Saturday, 5th October 2024

ಎದೆ ಎತ್ತರಕ್ಕೆ ಬೆಳೆದ ಮಗ ಬಾನೆತ್ತರಕ್ಕೆ ಬೆಳೆಯಲಿ

ಪರಿಶ್ರಮ

ಪ್ರದೀಪ್ ಈಶ್ವರ್‌

parishramamd@gmail.com

ಅಪ್ಪ ಎಂಬ ಪದವೇ ಒಂದು ರೋಮಾಂಚನ. ಅಪ್ಪನ ತ್ಯಾಗವನ್ನು, ಆತನ ಪರಿಶ್ರಮವನ್ನು ಯಾವ ಪಠ್ಯ ಪುಸ್ತಕವೂ ವಿವರಿಸ ಲಾಗದು. ಬೆಳೆದ ಮಗನ ಬಗ್ಗೆ ಅಪಾರವಾದ ನಂಬಿಕೆ, ನನ್ನ ಮಗ ತಾನೇ ದಾರಿ ತಪ್ಪಲ್ಲ ಎಂಬ ವಿಶ್ವಾಸ, ಇವತ್ತಲ್ಲ ನಾಳೆ, ನನಗೆ ಒಳ್ಳೆಯ ಹೆಸರು ತರದೇ ಇರುತ್ತಾನಾ ಎನ್ನುವಂತಹ ನಂಬಿಕೆ.

ಬೆಟ್ಟದ ಮೇಲಿರುವ ದೇವರಿಗಿಂತ, ಬೈದು ಬುದ್ಧಿ ಹೇಳುವ ಅಪ್ಪನೇ ಶ್ರೇಷ್ಠ. ಮಗನಿಗೆ ಅಪ್ಪನಿಗಿಂತ ಬೆಸ್ಟ್ ಫ್ರೆಂಡ್ ಮತ್ತೊಬ್ಬನಿಲ್ಲ. ಏನನ್ನೋ ಬಯಸದೇ ಅನ್ ಕಂಡೀಷನಲ್ ಆಗಿ ನಮನ್ನು ಪ್ರೀತಿಸುವ ಆ ಜೀವದ ಹೆಸರು ತಂದೆ. ಚರಿತ್ರೆಯ ಪುಟಗಳಲ್ಲಿ, ಇತಿಹಾಸ ಕಂಡ ರೋಚಕ ಕ್ಷಣಗಳಲ್ಲಿ ತಂದೆಯ ತ್ಯಾಗ ಮಹತ್ತರವಾದ ಸ್ಥಾನವನ್ನು ಪಡೆದಿದೆ. ನಮ್ಮ ಕನಸುಗಳ ಅಧಿಪತಿ, ದೇವರ ಮನೆಯಲ್ಲಿರುವ ದೇವರು ಕೈ ಹಿಡಿಯದಿದ್ದರೂ, ಪ್ರತಿ ಕಷ್ಟದಲ್ಲೂ ಕೈ ಹಿಡಿದು ಬಿಸಿಲು ಬರುವುದಕ್ಕೂ ಮುನ್ನ ನೆರಳಿನ ಸಾಮ್ರಾಜ್ಯದಲ್ಲಿ ನಮ್ಮನ್ನು ಸಾಗಿಸುವ ಆ ದೇವರನ್ನೇ ಅಪ್ಪ ಎಂದು ಕರೆಯುತ್ತೇವೆ.

ಅಮ್ಮನ ಬಗ್ಗೆ, ಆಕೆಯ ತ್ಯಾಗದ ಬಗ್ಗೆ ಸಾವಿರಾರು ಪುಟಗಳು ಚರಿತ್ರೆಯಲ್ಲಿ ದಾಖಲಾಗಿವೆ. ನಮ್ಮ ಬದುಕು ಸೇರಿದಂತೆ ಅಮ್ಮನ ಬದುಕಿಗೂ ಅರ್ಥ ಕೊಟ್ಟ ಅಪ್ಪನ ಮಹತ್ವವನ್ನು ಬಹಳಷ್ಟು ಪುಸ್ತಕಗಳು ಸೈಡ್ ಲೈನ್ ಮಾಡಿವೆ. ಬೆಳೆದ ಮಗ ಅಥವಾ ಮಗಳು ಮದುವೆ ವಯಸ್ಸಿಗೆ ಬಂದರೆ, ಇಂತಹವರು ಇರಲಿ ಎಂದು ಹೇಳಿ ಫೈನಲ್ ಮಾಡುವುದಷ್ಟೇ ಅಮ್ಮನ ಕರ್ತವ್ಯ.

ನಂತರ, ಮದುವೆಯ ಖರ್ಚು, ಮಾಡಬೇಕಾದ ಸಾಲ, ಕಟ್ಟಬೇಕಾದ ಬಡ್ಡಿ, ಮುತ್ತೂಟ್, ಮಣ್ಣಪುರಂನಲ್ಲಿ ಇಟ್ಟ ಚಿನ್ನ, ಹೇಳ ಲಾಗದಷ್ಟು ಕಷ್ಟಗಳು ಕೇವಲ ಅಪ್ಪನ ಹೆಗಲಿಗೆ. ಪ್ರತಿಯೊಬ್ಬರ ಬದುಕಿನಲ್ಲೂ ಅಪ್ಪನ ತ್ಯಾಗ ವರ್ಣಿಸಲಾಗದಷ್ಟು ದೊಡ್ಡದಾ ಗಿರುತ್ತದೆ. ನಿಮ್ಮ ಫೇವರಿಟ್ ಹೀರೊ ಯಾರೋ ಗೊತ್ತಿಲ್ಲ. ಆದರೆ ನನ್ನ ಫೇವರಿಟ್ ಹೀರೋ ಅಂದಿಗೂ, ಇಂದಿಗೂ, ಎಂದೆಂದಿ ಗೂ, ಮೈ ಡ್ಯಾಡ್. ಅಪ್ಪನ ತ್ಯಾಗ ಎಂಥದ್ದು ಎಂದು ತಿಳಿಯಲು ಕೆಳಗಿನ ಸಾಲುಗಳನ್ನ ಶ್ರದ್ಧೆಯಿಂದ ಓದಿ.

1924ರಲ್ಲಿ ನಡೆದ ನೈಜ ಘಟನೆ ಆತನ ಹೆಸರು ಬಿಲ್ ಹ್ಯಾವೆನ್ಸ್. ಹಗಲು ರಾತ್ರಿ ಎನ್ನದೆ ದೋಣಿ ಚಾಲನೆ ಸ್ಪರ್ಧೆಯಲ್ಲಿ ವರ್ಷ ಗಟ್ಟಲೆ ತರಬೇತಿ ಪಡೆದವನು. ಪ್ಯಾರೀಸ್ ನಲ್ಲಿ ನಡೆಯಲಿದ್ದ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ತಂಡಕ್ಕೆ ಆಯ್ಕೆಯಾಗಿದ್ದ. ಅವನ ಆಯ್ಕೆಯಿಂದ ತಂಡವು ಚಿನ್ನದ ಪದಕ ಗೆದ್ದೇ ಗೆಲ್ಲುತ್ತದೆಂಬ ನಿರೀಕ್ಷೆ ಇತ್ತು. ಇನ್ನೇನು ಒಲಿಂಪಿಕ್ಸ್‌ಗೆ ಹೊರಡುವ ಸಂದರ್ಭ ತಾನು ಬರುವುದಿಲ್ಲವೆಂದು ಬಿಲ್ ಹ್ಯಾವೆನ್ಸ್ ಘೋಷಿಸಿಬಿಟ್ಟ. ತಂಡದ ಉಳಿದ ಸದಸ್ಯರು ಗಾಬರಿಯಾದರು. ನಂತರ ಬಾಯಿಗೆ ಬಂದಂತೆ ವಿಮರ್ಶಿಸಲು ಪ್ರಾರಂಭಿಸಿದರು. ಆತನ ವೈಯಕ್ತಿಕ ತೇಜೋವಧೆ ಮಾಡಿದರು. ನಿನ್ನ ಬದುಕು ಮುಗಿದೇ ಹೋಯಿತು ಎಂದು ಸ್ನೇಹಿತರೆಲ್ಲ ಸೇರಿ ಬಿಲ್ ಹ್ಯಾವೆನ್ಸ್ ಬಗ್ಗೆ ಷರಾ ಬರೆದರು.

ಇಷ್ಟಕ್ಕೂ ಬಿಲ್ ಹ್ಯಾವೆನ್ಸ್ ಅಷ್ಟು ಪರಿಶ್ರಮ ಪಟ್ಟಿದ್ದರೂ ಒಲಿಂಪಿಕ್ಸ್ ಏಕೆ ಹೋಗಲಿಲ್ಲ ಎಂಬ ಪ್ರಶ್ನೆ ಕಾಡುವುದು ಸಹಜ. ಕಾರಣ ಆತನ ಪತ್ನಿಯ ಚೊಚ್ಚಲ ಹೆರಿಗೆಯ ಸಮಯ. ಹೆರಿಗೆಯ ಸಮಯದಲ್ಲಿ ಪತ್ನಿಯೊಂದಿಗೆ ಇರುವುದು ಕರ್ತವ್ಯ ಎಂದು ಆತ ನಂಬಿದವನು. ಹಾಗಾಗಿ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆಯುವುದೋ ಅಥವಾ ಪತ್ನಿಯೊಂದಿಗೆ ಇರು ವುದೋ ಎಂಬ ಸಂದಿಗ್ಧ ಪರಿಸ್ಥಿತಿ. ಅಂತಹ ಶ್ರೇಷ್ಠ ಅವಕಾಶವನ್ನು ಆತನ ಪತ್ನಿಯ ಹಿತದೃಷ್ಟಿಯಿಂದ ತ್ಯಾಗ ಮಾಡಿದ. ಕೊನೆಗೂ ಬಿಲ್ ಹ್ಯಾವೆನ್ಸ್ ಬಿಟ್ಟು ಪ್ಯಾರೀಸ್‌ಗೆ ತೆರಳಿದ್ದ ತಂಡ ಚಿನ್ನದ ಪದಕದೊಂದಿಗೆ ದೇಶಕ್ಕೆ ಮರಳಿತು.

ಆಗ ದೇಶದ ಜನರೆಲ್ಲ ಬಿಲ್ ತುಂಬಾ ದೊಡ್ಡ ತಪ್ಪು ಮಾಡಿದ, ಅವನದ್ದು ನಾಚಿಕೆಗೇಡಿನ ಕೆಲಸ, ಅವನ ತಪ್ಪಿನಿಂದ ಜೀವನ ವಿಡೀ ಪಶ್ಚಾತಾಪಪಡುತ್ತಾನೆಂದು ವಿಮರ್ಶಿಸಲು ಪ್ರಾರಂಭಿಸಿದರು. ಅದೇ ಸಂದರ್ಭದಲ್ಲಿ ಬಿಲ್ ಹ್ಯಾವೆನ್ಸ್‌ಗೆ ಗಂಡು ಮಗುವಾಯಿತು. ಅವನಿಗೆ ಪ್ರಾಂಕ್ ಹೆವೆನ್ಸ್ ಎಂದು ಹೆಸರಿಟ್ಟ. ಮುzಗಿ ಬೆಳೆಸಿದ ಮಗನ ಭವಿಷ್ಯಕ್ಕಾಗಿ ಸರ್ವಸ್ವವನ್ನೇ ತ್ಯಾಗ ಮಾಡಿದ.

ಅದು 1952 ಬಿಲ್ ಹೆವೆನ್ಸ್‌ಗೆ ಫಿನ್‌ಲೆಂಡಿನ ಹೆಲ್ಸಿಂಕ್ ಎಂಬ ಊರಿನಿಂದ ಟೆಲಿಗ್ರಾಮ್ ಬಂತು ಅದನ್ನು ಕಳುಹಿಸಿದವನು ಮಗ ಪ್ರಾಂಕ್ ಹೆವೆನ್ಸ್. ಆ ಟೆಲಿಗ್ರಾಮ್ ನಲ್ಲಿ ಹೀಗೆ ಬರೆದಿದ್ದ- ಪ್ರೀತಿಯ ಅಪ್ಪ, ಇಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ದೋಣಿ ಚಾಲನೆ ಸ್ಪರ್ಧೆಯಲ್ಲಿ ನಾನು ಚಿನ್ನದ ಪದಕ ಗೆದ್ದಿದ್ದೇನೆ! ೧೯೨೪ರಲ್ಲಿ ನಾನು ಹುಟ್ಟುವುದಕ್ಕಾಗಿ ನೀವು ಕಾಯುತ್ತ ಕುಳಿತು ಕಳೆದುಕೊಂಡ ಚಿನ್ನದ ಪದಕವನ್ನು ನಾನು ಗೆದ್ದು ತರುತ್ತಿದ್ದೇನೆ !

ಫಿನ್‌ಲೆಂಡಿನಲ್ಲಿ ನಡೆಯುತ್ತಿದ್ದ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ತಂದು ಅಂದು ತಂದೆ ತೆಗೆದುಕೊಂಡ ನಿರ್ಣಯ ತಪ್ಪಲ್ಲವೆಂದು ದೇಶದ ಜನರಿಗೆ ತೋರಿಸಿದ. ತಂದೆ ಇದ್ದರೆ ಬಿಲ್‌ನಂತಿರಬೇಕು, ಮಗ ಇದ್ದರೆ ಪ್ರಾಂಕ್‌ನಂತೆ ಇರಬೇಕು ಎಂದು ಜನ ಪ್ರಶಂಸಿಸಿ ದರು. ಅಪ್ಪನ ತ್ಯಾಗ ಎಂದೂ ವ್ಯರ್ಥವಲ್ಲ. ಅಪ್ಪನ ತೀರ್ಮಾನದ ಹಿಂದೆ ಮಗನ ಸುಂದರ ಭವಿಷ್ಯದ ಕಲ್ಪನೆ ಇರುತ್ತದೆ. ಅಪ್ಪನ
ಪ್ರತಿ ಹೆಜ್ಜೆಯಲ್ಲೂ ಮಗನ ಸಾಮ್ರಾಜ್ಯ ಕಟ್ಟುವ ಸ್ಪಷ್ಟತೆ ಇರುತ್ತದೆ. ಬೀಳುವ ಕನಸಿನಲ್ಲೂ ಮಗನ ಕನವರಿಕೆ ಇರುತ್ತದೆ.

ಅಪ್ಪ ಎಂದರೆ ಪ್ರೀತಿ, ಬದುಕು, ಭವಿಷ್ಯ. ಯಾರು ಮೋಸ ಮಾಡಿದರೂ ನಮ್ಮನ್ನ ಮೋಸ ಮಾಡದ ಏಕೈಕ ವ್ಯಕ್ತಿ ಅಪ್ಪ. ಲವ್ ಯೂ ಅಷ್ಟೇ. ಹೇಳಿದೆನಲ್ಲಾ, ಬೆಟ್ಟದ ಮೇಲೆ ಇರುವ ದೇವರಿಗಿಂತ, ಬೈದು ಬುದ್ಧಿ ಹೇಳೋ ಅಪ್ಪ ದೊಡ್ಡೋನು. ಬಾಲ್ಯದಲ್ಲಿ
ಎಡವಿ ಬಿzಗ, ಪ್ರಾಥಮಿಕ ಶಾಲೆಯಲ್ಲಿ ವಿನಾಕಾರಣ ಕಣ್ಣೀರು ಹಾಕಿದ್ದಾಗ, ಪ್ರೌಢಶಾಲೆಯಲ್ಲಿ ಕಾರಣವಿಲ್ಲದೆ ಕೋಪ ಮಾಡಿ ಕೊಂಡಾಗ, ಕಾಲೇಜಿನ ಜರ್ನಿಯಲ್ಲಿ ಭವಿಷ್ಯವನ್ನ ಮರೆತಾಗ… ಆಸರೆಯಾದವರು, ದಾರಿ ದೀಪವಾದವರು ತಂದೆ.

ಜಗತ್ತಿನಲ್ಲಿ ನಮಗೆ ಎಂದಿಗೂ ಕೆಡುಕನ್ನು ಬಯಸದ ಎರಡು ಜೀವಗಳು ತಂದೆ – ತಾಯಿ. ಬೆಟ್ಟದ ಮೇಲೆ ಇರುವ ದೇವರನ್ನ ಪೂಜಿಸುತ್ತೇವೆ. ಆದರೆ ಮನೆಯಲ್ಲಿರುವ ತಂದೆಯೊಂದಿಗೆ ಜಗಳಕ್ಕೆ ಬೀಳುತ್ತೇವೆ. ಗರ್ಭಗುಡಿಯಲ್ಲಿರುವ ದೇವತೆಯನ್ನು ಆರಾಧಿ ಸುತ್ತೇವೆ, ಅಮ್ಮನೊಂದಿಗೆ ಮುನಿ ಸಿಕೊಳ್ಳುತ್ತೇವೆ. ಅಪ್ಪನ ಪ್ರೀತಿಗೆ, ನಂಬಿಕೆಗೆ, ವಿಶ್ವಾಸಕ್ಕೆ ನಮ್ಮ ಅಭ್ಯುದಯವನ್ನೇ ಬಯಸುವ ಆತನ ಆಶಯಕ್ಕೆ ದ್ರೋಹ ಮಾಡಿದರೆ. ಬಾಳಿನಲ್ಲಿ ಯಶಸ್ಸು ಗಳಿಸುವುದು ತುಂಬಾ ಕಷ್ಟ.

ಬೆಳೆದ ಮಗನ ಕ್ರೇಜಿ ಜರ್ನಿಯಲ್ಲಿ, ಯೋಚನೆಗಳೇ ಲೇಜಿಯಾದಾಗ, ಅಪ್ಪನ ನೋವು ಯಾವ ಮಗನಿಗೂ ಸುಲಭವಾಗಿ ಅರ್ಥವಾಗುವುದಿಲ್ಲ. ಬೆವರು ಸುರಿಸಿ ದುಡಿದು ಬ್ಯಾಂಕಿನಲ್ಲಿ ಭದ್ರವಾಗಿ ಎತ್ತಿಟ್ಟ ಕಾಸಿನಲ್ಲಿ ಕಾಲೇಜಿಗೆ ಫೀಸ್ ಕಟ್ಟಿದ್ರು, ಮಗ ಮಾತ್ರ ಕ್ಲಾಸಿಗೆ ಬಂಕ್ ಮಾಡಿ ಅಪ್ಪನ ನಂಬಿಕೆಯನ್ನು Shrink ಮಾಡ್ತಾ ಇರ್ತಾನೆ. ಸೆಂಟಿಮೆಂಟ್ಸ್‌ಗೆ, ಎಮೋಷನ್ಸ್‌ಗೆ ಜಾಗವಿಲ್ಲದ ಅಮೆರಿಕದಂಥ ದೇಶದ ಅಪ್ಪ-ಅಮ್ಮನಿಗಾಗಿ ಅದ್ದೂರಿಯಾಗಿ Father’s Day & Mother’s Day ಮಾಡ್ತಾರೆ. ಆದರೆ ನಮ್ಮ ದುರಂತ ನೋಡಿ, ಕೊನೆಯ ಉಸಿರು ಇರುವವರೆಗೂ ಮಕ್ಕಳ ಯಶಸ್ಸನ್ನೇ ಬಯಸುವ ಅಪ್ಪ ಅಮ್ಮನಿಗೆ ಕನಿಷ್ಠ ವಿಶ್ ಮಾಡುವ ಸೌಜನ್ಯವೂ ತೋರುವುದಿಲ್ಲ.

7ನೇ ಕ್ಲಾಸಿನ ಹುಡುಗನಿಗೆ Father’s day ಯಾವಾಗ ಎಂದು ಕೇಳಿದರೆ ಗೊತ್ತಿಲ್ಲ ಎಂದು ಉತ್ತರಿಸುತ್ತಾನೆ. ಅದೇ ವ್ಯಾಲೆಂಟೈನ್ಸ್‌ಡೇ ಕೇಳಿದರೆ ಫೆಬ್ರವರಿ 14 ಎಂದು ಥಟ್ ಅಂತ ಉತ್ತರಿಸುತ್ತಾರೆ. ಕೊನೆಯದಾಗಿ ಒಂದು ಮಾತು ಹೇಳ್ತೀನಿ ಕೇಳಿ. ‘ಸರಿಯಾಗಿ ನೆನಪಿದೆ ನನಗೆ…’ ಎನ್ನುವ ಹಾಡು ಕೇಳಿದ್ರೆ, ಕೈ ಕೊಟ್ಟ ಹುಡುಗಿಯನ್ನ ನೆನಪಿಸಿಕೊಂಡು ಯಾತನೆ ಯಾಗುತ್ತೆ. ಅದೇ ಜೋಗಿ ಸಿನಿಮಾ ಕ್ಲೈಮ್ಯಾಕ್ಸ್ ಸಾಂಗ್ ‘ಬೇಡುವೆನು ವರವನ್ನು…’ ಹಾಡನ್ನ ಕೇಳಿದರೆ ಕಣ್ಣಂಚಲಿ ಕಣ್ಣೀರು ಬರುತ್ತದೆ. ಏನಂತೀರಾ ? ಅಪ್ಪನ ಒಳ್ಳೆಯತನ ಮಗನ ಭವಿಷ್ಯವನ್ನೇ ಬದಲಿಸೀತು.

ಸಹಾಯ ಮಾಡಿದರೆ ಖಂಡಿತವಾಗಲೂ ದೇವರು ನಮ್ಮನ್ನ ಕಾಪಾಡುತ್ತಾರೆ. ಒಂದು ಪುಟ್ಟ ಹಳ್ಳಿ ಇತ್ತು. ಹಳ್ಳಿಯಲ್ಲಿ ಒಬ್ಬ ರೈತನಿದ್ದ. ಬದುಕಿನ ಬಂಡಿ ಸಾಗಿಸುವುದಕ್ಕೆ ವ್ಯವಸಾಯ ಮಾಡುತ್ತಿದ್ದ. ಪ್ರತಿದಿನದಂತೆ ಆ ದಿನ ಸಹ ರೈತ ತೋಟಕ್ಕೆ ಹೋದ. ಕೆಲಸ ಮಾಡುತ್ತಿದ್ದ. ಮಧ್ಯಾಹ್ನ ದಾಟಿತ್ತು; ಸಂಜೆಯಾಗುತ್ತಿತ್ತು.

ಅಷ್ಟೋತ್ತಿಗೆ ದೂರದಿಂದ‘ ಕಾಪಾಡಿ ಕಾಪಾಡಿ’ ಎಂಬ ಶಬ್ದ ಕೇಳಿಬಂತು. ಗಾಬರಿಗೊಂಡ ರೈತ ಓಡಿಹೋದ. ಅಲ್ಲಿ ಒಬ್ಬ ಬಾಲಕ ಹೊಂಡದೊಳಗೆ ಬಿದ್ದುಹೋಗಿದ್ದ. ತಕ್ಷಣವೇ ತನ್ನ ಪ್ರಾಣವನ್ನೂ ಲೆಕ್ಕಿಸದೇ ರೈತ ಆ ಬಾಲಕನನ್ನ ಕಾಪಾಡಿದ. ತನ್ನ ತೋಟದ ಮನೆಗೆ ಕರೆದುಕೊಂಡು ಬಂದ. ಆ ಹೊತ್ತಿಗಾಗಲೇ ಆ ಬಾಲಕನ ಶ್ರೀಮಂತ ತಂದೆ, ಆ ತೋಟದ ಮನೆಕಡೆ ಬಂದು ರೈತನಿಗೆ ಧನ್ಯವಾದಗಳನ್ನು ಅರ್ಪಿಸಿದ . ಹಣ ಕೊಟ್ಟು ಬಳಸಿಕೊ ಅಂತ ಹೇಳಿದ. ಆದರೆ ರೈತ ಒಪ್ಪಲಿಲ್ಲ.

‘ಇದು ನನ್ನ ಧರ್ಮ. ಕಷ್ಟದಲ್ಲಿರುವವನಿಗೆ ಸಹಾಯ ಮಾಡಿದ್ದೀನಿ. ದಯವಿಟ್ಟು ನಾನು ಏನನ್ನು ಬಯಸುವುದಿಲ್ಲ’ ಎಂದು ಆತನು ಕೊಟ್ಟ ಹಣವನ್ನು ನಿರಾಕರಿಸಿದ. ಕೆಲ ಹೊತ್ತಿನಲ್ಲಿ ರೈತನ ಮಗ ಮನೆಯಿಂದ ಆಚೆ ಬಂದ. ರೈತನ ಮಗನನ್ನು ಖಂಡಿದ್ದೇ ತಡ, ಶ್ರೀಮಂತ ‘ಈತ ನಿಮ್ಮ ಮಗನಾ?’ ಎಂದು ಕೇಳಿದ, ಆಗ ರೈತ ಹೌದು ಎಂದು ತಲೆ ಅಡಿಸಿದ. ಆಗ ಶ್ರೀಮಂತ ಹೇಳಿದ-‘ನಿನ್ನ ಮಗನನ್ನು ಚೆನ್ನಾಗಿ ಓದಿಸು. ಅದಕ್ಕಾಗಿ ಖರ್ಚನ್ನು ನಾನು ಭರಿಸುತ್ತೇನೆ’ ಅಂತ ಭರವಸೆ ಕೊಟ್ಟು ಹೊರಟುಹೋದ. ಆ ಹುಡುಗನ ಎಲ್ಲ ವೆಚ್ಚವನ್ನ ಆ ಶ್ರೀಮಂತನೇ ಭರಿಸಿದ. ಆ ಹುಡುಗ ತುಂಬಾ ಚೆನ್ನಾಗಿ ಓದಿದ.

ನಂತರ St. Merri ಅನ್ನೋ Medical College ನಲ್ಲಿ ವೈದ್ಯ ಪದವಿಯನ್ನು ಸಹ ಮುಗಿಸಿದ. ಪರಿಶ್ರಮ ಪಟ್ಟು Pencilin ಅನ್ನುವ Antibiotic ನ ಕಂಡು ಹಿಡಿದ. ಅದು ಜಗತ್ತಿನಲ್ಲಿ ತುಂಬಾ ಸಂಚಲವನ್ನೇ ಸೃಷ್ಟಿ ಮಾಡಿತು. ಅದೇ ಸಮಯದಲ್ಲಿ ಆ ಶ್ರೀಮಂತನ ಮಗ Pneumonia ಕಾಯಿಲೆಯಿಂದ ಬಳಲುತ್ತಿದ್ದ. ಆ Pneumonia ಕಾಯಿಲೆಗೆ ಅದೇ Pencilin ನ ಬಳಸಿ ಅವನನ್ನ ಕಾಪಾಡ ಲಾಯಿತು. ಆ ಬಡವನ ಮಗನ ಹೆಸರು Alexander Fleming. ಆ ಶ್ರೀಮಂತ ಮಗ ಮುಂದೆ ಬೆಳೆದು Englandನ ಪ್ರಧಾನಿಯಾದ. ಆ ಪ್ರಧಾನಿಯ ಹೆಸರು ವಿನ್ಸ್‌ಟನ್ ಚರ್ಚಿಲ್.

ಕಷ್ಟದಲ್ಲಿ ನಾವು ಯಾರಿಗಾದರೂ ಕೈ ಹಿಡಿದರೆ, ಬಿದ್ದಾಗ ಮೇಲೆ ಎತ್ತಿದರೆ ಖಂಡಿತವಾಗಲೂ ಅವರು ನಮ್ಮನ್ನು ಕಾಪಾಡುತ್ತಾರೆ.
ಅವತ್ತು ರೈತ ನನಗೆ ಯಾಕೆ ಎಂದು ಕೈ ಚೆಲ್ಲಿದಿದ್ದರೆ, ಆತನ ಮಗ Alexander Fleming  ಮಾದರಿ ಆಗುತ್ತಿರಲಿಲ್ಲ. ಜಗತ್ತೇ ಮೆಚ್ಚು ವಂತಹ ಸಾಧನೆ ಮಾಡುತ್ತಿರಲಿಲ್ಲ. ಅವತ್ತು ರೈತ, ತನ್ನ ಪ್ರಾಣವನ್ನೂ ಲೆಕ್ಕಿಸದೇ ಆತನನ್ನ ಕಾಪಾಡಿದಕ್ಕೆ ಆತನ ಮಗ ಎತ್ತರಕ್ಕೆ ಬೆಳೆದ.

ಜಗದ್‌ವಿಖ್ಯಾತನಾದ. ವೈದ್ಯ ಲೋಕವೇ ಮೆಚ್ಚುವಂತಹ ಮೇಧಾವಿಯಾದ. ಕಾಯಿಲೆ ಬಂದಾಗ Pencilin ಇಲ್ಲ ಅಂದಿದ್ದರೆ ಆವತ್ತು Winston Churchi ಇರುತ್ತಿರಲಿಲ್ಲ. ನಂತರ England ಗೆ ಪ್ರಧಾನಿಯಾಗುತ್ತಿರಲಿಲ್ಲ. Yes ಕಷ್ಟದಲ್ಲಿರುವವರನ್ನ ಕಾಪಾ ಡೋಣ. ಕೈ ಹಿಡಿಯೋಣ. ಸಾಧ್ಯವಾದಷ್ಟು ಸಹಾಯ ಮಾಡೋಣ. ಇರುವುದರಲ್ಲಿಯೇ ಹಂಚಿ ತಿನ್ನೋಣ. ನಮ್ಮ ಜತೆ ನಾಲ್ಕು ಜನರನ್ನ ನಡೆಸೋಣ, ಇದು ಮನುಷ್ಯತ್ವ ಏನಂತೀರಾ?