Wednesday, 18th September 2024

ಏರ್‌ಟೆಲ್‌ ನವ್ರು ಹೆಣ್ಣಿನ ಕಡೆಯವ್ರಾ ?

ತುಂಟರಗಾಳಿ

ಸಿನಿಗನ್ನಡ

ಸಿನಿಮಾಗಳ ಕಥೆ ಅಂದ್ರೆ ಅಲ್ಲಿ ವಿಸ್ತಾರವಾದ ಕಥೆ ಇರುತ್ತೆ. ಆದ್ರೆ ನಾಟ್ ಔಟ್ ಚಿತ್ರದ ಕಥೆಯನ್ನ ಒಂದು ಇನ್ಸಿಡೆಂಟ್ ಅಂದ್ರೆ ತಪ್ಪೇನಿಲ್ಲ. ಕರೋನಾ
ಕಾಲದಲ್ಲಿ ಹಣಕ್ಕಿಂತ ಜೀವ, ಮಾನವೀಯತೆ ಮುಖ್ಯ ಅಂತ ಒಬ್ಬ ವ್ಯಕ್ತಿಗೆ ರಿಯಲೈಸ್ ಆಗೋದು ಸಿನಿಮಾ ಕತೆ. ಹಾಗಾಗಿ ಇದನ್ನ ಸಿನಿಮಾದ ಮಿತಿ
ಅಂತಲೇ ಹೇಳಬಹುದು. ಸಿನಿಮಾದ ಹೆಸರು ನಾಟ್ ಔಟ್. ಹಾಗಾಗಿ ಎಲ್ಲರೂ ಔಟ್ ಆಗಿದ್ದಾನೆ, ಅಂದ್ರೆ ಅವನ ವಿಕೆಟ್ ಬಿತ್ತು ಅಂತ ಅಂದುಕೊಂಡಿದ್ದ ವ್ಯಕ್ತಿ ಯೊಬ್ಬ ಬಂದು ಮ್ಯಾಚ್ ಸಮ್ಮರಿ ಹೇಳೋದ್ರಿಂದ ಸಿನಿಮಾ ಶುರು ಆಗುತ್ತೆ.

ಹಾಗಾಗಿ ಸಿನಿಮಾದ ಆರಂಭದಲ್ಲಿ ಪವರ್ ಪ್ಲೇಯಲ್ಲಿ ನಿರ್ದೇಶಕರು ಕುತೂ ಹಲ ಹುಟ್ಟಿಸುತ್ತಾರೆ. ಆದ್ರೆ ಈ ಕತೆ ಇನ್ನಿಂಗ್ಸ್‌ ಬ್ರೇಕ್‌ವರೆಗೂ ಅಂದ್ರೆ ವಿರಾಮ
ದವರೆಗೂ ಮುಂದುವರೆಯಬಹುದು ಅಂದ್ಕೊಂಡ್ರೆ ತಪ್ಪಾಗುತ್ತೆ. ಡೆತ್ ಆಗಿರೋ ಈ ಮನುಷ್ಯನ ಕಥೆ ನಾ ಡೆತ್ ಓವಸ್ ವರೆಗೂ, ಅಂದ್ರೆ ಡೆಡ್ ಎಂಡ್ ವರೆಗೂ ಅಂದ್ರೆ ಕ್ಲೈಮ್ಯಾಕ್ಸ್ ವರೆಗೂ ಎಳೆದಿದ್ದಾರೆ ನಿರ್ದೇಶಕರು. ಬಡ್ಡಿಗೆ ದುಡ್ಡು ಕೊಟ್ಟು ಪ್ರಾಣ ಹಿಂಡೋದು, ಇನ್ನೊಬ್ಬರಿಗೆ ಸೇರಿದ ಜಾಗವನ್ನು ರೌಡಿಸಂ ಮಾಡಿ ತನ್ನದೇ ಹೋಮ್ ಗ್ರೌಂಡ್ ಅಂತ ಕಬಳಿಸೋದು ಇದು ಇಲ್ಲಿನ ಮುಖ್ಯ ಪಾತ್ರದ ಖಯಾಲಿ. ಆರಂಭದಲ್ಲಿ ಇದು ಒಂಥರಾ ಟಿ ೨೦ ಮ್ಯಾಚ್ ಅನ್ನಿಸಿದ್ರೂ ಚಿತ್ರದ ವೇಗ ಅದಕ್ಕೆ ಮ್ಯಾಚ್ ಆಗದೇ ಇರೋ ಕಾರಣ. ಒಂದೇ ವಿಷಯವನ್ನು ಕೊನೆವರೆಗೂ ಎಳೆದಿರೋ ಕಾರಣಕ್ಕೆ ಇದು ಟೆ ಮ್ಯಾಚ್ ಅನ್ನಿಸಿಕೊಂಡು ಪ್ರೇಕ್ಷಕರ ಪೇಷ ಅನ್ನು ಟೆಸ್ಟ್ ಮಾಡುತ್ತೆ.

ಚಿತ್ರಕಥೆಯಲ್ಲಿ ಮೊದಲೇ ಹೇಳಿದಂತೆ ಕತೆ ಅನ್ನೋ ಗ್ರೌಂಡ್ ತುಂಬಾ ಚಿಕ್ಕದಿದ್ರೂ ನಿರ್ದೇಶಕರ ಶಾಟ್ ಸೆಲೆಕ್ಷನ್, ಫೀಲ್ಡ್ ಪ್ಲೇಸ್ ಮೆಂಟ್ ವೀಕ್ ಆಗಿರೋದ್ರಿಂದ ಚೆನ್ನಾಗಿ ಸ್ಕೋರ್ ಮಾಡೋಕೆ ಆಗಿಲ್ಲ. ಕ್ಲೈಮ್ಯಾಕ್ಸ್ ವರೆಗೂ ಕಥೆಯನ್ನು ಚೇಸ್ ಮಾಡೋದು ಕೂಡಾ ಸರಿಯಾಗಿ ಆಗಿಲ್ಲ. ಹಾಗಾಗಿ ವೆಟ್ ಔಟ್ ಫೀಲ್ಡ್ ನಲ್ಲಿ ಫೀಲ್ಡಿಂಗ್ ಮಾಡೋ ಪ್ಲೇಯರ್ ಥರ ತಡ ವರಿಸಿದ್ದಾರೆ ನಿರ್ದೇಶಕರು.

ಅದಕ್ಕೆ ತೀರಾ ಡಿಫೆನ್ಸಿವ್ ಆದ ನಿರ್ದೇಶಕರ ಆಟಿಟ್ಯೂಡ್ ಕಾರಣ ಇರಬಹುದು ಅನ್ನೋ ಪಾಯಿಂಟ್ ಅನ್ನು ಪ್ರೇಕ್ಷಕ ಸುಲಭವಾಗಿ ಕ್ಯಾಚ್ ಮಾಡ್ತಾನೆ. ಇನ್ನು ಸಂಭಾಷಣೆಯ ವಿಷಯಕ್ಕೆ ಬಂದ್ರೆ, ಅಲ್ಲಲ್ಲಿ ಒಂದೆರಡು ಮಾತುಗಳನ್ನ ಬಿಟ್ರೆ ಈ ಕಾಮೆಂಟ್ರಿ ಕೂಡಾ ತುಂಬಾ ಸಾಧಾರಣ ಅನ್ನಿಸುತ್ತೆ. ಒಟ್ಟಾರೆ ಹೇಳೋದಾದ್ರೆ ನಾಟ್ ಔಟ್ ತೀರಾ ಇಂಡಿಯಾ ಪಾಕಿಸ್ತಾನ್ ವರ್ಲ್ಡ್ ಕಪ್ ಮ್ಯಾಚ್ ಥರ ರೋಚಕವಾಗಿಲ್ಲ. ಒಂಥರಾ ಫ್ರೆಂಡ್ಲಿ ಮ್ಯಾಚ್ ಥರ, ಪ್ರೆಸಿಡೆಂಟ್ಸ್ ಇಲೆವೆನ್ ಮ್ಯಾಚ್ ಥರ, ಎಕ್ಸಿಬಿಷನ್ ಮ್ಯಾಚ್ ಥರ ಡಲ್ ಆಗಿದೆ. ಎಕ್ಸಿಬಿಟರ್ಸ್ ಏನೇ ಮನಸ್ಸು ಮಾಡಿದ್ರೂ ಚಿತ್ರಮಂದಿರಗಳಲ್ಲಿ ಯಶಸ್ವೀ ಪ್ರದರ್ಶನ ಕಾಣೋದು ಕಷ್ಟ.

ಲೂಸ್ ಟಾಕ್ : ರೌಡಿ ರಂಗಣ್ಣ
ಏನು ರೌಡಿ ರಂಗಣ್ಣೋರೆ, ಬರ್ತ್ ಡೇ ಭಾರೀ ಜೋರಾಗಿ ಸೆಲೆಬ್ರೇಟ್ ಮಾಡ್ಕೊತಾ ಇದ್ದೀರಾ?
-ಹೌದೌದು, ಅದರ ಜತೆಗೆ, ಇನ್ಮೇಲೆ ನನ್ನ ಹುಟ್ಟುಹಬ್ಬನ ‘ವೈಲೆಂಟೈ ಡೇ’ ಅಂತ ಸೆಲೆಬ್ರೇಟ್ ಮಾಡ್ಬೇಕು ಅಂತ ಮುಖ್ಯಮಂತ್ರಿಗಳಿಗೆ ಮನವಿ
ಕೊಟ್ಟವ್ರೆ ನಮ್ಮುಡುಗ್ರು.

ರೀ, ಈ ರೌಡಿಸಂನ ನೀವೇನ್ ಸರಕಾರಿ ನೌಕರಿ ಅಂದ್ಕೊಂಡಿದ್ದೀರಾ. ಇಷ್ಟೊಂದ್ ವೈಲೆಂಟ್ ಆಗಿದ್ರೆ, ಯಾವಾಗ ಪೊಲೀಸ್ನೋರು ನಿಮಗೆ ಲೈಫಿಂದಲೇ
ವಾಲೆಂಟರಿ ರಿಟೈರ್ಮೆಂಟ್ ಕೊಡ್ತಾರೋ ಗೊತ್ತಾಗಲ್ಲ.
-ಅಯ್ಯೋ, ಅವರಿಗೆ ವಾರೆಂಟ್ ಇಲ್ದೆ ನಮ್ಮನ್ನ ಅರೆ ಮಾಡೋಕೇ ಆಗಲ್ಲ, ನೀವ್ ಹೇಳ್ದಂಗೆ ನಮ್ಗೆ ಅಷ್ಟು ಸುಲಭವಾಗಿ ರೆ ಇನ್ ಪೀಸ್ ಎಲ್ಲ ಹೇಳೋಕಾಗಲ್ಲ, ಅರೆ
ಮಾಡಿ ಜೈಲಿಗ್ ಹಾಕಿದ್ರೂ, ಒಳಗೂ ಆರಾಮಾಗಿ ರೆಸ್ಟ್ ತಗೋತೀವಿ.

ಅದಿರ್ಲಿ, ನಿಯತ್ತಾಗಿ ಬದುಕೋಕೆ ಏನ್ ಕಷ್ಟ ನಿಮಗೆ?
-ಹಲೋ, ಯಾಕ್ರೀ, ನಿಯತ್ತಾಗಿ ಬದುಕೋಕೆ, ನಾವೇನ್ ನಿಮ್ ಕಣ್ಣಿಗೆ ನಾಯಿಗಳ ಥರ ಕಾಣ್ತೀದೀವಾ?

ಥೋ, ಹಂಗಲ್ಲ, ಈ ರೌಡಿಸಂ ಮಾಡೋದೇನ್ ದೊಡ್ಡ ಕೆಲಸ ಅಂದ್ಕೊಂಡಿದ್ದೀರಾ ಅಂತ ಕೇಳಿದ್ದು?
-ಮತ್ತೆ, ಇನ್ನೇನು, ಈ ಕೆಲ್ಸ ಮಾಡೋಕೂ ‘ಚಾಕು’ ಚಕ್ಯತೆ ಇರಬೇಕು ಗೊತ್ತಾ.

ಅಲ್ಲ ಕಣಪ್ಪಾ, ಎಲ್ಲರ ಹತ್ರ ಉಗಿಸ್ಕೊಂಡು ಬಾಳೋ ಈ ಥರ ಬಾಳು ಬೇಕಾ ನಿಮಗೆ?
-ಹಲೋ, ಯಾಕ್ರೀ, ನಾವೂ ಈ ಸಮಾಜದಲ್ಲಿ ‘ತಲೆ ಎತ್ಕೊಂಡೇ ಬದುಕ್ತಾ ಇರೋದು’ ಗೊತ್ತಾ ?

(ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್ಸ್

ಖೇಮುಗೆ ಯಾವಾಗ್ಲೂ ಇನ್ನೊಬ್ಬರ ಹೀಯಾಳಿಸಿ ಮಾತಾಡೋದು ಅಭ್ಯಾಸ ಆಗಿತ್ತು. ಮನೆಯಲ್ಲಿ ಹೆಂಡತಿ ಏನೇ ಹೇಳಿದ್ರೂ ಅವಳ ಮಾತಿಗೆ ಮರ್ಯಾದೆ ಕೊಡದೆ ‘ಮೈ -ಟ’ ಅಂತಿದ್ದ. ಆಫೀಸಿನಲ್ಲೂ, ಯಾರು ಏನ್ ಒಳ್ಳೆ ಕೆಲಸ ಮಾಡಿದ್ರೂ ಅದನ್ನು ಇನ್ನೊಬ್ಬರು ಯಾರಾದ್ರೂ ಹೊಗಳಿದ್ರೆ ಸಾಕು, ‘ಅಯ್ಯೋ, ಅದೇನ್ ಮಹಾ, ಮೈ ಫೈಟ್’ ಅಂತಲೇ ಮಾತು ಶುರು ಮಾಡ್ತಾ ಇದ್ದ. ಹಾಗಾಗಿ ಖೇಮು ಕಂಡ್ರೆ ಆಫೀಸಿನಲ್ಲಿ ಯಾರಿಗೂ ಇಷ್ಟ ಇರಲಿಲ್ಲ. ಆದರೆ ಅವನ ಬಾಯಿ ಮುಚ್ಚಿಸೋಕಾಗದೆ ಒಳಗೊಳಗೇ ಬಯ್ಕೊಂಡು ಸುಮ್ನೆ ಇರ್ತಿದ್ರು. ಒಂದು ದಿನ ಆಫೀಸಿನಲ್ಲಿ ಖೇಮು ಸಹೋದ್ಯೋಗಿಯಾಗಿದ್ದ ಸೋಮು ಬೆಳಗ್ಗೆನೇ ಬಂದವನು
ಎಲ್ಲರಿಗೂ ಇಲ್ಲಿ ನೋಡಿ ಅಂತ ಒಂದು ಗಿಳಿ ತೋರಿಸುತ್ತಿದ್ದ. ಎಲ್ಲರೂ ಏನು ಈ ಗಿಳಿ ವಿಶೇಷ? ಅಂತ ಕೇಳಿದ್ರು.ಅದಕ್ಕೆ ಸೋಮು ಇದು ಡೆಡ್ಲಿ ಗಿಣಿ, ಇದರ ಕರಾಮತ್ತು, ನೀವೇ ನೋಡಿ ಅಂತ ಗಿಣಿಯನ್ನ ಟೇಬಲ್ ಮೇಲಿಟ್ಟು ಅದರ ಕಡೆ ನೋಡಿ, ‘ಡೆಡ್ಲಿ ಗಿಣಿ, ಟೇಬಲ್’ ಅಂದ. ಏನಾಶ್ಚರ್ಯ, ಗಿಣಿ ತನ್ನ ಕೊಕ್ಕಿನಿಂದ ಆ ಇಡೀ ಟೇಬಲ್ ಅನ್ನು ಕುಕ್ಕಿ ಕುಕ್ಕಿ ಎರಡೇ ಕ್ಷಣದಲ್ಲಿ ಪುಡಿ ಮಾಡಿಬಿಡ್ತು. ಎಲ್ಲರೂ ದಂಗು ಬಡಿದು ಹೋದರು.

ಆಫೀಸಿನ ಜವಾನ ‘ಡೆಡ್ಲಿ ಗಿಣಿ, ವಿಂಡೋ’ ಅಂದ. ಗಿಣಿ ಒಂದೇ ಕ್ಷಣದಲ್ಲಿ ಇಡೀ ಕಿಟಕಿಯನ್ನು ಕುಕ್ಕಿ ಕುಕ್ಕಿ ಪುಡಿ ಮಾಡಿಬಿಡ್ತು. ಅಷ್ಟರಲ್ಲಿ ಖೇಮು ಆಫೀಸಿಗೆ ಬಂದ. ಎಲ್ಲರೂ ಸುತ್ತುವರೆದು ನಿಂತಿರೋದು ನೋಡಿ, ‘ಏನ್ ನಡೀತಾ ಇದೆ ಇಲ್ಲಿ?’ ಅಂತ ಕೇಳಿದ. ಅದಕ್ಕೆ ಒಬ್ಬ ಎಂಪ್ಲಾಯಿ, ‘ಸಾರ್ ಇದು ಡೆಡ್ಲಿ ಗಿಣಿ’ ಅಂದ. ಅದನ್ನು ಕೇಳಿದವನೇ ಖೇಮು ಎಂದಿನಂತೆ ಹೇಳಿದ ‘ಡೆಡ್ಲಿ ಗಿಣಿ? ಮೈ ಪುಟ’.ಅಷ್ಟೇ…!

ಲೈನ್ ಮ್ಯಾನ್

ಜಿಯೋ ಜತೆಗೆ ಏರ್ಟೆಲ್ ರೀಚಾರ್ಜ್ ಕೂಡಾ ಏರಿಕೆ
-ಅಂಬಾನಿ ಏನೋ ಮಗನ್ ಮದುವೆ ಮಾಡಿದ. ಅದಕ್ಕೆ ರೇಟ್ ಜಾಸ್ತಿ ಮಾಡಿದ. ನೀವೇನ್ ಮಾಡಿದ್ರೋ. ನೀವೇನ್ ಹೆಣ್ಣಿನ್ ಕಡೆಯವ್ರಾ?

ಬೇಬಿ ವಿಷ್ಯ
-ಫ್ರೆಂಡ್ ಒಬ್ಬ ಅ ಕಾರ್ ಮೇಲೆ ಬೇಬಿ ಆನ್ ಬೋರ್ಡ್ ಅಂತ ಹಾಕ್ಕೊಂಡಿದ್ದ. ಮಗಾ ನಿಂಗ್ ಮದ್ವೆನೇ ಆಗಿಲ್ವ, ‘ಬೇಬಿ’ ಎಲ್ಲಿಂದ ಬಂತು ಅಂದೆ.

ಅದಕ್ಕೆ ಅವ್ನ್ ಹೇಳ್ದ..ಇಲ್ಲ ಕಣೋ, ಕಾರಲ್ಲಿ ‘ಗರ್ಲ್ ಫ್ರೆಂಡ್’ ಇದ್ದಾಳೆ ಅಂತ ಹಾಕಿದ್ದು.

ಬಸ್ಸಲ್ಲಿ ಕಣ್ ಮುಚ್ಕೊಂಡು ಕೂತಿದ್ದವನೊಬ್ಬನನ್ನು ನೋಡಿ ಪಕ್ಕದಲ್ಲಿದ್ದವನು ಕೇಳಿದ

-ಯಾಕ್ ಸಾರ್ ಹುಷಾರಿಲ್ವಾ ?
-ಹಂಗೇನಿಲ್ಲ, ಬಸ್ಸಲ್ಲಿ ಈ ವಯಸ್ಸಾದವರು ನಿಂತ್ಕೊಂಡ್ ಪ್ರಯಾಣ ಮಾಡೋದನ್ನ ನನ್ ಕೈಲಿ ನೋಡಕಾಗಲ್ಲ ಅದಕ್ಕೆ..

ಫ್ರೀ ಟೈಮ್ ಮಾತು

ರಣಭೂಮಿಯಲ್ಲಿ ಯುದ್ದ ನಿಲ್ಲಿಸಿದ್ರೆ- ಕದನ ವಿರಾಮ ವಿಧಾನಸೌಧದಲ್ಲಿ ಜಗಳ ನಿಲ್ಲಿಸಿದ್ರೆ

-ಸದನ ವಿರಾಮ

‘ಹಾಲಕೋಡಾ’ ಅನ್ನೋ ಗ್ರಾಮದಲ್ಲಿ ಅಕ್ರಮ ಮರಳು ಸಾಗಣೆ
-ಊರ ಹೆಸರು ಯಾಕೋ ಸರಿ ಇಲ್ಲ, ಅದು ‘ಹಾಕೋ ಲೋಡಾ’ ಆಗಬೇಕಿತ್ತು ಅಲ್ವಾ?

ಫಿಲಾಸಫಿ
-ನಾನೇನೂ ಅವನಷ್ಟು ದೊಡ್ಡ ತಪ್ಪು ಮಾಡಿಲ್ಲ ಅಂತ ನಮ್ಮನ್ನ ನಾವು ಸಮರ್ಥನೆ ಮಾಡಿಕೊಳ್ಳೋದು ತಪ್ಪು. ಯಾಕಂದ್ರೆ ದುಡ್ ಕದ್ರೂ ಕಳ್ಳಾನೇ,
ಬ್ರೆಡ್ ಕದ್ರೂ ಕಳ್ಳಾನೇ.

ಜೋಕ್ ಹೇಳುವುದಕ್ಕಿಂತ ದೊಡ್ಡ ಕಷ್ಟ ಯಾವುದು?
-ಅದನ್ನ ಎಕ್ಸ್ ಪ್ಲೈನ್ ಮಾಡೋದು

ಮೊಬೈಲ್‌ನಲ್ಲಿ ರಾತ್ರಿ ಹೊತ್ತು ರೊಮ್ಯಾಂಟಿಕ್ ಆಗಿ ಚಾಟ್ ಮಾಡೋದು
-ಚಾಟ್ ಮಸಾಲಾ

ಗಾಂಜಾ ಸೇದಿದ್ರೆ ಬೇಲಿಲ್ಲದ ಕೇಸ್ ಆಗುತ್ತೆ

ಗಾಂಜಾ ಗಿರಾಕಿ- ನಾವ್ ಅದಕ್ಕೆಲ್ಲ ‘ಸೊಪ್ಪು’ ಹಾಕಲ್ಲ

ಫ್ರೀ ಹಿಟ್‌ನಲ್ಲಿ ಸ್ಟೇಡಿಯಂ ಆಚೆ ಹೋಗುವಂಥ ಸಿಕ್ಸ್ ಹೊಡೆದ್ರೆ ಏನಾಗುತ್ತೆ?
-‘ನೋ’ಬಾಲ್

Leave a Reply

Your email address will not be published. Required fields are marked *