Thursday, 12th December 2024

ಅದಾನಿ: ರಾಜಕೀಯ ಪರಿಣಾಮ ಅತ್ಯಲ್ಪ

ಮಧ್ಯಮವರ್ಗದ ಸಮುದಾಯಕ್ಕೆ ಇಂತಹ ವ್ಯಾಪಾರ ವಹಿವಾಟಿನ ಸಂಗತಿಗಳ ಬಗ್ಗೆ ಹೆಚ್ಚಿನ ಚಿಂತೆ ಇರುವುದಿಲ್ಲ. ನೆನಪಿಡಿ ಕೆಲವೇ ತಿಂಗಳುಗಳ ಹಿಂದೆ ಅದಾನಿ ವಿಶ್ವದ ಸಿರಿವಂತರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಂದಾಗಲೂ ಗ್ರಾಮೀಣ ಭಾರತದ ಜನ ತಲೆ ಕೆಡಿಸಿ ಕೊಳ್ಳಲಿಲ್ಲ, ಅದಾನಿಯ ವಿಚಾರ ಮುಂದಿಟ್ಟುಕೊಅಡು ಪ್ರಧಾನಿ ಮೋದಿಯವರ ಜನಪ್ರಿಯತೆಗೆ ಕಪ್ಪುಚುಕ್ಕೆ ಬಳಿಯುವುದು ಸದ್ಯಕ್ಕಂತೂ ಸಾಧ್ಯವಿಲ್ಲದ ಮಾತು.

ಬಹಳ ವರುಷಗಳ ಹಿಂದೆ 1980ರ ದಶಕದಲ್ಲಿ ಮಾಜಿ ಪ್ರಧಾನಿ ವಿ.ಪಿ.ಸಿಂಗ್ ತಮ್ಮ ಹೆಸರಿಗೆ ಮಿಸ್ಟರ್ ಕ್ಲೀನ್ ಇಮೇಜನ್ನು ಟಂಕಿಸಲು ಯತ್ನ ವೊಂದನ್ನು ಮಾಡಿದ್ದರು ಮತ್ತು ಅದರಲ್ಲಿ ಯಶಸ್ವಿಯಾಗಿದ್ದರು ಕೂಡ. ರಾಜೀವ್‌ಗಾಂಧಿಯವರನ್ನು ಐದು ವರುಷಗಳ ಕಾಲ ಅಧಿಕಾರದಿಂದ ದೂರವಿಡುವುದು ಆಗ ಅವರಿಗೆ ಸಾಧ್ಯ ವಾಗಿತ್ತು. ಅದೊಂದು ಇತಿಹಾಸ. ಆದರೆ ಈಗ ರಾಹುಲ್ ಗಾಂಧಿಗೆ 2024ರಲ್ಲಿ ಅದು ಸಾಧ್ಯವಾದೀತೇ?
ಇತ್ತೀಚೆಗೆ ಬಜೆಟ್ ಕುರಿತಾದ ಚರ್ಚೆಯಲ್ಲಿ ಸಾಕಷ್ಟು ರಾಜಕೀಯ ವ್ಯಾಖ್ಯಾನಗಳು ನಡೆದವು.

ನರೇಂದ್ರ ಮೋದಿ ಸರಕಾರ ನಡೆಸಿಕೊಂಡು ಬಂದಿರುವ ಸ್ವಜನಪಕ್ಷಪಾತ, ಗೌತಮ್ ಅದಾನಿಯ ಕುರಿತಾದ ಸಮರ್ಥನೆ ಬಗ್ಗೆ ರಾಹುಲ್ ಗಾಂಧಿ ಸಾಕಷ್ಟು ವಿಚಾರಗಳನ್ನು ಸಂಸತ್ತಿನಲ್ಲಿ ಮಂಡಿಸಿದರು. ಆದರೆ ಇದಕ್ಕೆ ಪ್ರತ್ಯುತ್ತರ ಕೊಡುವ ಭರದಲ್ಲಿ ಮೋದಿ, ತಮ್ಮ ಮತ್ತು ಅದಾನಿ ನಡುವಿನ ಸಂಬಂಧಗಳ ಬಗ್ಗೆ ಏನನ್ನೂ ಹೇಳದೇ ಪ್ರಗತಿ ಮತ್ತು ರಾಷ್ಟ್ರೀಯವಾದದ ವಿಚಾರವನ್ನೇ ಎತ್ತಿ ಮಾತನಾಡಿದ್ದಾರೆ.

ಅದು 2018ರ ಕಾಲಘಟ್ಟ, ಸಾರ್ವತ್ರಿಕ ಚುನಾವಣೆಗಳ ಒಂದು ವರುಷ ಮುನ್ನ ರಾಹುಲ್ ಗಾಂಧಿ ರಫೆಲ್ ವಹಿ ವಾಟಿನ ಬಗ್ಗೆ ಮಾತನಾಡಿ ಅದನ್ನೇ ಚುನಾವಣೆಯ ಪ್ರಮುಖ ಅಸವನ್ನಾಗಿಸಲು ಬಯಸಿದ್ದರು. ಕೆಲವೇ ಕೆಲವು ಕಾರ್ಪೊರೇಟ್ ಕುಳಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮೋದಿ ಸರಕಾರ ನಡೆದುಕೊಳ್ಳುತ್ತಿರುವ ರೀತಿಯ ಬಗ್ಗೆ ವ್ಯಾಪಕ ಟೀಕೆಗಳನ್ನೂ ರಾಹುಲ್ ಮಾಡಿದ್ದರು. ಚೌಕಿದಾರ್ ಚೋರ್ ಹೈ ಎಂಬ ಸ್ಲೋಗನ್ ಕೂಡ ಆಗ ಚಾಲ್ತಿಗೆ ಬಂದಿತ್ತು. ಆದರೆ ಅದು ಮತದಾರರ ಮನದಲ್ಲಿ ರಿಂಗಣಿಸಲಿಲ್ಲ. ಅದಕ್ಕೆ ಪ್ರತಿ ಯಾಗಿ ಮೋದಿ ಪಾಳಯದಿಂದ ಮುನ್ನೆಲೆಗೆ ಬಂದ ‘ಮೈ ಭೀ ಚೌಕೀದಾರ್’ ಸ್ಲೋಗನ್ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತು.

ಅದಾನಿ ಮತ್ತು ಪ್ರಧಾನಿಯವರ ನಡುವೆ ಸಂಬಂಧ ಕಲ್ಪಿಸುವುದರ ಫಲಿತಾಂಶ ಏನಾದೀತು? ಹೇಗೆ ಡಿಫೆನ್ಸ್ ಡೀಲ್ ಮತ್ತು ಅಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರವನ್ನು ಸಾಬೀತು ಪಡಿಸಲು ಸಾಕ್ಷ್ಯಾಧಾರಗಳ ಅಗತ್ಯವಿತ್ತೋ ಅಂತೆಯೇ ಈ ರಾಜಕೀಯ ನೈಚ್ಚಾನುಸಂಧಾನವನ್ನು ಸಾಬೀತು ಪಡಿಸುವು ದಕ್ಕೂ ರುಜುವಾತು ಬೇಕು. ಒಬ್ಬ ರಾಜಕೀಯ ವ್ಯಕ್ತಿ ಉದ್ಯಮಿಯೊಂದಿಗೆ ಇಷ್ಟು ಸಾಮೀಪ್ಯವನ್ನು ಹೊಂದುವುದು ಉತ್ತಮ ಬೆಳವಣಿಗೆಯಲ್ಲ. ಒಬ್ಬ ರಾಜಕೀಯ ನಾಯಕ ಈ ರೀತಿ ನಡೆದುಕೊಂಡರೆ ಸಾಮಾನ್ಯ ಜನರಿಂದ ದೂರಾಗುವ ಸಾಧ್ಯತೆಯೇ ಹೆಚ್ಚು. ಮತ್ತು ಸೂಟು ಬೂಟು ತೊಟ್ಟ ಬಿಲಿಯಾಧಿಪತಿಗಳ ಸಖ್ಯ ಎಂದಿಗೂ ಒಳಿತಲ್ಲ.

ನಮ್ಮ ಪ್ರಧಾನಮಂತ್ರಿಗಳೇ ಹಿಂದೊಮ್ಮೆ ನಾನೂ ತಿನ್ನಲ್ಲ, ಬೇರೆಯವರಿಗೆ ತಿನ್ನೋದಕ್ಕೂ ಬಿಡೋದಿಲ್ಲ ಎಂದು ಹೇಳಿದ್ದು ಎಲ್ಲರಿಗೂ ನೆನಪಿದೆ. ಅಂದರೆ ಅವರು ತಮ್ಮ ಸುತ್ತ ಇಂತಹ ಭ್ರಷ್ಟಾಚಾರ ಸುಳಿಯದಂತೆ ನೋಡಿಕೊಂಡು ಬಂದಿದ್ದಾರೆಂದರ್ಥವಲ್ಲವೇ? ಹಾಗಿದ್ದರೆ ಉದ್ಯಮ ವಲಯದ ಅತ್ಯಾಪ್ತ ವ್ಯಕ್ತಿ ಹೀಗೊಂದು ಸ್ಟಾಕ್ ಮಾರ್ಕೆಟ್ ಹಗರಣದಲ್ಲಿ ಸಿಲುಕಿಕೊಂಡಾಗ ಅವರೇನು ಮಾಡಬೇಕಿತ್ತು? ಅದನ್ನು ಹಾಗೇ ಬಿಟ್ಟು ಬಿಡುವುದು ತರವೇ? ಆದರೆ ಈ ವಿಚಾರದಲ್ಲಿ ಮೋದಿ ಬೇಕೆಂದೇ ಮೌನ ವಹಿಸಿದ್ದಾರೆ. ರಾಜಕೀಯವಾಗಿ ಕೆಲವೊಂದು ಸಂಗತಿಗಳನ್ನು ರಾಹುಲ್ ಗಾಂಧಿ ಜನರ ಮುಂದಿಟ್ಟಿದ್ದಾರೆ.

ಚುನಾವಣಾ ರಾಜಕೀಯದಲ್ಲಿ ಸಾಕಷ್ಟು ಗೆಲುವು ಕಂಡಿರುವ ಮುಂಚೂಣಿ ರಾಜಕಾರಣಿಯಾದ ನರೇಂದ್ರಮೋದಿ ತಮ್ಮ ಪ್ರತಿಸ್ಪರ್ಧಿಗಳಿಗೆ ಈ ರೀತಿಯ ಟೀಕೆ ಮಾಡುವುದಕ್ಕೆ ಯಾತಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂಬ ಪ್ರಶ್ನೆ ಏಳುವುದು ಸಹಜ. ತಮ್ಮ ಟೀಕಾಕಾರರನ್ನು ಮಣಿಸಲು ೨೦೦೨ರ ಗುಜರಾತ ಚುನಾವಣಾ ಸಂದರ್ಭದಲ್ಲಿಯೇ ಮೋದಿ ಗುಜರಾತಿನ ಅಸ್ಮಿತೆಯ ಬಗ್ಗೆ ಮಾತನಾಡಿದ್ದರು. ಅದು ೨೦೧೯ರ ಚುನಾವಣೆಯ ತನಕವೂ ಮುಂದು ವರಿದುಕೊಂಡು ಬಂದು. ಪುಲ್ವಾಮಾ ಮತ್ತು ಬಾಲಾಕೋಟ್ ನಲ್ಲಿ ನಡೆದ ಚಕಮಕಿಯ ವಿಚಾರವೂ ಸೇರಿದಂತೆ ತಮ್ಮ ರಾಜಕೀಯ ಜನಪ್ರಿಯತೆಯನ್ನು ಉಳಿಸಿಕೊಳ್ಳುವಲ್ಲಿ ಮೋದಿ ಸಫಲರಾಗಿದ್ದಾರೆ.

ಅನೇಕ ಪ್ರಗತಿಪರ ಯೋಜನೆಗಳನ್ನು ಉಖಿಸುವ ಮೋದಿ, ಆ ಕುರಿತಾಗಿ ಫಲಾನುಭವಿಗಳ ಸಂಖ್ಯೆಯನ್ನೂ ಉಖಿಸಿ, ಮೋದಿ ಇದ್ದರೆ ಎಲ್ಲವೂ ಸರಿ ಇರುತ್ತದೆ ಎಂಬ ಭಾವನೆಯನ್ನು ಜನರಲ್ಲಿ ಮೂಡಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಈಗ ಮತ್ತೆ ವಿ.ಪಿ.ಸಿಂಗ್ ಕಾಲದ ವಿದ್ಯಮಾನಗಳತ್ತ ಗಮನ ಹರಿಸೋಣ. ಬೋಫೋರ್ಸ್ ಹಗರಣವನ್ನು ಮುನ್ನೆಲೆಗೆ ತಂದ ಅವರು ಅದನ್ನು ಸಾರ್ವಜನಿಕರ ವಲಯ.ದಲ್ಲಿ ಸಾಕಷ್ಟು ಚರ್ಚೆಯಾಗುವಂತೆ ನೋಡಿ ಕೊಂಡರು. ಅದು ವಿ.ಪಿ.ಸಿಂಗ್ ಅವರಿಗೂ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಡುವಲ್ಲಿ ಯಶಸ್ವಿಯಾಯಿತು. ಆದರೆ ಈಗ ರಾಹುಲ್ ಗಾಂಧಿಗೆ ಅದು ಅಷ್ಟು ಸುಲಭವಿಲ್ಲ.

ಕುಟುಂಬ ರಾಜಕಾರಣದಿಂದ ಮೊದಲ್ಗೊಂಡು, ಕಾಂಗ್ರೆಸ್ ಕಾಲದಲ್ಲಿ ಆಗಿ ಹೋದ ಅನೇಕ ಹಗರಣಗಳ ಸಂಗತಿ ಇನ್ನೂ ಜನಮನದಲ್ಲಿ ಹಸಿರಾಗಿದೆ. ಹಾಗಾಗಿ ಮೋದಿ ವಿರುದ್ಧ ಯಾವುದೇ ಅಸ್ತ ಪ್ರಯೋಗ ಮಾಡಿ ಗೆಲ್ಲಬೇಕಿದ್ದರೂ ರಾಹುಲ್ ಗಾಂಧಿ ಹರಸಾಹಸ ಪಡಬೇಕಾಗುತ್ತದೆ. ಅಧಿಕಾರಸ್ಥರೊಂದಿಗೆ ಅದಾನಿಗೆ ಇದ್ದ ನಂಟು ಅಥವಾ ಕ್ಷಿಪ್ರಗತಿಯಲ್ಲಿ ಅತ್ಯಂತ ಸಿರಿವಂತನಾಗಿ ಬೆಳೆದು ನಿಂತ ಅದಾನಿಯ ಪರಿಕ್ರಮ ಇವ್ಯಾವುದೂ ಇಂದು ಮುಖ್ಯ ವಾಗುವುದಿಲ್ಲ.

ಜನರ ಮನದಲ್ಲಿರುವುದು ಅಭಿವೃದ್ಧಿಯ ಚಿಂತನೆ. ನಗರಕೇಂದ್ರಿತ ಪ್ರದೇಶಗಳಲ್ಲಿ ದಲಾಲ್ ಸ್ಟ್ರೀಟ್ ಬಗ್ಗೆ ಜನರು ಚಿಂತೆ ಮಾಡಬಹುದೇ ಹೊರತು ದೇಶಾದ್ಯಂತ ಇದು ಸಂಚಲನ ಮೂಡಿಸುವ ಸಂಗತಿಯಾಗದು. ಮಧ್ಯಮವರ್ಗದ ಸಮುದಾಯಕ್ಕೆ ಇಂತಹ ವ್ಯಾಪಾರ ವಹಿವಾಟಿನ ಸಂಗತಿಗಳ ಬಗ್ಗೆ ಹೆಚ್ಚಿನ ಚಿಂತೆ ಇರುವುದಿಲ್ಲ. ನೆನಪಿಡಿ ಕೆಲವೇ ತಿಂಗಳುಗಳ ಹಿಂದೆ ಅದಾನಿ ವಿಶ್ವದ ಸಿರಿವಂತರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಂದಾಗಲೂ ಗ್ರಾಮೀಣ ಭಾರತದ ಜನ ತಲೆ ಕೆಡಿಸಿಕೊಳ್ಳಲಿಲ್ಲ, ಅದಾನಿಯ ವಿಚಾರ ಮುಂದಿಟ್ಟುಕೊಅಡು ಪ್ರಧಾನಿ ಮೋದಿಯವರ ಜನಪ್ರಿಯತೆಗೆ ಕಪ್ಪುಚುಕ್ಕೆ ಬಳಿಯುವುದು ಸದ್ಯಕ್ಕಂತೂ ಸಾಧ್ಯವಿಲ್ಲದ ಮಾತು.

ಎಲ್ಲ ರಾಜ್ಯಗಳ ಸರಕಾರಗಳೂ ಅದಾನಿಯನ್ನು ಕೆಂಪುಹಾಸಿನ ಮೇಲೆ ಸ್ವಾಗತಿಸಿ ತಮ್ಮ ತಮ್ಮ ರಾಜ್ಯಕ್ಕೆ ಬಂದು ಬಂಡವಾಳ ಹೂಡುವಂತೆ
ಕರೆಯುತ್ತಿರುವಾಗ ಬಿಜೆಪಿ ಒಂದನ್ನೇ ದೂಷಿಸುವುದಾದರೂ ಹೇಗೆ? ಇದು ಮಧ್ಯಮವರ್ಗದ ಜನರ ಅಂಬೋಣ. ಬೋಫೋರ್ಸ್ ವಿಚಾರದದರೆ ರಾಜೀವ ಗಾಂಧಿಯ ಸಮೀಪವಲಯದಲ್ಲಿದ್ದ ಇಟಲಿಯ ಒಟ್ಟಾವಿಯೋ ಕ್ವಟ್ರೋಕಿಯನ್ನು ಮುಂದಿಟ್ಟು ವಿ.ಪಿ.ಸಿಂಗ್ ಆರೋಪಗಳ ಸುರಿಮಳೆಗೈದಿದ್ದರು. ಆದರೆ ಇಲ್ಲಿ ಅದಾನಿಯ ವಿಚಾರದಲ್ಲಿ ಹಾಗಿಲ್ಲ. ಅವರು ಮೂಲಭೂತ ಸೌಕರ್ಯ ಕ್ಷೇತ್ರದಲ್ಲಿ ದೊಡ್ಡ ಹೂಡಿಕೆ ಮಾಡಿ ದೇಶೀಯವಾಗಿ ಬೆಳೆದು ನಿಂತ
ಉದ್ಯಮಪತಿ. ಆದ್ದರಿಂದ ರಾಜಕೀಯವಾಗಿ ಈ ವಿಚಾರ ಯಾವ ಪರಿಣಾಮವನ್ನೂ ಬೀರಲಾರದು.

ಅದಾನಿ ವಿಚಾರವಾಗಿ ಕಾಂಗ್ರೆಸ್ ನಾಯಕತ್ವ ಪ್ರತಿದಿನ ಮೂರು ಪ್ರಶ್ನೆಗಳನ್ನು ಕೇಳುತ್ತಲೇ ಇದೆ. ಬೋಫೋರ್ಸ್ ಕುರಿತಾಗಿ ದಿವಂಗತ ರಾಮ್ ಜೇಠ್ಮಲಾನಿ ಪ್ರತಿದಿನ ರಾಜೀವ್ ಗಾಂಧಿ ಸರಕಾರಕ್ಕೆ ಕೇಳುತ್ತಿದ್ದ ಹತ್ತು ಪ್ರಶ್ನೆಗಳನ್ನು ನೆನಪಿಸಿಕೊಳ್ಳಿ. ಅದಾನಿಯ ಸಾಮ್ರಾಜ್ಯ ದೇಶದ 22 ರಾಜ್ಯಗಳಲ್ಲಿ ವಿಸ್ತರಿಸಿದೆ. ಎಲ್ಲ ರಾಜಕೀಯ ಪಕ್ಷಗಳಲ್ಲೂ ಅದಾನಿಯ ಮಿತ್ರರಿಧಿರೆ ಎಂಬುದು ಬಹುಮುಖ್ಯವಾಗುತ್ತದೆ.

 
Read E-Paper click here