮೂಲಕ ದೇಶದ ಅತಿದೊಡ್ಡ ಸಾಹಿತ್ಯಿಕ ಪ್ರಶಸ್ತಿಯನ್ನು ಹೊಡೆದುಕೊಳ್ಳಲೂ ಆಸ್ಪದವಿದೆ ಎಂಬ ರಹಸ್ಯವನ್ನು ಬಿಚ್ಚಿಟ್ಟಿದ್ದರು.

ಅನಂತಮೂರ್ತಿಗೆ ಪ್ರಶಸ್ತಿ ಪ್ರಾಪ್ತವಾದ ಸುದ್ದಿಯ ಜತೆ ಅವರ ಭಾವಚಿತ್ರ ಪ್ರಕಟವಾದಾಗ ಪಾಟೀಲರು ಆಘಾತಗೊಂಡಿದ್ದರು. ಆದರೆ, ನಿಧನವಾರ್ತೆಯಲ್ಲ ಎಂದು
ತಿಳಿದು ನಿರಾಳವಾಗಿ ಉಸಿರಾಡಿದರು. ಇದನ್ನೂ ಕೂಡ ಅವರು ತಮ್ಮ ಸಂಪಾದಕೀಯದಲ್ಲಿ ಹೇಳಿಕೊಂಡಿದ್ದಾರೆ. ಮೈಸೂರಿನಲ್ಲಿ, ಸಿದ್ದರಾಮಯ್ಯನವರ ಮನೆಯ
ಹತ್ತಿರದಲ್ಲೇ ಅತಿ ಸಾಧಾರಣ ಮನೆಯೊಂದರಲ್ಲಿ ಕೇಶವ ರಾಮ್ ಅಯ್ಯಂಗಾರ್ ವಾಸವಿದ್ದರು. ನಮ್ಮ ಪಕ್ಕದ ಮನೆಯವರೇ ಯಾರೆಂದು ತಿಳಿಯದ ಕಡು ವಾಸ್ತವ ದಲ್ಲಿ ನಾವಿದ್ದೇವೆ. ಇನ್ನು ಸಿದ್ದರಾಮಯ್ಯರಿಗೆ ಅಯ್ಯಂಗಾರ್ ಬಗ್ಗೆ ಅರಿವಿರಬೇಕೆಂಬ ನಿರೀಕ್ಷೆಯೇ ತಪ್ಪು. ಅವರು ಯಾರಂತಲೇ ತಿಳಿಯದ ಮೇಲೆ ಅವರಿಗೆ ಗೌರವ ಹೇಗೆ ಸಲ್ಲಿಸುತ್ತಾರೆ? ಇವೆಲ್ಲದರ ಹಿನ್ನೆಲೆಯಲ್ಲಿ ನೋಡಿದಾಗ ನನಗಾದರೂ ಅನ್ನಿಸುವುದೇನೆಂದರೆ ಸಿದ್ದರಾಮಯ್ಯ ಮಾಡಿದ ತಪ್ಪು ಐಯಂಗಾರರಿಗೆ ಅಂತಿಮ ಗೌರವ ತೋರದಿದ್ದಲ್ಲ; ಗೌರಿಗೆ ಸರ್ಕಾರೀ ಗೌರವ ಏರ್ಪಡಿಸಿದ್ದು.

ಹಿಂದೂ ಮತಗಳ ಮೇಲೆ ಅವಲಂಬಿತರಾಗದ ಸಿದ್ದರಾಮಯ್ಯನವರು ಮತ್ತೆ ಮುಖ್ಯಮಂತ್ರಿಯಾಗುವ ಭರವಸೆ ಹೊಂದಿದ್ದಾರೆ. ಹಿಂದೂ ಧರ್ಮದ ಮೇಲೆ
ಗೌರಿಯಷ್ಟೇ ವಿಷ ಕಾರುವವರು ನಮ್ಮಲ್ಲಿದ್ದಾರೆ. ನಾಡೋಜ ಚಂದ್ರಶೇಖರ ಪಾಟೀಲರಿಂದ ನಾನು ಪಡೆದ ತರ್ಕಜ್ಞಾನದ ಲಾಭದಿಂದ ಹೇಳುವುದಾದರೆ, ಅಂತಹ ಹಿಂದೂ ನಿಂದಕರೆಲ್ಲರೂ ಸರಕಾರಿ ಪ್ರಾಯೋಜಕತ್ವದ ಅಂತಿಮ ಸಂಸ್ಕಾರದ ಫಲಾನುಭವಕ್ಕೆ ಪೈಪೋಟಿ ನಡೆಸುತ್ತಿದ್ದಾರೆ. ಹೆಣ ಹಣಕ್ಕಾಗಿ ಬಾಯಿ ಬಿಡುತ್ತ ದೆಂಬುದು ಗಾದೆ ಮಾತು. ಮತ್ತೆ ಮುಖ್ಯಮಂತ್ರಿಯಾಗುವ ಆಶಾಭಾವನೆ ಮಾಜಿ ಮುಖ್ಯಮಂತ್ರಿಗಳಲ್ಲಿರುವುದರಿಂದ ಭಾವಿ ಹೆಣಗಳು ಆ ಸುದಿನದ ನಿರೀಕ್ಷೆಯಲ್ಲಿ ಪ್ರಶಸ್ತಿಗಾಗಿ ಬಾಯಿಬಾಯಿ ಬಿಡುತ್ತಿವೆ.

ರುದ್ರಭೂಮಿಯಾಭಿಮುಖವಾಗಿ ಹೊರಡುವ ವೈಭವೋಪೇತ ಮೆರವಣಿಗೆಯೆಂದರೆ ಅದೊಂದು ಮರಣೋತ್ತರ ಪ್ರಶಸ್ತಿಯೇ ಸರಿ ಪ್ರಶಸ್ತಿಯನ್ನು ಹೊಡೆದು ಕೊಳ್ಳುವ ನಮ್ಮ ವ್ಯವಸ್ಥೆಯಲ್ಲಿ ಅಂತಿಮ ಸಂಸ್ಕಾರಕ್ಕೆ, ಸುಸಜ್ಜಿತವಾದ ಶವ ಸಾಗಿಸುವ ವ್ಯಾನ್ನಲ್ಲಿ ಕಿಟಕಿಯ ಮೂಲಕ ಕರ್ಚೀಫ್ ತೂರಿ ಸ್ಥಳ ಕಾಯ್ದಿರಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಕರ್ಚೀಫನ್ನೋ, ಹೆಗಲ ಮೇಲಿನ ಟವೆಲನ್ನೋ ಹೆಣದ ಗಾಡಿಯ ಕಿಟಕಿಯ ಮೂಲಕ ಎಸೆಯುವುದನ್ನು ವಾಚ್ಯಾರ್ಥದಿಂದ ಗ್ರಹಿಸಬೇಡಿ; ಹಿಂದೂಗಳನ್ನು ಅವಹೇಳನ ಮಾಡುವ ಮೂಲಕ ಪ್ರಶಸ್ತಿಗೆ ಪರೋಕ್ಷವಾಗಿ ಅರ್ಜಿ ಗುಜರಾಯಿಸುತ್ತಾರೆಂಬ ಅರ್ಥದಲ್ಲಿ ಹೇಳಿದ್ದು.

ಪುಷ್ಪಾಲಂಕೃತ ಶವವನ್ನು ಊಹಿಸಿಕೊಳ್ಳುವುದೇ ಜುಮ್ಮೆನ್ನಿಸುವ ಒಂದು ಭಾವ. ಎಲ್ಲೆಂದರಲ್ಲಿ ಮಲಗುವ ಅಭ್ಯಾಸವನ್ನು ಮೈಗೂಡಿಸಿಕೊಂಡವರಿಗೆ ತಮ್ಮನ್ನು ತಾವು ಮರಣಶಯ್ಯೆಯಲ್ಲಿ ಮೈಚೆಲ್ಲುವ ಕಾಲ್ಪನಿಕ ದೃಶ್ಯವೂ ಪುಳಕಿತರನ್ನಾಗಿಸುತ್ತದೆ. ಹಾಗೆಂದು ಇದು ಡೆತ್-ವಿಶ್ ಅಲ್ಲ. ವೇಸ್ಟ್ ಬಾಡಿಗಳಿಗೆ ತಮ್ಮ ದೇಹದ ಮೇಲೆಯೇ ಒಂದು ರೀತಿಯ ಜುಗುಪ್ಸೆ ಉಂಟಾಗಿರುತ್ತದೆ. ಪ್ರಶಂಸೆಯ ಅಭಾವದಿಂದ ಹುಟ್ಟುವ ಹೇವರಿಕೆ. ‘ಯಾವೋನಿಗ್ ಬೇಕು ಸಾರ್, ಈ ಹೆಣಾ ಹೊರೋ ಕೆಲ್ಸ’ ಅಂತ ಹೇಳೋ ರೀತಿಯ ಸ್ವನಿಂದನೆ. ಆದರೆ ಅದನ್ನು ಸಾಮಾನ್ಯನಂತೆ ಇನ್ನೊಬ್ಬರ ಮುಂದೆ ಹೇಳಿಕೊಳ್ಳುವುದಕ್ಕೆ ಪೊಗರು ಅಡ್ಡಬರುತ್ತೆ.

ಜುಗುಪ್ಸೆಯಾದ ಕಾರಣಕ್ಕೆ ಸಾಯಲು ಆತುರ ಪಡುತ್ತಾರೆ ಅಂತೇನಲ್ಲ. ಅವರಿಗೂ ಸಾವಿನ ಭಯವಿದ್ದೇ ಇರುತ್ತೆ. ಅದರ ಅರ್ಧಾಂಗಿಯಾಗಿ ಮರಣೋತ್ತರವಾಗಿ ಸಲ್ಲುವ ಗೌರವದ ಉತ್ಕಟ ವಾಂಛೆ ಕಾಡುತ್ತಿರುತ್ತದೆ. ಅದನ್ನು ಪಡೆದೇ ತೀರುವ ಹಂಬಲ. ಜೀವಿತಾವಽಯಲ್ಲಿ ಪ್ರಶಸ್ತಿ ಸಿಗದಿದ್ದುದರಿಂದ ಉಂಟಾದ ಸಂಕಟವನ್ನು ಅಂತಿಮ ಗೌರವದಿಂದ ಶಮನಗೊಳಿಸಿಕೊಳ್ಳುವ ಒಂದು ವಿಕ್ಷಿಪ್ತ ಕಾಮನೆ. ಅಂತಹ ಗೌರವ ಸರಕಾರೀ ಖರ್ಚಿನಲ್ಲಿ ನಡೆಯುವುದಾದರೆ, ಅದಕ್ಕಿಂತ ಬೇಕೇ? ಹಿಂದೂಗಳನ್ನು ಬಾಯ್ತುಂಬಾ ಬೈದು, ಸರಕಾರೀ ಗೌರವಾದರಕ್ಕೆ ಭಾಜನರಾಗಿರಿ ಎಂಬ ಪುಗ್ಸಟ್ಟೆ ಭಾಗ್ಯವನ್ನು ಕರುಣಿಸಿದ ವ್ಯಕ್ತಿಯೇ ಮತ್ತೆ ಮುಖ್ಯಮಂತ್ರಿ ಯಾದರೆ ಪ್ರಶಸ್ತಿ ಪಡೆಯುವ ದಾರಿ ಸುಗಮ.

ಆತನಿಗೆ ಬೇಕಿರುವುದೂ ಹಿಂದೂಗಳ ಅವಹೇಳನ, ಇವರಿಗೆ ಗೊತ್ತಿರುವುದೂ ಅದೊಂದೇ ವಿದ್ಯೆ. ಸ್ವಾಮಿ ಕಾರ್ಯ, ಸ್ವಕಾರ್ಯಗಳೆರಡೂ ಒಟ್ಟೊಟ್ಟಿಗೇ. ಇಲ್ಲಿ ಇನ್ನೊಂದು ಲೆಕ್ಕಾಚಾರವೂ ನಡೆದಿರುವ ಸಾಧ್ಯವಿದೆ. ಕೋವಿಡ್ ಎಲ್ಲರ ಬದುಕಲ್ಲಿ ನೂತನ ಅನಿಶ್ಚಿತತೆಯನ್ನು ಮೂಡಿಸಿದೆ. ಇಂದಿದ್ದವರು ನಾಳೆ ಇಲ್ಲ. ಸಾಯುವ ಯಾವುದೇ ತವಕವಿಲ್ಲದಿದ್ದರೂ ಮೃತ್ಯುವಿನ ಭಯ ಹೆಚ್ಚುತ್ತಿದೆ. ಇದ್ದಷ್ಟು ದಿನ, ಯಾವುದೋ ಪ್ರಶಸ್ತಿಗಾಗಿ ಲಾಬಿ ಮಾಡುವುದು. ಸಿಗದಿದ್ದರೆ, ತನ್ನ ಹೆಣವಾದರೂ ಸನ್ಮಾನಯೋಗ್ಯವಾಗುವಂತೆ ನೋಡಿಕೊಳ್ಳುವುದು. ಅದಕ್ಕೆ ಇರುವ ಏಕೈಕ ಮಾರ್ಗ ಹಿಂದೂ ನಿಂದನೆ.

ಮಾಜಿ ಮುಖ್ಯಮಂತ್ರಿಗಳ ತವರೂರಲ್ಲೇ ನಿಂದನೆಯಲ್ಲಿ ನಿರತರಾದರೆ ಅವರ ಕಣ್ಣಿಗೆ ಥಟ್ಟನೆ ಬೀಳಬಹುದು. ನಿಂದನೆಗೆ ಯಾವ ವಿದ್ಯಾರ್ಹತೆಯೂ ಬೇಕಿಲ್ಲವಲ್ಲ. ಕೆಡವಿದ ಹಿಂದೂ ಮಂದಿರವನ್ನು ವಿರೋಧಿಸುತ್ತಿರುವವರು ತಾಲಿಬಾನಿಗಳು ಅಂತ ಮಹೇಶಚಂದ್ರ ಗುರುವಂತೆ ಒಂದು ಹೇಳಿಕೆ ಬಿಸುಡಿದರಾಯಿತು. ಅದನ್ನು ಹೆಕ್ಕಿ ಪ್ರಸಾರ ಮಾಡಲು ಮಾಧ್ಯಮವಿದ್ದೇ ಇದೆ. ಇಂದು ಹುಣ್ಣಿಮೆ. ಹುಣ್ಣಿಮೆ ಹತ್ತಿರವಾದಂತೆ ಬಂದ ಹೇಳಿಕೆಯಿದು ಎಂದು ಕಡೆಗಣಿಸುವಂತಿಲ್ಲ. ಇತ್ತೀಚೆಗೆ ಜನ್ಮತಾಳಿದ ಮಹಿಷ ದಸರಾ ಹತ್ತಿರವಾದಂತೆ ಮೈಸೂರಿನ ಅಽದೇವತೆ ಚಾಮುಂಡೇಶ್ವರಿ ಯನ್ನು ಕುರಿತು ಹೀನಾಯವಾಗಿ ಮಾತನಾಡುವ ಹೀನ ಪ್ರವೃತ್ತಿಯೂ ಕಂಡುಬರುತ್ತಿದೆ. ತಮ್ಮ ಗಾಡ್ ಫಾಧರ್ ಅವರ ಕ್ಷೇತ್ರವನ್ನು ಬದಲಾಯಿಸಿ ಮೈಸೂರಿನಿಂದ ದೂರ ಸರಿದದ್ದಕ್ಕೂ, ತಾಯಿ ಚಾಮುಂಡೇಶ್ವರಿಯ ಭರ್ತ್ಸನೆಗೂ
ಸಂಬಂಧವಿದೆಯೇ ಎಂಬುದು ಪರಿಶೀಲನಾರ್ಹ ಅಂಶ.

ಮೊನ್ನೆ, ಕ್ಲಬ್ ಹೌಸ್‌ನಲ್ಲಿ ತಕ್ಷಶಿಲಾ ವಿಶ್ವವಿದ್ಯಾಲಯ ಕುರಿತು ವಿದ್ವಾಂಸರೊಬ್ಬರು ಸುದೀರ್ಘವಾದ ವಿದ್ವತ್ಪೂರ್ಣ ಉಪನ್ಯಾಸ ನೀಡಿದರು. ನಡುರಾತ್ರಿಯಾಗಿತ್ತು. ನಿದ್ದೆಗೆಟ್ಟ ಹೆಂಗಸಾವುದೋ ಪಾಣಿನಿ ಕಾಲ್ಪನಿಕ ವ್ಯಕ್ತಿ ಎಂದು ರೂಮ್ ನಲ್ಲಿ ಹುಳ ಬಿಟ್ಟಿತು. ಅದು ಇಂಗ್ಲಿಷ್ ಚೆನ್ನಾಗಿ ಮಾತನಾಡುತ್ತಿತ್ತು. ವಿದ್ಯಾವಂತೆ ತಾನೆಂದೂ ಹೇಳಿಕೊಂಡಿತು. ಸಭಿಕರ ಪೈಕಿ ಒಬ್ಬರು ನಿಮ್ಮ ತಂದೆಯ ಹೆಸರು ಶಿಲಾಶಾಸನಗಳಲ್ಲೇನಾದರೂ ಕೆತ್ತಲ್ಪಟ್ಟಿದೆಯೇ? ಇಲ್ಲವಾದರೆ, ನಿಮ್ಮ ತಂದೆ ಕಾಲ್ಪನಿಕ ವ್ಯಕ್ತಿಯೇ? ಎಂದು ಕೇಳಿದರು. ಪ್ರಶ್ನಿಸಿದಾಕೆ ತಕ್ಷಣವೇ ರೂಮಿನಿಂದ ಹೊರಬಿದ್ದಿತು. ಇಂತಹ ಕುಯುಕ್ತಿಯಿಂದಲೇ ಗಂಭೀರ ಚರ್ಚೆಯ ದಿಕ್ಕು ತಪ್ಪಿಸುವ ಟ್ರೋಲ್‌ ಗಳು ಕ್ಲಬ್‌ಹೌಸ್‌ನಲ್ಲಿ ಹೆಚ್ಚುತ್ತಿದ್ದಾರೆ.

ಈ ಅಂಕಣಕ್ಕೆ ತಾಲಿಬಾನಿಗಳ ಕುರಿತು ಬರೆಯುವ ನಿರ್ಧಾರ ಮಾಡಿದ್ದೆ. ಆದರೆ, ದೇಶೀ ತಾಲಿಬಾನಿಗಳ ಬಗ್ಗೆ ಗಮನಹರಿಸುವುದು ಹೆಚ್ಚು ಮುಖ್ಯ ಎನಿಸಿತು. ಚಾಮುಂಡೇಶ್ವರಿ ಕೇಂದ್ರಿತವಾದ ದಸರಾ ಹತ್ತಿರಬರುತ್ತಿದೆ. ಅದಕ್ಕೆ ಸೆಡ್ಡುಹೊಡೆಯುವಂತೆ ಮಹಿಷ ದಸರಾ ಆಯೋಜಿತವಾಗುತ್ತಿದೆ. ನಾಡಿನ ಸಂಸ್ಕೃತಿಗೆ ಮಸಿಬಳಿಯುವ ಈ ಕೃತ್ಯಕ್ಕೆ ಸ್ಪೂರ್ತಿ ಮಮತಾ ಬ್ಯಾನರ್ಜಿಯೇ. ಇದನ್ನು ಮೊಳಕೆಯಲ್ಲಿಯೇ ಚಿವುಟದಿದ್ದರೆ, ಪಶ್ಚಿಮ ಬಂಗಾಳದ ಹಿಂದೂಗಳ ಗತಿಯೇ
ಕರ್ನಾಟಕದ ಹಿಂದೂಗಳದ್ದೂ ಆಗುವ ದಿನಗಳು ದೂರವಿಲ್ಲ.

ಸಂತ್ರಸ್ತ ಕಾಶ್ಮೀರಿ ಪಂಡಿತರೊಬ್ಬರು ಈಗ ದೆಹಲಿಯಲ್ಲಿ ಪತ್ರಕರ್ತರು. ಕಾಶ್ಮೀರದ ಪಂಡಿತರ ರುಂಡಗಳನ್ನು ಚೆಂಡಾಡಿ ಅವರನ್ನು ತಮ್ಮ ತಾಯ್ನಾಡಿನಿಂದ ಒಕ್ಕಲೆಬ್ಬಿಸಿದ ಇಸ್ಲಾಂ ಭಯೋತ್ಪಾದಕರು ಮೂರು ದಶಕಗಳ ಹಿಂದೆ ಯಾವ ವಾತಾವರಣ ನಿರ್ಮಿಸಿದರು, ಅಂತಹ ವಾತಾವರಣ ದೇಶದ ಹತ್ತು ರಾಜ್ಯಗಳಲ್ಲಿದ್ದು ಅದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ನನ್ನ ಒಬ್ಬ ಕಾಶ್ಮೀರಿ ಪಂಡಿತ ಮಿತ್ರ ಬೆಂಗಳೂರಿಗೆ ವಲಸೆ ಬಂದು ಕಾಲು ಶತಮಾನವೇ ಕಳೆದಿದ್ದರೂ, ತಾವು ಕಂಡ
ಅಂದಿನ ಭೀಭತ್ಸ ದೃಶ್ಯಗಳನ್ನು ಇನ್ನೂ ಮರೆತಿಲ್ಲ. ಆಜಾನ್ ಕಿವಿಗೆ ಬೀಳುತ್ತಿದ್ದಂತೆ ವಿಚಲಿತರಾಗುತ್ತಾರೆ.

ಕಾಯಾಂಗ, ಶಾಸಕಾಂಗ, ನ್ಯಾಯಾಂಗವೆಲ್ಲವೂ ತಮ್ಮ ರಕ್ಷಣೆಗೆ ಬಾರದೇ ತಮ್ಮ ಜವಾಬ್ದಾರಿಯನ್ನು ಮರೆತು ಕೈಚೆಲ್ಲಿ ಕುಳಿತದ್ದನ್ನು ಪಂಡಿತರು ದುಃಸ್ವಪ್ನದಂತೆ ನೆನಪಿನಲ್ಲಿಟ್ಟುಕೊಂಡಿದ್ದಾರೆ. ಸಂತ್ರಸ್ತರ ಪರವಾಗಿ ನಿಲ್ಲಬೇಕಾದ ಮಾಧ್ಯಮ ಕೂಡ ಮಲತಾಯಿಯಂತೆ ತಮ್ಮನ್ನು ನಿರ್ಲಕ್ಷಿಸಿದ್ದು ಅವರ ಮಾಗದ ಗಾಯಕ್ಕೆ ಮತ್ತೆ ಮತ್ತೆ ಬರೆ ನೀಡುತ್ತಲಿದೆ. ಮಾಧ್ಯಮವೆಂದರೆ ಹಿಂದೂ-ವಿರೋಽ ಎಂಬುದು ಕಾಶ್ಮೀರಿ ಪಂಡಿತರಿಗಷ್ಟೇ ಅಲ್ಲ, ಸಮಸ್ತ ಹಿಂದೂ ಜನತೆಗೆ ಮನವರಿಕೆಯಾಗಿದೆ.
ಇದನ್ನು, 26 ವರ್ಷಗಳ ಹಿಂದೆ ಕೇಶವ ರಾಮ್ ಅಯ್ಯಂಗಾರ್ ’Truth’ ಎಂಬ ಕೋಲ್ಕೊತಾದ ನಿಯತಕಾಲಿಕೆಗಾಗಿ ಕಳಿಸಿದ ಲೇಖನದಲ್ಲಿ ಹೇಳಿದ್ದರು.

ಶತಮಾನಗಳ ಕಾಲ ಭಾರತದಲ್ಲಿದ್ದೂ, ಕ್ರಿಶ್ಚಿಯನ್ ಮತ್ತು ಮುಸ್ಲಿಮರು ಹಿಂದೂಗಳಿಂದ ಸಹಿಷ್ಣುತೆಯ ಪಾಠವನ್ನು ಕಲಿಯಲೇ ಇಲ್ಲ…. ಶೇ.98ರಷ್ಟು ಭಾರತೀಯ ದಿಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ಹಿಂದೂ ವಿರೋಧಿ. ಈ ಮಾತು ಬಹುಮಟ್ಟಿಗೆ ಪ್ರಾಂತೀಯ ಭಾಷಾ ಮಾಧ್ಯಮಕ್ಕೂ ಅನ್ವಯವಾಗುತ್ತದೆ.
ಅಪರೂಪಕ್ಕೆ, ಹಿಂದೂಗಳ ಪರವಾಗಿ ದನಿ ಎತ್ತಿದ ಅಂಥಾ ಅರ್ನಾಬ್ ಗೋಸ್ವಾಮಿಯನ್ನೇ ಯಾವ ರೀತಿ ಬೇಟೆಯಾಡಲು ಗೃಹ ಸಚಿವರಿಂದ ಸೂಚನೆ ಬಂದಿದ್ದನ್ನು ಭ್ರಷ್ಟ ಪೊಲೀಸ್ ವ್ಯವಸ್ಥೆಯ ಪ್ರತಿನಿಧಿ ಸಚಿನ್ ವಾಝೆ ಒಪ್ಪಿಕೊಂಡಿದ್ದಾನೆ. ಈ ಕುರಿತು ಮುಖ್ಯವಾಹಿನಿ ಮಾಧ್ಯಮದಲ್ಲಿ ಸುದ್ದಿಯೇ ಇಲ್ಲ. ಎಷ್ಟಾದರೂ ಬೇಟೆ ನಾಯಿಗಳಾಗಿ ರೂಪಾಂತರಗೊಂಡ ಕಾವಲುನಾಯಿಗಳಲ್ಲವೇ?