Friday, 20th September 2024

ಅಕ್ಷಯ ತೃತೀಯದ ಮಹತ್ವ

ಧರ್ಮ ದೀವಿಗೆ

ವಿನೋದ್ ಕಾಮತ್

ಮೂರೂವರೆ ಮುಹೂರ್ತಗಳ ಪೈಕಿ ಒಂದು ಪೂರ್ಣ ಮುಹೂರ್ತವಾಗಿರುವ ‘ಅಕ್ಷಯ ತದಿಗೆ’ ಅಥವಾ ‘ಅಕ್ಷಯ ತೃತೀಯ’ದಲ್ಲಿ ಎಳ್ಳು ತರ್ಪಣ ನೀಡುವ, ಉದಕ ಕುಂಭದಾನ ಮತ್ತು ಮೃತ್ತಿಕಾ ಪೂಜೆ ಮಾಡುವ, ಅದೇ ರೀತಿ ದಾನ ನೀಡುವ ಪರಂಪರೆ ಇದೆ. ಈ ಹಿನ್ನೆಲೆಯಲ್ಲಿ ಸಂಬಂಽತ ಶಾಸವನ್ನು
ತಿಳಿದುಕೊಳ್ಳೋಣ.

ಇಲ್ಲಿ ಮಹತ್ವವಾದ ಅಂಶವೇನೆಂದರೆ, ಆಪತ್ಕಾಲಕ್ಕಾಗಿನ ಧರ್ಮಾಚರಣೆಯಲ್ಲಿ ಕೆಲವು ಪರ್ಯಾಯಗಳನ್ನು ಹಿಂದೂ ಧರ್ಮವು ಹೇಳಿದೆ. ಇದನ್ನು ‘ಆಪದ್ಧರ್ಮ’ ಎಂದು ಹೇಳುತ್ತಾರೆ. ಆಪದ್ಧರ್ಮ ಅಂದರೆ ‘ಆಪದಿ ಕರ್ತವ್ಯೋ ಧರ್ಮಃ’ ಅಂದರೆ ವಿಪತ್ತಿನಲ್ಲಿ ಆಚರಣೆಯಲ್ಲಿ ತರುವಂಥ ಧರ್ಮ. ಕೆಲವೊಮ್ಮೆ ಅನಿವಾರ್ಯ ಪರಿಸ್ಥಿತಿಗಳು ಎದುರಾದಾಗ ಅಥವಾ ಸಂಚಾರ ನಿರ್ಬಂಧಗಳು ಇದ್ದಾಗ, ಸಂಪತ್ಕಾಲದಲ್ಲಿ ಹೇಳಲಾದಂತೆ ಕೆಲವೊಂದು ಧಾರ್ಮಿಕ ಕಾರ್ಯಗಳನ್ನು ಆ ಸಮಯದಲ್ಲಿ ಮಾಡಲಾಗದಿರಬಹುದು.

ಅಂಥ ವೇಳೆ, ಧರ್ಮಾಚರಣೆ ಎಂದು ಏನೆಲ್ಲ ಮಾಡಬಹುದು ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಇದರಿಂದ, ಹಿಂದೂಧರ್ಮವು ಮನುಷ್ಯನ ಬಗ್ಗೆ
ಎಷ್ಟೊಂದು ಆಳವಾಗಿ ವಿಚಾರ ಮಾಡಿದೆ ಎಂಬುದು ಅರಿವಾಗುತ್ತದೆ ಮತ್ತು ಹಿಂದೂಧರ್ಮದ ಏಕಮೇವಾದ್ವಿತೀಯ ವೈಶಿಷ್ಟ್ಯವೂ ಗಮನಕ್ಕೆ ಬರುತ್ತದೆ.
ಅಕ್ಷಯ ತೃತೀಯದಂದು ಇಡೀ ದಿನ ಶುಭಮುಹೂರ್ತವೇ ಆಗಿರುತ್ತದೆ. ಆದ್ದರಿಂದ ಈ ತಿಥಿಯಂದು ಧಾರ್ಮಿಕ ಕಾರ್ಯಗಳನ್ನು ಮಾಡುವಾಗ ಮುಹೂರ್ತವನ್ನು ನೋಡಬೇಕಾಗುವುದಿಲ್ಲ. ಈ ದಿನ ದಂದು ಹಯಗ್ರೀವ ಅವತಾರ, ನರ-ನಾರಾಯಣ ಪ್ರಕಟೀಕರಣ ಮತ್ತು ಪರಶುರಾಮರ ಅವತಾರ ಆಗಿವೆ. ಈ ತಿಥಿಯಂದು ಬ್ರಹ್ಮ ಮತ್ತು ವಿಷ್ಣುವಿನ ಮಿಶ್ರಲಹರಿಗಳು ಉಚ್ಚದೇವತೆಗಳ ಲೋಕದಿಂದ ಪೃಥ್ವಿಯ ಮೇಲೆ ಬರುತ್ತವೆ.

ಆದ್ದರಿಂದ, ಪೃಥ್ವಿಯ ಮೇಲಿನ ಸಾತ್ವಿಕತೆಯು ಹೆಚ್ಚಾಗುತ್ತದೆ. ಈ ಕಾಲಮಹಾತ್ಮೆಯಿಂದಾಗಿ ಈ ತಿಥಿಯಂದು ಪವಿತ್ರಸ್ನಾನ ಮಾಡಿ, ದಾನಗಳಂಥ ಧರ್ಮಕಾರ್ಯ ಗಳನ್ನು ಮಾಡಿದರೆ ಅವುಗಳಿಂದ ಹೆಚ್ಚು ಆಧ್ಯಾತ್ಮಿಕ ಲಾಭವಾಗುತ್ತದೆ. ಈ ತಿಥಿಯಂದು ದೇವತೆಗಳನ್ನು ಮತ್ತು ಪಿತೃಗಳನ್ನು ಉದ್ದೇಶಿಸಿ
ಮಾಡಿದ ಎಲ್ಲ ಕರ್ಮಗಳೂ ಅಕ್ಷಯವಾಗುತ್ತವೆ.

ಆಚರಿಸುವ ಬಗೆ 
ಕಾಲವಿಭಾಗದ ಪ್ರಾರಂಭದ ದಿನವು ಭಾರತೀಯರಿಗೆ ಪವಿತ್ರವಾಗಿದೆ. ಆದುದರಿಂದ ಇಂಥ ತಿಥಿಗಳಂದು ಸ್ನಾನ-ದಾನಾದಿ ಧರ್ಮಕಾರ್ಯಗಳನ್ನು ಮಾಡಬೇಕೆಂದು ಹೇಳಲಾಗಿದೆ. ಈ ದಿನದ ವಿಽಯೆಂದರೆ ಪವಿತ್ರ ನೀರಿನಲ್ಲಿ ಸ್ನಾನ, ಶ್ರೀವಿಷ್ಣುವಿನ ಪೂಜೆ, ಜಪ, ಹೋಮ, ದಾನ ಮತ್ತು ಪಿತೃತರ್ಪಣ. ಈ ದಿನ ಅಪಿಂಡಕ ಶ್ರಾದ್ಧವನ್ನು ಮಾಡಬೇಕು. ಅದು ಸಾಧ್ಯವಿಲ್ಲದಿದ್ದರೆ, ಕನಿಷ್ಠಪಕ್ಷ ಎಳ್ಳಿನ ತರ್ಪಣವನ್ನಾದರೂ ಕೊಡಬೇಕು. ದಾನವು ಸತ್ಪಾತ್ರರಿಗೆ ಸಲ್ಲಬೇಕು.

ಸಂತರಿಗೆ ಅಥವಾ ಸಮಾಜದಲ್ಲಿ ಧರ್ಮಪ್ರಸಾರವನ್ನು ಮಾಡುವ ಆಧ್ಯಾತ್ಮಿಕ ಸಂಸ್ಥೆಗಳಿಗೆ ಮಾಡುವ ದಾನವು ಇಂಥ ‘ಸತ್ಪಾತ್ರ ದಾನ’ ಎನಿಸಿಕೊಳ್ಳು ತ್ತದೆ. ಸತ್ಪಾತ್ರ ದಾನವನ್ನು ಮಾಡುವುದರಿಂದ ದಾನದ ಕರ್ಮವು ಅಕರ್ಮಕರ್ಮವಾಗುತ್ತದೆ. ಅಕರ್ಮಕರ್ಮವೆಂದರೆ ಪಾಪ-ಪುಣ್ಯಗಳ ಲೆಕ್ಕಾಚಾರವು ತಗುಲದಿರುವುದು. ಇದರಿಂದ ದಾನ ವನ್ನು ನೀಡುವವನು ಯಾವುದೇ ಬಂಧನದಲ್ಲಿ ಸಿಲುಕದೇ, ಅವನ ಆಧ್ಯಾತ್ಮಿಕ ಉನ್ನತಿಯಾಗಲು ಸಹಾಯವಾಗುತ್ತದೆ.

ಅಕ್ಷಯ ತದಿಗೆಯು ಸೀಯರಿಗೆ ಮಹತ್ವದ್ದಾಗಿದೆ. ಸ್ತ್ರೀಯರು ಚೈತ್ರದಲ್ಲಿ ಕೂರಿಸಿದ ಚೈತ್ರಗೌರಿಯನ್ನು ಈ ದಿನ ವಿಸರ್ಜನೆ ಮಾಡುತ್ತಾರೆ. ಇದರ ಪ್ರಯುಕ್ತ ಅರಿಶಿನ-ಕುಂಕುಮ ನೀಡುವ ಕಾರ್ಯಕ್ರಮವನ್ನು ಮಾಡುತ್ತಾರೆ. ಅಕ್ಷಯ ತದಿಗೆಯಂದು ದಾನ ಮಾಡುವುದರಿಂದ ಅಧಿಕ ಪುಣ್ಯವು ಸಿಗುತ್ತದೆ. ಈ ದಿನದಂದು ಮಾಡಿದ ದಾನವು ಯಾವಾಗಲೂ ಕ್ಷಯವಾಗುವುದಿಲ್ಲ, ವ್ಯಕ್ತಿಯ ಪುಣ್ಯದ ಸಂಗ್ರಹವು ಹೆಚ್ಚಾಗುತ್ತದೆ. ಯಾವುದಾದರೊಂದು ಜೀವದ
ಹಿಂದಿನ ಕರ್ಮಗಳು ಒಳ್ಳೆಯವಾಗಿದ್ದರೆ, ಅವನ ಪುಣ್ಯದ ಸಂಗ್ರಹವು ಹೆಚ್ಚಾಗುತ್ತದೆ. ಇದರಿಂದ ಅವನಿಗೆ ಸ್ವರ್ಗಪ್ರಾಪ್ತಿ ಆಗಬಹುದು.

ಅಕ್ಷಯ ತದಿಗೆಯ ದಿನದಂದು ಎಳ್ಳು ತರ್ಪಣವನ್ನು ನೀಡುವುದು ವಾಡಿಕೆ. ಇದಕ್ಕೊಂದು ಮಹತ್ವವಿದೆ. ಈ ದಿನದಂದು ಉಚ್ಚಲೋಕದಿಂದ ಸಾತ್ವಿಕತೆ ಯು ಬರುತ್ತಿರುತ್ತದೆ. ಈ ಸಾತ್ವಿಕತೆಯನ್ನು ಗ್ರಹಣ ಮಾಡಲು ಭುವರ್ಲೋಕದಲ್ಲಿನ ಅನೇಕ ಜೀವಗಳು ಪೃಥ್ವಿಯ ಸಮೀಪಕ್ಕೆ ಬರುತ್ತವೆ. ಭುವರ್ಲೋಕ ದಲ್ಲಿರುವ ಬಹುತೇಕ ಜೀವ ಗಳು ಮನುಷ್ಯರ ಪೂರ್ವಜರಾಗಿರುತ್ತಾರೆ ಮತ್ತು ಅವರು ಪೃಥ್ವಿಯ ಸಮೀಪ ಬರುವುದರಿಂದ ಮನುಷ್ಯರಿಗೆ ತೊಂದರೆ ಯಾಗುವ ಸಾಧ್ಯತೆ ಇರುತ್ತದೆ. ಪೂರ್ವಜರ ಋಣವೂ ಮನುಷ್ಯರ ಮೇಲೆ ಬಹಳಷ್ಟು ಇರುತ್ತದೆ.

ಈ ಋಣವನ್ನು ತೀರಿಸಲು ಮನುಷ್ಯನು ಪ್ರಯತ್ನ ಮಾಡುವುದು ಈಶ್ವರನಿಗೆ ಅಪೇಕ್ಷಿತವಾಗಿದೆ. ಪೂರ್ವಜರಿಗೆ ಸದ್ಗತಿ ಸಿಗಬೇಕೆಂದು ಅಕ್ಷಯ ತದಿಗೆಯ ದಿನ ಎಳ್ಳು ತರ್ಪಣವನ್ನು ನೀಡಲಾಗುತ್ತದೆ.

ಎಳ್ಳು ತರ್ಪಣ ನೀಡುವ ವಿಧಾನ
ಒಂದು ತಟ್ಟೆಯನ್ನು ತೆಗೆದುಕೊಂಡು ಅದರಲ್ಲಿ ವಿಷ್ಣು, ಬ್ರಹ್ಮ ಅಥವಾ ದತ್ತನ ಆವಾಹನೆಯನ್ನು ಮಾಡಬೇಕು. ಆಮೇಲೆ ದೇವತೆಗಳು ಸೂಕ್ಷ್ಮ ಸ್ವರೂಪದಲ್ಲಿ ಆ ತಟ್ಟೆಯಲ್ಲಿ ಬಂದಿದ್ದಾರೆಂಬ ಭಾವವನ್ನು ಇಟ್ಟುಕೊಂಡು, ಕೈಯಲ್ಲಿ ಎಳ್ಳನ್ನು ತೆಗೆದುಕೊಂಡು ಅವರ ಚರಣಗಳ ಮೇಲೆ ಅರ್ಪಿಸಬೇಕು. ಇನ್ನೊಂದು ತಟ್ಟೆಯನ್ನು ತೆಗೆದುಕೊಂಡು ನಮ್ಮ ಪೂರ್ವಜರ ಆವಾಹನೆಯನ್ನು ಮಾಡಬೇಕು. ಆಮೇಲೆ ಪೂರ್ವಜರು ತಟ್ಟೆಯಲ್ಲಿ ಬಂದಿದ್ದಾರೆಂಬ ಭಾವವನ್ನು ಇಟ್ಟುಕೊಂಡು, ದೇವತೆಗಳ ತತ್ವದಿಂದ ಭರಿತವಾದ ಎಳ್ಳನ್ನು ಅವರಿಗೆ ಅರ್ಪಿಸಬೇಕು. ಅಂದರೆ ಸಾತ್ವಿಕವಾಗಿರುವ ಈ ಎಳ್ಳನ್ನು ಕೈಯಲ್ಲಿ ತೆಗೆದುಕೊಂಡು ಅದರ ಮೇಲಿನಿಂದ ತಟ್ಟೆಯಲ್ಲಿ ನಿಧಾನವಾಗಿ ನೀರನ್ನು ಬಿಡಬೇಕು ಮತ್ತು ಆ ಸಮಯದಲ್ಲಿ ಪೂರ್ವಜರಿಗೆ ಸದ್ಗತಿ
ನೀಡಬೇಕೆಂದು ಬ್ರಹ್ಮ, ವಿಷ್ಣು ಅಥವಾ ಇವರಿಬ್ಬರ ಅಂಶವಿರುವ ದತ್ತನಿಗೆ ಪ್ರಾರ್ಥನೆಯನ್ನು ಮಾಡಬೇಕು.

ಅಕ್ಷಯ ತದಿಗೆಯಂದು ಮೃತ್ತಿಕಾಪೂಜೆ ಮಾಡುವ, ಮಣ್ಣಿನಲ್ಲಿ ಹೊಂಡಮಾಡಿ ಬೀಜ ಬಿತ್ತನೆ ಮಾಡುವ ಮತ್ತು ಗಿಡ ನೆಡುವ ಪರಿಪಾಠವೂ ಇದೆ. ಯುಗಾದಿಯ ಶುಭಮುಹೂರ್ತದಂದು ಬಾಕಿ ಉಳಿದ ಹೊಲದ ಸಾಗುವಳಿಯ ಕೆಲಸವನ್ನು ಅಕ್ಷಯ ತೃತೀಯದ ಒಳಗೆ ಪೂರ್ಣಗೊಳಿಸಬೇಕು. ಹೀಗೆ ಸಾಗುವಳಿ ಮಾಡಿದ ಜಮೀನಿನಲ್ಲಿರುವ ಮಣ್ಣನ್ನು ಅಕ್ಷಯ ತೃತೀಯದಂದು ಕೃತಜ್ಞತೆಯ ಭಾವ ದಿಂದ ಪೂಜಿಸಬೇಕು. ನಂತರ, ಪೂಜಿಸಿದ ಮಣ್ಣಿನಲ್ಲಿ ಹೊಂಡಗಳನ್ನು ಮಾಡಿ ಬೀಜಗಳನ್ನು ಬಿತ್ತಬೇಕು. ಹೀಗೆ ಅಕ್ಷಯ ತೃತೀಯದ ಮುಹೂರ್ತದಲ್ಲಿ ಬೀಜಬಿತ್ತನೆ ಪ್ರಾರಂಭಿಸಿದರೆ, ಆ ದಿನ ವಾತಾವರಣ ದಲ್ಲಿ ಸಕ್ರಿಯವಾಗಿರುವ ದೈವೀಶಕ್ತಿಯು ಬೀಜಗಳಲ್ಲಿ ಸೇರಿಕೊಳ್ಳುತ್ತದೆ ಮತ್ತು ಅದರಿಂದಾಗಿ ಸಮೃದ್ಧವಾದ ಫಸಲು ಬರುತ್ತದೆ. ಇದೇ ರೀತಿಯಲ್ಲಿ, ಈ ದಿನದಂದು ಹೊಂಡಗಳನ್ನು ಮಾಡಿ ಹಣ್ಣಿನ ಗಿಡಗಳನ್ನು ನೆಟ್ಟರೆ, ತೋಟದಲ್ಲಿ ಹಣ್ಣಿನ ಉತ್ಪಾದನೆ ಹೇರಳ ವಾಗುತ್ತದೆ.

(ಲೇಖಕರು: ವಕ್ತಾರರು, ಸನಾತನ ಸಂಸ್ಥೆ)