Friday, 25th October 2024

ಇನ್ನೂ ಇರಲಿ ಸೇವೆ!

ತನ್ನಿಮಿತ್ತ

ಶ್ರೀವತ್ಸ ಡಿ.ಗಾಂವ್ಸಕರ್‌

ಹತ್ತಾರು ಸಾವಿರ ವರುಷಗಳ ಇತಿಹಾಸವಿರುವ ನಮ್ಮ ದೇಶದಲ್ಲಿ ಸಾವಿರ ವರ್ಷಗಳ ಕಾಲ ಪರಕೀಯರ ದಾಳಿಯಾಗುತ್ತದೆ ಸುಮಾರು ಇನ್ನೂರು ವರ್ಷಗಳ ಕಾಲ ಪಾಶ್ಚಿಮಾತ್ಯರ ಆಳ್ವಿಕೆಯ ನಂತರ ಆಗ ೧೫, ೧೯೪೭ ರಂದು ಭಾರತ ದೇಶಕ್ಕೆ ಆಡಳಿತಾತ್ಮಕ ಸ್ವಾತಂತ್ರ್ಯ ಲಭಿಸಿತ್ತು. ಅದರ ಜೊತೆ ಬ್ರಿಟೀಷರು ಭಾರತವನ್ನು ಬಿಟ್ಟು ಹೋದರೂ, ಅವರ ಮಾನಸಿಕತೆ, ವೈಚಾರಿಕತೆಯನ್ನು ಬಿಟ್ಟು ಹೋಗಿದ್ದರು.

ಅದು ಅಂದಿನ ಯುವಕರ ಮನಸ್ಸಿನಲ್ಲಿ ಗಾಢವಾಗಿ ಬೀರಿ ಬಿಟ್ಟಿತ್ತು. ಆಗ, ಕಲಿಕೆಯು ಬ್ರಿಟೀಷರ ಕೆಳಗೆ ಕೆಲಸ ಮಾಡುವುದಕ್ಕೆ ಎನ್ನುವುದನ್ನು ಬಿಟ್ಟರೆ ಮತ್ತೇನು ಬೇರೆ ವಿಶೇಷಣಗಳಿರಲಿಲ್ಲ. ಆದರೆ ಇಂತಹ ಸಂದರ್ಭದಲ್ಲಿ ದೇಶದಲ್ಲಿ ಭಾರತದ ಅಸ್ಮಿತೆಯನ್ನು ಉಳಿಸಿ, ವೈಚಾರಿಕತೆಯನ್ನು ಪುನರುಜ್ಜೀವನ ಗೊಳಿಸುವುದು ಮತ್ತು ಯುವಕರನ್ನು ಜಾಗೃತಗೊಳಿಸುವ ಸಲುವಾಗಿ ರಾಷ್ಟ್ರ ಪುನರ್ನಿ ರ್ಮಾಣದ ಧೃಡ ಸಂಕಲ್ಪದೊಂದಿಗೆ ೧೯೪೮ ರಲ್ಲಿ ಪ್ರೊ.ಯಶ್ವಂತ್ ರಾವ್ ಕೇಳ್ಕರ್ ಸೇರಿದಂತೆ ಅನೇಕ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಸೇರಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಅನ್ನು ಪ್ರಾರಂಭಿಸಿದರು.

ನಂತರ ಜುಲೈ ೯, ೧೯೪೯ ರಂದು ಅಧಿಕೃತ ವಾಗಿ ನೋಂದಾಯಿಸಲ್ಪಟ್ಟಿತು. ಅಲ್ಲಿಂದ ಇವತ್ತಿನ ವರೆಗೆ ಪ್ರತೀ ವರ್ಷ ಎಬಿವಿಪಿ ಸಂಸ್ಥಾಪನಾ ದಿನವನ್ನು ರಾಷ್ಟ್ರೀಯ ವಿದ್ಯಾರ್ಥಿ ದಿನ ವನ್ನಾಗಿ ಆಚರಿಸಲಾಗುತ್ತಿದೆ. ಇಂದಿಗೆ ವಿದ್ಯಾರ್ಥಿ ಪರಿಷತ್ ೭೬ ವರ್ಷಗಳ ಸಂಪೂರ್ಣ ರಾಷ್ಟ್ರಕಾರ್ಯವನ್ನು ಮುಗಿಸಿ, ೭೭ನೇ ವರ್ಷ ದೆಡೆಗೆ ಪದಾರ್ಪಣೆ ಮಾಡುತ್ತಿದೆ.

ಜ್ಞಾನ, ಶೀಲ, ಏಕತೆಯೆಂಬ ಧ್ಯೇಯದೊಂದಿಗೆ ಕಳೆದ ೭೬ ವರ್ಷ ಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆಯ ಹಿತದೃಷ್ಟಿಯಲ್ಲಿ ಅನೇಕ ಆಂದೋಲನಗಳನ್ನು ಎಬಿವಿಪಿ ಮಾಡುತ್ತಲೇ ಬಂದಿದೆ. ಅದರಲ್ಲಿ ಪ್ರಮುಖವಾಗಿ ಭಾರತ ನನ್ನ ಮನೆ, ಅಂತಾರಾಜ್ಯ ಛಾತ್ರ ಜೀವನ ದರ್ಶನ, ೧೮ ವರ್ಷಕ್ಕೆ ಮತ ದಾನದ ಅಧಿಕಾರಕ್ಕೆ ಬೇಡಿಕೆ, ಇಂದಿನ ವಿದ್ಯಾರ್ಥಿ ಇಂದಿನ ಪ್ರಜೆ ಉದ್ಘೋಷ, ೩೭೦ನೇ ವಿಽ ರದ್ದತಿ ಬಗ್ಗೆ ದೇಶ ವ್ಯಾಪಿ ಆಂದೋಲನ, ೧೯೯೦ರ ಕಾರ್ಶ್ಮೀ ಮಾರ್ಚ್ (ಕಾಶ್ಮೀರ್ ಚಲೋ), ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಶಿಕ್ಷಣದ ಭಾರತೀಕರಣಕ್ಕೆ ಆಗ್ರಹ, ಬಾಂಗ್ಲಾ ನುಸುಳುಕೋರರ ವಿರುದ್ಧ ರಾಷ್ಟ್ರೀಯ ಸುರಕ್ಷೆಯ ಪರವಾಗಿ ಆಂದೋಲನ, ಚಿಕನ್ ನೆಕ್ ಚಲೋ ಅಭಿಯಾನ, ಯೂತ್ ಆಗೈನ್ಸ್ಟ್ ಕರಪ್ಷನ್ ಅಭಿಯಾನ, ಮಾದಕ ದ್ರವ್ಯಗಳ ವ್ಯಸನದ ವಿರುದ್ಧ ಅಭಿಯಾನ ಹೀಗೆ ಹತ್ತು ಹಲವು ಅಭಿಯನಗಳನ್ನು ಎಬಿವಿಪಿ ವಿದ್ಯಾರ್ಥಿಗಳ ಹಾಗೂ ರಾಷ್ಟ್ರದ ಹಿತದೃಷ್ಟಿಯನ್ನು ಉಳಿಸುವ ಹಲವಾರು ಕಾರ್ಯಗಳನ್ನು ಮಾಡುತ್ತ ಬಂದಿದೆ.

ಪ್ರಸ್ತುತ ಸನ್ನಿವೇಶದಲ್ಲಿ ಎಬಿವಿಪಿ ೧೫ಕ್ಕೂ ಅಧಿಕ ಆಯಾಮ ಮತ್ತು ಗತಿವಿಧಿಗಳ ಮೂಲಕ ಕಾರ್ಯ ನಿರ್ವಹಿಸುತ್ತಿದೆ. ರಾಷ್ಟ್ರೀಯ ವಿಪತ್ತು, ಸೇವಾ ಕಾರ್ಯಗಳಿಗಾಗಿ ಸ್ಟೂಡೆಂಟ್ ಫಾರ್ ಸೇವಾ; ಜನ್, ಜಲ, ಜಂಗಲ, ಜಮೀನ್, ಜಾನ್ವಾರ್ ಈ ಐದು ವಿಷಯಗಳನ್ನು ಸೇರಿಸಿಕೊಂಡು ಪರಿಸರ ಸಂಬಂಧಿ ಅಭಿಯಾನಕ್ಕಾಗಿ ಸ್ಟೂಡೆಂಟ್ ಫಾರ್ ಡೆವಲಪ್ಮೆಂಟ, ಭಾರತೀಯ ಸಂಸ್ಕೃತಿಯನ್ನು ಉಳಿಸಿ- ಬೆಳೆಸಲು ರಾಷ್ಟ್ರೀಯ ಕಲಾ ಮಂಚ್, ಕ್ರೀಡಾ ಕ್ಷೇತ್ರದಲ್ಲಿ ಖೇಲೋ ಭಾರತ್ ಗತಿವಿಽಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದೆ.

ಆಯು ರ್ವೇದ ವಿದ್ಯಾರ್ಥಿಗಳಿಗೆ ಜಿeಸ, ಮೆಡಿಕಲ್ ಮತ್ತು ಡೆಂಟಲ್ ವಿದ್ಯಾರ್ಥಿಗಳಿಗಾಗಿ ಮೆಡೆ ವಿಷನ್, ರಾಷ್ಟ್ರೀಯ ಸಂಸ್ಥೆಗಳಲ್ಲಿ ಥಿಂಕ್ ಇಂಡಿಯಾ, ಕೃಷಿ ವಿದ್ಯಾರ್ಥಿಗಳಿಗಾಗಿ ಅಗ್ರಿವಿಷನ್, ಹೊಸ ಅನ್ವೇಷಣೆ ಮತ್ತು ಸ್ಟಾರ್ಟ್ ಅಪ್ ವಿದ್ಯಾರ್ಥಿಗಳಿಗಾಗಿ ಸವಿಷ್ಕಾರ್, ಜಾಗತಿಕ (ಮಾನವಿಕ) ಸವಾಲುಗಳ ಬಗ್ಗೆ ಭಾರತೀಯ ಕೇಂದ್ರಿತ ಶೋಧಕಾರ್ಯ, ಹೀಗೆ ಅನೇಕ ಆಯಾಮಗಳ ಮೂಲಕ ಕಾರ್ಯ ನಿರ್ವಹಿಸುತ್ತಾ ಇದೆ. ಇಂಜಿನಿಯರಿಂಗ್  ವಿದ್ಯಾರ್ಥಿ ಗಳಿಗಾಗಿ ಸೃಷ್ಠಿ ಎನ್ನುವ ವಿಶಿಷ್ಟ ಕಾರ್ಯಕ್ರಮ, ವಿದ್ಯಾರ್ಥಿನಿಯರ ಸ್ವ ರಕ್ಷಣಾ ಪ್ರಶಿಕ್ಷಣಕ್ಕಾಗಿ ಮಿಶನ್ ಸಾಹಸಿ, ಗ್ರಾಮಾಂತರ ಹಾಗೂ ಹಳ್ಳಿಗಳಲ್ಲಿ
ಮಹಿಳೆಯರಿಗಾಗಿ ಋತುಮತಿ ಕಾರ್ಯಕ್ರಮ ಹೀಗೆ ದೇಶದಾದ್ಯಂತ ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡುತ್ತಲೇ ಇದೆ.

ಹೀಗೆ ರಾಷ್ಟ್ರಕ್ಕಾಗಿ ಸಮರ್ಪಣೆ ಮಾಡಿಕೊಂಡ ವಿದ್ಯಾರ್ಥಿಗಳ ಸೇನೆ ದೇಶದ ಉದ್ದಗಲಕ್ಕೂ ಇದೆ. ಹಾಗೆಯೇ, ಎಬಿವಿಪಿಯ ಕಾರ್ಯಕರ್ತ
ರಾಗಿದ್ದವರು, ಇಂದು ದೇಶದ ಹಲವಾರು ಒಳ್ಳೆಯ ಸ್ಥಾನದಲ್ಲೂ ಇದ್ದಾರೆ. ಎಬಿವಿಪಿಯ ಕಾರ್ಯ ಇನ್ನೂ ನಡೆಯಲಿ, ಹೊಸ ಯೋಜನೆ-ಯೋಚನೆ ರೂಪಿಸಿ, ರಾಷ್ಟ್ರ ನಿರ್ಮಾಣದ ಸೇವೆಯಲ್ಲಿ ಎಬಿವಿಪಿ ತೊಡಗಿಸಿಕೊಳ್ಳಲಿ.

(ಲೇಖಕರು: ಕಾನೂನು ವಿದ್ಯಾರ್ಥಿ, ಉಡುಪಿ)