Thursday, 19th September 2024

ಇರುವೆಗೆ ಸಿಗದ ಸಕ್ಕರೆ ಸೀಮೆಗಿಲ್ಲದ್ದು

ತುಂಟರಗಾಳಿ

ಸಿನಿಗನ್ನಡ

ಕನ್ನಡ ಚಿತ್ರರಂಗದಲ್ಲಿ ಹೊಂಬಾಳೆ ಚೆನ್ನಾಗೇ ಚಿಗುರುತ್ತಾ ಇದೆ. ಕೆಜಿಎಫ್ ನಂತಹ ದೊಡ್ಡ ದೊಡ್ಡ ಚಿತ್ರಗಳಿಗೇ ಕೈಹಾಕು ತ್ತಿರುವ ಹೊಂಬಾಳೆ ಫಿಲ್ಮ್ಸ್ ಈಗ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಸಿನಿಮಾ ನಿರ್ಮಾಣ ಸಂಸ್ಥೆ. ಇದರ ಮಾಲೀಕ ವಿಜಯ್ ಕಿರಗಂದೂರು ಈಗ ಮುಂದಿನ ಮೂರು ವರ್ಷಗಳಲ್ಲಿ ಚಿತ್ರರಂಗದ ಮೇಲೆ 3000 ಕೋಟಿ ಹಣ ಹೂಡುವುದಾಗಿ ಹೇಳಿಕೆ ನೀಡಿದ್ದಾರೆ.

ಕೆಜಿಎಫ್ ಒಂದರಿಂದಲೇ ಸುಮಾರು ಸಾವಿರಕ್ಕೂ ಹೆಚ್ಚು ಕೋಟಿ ಹಣ ಗಳಿಸಿರುವ ಅವರಿಗೆ ಇದೇನೂ ದೊಡ್ಡದಲ್ಲ. ಅದರ ಜೊತೆಗೆ ಕಾಂತಾರ ಮಾಡಿರುವ ಕಾಂಚಾಣ ಕೂಡ ಕಡಿಮೆ ಏನಲ್ಲ. ಇದೇ ವಿಜಯ್ ಕಿರಗಂದೂರು ಅವರಿಗೆ ಈ ಮಾತನ್ನು ಹೇಳುವ ಧೈರ್ಯ ನೀಡಿರಬಹುದು. ಆದರೆ ಹೊಂಬಾಳೆ ಈ ಮಟ್ಟಕ್ಕೆ ಬೆಳೆದಿದ್ದು ರಾತ್ರೋ ರಾತ್ರಿ ಅಲ್ಲ. ಬೆಳೆಯುವ ಹೊಂಬಾಳೆ ಪೈರು ಮೊಳಕೆಯ ಅನ್ನುವಂಥ ಅದೃಷ್ಠ ಅವರಿಗೆ ಇರಲಿಲ್ಲ.

ಪುನೀತ್ ರಾಜ್ ಕುಮಾರ್ ಅವರಂಥ ದೊಡ್ಡ ಸ್ಟಾರ್ ಹಾಕಿಕೊಂಡು ನಿನ್ನಿಂದಲೇ ಅನ್ನೋ ಸಿನಿಮಾದಿಂದ ಕೆರಿಯರ್ ಆರಂಭಿಸಿದ ಹೊಂಬಾಳೆಗೆ ನಿನ್ನಿಂದಲೇ ಸೋತೆ ಒಪ್ಪಿಕೋ ಅನ್ನೋ ಪರಿಸ್ಥಿತಿ ಬಂದಿತ್ತು. ಆದರೆ ಅಲ್ಲಿಂದ ಮುಂದೆ ಹೊಂಬಾಳೆಗೆ ಅದೃಷ್ಠ ಖುಲಾಯಿಸಿದೆ.

ಹಾಗಾಗಿ ಅವರು ಈಗ ೩೦೦೦ ಕೋಟಿ ಕ್ಲಬ್ ಸೇರಿದ್ದಾರೆ. ಆದರೆ ಇದರಲ್ಲಿ ಕೇವಲ ಸ್ಟಾರ್ ನಟರ ಸಿನಿಮಾಗಳಿಗೇ ಅಂತನೇ ನೂರಾರು ಕೋಟಿ ಹಾಕುವ ಬದಲು, ಹೊಸ ಯೋಚನೆಗಳನ್ನು ಇಟ್ಟುಕೊಂಡು ಚಿತ್ರರಂಗಕ್ಕೆ ಬರುವ, ಆದರ ಸರಿಯಾದ ನಿರ್ಮಾಪಕರಿಲ್ಲದೆ ಸೊರಗುವ ಪ್ರತಿಭೆಗಳ ಸಣ್ಣ ಸಿನಿಮಾಗಳಿಗೂ ಈ ನಿರ್ಮಾಣ ಸಂಸ್ಥೆ ಪೋಷಣೆ ನೀಡಿ ಬೆಳೆಸುವಂತಾಗಲಿ ಅನ್ನೋದು ಚಿತ್ರರಂಗದ ಆಸೆ.

ಲೂಸ್ ಟಾಕ್
ನಳಿನ್ ಕುಮಾರ್ ಕಟೀಲು (ಕಾಲ್ಪನಿಕ ಸಂದರ್ಶನ)
ಏನ್ ಸಾರ್, ಜನ ರಸ್ತೆಗಳಲ್ಲಿ ಅಪಘಾತ ಆಗಿ ಸಾಯ್ತಾ ಇದ್ರೂ ಗುಂಡಿ ಮುಚ್ಚೋದೆ ಆಮೇಲೆ, ಮೊದಲು ಲವ್ ಜಿಹಾದ್ ಬಗ್ಗೆ ಯೋಚನೆ ಮಾಡಿ ಅಂದ್ರಲ್ಲ, ಸರಿನಾ ಇದು?
-ಹೌದು ರೀ, ಎಲ್ಲರೂ ಬೀದಿ, ‘ಹಾದಿ’ ಬಗ್ಗೆನೇ ಮಾತಾಡ್ತಾ ಇದ್ರೆ, ‘ಜಿಹಾದಿ’ಗಳ ಬಗ್ಗೆ ಯೋಚನೆ ಮಾಡೋರು ಯಾರು?

ಎಲ್ಲರೂ ಲವ್ ಜಿಂದಾಬಾದ್ ಅಂತಿದ್ರೆ, ನೀವ್ ಮಾತ್ರ ಲವ್ ಜಿಹಾದ್ ಅನ್ನೋದ್ಯಾಕೆ?
-ಪ್ರೀತಿಸ್ತೀನಿ ಅಂತ ಹೇಳಿ ಕೊಲೆ ಮಾಡಿದ್ರೆ, ಲವ್ ಮುರ್ದಾಬಾದ್ ಆಗುತ್ತಲ್ಲ ಅದಕ್ಕೆ.

·Everything is fair in love and war ಅಂತ ತಿಳಿದೋರು ಹೇಳ್ತಾರೆ, ನೀವು ನೋಡಿದ್ರೆ, ಲವ್ ಮತ್ತು ವಾರ್ ಎರಡನ್ನೂ ಸೇರಿಸಿ ಲವ್ ಜಿಹಾದ್ ಅಂತ ಕೆಂಡ ಕಾರ್ತೀರಲ್ಲ?

-ವಾರ್ ಅಂಡ್ ಪೀಸ್ ಅನ್ನೋ ಬುಕ್ ಓದಿ ಕೆಲವ್ರು ತಪ್ಪು ತಿಳ್ಕೊಂಡು, ಲವ್ ಮಾಡಿ, ಜಿಹಾದ್ ವಾರ್ ಮಾಡಿ, ಆಮೇಲೆ ಪೀಸ್ ಪೀಸ್ ಮಾಡಿ ಸಾಯಿಸ್ತಾರಲ್ಲ, ಇದೂ ಹಂಗೇ.

ಸರಿ, ಕೊಲ್ಲು ಹುಡುಗಿ ಒಮ್ಮೆ ನನ್ನ, ಹಾಗೇ ಸುಮ್ಮನೇ ಅನ್ನೋ ಲವ್ ಸಾಂಗ್ ನ ನೀವು ತಪ್ಪು ತಿಳ್ಕೊಂಡಿದ್ದೀರ. ಎಲ್ರೂ ಹಂಗೇ ಇರಲ್ಲ ಕಣ್ರೀ

-ಇರದೇ ಇರಬಹುದು. ಆದ್ರೆ ಹಂಗೇ ಇದ್ದಾರೆ ಅಂತ ಹೇಳಿದ್ರೆ ತಾನೇ ಮುಂದೆ ನಮ್ಮ ಕೈಯಲ್ಲಿ ಅಧಿಕಾರ ಇರೋದು?

ಅ, ನೀವು ಕಟೀಲು ಅಂತ ಹೆಸರಿಟ್ಟುಕೊಂಡು, ದುರ್ಗಾ ಪರಮೇಶ್ವರಿ ಬಿಟ್ಟು ಯಾವಾಗ್ಲೂ ದರ್ಗಾದವರ ಬಗ್ಗೆನೇ ಮಾತಾಡೋದು ಯಾಕೆ? 
-ಹಂಗೇನಿಲ್ಲ, ದುರ್ಗಾ ಪರಮೇಶ್ವರಿ ನಾವು ವರ ಬೇಡಿದಾಗ ಹೂ ಕೊಡ್ತಾಳೆ, ನಾವದನ್ನ ಜನರ ಕಿವಿ ಮೇಲೆ ಇಡ್ತೀವಿ ಅಷ್ಟೇ.

ನೆಟ್ ಪಿಕ್ಸ್

ಡಾಕ್ಟರ್ ಖೇಮು ಹತ್ರ ಒಬ್ಬ ಹುಡುಗ ಬಂದ. ಡಾಕ್ಟ್ರೇ ನಂಗೊಂದು ಪ್ರಾಬ್ಲಮ್ ಆಗಿದೆ. ಏನು ಹೇಳಿ?
ನನ್ನ ಗರ್ಲ್ ಫ್ರೆಂಡ್ ಪ್ರೆಗ್ನೆಂಟ್ ಆಗಿದ್ದಾಳೆ.
ಅದರನು ವಿಶೇಷ? ಇದು ಕಾಮನ್ ವಿಷ್ಯ ಅದಲ್ಲ ಡಾಕ್ಟರ್, ನಾವು ಯಾವಾಗಲೂ ಪ್ರೊಟೆಕ್ಷನ್ ಯೂಸ್ ಮಾಡ್ತಾ ಇದ್ವಿ. ಇದು ಹೇಗಾಯ್ತು ಅಂತ ಗೊತ್ತಿಲ್ಲ ಸರಿ, ನಿಂಗೊಂದು ಕಥೆ ಹೇಳ್ತೀನಿ. ಒಬ್ಬ ಮನುಷ್ಯ ಕಾಡಿನ ಹತ್ರ ಮನೆ ಮಾಡಿಕೊಂಡಿದ್ದ. ತಾನು ಯಾವಾಗಲೂ ಕಾಡಿನ ಒಳಗೆ ಹೋಗುವಾಗ ಗನ್ ತೆಗೆದುಕೊಂಡು ಹೋಗುತ್ತಿದ್ದ. ಒಂದು ದಿನ ಅವನು ತನ್ನ ಗನ್ ಬದಲು ಛತ್ರಿ ತಗೊಂಡು ಹೋದ. ಅವನ ಮುಂದಿನಿಂದ ಒಂದು ಸಿಂಹ ಬಂದು ಅಟ್ಯಾಕ್ ಮಾಡಿತು. ಅದರಿಂದ ಪಾರಾಗಲು ಅವನು ತನ್ನ ಛತ್ರಿ ಅನ್ನು ಓಪನ್ ಮಾಡಿದ. ಒಂದು ಸೆಕೆಂಡ್ ನಂತರ ನೋಡಿದರೆ ಛತ್ರಿಯಿಂದ ಗುಂಡು ಹಾರಿ ಸಿಂಹ ಸತ್ತು ಹೋಗಿತ್ತು
ಇದು ಸಾಧ್ಯ ಇಲ್ಲ. ಸಿಂಹಕ್ಕೆ ಬೇರೆ ಯಾರೋ ಶೂಟ್ ಮಾಡಿರಬೇಕು ಗುಡ್ ನಿಂಗೆ ಕಥೆ ಅರ್ಥ ಆಯ್ತಲ್ಲ. ನೆಕ್ಸ್ಟ್ ಪೇಷೆಂಟ್ ಪ್ಲೀಸ್.

ಲೈನ್ ಮ್ಯಾನ್

೨೦೨೪ ಜನವರಿ ಒಂದಕ್ಕೆ ರಾಮಮಂದಿರ ಸಿದ್ಧ- ಅಮಿತ್ ಶಾ
-೨೦೨೪ರ ಲೋಕಸಭೆ ಚುನಾವಣೆಯಲ್ಲಿ ಓಟು ಕೇಳುವಾಗ ತೋರಿಸೋಕೆ ಏನಾದ್ರೂ ಬೇಕಲ್ಲ..
ರಾಮಮಂದಿರದ ದೇಣಿಗೆ ಹಣದಲ್ಲಿ ಮೋಸ ಮಾಡಿದ್ರೆ ಅದು
-ಕೃಷ್ಣನ ಲೆಕ್ಕ
ಇಂದಿನ ಯುವಪೀಳಿಗೆಯ ಆಟಿಟ್ಯೂಡ್
-ಜೀವನದಲ್ಲಿ ಖುಷಿ ಮೂಲ ಹುಡುಕ್ರೋ ಅಂದ್ರೆ ಋಷಿ ಮೂಲ
ಹುಡುಕ್ತಾರೆ.
ಒಂದು ಇಮೇಲ್‌ಗೆ ತಕ್ಕ ಉತ್ತರ ಕೊಡೋದು ಅಂದ್ರೆ ಏನು ?
-YOU MAILED IT, I NAILED IT

ಎಲ್ಲರ ಬಗ್ಗೆನೂ ಸಂದೇಹ ಪಡುವವನು
-ಅನುಮಾನ್ ಭಕ್ತ
‘ಬಲ’ವಂತ ಮಾಡಿದರೂ ಕುಡಿಯದವರು
-‘ಎಡ’ ಪಂಥೀಯರು.
ನಂಬಿಕಸ್ಥ ಮನುಷ್ಯರು ಅಂದ್ರೆ ಯಾರು?
-ನ್ಯೂ ಇಯರ್ ದಿನನೂ ಓಲ್ಡ್ ಮಾಂಕ್ ಕುಡಿಯೋರು
ಮನೇಲಿ ಟಿವಿ ಇದ್ರೆ ಬಿಪಿಎಲ್ ಕಾರ್ಡು ರದ್ದು
ಖೇಮು- ನಮ್ಮನೇಲಿ ಬಿಪಿಎಲ್ ಟಿವಿ ಇಲ್ಲ, ತೊಂದ್ರೆ ಇಲ್ಲ ಬಿಡಿ.
ಇರುವೆಗೆ ಸಿಗದ ಸಕ್ಕರೆ
-ಸೀಮೆಗಿಲ್ಲದ ಸಕ್ಕರೆ
ವಾಣಿ ಅನ್ನೋ ಹುಡುಗಿ ಸತ್ತ ಮೇಲೆ ಏನಾಗ್ತಾಳೆ
-ಅಶರೀರ ವಾಣಿ
‘ಗುಪ್ತಚರ’ ಇಲಾಖೆಯಲ್ಲಿ ಕೆಲಸ ಮಾಡೋನು
-SPYಡರ್ ಮ್ಯಾನ್
ಮಾಡಿದ ಎಲ್ಲ ಕೆಲಸಗಳಿಗೂ ಪ್ರತಿಫಲ ನಿರೀಕ್ಷೆ ಮಾಡೋದು ತಪ್ಪು.
-ನಾವು ಸೂರ್ಯ-ನಮಸ್ಕಾರ ಮಾಡಿದ್ರೆ, ಸೂರ್ಯ ಏನ್ ವಾಪಸ್ ನಮ್ಗೆ ‘ನಮಸ್ಕಾರ ಗುರೂ’ ಅಂತಾನಾ?