Thursday, 12th December 2024

ಆಕಾಶವಾಣಿಯೆಂಬ ಮಧುರ ಸ್ಮೃತಿ

ಯಶೋ ಬೆಳಗು

ಯಶೋಮತಿ ಬೆಳಗೆರೆ

yashomathy@gmail.com

ಬಾಲ್ಯವೆಂಬುದು ಅದೆಷ್ಟೊಂದು ನೆನಪುಗಳ ತವರಲ್ವಾ ಅನ್ನಿಸುತ್ತದೆ ಕೆಲವೊಮ್ಮೆ. ಎಲ್ಲರ ಬಳಿ ಆಗೆಲ್ಲ ಎಷ್ಟು ಸಮಯ ವಿರುತ್ತಿತ್ತು. ರಸ್ತೆಗಳೆಲ್ಲ ಖಾಲಿ ಖಾಲಿ. ಓಡಾಡಲು ಸಿಟಿ ಬಸ್ಸುಗಳಿರುತ್ತಿದ್ದವು. ಆಟೋ ರಿಕ್ಷಾಗಳಲ್ಲಿ ಓಡಾಡುವುದೂ ಅಪರೂ ಪವೇ ಆಗಿತ್ತು. ಟ್ಯಾಕ್ಸಿಗಳಂತೂ ನೆರೆಹೊರೆಯಲ್ಲಿ ಯಾರಾದರೂ ವಿದೇಶಗಳಿಂದ ಬಂದಾಗ ಮಾತ್ರ ಕಣ್ಣಿಗೆ ಬೀಳು ತ್ತಿದ್ದವು. ಅಂಗೈಯ ಜಗತ್ತಿನ ಸದ್ದಿ ಮುಟ್ಟಿಸುವ ಸ್ಮಾರ್ಟ್ ಫೋನುಗಳ ಆವಿಷ್ಕಾರದಿಂದಾಗಿ ಈಗಿನ ಕಾಲದ ಮಕ್ಕಳಿಗೆ ಏನು ಕೇಳಿದರೂ ಥಟ್ ಅಂತ ಗೂಗಲ್‌ನಲ್ಲಿ ಹುಡುಕಿ ಪಟ್ ಅಂತ ಎರಡು ನಿಮಿಷದಲ್ಲಿ ಸ್ಮಾರ್ಟಾಗಿ ಹೇಳಿಬಿಡ್ತಾರೆ. ಆದರೆ ನಮ್ಮ ಬಾಲ್ಯದಲ್ಲಿ ಈ ರೀತಿಯ ಅನುಕೂಲಗಳಿರಲಿಲ್ಲ.

ದಿನಪತ್ರಿಕೆಗಳನ್ನು, ವಾರಪತ್ರಿಕೆಗಳನ್ನು ಓದಲು ನಾವು ಲೈಬ್ರರಿಗೆ ಹೋಗುತ್ತಿದ್ದೆವು. ಆ ನಿಶ್ಶಬ್ದದ ಓದಿನ ಮನೆಯಲ್ಲಿ ಸಿಗುತ್ತಿದ್ದ ಥರಾವರಿ ಪುಸ್ತಕಗಳು, ಮ್ಯಾಗಝಿನ್‌ಗಳು, ಪತ್ರಿಕೆಗಳನ್ನೆಲ್ಲ ಒಮ್ಮೆ ಕಣ್ಣಾಡಿಸಿ, ಆಗಿನ ಕಾರ್ಡ್‌ಲೆಸ್ ಕಾಲದಲ್ಲಿ ಇರುತ್ತಿದ್ದ ಕೇವಲ ಎರಡು ಲೈಬ್ರರಿ ಕಾರ್ಡುಗಳಲ್ಲಿ ಎರಡು ಪುಸ್ತಕಗಳನ್ನು ಕಡ ತಂದು ಓದುತ್ತಾ ಕಾಲ ಹರಣ ಮಾಡುತ್ತಿದ್ದ ಕಾಲಘಟ್ಟದಲ್ಲಿ ಬಹಳ ಆಶ್ಚರ್ಯವನ್ನುಂಟು ಮಾಡುತ್ತಿದ್ದ ಆಶರೀರವಾಣಿಯೆಂದರೆ ಅದು ಆಕಾಶವಾಣಿ!

ಇಷ್ಟು ಸಣ್ಣ ಪೆಟ್ಟಿಗೆಯಲ್ಲಿ ಎಷ್ಟೆಲ್ಲ ಜನರಿರುತ್ತಾರಲ್ಲ? ಅದು ಹೇಗೆ? ಅವರ ದನಿ ಮಾತ್ರ ಕೇಳುತ್ತದೆ ಅವರು ಯಾಕೆ ಕಾಣೋ ದಿಲ್ಲ? ಅನ್ನುವ ಪ್ರಶ್ನೆಗಳೆಲ್ಲ ಮನದ ಹುಟ್ಟಿ ಅ ಸಮಾಧಿಯಾಗಿ ಹೋಗುತ್ತಿದ್ದವು. ಏಕೆಂದರೆ ಅದಕ್ಕೆ ಸರಿಯಾದ ಸಮಝಾಯಿಷಿ ನೀಡುವಂಥ ಜ್ಞಾನಿಗಳು ನನ್ನ ನಿಲುಕಿ ನಲ್ಲಿರಲಿಲ್ಲ. ಅಥವಾ ಕೇಳುವ ಧೈರ್ಯ ನನ್ನಲ್ಲಿರಲಿಲ್ಲ. ಇನ್ನೂ ತಮಾಷೆಯ  ವಿಷಯ ವೆಂದರೆ ಸಿನಿಮಾಗಳಲ್ಲಿ ಕಥೆಯ ನಡುವಿನಲ್ಲಿ ಬರುವ ಚಿತ್ರಗೀತೆಗಳನ್ನು ಹಾಡುವಾಗ ಮೂಡಿಬರುತ್ತಿದ್ದ ಹಿನ್ನೆಲೆ ವಾದ್ಯ ಸಂಗೀತವನ್ನು ಯಾರು ನುಡಿಸುತ್ತಿರು ತ್ತಾರೆ? ನಾವು ಹಾಡಬೇಕಾದ್ರೆ ಯಾಕೆ ಬರಲ್ಲ ಅವರೆಲ್ಲ? ಅನ್ನುವ ಮುಗ್ಧ ಪ್ರಶ್ನೆಗಳು ಅನೇಕ ಕಾಲ ಕಾಡುತ್ತಲೇ ಇದ್ದವು.

ಇದೆಲ್ಲ ಅನುಮಾನಗಳು ಪರಿಹಾರವಾಗಿದ್ದು ಒಮ್ಮೆ ಶಾಲೆಯಿಂದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಕಾಶವಾಣಿ ಕೇಂದ್ರಕ್ಕೆ ಒಂದಷ್ಟು ದೇಶಭಕ್ತಿಗೀತೆಗಳನ್ನು ಹಾಡಿಸಲು ಕರೆದುಕೊಂಡು ಹೋದ ಮಕ್ಕಳ ತಂಡದಲ್ಲಿ ನಾನೂ ಒಬ್ಬಳಾಗಿ ಹೋದಾಗ. ಮೊಟ್ಟಮೊದಲ ಬಾರಿಗೆ ಬೆಂಗಳೂರಿನ ಆಕಾಶವಾಣಿ ಕೇಂದ್ರವನ್ನು ನೋಡಿದ ಖುಷಿ. ಜತೆಗೆ ಅಲ್ಲಿ ಗೆಳತಿಯೊಂದಿಗೆ ಕೇಳಿ ಕೇಳಿ ಗೆಳೆಯರೆ ದಿವ್ಯ ಮಂತ್ರ ಘೋಷವಾ, ‘ಏಳಿ ಏಳಿ ಬೇಗನೆ ಜಗದ ಗುಡಿಗೆ ಹೋಗುವಾ’ ಅನ್ನುವ ಗೀತೆಯನ್ನು ಹಾಡಿದ್ದು,
ನಂತರ ಅದು ಪ್ರಸಾರವಾಗುವ ದಿನ ಅಕ್ಕಪಕ್ಕದ ಮನೆಯವರೊಂದಿಗೆ, ನನ್ನ ಓರಗೆಯವರೊಂದಿಗೆ, ಮನೆಯವರೊಂದಿಗೆ ಕುಳಿತು ಕೇಳುವಾಗ ಎಲ್ಲರೂ ಮೆಚ್ಚಿ ಹೊಗಳಿದ ರೀತಿಗೆ ನಾಚಿ ಮನದ ಹಿಗ್ಗಿದ ರೀತಿ, ನಂತರ ಎಲ್ಲರ ಕಣ್ಣಲ್ಲೂ ಆದರ್ಶದ ವಿದ್ಯಾರ್ಥಿನಿಯಾಗಿ ಜಂಭದಿಂದ ಬೀಗಿದ ರೀತಿ ಎಲ್ಲವೂ ಕಣ್ಣಿಗೆ ಕಟ್ಟಿದಂತಿದೆ.

ಅದಾದ ಅನೇಕ ವರ್ಷಗಳ ನಂತರ ಮತ್ತೊಮ್ಮೆ ರೇಡಿಯೋ ಸ್ಟೇಷನ್‌ನ ದರ್ಶನವಾದದ್ದು FM Rainbow ಗೆ ರವಿ ಬೆಳಗೆರೆಯವರ ‘ಬೆಳ್‌ಬೆಳಗ್ಗೆ ಬೆಳಗೆರೆ’ ಎನ್ನುವ ಕಾರ್ಯಕ್ರಮದ ನೆಪದಲ್ಲಿ ಅವರೊಡನೆ ಹೋದಾಗ. ಅಲ್ಲಿ ಅವರ ಗೆಳೆಯರಾದ ಉದಯಾದ್ರಿ ಹಾಗೂ ಅನುಪಮಾರೊಂದಿಗೆ ನಡೆಸಿದ ಸಾಕಷ್ಟು ಮಾತುಕತೆಗಳ ನಡುವೆ ಭೇಟಿಯಾದ ಮತ್ತೊಂದು ಅಪರೂಪದ ವ್ಯಕ್ತಿ ಕಾಲಕೋಶ್! ಅವರನ್ನು ಕಾಲಕೋಶ್ ಎಂದು ಕರೆಯುತ್ತಿದ್ದ ಕಾರಣ ಅವರಿಗಿದ್ದ ಜ್ಞಾನ.

ಯಾವುದೇ ವಿಷಯವನ್ನು ಕೇಳಿದರೂ ಅದರ ಬಗ್ಗೆ ಒಂದು ಉತ್ತಮವಾದ ದಾಖಲೆ ಸಹಿತ ವಿವರಣೆ ಅವರ ಬಳಿ ದೊರೆಯುತ್ತಿದ್ದ ಕಾರಣ ಅವರನ್ನು ಗೆಳೆಯರೆಲ್ಲ ಹಾಗೆ ಕರೆಯುತ್ತಿದ್ದರು. ನಿಜವಾದ ಹೆಸರೇನೆಂಬುದು ಆ ದಿನ ಹೇಳಿದರೂ ನನ್ನ ಸ್ಮೃತಿ ಪಟಲ ದಲ್ಲಿ ಇಂದಿಗೂ ಅವರ ಹೆಸರು ಕಾಲಕೋಶ್ ಎಂದೇ ಸ್ಥಾಪನೆಯಾಗಿ ಹೋಗಿದೆ. ಅವರಿನ್ನೂ ನೆನಪಿನಲ್ಲಿರಲು ಕಾರಣ ಮಾತಿನ ನಡುವೆ ಅವರು ಅಂದು ಕೇಳಿಸಿದ ಆ ಗೀತೆ. ನೋಡಿ ರವಿ ಸರ್, ನನಗೆ ತುಂಬ ನೋವು, ಒತ್ತಡ, ಬೇಸರಗಳಾದಾಗ ನಾನು
ಕಣ್ಮುಚ್ಚಿ ‘ಈ ಬಾಳಗೀತೆಗೆ ಎಂದೂ ಶೃತಿಯಾದೆ ನೀನು, ಶೃತಿಯಲ್ಲಿ ನಾದವಾಗಿ ಬೆರೆತುಹೋದೆ ನಾನು…’ ಅನ್ನುವ ಈ ಹಾಡನ್ನು ಕೇಳುತ್ತಾ ಕುಳಿತುಬಿಡುತ್ತೇನೆ. ಮನಸ್ಸಿಗೆ ಅದೆಷ್ಟು ನೆಮ್ಮದಿ ದೊರೆಯುತ್ತದೆ ಎಂದು ಹೇಳಲಸಾಧ್ಯ ಎಂದು ವಿವರಿಸುತ್ತಿರುವಾಗಲೇ ಶಿಶು ವೈದ್ಯೆಯಾದ ಆಶಾ ಬೆನಕಪ್ಪನವರೂ ಜತೆಯಾಗಿ ಮಾತು ನೂರಾಗಿದ್ದು ಗಂಧ ತೀಡಿದಂತಿತ್ತು.

ಈಗೆಲ್ಲ ಬೇಸರವಾದಾಗ ಆ ಹಾಡನ್ನು ಕೇಳುವಾಗ ನೆನಪಾಗುತ್ತಾರೆ ಕಾಲಕೋಶ್! ಮರ್ಫಿ ರೇಡಿಯೋದಿಂದ ಹಿಡಿದು ಪಾಕೆಟ್
ಟ್ರಾನ್ಸಿಸ್ಟರ್‌ವರೆಗೆ ವಿವಿಧ ಆಕಾರಗಳಲ್ಲಿ ನಾವು ಹೋದಲ್ಲಿ ಬಂದಲ್ಲಿ ನಮ್ಮ ಜತೆಜತೆಗೇ ಓಡಾಡುತ್ತಾ ಸುಪ್ರಭಾತದಿಂದಿ
ಹಿಡಿದು, ಮೀರಾ ಭಜನ್, ಭಕ್ತಿಗೀತೆಗಳು, ವಚನಗಳು, ಭಾವಗೀತೆಗಳು, ದೇಶಭಕ್ತಿಗೀತೆಗಳು, ಚಲನಚಿತ್ರ ಗೀತೆಗಳು, ಚಲನಚಿತ್ರಗಳ ಧ್ವನಿವಾಹಿನಿ, ವಾರ್ತೆಗಳು, ಕ್ರಿಕೆಟ್ ಕಾಮೆಂಟ್ರಿ, ಬಿನಾಕಾ ಗೀತ್ ಮಾಲಾ, ಗಾಂಧಿ ಸ್ಮೃತಿ, ಕಾರ್ಯಕ್ರಮಗಳ ಪಕ್ಷಿನೋಟ, ಮಕ್ಕಳ ಮನರಂಜನೆ, ಶಿಕ್ಷಣ ಮಾರ್ಗದರ್ಶಿ, ಸಂಗೀತ ಪಾಠಗಳ ನಡುವೆ ಪ್ರೇಕ್ಷಕರಿಗಾಗಿಯೇ ಮುಡಿಪಾಗಿದ್ದ ರಂಗಭೂಮಿಯ ನಾಟಕ ಗಳೆಂಬ ದೃಶ್ಯಕಾವ್ಯಗಳು ಧ್ವನಿಯಾಗಿ ಪರಿವರ್ತನೆಗೊಂಡು ಸಣ್ಣ ಸಣ್ಣ ವಾಕ್ಯಗಳಾಗಿ ರಚನೆಗೊಂಡು ಕೇಳುಗರು ಪಾತ್ರಗಳನ್ನು ಧ್ವನಿಯ ಮೂಲಕ ವಿಭಿನ್ನವಾಗಿ ಗುರುತಿಸುವ ರೀತಿಯಲ್ಲಿ ವಿಶಿಷ್ಟವಾದ ರೆಡಿಯೊ ನಾಟಕಗಳನ್ನು ಹುಟ್ಟು ಹಾಕಿದವು.

ಮೈಸೂರು ಆಕಾಶವಾಣಿ ಯಲ್ಲಿ ಪ್ರಸಾರವಾದ ಮೊದಲ ಬಾನುಲಿ ನಾಟಕ ವಿ.ಕೆ.ಶ್ರೀನಿವಾಸನ್ ರವರು ಅನುವಾದಿಸಿದ ನೀರ ಗಂಟಿ ಮಾರ’. ಈ ನಾಟಕವು ಆರ್.ಕೆ. ನಾರಾಯಣ ಅವರ ವಾಚ್ ಮನ್ ಆಫ್ ದಿ ಲೇಕ್’ ಎಂಬ ನಾಟಕದ ಅನುವಾದ ವಾಗಿತ್ತು. ನಮ್ಮ ದೇಶದಲ್ಲಿ ಆಕಾಶವಾಣಿ ಪ್ರಾರಂಭವಾದ ಸಂದರ್ಭದಲ್ಲಿ ಇತರ ಭಾಷೆಗಳಿಗೆ ಹೋಲಿಸಿ ನೋಡಿದಾಗ ಕನ್ನಡದಲ್ಲಿ ಬಾನುಲಿ ನಾಟಕಗಳ ಪ್ರಸಾರ ತೀರ ವಿರಳವಾಗಿತ್ತು. ಸಂಗೀತ ರೂಪಕಗಳು, ಗೇಯ ನಾಟಕಗಳು ಬಾನುಲಿ ನಾಟಕಗಳಂತೆ ರೆಡಿಯೊ ಪ್ರಕಾರದ ಮುಖ್ಯ ಅಂಗಗಳಾಗಿವೆ. ಭಾರತೀಯ ಹಬ್ಬಗಳನ್ನು ಕುರಿತು ಲೋಕಗೀತೆಗಳನ್ನು, ಸಂಗ್ರಹಿಸಿ ಇವುಗಳ ಮಹತ್ವಗಳನ್ನು ತಿಳಿಸಿ ಹೇಳುವ ಸಂಗೀತ ರೂಪಕಗಳು ಒಂದು ಪ್ರಕಾರವಾದರೆ ಯಾವ ವಾಚ್ಯಶಬ್ದವೂ ಇಲ್ಲದೇ ಕೇವಲ
ಗೀತೆಗಳ ಮೂಲಕವೇ ಹೆಣೆಯಲ್ಪಟ್ಟ ವಿಶೇಷ ಶುದ್ಧ ಸಂಗೀತ ನಾಟಕ ಗೇಯನಾಟಕವೆಂದು ಕರೆಯಲ್ಪಡುತ್ತದೆ.

ಕಿಸಾಗೌತಮಿ, ಸೋಮಿಯ ಭಾಗ್ಯ, ಮದುವೆಗಿಂತ ಮಸಣವೇ ಲೇಸು, ನದೀ ದರ್ಶನ ಮೊದಲಾದ ಗೇಯ ನಾಟಕದ ಮೊದಲ ಪ್ರಯೋಗ ನಡೆದದ್ದು ಕನ್ನಡದ ಮಟ್ಟಿಗೆ ಡಾ. ಶಿವರಾಮ ಕಾರಂತರಿಂದಲೇ ಎಂದು ಹೇಳಬಹುದು. ಶ್ರೋತೃಗಳಿಗೆ ತಲುಪುವ ನಿಟ್ಟಿನಲ್ಲಿ ಯಶಸ್ವಿ ನಾಟಕಕಾರರಲ್ಲಿ ಶ್ರೀರಂಗ, ಚದುರಂಗ, ಎಚ್.ಕೆ. ರಂಗನಾಥನ್, ಸಮೇತನಹಳ್ಳಿ ರಾಮರಾವ್, ನಾ. ಕಸ್ತೂರಿ, ಶಿವಸ್ವಾಮಿ, ಬೀಚಿ, ಎ.ಕೆ. ರಾಮಾನುಜನ್, ಬಿ.ಸಿ. ರಾಮಚಂದ್ರ ಶರ್ಮ, ಪರ್ವತವಾಣಿ ಯವರ ಕೊಡುಗೆ ಅಪಾರ.

1884ರಲ್ಲಿ ತಂತಿಯ ಸಹಾಯವಿಲ್ಲದೆ ಸಂದೇಶ ರವಾನಿಸಲು ಸಾಧ್ಯ ಎಂಬ ಅರಿವನ್ನು ಮೂಡಿಸಿದ ಮಾರ್ಕೋನಿಗೆ ಅದರ ಪೇಟೆಂಟನ್ನು ನೀಡಲು ಅಂದು ಇಟಲಿಯ ಸರಕಾರ ನಿರಾಕರಿಸಿತ್ತು. ಹೀಗಾಗಿ ತನ್ನ ತಾಯಿಯ ಸಹಾಯದಿಂದ ಇಂಗ್ಲೆಂಡಿಗೆ ಹೋಗಿ ಅಲ್ಲಿ ಅಗತ್ಯ ಹಣ ಸಂಗ್ರಹಿಸಿ ತಮ್ಮ ಮಾರ್ಕೋನಿ ಕಂಪನಿಯನ್ನು ಆರಂಭಿಸುತ್ತಾರೆ. ಇವರು ಸಂಶೋಧಿಸಿದ ತಂತಿರಹಿತ ಟೆಲಿಗ್ರಾಮ್ ಮುಂದೆ ಹಂತ ಹಂತವಾಗಿ ಬೆಳವಣಿಗೆಗೊಳ್ಳುತ್ತಾ ರೆಡಿಯೊ ಪ್ರಸಾರವಾಗಲು ಕಾರಣವಾಯಿತು.

1936ರಲ್ಲಿ ಪ್ರಸಾರ ಭಾರತಿಯ ಅಂಗಸಂಸ್ಥೆಯಾಗಿ ದೇಶದ ಏಕೈಕ ಪ್ರಸಾರ ವ್ಯವಸ್ಥೆಯಾಗಿ ಹೊರಹೊಮ್ಮಿತು ಆಲ್ ಇಂಡಿಯಾ ರೆಡಿಯೊ. ಸರಕಾರದ ಒಡೆತನದಲ್ಲಿದ್ದ AIಗೆ ಅಧಿಕೃತವಾಗಿ ಆಕಾಶವಾಣಿ ಎಂಬ ಹೆಸರು ಬಂದಿದ್ದು 1957ರಲ್ಲಿ. 1950ರ ದಶಕದ ಪ್ರಾರಂಭದಲ್ಲಿ ಕರ್ನಾಟಕದಲ್ಲಿದ್ದ ಏಕೈಕ ಬಾನುಲಿ ಪ್ರಸಾರ ಕೇಂದ್ರವೆಂದರೆ ಅದು ಆಕಾಶವಾಣಿ ಮೈಸೂರು ಮಾತ್ರ. ಬೆಂಗಳೂರಿನ ನಿಮ್ಹಾ ಆಸ್ಪತ್ರೆಯ ಸ್ಥಾಪಕ ನಿರ್ದೇಶಕರು ಹಾಗೂ ಮೈಸೂರಿನ ಮನಃಶಾಸ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ
ಡಾ. ಎಂ. ವಿ. ಗೋಪಾಲಸ್ವಾಮಿಯವರು ಮೊಟ್ಟಮೊದಲ ಬಾರಿಗೆ ಮೈಸೂರಿನಲ್ಲಿ ರೆಡಿಯೊ ಕೇಂದ್ರವೊಂದನ್ನು ಸ್ಥಾಪಿಸಿದರು.

ತಮ್ಮ ಕಾಲೇಜಿನ ಕಾರ್ಯಗಳು ಮುಗಿದ ನಂತರ ಸಮಯವನ್ನು ಸದುಪಯೋಗ ಮಾಡಲು ಗೋಪಾಲಸ್ವಾಮಿಯವರಿಗೆ  ಹೊಸತನ್ನೇನಾದರೂ ಮಾಡಬೇಕೆಂಬ ಆಸೆ ಹುಟ್ಟಿದಾಗ, ತಾವು ಲಂಡನ್‌ಗೆ ಹೋಗಿದ್ದ ಸಮಯದಲ್ಲಿ ಕಡಿಮೆ ವಿದ್ಯುತ್ ಬಳಕೆಯ ಟಾಲ್ ಎಂಬ ಟ್ರಾ ಮೀಟರ್ ತಂದು ಕೆ. ಆರ್. ಎಸ್ ರಸ್ತೆಯಲ್ಲಿರುವ ತಮ್ಮ ಮನೆ ವಿಠಲ ವಿಹಾರದಲ್ಲಿ ಸ್ಥಾಪಿಸುತ್ತಾರೆ. ಅದರ ಮೂಲಕ 1955 ಸೆಪ್ಟಂಬರ್ 10ರಂದು ರೆಡಿಯೊದ ಮೊದಲ ಅಲೆ ಪ್ರಸಾರವಾಗುತ್ತದೆ.

ಇದನ್ನು ಕೇಳಲು ಸ್ವತಃ ಮೈಸೂರಿನ ಮಹಾರಾಜರು ಕಾಲೇಜಿನ ಅಸೆಂಬ್ಲಿ ಹಾಲಿನಲ್ಲಿ ಹಾಜರಿದ್ದರಂತೆ. ರಾಷ್ಟ್ರಕವಿ ಕುವೆಂಪು ಅವರ ಕವನ ವಾಚನದ ಮೂಲಕ ಕಾರ್ಯಕ್ರಮ ಆರಂಭಗೊಂಡು, ಏಕವ್ಯಕ್ತಿಯೊಬ್ಬರಿಂದ ಆರಂಭವಾದ ದೇಶದ ಮೊದಲ ರೆಡಿಯೊ ಸ್ಟೇಷನ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ೧೯೪೧ರವರೆಗೆ ಇವರ ಮನೆಯಿಂದಲೇ ಬಾನುಲಿ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಭಾನುವಾರ ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲಿ ಪ್ರತಿದಿನ ಸಂಜೆ 6 ರಿಂದ 6.30ರವರೆಗೆ
ಶಾಸ್ತ್ರೀಯ ಸಂಗೀತ ಹಾಗೂ ಬಾನುಲಿ ಭಾಷಣಗಳನ್ನು ಪ್ರಸಾರ ಮಾಡುತ್ತಿದ್ದರು.

ರೆಡಿಯೊ ಎಂಬ ಒಂದು ಅದ್ಭುತವು ಜನತೆಯ ಮುಂದೆ ಬಂದಾಗ ಅದಕ್ಕೆ ಆಕಾಶದಿಂದ ಬರುವ ವಾಣಿ’ ಆಕಾಶವಾಣಿ ಎಂಬ ಹೆಸರಿನಿಂದ ಕರೆದು ಪೂರ್ತಿ ವಿವರಗಳ ನ್ನೊಳಗೊಂಡ ಪುಸ್ತಕವೊಂದು 1932ರಲ್ಲಿ ಅಚ್ಚಾದಾಗ ವಿಸ್ಮಯ ಹಾಗೂ ಬೆರಗಿನಿಂದ ಜನತೆ ಅದನ್ನು ಸ್ವೀಕರಿಸಿ ದರು. ಇದನ್ನು ಬರೆದವರು ಆಕಾಶವಾಣಿ ರಾಮರಾಯರು ಎಂದೇ ಜನರಿಂದ ಕರೆಯಲ್ಪಡುತ್ತಿದ್ದ ಮಂಗಳೂರಿನ ವಿದ್ವಾನ್ ಹೊಸಬೆಟ್ಟು ರಾಮರಾವ್ ರವರು. ಹೀಗೆ ವಿದ್ವಾನ್ ಹೊಸಬೆಟ್ಟು ರಾಮರಾವ್ ಅವರ ೧೯೩೨ರಲ್ಲಿ
ಹೆಸರಿಲ್ಲದೆ ಪ್ರಕಟವಾದ ಪುಸ್ತಕದ ಹೆಸರಾದ ಆಕಾಶವಾಣಿ ಪದವನ್ನು ಮೈಸೂರು ಆಕಾಶವಾಣಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಲೇಖಕರೂ ಆಗಿದ್ದ ನಾ. ಕಸ್ತೂರಿ ಅವರು ಸೂಚಿಸಿದರು. ಇದನ್ನು ಡಾ. ಎಂ.ವಿ. ಗೋಪಾಲಸ್ವಾಮಿ ಯವರು ಅನುಮೋದಿಸಿ ಕೇಂದ್ರ ಸರಕಾರಕ್ಕೆ ಕಳುಹಿಸಿದರು. ಕೇಂದ್ರ ಸರಕಾರವು ಇದನ್ನು 1943ರಲ್ಲಿ ಮಾನ್ಯ ಮಾಡಿ ಮೈಸೂರು ಆಕಾಶವಾಣಿ ಎಂದು ನಾಮಕರಣ ಮಾಡಿತು. ಮುಂದೆ ಆಲ್ ಇಂಡಿಯಾ ರೆಡಿಯೊಗೆ ಕೂಡ 1956ರಲ್ಲಿ ಅಧಿಕೃತವಾಗಿ ಆಕಾಶ ವಾಣಿ ಎಂದು ಹೆಸರಿಡಲಾಯಿತು.

ಟಿವಿಯಂತೆ ರೆಡಿಯೊ ನಮ್ಮನ್ನು ಒಂದೇ ಕಡೆ ಕಟ್ಟಿಹಾಕುವುದಿಲ್ಲ. ನಮ್ಮ ನಿತ್ಯ ಕೆಲಸ ಕಾರ್ಯಗಳ ನಡುವೆಯೇ ನಾವು ಅದರೆಡೆಗೆ ಕಿವಿಯಾಗಬಹುದು. ನಮ್ಮ ಆಸಕ್ತಿಯ ವಿಷಯಗಳನ್ನು ಆಲಿಸಬಹುದು. ಇಂದು ಎಷ್ಟೆಲ್ಲ ಸಾಮಾಜಿಕ ಜಾಲತಾಣ ಗಳು, ಸೋಷಿಯಲ್ ಮೀಡಿಯಾ, ವಿಶುಯಲ್ ಮೀಡಿಯಾ, ಪ್ರಿಂಟ್ ಮೀಡಿಯಾಗಳ ನಡುವೆ ಆಕಾಶವಾಣಿ(ಅಐ) ಕೂಡ ಯುವಜನತೆಗೆ ಹೆಚ್ಚು ಹತ್ತಿರಾಗುವಂತೆ ತನ್ನ ಸ್ವರೂಪವನ್ನು ಬದಲಿಸಿಕೊಂಡು ಎಲ್ಲ ಪೈಪೋಟಿಗಳ ನಡುವೆ ಈಗ ಆಪ್
ಗಳ ರೂಪದಲ್ಲೂ ಎಲ್ಲರ ಅಂಗೈ ತುದಿಯ ನಿಲುಕಿಗೆ ಹತ್ತಿರಾಗಿದೆ. ಸಾಕಷ್ಟು ಆರ್‌ಜೆಗಳು ದಿನ ಬೆಳಗಾದರೆ ಹೊಸ ಹೊಸ ವಿಷಯಗಳನ್ನು ಹುಡುಕಿ ತಂದು ನಮ್ಮ ನಡುವೆ ಮಾತಾಗುತ್ತಿzರೆ. ಆದರೆ ಕೇಳುವ ಆಸಕ್ತಿ ಬೆಳೆಸಿಕೊಳ್ಳುವುದು ಮಾತ್ರ ನಮ್ಮ ಕೈಯ ಇದೆ.