Thursday, 12th December 2024

ಕುಡುಕರು- ಚಿಯರ್ಸ್ ಲೀಡರ್ಸ್

ತುಂಟರಗಾಳಿ

ಸಿನಿಗನ್ನಡ

ಇಂಡಿಯಾ ವರ್ಸಸ್ ಮೀಡಿಯಾ ಇದು ಸದ್ಯಕ್ಕೆ ಸಿನಿಮಾ ಮಾಡೋರಿಗೆ ಹೊಳಿತಾ ಇರೋ ಹೊಸ ಟೈಟಲ್ ಅಂದ್ರೆ ತಪ್ಪಿಲ್ಲ ಬಿಡಿ. ಅದರಲ್ಲೂ ಕನ್ನಡ ಚಿತ್ರರಂಗದಲ್ಲಿ ಯಾವುದಾದರೂ ಒಂದು ವಿಷಯ ಸದ್ದು ಮಾಡಿದರೆ ಸಾಕು, ಛೇಂಬರ್ ಬಾಗಿಲಲ್ಲಿ ‘ನಾಮ್ ಕೇ ವಾಸ್ತೇ’ ಸಿನಿಮಾ ಮಾಡೋರೆಲ್ಲ ಸಿನಿಮಾಗ
‘ಹೆಸರಿಟ್ಟು’ ಟೈಟಲ್ ಹಿಡ್ಕೊಂಡು ಕ್ಯೂ ನಿಂತ್ಕೊಂಡಿರ್ತಾರೆ. ಅಂಥವರು ಈಗಾಗಲೇ ಈ ಟೈಟಲ್ ಅನ್ನು ರಿಜಿಸ್ಟರ್ ಮಾಡಿಸಿರಲೂಬಹುದು. ಹಾಗೆ ನೋಡಿದರೆ ಚಿತ್ರರಂಗಕ್ಕೂ ಮೀಡಿಯಾಗೂ ಅಷ್ಟೇನೂ ದೂರ ಇಲ್ಲ.

ಹಳೆಯ ಸಿನಿಮಾಗಳಲ್ಲಿ ಮೀಡಿಯಾದವರಿಗೆ ಭಾರಿ ಗೌರವ ಕೊಡಲಾಗುತ್ತಿತ್ತು. ಆದರೆ ಈಗೀಗ ಮೀಡಿಯಾಗಳನ್ನು ಗೇಲಿ ಮಾಡುವ ದೃಶ್ಯಗಳು ಸಿನಿಮಾಗಳಲ್ಲಿ ಬೇಕಾದಷ್ಟು ಕಾಣಸಿಗುತ್ತವೆ. ವಿಮರ್ಶೆ ಬರೆದು ತಮ್ಮನ್ನು ಕಾಲೆಳೆಯುವ ಮೀಡಿಯಾದವರ ಕಾಲು ಎಳೆಯುವ ಅವಕಾಶ ಸಿಕ್ರೆ ಸಿನಿಮಾ ಮಂದಿ ಹೇಗೆ ಬಿಟ್ಟಾರು? ಅನಿಲ್ ಕಪೂರ್ ಅವರ ನಾಯಕ್ ಸಿನಿಮಾದಲ್ಲಿ ರಾಜಕಾರಣಿಗಳನ್ನು ಮೀಡಿಯಾದವನು ಮಟ್ಟ ಹಾಕುವ ಕೆಲಸವನ್ನು ತೋರಿಸಲಾಗಿತ್ತು. ಈಗ ರಾಜಕಾರಣಿ ಗಳು ಮೀಡಿಯಾದವರನ್ನು ಮಟ್ಟ ಹಾಕುತ್ತಿರುವ ಇಂಡಿಯಾ ವರ್ಸಸ್ ಮೀಡಿಯಾ ಈ ಕಥೆ ಇಟ್ಕೊಂಡು ಹೆಂಗೆ ಸಿನಿಮಾ ಮಾಡಬಹುದು ಅಂತ ಈಗಾಗಲೇ
ಕಾನಿಷ್ಕ ಹೊಟೇಲ್‌ನಲ್ಲಿ ರೂಮ್ ಹಾಕಿಕೊಂಡು ಅನೇಕರು ಕಥೆ ಬರೆಯಲು ಆರಂಭಿಸಿದ್ದರೆ ಅಚ್ಚರಿ ಏನಿಲ್ಲ.

ಹಾಗೆ ನೋಡಿದರೆ ಈ ವಿಷಯದಲ್ಲಿ ಬರೆಯೋಕೆ ಅಂತ ಹೆಚ್ಚಿನ ಕಥೆ ಏನೂ ಇರಲ್ಲ. ಇರೋ ಕಥೆಯನ್ನೇ ನೀಟಾಗಿ ಹೇಳಿದ್ರೆ ಸಾಕು. ಅದಕ್ಕೆ ಇನ್ನೂ ಒಂದಿಷ್ಟು ಮಸಾಲಾ ಹಾಕಿದರಂತೂ ಮಜಬೂತಾದ ಮನರಂಜನೆ ರೆಡಿ. ಇಂಡಿಯಾ ಅನ್ನೋ ಹೆಸರು ಭಾರತ್ ಅಂತ ಬದಲಾಗುವುದರೊಳಗೆ ಸಿನಿಮಾ ಮಾಡಿದರೆ ಲಾಭ. ಆದರೆ, ಟೈಟಲ್ ರಿಜಿರ್ಸ್ಟ ಮಾಡಿಯೋಕೆ ಮಾತ್ರ ಉತ್ಸಾಹ ತೋರಿಸುವವರಿಂದ ಸಿನಿಮಾ ನಿರೀಕ್ಷೆ ಮಾಡಲು ಸಾಧ್ಯ ಇಲ್ಲ ಅನ್ನೋದೂ ಸತ್ಯ.

ಲೂಸ್ ಟಾಕ್- ಕುಡುಕರ ಸಂಘದ ಆಧ್ಯಕ್ಷ

ಚಿಯರ್ಸ್ ಸಾರ‍್, ಕುಡುಕರ ಸಂಘದ ವತಿಯಿಂದ ಸರ್ಕಾರದ ಮುಂದೆ ಏನೋ ಬೇಡಿಕೆಗಳನ್ನ ಇಟ್ಟಿದ್ದೀರಂತೆ?
– ಏನ್ ಬೇಡಿಕೆನೋ ಏನೋ, ನೋಡಿ, ಬಾರಲ್ಲಿ ಕೂತ್ಕೊಂಡ್ ಆಡರ್ರ‍ ಮಾಡ್ತಾ ಇದ್ದಾರು, ರಿಕ್ವೆಸ್ಟ ಮಾಡೋ ಪರಿಸ್ಥಿತಿಗೆ ಬಂದಿದ್ದೀವಿ.

ಹೌದಲ್ವಾ, ಪಾಪ, ಸರಿ, ಅದೇನೋ ಕುಡುಕರಿಗೆ ವಿಮೆ ಮಾಡಿಸ್ಬೇಕು ಅಂತ ಹೇಳಿದ್ದೀರಲ್ಲ, ಇದೊಂಥರ ವಿಷ ಕುಡಿದು ಕಷಾಯ ಕುಡಿದಂಗೆ ಅಲ್ವಾ?
– ವಿಷ ಬಿಡಿ. ವಿಷಯ ಅದಲ್ಲ, ನಾವು ಸಾಯ್ತೀವಿ ಅಂದ್ರೆ ಸರ್ಕಾರ ರೆವಿನ್ಯೂ ಕಮ್ಮಿ ಆಗುತ್ತೆ ಅಂತ ಹೆದರಿಕೊಳ್ಳಲಿ ಅಂತ ಹೇಳಿದ್ದು.

ಓಹೋ, ಸರ್ಕಾರದ ಕಡೆಯಿಂದ ಏನಾದ್ರೂ ರಿಪ್ಲೈ ಬಂತಾ?
– ಯಾಕ್ ಬರಲ್ಲ? ಎಷ್ಟೇ ದೊಡ್ಡ ದೊಡ್ಡ ಲೀಡರ್ಸ್ ಆದ್ರೂ ಈ ಚಿಯರ್ಸ್ ಲೀಡರ್ಸ್ ಗಳ ಮಾತಿಗೆ ಬಗ್ಗಲೇಬೇಕು.

ನ್ಯೂ ಇಯರ್‌ ಪಾರ್ಟಿಗೆ ೫೦ ಪರ್ಸೆಂಟ್ ಡಿಸ್ಕೌಂಟ್ ಕೊಡ್ಬೇಕು ಅಂತ ಕೇಳಿದ್ದೀರಲ್ಲ, ಇದು ಸರಿನಾ?
– ಸರಿ ಅಲ್ಲ ಆಮೇಲೆ ಗೊತ್ತಾಯ್ತು. ಈ ಬೇಡಿಕೆ ವಿಷಯದಲ್ಲಿ ಸ್ವಲ್ಪ ಎಡವಟ್ಟಾಯ್ತು. ೫೦ ಪರ್ಸೆಂಟ್ ಅಲ್ಲ, ೩೦, ೬೦, ೯೦ ಪರ್ಸೆಂಟ್ ಕೇಳಬೇಕಿತ್ತು.

ಸರಿ, ನೀವು ಕುಡುಕರ ಸಂಘದ ಅಧ್ಯಕ್ಷ ಆಗಿದ್ದು ಹಂಗೆ ? ನೀವು ದೊಡ್ಡ ಕುಡುಕ ಅನ್ನೋದಕ್ಕೆ ನಿಮ್ಮತ್ರ ಪ್ರೂಫ್ ಏನಿದೆ?
– ಅಯ್ಯೋ, ನಾನು ಬಾರಿಗೂ ಕುಡ್ಕೊಂಡೇ ಹೋಗ್ತೀನಿ. ಇದಕ್ಕಿಂತ ಪ್ರೂಫ್ ಬೇಕಾ?
(ಕಾಲ್ಪನಿಕ ಸಂದರ್ಶನ)

ಕ್ರಿಶ್ಚಿಯನ್ನರೇ ಹೆಚ್ಚಾಗಿರುವ ಊರೊಂದರಲ್ಲಿ ಖೇಮು ಚರ್ಚ್ ಒಂದರಲ್ಲಿ ಫಾದರ್‌ ಆಗಿದ್ದ. ಆ ಏರಿಯಾದ ಬಹುತೇಕ ಎಲ್ಲ ಜನರ ಪರಿಚಯ ಅವನಿಗಿತ್ತು. ಆದರೆ,
ಕೆಲವೊಂದು ದಿನಗಳಿಂದ ಚರ್ಚಿನ ಮುಂದೆ ಇರುವ ಕ್ರಾಸ’ ರೋಡ್ ನಲ್ಲಿ ಇಬ್ಬರು ಭಿಕ್ಷುಕರು ಕೂರುತ್ತಾ ಇದ್ದಿದ್ದು ಖೇಮು ಗಮನಕ್ಕೆ ಬಂತು. ಆದರೆ ಅವರನ್ನು
ಗಮನಿಸಿದರೂ ಗಮನಿಸದ ಹಾಗೆ ಹೋಗುತ್ತಿದ್ದ ಖೇಮು. ಆ ಇಬ್ಬರಲ್ಲೂ ಒಂದು ವಿಶೇಷ ಇತ್ತು. ಒಬ್ಬ ತನ್ನ ಕೊರಳಿಗೆ ಓಂ ಅನ್ನೋ ಪದಕ ಇರೋ ಸರವನ್ನು ನೇತು ಹಾಕಿಕೊಂಡು, ಹಿಂದೂ ದೇವರ ಫೋಟೋ ಹಿಡಿದುಕೊಂಡು ಭಿಕ್ಷೆ ಬೇಡುತ್ತಿದ್ದ.

ಇನ್ನೊಬ್ಬ ಶಿಲುಬೆಯನ್ನು ಕೊರಳಿಗೆ ಹಾಕಿಕೊಂಡು ಯೇಸು ಹೆಸರಲ್ಲಿ ಭಿಕ್ಷೆ ಬೇಡುತ್ತಿದ್ದ. ಅದು ಕ್ರಿಶ್ಚಿಯನ್ನರು ಹೆಚ್ಚಿರುವ ಪ್ರದೇಶ ಆದ್ದರಿಂದ ಸಹಜವಾಗಿ ಎಲ್ಲರೂ ಶಿಲುಬೆ ಹಾಕಿಕೊಂಡವನಿಗೆ ಭಿಕ್ಷೆ ಹಾಕುತ್ತಿದ್ದರು. ಅಲ್ಲದೆ ತಮ್ಮ ಧರ್ಮದ ಮೇಲಿನ ಪ್ರೀತಿ ತೋರಿಸಿಕೊಳ್ಳುವವರು ಹಿಂದೂ ಭಿಕ್ಷುಕನನ್ನು ನೋಡಿ ಬೇಕಂತಲೇ ಶಿಲುಬೆ ಹಾಕಿಕೊಂಡವನಿಗೆ ಹಣ ನೀಡುತ್ತಿದ್ದರು. ಇದನ್ನೆ ಗಮನಿಸಿದ ಖೇಮು ಒಂದು ದಿನ ಹಿಂದೂ ಭಿಕ್ಷುಕನ ಹತ್ತಿರ ಬಂದು, ಮಗೂ, ಇದು ಕ್ರಿಶ್ಚಿಯನ್ನರು ಹೆಚ್ಚಾಗಿರುವ ಊರು, ಇಲ್ಲಿ ನಿನಗೆ ಯಾರೂ ಹಣ ಕೊಡೋದಿಲ್ಲ. ಹಾಗೆ ನೋಡಿದರೆ ನಿನ್ನಿಂದ ನಿನ್ನ ಪಕ್ಕದಲ್ಲಿ ಶಿಲುಬೆ ಹಾಕಿಕೊಂಡವನಿಗೆ ಲಾಭ ಆಗ್ತಾ ಇದೆ. ಅವನ ಮೇಲೆ ಕರುಣೆ ಇಲ್ಲದಿದ್ದರೂ, ಅವನ ಪಕ್ಕದಲ್ಲಿ ನೀನು ಹಿಂದೂ ದೇವರ ಹೆಸರಲ್ಲಿ ಭಿಕ್ಷೆ ಬೇಡ್ತಾ ಇದ್ದೀಯ ಅನ್ನೋ ಕಾರಣಕ್ಕೆ ತಮ್ಮ ಧರ್ಮ ಪ್ರೇಮವನ್ನ ಸಾಬೀತು ಮಾಡೋಕೋಸ್ಕರ ಜನ ಅವನಿಗೆ ದುಡ್ಡು ಹಾಕ್ತಾ ಇದ್ದಾರೆ.

ನೀನು ಬೇರೆ ಎದ್ರೂ ಭಿಕ್ಷೆ ಬೇಡೋದು ಒಳ್ಳೇದು ಅನ್ನಿಸ್ತಿದೆ’ ಎಂದು ಹೇಳಿದ. ಅದಕ್ಕೆ ಸರಿ ಫಾದರ್‌’ ಅಂದ ಆ ಭಿಕ್ಷುಕ. ಖೇಮು ಆ ಕಡೆ ಹೋದ ಮೇಲೆ, ಈ ಭಿಕ್ಷುಕ ಪಕ್ಕಕ್ಕೆ ತಿರುಗಿ ಜಿಗ್ನೇಶ್ ಭಾಯ’ ಅಂದ. ಅದಕ್ಕೆ ಆ ಕಡೆ ಭಿಕ್ಷುಕ ಹೇಳು, ಮನ್ ಸುಖ್ ಭಾಯ’ ಅಂದ. ಅದಕ್ಕೆ ಜಿಗ್ನೇಶ್ ನಗುತ್ತಾ ಹೇಳಿದ, ನೋಡಿದ್ಯಾ ಈ ಫಾದರ‍್‌, ನಮ್ಮಂಥ ಗುಜರಾತಿಗಳಿಗೇ ದುಡ್ಡು ಮಾಡೋದ್ ಹೇಗೆ ಅಂತ ಹೇಳಿ ಕೊಡ್ತಾ ಇದ್ದಾನೆ’.

ಲೈನ್ ಮ್ಯಾನ್

ಸಂಸತ್ತಿನಲ್ಲಿ ದಾಳಿ ಮಾಡಿದ ದುಷ್ಕರ್ಮಿಗಳಿಗೆ ಪ್ರತಾಪ್ ಸಿಂಹ ಅವರ ಬದ್ಲು ರಾಹುಲ್ ಗಾಂಧಿ ಏನಾದ್ರೂ ಪಾಸ್ ಕೊಡಿಸಿದ್ದಿದ್ರೆ
– ಇಷ್ಟೊತ್ತಿಗೆ ೨೦೨೪ರ ಲೋಕಸಭಾ ಚುನಾವಣೆಯ ರಿಸಲ್ಟ ಅನೌನ್ಸ್ ಆಗಿರ್ತಿತ್ತು.

ತಾಳ್ಮೆಗೂ ಒಂದು ಮಿತಿ ಇರುತ್ತೆ
– ಅದು ಕ್ರಾಸ್ ಆದ್ರೆ, ಮನುಷ್ಯ ರಣಬೀರ್‌ ಕಪೂರ್‌ ಆಗ್ತಾನೆ. ಇಲ್ಲ ಸಂದೀಪ್ ವಂಗಾ ಮತ್ತು ರಣಬೀರ್‌ ಕಪೂರ್‌ ಅವರ ಕ್ರಾಸ್ ಬ್ರೀಡ್ ಅನಿಮಲ್ ಆಗ್ತಾನೆ.

ತಲೆಯಲ್ಲಿ ಬಿಳಿ ಕೂದಲು ಬರೋಕೆ ಶುರು ಆದ್ರೆ, ಅದರ ಅರ್ಥ
– ಏಜಿಂಗ್ ಜ್ಟಛಿqso ಫುಲೀ

ಇವನಾರವ ಎನ್ನದಿರಿ, ಇವನಮ್ಮವ ಅನ್ನಿ ಅಂದ್ರು ಬಸವಣ್ಣ
– ಜನ ಇವ ನಮ್ಮವ , ಇವ ನಮ್ಮವ ಅಂತ ಜಾತಿ ಮೋಹ ಜಾಸ್ತಿ ಮಾಡ್ಕೊಂಡ್ರು

ಮನಸ್ಸಿಗೆ ಬಂದ ಹಾಗೆ ಸಿಕ್ಕ ಸಿಕ್ಕವರನ್ನೆಲ್ಲ ಪಕ್ಷದಿಂದ ಉಚ್ಛಾಟನೆ ಮಾಡೋದು
– ನಿಜಕ್ಕೂ ಹುಚ್ಚಾಟನೇ

ಪ್ರೀತಿ ಮಾಡೋರಿಗೂ ಎಂಜಿನಿರ್ಯ ಗಳಿಗೂ ಇರೋ ಹೋಲಿಕೆ.

– ಇವರು ಯಾರನ್ನೋ ಪ್ರೀತಿ ಮಾಡಿ ಇನ್ಯಾರನ್ನೋ ಮದ್ವೆ ಆಗ್ತಾರೆ, ಅವ್ರು ಎಂಜಿನಿಯರಿಂಗ್ ಓದಿ ಅನ್ನೇನೋ ಕೆಲಸ ಮಾಡ್ತಾರೆ.

ಕ್ಲೀನ್ ಹ್ಯಾಂಡ್’ ಪೊಲಿಟಿಷಿಯನ್ ಅಂದ್ರೆ ಯಾರು?
– ದೇಶದ ಆಸ್ತಿಯನ್ನೆ ಮಾರಿ ಕೈ ತೊಳ್ಕೊಂಡವನು’

೧೦೦ಕ್ಕೆ ನೂರು ಅಂಕ ತೆಗೆಯುವ ವಿದ್ಯಾರ್ಥಿ
‘ಉತ್ತರ’ ಕುಮಾರ

ರಾಜಕಾರಣಗಳಿಗೆ ಪಕ್ಷದಲ್ಲಿ ಅಧಿಕಾರ ಸಿಗೋಕೆ ಅವರು ಬರೀ ಸಜ್ಜನ ಆಗಿದ್ರೆ ಆಗಲ್ಲ
– ಅವ್ರ್‌ಯಾವ್ ಜನ ಅನ್ನೋದೂ ಮುಖ್ಯ ಆಗುತ್ತೆ.

ಮನೆಯಲ್ಲಿ ಸಾಕಿದ ಕೋಳಿ ಸತ್ರೆ ಶ್ರದ್ಧಾಂಜಲಿ ಸಲ್ಲಿಸುವ ಬಗೆ
– ರೆಸ್ಟ್ ಇನ್ ‘ಪೀಸ್’.