Tuesday, 10th September 2024

ಪ್ರತಿದಿನದ ಅಭ್ಯಂಗದಿಂದ ರೋಗನಿರೋಧಕ ಶಕ್ತಿ ಹೆಚ್ಚಳ

ಸ್ವಾಸ್ಥ್ಯವೆಂಬ ಸ್ವಾತಂತ್ರ‍್ಯ

ಡಾ.ಸಾಧನಶ್ರೀ

ಸ್ನೇಹಿತರೆ, ‘ಸ್ನೇಹ’ ಅನ್ನುವುದು ನಮ್ಮ ಬದುಕಿನಲ್ಲಿ ಎಷ್ಟು ಮುಖ್ಯ ಅಲ್ಲವೇ? ಸ್ನೇಹವಿಲ್ಲದ ಬದುಕು ಸಾರಹೀನ ಅಂತ ಹೇಳಿದ್ರೆ ಖಂಡಿತ ಅದು ತಪ್ಪಾಗ ಲಕ್ಕಿಲ್ಲ! ಸ್ನೇಹದಿಂದಲೇ ನಾವು ನಮ್ಮ ಬದುಕಿನಲ್ಲಿ ಲವಲವಿಕೆ, ಚೈತನ್ಯ ,ಉತ್ಸಾಹ ಮತ್ತು ಆನಂದವನ್ನು ಅನುಭವಿಸುವುದಕ್ಕೆ ಸಾಧ್ಯ.
ಆಯುರ್ವೇದವು ಸಹ ಇದೇ ಮಾತನ್ನು ಸಾವಿರಾರು ವರ್ಷಗಳ ಹಿಂದೆ ಶಾಸ್ತ್ರದಲ್ಲಿ ಉಲ್ಲೇಖಿಸಿಬಿಟ್ಟಿದೆ.

ಆಯುರ್ವೇದ ಉದ್ಗರಿಸುತ್ತದೆ – ಸ್ನೇಹಸಾರೋಯಂ ಪುರುಷಃ ಅಂತ – ನಮ್ಮ ಶರೀರವು ಸ್ನೇಹಮಯ ಎಂದರ್ಥ. ಅಂದರೆ ನಮ್ಮ ಇಡೀ ಶರೀರವು ಸ್ನೇಹದಿಂದ ಕೂಡಿದ್ದು/ಮಾಡಿದ್ದು ಎಂದರ್ಥ.ಅರೇ, ನಮ್ಮ ಶರೀರವನ್ನೇ ಮಡುವಂತಹ ಈ ಸ್ನೇಹ ಯವುದಪ್ಪ ಅನ್ನೋ ಪ್ರಶ್ನೆ ಬಂತ? ಸಂಸ್ಕೃತದಲ್ಲಿ ‘ಸ್ನೇಹ’ ಶಬ್ದಕ್ಕೆ ‘ಬಂಧನ’ ಎಂದರ್ಥ. ಯಾವುದರ ಉಪಯೋಗದಿಂದ ಎರಡು ಅಥವಾ ಅನೇಕ ವಸ್ತುಗಳ ಬಂಧನವಾಗುತ್ತದೆಯೋ ಆ ಪದಾರ್ಥವೇ ‘ಸ್ನೇಹ’. ಇಂದು ನಾವು ವ್ಯವಹಾರದಲ್ಲಿ ಬಳಸುವ ಜಿಡ್ಡಿನ ಪದಾರ್ಥಗಳು ದೇಹದಲ್ಲಿ ಬಂಧಿಸುವ ಕೆಲಸ ಮಾಡುವುದರಿಂದ ಆಯುರ್ವೇದದಲ್ಲಿ ಜಿಡ್ಡಿನ ಪದಾರ್ಥಗಳನ್ನು ಸ್ನೇಹ ಎಂದು ಕರೆದಿzರೆ. ಸ್ನೇಹ/ ಜಿಡ್ಡು/lipids/fats ಗಳು- ಚಿಕ್ಕ ಚಿಕ್ಕ ಅಣುಗಳಿಂದ ಹಿಡಿದು ದೊಡ್ಡ ದೊಡ್ಡ ಅವಯವಗಳ ವರೆಗೂ ಎಲ್ಲವನ್ನು ಒಂದು ವ್ಯವಸ್ಥಿತ ರೀತಿಯಲ್ಲಿ ಒಗ್ಗೂಡಿಸುತ್ತದೆ/ಬಂಧಿಸುತ್ತದೆ.

ನಮ್ಮ ದೇಹದ ಎಲ್ಲಾ ಧಾತುಗಳು ಮತ್ತು ಅವಯವಗಳು ಸರಾಗವಾಗಿ ಕಾರ್ಯ ಮಾಡಲು ಸಾಕಷ್ಟು ಪ್ರಮಾಣದಲ್ಲಿ ‘ಸ್ನೇಹ’ ಬೇಕೇ ಬೇಕು. Zero fat diet ಅನ್ನೋ ಮೂರ್ಖತನದ ಹೆಸರಿನಲ್ಲಿ ದೇಹವನ್ನು ದಂಡಿಸಿ ಆರೋಗ್ಯವನ್ನು ಹಾಳು ಮಾಡಿಕೊಂಡಿರುವ ಅನೇಕ ಉದಾಹರಣೆಗಳನ್ನ ನಾವು ನಮ್ಮ ಆಸ್ಪತ್ರೆಯಲ್ಲಿ ನಿತ್ಯ ನೋಡುತ್ತೇವೆ. ದೇಹದಲ್ಲಿ ಸ್ನೇಹ/ಜಿಡ್ಡು ಕಡಿಮೆಯಾದರೆ ದೇಹವು ಒಳಗೆ ತನ್ನ ಸುಸ್ಥಿತಿಯನ್ನು ಕಳೆದುಕೊಂಡು ದುರ್ಬಲ ವಾಗುತ್ತೆ.

ಇದೇ ಎಲ್ಲ ರೋಗಗಳಿಗೆ ಆಹ್ವಾನ. ಹಾಗಾಗಿ, ನಮ್ಮ ಜೀವನದಲ್ಲಿ ಸ್ನೇಹ ಅಂದರೆ friendship ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾಗುತ್ತೆ ಮತ್ತೊಂದು ಸ್ನೇಹ ಅಂದರೆ lipids!! ಸ್ನೇಹವನ್ನು ನಾವು ದಿನನಿತ್ಯ ಎರಡು ವಿಧದಲ್ಲಿ ದೇಹಕ್ಕೆ ನೀಡಬಹುದು – ಬಾಹ್ಯ ಮತ್ತು ಆಭ್ಯಂತರ. ಬಾಹ್ಯ ಅಂದರೆ ಹೊರಗಿನಿಂದ ಸ್ನೇಹಪೂರೈಕೆ – ಅಭ್ಯಂಗದ ಮೂಲಕ. ಅಭ್ಯಂಗಂ ಆಚರೇತ್ ನಿತ್ಯಮ್! ಅನ್ನುವುದು ಶಾಸ್ತ್ರ ವಾಕ್ಯ – ಅಂದರೆ ‘ನಾವು ನಮ್ಮ ಆರೋಗ್ಯ ರಕ್ಷಣೆಗೆ ಪ್ರತಿನಿತ್ಯ ಅಭ್ಯಂಗ’ವನ್ನು ಮಾಡಲೇಬೇಕು.

ಖಾಲಿ ಹೊಟ್ಟೆಯಲ್ಲಿ, ಬೆಳಿಗ್ಗೆ ಸೂಕ್ತವಾದ ಎಣ್ಣೆ/ ತುಪ್ಪ ಅಥವಾ ಬೆಣ್ಣೆಯನ್ನು ಬಳಸಿ ಅದನ್ನು ಸರಿಯಾದ ಕ್ರಮದಲ್ಲಿ ತಲೆಯಿಂದ ಹಿಡಿದು ಕಾಲುಗಳ ವರೆಗೆ ಹಚ್ಚಿ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದನ್ನು ‘ಆಯುರ್ವೇದ ಅಭ್ಯಂಗ’ ಎಂದು ಕರೆದಿದೆ. ಆಯುರ್ವೇದ ಆಚಾರ್ಯರು ಹೇಳುತ್ತಾರೆ ದಿನನಿತ್ಯ ಊಟ ಮಾಡುವುದು, ಮಲಗುವುದು ದೇಹಕ್ಕೆ ಎಷ್ಟು ಮುಖ್ಯವೋ ಅಭ್ಯಂಗವೂ ಅಷ್ಟೇ ಮುಖ್ಯ ಎಂದು. ಅಭ್ಯಂಗವು ಬಾಹ್ಯವಾಗಿ ಶರೀರಕ್ಕೆ ಸ್ನೇಹವನ್ನು ಪೂರೈಸುವ ಅತ್ಯಂತ ಸೂಕ್ತವಾದ ಕ್ರಮ.

ಇನ್ನು ಶರೀರಕ್ಕೆ ಸ್ನೇಹವನ್ನು ನೀಡಬಹುದಾದ ಮತ್ತೊಂದು ರೀತಿ ಎಂದರೆ ಅದು ಆಭ್ಯಾಂತರ- ಅಂದರೆ ಆಹಾರದ ಮೂಲಕ ಶರೀರಕ್ಕೆ ಬೇಕಾದ ಸ್ನೇಹವನ್ನು ನೀಡುವುದು. ಪಾಶ್ಚಿಮಾತ್ಯ ವೈದ್ಯಶಾಸ್ತ್ರವೂ ಲಿಪಿಡ್‌ಗಳು ಎಲ್ಲ ಜೀವಕೋಶಗಳ ಜೀವಾಳ ಅಂತ ಹೇಳ್ತಾರೆ. Blood, lymph, hormones, enzymes- ಎಲ್ಲದರ ಉತ್ಪತ್ತಿಗೂ lipids ಬೇಕು! Endocrine, reproductive, digestive, nervous system greatly depend on lipids. ಒಟ್ಟಾರೆ ನಮ್ಮ ಆರೋಗ್ಯದ ಸ್ಥಿತಿಯನ್ನು ಕಾಪಾಡಿಕೊಳ್ಳಲು, ರೋಗ ಬಾರದಂತೆ ನೋಡಿಕೊಳ್ಳಲು, ಕೊನೆಗೆ ರೋಗವನ್ನು ಪರಿಹರಿಸಲು ಸಹ ಸ್ನೇಹ ನಿತ್ಯವೂ ಬೇಕೇ ಬೇಕು.

ಆಭ್ಯಂತರ ಸ್ನೇಹದ ಪ್ರಯೋಜನಗಳ ಪಟ್ಟಿ ಮಾಡ್ತಾ ಹೋದ್ರೆ ಇದೇ ರೀತಿಯ ಎರಡು-ಮೂರು articles publish ಮಾಡಬಹುದು. ಅಷ್ಟು proven facts ಇದೆ. ಮತ್ತೊಮ್ಮೆ ಈ ವಿಷಯದ ಬಗ್ಗೆ ಹಂಚಿಕೊಳ್ಳುತ್ತೇನೆ. ಈಗ ಬಾಹ್ಯ ಸ್ನೇಹವಾದ ಅಭ್ಯಂಗ ಯಾಕೆ ಮಾಡಬೇಕು ಅನ್ನೋ ಪ್ರಶ್ನೆ ಯನ್ನು ಹಲವಾರು ಜನ ಹಲವಾರು ಬಾರಿ ಕೇಳಿದ್ದಾರೆ. ಹಾಗಾಗಿ ಆ ಪ್ರಶ್ನೆಗೆ ಉತ್ತರವನ್ನು ನಿಮ್ಮ ಮುಂದೆ ಇಡುತ್ತೇನೆ. ಅಭ್ಯಂಗದ ಮೊದಲ ಭಾಗ – ಅಂದರೆ ತಲೆಗೆ ಅಥವಾ ನೆತ್ತಿಗೆ ನಿತ್ಯವೂ ಚೆನ್ನಾಗಿ ಎಣ್ಣೆಯನ್ನು ಹಾಕುವುದು. ನೆನಪಿರಲಿ ಇದು ಕೇವಲ ಕೂದಲು ಚೆನ್ನಾಗಿ ಬೆಳೆಯುವುದಕ್ಕೆ ಮಾತ್ರವಲ್ಲ. ಶಿರಸ್ಸಿಗೆ ನಿತ್ಯವೂ ಎಣ್ಣೆಯ ಅಭ್ಯಂಗ ಮಾಡುವುದರಿಂದ ಇಂದ್ರಿಯಗಳ ಕಾರ್ಯಕ್ಷಮತೆ ಹೆಚ್ಚುತ್ತದೆ.

ದೃಷ್ಟಿ ಶಕ್ತಿ, ಗಂಧಶಕ್ತಿ ಮತ್ತು ಶ್ರವಣ ಶಕ್ತಿ ಹೆಚ್ಚುತ್ತದೆ. ತಲೆಯ ನೋವು, ತಲೆಯ ರೋಗಗಳು ನಿವಾರಣೆಯಾಗುತ್ತದೆ. ಕೇಶ ವೃದ್ಧಿಸುತ್ತದೆ. ಒಳ್ಳೆಯ ನಿದ್ದೆಯನ್ನು ನೀಡಿ ಕಾರ್ಯಕ್ಷಮತೆ ಮತ್ತು ಪ್ರಸನ್ನತೆಯನ್ನು ನೀಡುತ್ತದೆ. ಕ್ರೋಧವನ್ನು ನೀಗಿಸಿ ತಾಳ್ಮೆಯನ್ನ ಹೆಚ್ಚಿಸುತ್ತದೆ. ಶಿರೋ ಅಭ್ಯಂಗದಿಂದ ಮನಸ್ಸಿನ ಶಾಂತಿಯ ಅನುಭವ ಖಂಡಿತ. ಅಭ್ಯಂಗದ next step – ಕಿವಿಗೆ ಎಣ್ಣೆಯ ಹನಿಗಳನ್ನು ಹಾಕಿಕೊಳ್ಳುವುದು. ನಿತ್ಯವೂ ಕಿವಿಗಳಿಗೆ ತೈಲವನ್ನು ಹಾಕುವುದರಿಂದ ಕಿವಿಗೆ ಬರುವ ರೋಗಗಳು, ಕಿವಿಯ ಕೊಳೆ, ಕತ್ತಿನ ಸಮಸ್ಯೆ, ಹಲ್ಲಿನ ಸಮಸ್ಯೆ, ಅತಿಶಬ್ದಶ್ರವಣ, ಕಿವುಡುತನ ಮುಂತಾದವುಗಳು ಬರುವುದಿಲ್ಲ.

ಕಿವಿಗೆ ಎಣ್ಣೆ ಹಾಕುವುದರಿಂದ ಕಿವಿ ಸೋರುತ್ತದೆ ಹಾಗೂ ತೊಂದರೆ ಉಂಟಾಗುತ್ತದೆ ಅನ್ನುವುದು ಕೆಲವರ ಭಾವನೆ. ಇದು ಸಂಪೂರ್ಣ ತಪ್ಪಲ್ಲದಿದ್ದರೂ ಪೂರ್ತಿ ಸರಿಯಂತೂ ಅಲ್ಲ. ಕಿವಿಗೆ ಹಾಕುವ ತೈಲದ ಪ್ರಮಾಣ, ಕ್ರಮ , ತೈಲದಲ್ಲಿ ಸೇರಿರುವ ನೀರಿನ ಅಂಶದಿಂದಾಗಿ ತೊಂದರೆ ಸಹಜ. ಆದರೆ ಹಾಕುವ ತೈಲ ಬೆಚ್ಚಗಿದ್ದು, ಸ್ವಲ್ಪ ಮಾತ್ರ ಹಾಕಿದ್ದು, ಸ್ವಲ್ಪ ಹೊತ್ತು ಬಿಟ್ಟು ಕಿವಿಯಿಂದ ಸಂಪೂರ್ಣ ತೆಗೆದು, ಸ್ನಾನ ಮಾಡಿ, ಒಣಗಿಸಿಕೊಂಡರೆ ತೊಂದರೆ ಇಲ್ಲ. Tympanic Membrane ಕಿವಿಯ ಒಳಗಿರುವ ಶಬ್ದ ಗ್ರಾಹಕ ಪದರವು ವಾಯುಭೂತಾಶ್ರಿತವಾದ ಚರ್ಮದ ರೂಪಾಂತರವಾದ್ದರಿಂದ ಅದರ ದೀರ್ಘ ಕಾಲೀನ ಬಾಳ್ವಿಕೆಗೆ ತೈಲ ಸಂಪರ್ಕ ಅತ್ಯಂತ ಅವಶ್ಯಕ.

ಹಾಗೆಯೇ, ಕಿವಿಯ ಒಳಗೆ ಪ್ರತಿದಿನ ಸ್ರವಿಸುವ ಮಲಾಂಶವನ್ನು ಬೆಚ್ಚಗಿನ ತೈಲವು ದ್ರವೀಕರಿಸಿ, ಹೊರ ಹಾಕಿ ಇಂದ್ರಿಯವನ್ನು ಶುದ್ಧೀಕರಿಸುತ್ತದೆ.
ಹಾಗಾಗಿ ಕಿವಿಗೆ ನಿತ್ಯ ಎಣ್ಣೆ ಹಾಕಲೇಬೇಕು. ಕಿವಿಗೆ ಎಣ್ಣೆ ಹಾಕಿದ ಮೇಲೆ ಮಾಡುವ ಸಂಪೂರ್ಣ ಶರೀರ ಅಭ್ಯಂಗವು ಜ್ವರವನ್ನು ನಾಶ ಮಾಡುತ್ತದೆ. æ.It has anti&ageing effect and slows down ageing. Ageing is mainly because of oxidation & free radicle release.. ಅಭ್ಯಂಗವು oxidation process ನ ಕಡಿಮೆ ಮಾಡುತ್ತದೆ. ಕಬ್ಬಿಣದ ತುಕ್ಕನ್ನು ತಡೆಯಲು ನಾವು ಎಣ್ಣೆ ಹಚ್ಚುತ್ತೇವೆ, ಅಲ್ಲವೇ? ಹಾಗೆಯೇ ಶರೀರಕ್ಕೂ ಎಣ್ಣೆ ಹಚ್ಚುವುದರಿಂದ ಮುಪ್ಪುತನವನ್ನು ನಿವಾರಿಸಬಹುದು/ ನಿಧಾನಿಸಬಹುದು. ಅಭ್ಯಂಗವು ರೋಗ ನಿವಾರಕ ಶಕ್ತಿಯನ್ನು ಹೆಚ್ಚಿಸುತ್ತದೆ! ಹೌದು ಇದು ಮಾಡುತ್ತೆ! ಎಣ್ಣೆ ಹಚ್ಚಿ ಚರ್ಮವನ್ನು ಉಜ್ಜುವುದರಿಂದ ರಕ್ತ ಸಂಚಾರ ಹೆಚ್ಚಾಗಿ, ಒಳ್ಳೆ ರಕ್ತ ಜೀವಕಣಗಳ ಒಳಗೆ ಹೋಗಿ, ಪೋಷಣೆ ನೀಡಿ, ಹೊರಗೆ ಬರಬೇಕಾದರೆ ಮಲವನ್ನು/ toxin ಗಳನ್ನು ತೆಗೆದುಕೊಂಡು ಬಂದು ಜೀರ್ಣಾಂಗದಲ್ಲಿ dump ಮಾಡುತ್ತೆ.

ಅಲ್ಲಿಂದ ಮಲದ ಮೂಲಕ ದೇಹದಿಂದ ಆಚೆ ಕಳಿಸುತ್ತೆ. ಅಭ್ಯಂಗವು ದೇಹದಲ್ಲಿ ಟಾಕ್ಸಿನ್ ಶೇಖರಣೆ ಆಗುವುದಕ್ಕೆ ಬಿಡುವುದಿಲ್ಲ. This is Daily Detox. ಮನೆಯನ್ನು ಹೇಗೆ ನಿತ್ಯ ಸ್ವಚ್ಛ ಮಾಡ್ತಾ ಇದ್ದರೆ ಕೊಳೆ ಸೇರಿಕೊಳ್ಳುವುದಿಲ್ಲವೋ, ಯಾವಾಗಲೂ ಶುದ್ಧವಾಗಿರುತ್ತೋ, ಅದೇ ರೀತಿ ಅಭ್ಯಂಗದಿಂದಲೂ ದೇಹದ ಪ್ರತಿಯೊಂದು ಜೀವಕಣವೂ ಕೂಡ ಶುದ್ಧವಾಗಿರುತ್ತೆ, ಚುರುಕಾಗಿರುತ್ತೆ. ಇದರಿಂದ ರೋಗ ನಿವಾರಣೆ ದಿನ ನಿತ್ಯವೂ ಸಹಜವಾಗಿ ಆಗ್ತಾ ಇರುತ್ತೆ.

ಅಭ್ಯಂಗವು infection ಗಳನ್ನು ತಡೆಗಟ್ಟುತ್ತದೆ. ಸಿಂಪಲ್ ಆಗಿ ಹೇಳಬೇಕು ಅಂದರೆ ವೈರಸ್, ಬ್ಯಾಕ್ಟೀರಿಯಾ ಗಳು ಸ್ನೇಹ ಮಾಧ್ಯಮದಲ್ಲಿ- fat
medium ನಲ್ಲಿ ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತದೆ. ಅದರಲ್ಲಿ ಅವುಗಳು ಜೀವಿಸಲು ಸಾಧ್ಯವಾಗುವುದಿಲ್ಲ. Micro&organisms cannot survive
in fat media. ಸೂಕ್ಷ್ಮ ಜೀವಿಗಳು ನಮ್ಮ ದೇಹವನ್ನು ಪ್ರವೇಶ ಮಾಡುವುದು ಹೇಗೆ, ಹೇಳಿ? ಚರ್ಮದ ಮೂಲಕ ಮತ್ತು ನವ ರಂಧ್ರಗಳ ಮೂಲಕ.
ಅಭ್ಯಂಗ ಮಾಡುವುದರಿಂದ ಚರ್ಮಕ್ಕೆ, ಕಿವಿಗೆ, ಮೂಗಿಗೆ, ಬಾಯಿಗೆ , ಗುದದ್ವಾರಕ್ಕೆ ಸ್ನೇಹವನ್ನು ಹಾಕುವುದರ ಮೂಲಕ ಈ ದ್ವಾರಗಳಲ್ಲಿ ಸ್ನೇಹದ
ಪದರವು ಉತ್ಪತ್ತಿಯಾಗುತ್ತದೆ.

This is a security system.ಯಾವುದೇ ಸೂಕ್ಷ್ಮಜೀವಿಗಳಾದರೂ ಈ ಸ್ನೇಹ ಮಾಧ್ಯಮದ ಸಂಪರ್ಕಕ್ಕೆ ಬಂದ ಕೂಡಲೇ ಅವು ಅ ನಾಶವಾಗಿ ಹೋಗುತ್ತೆ . ಹೀಗಿದ್ದಾಗ, ದೇಹದ ಒಳಗೆ ಅವುಗಳು ಹೋಗಿ ರೋಗ ಉಂಟು ಮಾಡುವ ಸಂಭವವೆಲ್ಲಿ? ಸ್ನೇಹಿತರೆ, ಈ ಒಂದು ಸ್ನೇಹ ಅಭ್ಯಂಗದ ಅಭ್ಯಾಸದಿಂದಲೇ ಕೋವಿಡ್ ಸಮಯದಲ್ಲಿ ಎಷ್ಟೋ ಆಯುರ್ವೇದ ವೈದ್ಯರು ತಾವು ಕರೋನಾ ಪಾಸಿಟಿವ್ ಆಗದೆ ಹಲವಾರು ರೋಗಿಗಳನ್ನು positively ಗುಣ ಮಾಡುವುದಕ್ಕೆ ಸಾಧ್ಯವಾಗಿದ್ದು. ಇನ್ನು, ಅಭ್ಯಂಗದ ಸತತ ಅಭ್ಯಾಸವು ದಿನನಿತ್ಯದ ಒತ್ತಡವನ್ನು ಉಪಶಮನ ಮಾಡುತ್ತೆ. Research ಪ್ರಕಾರ ಅಭ್ಯಂಗ ಮಾಡುವುದರಿಂದ ದೇಹದ happy chemicals & Dopamine, serotonin, oxytocin, endorphinಗಳ ಸ್ರವಣವಾಗಿ ಒತ್ತಡ ನಿವಾರಣೆ ಆಗುತ್ತದೆ.

ಇದು ಮಾನಸಿಕ ಲವಲವಿಕೆ, ಉತ್ಸಾಹವನ್ನು ನೀಡಿ ಇಡೀ ದಿನ ಪ್ರಸನ್ನವಾಗಿರಲು ಸಹಾಯಕಾರಿ. ಆಯುರ್ವೇದದ ತ್ರಿದೋಷಗಳಲ್ಲಿ ವಾತದೋಷವು ಬಹು ಮುಖ್ಯವಾದದ್ದು. ಇದಕ್ಕೆ ಕಾರಣ ಹಲವು. ಈ ದೋಷವು ಸುಸ್ಥಿತಿಯಲ್ಲಿ ಇದ್ದಾಗ ಹೇಗೆ ದೇಹವನ್ನು ಪಾಲಿಸುತ್ತದೆಯೋ ಅದೇ ರೀತಿ ನಮ್ಮ ತಪ್ಪು ಆಹಾರ- ವಿಹಾರ-ವಿಚಾರಗಳಿಂದ ವಿಕೃತವಾದಾಗ ದೇಹದ ಎಲ್ಲಾ ಕ್ರಿಯೆಗಳನ್ನು ತಲೆಕೆಳಗೆ ಮಾಡುವುದರಲ್ಲಿ ಸಂಶಯವಿಲ್ಲ. ಹಾಗಾಗಿ ಇದನ್ನು ಜೋಪಾನವಾಗಿ ನೋಡಿಕೊಳ್ಳುವುದು ಆರೋಗ್ಯ ಪಾಲನೆಯ ಬಹು ಮುಖ್ಯವಾದ ಭಾಗ.

ಉತ್ತಮವಾದ ತೈಲದಿಂದ ದಿನನಿತ್ಯ ಅಭ್ಯಂಗ ಮಾಡುವ ಅಭ್ಯಾಸವು ಈ ವಾತದೋಷವನ್ನು ಸದಾ ಸುಸ್ಥಿತಿಯಲ್ಲಿ ಇಡಲು ರಾಮಬಾಣದಂತೆ ಸಹಾಯ ಕಾರಿ. ಆಯುರ್ವೇದ ಹೇಳುತ್ತೆ ‘ನಿದ್ದೆ’ ಅರೋಗ್ಯದ ಉಪಸ್ಥಂಭ ಎಂದು. ನಿದ್ದೆ ಸರಿಯಾಗಿ ಇದ್ದರೆ ಮಾತ್ರ ಸ್ವಾಸ್ಥ್ಯ ಸಂಪಾದನೆ ಸಾಧ್ಯ. ದಿನನಿತ್ಯ ಮಾಡುವ ಅಭ್ಯಂಗವು ನಮಗೆ ಗಾಢವಾದ ಸಕಾಲಿಕ ನಿದ್ದೆಯನ್ನ ನೀಡುತ್ತದೆ. ನಿದ್ದೆಯ ಸಮಸ್ಯೆ ಇದ್ದರೆ ಇಂದಿನಿಂದಲೇ ಅಭ್ಯಂಗವನ್ನು ಶುರು ಮಾಡಿ ಸುಖವಾದ ನಿದ್ರೆಯನ್ನು ಅನುಭವಿಸಿ.

ಅಭ್ಯಂಗವು ಅಗ್ನಿಯನ್ನು, ತನ್ಮೂಲಕ ಜೀರ್ಣಶಕ್ತಿಯನ್ನು ಚುರುಕು ಮಾಡಿ, ಆಹಾರದಲ್ಲಿರುವ ಪೋಷಕಾಂಶಗಳನ್ನು ದೇಹದಕಣಗಳು ಹೀರಿಕೊಳ್ಳು ವಂತೆ ಮಾಡುವುದರಿಂದ deficiencyಗಳನ್ನು ನಿವಾರಿಸುತ್ತದೆ. ಕರುಳಿನ ಚಟುವಟಿಕೆಯನ್ನು ಉತ್ತೇಜಿಸಿ ಮಲ ಪ್ರವೃತ್ತಿ ಸರಾಗವಾಗಿ ಮಾಡುವುದರ ಜೊತೆಗೆ ಟಾಕ್ಸಿನ್‌ಗಳನ್ನು ದೇಹದಿಂದ ಹೊರಹಾಕುತ್ತದೆ. ಸಂಧಿ-ಮೂಳೆಗಳಿಗೆ ಜಡ್ಡಿನಾಂಶ ತಲುಪಿಸಿ, ಪೋಷಿಸುವುದರ ಮೂಲಕ ಸಂಧಿ ನೋವು, ಮೂಳೆ ಸವೆತ ಹಾಗೂ ಮೈ-ಕೈ ನೋವುಗಳನ್ನು ಪರಿಹರಿಸುತ್ತದೆ. ಮಾಂಸಖಂಡಗಳಿಗೆ, ಪೇಶಿಗಳಿಗೆ ಸ್ಥಿರತೆ ನೀಡಿ ಒಳ್ಳೆಯ muscle tone ನೀಡುತ್ತದೆ.

ಆಭ್ಯಂಗವು ಚರ್ಮದ ಕಾಂತಿಯನ್ನು ಹಾಗೂ ಕೂದಲಿನ ಆರೋಗ್ಯವನ್ನು ಹೆಚ್ಚಿಸುವುದು proven fact! ಚರ್ಮದಲ್ಲಿ nerve&endings ಇರುವುದರಿಂದ ದಿನನಿತ್ಯ ಅಭ್ಯಂಗದ ಅಭ್ಯಾಸವು ನರತಂತಿಗಳನ್ನು ಪೋಷಿಸಿ, Nervous system ನ್ನು ಬಲಿಷ್ಠಗೊಳಿಸುತ್ತದೆ. ಬುದ್ಧಿ ಶಕ್ತಿ ಹಾಗೂ ನೆನಪಿನ ಶಕ್ತಿಯನ್ನು ವರ್ಧಿಸಿ ಮಾನಸಿಕ ಸ್ಥಿರತೆಗೆ ಕಾರಣ ಈ ಅಭ್ಯಂಗ. ಆಗಲೇ ಹೇಳಿದ ಹಾಗೆ ಇಂದ್ರಿಯಗಳನ್ನು ಬಲಿಷ್ಠ ಮಾಡಿ ನೂರು ವರ್ಷಗಳ ಕಾಲ ಕಣ್ಣು, ಕಿವಿ, ಮೂಗು, ಬಾಯಿ ಹಾಗೂ ಚರ್ಮಗಳನ್ನು ಚುರುಕಾಗಿರಿಸುತ್ತದೆ. ದಿನನಿತ್ಯದ ಶ್ರಮ ಹಾಗೂ ಸುಸ್ತನ್ನು ನಿವಾರಿಸಿ ಶಕ್ತಿ ಹಾಗೂ ಲವಲವಿಕೆಯನ್ನು
ನೀಡುತ್ತದೆ.

ಒಟ್ಟಾರೆ ಅಭ್ಯಂಗವು ದೇಹ-ಇಂದ್ರಿಯ- ಮನಸ್ಸುಗಳನ್ನು ದಿನನಿತ್ಯ ಶೋಽಸಿ, ಪೋಷಿಸಿ, ರಕ್ಷಿಸಿ ನಮ್ಮನ್ನು ಶತಾಯುಷಿಗಳನ್ನಾಗಿ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಇದಕ್ಕಿಂತ ಉತ್ತಮವಾದ Healthcare practice ಇನ್ಯಾವುದಿದೆ ಹೇಳಿ?! It is indeed the complete healthcare package. ಅದಕ್ಕೆ ತಾನೇ ಆಚಾರ್ಯರು ಹೇಳಿದ್ದು ಅಭ್ಯಂಗಂ ನಿತ್ಯ ಆಚರೇತ್!

Leave a Reply

Your email address will not be published. Required fields are marked *