ತನ್ನಿಮಿತ್ತ
ಡಾ.ರಾಜೇಶ್ ಗುರಾಣಿ
ಉತ್ತರಾಖಾಂಡದ ಡೆಹರಾಡೂನನಲ್ಲಿ ಒಂದು ವಿದ್ಯಾರ್ಥಿ ಸಂಘಟನೆಯ ಅಭ್ಯಾಸ ವರ್ಗ ನಡೆದಿತ್ತು. ವೇದಿಕೆಯ ಮೇಲೆ ಆಸೀನ ರಾಗಿದ್ದ ಅತಿಥಿಗಳಿಗೆ ನಿಯಂತ್ರಕರು ಒಂದು ಚೀಟಿಯನ್ನು ಕೊಟ್ಟು, ಕಿವಿಯಲ್ಲಿ ಏನೋ ಹೇಳಿ ಕೆಳಗಿಳಿದರು. ತಕ್ಷಣದಲ್ಲೇ
ವೇದಿಕೆಯ ಮೇಲಿದ್ದ ವ್ಯಕ್ತಿ ಎದ್ದು ನೆರೆದಿದ್ದ ವಿದ್ಯಾರ್ಥಿ ಸಮುದಾಯಕ್ಕೆ ‘ಇನ್ನೇನು ಆರಂಭಿಸಿ ಸತತ ನಾಲ್ಕು ದಿನಗಳ ಕಾಲ ನಡೆಯಬೇಕಿದ್ದ ವರ್ಗವನ್ನು ಇಲ್ಲಿಗೇ ಮುಗಿಸುತ್ತಿದ್ದೇವೆ’ ಎಂದು ಘೋಷಿಸಿದರು.
ನೆರೆದಿದ್ದ ಎಲ್ಲ ವಿದ್ಯಾರ್ಥಿ ಹಾಗೂ ಅಧ್ಯಾಪಕ ಸಮುದಾಯದಲ್ಲಿ ದೊಡ್ಡದೊಂದು ಗೊಂದಲ. ಮುಂದುವರೆದು, ನಮ್ಮ ಅನೇಕ ಜನ ಬಂಧುಗಳು ರಾಜ್ಯದಲ್ಲಿ ತಲೆದೂರು ತ್ತಿರುವ ನೆರೆ ಪ್ರವಾಹದ ಸಲುವಾಗಿ ತೊಂದರೆ ಗೀಡಾಗಿದ್ದಾರೆ. ಆದ್ದರಿಂದ ನಾವು ಸದ್ಯ ಕಾರ್ಯೋನ್ಮುಖರಾಗಬೇಕಾಗಿದೆ. ತಕ್ಷಣದಿಂದ ನಾವೆಲ್ಲರೂ ಪರಿಹಾರ ಕಾರ್ಯದಲ್ಲಿ ತೊಡಗಬೇಕಾಗಿದೆ ಎಂದು ತಿಳಿಸಿದರು.
ಅವರು ಹೇಳಿದ ತಕ್ಷಣದಲ್ಲೇ ಸೇರಿದ್ದ ನೂರಾರು ವಿದ್ಯಾರ್ಥಿ ಹಾಗೂ ಅಧ್ಯಾಪಕ ಸಮು ದಾಯಕ್ಕೆ ತಮ್ಮ ಕಾರ್ಯವನ್ನು ತುರ್ತಾಗಿ ಅರಿತು ಎಲ್ಲರೂ ಪರಿಹಾರ ಕಾರ್ಯಕ್ಕೆ ತೊಡಗಿ ಕೊಂಡು, ಇನ್ನಷ್ಟು ವಿದ್ಯಾರ್ಥಿಗಳನ್ನು ಸೇರಿಸಿಕೊಂಡು, ಉತ್ತರಾಖಂಡದ ನೆರೆ ಪರಿಹಾರ ಕಾರ್ಯದಲ್ಲಿ ತೊಡಗಲು, ತನ್ನ ವಾರ್ಷಿಕ ಯೋಜನೆ ಮತ್ತು ಕಾರ್ಯಕರ್ತರ ಪಡೆಯ ನಿರ್ಮಾಣದ ಕೆಲಸವನ್ನು ಬದಿಗೊತ್ತಿ ನೆರೆ ಪರಿಹಾರದ ಅಖಾಡಕ್ಕೆ ಎಲ್ಲಕ್ಕಿಂತ ದೇಶ ಮೊದಲು ಎಂದು ಕಾರ್ಯಕ್ಕೆ ಇಳಿದಿದ್ದು ‘ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್’.
‘ಬಸವಣ್ಣನವರ ಕನಸಿನ ಕಲ್ಯಾಣ ರಾಜ್ಯ’, ‘ಗಾಂಧೀಜಿಯ ವರ ಕನಸಿನ ರಾಮರಾಜ್ಯ’, ‘ಕಲಾಮರ ಕನಸಿನ ವೈಜ್ಞಾನಿಕ ರಾಜ್ಯ’, ‘ಅಂಬೇಡ್ಕರ್ ಕನಸಿನ – ಸಮತಾ ರಾಜ್ಯ (ಸಮಾನತೆಯ ರಾಜ್ಯ)’, ‘ಇವೆಲ್ಲವೂ ನಮ್ಮ ಕನಸು ವಿದ್ಯಾರ್ಥಿ ಪರಿಷತ್ತಿನ ಕನಸು’ ಇದೆಲ್ಲ ವಿದ್ಯಾರ್ಥಿ ಪರಿಷತ್ತಿನ ಎಲ್ಲ ಅಭ್ಯಾಸ ವರ್ಗಗಳಲ್ಲಿ, ಸಮ್ಮೇಳಗಳಲ್ಲಿ ಕೇಳ ಸಿಗುವ ಘೋಷಣೆಗಳು.
ಇವುಗಳು ಕೇವಲ ಘೋಷಣೆಗಳಾಗಿ ಉಳಿಯದೇ, ಕಾರ್ಯ ರೂಪದಲ್ಲಿ ತರುವಂತಹ ಪ್ರಯತ್ನವನ್ನು ವಿದ್ಯಾರ್ಥಿ ಪರಿಷತ್
ಕಳೆದ ೭೫ ವರ್ಷಗಳಿಂದ ಮಾಡುತ್ತಾ ಬರುತ್ತಿದೆ. ‘ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರದ ಪುನರ್ ನಿರ್ಮಾಣ’ ಎಂಬ ಧ್ಯೇಯ ವಿಟ್ಟುಕೊಂಡು ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿ ಗಳನ್ನು ರಾಷ್ಟ್ರಕಟ್ಟುವಲ್ಲಿ ಸ್ಪೂರ್ತಿ ಮತ್ತು ಪ್ರೇರಣೆಯಾಗಿ ನಿಂತಿದೆ. ನಮ್ಮ ದೇಶದ ಮಹಾನ್ ಪುರುಷರ ಆದರ್ಶಗಳನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಲು, ಅವರ ಜಯಂತಿಗಳನ್ನು ಆಚರಿ ಸುವ ಮೂಲಕ ಯುವ ಜನತೆಯನ್ನು ಜಾಗೃತಿಗೊಳಿಸುತ್ತ, ಸಮಾಜ ಮುಖಿಗಳಾಗಿ ಸಮಾಜದಲ್ಲಿ ಕಾರ್ಯ ಮಾಡುವಂತೆ ಮಾಡುತ್ತಿದೆ.
ಪ್ರಮುಖವಾಗಿ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮತ್ತು ಡಾ.ಬಿ.ಆರ್. ಅಂಬೇಡ್ಕರ್‌ರವರ ತತ್ವ, ವಿಚಾರಗಳನ್ನು ವಿದ್ಯಾರ್ಥಿ ಸಮುದಾಯದ ಮುಂದಿಟ್ಟು ಕಾರ್ಯೋನ್ಮುಕರಾಗುವಂತೆ ಮಾಡುತ್ತಿದೆ. ೨೦೦೬ ಮತು ೨೦೧೨ ರಲ್ಲಿ ಕರ್ನಾಟಕದ ಸ್‌ಸಿ, ಎಸ್‌ಟಿ ಮತ್ತು ಬಿಸಿಎಂ ಹಾಸ್ಟೆಲ್‌ಗಳ ಸ್ಥಿತಿಗತಿ ಅರಿಯಲು ಸರ್ವೇಯನ್ನು ಮಾಡಲಾಯಿತು. ಆ ವರದಿಯ ಪ್ರಕಾರ
ರಾಜ್ಯದ ಹಾಸ್ಟೆಲ್‌ಗಳಲ್ಲಿ ಸರಾಸರಿ ೨೧ ಜನರ ನಡುವೆ ಒಂದು ಶೌಚಾಲಯ ಮತ್ತು ಸ್ನಾನ ಗೃಹಗಳು, ೩ಜನರ ಜಾಗದಲ್ಲಿ ೮ಜನರನ್ನು ಇರಿಸುವುದು, ರಾಜ್ಯದ ೯೫% ಹಾಸ್ಟೆಲ್‌ಗಳಲ್ಲಿ ಗ್ರಂಥಾಲಯಗಳಿರದೇ, ೩೦% ಹಾಸ್ಟೆಲ್‌ಗಳಿಗೆ ಸ್ವಂತ ಕಟ್ಟಡಗಳಿ
ರಲಿಲ್ಲ! ಎಷ್ಟೋ ಹಾಸ್ಟೆಲ್‌ಗಳಿಗೆ ಸರಿಯಾದ ರಕ್ಷಣೆ ವ್ಯವಸ್ಥೆಯೂ ಇರಲಿಲ್ಲ.
ಆಹಾರದ ಗುಣಮಟ್ಟವೂ ತೀರಾ ಕಳಪೆ ಯಾಗಿತ್ತು. ಇನ್ನೂ ಹಲವಾರು ಸಮಸ್ಯೆಗಳ ಆಗರವಾಗಿದ್ದ ಹಾಸ್ಟೆಲ್‌ಗಳಲ್ಲಿ, ಕನಿಷ್ಠ ಮೂಲಭೂತ ಸೌಲಭ್ಯಗಳಿರಲಿಲ್ಲ. ತಿಂಗಳಿಗೆ ನೀಡುವ ಆಹಾರ ಭತ್ಯೆ(ಆಹಾರ ವೆಚ್ಚ) ಖೈದಿಗಳಿಗಿಂತ ಕಡಿಮೆಯಾಗಿತ್ತು. ಇವೆಲ್ಲ ಅಂಕಿ ಅಂಶಗಳನ್ನು ಒಳಗೊಂಡ ವರದಿಯನ್ನು ‘ರೋಗಗ್ರಸ್ಥ ಹಾಸ್ಟೆಲ್’ ಎಂಬ ಸಮೀಕ್ಷಣಾ ವರದಿ ಪುಸ್ತಕವನ್ನು ಹೊರತರಲಾ ಯಿತು.
ರಾಜ್ಯಾದ್ಯಂತ ಹಲವಾರು ಹೋರಾಟ ಮಾಡಿದ ಪರಿಣಾಮವಾಗಿ ರಾಜ್ಯ ಸರಕಾರ, ಎಲ್ಲ ಸರಕಾರಿ ಹಾಸ್ಟೆಲ್‌ಗಳಿಗೆ ಮುಂಬರುವ
ಬಜೆಟ್‌ನಲ್ಲಿ ೩೦೦ ಕೋಟಿ ರು.ಗಳನ್ನು ಮೀಸಲಿಡುವ ಭರವಸೆಯೊಂದಿಗೆ, ತಕ್ಷಣ ಹಾಸ್ಟೆಲ್‌ಗಳ ಸುಧಾರಣೆ ಪ್ರತಿ ಜಿಲ್ಲೆಗೆ ೪೦ ಲಕ್ಷರು.ಗಳನ್ನು ಬಿಡುಗಡೆ ಮಾಡಿತು. ಸರಕಾರ ಕೊಟ್ಟ ಮಾತಿನಂತೆ ಮುಂದೆ ತನ್ನ ಬಜೆಟ್‌ನಲ್ಲಿ ೭೫೦ ಕೋಟಿ ರು.ಗಳನ್ನು ಬಿಡುಗಡೆಗೊಳಿಸಿ ಹಾಸ್ಟೆಲ್‌ಗಳ ಸುಧಾರಣೆಗೆ ನಾಂದಿ ಹಾಡಿತು. ಡಾ.ಬಿ.ಆರ್. ಅಂಬೇಡ್ಕರ್‌ರವರ ದೃಷ್ಠಿಯಲ್ಲಿದ್ದ ಸಧೃಡ, ಸಮರ್ಥ, ಸ್ವಾಭಿಮಾನಿ, ಸಾಮರಸ್ಯಭರಿತ, ಭ್ರಾತೃತ್ವದ, ಜಾಗೃತ ರಾಷ್ಟ್ರದ ಕನಸನ್ನು ವಿದ್ಯಾರ್ಥಿ ಪರಿಷತ್ ತನ್ನ ಕಾರ್ಯದ ಮಾರ್ಗಸೂಚಿಯನ್ನಾಗಿಸಿಕೊಂಡು ಅವುಗಳ ಈಡೇರಿಕೆಗಾಗಿಯೇ ಹಲವಾರು ಕಾರ್ಯಕ್ರಮ, ಹೋರಾಟ, ಜನಜಾಗೃತಿ ಅಭಿಯಾನಗಳನ್ನು ಆಯೋಜಿಸುತ್ತಾ ಬರುತ್ತಿದೆ.
ಆದ್ದರಿಂದಲೇ ’ಅಞಚಿಛಿbhZ qಜಿoಜಿಟ್ಞ ಅಆP ಜ್ಞಿ ಅಠಿಜಿಟ್ಞ‘ ಎಂದು ಆನೇಕರು ಹೇಳುತ್ತಿರುತ್ತಾರೆ. ಇದಕ್ಕೆ ಪೂರಕವಾಗು
ವಂತಹ ಅನೇಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿ ಪರಿಷತ್ ಮಾಡುತ್ತಾ ಬಂದಿದೆ. ಅವುಗಳಲ್ಲಿ ಕೆಲವೊಂದಿಷ್ಟನ್ನು ಗಮನಿಸುವು ದಾದರೆ: ಹಾಸ್ಟೆಲ್‌ಗಳಲ್ಲಿ ಪರಿಷತ್ ಕಾರ್ಯ: ಅಂಬೇಡ್ಕರ್ ಹೇಳುವಂತೆ ಸಮಾಜದಲ್ಲಿ ಅಸ್ಪೃಶ್ಯತೆ ತೊಲಗ ಬೇಕಾದರೆ ಸಾಮ ರಸ್ಯ ಉಂಟಾಗಬೇಕಾದರೆ ದಲಿತ ಜನಾಂಗವು ಉನ್ನತ ಮಟ್ಟದ ಶಿಕ್ಷಣವನ್ನು ಪಡೆಯಬೇಕು. ಅದಕ್ಕಾಗಿ ದಲಿತರು, ಹಿಂದುಳಿ ದವರು, ಶಿಕ್ಷಣವನ್ನು ಪಡೆದುಕೊಳ್ಳಲು ಮುಂದಾಗಬೇಕು ಮತ್ತು ಇದಕ್ಕೆ ಪೂರಕವಾಗುವಂತಹ ಕಾರ್ಯ ಗಳನ್ನು ಸಮಾಜ ಮತ್ತು ಸರಕಾರ ಹಾಗೂ ಸಮಾಜ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಾ ಬಂದವು.
ದಲಿತ, ಹಿಂದುಳಿದ, ವಿದ್ಯಾರ್ಥಿಗಳಿಗೆ ನಗರಗಳಲ್ಲಿ ಶಿಕ್ಷಣ ಪಡೆಯಲು ತೊಂದರೆ ಯಾಗಬಾರದೆಂದು ಸರಕಾರವೇ ವಿದ್ಯಾರ್ಥಿ ನಿಲಯಗಳನ್ನು ಆರಂಭಿಸಿದ್ದವು. ಆದರೆ ದಲಿತ, ಹಿಂದುಳಿದ, ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕಿದ್ದ ಅನ್ನ, ಅಕ್ಷರಗಳ ದಾಸೋಹಗಳಾಗಬೇಕಿದ್ದ ಹಾಸ್ಟೆಲ್‌ಗಳು ಸರಕಾರಗಳ ನಿರ್ಲಕ್ಷ್ಯದಿಂದ ಹಾಗೂ ಮಂತ್ರಿಗಳ, ಅಧಿಕಾರಿಗಳ, ಭ್ರಷ್ಟಾಚಾರದಿಂದಾಗಿ ತೀವ್ರ ನಿಘಾ ಘಟಕಗಳನ್ನು ಸೇರಿದಂತಹ ಸಂಧರ್ಭದಲ್ಲಿ ಸರಕಾರವನ್ನು ಎಚ್ಚರಿಸುವಂತಹ ಕಾರ್ಯ ವನ್ನು ವಿದ್ಯಾರ್ಥಿ ಪರಿಷತ್ ಆರಂಭಿಸಿತು.
ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ ಇಡೀ ದೇಶದಾದ್ಯಂತ ಈ ರೀತಿಯ ಸರ್ವೇಗಳನ್ನು ಅಭಾವಿಪ ಆಯೋಜಿಸಿದೆ ಹಾಗೂ ಎಲ್ಲಾ ರಾಜ್ಯಗಳ ಹಾಸ್ಟೆಲ್‌ಗಳ ಸ್ಥಿತಿಗತಿಗಳನ್ನೊಳಗೊಂಡ ಅಂಕಿ-ಅಂಶಗಳ ಆಧಾರ ಸಹಿತ ವರದಿಯನ್ನು ಸಿದ್ಧಪಡಿಸಿ ರಾಷ್ಟ್ರಪತಿಗಳಿಗೆ, ಪ್ರಧಾನ ಮಂತ್ರಿಗಳಿಗೂ ತಲುಪಿಸಿದೆ. ಅಷ್ಟೇ ಅಲ್ಲದೇ ಪಿಐಎಲ್ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸುವ ಮೂಲಕ ಎಲ್ಲಾ ಸರಕಾರಗಳ ಮೇಲೆ ಛಾಟಿ ಬೀಸುವಂತೆ ಮಾಡಿ, ಹಾಸ್ಟೆಲ್‌ಗಳ ಸುಧಾರಣೆಗಾಗಿ ದೇಶಾದ್ಯಂತ ಹೋರಾಟವನ್ನು ಮಾಡಿದೆ.
ಕೇವಲ ಸರಕಾರವನ್ನು ಎಚ್ಚರಿಸುವ ಕಾರ್ಯ ಮಾತ್ರ ಮಾಡದೇ ಹಾಸ್ಟೆಲ್‌ಗಳಲ್ಲಿರುವ ವಿದ್ಯಾರ್ಥಿಗಳಲ್ಲಿಯೂ ಜಾಗೃತಿ ಮೂಡಿಸಲು ಪ್ರಯತ್ನಿಸಿದೆ. ಇದಕ್ಕೆ ಪೂರಕ ಎಂಬಂತೆ ಅನೇಕ ಶಾಖೆಗಳಲ್ಲಿ ಒಂದೊಂದು ಹಾಸ್ಟೆಲ್‌ಗಳನ್ನು ದತ್ತು ತೆಗೆದುಕೊಂಡು. ಸ್ವಚ್ಛತೆ ಮಾಡುವುದರಿಂದ, ವಿವಿಧ ಕಾರ್ಯಕ್ರಮ, ತರಬೇತಿ ಶಿಬಿರ, ಯೋಗ ತರಗತಿಗಳ ಮೂಲಕ ಆ
ಹಾಸ್ಟೆಲ್‌ಗಳನ್ನು ಮಾದರಿ ಹಾಸ್ಟೆಲ್‌ಗಳಾಗಿ ಪರಿವರ್ತಿಸಲು ಪ್ರಯತ್ನಿಸಲಾಯಿತು.
ನಾಮಾಂತರ ಆಂದೋಲನದ ಸಾಮರಸ್ಯದ ರುವಾರಿ ವಿದ್ಯಾರ್ಥಿ ಪರಿಷತ್: ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿರುವ ಮರಾಠಾವಾಡ ವಿಶ್ವವಿದ್ಯಾಲಯವು ೧೯೫೮ ರಲ್ಲಿ ಆರಂಭವಾಗಿತ್ತು. ಆರಂಭದ ದಿನಗಳಲ್ಲಿ ವಿಶ್ವವಿದ್ಯಾಲಯಕ್ಕೆ ಯಾವ ಹೆಸರು ಇಡುವುದು ಎಂಬ ಗೊಂದಲದಲ್ಲಿದ್ದ ಸರಕಾರ ಅದಕ್ಕೆ ಮರಾಠಾವಾಡ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಿತ್ತು. ವರ್ಷಗಳು ಕಳೆದಂತೆ ಅಲ್ಲಿಯ ದಲಿತ ಚಳವಳಿಯಿಂದ ಪ್ರೇರಿತರಾದ ಹಲವಾರು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಮರಾಠಾವಾಡ ವಿಶ್ವ ವಿದ್ಯಾಲಯಕ್ಕೆ ಡಾ.ಬಾಬಾ ಸಾಹೇಬ್ ಭೀಮ್‌ರಾವ್ ಅಂಬೇಡ್ಕರ್ ಎಂದು ನಾಮಕರಣ ಮಾಡಬೇಕೆಂಬ ಆಂದೋಲನವನ್ನು ೧೯೭೭ರಲ್ಲಿ ಆರಂಭಿಸಿದರು.
ಈ ಚಳವಳಿ ಆರಂಭವಾದ ಮೇಲೆ ಆಗಿನ ಮಹಾರಾಷ್ಟ್ರದ ಮುಖ್ಯಮಂತ್ರಿ ವಸಂತ ದಾದಾ ಪಾಟೀಲ್ ನಾಮಾಂತರ ಮಾಡಲು ಭರವಸೆ ನೀಡಿದರು. ಇದರಿಂದ ಪ್ರಚಲಿತರಾದ ಹಲವು ಮೇಲ್ವರ್ಗದ ವಿದ್ಯಾರ್ಥಿಗಳು ಮತ್ತು ಮೇಲ್ವರ್ಗದ ಜನ ಇದನ್ನು
ವಿರೋಧಿಸಿ ಅಭಿಯಾನವನ್ನು ೧೯೭೮ರಲ್ಲಿ ಆರಂಭಿಸಿದರು. ಇವರಿಬ್ಬರ ನಡುವೆ ದೊಡ್ಡದಾದ ಸಂಘರ್ಷವೇ ಏರ್ಪಟ್ಟಿತು.
ಈ ಕಿತ್ತಾಟ ಇಡೀ ರಾಜ್ಯಾದ್ಯಂತ ವ್ಯಾಪಿಸಿತು. ಹಲವಾರು ರಾಜಕೀಯ ಪಕ್ಷಗಳ ಸಹಿತ ವಿಶ್ವ ವಿದ್ಯಾಲಯದ ನಾಮಾಂತರವನ್ನು ವಿರೋಧಿಸಿದವು.
ಇದರಿಂದ ರಾಜ್ಯಾದ್ಯಂತ ಕೋಮುಗಲಭೆಗಳು ಆರಂಭವಾದವು. ಅನೇಕ ದಲಿತರ ಮೇಲೆ ಹಲ್ಲೆಗಳಾದವು. ಮನೆಗಳಿಗೆ ಬೆಂಕಿ ಹಚ್ಚಲಾಯಿತು. ಸಾವಿರಾರು ಜನರು ಗಾಯಗೊಂಡರು. ಲಕ್ಷಾಂತರ ರು. ಆಸ್ತಿ – ಪಾಸ್ತಿ ಹಾಳಾಯಿತು. ಸತತವಾಗಿ ೧೦ ವರ್ಷಗಳ ನಡೆದ ಈ ಸಂಘರ್ಷ ೧೯೯೪ರಲ್ಲಿ ಜನವರಿ ೧೪ ರಂದು ಮರಾಠಾವಾಡ ವಿಶ್ವ ವಿದ್ಯಾಲಯಕ್ಕೆ ಡಾ.ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಎಂದು ನಾಮಾಂತರ ಮಾಡುವ ಮೂಲಕ ಅಂದಿನ ಮುಖ್ಯಮಂತ್ರಿಗಳಾಗಿದ್ದ ಶರದ್ ಪವಾರ್ ತೆರೆ ಎಳೆದರು.
ಮುಖ್ಯಮಂತ್ರಿಗಳಾದ ಶರದ್ ಪವಾರ್ ಮಹಾರಾಷ್ಟ್ರದ ಸದನದಲ್ಲಿ, ‘ವಿಶ್ವ ವಿದ್ಯಾಲಯಕ್ಕೆ ನಾಮಾಂತರವನ್ನು ಮಾಡುವಲ್ಲಿ ಎರಡು ಗುಂಪು (ನಾಮಾಂತರ ಪರ ವಿರೋಧ) ಗಳಲ್ಲಿ ನಡುವೆ ಸಾಮರಸ್ಯ ತರುವಂತಹ ಪ್ರಯತ್ನವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ೧೬ವರ್ಷಗಳ ಸತತ ಪ್ರಯತ್ನ ಮತ್ತು ರಾಜ್ಯಾದ್ಯಂತ ಜನಜಾಗೃತಿ, ಸಾಮರಸ್ಯ ಯಾತ್ರೆಗಳನ್ನು ಮಾಡುವ ಮೂಲಕ ರಾಜ್ಯದ ಮನೆ ಮನೆಗಳಿಗೆ ಅಂಬೇಡ್ಕರ್ ಸಾಧನೆಯನ್ನು ವಿವರಿಸುತ್ತಾ ಮತು ವಿಶ್ವ ವಿದ್ಯಾಲಯಕ್ಕೆ ಅಂಬೇಡ್ಕರ್‌ರ ಹೆಸರಿಡುವ ಅವಶ್ಯಕತೆಯನ್ನು ಸಾರಿದ ಪರಿಣಾಮವಾಗಿ ಇಂದು ನಾನು ಮರಾಠಾವಾಡ ವಿಶ್ವ ವಿದ್ಯಾಲಯಕ್ಕೆ ಡಾ.ಬಾಬಾ ಸಾಹೇಬ್ ಭೀಮ್‌ರಾವ್ ಅಂಬೇಡ್ಕರ್ ಮರಾಠವಾಡ ವಿಶ್ವ ವಿದ್ಯಾಲಯ ಎಂದು ಹೆಸರಿಡಲು ಸಹಾಯಕವಾಯಿತು. ಮತ್ತು ಮಹಾರಾಷ್ಟ್ರದಲ್ಲಿ ಕೋಮುಗಲಭೆ ಕಡಿಮೆಯಾಗಲು ಸಹಾಯಕವಾಯಿತು.
ಆದ್ದರಿಂದ ನಾನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಈ ಕಾರ್ಯಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ’ ಎಂದು ಹೇಳುವ ಮೂಲಕ ವಿದ್ಯಾರ್ಥಿ ಪರಿಷತ್ ಕಾರ್ಯವನ್ನು ಶ್ಲಾಘಿಸಿದರು. ಇದೇ ರೀತಿ ಹಲವಾರು ಕಾರ್ಯಕ್ರಮ, ಹೋರಾಟ, ಚಳ
ವಳಿಗಳ ಮೂಲಕ ಸದೃಢ ಸಮಾಜ ನಿರ್ಮಿಸುವ ಕಾರ್ಯದಲ್ಲಿ ವಿದ್ಯಾರ್ಥಿ ಪರಿಷತ್ ತನ್ನನ್ನು ತಾನು ಅವಿರತವಾಗಿ ತೊಡಗಿಸಿ ಕೊಂಡು ಬಂದಿದೆ. ವಿದ್ಯಾರ್ಥಿ ಪರಿಷತ್ ವಿದ್ಯಾ ಸಂಘಟನೆಯಿಂದ ಮೇಲ್ಪಟ್ಟು, ದೇಶದ ಯುವ ಜನತೆಯಲ್ಲಿ ರಾಷ್ಟ್ರೀಯ ಮನೋಭಾವವನ್ನು ಸದಾ ಜಾಗೃತಗೊಳಿಸುತ್ತಾ, ದೇಶಭಕ್ತರನ್ನು ತಯಾರು ಮಾಡುತ್ತ ಇವತ್ತಿಗೆ (ಜುಲೈ ೯) ೭೫ರ ಹರೆಯಕ್ಕೆ ಕಾಲಿಡುತ್ತಿದೆ.
ವಿದ್ಯಾರ್ಥಿ ಸಮುದಾಯದಲ್ಲಿ ಪರಿಷತ್ತಿನ ಸ್ಥಾಪನಾ ದಿನವನ್ನು ‘ರಾಷ್ಟ್ರೀಯ ವಿದ್ಯಾರ್ಥಿ ದಿನ’ವೆಂದು ಆಚರಿಸಲಾಗುತ್ತಿದೆ. ಹಾಗಾಗಿ ಎಲ್ಲ ವಿದ್ಯಾರ್ಥಿ ವೃಂದಕ್ಕೆ ರಾಷ್ಟ್ರೀಯ ವಿದ್ಯಾರ್ಥಿ ದಿನದ ಶುಭಾಶಯಗಳು.