Friday, 22nd November 2024

ಜನಸಂಖ್ಯೆ ನಿಯಂತ್ರಿಸದೇ ಅಚ್ಚೇದಿನ್ ಕಾಣಲಸಾಧ್ಯ !

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ಈಗಾಗಲೇ ದೇಶದ ಬಹುತೇಕ ಕಡೆಗಳಲ್ಲಿ ದ್ವಿಚಕ್ರ ಸವಾರರು ಹೆಲ್ಮೆಟ್ ಧರಿಸದೆ ಮೂರ್ನಾಲ್ಕು ಮಂದಿ ಒಂದೇ ವಾಹನದಲ್ಲಿ ಕಣ್ಮುಂದೆಯೇ ಚಲಿಸುತ್ತಿದ್ದರೂ ಕ್ರಮಕೈಗೊಳ್ಳಲಾಗದೆ ಪೊಲೀಸರೇ ಅಸಹಾಯಕರಾಗಿ ನಿಲ್ಲುತ್ತಿzರೆ. ಇಂಥ ಬೆಳವಣಿಗೆಗಳೆಲ್ಲ ಓವೈಸಿಯಂಥ ರಾಜಕಾರಣಿಗಳಿಗೆ, ದೇಶದ್ರೋಹಿ ಸಂಘಟನೆಗಳಿಗಿಂತ ಮಧ್ಯರಾತ್ರಿಯ ನಾಯಿಗಳಂತೆ ಬೊಗಳುವ ಇಲ್ಲಿನ ಸೋ ಕಾಲ್ಡ್ ಸೆಕ್ಯುಲರಿಸ್ಟ್ ಮಂದಿಗೆ ಬಹು ಹಿತಕರ ಅನುಭವ ಕೊಡುತ್ತವೆ.

ಅಚ್ಚೇದಿನ್; ನಮ್ಮ ದೇಶದ ರಾಜಕಾರಣಿಗಳಿಗೆ ಇದರ ಪರಿಕಲ್ಪನೆಯೇ ಇಲ್ಲ. ಇವರ ಪ್ರಕಾರ ಅಚ್ಚೇದಿನ್ ಎಂದರೆ ಪ್ರಧಾನಿ ಮೋದಿಯವರು ದೇಶದ ಘನತೆ- ಗೌರವ, ಭದ್ರತೆ-ಭವಿಷ್ಯಗಳೆಲ್ಲವನ್ನೂ ತಿಪ್ಪೆಗೆಸೆದು ಕಂಡ ದೇಶ ಗಳೆದುರು ಕೈಚಾಚಿ, ಬಾಚಿ ತಂದು ಬಾಯಿಬಿಟ್ಟುಕೊಂಡು ಕುಳಿತಿರುವ ಸೋಂಬೇರಿಗಳ ಅಕೌಂಟಿಗೆ ಹದಿನೈದು ಲಕ್ಷ ಜಮಾ ಮಾಡಬೇಕು.

ಗೊತ್ತುಗುರಿಗಳಿಲ್ಲದ ಬಿಟ್ಟಿಭಾಗ್ಯಗಳನ್ನು ಜಾರಿಗೆ ತಂದು ಸಾಲದ ಸುಳಿಗೆ ಸಿಲುಕಿಸಬೇಕು; ಶ್ರೀಲಂಕಾ, ಪಾಕಿಸ್ತಾನ ದಂತೆ ದೇಶ ದಿವಾಳಿಯಾದರೂ ಸರಿಯೇ ಅದೇ ಇವರುಗಳ ಪ್ರಕಾರ ಅಚ್ಚೇದಿನ್. ದುಡ್ಡು ಕೊಟ್ಟು ಖರೀದಿ ಸುವ ಅಕ್ಕಿಯ ತೂಕಕ್ಕೆ ಒಂದಿಡಿ ಕೊಸರನ್ನು ಯಾವ ಅಂಗಡಿಯವನೂ ಹಾಕುವುದಿಲ್ಲ. ಆದರೆ ಮೂವರು ಹೆಂಡಂದಿರು, ಹದಿನೆಂಟು ಮಕ್ಕಳಿರುವ 22 ಮಂದಿಯ ಕುಟುಂಬಕ್ಕೆ ತಲಾ ಆರು ಕೆಜಿ ಅಕ್ಕಿ, ನಾಲ್ಕ ಕೆಜಿ ರಾಗಿ ಸೇರಿ ಒಟ್ಟು 220 ಕೆಜಿ ಪಡಿತರವನ್ನು ಪ್ರತಿ ತಿಂಗಳು ಪುಕ್ಕಟ್ಟೆಯಾಗಿ ನೀಡುತ್ತ ಬಂದರೆ ದೇಶ ಎತ್ತ ಸಾಗುತ್ತದೆ ಎಂದು ತಿಳಿಯಲು ಪಿಎಚ್‌ಡಿ, ಎಂಫಿಲ್ ಮಾಡಬೇಕಿಲ್ಲ.

ಬೆಲೆ ಏರಿಕೆ ಎಂಬುದು ದೇಶವಾಸಿಗಳಿಗೆ ಯಾವುದೇ ಕಾಲದಲ್ಲೂ, ಯಾವುದೇ ಸರಕಾರದಲ್ಲೂ ಅಸಹನೀಯವೇ. ಅದರಲ್ಲೂ ದಿನಗೂಲಿ ಅವಲಂಬಿತರು, ಸಾಮಾನ್ಯರಿಗಂತೂ ಶಾಪದಂತೆಯೇ. ಆದರೆ ಅಸಲಿಗೆ ಬೆಲೆ ಏರಿಕೆ ಎಂಬುದು ಅಂತಾ ರಾಷ್ಟ್ರೀಯ ವಹಿವಾಟು ಅಥವಾ ರಾಷ್ಟ್ರ ರಾಜ್ಯಗಳ ನಡುವೆ ಏರುಪೇರಾಗುವ ಆರ್ಥಿಕ ಸಂವೇದನೆಯ ಫಲ. ವಸ್ತುವೊಂದರ ಬೇಡಿಕೆ, ಉತ್ಪನ್ನ, ಕಾಲಮಿತಿ ಈ ಮೂರನ್ನೂ ಒಳಗೊಂಡಿರುತ್ತದೆ. ಇವು ಸಮತೋಲನ ಕಳೆದುಕೊಂಡರೆ ಆರ್ಥಿಕ ಸ್ಥಿತಿ ಹದಗೆಟ್ಟು ಅದರ ಪರಿಣಾಮ ನಾಗರಿಕರ ಮೇಲಾಗಿ ಒಟ್ಟಾರೆ ದೇಶದ ಮೇಲೆ ಪರಿಣಾಮ ಬೀರುತ್ತದೆ.

ಇದಕ್ಕೇ ತಾಜಾ ಉದಾಹರಣೆ ಶ್ರೀಲಂಕಾ. ಸರಳವಾಗಿ ಹೇಳಬೇಕೆಂದರೆ ಇಬ್ಬರು ದುಡಿದು ತರುವುದನ್ನು ಐವತ್ತು ಮಂದಿ ಕೂತು ತಿನ್ನುವ ಸ್ಥಿತಿ ತಲೆದೋರುವುದೇ ದಿವಾಳಿತನ. ಇದನ್ನೇ ಅನಿಯಂತ್ರಿತ ಜನಸಂಖ್ಯೆ ಎನ್ನುವುದು. ಆರ್ಥಿಕತೆಯ ಮೇಲೆ ಇನ್ನಿಲ್ಲದ ಪರಿಣಾಮ ಬೀರಿ, ದೇಶ ಅರಾಜಕತೆಗೆ ಒಳಗಾಗುವುದು ಜನಸಂಖ್ಯೆ ಹೆಚ್ಚಳದ ಪರಮಾವಧಿಯ ಸಾಮಾಜಿಕ ಚಿತ್ರಣ. ಮಾತ್ರವಲ್ಲ, ಅನಿಯಂತ್ರಿತ ಜನ ಸಂಖ್ಯೆ ದೇಶದ ಪರಂಪರೆ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಅಸ್ತಿತ್ವಕ್ಕೂ
ಗಂಡಾಂತರಕಾರಿ ಎಂಬುದು ಇತ್ತೀಚಿನ ಅನೇಕ ಬೆಳವಣಿಗೆಗಳಿಂದಾಗಿ ಸ್ಪಷ್ಟವಾಗಿದೆ.

ಉದಾಹರಣೆ ಗಮನಿಸಿ: ಕಳೆದ ವಾರ ಬಿಹಾರದ ಪಟನಾದ ಪಿಎಫ್ಐ ಕಚೇರಿಯಲ್ಲಿ ಮೂವರನ್ನು ಬಂಽಸಲಾಯಿತು. ಸ್ವಾತಂತ್ರ ಬಂದು ನೂರು ವರ್ಷಗಳಾಗುವಷ್ಟರಲ್ಲಿ ಇಲ್ಲಿನ ಬಹುಸಂಖ್ಯಾತ ಹಿಂದೂಗಳನ್ನು ಬಗ್ಗುಬಡಿದು ಭಾರತವನ್ನು
ಇಸ್ಲಾಂ ರಾಷ್ಟ್ರವನ್ನಾಗಿ ಬದಲಿಸುವ ‘ಮಿಷನ್ 2047’ರ ಪರಮಗುರಿ ಅವರದಾಗಿತ್ತು. ಅದಕ್ಕಾಗಿ ಅವರು ಸಿದ್ಧಪಡಿಸಿ ಕೊಂಡಿರುವ ‘ನೀಲನಕ್ಷೆ’ ಪ್ರಕಾರ ದೇಶದ ಕೇವಲ ಶೇ.10 ಮುಸಲ್ಮಾನರು ಇವರೊಂದಿಗೆ ಕೈಜೋಡಿಸಿದರೂ ಸಾಕು ಭಾರತ ಅನಾಯಾಸವಾಗಿ ಇಸ್ಲಾಂ ರಾಷ್ಟ್ರವಾಗುತ್ತದೆ. ಅದಕ್ಕಾಗಿ ಒದಗಿಬರುತ್ತಿರುವ ದೇಶ ವಿದೇಶಗಳ ನೈತಿಕ-ಆರ್ಥಿಕ ಬೆಂಬಲ
‘ತಲೆದೂಗುವಂತಿದೆ’. ಈ ಮಿಷನ್ ಸದ್ಯಕ್ಕೇನೋ ತಿರುಕನ ಕನಸಾಗಿ ಕಾಣಬಹುದು.

ಆದರೆ ಹಿಂದೂಗಳ ಜನಸಂಖ್ಯೆಯ ಅನುಪಾತ ಹಳ್ಳಹಿಡಿದು ಇಂಥ ಜಿಹಾದಿ ಮನಃಸ್ಥಿತಿಗಳ ಜನಸಂಖ್ಯೆ ಏರುತ್ತಾ ಹೋದರೆ ಮುಂದೊಂದು ದಿನ ಈ ‘ಮಿಷನ್ 2047’ ಯಶಸ್ವಿಯಾಗುವುದರಲ್ಲಿ ಯಾವ ಸಂಶಯವೂ ಇಲ್ಲ. ಆಘಾತಕರವೆಂದರೆ ಬಂಧಿ
ತರಲ್ಲಿ ದೇಶದ ಸಂವಿಧಾನ, ಕಾನೂನನ್ನು ಅರಿತ, ಸರಕಾರಿ ಸೇವೆಯಲ್ಲಿದ್ದ ಜಾರ್ಖಂಡ್‌ನ ನಿವೃತ್ತ ಸಬ್ಇ ನ್ಸ್ಪೆಕ್ಟರ್ ಜಲಾಲುದ್ದೀನ್ ಸಹ ಒಬ್ಬ.

ಅಂದ ಮೇಲೆ, ಇನ್ನು ಪಾದರಾಯನಪುರ, ಕೆಜಿಹಳ್ಳಿಯಲ್ಲಿರುವಂಥ ಅನಕ್ಷರಸ್ಥರು ಇನ್ನಾವ ಮಟ್ಟದಲ್ಲಿ ಪ್ರಚೋದನೆ ಪಡೆದು ರಾಷ್ಟ್ರದ್ರೋಹಿ ಮತಾಂಧರಾಗಿ ರೂಪುಗೊಳ್ಳಬಹುದು ಹೇಳಿ? ಇನ್ನೊಂದು ದೃಷ್ಟಾಂತ ನೋಡಿ, ಜಾರ್ಖಂಡ್ ನ ಜಾಮತಾಡ ಜಿಯಲ್ಲಿ 43 ಸರಕಾರಿ ಶಾಲೆಗಳಲ್ಲಿ ಇಸ್ಲಾಂ ರಾಷ್ಟ್ರಗಳಂತೆ ಶುಕ್ರವಾರ ರಜೆ ನೀಡುವ ಪರಿಪಾಠ ಕಳೆದ ಎರಡುವರ್ಷಗಳಿಂದ
ನಡೆದುಬಂದಿದೆ. ಮುಸ್ಲಿಂ ಬಾಹುಳ್ಯವುಳ್ಳ ಸ್ಥಳೀಯ ಮತಾಂಧ ಯುವಕರು ಶಿಕ್ಷಕರನ್ನು ಬೆದರಿಸಿ ಬಲವಂತವಾಗಿ ಈ ನಿಯಮ ಜಾರಿಗೆ ತಂದಿದ್ದಾರೆ.

ಇವರ ಪ್ರಭಾವ ಎಷ್ಟಿದೆಯೆಂದರೆ ಜಿಲ್ಲಾಡಳಿತ ಸಹ ಈ ನಿಟ್ಟಿನಲ್ಲಿ ಸತ್ತು ಮಲಗಿತ್ತು. ಅನೇಕ ಶಾಲೆಗಳ ಫಲಕಗಳಲ್ಲಿ ‘ಉರ್ದು ಶಾಲೆ’ ಎಂದು ತಿದ್ದಿ ಅಟ್ಟಹಾಸ ಮೆರೆಯಲಾಗಿದೆ. ಅಷ್ಟೇ ಅಲ್ಲದೇ ಸದರ್ ಬ್ಲಾಕ್‌ನ ಗ್ರಾಮವೊಂದರ ಶಾಲೆಯಲ್ಲಿ ಮಕ್ಕಳು ಕೈಜೋಡಿಸಿ ನಮಸ್ಕಾರ ಮಾಡುವುದನ್ನೂ ನಿಷೇಧಿಸಲಾಗಿತ್ತು. ಗಹಾರ್ ಜಿಲ್ಲೆ ಶಾಲೆಗಳಲ್ಲಿ ಇಸ್ಲಾಮಿಕ್ ಕಾನೂನಾದ
ಷರಿಯಾವನ್ನು ಹೇರಲಾಗಿತ್ತು. ಇದಕ್ಕೆಲ್ಲ ಕಾರಣ ಆ ಶಾಲೆಗಳಲ್ಲಿ ಮುಸ್ಲಿಂ ಮಕ್ಕಳ ಸಂಖ್ಯೆಗಿಂತ ಹಿಂದೂ ಮಕ್ಕಳ ಸಂಖ್ಯೆ ಕಡಿಮೆಯಿತ್ತು.

ಹೀಗಾಗಿ ತಾವು ಹೇಳಿದ್ದೇ ನಿಯಮ ಜಾರಿಯಾಗಬೇಕೆಂಬ ದೌರ್ಜನ್ಯಕ್ಕೆ ಇಂಥ ಪ್ರದೇಶಗಳು ಬಲಿಯಾಗಿವೆ. ಈಗಾಗಲೇ ದೇಶದ ಬಹುತೇಕ ಕಡೆಗಳಲ್ಲಿ ದ್ವಿಚಕ್ರ ಸವಾರರು ಹೆಲ್ಮೆಟ್ ಧರಿಸದೆ ಮೂರ್ನಾಲ್ಕು ಮಂದಿ ಒಂದೇ ವಾಹನದಲ್ಲಿ ಕಣ್ಮುಂದೆಯೇ ಚಲಿಸುತ್ತಿದ್ದರೂ ಕ್ರಮಕೈಗೊಳ್ಳಲಾಗದೆ ಪೊಲೀಸರೇ ಅಸಹಾಯಕರಾಗಿ ನಿಲ್ಲುತ್ತಿದ್ದಾರೆ. ಇಂಥ ಬೆಳವಣಿಗೆ ಗಳೆಲ್ಲ ಓವೈಸಿಯಂಥ ರಾಜಕಾರಣಿಗಳಿಗೆ, ದೇಶದ್ರೋಹಿ ಸಂಘಟನೆಗಳಿಗಿಂತ ಮಧ್ಯರಾತ್ರಿಯ ನಾಯಿಗಳಂತೆ ಬೊಗಳುವ ಇಲ್ಲಿನ ಸೋ ಕಾಲ್ಡ್ ಸೆಕ್ಯುಲರಿಸ್ಟ್ ಮಂದಿಗೆ ಬಹು ಹಿತಕರ ಅನುಭವ ಕೊಡುತ್ತವೆ. ದುರಂತವೆಂದರೆ ದೇಶದ
ಪ್ರಜ್ಞಾವಂತ ದೇಶಾಭಿಮಾನಿ ಮುಸಲ್ಮಾನರು ಮಾತ್ರ ದಿವ್ಯ ಮೌನ ತಾಳುತ್ತಾರೆ.

ಇನ್ನು ರಾಜಕೀಯವಾಗಿ ಜನಸಂಖ್ಯೆ ಹೆಚ್ಚಳ ಹೇಗೆಲ್ಲ ದಾರಿತಪ್ಪುತ್ತದೆಂದರೆ ಮೊನ್ನೆ ಮೊನ್ನೆ ಬಾಗಲಕೋಟ ಬಳಿಯ ಗಲಭೆ ಸಂತ್ರಸ್ತೆ ಮುಸ್ಲಿಂ ಮಹಿಳೆಯೊಬ್ಬಳು ಸಿದ್ದರಾಮಯ್ಯನವರು ಶೀಘ್ರ ಸ್ಪಂದಿಸಲಿಲ್ಲವೆಂಬ ಕಾರಣಕ್ಕೆ ನೋಟಿನ ಕಂತೆಯನ್ನು ಬಿಸಾಡಿಬಿಟ್ಟಳು. ಇದರಲ್ಲೂ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹವಣಿಸಿದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಆ ಮಹಿಳೆಗೆ ತಿಳಿಹೇಳುವುದನ್ನು ಬಿಟ್ಟು ಹಿಜಾಬ್, ಹಲಾಲ್, ಜಟಕಾಕಟ, ಆಜಾನ್‌ಗಳನ್ನೆಲ್ಲ ಪ್ರಸ್ತಾಪಿಸಿ ಬಿಜೆಪಿ ಮತ್ತು ಸಂಘಪರಿವಾರವನ್ನು ದೂಷಿಸಿ ಡೋಂಗಿತನ ಪ್ರದರ್ಶಿಸುತ್ತಾನೆ.

ಹೀಗಿದೆ ನೋಡಿ ಹಿಂದೂ ರಾಜಕಾರಣಿಗಳ ಮನಃಸ್ಥಿತಿ. ಜಾತ್ಯತೀತರೆಂದು ಕರೆಸಿಕೊಳ್ಳುವ ಇಂಥವರು ಮುಸ್ಲಿಂ ಮಕ್ಕಳು ನೊಂದರೆ ಓಡಿಹೋಗಿ ಕಣ್ಣೀರಿಟ್ಟು ನೋಟಿನ ಕಂತೆ ಕೈಲಿಟ್ಟು ಬರುತ್ತಾರೆ. ಹಿಂದೂ ಯುವಕರ ಹೆಣಬಿದ್ದರೆ ಮಾತ್ರ ಇವರಿಗೆ
ಬೀದಿಯ ನಾಯಿ ಸತ್ತಂತೆ. ಇಂಥವರ ಮನಃ ಸ್ಥಿತಿಗೂ ಧರ್ಮಾಂಧರ ‘ಮಿಷನ್ ೨೦೪೭’ ಯೋಜನೆಗೂ ಸಕತ್ ಮ್ಯಾಚ್
ಆಗುತ್ತಿದೆಯಲ್ಲವೇ? ಇನ್ನೊಂದು ಕಡೆ ಸಿದ್ದರಾಮಯ್ಯರಂಥ ಆರ್ಥಿಕ ತಜ್ಞರೇ ಮೊನ್ನೆ ಪ್ರಜೆಗಳಿಗೆ ಬ್ಯಾಂಕ್‌ನ ಸಾಲ ಕಟ್ಟಬೇಡಿ ಎಂದು ಪ್ರಚೋದಿಸಿದರಲ್ಲ, ಅದನ್ನೇ ಗಂಭೀರವಾಗಿ ಪರಿಗಣಿಸಿ ಅವರ ಅಭಿಮಾನಿ ಮತದಾರರೆಲ್ಲ ಸಾಲ ಕಟ್ಟದೇ ಹೋದರೆ ರಾಜ್ಯದ ಆರ್ಥಿಕ ಸ್ಥಿತಿಯ ಗತಿಯೇನು? ಮೇಲೆ ಹೇಳಿದಂತೆ ಒಂದೊಂದು ಕುಟುಂಬಕ್ಕೆ ಕಾಲು ಟನ್‌ನಷ್ಟು ಪಡಿತರವನ್ನು, ಅನೇಕ ಉಚಿತ ಸವಲತ್ತುಗಳನ್ನು ನೀಡುತ್ತ ರಾಜ್ಯಗಳು ಸಾಲದ ಸುಳಿಯಲ್ಲಿ ತೇಲುತ್ತಿವೆ.

ದಿವಾಳಿಯಾದ ಶ್ರೀಲಂಕಾದ ಸಾಲದ ಪ್ರಮಾಣ 6 ಲಕ್ಷ ಕೋಟಿ ರುಪಾಯಿಯಷ್ಟಿದೆ. ಆದರೆ ಭಾರತದ ಬಿಟ್ಟಿ ಭಾಗ್ಯಗಳ ಅಗ್ರಗಣ್ಯ ರಾಜ್ಯ ತಮಿಳುನಾಡಿನದೇ 6.6 ಲಕ್ಷಕೋಟಿಯಷ್ಟಿದೆ, ಮಹಾರಾಷ್ಟ್ರ 6.8 ಲಕ್ಷಕೋಟಿ, ಪಶ್ಚಿಮಬಂಗಾಳ 5.62 ಲಕ್ಷಕೋಟಿ, ಕರ್ನಾಟಕ 5.18 ಲಕ್ಷಕೋಟಿ ರುಪಾಯಿಗಳಷ್ಟು ಸಾಲದ ಪ್ರಮಾಣದಲ್ಲಿದೆ.

ಇದರಲ್ಲಿ ಬಹುತೇಕ ರಾಜ್ಯಗಳೆಲ್ಲ ಬಿಜೆಪಿಯೇತರ ಆಡಳಿತದಲ್ಲಿರುವುದು ಗಮನಾರ್ಹ. ಇಷ್ಟೆಲ್ಲ ಸಾಲದ ಸುಳಿಯಲ್ಲಿರಲು ಕಾರಣ ರಾಜಕೀಯ ಮೇಲಾಟಕ್ಕೆ ಬಲಿಯಾದ ಅವೈಜ್ಞಾನಿಕ ಜನಸಂಖ್ಯೆ. ಹತ್ತು ಕುಟುಂಬಗಳನ್ನು ಸಂತೃಪ್ತಿಪಡಿಸಲು ನೂರು
ಕುಟುಂಬಗಳದ್ದನ್ನು ಕಿತ್ತುಕೊಂಡಂತೆ. ಹೀಗೆ ಏರುತ್ತಿರುವ ಜನಸಂಖ್ಯೆಯನ್ನೇ ತಮ್ಮ ಪಾಲಿನ ಬಹುಮತಗಳೆಂದು ಪರಿಗಣಿಸಿ ಬಾಂಗ್ಲಾದೇಶ, ಪಾಕಿಸ್ತಾನಗಳಿಂದ ಅಕ್ರಮವಾಗಿ ನುಸುಳುವವರಿಗೆ ಆಧಾರ್, ವೋಟರ್, ರೇಷನ್ ಕಾರ್ಡ್ ಮಾಡಿಸಿಕೊಟ್ಟು ಸಾಕಿಕೊಳ್ಳುವ ರಾಜಕಾರಣಿಗಳಿಗೆ ಜನಸಂಖ್ಯೆ ಏರಿಕೆಯ ಭವಿಷ್ಯದ ಭಯಾನಕ ಸ್ಥಿತಿಯ ಯಾವ ಅರಿವೂ ಇಲ್ಲ.

ಇಂಥ ಮನೆಹಾಳು ರಾಜಕಾರಣಿಗಳಿಂದಲೇ ಇಂದು ನೇಪಾಳ, ಸುಡಾನ್, ಯಮನ್, ವೆನಿಜುವೆಲಾ, ಜಿಂಬಾಬ್ವೆ,
ಪಾಕಿಸ್ತಾನ ದಂಥ ದೇಶಗಳು ಮಣ್ಣು ತಿನ್ನುತ್ತಿವೆ. ಹೀಗೆ ಅನಿಯಂತ್ರಿತ ಜನಸಂಖ್ಯೆಯಿಂದಾಗುವ ಅಪಾಯ ಗ್ರಹಿಸಿದ
ಚೀನಾ ತನ್ನ ದೇಶದ ಜನಸಂಖ್ಯೆ ನಿಯಂತ್ರಿಸಲು 1980ರಲ್ಲಿ ‘ಒಂದೇ ಮಗು’ ಎಂಬ ನೀತಿಯನ್ನು ಜಾರಿಗೊಳಿಸಿ ಯಶಸ್ವಿ ಯಾಗಿತ್ತು. ಇದೀಗ ಜನಸಂಖ್ಯೆ ಕಡಿಮೆ ಆಗುತ್ತಿರುವುದರಿಂದ ಮೇ 2021ರಲ್ಲಿ ಮೂರು ಮಕ್ಕಳಿಗೆ ಅವಕಾಶ ನೀಡಿ
ಸರಕಾರವೇ ನಾನಾ ಯೋಜನೆಗಳನ್ನು ಜಾರಿಗೆ ತರುತ್ತಿದೆ.

ಆದ್ದರಿಂದ ನಮ್ಮ ದೇಶದಲ್ಲಿ ಈ ಕೂಡಲೇ ಧರ್ಮಾತೀತವಾಗಿ ಮನೆಗೊಂದು ಅಥವಾ ಎರಡು ಮಕ್ಕಳ ನಿಯಮವನ್ನು ಕಡ್ಡಾಯ ಜಾರಿಗೆ ತರದೇ ಹೋದರೆ ಭವಿಷ್ಯದಲ್ಲಿ ಉಳಿಗಾಲವಿಲ್ಲ. ಅದರಲ್ಲೂ ಮತಾಂಧ ಜಿಹಾದಿಗಳ ‘ಮಿಷನ್ 2047’ಗೆ ಹಿಂದೂ ಜಾತ್ಯತೀತರು ಕೈಜೋಡಿಸದರಂತೂ ಕಥೆ ಮುಗಿಯಿತು. ಮುಂದೆ ಶ್ರೀಕೃಷ್ಣ ಪರಮಾತ್ಮ ಅವತಾರವೆತ್ತಿ ಬರಬೇಕಷ್ಟೆ !.

‘ತಮಾಷೆಯೆಂದರೆ ‘ಮೋದಿಯವರ ನಂತರ ಅಮಿತ್ ಶಾ ಹತ್ತುವರ್ಷ, ಯೋಗಿಜೀ ಇಪ್ಪತ್ತು ವರ್ಷ ದೇಶವನ್ನು ಆಳುತ್ತಾರೆ’ ಎಂದು ಭಕ್ತರು ಲೆಕ್ಕಹಾಕುತ್ತಿದ್ದರೆ. ಆದರೆ ಅಂಥ ಬಹುಮತಕ್ಕಾಗಿ ಹಿಂದೂ ಮತದಾರರೇ ಇರುವುದಿಲ್ಲ ಎಂದು ಗುಲಾಮರು ಮತಾಂಧರು ಅಂದಾಜಿಸುತ್ತಿದ್ದಾರೆ.