Thursday, 21st November 2024

ಜಾತಿಸೃಷ್ಟಿ, ಅಂಬೇಡ್ಕರ‍್ ಮತ್ತು ದಲಿತ ಪ್ರಜ್ಞೆಯ ವಿನ್ಯಾಸಗಳು

ದಾಸ್ ಕ್ಯಾಪಿಟಲ್

dascapital1205@gmail.com

‘ಜಾತಿಯನ್ನು ಹುಟ್ಟುಹಾಕಿದವನು ಬ್ರಾಹ್ಮಣ, ಮುಖ್ಯವಾಗಿ ಮನು. ಆದುದರಿಂದ ಮನುವನ್ನೂ, ಬ್ರಾಹ್ಮಣರನ್ನೂ, ಇವರಿಂದ ಹುಟ್ಟಿದ ಜಾತಿಯನ್ನೂ ಸರ್ವನಾಶ ಮಾಡದಿದ್ದಲ್ಲಿ ಈ ಸಮಾಜದಲ್ಲಿ ಯಾರೂ ಸುಖವಾಗಿ ಬದುಕಲು ಸಾಧ್ಯವಿಲ್ಲ’ ಎಂಬ ಸುಳ್ಳುಸುದ್ದಿಯೊಂದು ಹಲವು ವರ್ಷಗಳಿಂದ ಪ್ರಚಾರಕ್ಕೆ ಬಂದು ಈಗ ತುರಿಯಾವಸ್ಥೆಯನ್ನು ಮುಟ್ಟಿದೆ.

ದಲಿತರು ರಾಷ್ಟ್ರದ ಒಂದು ಭಾಗವಾಗಿ ತಾವೇನೇ ಮಾಡಿದರೂ ಅದು ತಮಗೇ ಹಾನಿಯನ್ನುಂಟು ಮಾಡುತ್ತದೆಂಬುದನ್ನೂ ಮರೆತು ತಮ್ಮ ಜಾತಿಯನ್ನಾಧರಿಸಿದ ಮೀಸಲಾತಿಗೆ ಒತ್ತುಕೊಟ್ಟು ಸಂಘರ್ಷಕ್ಕಿಳಿಯುತ್ತಲೇ ಇರುತ್ತಾರೆ. ಜಾತಿ ಹುಟ್ಟಿಕೊಂಡ ಬಗೆಗೆ ಅಂಬೇಡ್ಕರ್ ತುಂಬಾ ಚೆನ್ನಾಗಿ ಓದಿಕೊಂಡವರು ಮಾತ್ರವಲ್ಲ, ಜಾತಿಯ ಬಗ್ಗೆ ಮಾತಾಡಲು ಪೂರ್ಣ ಪ್ರಮಾಣದಲ್ಲಿ ನೈತಿಕತೆಯುಳ್ಳವರು. ಎಲ್ಲಾ ದಲಿತರೂ ಅಂಬೇಡ್ಕರರಂತೆ ಯೋಚಿಸಲಾರರು; ಅಂಬೇಡ್ಕರರು ದಲಿತರಂತೆ ಯೋಚಿಸಿ ದವರಲ್ಲ.

ಕರ್ಮದಲ್ಲಿ ಬ್ರಾಹ್ಮಣತ್ವ ಹೊಂದಿದ ದಲಿತರನ್ನು, ಕರ್ಮದಲ್ಲಿ ಶೂದ್ರತ್ವವನ್ನು ಹೊಂದಿದ ಬ್ರಾಹ್ಮಣರನ್ನು ಮನುಸ್ಮೃತಿ ಹೇಳುತ್ತದೆ. ಸಮಾಜದಲ್ಲಿ ಇದನ್ನು ಕಾಣಬಹುದು. ಜಾತಿಸೃಷ್ಟಿಯ ಬಗ್ಗೆ ಅಂಬೇಡ್ಕರ್ ಮಾತಿದು: ನಿಮ್ಮ ಮೇಲೆ ಒತ್ತಾಯ ದಿಂದ ನಾನು ದೃಢಪಟ್ಟು ಹೇಳಬಯಸುವುದೇನೆಂದರೆ, ಮನುವು ಜಾತಿನಿಯಮವನ್ನು ಸೃಷ್ಟಿಸಲೂ ಸಾಧ್ಯವಿಲ್ಲ; ಹಾಗೆ ಮಾಡಲು ಅವನಿಗೆ ಸಾಧ್ಯವೂ ಇರಲಿಲ್ಲ.

ಮನುವಿಗಿಂತ ಬಹಳ ಹಿಂದೆಯೇ ಜಾತಿಪದ್ಧತಿ ಯಿತ್ತು! ಮನು ರೂಢಿಯಲ್ಲಿದ್ದ ಅದನ್ನು ಬರೀ ಎತ್ತಿಹಿಡಿದ, ಮತ್ತು ತಾತ್ತ್ವಿಕ ಚೌಕಟ್ಟನ್ನಿಟ್ಟ ಮಾತ್ರ. ಆದರೆ ಸತ್ಯವಾಗಿಯೂ, ಖಂಡಿತವಾಗಿಯೂ ಅವನು ಈಗಿರುವ ಹಿಂದೂ ಸಮಾಜ ವ್ಯವಸ್ಥೆಯನ್ನು ನಿರ್ಮಿಸಿದವನೂ ಅಲ್ಲ; ಹಾಗೆ ಮಾಡಲು ಅವನಿಗೆ ಶಕ್ಯವೂ ಇರಲಿಲ್ಲ. ಜಾತಿಯ ಹುಟ್ಟು, ಬೆಳವಣಿಗೆ, ಹಬ್ಬುವಿಕೆ ಎಂಬುದು ಒಬ್ಬ ವ್ಯಕ್ತಿಯ ಬುದ್ಧಿತನಕ್ಕೂ, ಒಂದು ವರ್ಗದ ಶಕ್ತಿಗೂ ಮೀರಿ ನಿಂತ ಮಹಾನ್ ವ್ಯವಸ್ಥೆ. ಹಾಗೆಯೇ ಬ್ರಾಹ್ಮಣನು ಈ ವ್ಯವಸ್ಥೆಯನ್ನು ಸೃಷ್ಟಿಮಾಡಿದನೆಂಬುದೂ ಸುಳ್ಳು.

ಮನುವಿನ ಬಗ್ಗೆ ನಾನು ಹೇಳಿದ ಮೇಲೆ ಹೆಚ್ಚೇನೂ ಉಳಿದಿಲ್ಲ. ಈ ದುರ್ವಾದವೂ ಮೋಸದ್ದು, ಕಿಡಿಗೇಡಿತನದ್ದು. ತರ್ಕವಿಲ್ಲದ ಅವಿವೇಕ ಮತ್ತು ದುರುದ್ದೇಶದಿಂದ ಕೂಡಿದ್ದು ಎಂದಷ್ಟೇ ಹೇಳುವೆ. ಬ್ರಾಹ್ಮಣರು ಎಷ್ಟೋ ತಪ್ಪುಗಳನ್ನು ಮಾಡಿದ ಅಪರಾಧಿ ಗಳಿರಬಹುದು; ಇದ್ದಾರೆಂದೇ ಹೇಳಲು ನನಗೆ ಧೈರ್ಯವಿದೆ. ಆದರೆ ಜಾತಿಯನ್ನು ಅವರು ಬ್ರಾಹ್ಮಣೇತರ ಪ್ರಜಾವರ್ಗದ ಮೇಲೆ ಹೇರುವುದೆಂಬುದು ಬ್ರಾಹ್ಮಣರ ಶಕ್ತಿಗೆ ಮೀರಿದ್ದಾಗಿತ್ತು (Uಜಿಠಿಜ್ಞಿಜo Zb ಖmಛಿಛ್ಚಿeಛಿo).

ಜಾತಿ ವೃತ್ತಿಗೆ ಸಂಬಂಧಿಸಿದ್ದು. ಒಂದೇ ಕುಲದವರು ಒಂದೇ ಗುರುವಿನೆಡೆ ವಿದ್ಯಾರ್ಜನೆ ಮಾಡಿದ ವ್ಯವಸ್ಥೆಯನ್ನು ಗುರುಕುಲ ವೆಂದರು. ಆ ಗುರುವೇ ಕುಲಪತಿಯೆನಿಸಿದ. ಬ್ರಿಟಿಷರು ಬಂದಮೇಲೆ ನಮ್ಮ ವ್ಯವಸ್ಥೆಯನ್ನೂ, ಬುದ್ಧಿಯನ್ನೂ ಕೆಡಿಸಿ ಜಾತಿದ್ವೇಷ ಹಬ್ಬಿಸಿ ಬೆಳೆಸಿದರು. ಅಲ್ಲಿಂದೀಚೆಗೆ ಬ್ರಾಹ್ಮಣದ್ವೇಷ, ಬ್ರಾಹ್ಮಣ ನಿರ್ನಾಮ, ಸಂಸ್ಕೃತ ದ್ವೇಷ, ದೇವಳಗಳ ನಾಶ ಇವೆಲ್ಲ ಚರಿತ್ರೆಯುದ್ದಕ್ಕೂ ಹರಿದು ಬಂದ ಪ್ರವಾಹವಾಗಿ ವರ್ತಮಾನದಲ್ಲಿ ಈ ಬಿಕ್ಕಟ್ಟು ಸೃಜಿಸಿದ ಅನಾಹುತಗಳಿಂದ ನಾವು ಒಂದಾಗಲು ಸಾಧ್ಯವೇ ಇಲ್ಲವೇ ನೋ ಎಂಬ ಸ್ಥಿತಿಯನ್ನು ತಲುಪಿದ್ದೇವೆ.

ದಲಿತರು ಜಾತಿಯನ್ನು ಮುಂದುಮಾಡಿಕೊಂಡು ಮೀಸಲಾತಿಗೆ ಆಗ್ರಹಿಸಿ ಮುಖ್ಯವಾಹಿನಿಯಲ್ಲಿ ಬೆರೆಯಲು ಅಸಾಧ್ಯ ವಾಗುತ್ತಿದೆ ಯೇನೋ ಅನಿಸುತ್ತಿದೆ. ಶೂದ್ರರು ಯಾರು? ಎಂಬುದಕ್ಕೆ ಅಂಬೇಡ್ಕರ್ ಉತ್ತರವಿದು: ಸೂರ್ಯವಂಶದ ಗೌರವಾನ್ವಿತ ದೊರೆಗಳ ಆರ್ಯಕುಲದವರೇ ಈ ಶೂದ್ರರು. ಒಂದು ಕಾಲದಲ್ಲಿ ಮೂರೇ ವರ್ಣಗಳಿದ್ದವು. ಶೂದ್ರರು ಕ್ಷತ್ರಿಯರೇ
ಆಗಿದ್ದರು. ಒಂದೊಮ್ಮೆ ಬ್ರಾಹ್ಮಣರಿಗೂ ಅವರಿಗೂ ದೀರ್ಘ ಕಾಲ ಮನಸ್ತಾಪವಾಗಿ, ಬ್ರಾಹ್ಮಣರಿಗೆ ಇವರು ನಾನಾ ಹಿಂಸೆ,
ಕ್ರೌರ್ಯ, ಅಪಮಾನಗಳನ್ನು ಮಾಡುತ್ತಾ ಬಂದ ಪ್ರಯುಕ್ತ, ಅವರ ಕಾಟ ತಡೆಯಲಾರದೆ ಬ್ರಾಹ್ಮಣರು ಅವರಿಗೆ ಉಪನಯನ, ಪೌರೋಹಿತ್ಯ, ಯಾಜನಗಳನ್ನು ನಿಲ್ಲಿಸಿ ಬಹಿಷ್ಕರಿಸಿದರು.

ಹೀಗಾಗಿ ಕ್ಷತ್ರಿಯರು ಪತಿತರಾದರು. ವೈಶ್ಯರಿಗಿಂತ ಕೆಳಗಾದರು (Ueಟ ಡಿಛ್ಟಿಛಿ ಠಿeಛಿ ಖebZo?). ಅಂಬೇಡ್ಕರರಿಗಿದ್ದ ಸಂಸ್ಕೃತ ಪಾಂಡಿತ್ಯ ನೆಹರೂ, ಗಾಂಧಿ, ಇಂದಿರಾ, ರಾಜೀವ್ ಯಾರಿಗೂ ಇರಲಿಲ್ಲ. ದಲಿತರು ಹೇಗೆ ಆದರು? ಎಂಬುದಕ್ಕೆ ಅಂಬೇಡ್ಕರ್ ವಾದವಿದು: ಅವರು ವೀರ ಕ್ಷತ್ರಿಯರಾಗಿ, ಮುಸ್ಲಿಂ ಆಕ್ರಮಣಕಾರರೊಡನೆ ಹೋರಾಡಿ ಸೋತು ಬಂದ ವೀರರಾಗಿ, ಸೋತು ಬಂದವರನ್ನು ಸಮಾಜ ಒಳಸೇರಿಸದೇ, ಮೂಢನಂಬಿಕೆಯಿಂದ ಹೊರಗಿಟ್ಟ ಪರಿಣಾಮ, ಒಂದು. ಅಥವಾ ಸಾಮೂಹಿಕವಾಗಿ ಬೌದ್ಧಮತ ಅಂಗೀಕರಿಸಿ, ಬ್ರಾಹ್ಮಣರೊಡನೆ ಘರ್ಷಣೆಯಾಗಿಯೂ ಹಾಗಾಗಿರಬಹುದು. ಅಥವಾ ಮಾಂಸಾಹಾರ, ಗೋಭಕ್ಷ್ಯಣಾದಿಗಳಿಂದ, ಬೌದ್ಧರಾಗಿಯೂ ಶೀಲ ಬದಲಾಗದೇ ಹಾಗಾಗಿರಲು ಸಾಕು ಇತ್ಯಾದಿ (‘ಅ Sಛಿ ಅqsZ’ ಚಿqs ಓಟಛ್ಞ್ಟಿZZb ಉoಠಿ).

ದಲಿತರು ಆತ್ಮವಿಮರ್ಶೆಯೊಂದಿಗೆ ಅಂಬೇಡ್ಕರರನ್ನು ಮೆಚ್ಚಿ ಆರಾಽಸುವಾಗ ಅವರ ಚಿಂತನೆಗಳನ್ನು ಅಳವಡಿಸಿಕೊಂಡರೆ ಬಹುಪಾಲು ಸಮಸ್ಯೆಗೆ ಪರಿಹಾರ ಸಾಧ್ಯವೇನೋ! ಆರ್ಥಿಕ ಸ್ಥಿರತೆ, ವೃತ್ತಿ ಖಾತರಿಗಳ ಅಭಯವನ್ನಿತ್ತು ನಿಜವಾಗಿ ಹಿಂದುಳಿದ ದಲಿತರನ್ನು ಮೇಲೆತ್ತಿ ಜಾತಿ ಅವರಿಗೆ ಮುಖ್ಯವಾಗದಂತೆ ವ್ಯವಸ್ಥೆಯನ್ನು ಸಮತೋಲನಗೊಳಿಸುವುದ ಸಾಧ್ಯವಿದೆಯೆಂದು ವಿವೇಕಾನಂದರು ಹೇಳುತ್ತಾರೆ.

ಜಾತ್ಯತೀತ ರಾಷ್ಟ್ರವಾಗಿ ಜಾತೀಯನ್ನೇ ಪ್ರಬಲ ಅಸವಾಗಿಸಿ ಭಿನ್ನಾಭಿಪ್ರಾಯಗಳಿಗೆ, ಸಂಘರ್ಷಗಳಿಗೆ ಎರವಾಗದಂತೆ
ಮಾಡಿಕೊಳ್ಳುವ ಸಾಮರ್ಥ್ಯ ಮತ್ತು ಚಿಂತನಾಶಕ್ತಿ ನಮ್ಮಲ್ಲಿದೆ. ಯಾವಾಗಲೂ ಇರುತ್ತದೆ ಕೂಡ. ಇದು ದಲಿತರಿಗೆ ಮಾತ್ರ
ವಲ್ಲ, ಎಲ್ಲ ಜಾತಿಯವರಿಗೂ ಅನ್ವಯಿಸುವ ಮಾತು. ಜಾತಿಯಿಂದ ಹುಟ್ಟಬಹುದಾದ ದ್ವೇಷ ಯಾರನ್ನು ಉಳಿಯಗೊಟ್ಟಿದೆ? ದ್ವೇಷದಿಂದಲೇ ಅಲ್ಲವೆ ರಾಷ್ಟ್ರ ರಾಷ್ಟ್ರಗಳು ಉರಿಯುತ್ತಿರುವುದು? ಭೂಮಿಯ ಮೇಲಿಂದಲೇ ಯಹೂದ್ಯ ಸಂತಾನವನ್ನು ತೊಡೆದುಬಿಡುವುದಾಗಿ ಘೋಷಿಸಿ, ಕೋಟ್ಯಂತರ ನಿರಪರಾಧಿಗಳನ್ನು ಸುಟ್ಟುಸಾಯಿಸಿದ ಕ್ರೈಸ್ತರು, ಮುಸ್ಲಿಮರದ್ದೂ ಇದೇ ಮನಸ್ಥಿತಿ. ಕ್ರೈಸ್ತನಾಗಿದ್ದ ಹಿಟ್ಲರನಿಗೆ ಅಂದಿನ ಕ್ರೈಸ್ತ ಮುಖಂಡರು ಹಿತವಚನ ಹೇಳಿ ಸರಿಪಡಿಸಬಹುದಿತ್ತಲ್ಲವೇ? ದಲಿತೋದ್ಧಾರಕ್ಕಾಗಿ ಗಾಂಧಿ, ಅಂಬೇಡ್ಕರ್ ಪ್ರಯತ್ನಿಸಿದರು ಎಂದ ಮಾತ್ರಕ್ಕೆ ಈ ರಾಷ್ಟ್ರ ಅವರನ್ನು ಗೌರವಾದರಿಸಿದ್ದಲ್ಲ.

ಜಾತೀಯತೆಯ ಮೂಲೋತ್ಪಾಟನೆಗೆ ಅವರು ನಿರಂತರ ಶ್ರಮಿಸಿದರೆಂಬುದೇ ಇಲ್ಲಿ ಮುಖ್ಯವಾಯಿತು. ಅವರ‍್ಯಾರೂ ಬ್ರಾಹ್ಮಣ ದ್ವೇಷ, ಸರಸ್ವತೀ ದ್ವೇಷ ಮಾಡಲಿಲ್ಲ. ಶ್ರೀರಾಮ-ಕೃಷ್ಣರು ಕ್ಷತ್ರಿಯರೇ ಆಗಿದ್ದರು. ಅವರನ್ನು ನಾವೆಲ್ಲ ಆರಾಧಿಸಿ ಪೂಜಿಸು ತ್ತಿಲ್ಲವೆ? ದ್ವೇಷವೇ ಒಂದು ಕ್ಯಾರೆಕ್ಟರ್ ಆಗಬಾರದು. ಅದು ತನ್ನನ್ನು ತಾನು ಸುಟ್ಟುಕೊಳ್ಳುತ್ತಾ ಸುತ್ತಮುತ್ತಲಿನ ವಾತಾವರಣ ವನ್ನೂ ಸುಡುತ್ತದೆ. ಈ ಸುಡುವ ಕ್ರಿಯೆ ಕೊನೆಗೊಳ್ಳುವುದು ಎಲ್ಲವೂ ಬೂದಿಯಾಗುವುದರೊಂದಿಗೆ. ಯಾರದ್ದೋ ‘ಎಡ’ ಚಿಂತನೆಗಳಿಗೆ ಮಾರುಹೋಗಿ ಬದುಕನ್ನು ನಿರಂತರ ಸಂಘರ್ಷದಲ್ಲಿ ಹಾಳುಮಾಡಿಕೊಳ್ಳುವುದೇಕೆ? ಬದುಕು ಎಲ್ಲದಕ್ಕಿಂತ ದೊಡ್ಡದು. ಜಾತಿಯೇ ಬದುಕಲ್ಲ; ಬದುಕು ಜಾತಿಯ ಮೇಲೂ ನಿಂತಿಲ್ಲ.

ಅಂಬೇಡ್ಕರ್ ಬಯಸಿದ್ದು ಜಾತಿವಿಹೀನ ಬದುಕನ್ನು. ಬಸವಣ್ಣನ ಕ್ರಾಂತಿಯೂ ಇದೇ ಹಿನ್ನೆಲೆಯದ್ದು. ದಲಿತರ ಮೇಲಾಗು ತ್ತಿರುವ ದೌರ್ಜನ್ಯಕ್ಕೆ ಬ್ರಾಹ್ಮಣರು ಹೇಗೆ ಕಾರಣರಾದಾರು? ವ್ಯವಸ್ಥಿತವಾಗಿ ನಮ್ಮನ್ನು ದಾರಿ ತಪ್ಪಿಸಿದವರ‍್ಯಾರು? ತಪ್ಪಿಸುತ್ತಿರುವವರ‍್ಯಾರು? ಇದೆಲ್ಲಾ ನಮ್ಮನಮ್ಮನ್ನು ಒಡೆಯುವ ಯಾರದ್ದೋ ಷಡ್ಯಂತ್ರ ವೆಂದು ಯೋಚಿಸಬೇಡವೇ? ಇದೆಲ್ಲ ರಾಷ್ಟ್ರೀಯ ಚರ್ಚೆಯ ವಿಷಯಾಂಶಗಳು. ಸಮಸ್ತ ಹಿಂದೂಗಳು ಒಂದಾಗಿ ಭಾರತೀಯ ಅಧ್ಯಾತ್ಮ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಔನ್ನತ್ಯಕ್ಕೆ ಒಯ್ಯಬೇಕಿದೆ.

ಇದಕ್ಕೆ ಸರಕಾರಗಳು, ಮಾಧ್ಯಮಗಳು, ಭಾರತೀಯರೆಲ್ಲರೂ ಕೈಗೂಡಿಸಬೇಕಿದೆ. ಅಂಬೇಡ್ಕರರ ದಲಿತೋದ್ಧಾರದ ಕನಸು ಅಂಬೇಡ್ಕರ್ ಚಿಂತನೆಗಳಿಂದಲೇ ಆರಂಭವಾಗಬೇಕಿದೆ. ಬಹುಕಾಲದ ಹಿಂದೆಯೇ ವರ್ಣಗಳು ಮಿಶ್ರಿತವಾಗಿರುವುದರಿಂದ ಹೀಗೆಯೇ ಆಯಿತು ಅಂತ ನಿರ್ಣಯಿಸಲು ಸಾಧ್ಯವಾಗುವುದಿಲ್ಲ. ಸತ್ಯ, ದಾನ, ಕ್ಷಮೆ, ಶೀಲ, ಕರುಣೆ, ತಪಸ್ಸು, ದಾಕ್ಷಿಣ್ಯ ಇಂಥ ಗುಣಗಳು ಯಾವನಲ್ಲಿರುತ್ತವೋ ಅವನೇ ಬ್ರಾಹ್ಮಣನು, ಇಲ್ಲದವನು ಅಬ್ರಾಹ್ಮಣ. ಶೂದ್ರನಲ್ಲೂ ಇವು ಇರುವುದಾದರೆ ಅವನೇ
ಬ್ರಾಹ್ಮಣ. ಬ್ರಾಹ್ಮಣನಲ್ಲಿ ಇಲ್ಲವಾದರೆ ಅವನೇ ಶೂದ್ರ.

ಬ್ರಾಹ್ಮಣನು ತನ್ನ ಚಾರಿತ್ರ್ಯ ಪತನಕ್ಕೆ ಕಾರಣವಾಗುವ ಅನ್ಯವೃತ್ತಿಗಳಲ್ಲಿ ಬಿದ್ದರೆ, ಡಂಭಾಚಾರಿಯಾದರೆ ಶೂದ್ರನಿಗಿಂತ
ಕಡೆಯಾಗುತ್ತಾನೆ. ಇನ್ನೊಬ್ಬನು ಶೂದ್ರನಾಗಿ ಹುಟ್ಟಿಯೂ ಮನೋನಿಗ್ರಹ, ಇಂದ್ರಿಯನಿಗ್ರಹದೊಂದಿಗೆ, ಸತ್ಯ-ಧರ್ಮಗಳಲ್ಲಿ ಸದಾ ಇರುತ್ತಾನಾದರೆ ಅವನೇ ಬ್ರಾಹ್ಮಣನಾಗುತ್ತಾನೆ. ಅಂದರೆ ಬ್ರಾಹ್ಮಣ್ಯಕ್ಕೆ ಕಾರಣ ಚಾರಿತ್ರ್ಯವೇ ಎಂದಂತಾಯಿತು.
ಮಹಾಭಾರತದ ಧರ್ಮವ್ಯಾಧ, ರಾಮಾಯಣದ ಶಬರಿಯಂಥವರು ಇದಕ್ಕೆ ಜ್ವಲಂತ ನಿದರ್ಶನ. ಎಲ್ಲಾ ಶಬರರೂ
ಶಬರಿಯಂತಾಗಲಿಲ್ಲ, ಎಲ್ಲಾ ವ್ಯಾಧರು ಧರ್ಮವ್ಯಾಧರಾಗಲಿಲ್ಲ.

ಒಂದು ಕಾಲದಲ್ಲಿ ಕ್ಷತ್ರಿಯರಾಗಿದ್ದು ಈಗ ದಲಿತರಾಗಿರುವವರು ಮತ್ತೆ ಏಕೆ ಕ್ಷತ್ರಿಯರಾಗಬಾರದು? ಅವರು ಸಂಕಲ್ಪ ಮಾಡುವರಾದರೆ ಸಮಸ್ಯೆ ತೀರುತ್ತದೆ. ಕುರುಬರಾಗಿ ಹುಟ್ಟಿ, ಬಹಮನಿ ಅರಸರ ಸೇನೆಯಲ್ಲಿ, ಸೇವೆಯಲ್ಲಿ ಮುಸ್ಲಿಮರಾಗಿ ಮತಾಂತರಗೊಂಡಿದ್ದ ಹಕ್ಕ-ಬುಕ್ಕರಿಗೆ ವಿದ್ಯಾರಣ್ಯರು ಕ್ಷಾತ್ರದೀಕ್ಷೆ ಕೊಟ್ಟು ಅರಸರನ್ನಾಗಿಸಿದಾಗ ಅಧ್ಯಾತ್ಮ ಅಡ್ಡಿಬರಲಿಲ್ಲ! ಈಗಲೂ ಅಷ್ಟೇ. ನಾಯಕರು, ಬೇಡರು, ರೆಡ್ಡಿಗಳು, ತಿಗಳರು, ನಾಯ್ಡುಗಳು, ಜಾಟರು, ಹೂಣರು, ಪಟೇಲರು ಮುಂತಾದ ದಲಿತ ವರ್ಗದವರು ಅಂಬೇಡ್ಕರರ ಚಿಂತನೆಯ ದಾರಿಯಲ್ಲಿ ಕ್ಷತ್ರಿಯರಾಗಬೇಕು.

ಇವರನ್ನು ಸರಕಾರಿ ಜಾತಿಯಾಧಾರದ ಮೇಲೆ ಒಡೆದು ಮೀಸಲಾತಿಗೆ ಬಡಿದಾಡುವಂಥ ದುಸ್ಥಿತಿಗೆ ತಂದ ದುಷ್ಟ ರಾಜಕಾರಣ
ಸಾಯಬೇಕು. ನಮ್ಮ ಕಾಲದ ಎರಡು ಮಹಾನ್ ವ್ಯಕ್ತಿತ್ವಗಳೆಂದರೆ, ಇರುವುದೆಲ್ಲವನ್ನೂ ಕಳಚಿಕೊಳ್ಳುತ್ತಾ ಲೌಕಿಕದ ನಂಟನ್ನು ಬಿಟ್ಟು ಮೇರುಸದೃಶವಾದ ವ್ಯಕ್ತಿತ್ವವನ್ನು ತಮ್ಮ ರೂಪಕಗಳಿಂದಲೇ ಗಳಿಸಿದ ಗಾಂಧಿ ಹಾಗೂ ಇಲ್ಲದಿರುವುದನ್ನು ಒಟ್ಟುಗೂಡಿ ಸುತ್ತಾ ಮನುಷ್ಯ ಬದುಕಿನ ಔನ್ನತ್ಯವನ್ನು, ಉತ್ಕರ್ಷವನ್ನು ಅದರ ಆತ್ಯಂತಿಕವಾದ ನೆಲೆಯಲ್ಲಿ ಆರ್ಜಿಸಿದ ಮಹರ್ ಎಂಬ ದಲಿತ ಜನಾಂಗದ ಅಭಿಮಾನ ಮತ್ತು ಹೆಮ್ಮೆಯಾಗಿ ಭಾರತರತ್ನರೆನಿಸಿದ ಡಾ. ಅಂಬೇಡ್ಕರ್.

ಈರ್ವರೂ ಮನುಷ್ಯ ಜೀವಿತದಲ್ಲಿ ಏರಬಹುದಾದ ಎತ್ತರವನ್ನೂ ಏರಿ ಪರಮಗಮ್ಯವನ್ನು ಕಂಡವರು. ಈ ಎರಡೂ ಪರಿವರ್ತನೆಗಳಾದ ಕಾಲದಲ್ಲೇ ನಾವು ಬದುಕುತ್ತಿದ್ದೇವೆ. ಇದು ಪ್ರತಿ ಭಾರತೀಯನಿಗೂ ಮಾದರಿಯಾಗಬೇಕು. ಈ ಅರಿವು ಹುಟ್ಟಿದರೆ ಎಲ್ಲರೂ ಸೇರಿ ಹೊಸ ಭಾರತ ಕಟ್ಟಲು ಸಾಧ್ಯವಿದೆ. ನಮ್ಮನಮ್ಮ ಮಾನವೀಯತೆಗೆ ಸವಾಲಾಗಿ ಅಸ್ಪೃಶ್ಯತೆ
ನಿಂತಿದೆ. ಸವರ್ಣೀಯರನ್ನು ಎದುರಿಸುವ ಸ್ವಾಭಿಮಾನಪ್ರಜ್ಞೆ ದಲಿತರಲ್ಲಿ ಹುಟ್ಟಿ ಅವರು ಅಂಬೇಡ್ಕರರಂತೆ ಎಲ್ಲವನ್ನೂ
ಗಳಿಸುತ್ತಾ ಸಹನೀಯ ಬದುಕಿನ ಗತಿಯನ್ನು ಕಾಣಬೇಕು.

ಜಾತಿಯ ಭೂತ ಸಾಯಬೇಕೆಂದರೆ ಜಾತಿಯ ಬಗ್ಗೆ ಮಾತನಾಡುವುದನ್ನು ಬಿಡಬೇಕು.

ಆಲೋಚಿಸಿ: ಸಾರ್ವಜನಿಕ ಸ್ಥಳಗಳಲ್ಲಿ ಯಾರಿಗೂ ಜಾತಿಪ್ರಜ್ಞೆ ಹುಟ್ಟುವುದೇ ಇಲ್ಲ. ಹುಟ್ಟಲು ಸಾಧ್ಯವೂ ಇಲ್ಲ. ನಾವೆಲ್ಲ ಮನುಷ್ಯರು ಎಂಬ ಭಾವದಲ್ಲಿ, ಆ ಅರಿವಲ್ಲಿ ಬದುಕನ್ನು ನೋಡಿದರೆ ಜಾತಿ ಮಾಯವಾಗುತ್ತದೆ. ಜಾತಿಯ ಭೂತ ಉಳಿದಿರುವುದು ಕೆಲ ವೊಂದು ರಾಜಕಾರಣಿಗಳ ವಿಷತುಂಬಿದ ತಲೆಯಲ್ಲಿ, ಜಾತಿಯ ರಾಜಕೀಯವನ್ನೇ ಗುರಿಯಾಗಿಟ್ಟು ಕೊಂಡು ಬರೆಯುವ ವರದಿಗಾರರಲ್ಲಿ. ನಾನು ಮುಸ್ಲಿಮ್, ನಾನು ಕ್ರೈಸ್ತ, ನಾನು ಹಿಂದೂ, ನಾನು ಆ ಜಾತಿ, ಈ ಮತ, ಆ ಪಂಥ ಅಂದರೆ ಹೊಟ್ಟೆ ತುಂಬುವುದಿಲ್ಲ.

ಇದೆಲ್ಲಾ ಹೊಟ್ಟೆ ತುಂಬಿದವರು ಅಮಾಯಕರನ್ನು ಪ್ರಚೋದಿಸಿ ಮಾಡುತ್ತಿರುವ ನೀಚ ರಾಜಕೀಯದ ಕುಕೃತ್ಯ. ಅಂಬೇಡ್ಕರರ
ಚಿಂತನೆಯಲ್ಲಿ ದಲಿತರು ಸಮಕಾಲೀನ ಭಾರತವನ್ನು ಪ್ರತಿನಿಧಿಸಬೇಕು. ಹಾಗಾದಾಗ ರಾಷ್ಟ್ರಕ್ಕೂ ಹಿತ, ದಲಿತರಿಗೂ
ಮುಖ್ಯವಾಹಿನಿಯಲ್ಲಿ ಸ್ಥಾನಮಾನ್ಯತೆ ಪ್ರಾಪ್ತಿಸಾಧ್ಯ. ದಲಿತ ಚಿಂತನೆ ಈ ದಿಸೆಯಲ್ಲಿ ಸಾಗುವುದಕ್ಕೆ ದಲಿತ ಚಿಂತಕರು,
ಮುಖಂಡರು ಹೆಜ್ಜೆಯಿಡಬೇಕು. ಈ ಮಾತು ದಲಿತರಿಗಷ್ಟೇ ಅಲ್ಲ, ಅಲ್ಪಸಂಖ್ಯಾತರಿಗೂ. ಅಂಬೇಡ್ಕರ್ ಅನುಭವಿಸಿದ
ಕಷ್ಟಗಳನ್ನು ಇಂದಿನ ದಲಿತರು ಅನುಭವಿಸುತ್ತಿಲ್ಲವೇನೋ!

ಅಂಬೇಡ್ಕರ್ ತಂದೆ-ತಾಯಿಗಳು ಮಗನನ್ನು ವಿದ್ಯಾವಂತನನ್ನಾಗಿಸಬೇಕೆಂಬ ಹಂಬಲವನ್ನು ಬಹುವಾಗಿ ಹೊಂದಿದ್ದರು. ಅಂಬೇಡ್ಕರರನ್ನು ಎತ್ತಿ ಮೆರೆಯಿಸಿ ಹೊಗಳಿ ಕೊಂಡಾಡುವ, ಮೀಸಲಾತಿ ಹೋರಾಟದಲ್ಲಿ ತಮ್ಮ ಜನಾಂಗಕ್ಕೆ ಅನುಕೂಲವಾಗಲೆಂದು ಬಯಸುವ ದಲಿತರು, ದಲಿತ ಚಿಂತಕರು, ದಲಿತ ಸಂಘಟನೆಗಳು ತಮ್ಮ ವರ್ಗದ ಮಕ್ಕಳನ್ನು ಕಲಿಕೆಯ ಕಡೆ ಸೆಳೆಯುವಂತೆ ದೊಡ್ಡಪ್ರಯತ್ನ ಮಾಡಬೇಕಿದೆ. ದಲಿತರ ಮುಖ್ಯಪಾತ್ರ ವಿರುವುದು ಅಂಬೇಡ್ಕರರ ಚಿಂತನೆಗಳನ್ನು ನಿಜಗೊಳಿ ಸುವುದರಲ್ಲಿ! ಬದುಕಿನ ಗತಿಬಿಂಬಕ್ಕೆ ತಂದುಕೊಳ್ಳುವಲ್ಲಿ!