Sunday, 15th December 2024

ಮೋದಿ ವಿರುದ್ದ ಸಂಚು ಮಾಡುವಷ್ಟು ದ್ವೇಷವೇಕೆ ?

Narendra Modi

ಅಭಿವ್ಯಕ್ತಿ

ವಿನಯ್‌ ಖಾನ್

vinaykhan078@gmail.com

ಒಬ್ಬ ಮನುಷ್ಯನನ್ನು ಕೊಂದರೆ ಅಲ್ಲಿಗೆ ಎಲ್ಲ ಮುಗಿಯುತ್ತದೆಯೇ? ಇಲ್ಲಿ ಸಾಮಾನ್ಯ ಬೇರೆ, ಜನ ನಾಯಕ ಬೇರೆ. ಸಾಮಾನ್ಯನನ್ನು ಕೊಂದರೆ ಅದು ಪೊಲೀಸ್ ಠಾಣೆಯ ಮೊಕದ್ದಮೆಯ ಮೂಲಕ ಕೊನೆಗೊಳ್ಳಬಹುದು. ಅದೇ ಒಬ್ಬ ಜನಪ್ರಿಯ ನಾಯಕನನ್ನು ಕೊಂದರೆ ಏನಾಗಬಹುದು ಯೋಚಿಸಿ!

ಮಹಾತ್ಮ ಗಾಂಧಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹತ್ಯೆಗೆ ಇಂದಿಗೂ ಕಣ್ಣೀರು ಸುರಿಸುತ್ತಿರುವ ಕಾಂಗ್ರೆಸ್‌ನವರಿಗೆ ಮೋದಿಯವರದು ಜೀವ ಅನ್ನಿಸ ಲಿಲ್ಲವೇ? ಅಫ್ಜಲ್ ಗುರು, ಬಿನ್ ಲಾಡೆನ್‌ನನ್ನು ಇನ್ನೂ ಸ್ಮರಿಸುತ್ತಿರುವ ಮಾನವಹಕು ಪ್ರತಿಪಾದಕರಿಗೆ ಮೋದಿ ಉಳಿಸಲು ವಿಚಾರವೇ ಬರಲಿಲ್ಲವೇ? ಗೌರಿ, ಎಂ.ಎಂ ಕಲಬುರ್ಗಿಯವರ ಹತ್ಯೆ ನೋಡಿದ ಮೇಲೂ ಪ್ರಗತಿಪರರಿಗೆ ಕರುಣೆಯೇ ಬರಲಿಲ್ಲವೇ? ಸೈದ್ಧಾಂತಿಕ ವಾಗಿ ಯಾರನ್ನೇ ವಿರೋಧಿಸಬಹುದು, ಆದರೇ ಅದನ್ನೂ ದಾಟಿ ಸಾವನ್ನೇ ನಿರೀಕ್ಷಿಸುವುದೆಂದರೆ? ಎಲ್ಲದಕ್ಕೂ ಸಾವೇ ಪರಿಹಾರವೇ? ಹಾಗಾದರೆ ಭಗತ್ ಸಿಂಗ್, ರಾಜಗುರು ಸುಖದೇವ್, ಸಂಗೊಳ್ಳಿ ರಾಯಣ್ಣ, ವೀರ್ ಸಾವರ್ಕರ್, ವಿವೇಕಾನಂದ ಇವರೆಲ್ಲ ಇಂದು ನಮ್ಮೊಟ್ಟಿಗಿಲ್ಲ; ನಿಜ. ಆದರೆ ಅವರ ನಿಲುವು- ಪ್ರತಿಪಾದನೆಗಳು, ವಿಚಾರಗಳು ನಮ್ಮೊಂದಿಗೆ ಇಒಮದಿಗೂ ಉಳಿದಿವೆಯಲ್ಲವೇ? ಎಷ್ಟೂ ಜನರದ್ದೂ ಅಂತ ಸಾವಿಗೆ ಹೊಂಚು ಹಾಕುತ್ತೀರಿ? ಒಬ್ಬ ವ್ಯಕ್ತಿಯನ್ನು ಎಷ್ಟರಮಟ್ಟಿಗೆ ಗುರಿಯಾಗಿಸುತ್ತೀರಿ? ನರೇಂದ್ರ ಮೋದಿ ಒಬ್ಬರ ಸಾವಿನಿಂದ ಎಲ್ಲವೂ ಕೊನೆಯಾಗಿ ಬಿಡುತ್ತದೆಂದು ಭ್ರಮಿಸುವುದು ಮೂರ್ಖತನ ಎನಿಸುವುದಿಲ್ಲವೇ? ಸೈದ್ಧಾಂತಿಕ ಭಿನ್ನಮತ ಬೇರೆ, ರಾಜಕೀಯ ವಿರೋಧಗಳೇ ಬೇರೆ, ವ್ಯಕ್ತಿಗತ ದ್ವೇಶವೇ ಬೇರೆ ಎಂಬುದನ್ನು ಅರ್ಥಮಾಡಿ ಕೊಳ್ಳಬೇಕಿದೆ.

2013ರಲ್ಲಿ ಆಗಿನ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್‌ರನ್ನು ಪಾಕಿಸ್ತಾದ ಆಗಿನ ಪ್ರಧಾನಿ ನವಾಬ್ ಶರೀಫ್ ‘ಬೆಹರಾತಿ ಔರತ್ (ಉತ್ತಮ ಮಹಿಳೆ)’ ಅಂದಾಗ ಇದೇ ನರೇಂದ್ರ ಮೋದಿ ಹಿಂದೆಮುಂದೆ ನೋಡದೇ ಶರೀಫ್ನ ನ್ನು ವಿರೋಧಿಸಿದ್ದರು. ಆಗಲೂ ಮೋದಿ ರಾಜಕೀಯವಾಗಿ ಕಾಂಗ್ರೆಸ್ ವಿರೋಧಿಯೇ ಆಗಿದ್ದರು ಎಂಬುದು ಗಮನಾರ್ಹ. ಸೈದ್ಧಾಂತಿಕವಾಗಿ, ಪಕ್ಷಕ್ಕಾಗಿ, ಜನರಿಗಾಗಿ ಯಾರನ್ನೂ ವಿರೋಧಿಸಬಹುದು. ಆದರೆ ಇಲ್ಲಾಗು ತ್ತಿರುವುದು ಏನು? ನಮ್ಮದೇ ದೇಶದ ಪ್ರಧಾನ ಮಂತ್ರಿಗೆ ಮೇಲಿಂದ ಮೇಲೆ ಕೊಲೆ ಬೆದರಿಕೆ ಬರುತ್ತಿದೆ ಎಂದರೆ ಅದು ದೇಶದ ಭದ್ರತೆಯ ವಿಚಾರ.

ಯಾಕಾಗಿ ಹೀಗೆಲ್ಲ? ಅವರು ದೇಶಕ್ಕಾಗಿ ಮಾಡುವ ಕೆಲಸ ಸಹಿಸಲಿಕ್ಕಾಗುತ್ತಿಲ್ಲವೇ? ಅವರ ಜನಪ್ರಿಯತೆ ನೋಡಲಿಕ್ಕಾಗುತ್ತಿಲ್ಲವೇ? ಅವರ ಸ್ಪಷ್ಟ ನಿಲುವುಗಳನ್ನು ಅರಗಿಸಿಕೊಳ್ಳಲಾಗುವುದಿಲ್ಲವೇ? ಭ್ರಷ್ಟಾಚಾರಕ್ಕೆ ಎಡೆಗೊಡದ ನಿಲುವುಗಳು ಸಹ್ಯವಲ್ಲವೇ? ಪ್ರಧಾನಿಯ ಸಾವನ್ನೂ ಬಯಸುವ ಹಿಂದಿನ ಬಲವಾದ ಕಾರಣ ಗಳೇನು? ಇವೆಲ್ಲ ಏಕೆ? ಮತ್ತೀಗ, ಗಣರಾಜ್ಯೋತ್ಸವದ ಪರೇಡ್ ಸಂದರ್ಭ ದಲ್ಲೂ ಮೋದಿ ಜೀವಕ್ಕೆ ಬೆದರಿಕೆ ಬಂದಿದೆ. ಭಯೋತ್ಪಾದಕರ ದಾಳಿ ಸಾಧ್ಯತೆಯ ಬಗ್ಗೆ ಗುಪ್ತಚರ ಇಲಾಖೆಯಿಂದ ದೆಹಲಿ ಪೊಲೀಸರಿಗೆ ಮಾಹಿತಿ ಬಂದಿದೆ. ಇದರ ಬೆನ್ನಲ್ಲೇ ಯುಎಇನಲ್ಲಿ ನಡೆದ ಡ್ರೋನ್ ದಾಳಿಯಲ್ಲಿ ಇಬ್ಬರು ಭಾರತೀಯರು ಹತರಾಗಿದ್ದಾರೆ.

ಪಂಜಾಬಿನಲ್ಲಿ, ಗಾಜಿಪುರದಲ್ಲಿ ಆದ ಐಇಡಿ ಸ್ಫೋಗಳು ಸಹ ಇದಕ್ಕೆ ಪುಷ್ಟಿ ನೀಡುತ್ತಿವೆ. ಮೋದಿ ಅಂದರೆ ಯಾವತ್ತು ಹೂವಿನ ಹಾಸಿಗೆ ಮೇಲೆ ನಡೆದು ಬಂದವ ರಲ್ಲ. 2013ರ ಪಟನಾದಲ್ಲಿ ನಡೆತಿದ್ದ ಹುಂಕಾರ್ ರ‍್ಯಾಲಿಯಲ್ಲಿ ಸಂಭವಿಸಿದ ಸರಣಿ ಬಾಂಬ್ ಸೋಟದಲ್ಲಿ ಆರುಜನ ಹತರಾಗಿದ್ದರು. 9 ಬಾಂಬ್‌ಗಳನ್ನು ಇರಿಸಿ ಜನರಲ್ಲಿ ಆತಂಕ ಸೃಷ್ಟಿಸಿ ದೇಶಾದ್ಯಂತ ಗುಲ್ಲೆಬ್ಬಿಸಿದ್ದ ಸಿಮಿ (ಸ್ಟುಡೆಂಟ್ ಇಸ್ಲಾಮಿಕ್ ಮೂಮೆಂಟ್ ಆಫ್ ಇಂಡಿಯಾ)ಯ ಭಯೋತ್ಪಾದಕರನ್ನು ಮರೆಯು ವುದು ಹೇಗೆ? ಹಾಗೆಯೇ ಬಿಜೆಪಿ ಆಡಳಿತಕ್ಕೆ ಬಂದ ಹೊಸತರಲ್ಲಿ ಪಂ.ದೀನ್‌ದಯಾಳ ಉಪಾಧ್ಯಾಯರು ಹುಟ್ಟಿದ ಊರಲ್ಲಿ ನಡೆಯುತ್ತಿದ್ದ ರ‍್ಯಾಲಿಯಲ್ಲಿ ಬಂಬ್ ಸ್ಫೋಟಿ ಸುವ ಬೆದರಿಕೆ ಬಂದಿತು.

2017ರ ಫೆಬ್ರುವರಿಯಲ್ಲಿ ಯುಪಿ ಚುನಾವಣೆಯ ರ‍್ಯಾಲಿಯಲ್ಲಿ ರಾಕೆಟ್ ಲಾಂಚರ್‌ಗಳನ್ನು ಉಪಯೋಗಿ, ಮೋದಿಯನ್ನು ಉಡಾಯಿಸಲು ಹೊಂಚುಹಾಕಿದ್ದು ಸಣ್ಣ ವಿಚಾರವೇ? ಕೊಚ್ಚಿಗೆ ಹೊಸ ಮೆಟ್ರೋ ಉದ್ಘಾಟಗೆ ಹೋದಾಗಲೂ ಮೋದಿಯವರನ್ನು ಕೊಲ್ಲುವ ಸಂಚನ್ನು ರೂಪಿಸಲಾಗಿತ್ತು. ಉದಾಹರಣೆಗಳು ಸಾಕಷ್ಟಿವೆ. ನಮ್ಮ ಪ್ರಧಾನಿಯವರ ಜೀವಕ್ಕೆ ಆರಂಭದಿಂದಲೂ ಬೆದರಿಕೆ ಇದ್ದೇ ಇದೆ. ಇನ್ನೂ ಅನೇಕ ಸಲ ಮೋದಿಯವರನ್ನು ಕೊಲ್ಲಲು ಯತ್ನಿಸುತ್ತಲೇ ಬರಲಾಗುತ್ತಿದೆ. ಇದೊಂದೇ ಉದ್ದೇಶಕ್ಕೆ ದೇಶ, ವಿದೇಶಗಳಿಂದ ದೇಣಿಗೆಗಳು ಬರುತ್ತಿವೆ. ಸಂಚುಗಾರರನ್ನು ತರಬೇತುಗೊಳಿಸಲಾಗುತ್ತಿದೆ.

ಶಸ್ತ್ರಾಸ್ತ್ರ ತಯಾರಿಕೆ ಸದ್ದಿಲ್ಲದೇ ನಡೆಯುತ್ತಿದೆ. ಇವೆಲ್ಲವೂ ಸಣ್ಣ ವಿಚಾರವೇನಲ್ಲ. ಸಣ್ಣ ಪುಟ್ಟ ಮಕ್ಕಳು ಬಾಯಲ್ಲಿ ಸಹ ಮೋದಿ ವಿರುದ್ಧ ಘೋಷಣೆಗಳು ಕೇಳಿ ಬರುತ್ತಿವೆ ಎಂದರೆ ಪರಿಸ್ಥಿತಿಯನ್ನು ಹೇಗೆ ವಿಶ್ಲೇಷಿಸಬಹುದು? ಮೊನ್ನೆ, ಹೆಲಿಕಾಪ್ಟರ್ ಅಪಘಾತದಲ್ಲಿ ಬಿಪಿನ್ ರಾವತ್ ಹತರಾದಾಗ ಕೊಟ್ಯಂತರ ಮಂದಿ ದುಃಖ, ಮರುಕ ಪಟ್ಟಿದ್ದರು. ಆದರೆ ಭಾರತೀಯರೆನಿಸಿಕೊಂಡಿರುವವರೇ ಕೆಲ ಬುದ್ಧಿಜೀವಿಗಳು, ಪತ್ರಕರ್ತರನೇಕರು ರಾವತ್ ಸಾವನ್ನು ಸಂಭ್ರಮಿಸಿದ್ದರು. ಅಂಥವರು ಭಾರತದಲ್ಲಿರುವುದು ಯಾವ ಮಹಾತ್ಕಾರ್ಯಕ್ಕಾಗಿ ಎಂಬುದು ಗೊತ್ತಾಗುತ್ತಿಲ್ಲ. ಹೋಗಬಹುದಿತ್ತಲ್ಲವೇ ತಮಗೆ ಬೇಕಾದ್ದಲ್ಲಿ; ಮಾಡಬಹುದಿತ್ತಲ್ಲವೇ ತಮಗೆ ಬೇಕಾದ್ದನ್ನು.

ಅಷ್ಟಕ್ಕೂ ಮೋದಿಯವರನ್ನು ಕಂಡರೆ ಏಕೆ ಅಷ್ಟೊಂದು ಕೋಪ ಅವರು ಬಲಪಂಥೀಯರೆನಿಸಿಕೊಂಡಿದ್ದಕ್ಕಾ? ಆರ್ ಎಸ್‌ಎಸ್ ಹಿನ್ನೆಲೆಯವರಂಥಾ? ಯಾರ ಮುಲಾಜಿಗೆ ಒಳಪಡದೆ, ದೇಶಕ್ಕೋಸ್ಕರ ನಿಲ್ಲುತ್ತಾರೆ ಅಂತ? ಭಯೋತ್ಪಾದನೆಗೆ ಕಡಿವಾಣ ಹಾಕಿ, ದೇಶದ ರಕ್ಷಣೆ ವಿಚಾರದಲ್ಲಿ ಯಾವುದಕ್ಕೂ ರಾಜೀ ಮಾಡಿ ಕೊಳ್ಳದೆ ಸೇನೆಗೆ ಒಳ್ಳೆಯ ಸವಲತ್ತು ಕೊಟ್ಟಿದ್ದಕ್ಕಾ? ಪಾಕಿಸ್ತಾನದ ಹೆದರಿಕೆಗೆ ಬಗ್ಗಲಿಲ್ಲ ಅಂತಾ? ಅಥವಾ ಚೀನಾಗೆ ಸಡ್ಡು ಹೊಡೆಯುವ ರೀತಿಯಲ್ಲಿ ವಿದೇಶಾಂಗ ವ್ಯವಹಾರಕ್ಕೆ ದೇಶವನ್ನು ಅನುವು ಮಾಡಿದ್ದಕ್ಕಾ? ವಿಶ್ವದ ನಂ.೧ ನಾಯಕನಾಗಿದ್ದಕ್ಕಾ? ಬರೀ ಮಹಾತ್ಮ ಗಾಂಧಿ, ನೆಹರೂ, ಇಂದಿರಾಳ  ಅಮಲಿನಲ್ಲಿದ್ದ ಭಾರತೀ ಯರಿಗೆ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿದ್ದಕ್ಕ? ಇನ್ಯಾಕೆ ಮೋದಿಯನ್ನು ಕಂಡರೆ ಅಷ್ಟೊಂದು ದ್ವೇಷ..? ಹೌದು, ಈ ದ್ವೇಷ ಎಲ್ಲಿಯವರೆಗೂ ಇರುತ್ತೆ? ಮೋದಿಯನ್ನು ಕೊಲ್ಲುವವರೆಗೂ? ನೆನಪಿಡಿ, ಮೋದಿ ನಂತರ ಬಿಜೆಪಿಯಾಗಲೀ, ಹಿಂದುತ್ವವಾಗಲೀ ಕೊನೆಯಾಗುವುದೇ ಇಲ್ಲ. ಬದಲಿಗೆ ಜನರಿಗೆ ಇನ್ನಷ್ಟು ಕೆಚ್ಚು ಹೆಚ್ಚುತ್ತದೆ.

ಹೊಸ ಸಿಂಪಥಿ ಹುಟ್ಟುತ್ತದೆ. ಮತ್ತೆ ಯಾರೋ ಮೋದಿಗಿಂತ ಕಟ್ಟರ್ ಹಿಂದುತ್ವವಾದಿ ಪ್ರಧಾನಿಯಾಗಬಹುದು. ಆಗ ಅವರು ಸುಮ್ಮನಿರುತ್ತಾರೆ, ಅಥವಾ ಬೆದರಿ ಉಳಿದವರು ತಣ್ಣಗಾಗಿ ಬಿಡುತ್ತಾರೆ ಎಂದು ಭಾವಿಸುವುದು ಮೂರ್ಖತನದ ಪರಮಾವಧಿ. ಒಬ್ಬ ಮನುಷ್ಯನನ್ನು ಕೊಂದರೆ ಅಲ್ಲಿಗೆ ಎಲ್ಲ ಮುಗಿಯುತ್ತದೆಯೇ? ಇಲ್ಲಿ ಒಬ್ಬ ಸಾಮಾನ್ಯ ಬೇರೆ, ಒಬ್ಬ ಜನ ನಾಯಕ ಬೇರೆ. ಒಬ್ಬ ಸಾಮಾನ್ಯನನ್ನು ಕೊಂದರೆ ಅದು ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸುವ ಮೂಲಕ ಕೊನೆ ಗೊಳ್ಳಬಹುದು.

ಅದೇ ಒಬ್ಬ ಜನಪ್ರಿಯ ನಾಯಕ, ರಾಜಕೀಯ ನಾಯಕನನ್ನು ಕೊಂದರೆ ಏನಾಗಬಹುದು ಯೋಚಿಸಿ! ಇಡೀ ಪ್ರಪಂಚಕ್ಕೆ ಶಾಂತಿ, ಅಹಿಂಸೆಯ ಪಾಠ ಮಾಡುತ್ತಿದ್ದ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧೀಜಿಯನ್ನು ಕೊಂದಾಗ ಅದೇ ಶಾಂತಿಪ್ರೀಯ, ಅಹಿಂಸಾವಾದಿ ಕಾಂಗ್ರೆಸಿನ ಕಾರ್ಯಕರ್ತರು ಗಾಂಧಿ ಕೊಂದ ಆರೋಪಿ ಗೊಡ್ಸೆ ಪ್ರತಿನಿಧಿಸುವ ಮಹಾರಾಷ್ಟ್ರದ ಸಾವಿರಾರು ಚಿತ್ಪಾವನ ಬ್ರಾಹ್ಮಣರನ್ನು ಕೊಲ್ಲಲಿಲ್ಲವೇ? ಹಾಗೆಯೇ, ಇಂದಿರಾಗಾಂಧಿಯನ್ನು ಸಿಖ್‌ರು ಕೊಂದ ಕಾರಣಕ್ಕಾಗಿ 1984ರಲ್ಲಿ ಸಿಖ್ ವಿರೋಧಿ ಗಲಭೆಗಳಾಗಿ ದೇಶಾದ್ಯಾಂತ 8000-14000 ಸಿಖ್‌ರ ಕಗ್ಗೊಲೆಗಳಾಗಲಿಲ್ಲವೇ? ಅದೇ ಒಬ್ಬ ಭಗತ್ ಸಿಂಗ್, ರಾಜಗುರು, ಸುಖದೇವ್ ರನ್ನು ಬ್ರಿಟಿಷರು ಗಲ್ಲಿಗೇರಿಸಿದ ಮೇಲೆ ಅವರಷ್ಟೇ ತೀವ್ರವಾಗಿ ದೇಶಕ್ಕಾಗಿ ರಕ್ತಕೊಡುವ ಸಂಕಲ್ಪ ತೊಟ್ಟು ಕೊಟ್ಯಂತರ ಯುವ ಸಮು ದಾಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ದಾಪುಗಾಲು ಹಾಕಲಿಲ್ಲವೇ? ಸಂಗೊಳ್ಳಿ ರಾಯಣ್ಣರನ್ನು ಕೊಂದಾಗ ಅಲ್ಲಿಯ ಜನ ಬ್ರಿಟಿಷರನ್ನು ನೋಡಿ ಹೆದರಿದರೇ? ಇಂಥ ದ್ದೆಲ್ಲವನ್ನು ನೋಡಿಯೇ ಭಗತ್ ಸಿಂಗ್ ಹೇಳಿದ್ದು- ‘ಒಬ್ಬ ಮನುಷ್ಯನನ್ನು ಕೊಲ್ಲಬಹುದು ವಿಚಾರಗಳನ್ನು ಅಲ್ಲ’.

ನಮ್ಮಲ್ಲಿ ಯಾವುದೋ ಪುಡಿ ರೌಡಿಗಳು ಗುಂಪು ಘರ್ಷಣೆ ಮಾಡಿಕೊಂಡು, ಹೊಡೆದಾಡಿಕೊಂಡು, ಯಾವುದೋ ಗುಂಪಿನವನ್ನು ಕೊಂದರೇ ಉಳಿದವರು ಸುಮ್ಮನೆ ಇರುವುದಿಲ್ಲ. ಅಂಥದ್ದರಲ್ಲಿ ಒಬ್ಬ ಪ್ರಧಾನಿಯನ್ನು ಹತ್ಯೆಗೈದರೆ ಜನ ಸುಮ್ಮನುಳಿದಾರೇ? ನಾವು ಅರಿಯಲೇಬೇಕಿದೆ. ಎಲ್ಲದಕ್ಕೂ ಅಂತ್ಯ ಇರುತ್ತೆ;
ಆದರೇ ದ್ವೇಷಕ್ಕಿಲ್ಲ.