Wednesday, 11th December 2024

ಜ್ಞಾನ, ಅನುಭವ, ವಿಶ್ವಾಸಾರ್ಹತೆಯ ಪ್ರತಿರೂಪ

ಗುಣಗಾನ

ಡಾ.ಡಿ.ಎಚ್.ಶಂಕರಮೂರ್ತಿ

ಕಳೆದ ಏಳೂವರೆ ದಶಕಗಳಿಂದ ಸಾರ್ವಜನಿಕ ಜೀವನದಲ್ಲಿರುವ ಆಡ್ವಾಣಿಯವರು ವೈಯಕ್ತಿಕ ಮತ್ತು ಸಾರ್ವಜನಿಕ ಜೀವನದಲ್ಲಿ ಪರಿಶು ದ್ಧತೆ-ಪ್ರಾಮಾ ಣಿಕತೆಗಳನ್ನು ಕಾಪಿಟ್ಟುಕೊಂಡು ಬಂದಿರುವ ವ್ಯಕ್ತಿ. ಅವರು ವಿಶ್ವಾಸಾರ್ಹತೆ ಹೊಂದಿರುವ ನಾಯಕರಷ್ಟೇ ಅಲ್ಲ, ರಾಷ್ಟ್ರೀಯ-ಅಂತಾರಾಷ್ಟ್ರೀಯ ವ್ಯವಹಾರಗಳ ಎಲ್ಲಾ ಅಂಶಗಳ ಬಗ್ಗೆ ಅಪಾರ ಜ್ಞಾನ ಮತ್ತು ಅನುಭವ ಹೊಂದಿರುವ ವ್ಯಕ್ತಿಯೂ ಹೌದು.

ಲಾಲ್ ಕೃಷ್ಣ ಆಡ್ವಾಣಿಯವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ ಭಾರತದ ರಾಜಕೀಯ ಕ್ಷೇತ್ರಕ್ಕೆ ಬಂದವರು. ದೇಶ ಅಭಿವೃದ್ಧಿ ಪಥದತ್ತ ಸಾಗುವಲ್ಲಿ ಭಾರತದ ಮಾಜಿ ಉಪಪ್ರಧಾನಿ ಆಡ್ವಾಣಿ ಅವರ ಪಾತ್ರ ಶ್ಲಾಘನೀಯ. ಇಡೀ ಭಾರತ ದೇಶವೇ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿರುವ ಸುಸಂದರ್ಭವಾದ ರಾಮಮಂದಿರ ನಿರ್ಮಾಣದ ರೂವಾರಿ ಆಗಿರುವ ಮಾನ್ಯರಿಗೆ ‘ಭಾರತರತ್ನ’ ಪುರಸ್ಕಾರ ಲಭಿಸಿರುವುದು ದೇಶದ ಜನರಿಗೆ ಅದರಲ್ಲಿ ಯೂ ಬಿಜೆಪಿಯ ಲಕ್ಷಾಂತರ ಕಾರ್ಯಕರ್ತರೊಂದಿಗೆ ನನಗೂ ಬಹಳ ಸಂತಸ ತಂದಿದೆ.

ಲಾಲ್ ಕೃಷ್ಣ ಆಡ್ವಾಣಿ ಅವರು ಏಳೂವರೆ ದಶಕಗಳಿಂದ ಸಾರ್ವಜನಿಕ ಜೀವನದಲ್ಲಿದ್ದಾರೆ. ಅವರು ವೈಯಕ್ತಿಕ ಮತ್ತು ಸಾರ್ವಜನಿಕ ಜೀವನದಲ್ಲಿ
ಪರಿಶುದ್ಧತೆ ಮತ್ತು ಪ್ರಾಮಾಣಿಕತೆಗಳನ್ನು ಕಾಪಿಟ್ಟುಕೊಂಡು ಬಂದಿರುವ ವ್ಯಕ್ತಿಯೂ ಹೌದು. ಅವರು ಅತ್ಯಂತ ವಿಶ್ವಾಸಾರ್ಹತೆ ಹೊಂದಿರುವ ನಾಯಕ ರಷ್ಟೇ ಅಲ್ಲ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳ ಎಲ್ಲಾ ಅಂಶಗಳ ಬಗ್ಗೆ ಅಪಾರವಾದ ಜ್ಞಾನ ಮತ್ತು ಅನುಭವ ಹೊಂದಿರುವ ವ್ಯಕ್ತಿಯೂ ಹೌದು.

ಲಕ್ಷಾಂತರ ಜನರಂತೆ ನಾನು ಕೂಡ ಆಡ್ವಾಣಿಯವರೊಂದಿಗೆ ನಿಕಟ ಸಂಪರ್ಕಕ್ಕೆ ಬಂದಿರುವುದು ಈ ಸಂದರ್ಭದಲ್ಲಿ ನೆನಪಾಗುತ್ತಿದೆ. ಅವರೊಂದಿಗೆ ಪ್ರವಾಸ ಮಾಡುವ ಸಂದರ್ಭದಲ್ಲಿ ಚಾಲಕನಾಗಿ ಅವರನ್ನು ರಾಜ್ಯದ ಹಲವೆಡೆ ಕರೆದೊಯ್ದಿದ್ದೇನೆ. ದೋಸೆ ಎಂದರೆ ಅವರಿಗೆ ಬಹಳ ಇಷ್ಟ. ಅವರಿಗೆ ಪ್ರಿಯವಾದ ಗರಿಗರಿ ದೋಸೆ ತಿನ್ನಿಸಲು ಬೆಂಗಳೂರಿನ ಚಾಲುಕ್ಯ ಹೋಟೆಲ್‌ಗೆ ನಾನೇ ಕಾರು ಚಾಲಕನಾಗಿ ಕರೆದೊಯ್ದಿದ್ದೇನೆ. ಶಿವಮೊಗ್ಗಕ್ಕೆ ಬಂದಾಗ
ಕೂಡ ನಮ್ಮ ಮನೆಯಲ್ಲಿ ದೋಸೆ ತಿನ್ನಲು ಇಚ್ಛಿಸುತ್ತಿದ್ದರು. ಅದರಂತೆ ಅವರನ್ನು ಮನೆಗೆ ಕರೆದುಕೊಂಡು ಹೋಗಿ ದೋಸೆ ಮಾಡಿಸಿ ಬಡಿಸಿದ್ದೆ.

ಚಪ್ಪರಿಸಿಕೊಂಡು ತಿನ್ನುತ್ತಿದ್ದರು. ಬಹುಮುಖ್ಯ ಸಂಗತಿ ಏನೆಂದರೆ, ಅವರು ತಮ್ಮ ಆರೋಗ್ಯದ ಕಡೆ ತುಂಬಾ ನಿಗಾ ವಹಿಸುತ್ತಿದ್ದರು. ಸಾರ್ವಜನಿಕ ಸಮಾರಂಭಗಳಲ್ಲಿ ಅವರು ಹಿಂದಿಯಲ್ಲಿ ಮಾಡುತ್ತಿದ್ದ ಭಾಷಣವನ್ನು ಕನ್ನಡಕ್ಕೆ ಅನುವಾದಿಸುವ ಅವಕಾಶ ನನಗೆ ಸಿಗುತ್ತಿತ್ತು. ಕೆಲವೊಮ್ಮೆ ಅವರೇ ‘ಶಂಕರ್ ಜೀ, ನನ್ನ ಭಾಷಣವನ್ನು ನೀವೇ ಕನ್ನಡಕ್ಕೆ ತರ್ಜುಮೆ ಮಾಡಿ ಹೇಳಿ’ ಎನ್ನುತ್ತಿದ್ದರು. ಅನೇಕ ಬಾರಿ ಅವರ ಪರಿಚಯ ಮಾಡಿಕೊಡುವ ಅವಕಾಶ ನನಗೆ ಸಿಕ್ಕಿತ್ತು. ಅದನ್ನು ನನ್ನ ಅದೃಷ್ಟವೆಂದೇ ಪರಿಗಣಿಸುತ್ತೇನೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿರುವುದು ಭಾರತೀಯರಿಗೆ ಹೆಮ್ಮೆ ತರುವ ವಿಚಾರ. ಇದರ ಪ್ರಮುಖ ಕಾರಣಕರ್ತರು ಲಾಲ್ ಕೃಷ್ಣ ಆಡ್ವಾಣಿ. ರಥಯಾತ್ರೆ ಮೂಲಕ ಅವರು ಕರಸೇವಕರನ್ನು ಹುರಿದುಂಬಿಸಿದ ಸಂದರ್ಭ ಈಗಲೂ ಕಣ್ಣಿಗೆ ಕಟ್ಟುವಂತಿದೆ. ರಾಮಮಂದಿರ ನಿರ್ಮಾಣದ ಕಾರಣಕರ್ತರಾಗಿದ್ದ ಹಾಗೂ ವಿಶಿಷ್ಟ ನಾಯಕತ್ವ ಗುಣ ಹೊಂದಿರುವ ಲಾಲ್ ಕೃಷ್ಣ ಆಡ್ವಾಣಿ ಅವರಿಗೆ, ಅಯೋಧ್ಯೆಯಲ್ಲಿ ಅವರ ಕನಸಿನ ರಾಮ ಮಂದಿರ ನಿರ್ಮಾಣವಾಗಿ ಬಾಲರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ‘ಭಾರತ ರತ್ನ’ ಲಭಿಸಿರುವುದು ನಮ್ಮೆಲ್ಲರ ಸಂತಸವನ್ನು ದುಪ್ಪಟ್ಟು ಮಾಡಿದೆ.

(ಲೇಖಕರು ವಿಧಾನ ಪರಿಷತ್ ಮಾಜಿ ಸಭಾಪತಿ)