Thursday, 12th December 2024

ಹೇಳಿದ್ದಕ್ಕೆಲ್ಲ ಒಪ್ಪಿಕೊಳ್ಳೋದು- ಅಗ್ರೀಕಲ್ಚರ್‌

ತುಂಟರಗಾಳಿ

ಸಿನಿಗನ್ನಡ

ಸಾಮಾನ್ಯವಾಗಿ ನಮ್ಮ ಸಮಾಜದಲ್ಲಿ ಕೇಳಿಬರುವ ಮಾತಿನಂತೆ, ಸಿನಿಮಾ ಸಮಾಜದಲ್ಲೂ ಕೇಳಿ ಬರುವ ಮಾತು ಅಂದ್ರೆ ಇಲ್ಲಿ ಎಲ್ಲವೂ ಪುರುಷ ಪ್ರಧಾನ ಅನ್ನೋದು. ಅದು ತಕ್ಕ ಮಟ್ಟಿಗೆ ನಿಜ ಕೂಡ. ಆದ್ರೆ ಷರತ್ತು ಗಳು ಅನ್ವಯಿಸುತ್ತವೆ ಅನ್ನೋ ಮಾತನ್ನು ಈ ಸಂಪ್ರದಾಯದೊಂದಿಗೆ ಸೇರಿಸಲೇ ಬೇಕಾಗುತ್ತದೆ. ಅದಕ್ಕೂ ಕಾರಣಗಳು ಹಲವು. ಇಲ್ಲಿ ನಾಯಕರಿಗೆ ಸಿಕ್ಕಷ್ಟು ಸಂಭಾವನೆ ನಾಯಕಿಯರಿಗೆ ಸಿಗೊಲ್ಲ ಅನ್ನೋ ಮಾತಿದೆ. ಅದು ನಿಜ ಕೂಡಾ. ಅದಕ್ಕೆ ತಕ್ಕಂತೆ ಅವರಿಗೆ ಸಿಗೋ ಮರ್ಯಾದೆ ಕೂಡಾ ಇವರಿಗೆ ಸಿಗಲ್ಲ. ಆದರೆ ಕೆಲವೊಮ್ಮ ಇದು ನಾಯಕಿಯರಿಗೆ ವರದಾನ ಆಗಿರುವ ಉದಾಹರಣೆಗಳೂ ಉಂಟು.

ಅದಕ್ಕೆ ಇಂಬು ಕೊಡುವಂತೆ ಇಲ್ಲಿ ಒಬ್ಬ ಸ್ಟಾರ್ ನಟನ ಸಿನಿಮಾದಲ್ಲಿ ಹೊಸ ನಟಿಯೊಬ್ಬಳಿಗೆ ಸುಲಭವಾಗಿ ಅವಕಾಶ ಸಿಗುತ್ತದೆ. ಆದರೆ ಅದೇ ಒಬ್ಬ ಸ್ಟಾರ್ ಹೀರೋಯಿನ್ ಜೊತೆ ಹೊಸ ಹುಡುಗನಿಗೆ ಹೀರೋ ಆಗೋ ಅವಕಾಶ ಸಿಗುತ್ತಾ ಅನ್ನೋದು ಪ್ರಶ್ನೆ. ಸಿಕ್ಕರೂ ನಾಯಕನ ಪಾತ್ರಕ್ಕೆ ಸ್ಕೋಪ್ ಇರಲ್ಲ, ಅದನ್ನು ಸ್ಟಾರ್ ನಟರು ಮಾಡಲ್ಲ ಅನ್ನೋ ಕಾರಣಕ್ಕೆ ಸಿಗಬಹುದು ಅಥವಾ ಯಾರೋ ದೊಡ್ಡ ಹೆಸರಿರುವ ಫ್ಯಾಮಿಲಿಯ ಹೀರೋಗೆ ಸಿಗಬಹುದು ಅಷ್ಟೇ. ಅಲ್ಲದೆ, ಒಂದು ಸಿನಿಮಾ ಸೋತರೆ ನಿರ್ಮಾಪಕರು ಅದರ ಸೋಲನ್ನು ನಾಯಕಿಯ ತಲೆಗೆ ಕಟ್ಟೋದಿಲ್ಲ. ಅದರಿಂದ ನಾಯಕಿಯ ಮುಂದಿನ ಸಿನಿಮಾ ಸಂಭಾವನೆ ಕೂಡಾ ತೀರಾ ಕಡಿಮೆ ಆಗೋದಿಲ್ಲ. ಆದರೆ ನಾಯಕನ ಪರಿಸ್ಥಿತಿ ಹಾಗಲ್ಲ.

ಹಿಂದಿನ ಸಿನಿಮಾ ಗೆದ್ರೆ ಹಬ್ಬ, ಸೋತ್ರೆ ಮುಂದೈತೆ ಮಾರಿ ಹಬ್ಬ ಅನ್ನೋ ಪರಿಸ್ಥಿತಿ. ನಾಯಕಿಗೆ ಸಂಭಾವನೆ ಕಮ್ಮಿ ಸಿಕ್ರೂ ಆಕೆ ಆ -ಪ್ ಸಿನಿಮಾದಲ್ಲಿ ನಟಿಸಿದ್ದಳು ಅನ್ನೋದು ಮೂರು ದಿನಕ್ಕೆ ಎಲ್ಲರಿಗೂ ಮರೆತುಹೋಗುತ್ತದೆ. ಆದೆ ನಾಯಕನಿಗೆ ಅದು ಜೀವನ ಪರ್ಯಂತ ಅವನೇ ಜವಾಬ್ದಾರಿ ಹೊತ್ತು ಕೊಳ್ಳಬೇಕಾದ -ಪ್ ಸಿನಿಮಾ. ಅದರಿಂದ ಅವನ ಇಡೀ ಕೆರಿಯರ್‌ನಲ್ಲಿ ಏರುಪೇರು ಆಗುತ್ತದೆ. ನಿರ್ಮಾಪಕ ಈ ಸ್ಟಾರ್ ನಟನನ್ನು ಮುಂದಿನ ಸಿನಿಮಾಗೆ ಕಡಿಮೆ ದುಡ್ಡಿಗೆ ಕಾಲ್ ಶೀಟ್ ಕೊಡು ಅಂತ ಕೇಳ್ತಾನೆ. ಆದರೆ ಅಪ್ಪಿ ತಪ್ಪಿ ಈ ಮಾತನ್ನ ಈತ ನಾಯಕಿಗೆ ಕೇಳೋದಿಲ್ಲ.

ಬಾಕ್ಸ್ ಆಫೀಸ್‌ನಲ್ಲಿ ಇಂಥ ನಟನ -ಪ್ ಸಿನಿಮಾ ಅಂತಲೇ ಅದು ದಾಖಲಾಗುತ್ತದೆ. ಇಷ್ಟೆ ಇರುವಾಗ ಸಿನಿಮಾರಂಗವನ್ನು ಪುರುಷ ಪ್ರಧಾನ ಅನ್ನೋದು ಸರಿನಾ? ಹೋಗ್ಲಿ ಬಿಡಿ.

ಲೂಸ್ ಟಾಕ್ – ಯೋಗರಾಜ್ ಭಟ್

ಏನ್ ಸಾರ್, ನಿಮ್ಮ ಗರಡಿ ಸಿನಿಮಾದಲ್ಲಿ ನಿಮ್ಮ ಸ್ಟೈಲ್ ಇಲ್ಲ ಅಂತ ಜನ ಮಾತಾಡ್ತಾ ಇದ್ದಾರೆ ?

– ಅದು ಸಸ್ಪೆ ಮೂವೀ ಕಣ್ರೀ. ಜನ ಸರಿಯಾಗಿ ನೋಡ್ತಿಲ್ಲ. ನಾನು ಎಲ್ಲಿದ್ದೀನಿ ಅಂತ ಯಾರಿಗೂ ಗೆಸ್ ಮಾಡೋಕೇ ಆಗಲ್ಲ. ಆ ಲೆಕ್ಕದಲ್ಲಿ ಫುಲ್ ಸಸ್ಪೆ ಮೂವಿ ಅದು.

ಓ ಹಂಗೆ, ಸರಿ, ಆದ್ರೆ ನಿರ್ಮಾಪಕ ಬಿಸಿ ಪಾಟೀಲ್ ಅವರ ಅಭಿನಯ ಅಷ್ಟೇನೂ ಚೆನ್ನಾಗಿಲ್ವಂತೆ? 
– ಅವ್ರ ತಾವು ನಿರ್ಮಾಪಕ ಅನ್ನೋದನ್ನು ಪ್ರೂವ್ ಮಾಡಿದ್ದಾರೆ ಅಷ್ಟೇ.

ಆದ್ರೂ, ಇದು ಭಟ್ರ ಸಿನಿಮಾ ಅಂತ ತುಂಬಾ ಆಸೆ ಇಟ್ಕೊಂಡು ಕತ್ಲಲ್ಲಿ ಗರಡೀಗೆ ಹೋದವರಿಗೆ ಜಾಮೂನು ಅಷ್ಟೇ ಅ, ಹಲ್ವಾಕೂಡ ತಿನ್ನಿಸೋದು ಸರಿನಾ? 
– ಜರಡಿ ಹಿಡ್ಕೊಂಡು ಎಷ್ಟೇ ಅಡಿಸಿದ್ರೂ ಭಟ್ಟರ ಟಾನಿಕ್ ಬಾಟ್ಲು ಈ ಗರಡಿ ಅನ್ನೋ ಜೀವ್ನದಲ್ಲಿ ಕಾಣಿಸಲ್ಲ. ಹಾಗಂತ ಜರಡಿಯಲ್ಲಿ ಹಾಕಿ ಅಡಿಸಿದ
ಮೇಲೆ ಜಟ್ಟಿಗಳ ಸಿನಿಮಾದಲ್ಲಿ ಇರೋದೆ ಜೊಳ್ಳು ಅಂತಾನೂ ಅಲ್ಲ, ಒಂದಷ್ಟು ಗಟ್ಟಿ ಕಾಳೂ ಇದೆ, ಕಣ್ ಬಿಟ್ ನೋಡ್ರೀ

ಮತ್ತೆ, ದರ್ಶನ್ ಅವ್ರನ್ನ ಸಿನಿಮಾದಲ್ಲಿ ಹಾಕ್ಕೊಂಡಿದ್ದು ಯಾಕೆ?

– ಮೊದ್ಲು ಪ್ಲ್ಯಾನ್ ಇರಲಿಲ್ಲ. ಆದ್ರೆ, ನಮ್ ಸಿನಿಮಾ ಟ್ಯಾಗ್ ಲೈನ್ ಬಿ, ರೆಡಿ’ ಅಂತ. ಅದನ್ನ ನೋಡಿ, ಅವ್ರು ರಾಬರ್ಟ್ ಸ್ಟೈಲಲ್ಲಿ, ಬಾ, ಬಾ ನಾನ್ ರೆಡಿ’ ಅಂತ ಬಂದ್ರು ಅಷ್ಟೇ..

ಮತ್ತೆ, ನಿಮ್ಮ ಮುಂದಿನ ಸಿನಿಮಾದದ್ರೂ ನಮ್ಮ ರೆಗ್ಯುಲರ್ ಭಟ್ರನ್ನ ನಾವು ನೋಡಬಹುದೇ?

– ನಾನು ಚಿತ್ರರಂಗದಲ್ಲಿ ಕೋರಾ ಪಿಟ್ ಕಣ್ರೀ. ಗರಡಿ ಸಿನಿಮಾ ಮಾಡಿ,ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಅಂದ್ಕೊಂಡು ನನ್ನ ತಾಕತ್ತು
ತೋರಿಸೋ ಮುಂದಿನ ಸಿನಿಮಾನ ಬೇಗ ರಿಲೀಸ್ ಮಾಡಿ ತೊಡೆ, ರಟ್ಟೆ ಎರಡನ್ನೂ ತಟ್ತೀನಿ ನೋಡ್ತಾ ಇರಿ.

(ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್ಸ್

ಸೋಮು ಖೇಮು ಮಾತಾಡ್ತಾ ಕೂತಿದ್ರು, ಖೇಮು ಹೇಳ್ದ, ಸೋಮು ಯಾಕೋ ಲೈಫ್ ಬೇಜಾರಾಗ್ತಿದೆಕಣೋ, ದಿನಾ ಅದೇ ಕೆಲಸ, ಅದೇ ಹೆಂಡ್ತಿ ಮಕ್ಕಳು, ಅದೇ ರೊಟೀನ, ಏನಾದ್ರೂ ಹೊಸಾದ್ ಮಾಡಬೇಕು ಅನ್ನಿಸಿದೆ. ಕಣೋ, ಲೈಫಲ್ಲಿ ಥ್ರಿಲ್ ಬೇಕು, ಅದಕ್ಕೆ ಸೋಮು’ ಸರಿ, ನಾನು ನಿನ್ನ ಒಂದ್ ಹೊಸಾ ಜಾಗಕ್ಕೆ ಕರಕೊಂಡ ಹೋಗ್ತಿನಿ ಅಂದ. ಎಲ್ಲಿಗೆ?’ ಅಂತ ಬೇಕು ಕುತೂಹಲದಿಂದ ಕೇಳಿದ ಖೇಮು.

’ಈ ನಾಚ್ವಾಲೀಗಳ ಘರ್ ಅಂತ ಇರುತ್ತೆ ಗೊತ್ತಾ ನಿಂಗೆ?’ ಅಂದ ಸೋಮು. ಖೇಮುಗೆ ಅದೆಲ್ಲ ಗೊತ್ತಿರಲಿಲ್ಲ. ಸರಿ, ಸೋಮು ಹೇಳಿದ ಅಲ್ಲಿ ಚೆಂದದ ಹುಡುಗೀರು ಡ್ಯಾ ಮಾಡ್ತಾರೆ ಕಣೋ’ ಅಂದ. ’ಹೌದಾ? ಹಂಗಾದ್ರೆ, ಯಾವಾಗ ಹೋಗೋಣ?’ ಅಂತ ಖೇಮು ರೆಡಿ ಆಗಿಬಿಟ್ಟ. ಅವನ ಅವಸರ ನೋಡಿ ಭಲೇ ರಸಿಕ ಅಂದ್ಕೊಂಡ ಸೋಮು, ಖೇಮುವನ್ನು ಕರಕೊಂಡು ಮರುದಿನವೇ ಒಂದು ಫೇಮಸ್ ನಾಚ್ವಾಲೀ ಘರ್‌ಗೆ ಹೋದ. ಅಲ್ಲಿ ಇವರನ್ನು ಒಳಗೆ ಕರಕೊಂಡು ಹೋಗಿ, ಕಾರ್ಪೆಟ್ ಹಾಸಿ, ಕೈಗೊಂದು ಹೆಂಡದ ಬಟ್ಟಲು ಕೊಟ್ಟು ಕುಳಿತುಕೊಳ್ಳಲು ಹೇಳಿದರು.

ಸರಿ ಒಂದು ಚೆಂದದ ಹುಡುಗಿ ಬಂದು ’ಡ್ಯಾನ್ಸ ಮಾಡೋಕೆ ಶುರು ಮಾಡ್ಲಾ ಹುಜೂರ್?’ ಅಂತ ಕೇಳಿದಳು. ‘ಸರಿ ಶುರು ಹಚ್ಕ’ ಅಂದ ಖೇಮು, ಸುಮಾರು ಒಂದೂವರೆ ಗಂಟೆ ಸತತವಾಗಿ ಆ ಹುಡುಗಿ ಖೇಮು, ಸೋಮು ಮುಂದೆಡ್ಯಾ ಮಾಡಿದಳು. ಖೇಮುಗೆ ಸಖತ್ ಖುಷಿ ಆಯ್ತು. ಅದನ್ನು ಗಮನಿಸಿದ ಆ ಹುಡುಗಿ ಡ್ಯಾ ಮಾಡಿದ ನಂತರ ಮೆಲ್ಲನೆ ಬಳುಕುತ್ತಾ ಖೇಮುನ ಬಳಿ ಬಂದು, ‘ಹುಜೂರ್, ಇಷ್ಟು ಹೊತ್ತು ನಾನು ನಿಮ್ಮನ್ನ ಖುಷಿಪಡಿಸಿದೆ. ಈಗ ನೀವು ಈ ನಿಮ್ಮ ಸೇವಕಿಯನ್ನು ಖುಷಿಪಡಿಸಬೇಕು’ ಎಂದು ನಾಜೂಕಾಗಿ ಕೇಳಿದಳು. ಅದಕ್ಕೆ, ಖೇಮು ಹೇಳಿದ ’ಅಯ್ಯೋ, ಅದರನೈತೆ ಬಿಡು ತಂಗ್ಯಮ್ಮ, ಈವಾಗ್ ನೀನು ಕೂತ್ಕಂಡ್ ನೋಡು, ನಾನ್ ಡ್ಯಾನ್ಸ ಮಾಡ್ತೀನಿ’.

ಲೈನ್ ಮ್ಯಾನ್

ಬೇರೆಯವರು ಹೇಳಿದ್ದಕ್ಕೆಲ್ಲ ಸರಿ ಅಂತ ಒಪ್ಪಿಕೊಳ್ಳೋನದ್ದು.
– ಅಗ್ರೀ-ಕಲ್ಚರ್
ಇನ್ಮೇಲೆ ಸ್ಕ್ಯಾಂಡಲ್ ಗಳಲ್ಲಿ ಸಿಕ್ಕಾಕಿಕೊಳ್ಳೋ ದೊಡ್ಡ ಮನುಷ್ಯರೆಲ್ಲ ಆರಾಮಾಗಿ ಎಸ್ಕೇಪ್ ಆಗ್ತಾರೆ.
‘ಅಯ್ಯೋ ಅದು ನಾನಲ್ಲ, ಡೀಪ್ ಫೇಕ್ ಕಣ್ರೀ’

ಕಳೆದ ವಾರ ಅಫ್ಘಾನಿಸ್ತಾನದ ವಿರುದ್ಧ ಮ್ಯಾಕ್ಸ್ ವೆಲ್ ನಿಂತ್ಕೊಂಡ್ ಆಡಿದ ಅನ್ನೋಕಾಗಲ್ಲ.
-ಯಾಕಂದ್ರೆ ಪಾಪ ಸುಸ್ತಾಗಿ ಅವ್ನ್ ಕೈಲಿ ಕ್ರೀಸ್‌ನಲ್ಲಿ ನಿಂತ್ಕೊಳ್ಳೋಕೂ ಆಗ್ತಾ ಇರ್ಲಿಲ್ಲ.

ಹೆಂಗಸರಿಗೆ ಮಾತ್ರ ಗೊತ್ತಿರೋ, ಗಂಡಸರಿಗೆ ಗೊತ್ತಿಲ್ಲದೇ ಇರೋ, ಕಾಮನಬಿಲ್ಲಿನಲ್ಲಿ ಇಲ್ಲದೇ ಇರೋ ಬಣ್ಣಗಳು ಯಾವುವು?
– ಗೋಲ್ಡ್, ಸಿಲ್ವರ್

ಯಾವುದೇ ಸಮಸ್ಯೆ ಬರೋಕೆ ಮುಂಚೆ ಅದರ ಬಗ್ಗೆ ಜಾಸ್ತಿ ಆತಂಕಕ್ಕೆ ಒಳಗಾಗಬಾರದು.

– ಎಷ್ಟ್ ಸಲ, ಫುಲ್ ಅರ್ಜೆಂಟ್ ಆಗಿದೆ ಅಂದ್ಕೊಂಡು ಪ್ಯಾಂಟ್ ಬಿಚ್ಚಾಕಿ, ಓಡೋಗಿ, ಟಾಯ್ಲೆಟ್ ಸೀಟ್ ಮೇಲೆ ಕೂತ್ಕೊಂಡು, ಆಮೇಲೆ ಬರೀ ಗ್ಯಾಸ್ ಬಿಟ್ಟು ಎದ್ ಬಂದಿಲ್ಲ ನೀವು?

ಸಾರಿಗೆ ಗಾದೆ 
– ಬಾಯಿ ಬಿಟ್ಟು ಕೇಳದೇ ಇದ್ರೆ, ಬಿಎಂಟಿಸಿ ಡ್ರೈವರ್ರ‍ೂ ಸ್ಟಾಪ್ ಕೊಡಲ್ಲ

ಫ್ರೀ ಟೈಮ್ ಮಾತು
– ರಣಭೂಮಿಯಲ್ಲಿ ಯುದ್ಧ ನಿಲ್ಲಿಸಿದ್ರೆ- ಕದನ ವಿರಾಮ

– ವಿಧಾನಸೌಧದಲ್ಲಿ ಜಗಳ ನಿಲ್ಲಿಸಿದ್ರೆ – ಸದನ ವಿರಾಮ 

ಲೆಜೆಂಡರೀ ಡೆಂಟಿ ಜೀವನ ಚರಿತ್ರೆ
– ‘ದಂತ’ಕಥೆ

ಗಾಂಜಾ ಸೇದಿದ್ರೆ ಬೇಲಿಲ್ಲದ ಕೇಸ್ ಆಗುತ್ತೆ
– ಗಾಂಜಾ ಗಿರಾಕಿ- ನಾವ್ ಅದಕ್ಕೆ ‘ಸೊಪ್ಪು’ ಹಾಕಲ್ಲ

ಪೂರಿಗೆ ಬರೀ ಚಟ್ನಿಕೊಟ್ಟಾಗ ಆಗೋ ಬೇಸರದಲ್ಲಿ ಮೂಡುವ ಹಾಡು

– ಏನಾಗಲಿ ಮುಂದೆ ‘ಸಾಗು’ ನೀ

ಕುರಿ ಮಾಂಸ ತಿಂದು ಹೊಟ್ಟೆ ಬರಿಸಿಕೊಂಡವನು 
– ಲ್ಯಾಂಬೋದರ

ಮನುಷ್ಯನ ದೇಹದಲ್ಲಿ ಕೋಪ ಹುಟ್ಟಿಸುವ ಅಂಗ
– ‘ಪಿತ್ತ’ ಜನಕಾಂU