Monday, 20th May 2024

ಹೆಚ್ಚುವರಿ ಟೈಯರ್‌ ರೀತಿ, ಹೆಚ್ಚುವರಿ ಮೊಬೈಲ್‌ ಇಟ್ಟುಕೊಳ್ಳಬೇಕು, ಏಕೆ ?

ಇದೇ ಅಂತರಂಗ ಸುದ್ದಿ

vbhat@me.com

ಅದಾದ ಬಳಿಕ ಈಗ ಎಲ್ಲಿಗೇ ಹೋಗುವುದಿದ್ದರೂ ಒಂದು ಹೆಚ್ಚುವರು (spare) ಮೊಬೈಲ್ ಒಯ್ಯುವುದನ್ನು ರೂಢಿ ಮಾಡಿಕೊಂಡಿದ್ದೇನೆ. ಒಂದು ಫೋನ್ ಕಳೆದರೆ, ಒಡೆದು ಹೋದರೆ, ಎದೆ ಒಡೆದು ಹೋಗುತ್ತದೆ ಎಂಬ ಚಿಂತೆ ಇಲ್ಲ. ಕಾರಿನಲ್ಲಿ ಹೋಗುವಾಗ ಹೆಚ್ಚುವರಿ ಒಂದು ಟೈಯರ್ (Stepney) ಇಟ್ಟುಕೊಳ್ಳುವುದು ಎಷ್ಟು ಮುಖ್ಯವೋ, ಹಾಗೆ ಹೆಚ್ಚುವರಿ ಒಂದುಮೊಬೈಲ್ ಇಟ್ಟುಕೊಳ್ಳುವುದೂ ಅಷ್ಟೇ ಮುಖ್ಯ.

ಒಬ್ಬ ವ್ಯಕ್ತಿ ರೈಲಿನ ಟಾಯ್ಲೆಟ್ಟಿನಿಂದ ಚೀರುತ್ತಾ ಹೊರಬರುತ್ತಾನೆ, ತನ್ನ ಮೊಬೈಲ್ ಫೋನು ಟಾಯ್ಲೆಟಿ ನೊಳಗೆ ಬಿತ್ತೆಂಬುದು ಆತರೋದಿಸುತ್ತಾನೆ. ಹೊರಗಡೆ ದಟ್ಟ ಕತ್ತಲು. ಯಾರೂ ಆತನಿಗೆ ಸಹಾಯ ಮಾಡುವ ಸ್ಥಿತಿಯಲ್ಲಿರಲಿಲ್ಲ. ಬೇರೆಯವರ ಫೋನು ಇಸಿದುಕೊಂಡು ಈ ಸಹಾಯವನ್ನು ಆತ ಮನೆಮಂದಿಗೆ ತಿಳಿಸಿದ. ಯಾವುದೋ ಕಾರಣಕ್ಕೆ ಎರಡು ನಿಮಿಷದಲ್ಲಿ ರೈಲು ನಿಂತಿತು.

ಮುಂದಿನ ಎರಡು ಗಂಟೆಗಳ ಕಾಲ ಈ ಮೊಬೈಲ್ ಫೋನಿನ ವಿಚಾರವೇ ಯಾತ್ರಿಗಳ ಚರ್ಚೆ ವಿಷಯವಾಗಿತ್ತು. ಫೋನು ಕಳೆದುಕೊಂಡಾತ ಕೆಳಗಿಳಿದು ರೈಲ್ವೇ ಹಳಿಯಡಿ ಹುಡುಕ ತೊಡಗಿದ. ಪ್ರಯಾಣದ ಕೊನೆಯಲ್ಲಿ ಫೋನು ಕಳೆದುಕೊಂಡಾತ ತನ್ನ ಫೋನು ಸಿಕ್ಕಿದ್ದನ್ನು ತಿಳಿಸಿದ್ದು ಎಲ್ಲರಲ್ಲೂ ಖುಷಿ ತಂದಿತ್ತು. ಮುಂಬೈ ಪೋಲೀಸರ ಮುತುವರ್ಜಿಯಿಂದ ಕಳೆದುಹೋದ ಫೋನನ್ನು ಮತ್ತೆ ವಾಪಾಸು ಪಡೆಯುವುದು ಸಾಧ್ಯ ವಾಯಿತು.

ಅದಕ್ಕೆ ತಾಂತ್ರಿಕ ವಿಧಾನವಿದೆ. 2022 ರಲ್ಲಿ ಒಬ್ಬ ಮೇಕಪ್ ಆರ್ಟಿ ಮುಂಬೈಗೆ ಹೋಗುತ್ತಿದ್ದರು. ಆಗ ಹಿಂಬದಿ ಬೈಕಿನಲ್ಲಿ ಬರುತ್ತಿದ್ದ ಇಬ್ಬರು ಈತನ ಪೋನ್ ಮತ್ತು ಹೆಡ್ ಫೋನನ್ನು ಎಗರಿಸಿಕೊಂಡು ಮುಂದಕ್ಕೆ ಹೋದರು. ಸಿಸಿಟಿವಿಯಿಂದಲೂ ಕಳ್ಳರನ್ನು ಹಿಡಿಯಲು ಆಗಲಿಲ್ಲ. ಪೊಲೀಸರುದೂರು ಪಡೆದು ರಿಪೋರ್ಟ್ ಅನ್ನು ತಯಾರಿಸಿದ್ದರು. ಆದರೂ ಕಳುವಾದ ಫೋನಿನ ಐ.ಎಂ.ಐ.ಇ. ನಂಬರನ್ನು ಸೆಂಟ್ರಲ್ ಎಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರಿ ನಲ್ಲಿ ದಾಖಲು ಮಾಡಿದ್ದರು. ಅದು ದೂರಸಂಪರ್ಕ ಇಲಾಖೆಯಿಂದ ಚಾಲಿತವಾಗುವ ವ್ಯವಸ್ಥೆ. ಫೋನು ಕದ್ದವ್ಯಕ್ತಿ ಅದಕ್ಕೆ ಎರಡು ಹೊಸ ಸಿಮ್ ಹಾಕಿದರೂ ಪ್ರಯೋಜನವಾಗಲಿಲ್ಲ.

ಏಕೆಂದರೆ ಫೋನಿನ ಐ.ಎಂ.ಇ.ಐ ನಂಬರನ್ನು ಬ್ಲಾಕ್ ಮಾಡಲಾಗಿತ್ತು. ಹೊಸ ಸಿಮ್ ಹಾಕುವ ಪ್ರಯತ್ನ ಮಾಡಿದಾಗ, ತಕ್ಷಣ ಅದರ ಮಾಹಿತಿ ಪೋಲೀಸರಿಗೆ ಸಿಕ್ಕಿತು. ಅದರ ಪತ್ತೆಯನ್ನು ಪೊಲೀಸರು ಸುಲಭವಾಗಿ ಮಾಡಿದರು. ನಂತರ ಕಳ್ಳರಿಂದ ಫೋನನ್ನು ವಶಪಡಿಸಿಕೊಂಡರು. ಈ ಸಫಲತೆ ಯನ್ನು ಗಮನಿಸಿದ ಹಿರಿಯ ಪೋಲೀಸ್ ಅಧಿಕಾರಿಗಳು ಮುಂಬೈನ ಎಲ್ಲ ಸ್ಟೇಶನ್‌ಗಳಲ್ಲೂ ಫೋನು ಕಳವಾದ ಮಾಹಿತಿ ಬಂದಿರುವ ಎಲ್ಲ ಪ್ರಕರಣಗಳನ್ನು ಸಿ.ಇ.ಐ.ಆರ್ ಪೋರ್ಟಲ್‌ನಲ್ಲಿ ದಾಖಲಿಸುವಂತೆ ಆದೇಶ ಜಾರಿ ಮಾಡಿದರು. ಇದರಿಂದ ಕಳವಾದ ಫೋನನ್ನು ಟ್ರಾಕ್
ಮಾಡುವುದು ಸುಲಭ ಎಂಬುದು ಸಾಬೀತಾಯಿತು.

ಸಿ.ಇ.ಐ.ಆರ್.ನಲ್ಲಿ ನಂಬರು ದಾಖಲಾದೊಡನೆ ಐ.ಎಂ.ಇ.ಐ. ನಂಬರ್ ಬ್ಲಾಕ್ ಆಗುತ್ತದೆ. ಜಂಟಿ ಪೊಲೀಸ್ ಆಯುಕ್ತರು ಎಲ್ಲ ಠಾಣೆಗಳಿಗೂ ಆದೇಶವನ್ನು ಕೊಟ್ಟು ಕಳುವಾದ, ಕಳೆದುಹೋದ ಮೊಬೈಲ್ ಫೋನುಗಳ ಪತ್ತೆಗೆ ಕ್ರಮವಹಿಸುವಂತೆ ಸೂಚಿಸಿದರು. ಸಿಮ್ ಕಾರ್ಡನ್ನು ಬದಲಿಸಿ ದರೂ ಫೋನನ್ನು ಪತ್ತೆ ಮಾಡಲಾಗುತ್ತದೆ. ತಂತ್ರಜ್ಞಾನದ ಸಹಾಯದಿಂದ ಈಗ ಎಲ್ಲವೂ ಸಲೀಸು. ನಿಮ್ಮ ಫೋನು ಕಳವಾಗಿದ್ದರೆ, ಕಳೆದು ಹೋಗಿದ್ದರೆ ಡಿಡಿಡಿ.ಛಿಜ್ಟಿ.ಜಟq.ಜ್ಞಿ ಈ ಜಾಲತಾಣಕ್ಕೆ ಭೇಟಿಕೊಟ್ಟು ಅಲ್ಲಿ ನಮೂದಾಗಿರುವ ನಿಯಮಗಳನ್ನು ಹಂತ ಹಂತವಾಗಿ ಅನುಸರಿಸಬೇಕು.

ನೀವು ಮಾಡಬೇಕಾದದ್ದು ಇಷ್ಟೆ. ನಿಮ್ ಮೊಬೈಲ್ ಫೋನಿನ ಐ.ಎಂ.ಇ.ಆರ್ ನಂಬರನ್ನು ಒಂದು ಕಡೆ ಬರೆದಿಟ್ಟುಕೊಂಡಿರಿ ಮತ್ತು ಅದು ಮನೆಮಂದಿ ಗೆಲ್ಲ ಗೊತ್ತಿರಲಿ. ಆಗ ಕಳವಾದ/ಕಳೆದುಹೋದ ಮೊಬೈಲು ಫೋನು ಪತ್ತೆ ಇನ್ನಷ್ಟು ಸುಲಭವಾಗುತ್ತದೆ. ಇದನ್ನು ನಾನು ಕೆಲ ದಿನಗಳ ಹಿಂದೆ ಪತ್ರಿಕೆಯೊಂದರಲ್ಲಿ ಓದಿದ್ದೆ. ಇರಲಿ. ಇದು ಸಣ್ಣ ವಿಷಯವಿರಬಹುದು. ಆದರೆ ಇದು ಸಣ್ಣದೋ, ದೊಡ್ಡದೋ ಎಂಬುದನ್ನು ಮೊಬೈಲ್ ಕಳೆದು ಕೊಂಡವನನ್ನು ಕೇಳಿನೋಡಿ, ಗೊತ್ತಾಗುತ್ತದೆ.

ಕೆಲವು ತಿಂಗಳ ಹಿಂದೆ, ನಾನು ಈಜಿಪ್ಟಿನ ಕೈರೋ ವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲಿದ್ದೆ. ಅದೇನು ಗ್ರಹಚಾರವೋ, ನನ್ನ ಕೈಯಲ್ಲಿದ್ದ ಮೊಬೈಲ್ ಫೋನ್ ಕೆಳಗಡೆ ಬಿದ್ದು, ‘-ಳ್’ ಎಂದು ಒಡೆದು ಹೋಯಿತು. ಒಂದು ಕ್ಷಣ ನನ್ನ ಎದೆ ಬಡಿತ ನಿಂತುಹೋಯಿತು. ಅದರಲ್ಲಿ ನನ್ನ ಟಿಕೆಟ್, ಬೋರ್ಡಿಂಗ್ ಪಾಸ್ ಎಲ್ಲಾ ಇದ್ದವು. ಸುಮಾರು ಹದಿನೈದು ಸಾವಿರ ಫೋನ್ ನಂಬರುಗಳಿದ್ದವು. ನನಗೆ ನನ್ನ ಪತ್ನಿಯ ನಂಬರ್ ಸಹ ಜ್ಞಾಪಕದಲ್ಲಿ ಇಲ್ಲ.

ಒಂದು ಸಲ ಮುಂದೇನು ಮಾಡುವುದು ಎಂದು ತಿಳಿಯದೇ ಮಂಕಾಗಿಬಿಟ್ಟೆ. ನನ್ನ ಪರಿಸ್ಥಿತಿಯನ್ನು ಅಲ್ಲಿಯೇ ಇದ್ದ ಪೊಲೀಸ್ ಅಧಿಕಾರಿಗೆ ಹೇಳಿದೆ. ಆತ ನನ್ನ ಪಾಸ್‌ಪೋರ್ಟ್ ನೋಡಿ, ಒಳಗೆಬಿಟ್ಟ. ನಾನು ಹೇಗೋ ಬೋರ್ಡಿಂಗ್ ಪಾಸ್ ತೆಗೆದುಕೊಂಡೆ. ವಿಮಾನ ಹತ್ತಿ ಪ್ರಯಾಣಿಸುವುದು ಖಾತ್ರಿಯಾಯಿತು. ಆದರೆ ಫೋನ್ ಇಲ್ಲದ ಮುಂದಿನ ಕ್ಷಣಗಳನ್ನು ಕಳೆಯುವುದು ಹೇಗೆ? ಈ ಪ್ರಶ್ನೆಗೆ ನನ್ನಲ್ಲಿ ಉತ್ತರವಿರಲಿಲ್ಲ. ಬೇರೆ ದಾರಿಯಿರಲಿಲ್ಲ. ವಿಮಾನ ನಿಲ್ದಾಣದಲ್ಲಿ ಒಂದು ಫೋನ್ ಖರೀದಿಸಿ, ಐಕ್ಲೌಡ್ ಸಹಾಯದಿಂದ ಎಲ್ಲಾ ಡಾಟಾಗಳನ್ನು ಹೊಸ ಮೊಬೈಲಿಗೆ ವರ್ಗಾಯಿಸಿಕೊಂಡೆ. ಮುಂದೆ ಸಮಸ್ಯೆ ಆಗಲಿಲ್ಲ.

ಅದಾದ ಬಳಿಕ ಈಗ ಎಲ್ಲಿಗೇ ಹೋಗುವುದಿದ್ದರೂ ಒಂದು ಹೆಚ್ಚುವರು (spare) ಮೊಬೈಲ್ ಒಯ್ಯುವುದನ್ನು ರೂಢಿ ಮಾಡಿಕೊಂಡಿದ್ದೇನೆ. ಒಂದು ಫೋನ್ ಕಳೆದರೆ, ಒಡೆದು ಹೋದರೆ, ಎದೆ ಒಡೆದು ಹೋಗುತ್ತದೆ ಎಂಬ ಚಿಂತೆ ಇಲ್ಲ. ಕಾರಿನಲ್ಲಿ ಹೋಗುವಾಗ ಹೆಚ್ಚುವರಿ ಒಂದು ಟೈಯರ್
(ಖಠಿಛಿmಛಿqs)ಇಟ್ಟುಕೊಳ್ಳುವುದು ಎಷ್ಟು ಮುಖ್ಯವೋ, ಹಾಗೆ ಹೆಚ್ಚುವರಿ ಒಂದುಮೊಬೈಲ್ ಇಟ್ಟುಕೊಳ್ಳುವುದೂ ಅಷ್ಟೇ ಮುಖ್ಯ.

ಆಫೀಸಿನಲ್ಲಿ ಜಗಳವಾಡಬಾರದು

ಆತನ ವಯಸ್ಸು ನಲವತ್ತು ವರ್ಷ. ಅನೇಕ ವರ್ಷಗಳಿಂದ ಪೊಲೀಸ್ ಠಾಣೆಯಲ್ಲಿ ಕಾನ್ ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದಾನೆ. ದೇಶದಲ್ಲಿ ಪೊಲೀಸರಿಗೆ ಕೆಲಸದ ಒತ್ತಡ ಹೆಚ್ಚು, ಅವರ ಕೆಲಸದ ಅವಽಯನ್ನು ಕಡಿಮೆಗೊಳಿಸಬೇಕೆಂಬ ಪ್ರಸ್ತಾವ ಎಡೆ ಇದ್ದರೂ ಅದನ್ನು ಲೆಕ್ಕಿಸದೇ ಈತ ಕೆಲಸ ಮಾಡಿಕೊಂಡು ಬಂದಿದ್ದಾನೆ. ರಸ್ತೆಯಲ್ಲಿ ಧರಣಿ, ಪ್ರದರ್ಶನಗಳಿರಲಿ ಅಥವಾ ಯಾವುದೇ ಅಹಿತಕರಘಟನೆಗಳು ನಡೆಯಲಿ, ಅಲ್ಲ ಪೊಲೀಸರು ಇರಲೇಬೇಕು. ಪೊಲೀಸರು ಸಮಯದ ಪರಿಮಿತಿ ಇಲ್ಲದೇ ಹಗಲು ರಾತ್ರಿ ಕೆಲಸಮಾಡುವುದೂ ಇದೆ. ಅಂಥವರಲ್ಲಿ ಒಬ್ಬ ಈ ಪೋಲೀಸ್ ಪೇದೆ. ಕೆಲಸದ ಒತ್ತಡ ಆತನನ್ನು ಹೈರಾಣ ಮಾಡಿದೆ. ಆತನ ಮಗ ಅನಾರೋಗ್ಯಕ್ಕೆ ತುತ್ತಾಗುತ್ತಾನೆ. ಐದು ದಿನ ಕೆಲಸಕ್ಕೆ ರಜೆ ಬೇಕೆಂದು ಕೇಳುತ್ತಾನೆ.

ಮಗನ ಆರೋಗ್ಯ ಸಮಸ್ಯೆಗೆ ಪರಿಹಾರ ಒದಗಿಸಲು ಈತನಿಗೆ ರಜೆ ಬೇಕಿತ್ತು. ಆದರೆ ಇಪೆಕ್ಟರ್ ರಜೆ ಮಂಜೂರು ಮಾಡುವುದಿಲ್ಲ. ಅವರಿಗೂ ಕೆಲಸದ ಒತ್ತಡ. ರಜೆ ಮಂಜೂರಾಗಿಲ್ಲದ ಕಾರಣ ಈ ಪೋಲೀಸ್ ಪೇದೆ ಉಪ ಪೋಲೀಸು ಆಯುಕ್ತರಿಗೆ ರಜಾಮನವಿಯನ್ನು ಸಲ್ಲಿಸುತ್ತಾನೆ. ಈ ರೀತಿ ಮಾಡಿದ್ದ ರಿಂದ ಕೆರಳಿದ ಠಾಣಾಧಿಕಾರಿ ಈತನ ವೇತನ ಬಿಡುಗಡೆಯನ್ನು ತಡೆಗೊಳಿಸುತ್ತಾನೆ. ಮೂರು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಅನೇಕ ಬಾರಿ ವೇತನ ಶಾಖೆಗೆ ಹೋಗಿ ಅಧಿಕಾರಿಗಳಿಗೆ ಸ್ಪಷ್ಟೀಕರಣ ಕೊಟ್ಟರೂ ಪ್ರಯೋಜನವಾಗಲಿಲ್ಲ. ಯಾರಿಂದಲೂ ಸಹಾಯವಾಗಲಿಲ್ಲ.

ಸಂಬಳ ಪಡೆವ ನೌಕರ ಮೂರು ತಿಂಗಳಿನಿಂದ ಸಂಬಳವಿಲ್ಲದೇ ಬದುಕುವುದಾದರೂ ಹೇಗೆ? ಆತನ ಮನೆಯಲ್ಲಿ ಶಾಂತಿ ನೆಲೆಸುವುದಾದರೂ ಹೇಗೆ? ಆತನ ಮನೆಯ ಸಾಲದ ಕಂತು ಕಟ್ಟುವುದು ಬಾಕಿ ಇದೆ, ವಸೂಲಿ ಏಜೆಂಟರು ಗಲಾಟೆ ಮಾಡುತ್ತಿದ್ದಾರೆ. ಆದರೆ ಯಾರಿಂದಲೂ ಸಹಾಯವಾಗಲಿಲ್ಲ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲೂ ಹರಡಿತು. ಆಡಳಿತದಲ್ಲಿನ ಅರಾಜಕತೆ ಮತ್ತು ಅಽಕಾರಿಗಳ ನಡವಳಿಕೆ ವಿರುದ್ಧ ಹಲವು ಟೀಕೆಗಳು ಹರಿದಾಡಿದವು. ಇದನ್ನು ಪೊಲೀಸರ ಚಾಟ್ ಗ್ರೂಪ್ ಗಳಲ್ಲಿಯೂ ಹಾಕಲಾಗುತ್ತದೆ. ಕಠಿಣ ಕ್ರಮ ಜರುಗಿಸುವ ಎಚ್ಚರಿಕೆಯೂ ಅಲ್ಲಿಂದ ಬರುತ್ತದೆ. ಈ ವಿಚಾರ ಡಿಸಿಪಿಯವರನ್ನು ತಲುಪುತ್ತದೆ. ಅವರು ಈ ಪೊಲೀಸ ಪೇದೆಗೆ ತಕ್ಷಣ ವೇತನ ಕೊಡಿಸುವ ಭರವಸೆಯನ್ನೂ ಕೊಡುತ್ತಾರೆ.

ಎಲ್ಲ ಕ್ಷೇತ್ರಗಳಲ್ಲೂ ಇಂದು ಜನರಿಗೆ ಸಹನೆ ಎಂಬುದೇ ಇಲ್ಲ. ಸಮಸ್ಯೆಗಳ ಬೆಟ್ಟವೇ ತಲೆ ಮೇಲೆ ಹತ್ತಿ ಕೂತಿರುತ್ತದೆ. ಸಮಸ್ಯೆ ಇಲ್ಲದ ಮನುಷ್ಯ ಯಾರಿದ್ದಾನೆ ಹೇಳಿ. ಎಲ್ಲರಿಗೂ ಅವರವರದೇ ಸಮಸ್ಯೆ ಇರುತ್ತದೆ. ಪೊಲೀಸರಿಗೆ ಈ ತರಹದ ತೊಂದರೆಗಳಿದ್ದರೆ ಅದು ಅವರು ಮಾಡುವ ಕೆಲಸದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅವರ ಮನೋಬಲ ಕುಗ್ಗುತ್ತದೆ. ಅವರ ಉತ್ಪಾದಕ ಶಕ್ತಿ ಕಡಿಮೆಯಾಗುತ್ತದೆ.

ಇವತ್ತಿನ ಸಂಕೀರ್ಣ ಪರಿಸ್ಥಿತಿಯಲ್ಲಿ ಆರ್ಥಿಕ ಒತ್ತಡ ಹೆಚ್ಚಿರುವ ಕಾರಣ, ಈಗಾಗಲೇ ತೊಂದರೆಯಲ್ಲಿರುವವರಿಗೆ ಮತ್ತಷ್ಟು ತೊಂದರೆ ಹೇರುವುದು ಸರಿಯಲ್ಲ. ಮೇಲಧಿಕಾರಿಗಳು ಇದನ್ನು ಅರಿತುಕೊಂಡು ಜವಾಬ್ದಾರಿಯಿಂದ ವರ್ತಿಸುವುದು ಒಳಿತು. ಪ್ರತಿದಿನ ನಾವು ಕೆಲಸ ಮಾಡುವ ಸಹೋದ್ಯೋಗಿಗಳ ಜತೆ ಜಗಳ ಮಾಡಬಾರದು. ಅನೇಕರು ಮನೆಗಿಂತ ಹೆಚ್ಚು ಹೊತ್ತು ಆಫೀಸಿನಲ್ಲಿ ಕಳೆಯುತ್ತಾರೆ. ಒಂದು ವೇಳೆ ಮನೆಯಲ್ಲಿ
ಜಗಳವಾಡಿದರೂ, ಆಫೀಸಿನಲ್ಲಂತೂ ಜಗಳವಾಡಲೇಬಾರದು. ಮನೆಯಲ್ಲಿ ಜಗಳವಾಡಿದರೆ, ಹೆಂಡತಿ ಕ್ಷಮಿಸುತ್ತಾಳೆ. ಆದರೆ ಆಫೀಸಿನಲ್ಲಿ ನಿಮ್ಮ ಸಹೋದ್ಯೋಗಿ ಕ್ಷಮಿಸುವುದಿಲ್ಲ. ಹೀಗಾಗಿ ಯಾವತ್ತೂ ಸಹೋದ್ಯೋಗಿಗಳ ಜತೆ ಉತ್ತಮಬಾಂಧವ್ಯ ಕಾಪಾಡಿಕೊಳ್ಳಬೇಕು.

ಹಿಪ್ನಾಟಿಸಂ ಅಂದ್ರೆ ಏನು?
ಒಂದು ದಿನ ಯೋಗಿ ದುರ್ಲಭಜೀ ತಮ್ಮ ಆಪ್ತರನ್ನು ಕರೆದು, ಹಿಪ್ನಾಟಿಸಂ ಅಂದ್ರೆ ಏನು ಎಂದು ಕೇಳಿದರು. ಅದಕ್ಕೆ ಒಬ್ಬೊಬ್ಬರು ಒಂದು ರೀತಿಯ ವ್ಯಾಖ್ಯಾನ ಮಾಡಿದರು. ಆದರೆ ಅವರಿಗೆ ಪರಮಾಪ್ತನಾದ ಒಬ್ಬಳು, ‘ಹಿಪ್ನಾಟಿಸಂ ಅಂದ್ರೆ ಗಂಡಸನ್ನು ನಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು, ಆತನಿಂದ ಏನನ್ನು ಮಾಡಿಸಿಕೊಳ್ಳಲು ಬಯಸುತ್ತೀರೋ, ಅದನ್ನು ಮಾಡಿಸಿಕೊಳ್ಳುವುದು’ ಎಂದು ಹೇಳಿದಳು. ಅದಕ್ಕೆ ದುರ್ಲಭಜೀ ತಕ್ಷಣ ಹೇಳಿದರು – ‘ಅದು ಹಿಪ್ನಾಟಿಸಂ ಅಲ್ಲ, ಅದಕ್ಕೆ ದಾಂಪತ್ಯ ಅಂತಾರೆ’

ದುರ್ಲಭಜೀ ಹೇಳಿದ ಪ್ರಸಂಗಗಳು

ನನಗೆ ಈ ಪ್ರಸಂಗವನ್ನು ಹೇಳಿದ್ದು ಯೋಗಿ ದುರ್ಲಭಜೀ. ಆದರೆ ದುರ್ಲಭಜೀ ಮೂಲತಃ ಈ ಪ್ರಸಂಗವನ್ನು ಓದಿದ್ದು ಓಶೋ ಪುಸ್ತಕದಲ್ಲಿ. ಒಮ್ಮೆ ಓಶೋ ಪ್ರವಚನದಲ್ಲಿ ಭಕ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಕೊನೆಯಲ್ಲಿ ಒಬ್ಬ ಪೋರ್ಚುಗೀಸ್ ಮಹಿಳೆ ಎದ್ದುನಿಂತು, ‘ಓಶೋ, ನೀವು ನಿಮ್ಮ ಪ್ರವಚನದಲ್ಲಿ ಹೇಳದ ವಿಷಯಗಳಿಲ್ಲ. ಆದರೆ ನೀವು ಪೋರ್ಚುಗೀಸರ ಬಗ್ಗೆ ಇಲ್ಲಿ ತನಕ ಒಂದೇ ಒಂದು ಹಾಸ್ಯ ಪ್ರಸಂಗವನ್ನು ಹೇಳಿಯೇ ಇಲ್ಲ. ಏನಾದರೂ ಹೇಳಿ’ ಎಂದು ಕೇಳಿಕೊಂಡಳು.

ಆಗ ಓಶೋ ಎರಡು ಪ್ರಸಂಗಗಳನ್ನು ಹೇಳಿದರು. ಒಮ್ಮೆ ಡಾಕ್ಟರ್ ಬಳಿ ಒಬ್ಬ ಪೋರ್ಚುಗೀಸ್ ಬಂದ. ‘ಡಾಕ್ಟರ್, ದಯವಿಟ್ಟು ನನ್ನ ಟೆಸ್ಟಿಕಲ್ (ವೃಷಣ)ನ್ನು ತೆಗೆದು ಹಾಕಿ’ ಎಂದು ಗೋಗರೆದ. ಡಾಕ್ಟರ್‌ಗೆ ಆಶ್ಚರ್ಯವಾಯಿತು. ‘ನಿನ್ನ ಟೆಸ್ಟಿಕಲ್ ನ್ನು ಯಾಕೆ ತೆಗೆಯಬೇಕು?’ ಎಂದು ಕೇಳಿದರು. ‘ಆ ಪ್ರಶ್ನೆಯನ್ನೆಕೇಳಬೇಡಿ, ದಯವಿಟ್ಟು ಟೆಸ್ಟಿಕಲ್‌ನ್ನು ತೆಗೆದು ಹಾಕಿ’ ಎಂದ. ಆದರೂ ಡಾಕ್ಟರರು, ‘ಈ ನಿರ್ಧಾರಕ್ಕೆ ಬರುವ ಮುನ್ನ ನೀನು ಸಾಕಷ್ಟು ಯೋಚಿಸಿದ್ದೀಯಾ ಎಂದು ಭಾವಿಸುತ್ತೇನೆ. ನಿಜ ತಾನೇ?’ ಎಂದು ಕೇಳಿದರು. ಅದಕ್ಕೆ ಪೋರ್ಚುಗೀಸ್, ‘ಯಸ್ ಡಾಕ್ಟರ್, ಈ ಬಗ್ಗೆ ನಾನು ಸಾಕಷ್ಟು
ಯೋಚಿಸಿದ್ದೇನೆ. ದಯವಿಟ್ಟು ಅದನ್ನು ತೆಗೆದುಬಿಡಿ’ ಎಂದು ಹೇಳಿದ. ಒಲ್ಲದ ಮನಸ್ಸಿನಿಂದ ಡಾಕ್ಟರ್ ಆತನ ಟೆಸ್ಟಿಕಲ್‌ನ್ನು ತೆಗೆದು ಹಾಕಿದರು.

ಎರಡು ವಾರಗಳು ಕಳೆದವು. ಪೋರ್ಚುಗೀಸ್ ಸಂಪೂರ್ಣ ಗುಣಮುಖನಾದ. ಈ ವಿಷಯವನ್ನು ತನ್ನ ಸ್ನೇಹಿತನಿಗೆ ತಿಳಿಸಬೇಕೆಂದು ಆತನ ಮನೆಗೆ ಹೋದ. ‘ಏನಾಯಿತು? ನನ್ನ ಸಲಹೆಯನ್ನು ಪಾಲಿಸಿದೆ ತಾನೆ?’ ಎಂದು ಕೇಳಿದ. ಅದಕ್ಕೆ ಪೋರ್ಚುಗೀಸ್ ಹೇಳಿದ – ‘ನಾನು ನಿನ್ನ ಸಲಹೆಯನ್ನು ಪಾಲಿಸದೇ ಇರುತ್ತೇನಾ? ನೀನು ಹೇಳಿದ ತಕ್ಷಣವೇ ಒಬ್ಬ ಒಳ್ಳೆಯ ಡಾಕ್ಟರನ್ನು ಸಂಪರ್ಕಿಸಿ, ನನ್ನ ಟೆಸ್ಟಿಕಲ್ ಕತ್ತರಿಸಿಕೊಂಡು ಬಂದೆ.’

ಅದಕ್ಕೆ ಆತನ ಸ್ನೇಹಿತ, ‘ಅಯ್ಯೋ! ಹೌದಾ?’ ಎಂದು ತಲೆ ಮೇಲೆ ಕೈ ಹೊತ್ತು ಕುಳಿತುಬಿಟ್ಟ. ಒಂದು ಕ್ಷಣ ಬಿಟ್ಟು ಹೇಳಿದ – ‘ಅಲ್ಲಯ್ಯ, ನಾನು ನಿನಗೆ ಹೇಳಿದ್ದು ಟಾನ್ಸಿಲ್ ಆಪರೇಷನ್ ಮಾಡಿಸಿಕೋ ಅಂತ, ಟೆಸ್ಟಿಕಲ್ ಅಲ್ಲ’. ಇನ್ನೊಂದು ಪ್ರಸಂಗ. ಒಬ್ಬ ಪೋರ್ಚುಗೀಸ್ ತನ್ನ ಸ್ನೇಹಿತನಿಗೆ ಹೇಳಿದ – ನನ್ನ ಪತ್ನಿಯಿದ್ದಾಳಲ್ಲ, ಅವಳು ನಿಜಕ್ಕೂ ದೈವಿಕ. ಅವಳು ಬೇರೆಯಲ್ಲ, ದೇವತೆ ಬೇರೆ ಅಲ್ಲ.’ ಇದನ್ನು ಕೇಳಿದ ಆತನ ಸ್ನೇಹಿತ ಹೇಳಿದ – ‘ಹೌದಾ? ಬಹಳ ಸಂತಸದ ವಿಚಾರ.’

ಅದಕ್ಕೆ ಪೋರ್ಚುಗೀಸ್ ಹೇಳಿದ – ‘ಅದ್ಸರಿ ನಿನ್ನ ಹೆಂಡತಿ? ಸ್ನೇಹಿತ ಬಹಳ ಬೇಸರದಿಂದ ಹೇಳಿದ- ‘ನನ್ನ ಹೆಂಡತಿ ಇನ್ನೂ ಜೀವಂತ ಇದ್ದಾಳೆ.’

ಹಾಗಿರುವವರೆಲ್ಲ ಭಿಕ್ಷುಕರಲ್ಲ

ವಾಟ್ಸಾಪ್‌ನಲ್ಲಿ ಓದಿದ ಈ ಪ್ರಸಂಗವನ್ನು ನಿಮಗೂ ಹೇಳಬೇಕು. ಈ ದಂಪತಿಗಳನ್ನ ನೋಡಿದಾಗ ಮೊದಲು ಬಂದ ಯೋಚನೆ ಅಂದ್ರೆ ಇವರು ಭಿಕ್ಷುಕರೇ ಅಲ್ಲವಾ? ಆದರೆ ಅವರಿಗೆ ಹಣ ಕೊಟ್ಟರೆ, ಊಟ ಕೊಟ್ಟರೆ ನಯವಾಗಿ ತಿರಸ್ಕರಿಸಿದರು. ಹಾಗಾದರೆ ಇವರು ಯಾಕೆ ಹೀಗೆ ಅಲೆದಾಡ್ತಿ ದಾರೆ? ಆಗ ಆ ದಂಪತಿಗಳು ತಮ್ಮ ಕಥೆ ಹೇಳಲು ಆರಂಭಿಸಿದರು.

‘ನಾವು ನಮ್ಮ ಊರು ದ್ವಾರಕೆಯಿಂದ 2200 ಕಿಮೀ ದೂರ ಕ್ರಮಿಸಿ, ಪಂಢರಪುರದ ಪಾಂಡುರಂಗ ಹಾಗೂ ತಿರುಪತಿ ಬಾಲಾಜಿ ದರ್ಶನ ಮಾಡಿ ಹಿಂದಿರುಗುತ್ತಿದ್ದೇವೆ.’ ‘ಎರಡು ವರ್ಷಗಳ ಹಿಂದೆ, ಗಂಡ ಕಂಗಾಲಾಗಿ ಕುಳಿತುಕೊಂಡಿದ್ದ. ಆಗ ಅವರ ತಾಯಿ ದೇವರಿಗೆ ಹರಕೆ ಹೇಳಿಕೊಂಡಿದ್ದರು. ಮಗನ ಕಣ್ಣುಗಳು ಮೊದಲಿನಂತಾದರೆ ಅವನು ದ್ವಾರಕೆಯಿಂದ ಪಂಢರಪುರ ವಿಠ್ಠಲ ಹಾಗೂ ತಿರುಪತಿ ಬಾಲಾಜಿಯನ್ನು ಕಾಲ್ನಡಿಗೆಯಿಂದ ಹೋಗಿ ದರ್ಶನ ಮಾಡಿ, ಕಾಲ್ನಡಿಗೆಯಲ್ಲಿ ಹಿಂತಿರುಗಿ ಬರುತ್ತಾನೆ ಎಂದು ಹರಕೆ ಹೇಳಿಕೊಂಡರು. ಅದೇನು ಪವಾಡವೋ ಏನೋ? ಯಾವ ಔಷಧವನ್ನೂ ಸೇವಿಸದೇ ಕಣ್ಣುಗಳು ಸರಿಹೋದವು.

ಆದ್ದರಿಂದ ಹರಕೆ ತೀರಿಸಲು ನನ್ನ ಜತೆ ಕಾಲ್ನಡಿಗೆ ಪ್ರವಾಸ ಮಾಡುತ್ತಿದ್ದಾರೆ ಇವರು. ನಾವಿಬ್ಬರೂ ಪರಸ್ಪರ ಇಂಗ್ಲಿಷಿನ ಮಾತಾಡುತ್ತೇವೆ’. ಅದನ್ನು ಕೇಳಿದವರು, ‘ನಿಮಗೆ ಇಷ್ಟು ಸುಂದರ ಇಂಗ್ಲೀಷು ಹೇಗೆ ಬರುತ್ತೆ?’ ಅವರ ಉತ್ತರ ಕೇಳಿದವರದು ದಂಗಾಗುವ ಸರದಿ. ಈ ಮನುಷ್ಯ ಆಕ್ಸ್ ಫರ್ಡ್ ಯುನಿವರ್ಸಿಟಿಯಲ್ಲಿ ಖಗೋಳ ಶಾಸ್ತ್ರದ ವಿಷಯದ ಮೇಲೆ ಪಿಎಚ್.ಡಿ. ಮಾಡಿದ್ದಾರೆ!

ಅವರ ಪತ್ನಿ ಆಕ್ಸ್ ಫರ್ಡ್‌ನಲ್ಲಿ ಸೈಕಾಲಜಿ ವಿಷಯದ ಮೇಲೆ ಪಿಎಚ್.ಡಿ. ಗಳಿಸಿದ್ದಾರೆ. ಅಷ್ಟೇ ಅಲ್ಲ , ಈ ಮನುಷ್ಯ ನಾಸಾದಲ್ಲಿ ದಿವಂಗತ
ಕಲ್ಪನಾಚಾವ್ಲಾ ಟೀಂ ಸದಸ್ಯರಾಗಿದ್ದರು. ಈಗ ಭಾರತದ ಅವರ ಹುಟ್ಟೂರು ದ್ವಾರಕೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಇವರ ಹೆಸರು ಪ್ರೊಫೆಸರ್ ಡಾ. ದೇವ್ ಉಪಾಧ್ಯಾಯ ಹಾಗೂ ಪತ್ನಿಯ ಹೆಸರು ಪ್ರೊಫೆಸರ್ ಡಾ. ಸರೋಜ್ ಉಪಾಧ್ಯಾಯ. ರಸ್ತೆಯಲ್ಲಿ ಕಾಣಸಿಗುವ ದೈನ್ಯಾವಸ್ಥೆ ಯಲ್ಲಿರುವಂತೆ ಕಾಣುವ ಎಲ್ಲರನ್ನೂ ಬಿಕ್ಷುಕರು ಅಂತಾ ಭಾವಿಸಿದರೆ, ನಾವೇ ಮೂರ್ಖರು ಅಲ್ವಾ?!

error: Content is protected !!