Saturday, 14th December 2024

ಭಾರತಕ್ಕೆ ಮತಾಂತರ ತಡೆ ವಿಧೇಯಕ ಅನಿವಾರ್ಯ

ಪ್ರಸ್ತುತ

ಜಿತೇಂದ್ರ ಕುಂದೇಶ್ವರ

kundeshwara@gmail.com

ಜಾತ್ಯತೀತ ಸೋಗಿನಡಿ ಜಾತಿ ಒಡೆದೇ ಬದುಕುತ್ತಿರುವ ರಾಜಕಾರಣಿಗಳು ‘ಆಮಿಷದ ಮತಾಂತರ, ಲವ್ ಜಿಹಾದ್ ಇವೆಲ್ಲ ಕಪೋಲ ಕಲ್ಪಿತ’ ಎಂದು ಹೇಳು ತ್ತಲೇ ಇದ್ದಾರೆ. ಆದರೆ ಪ್ರೀತಿಯ ಬಲೆಯಲ್ಲಿ ಬಡ ಹಿಂದೂ ಯುವತಿಯರನ್ನು ಕೆಡವಿ ಉಗ್ರರ ಅಡ್ಡೆಗಳಲ್ಲಿ ದಾಸಿಯರಂತೆ ಬಳಸುವ ಕೆಲಸ ಸದ್ದಿಲ್ಲದೆ ನಡೆಯು ತ್ತಿದೆ. ಈ ಕುರಿತ ಅಮೂಲ್ಯ ಮಾಹಿತಿ, ದಾಖಲೆಗಳು ಇಲ್ಲಿವೆ…

ಮಂಗಳೂರಲ್ಲಿ ಆಳಕ್ಕೆ ಬೇರುಬಿಟ್ಟಿರುವ ಇಂಡಿಯನ್ ಮುಜಾಹಿದ್ದೀನ್ (ಐಎಂ) ಉಗ್ರರು ಜನಸಾಮಾನ್ಯರ ನೆಮ್ಮದಿಯ ಬದುಕಿನ ಬುಡವನ್ನೇ ಅಲುಗಾಡಿಸು ತ್ತಿದ್ದಾರೆ. ಹೊರಜಗತ್ತಿಗೆ ಗೊತ್ತಿಲ್ಲದಂತೆ ಈ ಸಂಘಟನೆ ಹಿಂದೂ ಯುವತಿಯರನ್ನು ಮೋಹದ ಬಲೆಯಲ್ಲಿ ಕೆಡವಿ ಮತಾಂತರಿಸಿ ದೇಶದ್ರೋಹಿ ಕೃತ್ಯಗಳಿಗೆ ಬಳಸುತ್ತಿದೆ.

ಬಿಹಾರದ ಪಟನಾ ಸ್ಫೋಟಕ್ಕೆ ಸಂಬಂಧಿಸಿದಂತೆ 2013 ರಲ್ಲಿ ಮಂಗಳೂರಿನ ಪಂಜಿಮೊಗರು ನಿವಾಸಿ ಆಯಿಷಾ ಬಾನು ಮತ್ತು ಆಕೆಯ ಪತಿ ಜುಬೆರ್ ಹುಸೇನ್‌ ನನ್ನು ಎಟಿಎಸ್ ಪೊಲೀಸರು ಬಂಧಿಸಿದ್ದರು. ಬಿಹಾರ ದಲ್ಲಿ ಬಂಧಿತ ಇದೇ ಸಂಘಟನೆ ಭಯೋತ್ಪಾದಕನೊಬ್ಬ ನಾಲ್ವರು ಹಿಂದೂಗಳ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಹಣಕಾಸು ವ್ಯವಹಾರ ನಡೆಸುತ್ತಿದ್ದುದು ಬಹಿರಂಗವಾಗಿತ್ತು. ಇಲ್ಲಿ ಹವಾಲ ಹಣ ತಲುಪಿಸುತ್ತಿದ್ದ ಆಯಿಷಾ ಮೂಲತಃ ಹಿಂದು. ಈಕೆ ಪುತ್ತೋಳಿ ಯಾನೆ ಇಂದಿರಾ. ಈಕೆಯ ತಂದೆ ಹೆಸರು ಭೀಮ, ಊರು ಕೊಡಗಿನ ವಿರಾಜ ಪೇಟೆ ತಾಲೂಕಿನ ದೇವನಗೆರೆ.

1994ರಲ್ಲಿ ಬಜ್ಪೆ ಭಟ್ಟರ ಕೆರೆಯ ಮಹಮ್ಮದ್ ಎಂಬವರ ಮಗ ಜುಬೇರ್ ಹುಸೇನ್‌ನನ್ನು ಪ್ರೀತಿಸಿದ ಆಕೆ ಮದುವೆಯ ನಂತರ ಆಯಿಷಾ ಆಗಿದ್ದಳು. ಇದಕ್ಕೂ ಕಾರಣವಿದೆ. ಪುತ್ತೋಳಿ ಎಳವೆಯಲ್ಲೇ ತಂದೆ ಕಳ ಕೊಂಡಿ ದ್ದಳು. ತಾಯಿ ದುಡಿಮೆ ಸಾಲುತ್ತಿರಲಿಲ್ಲ. ಸಂಸಾರ ಸರಿದೂಗಿಸಲು ಮಗಳು ಪುತ್ತೋಳಿಯನ್ನು ಜುಬೇರ್ ಹುಸೇನ್ ಸಂಬಂಧಿಕರ ಮನೆಗೆ ಪಾತ್ರೆ ತೊಳೆಯಲು ಕಳುಹಿಸಿದ್ದಳು. ಅಲ್ಲಿಗೆ ಬರುತ್ತಿದ್ದ ಜುಬೇರ್ ಪ್ರೀತಿ ನಾಟಕ ವಾಡಿ, ಪೊನ್ನಾಣಿಗೆ ಕರೆದೊಯ್ದು ಮತಾಂತರ ಮಾಡಿದ್ದ.

ಇದೀಗ ಮೂವರು ಮಕ್ಕಳ ತಾಯಿ ಆಯೇಷಾ ಇಂಡಿಯನ್ ಮುಜಾಹಿದ್ದೀನ್ ಉಗ್ರರಿಗೆ ಹವಾಲ ಹಣ ತಲುಪಿಸುವ ಕೆಲಸ ಮಾಡುತ್ತಿದ್ದಳು. ತನ್ನೆಲ್ಲ ವ್ಯವಹಾರ ನಡೆಸುವಾಗ ಪುಟ್ಟ ಮಗುವನ್ನೂ ಜತೆಯ ಕರೆದೊಯ್ಯುತ್ತಿದ್ದಳು. ಬಂಧನ ಸಂದರ್ಭದಲ್ಲೂ ಹಸುಳೆ ಯನ್ನು ಕಂಕುಳಲ್ಲಿ ಹೊತ್ತೇ ಪೊಲೀಸರ ಜತೆ ಹೋಗುವ ದೃಶ್ಯ ಅನೇಕ ಸಜ್ಜನರ ಕರುಳು ಹಿಂಡಿತು. ಇದನ್ನೇ ನೆಪ ಮಾಡಿಕೊಂಡ ಜಾತ್ಯತೀತರು, ಪ್ರಗತಿಪರರು, ಬುದ್ಧಿಜೀವಿಗಳೆಂದು ಹೇಳಿ ಕೊಳ್ಳುವ ಮಂದಿ ‘ಅಮಾಯಕ ಮಹಿಳೆ ಮೇಲೆ ಕೋಮು ವಾಗಳ ಷಡ್ಯಂತ್ರ’ ಎಂದು ಪುಂಖಾನು ಪುಂಖವಾಗಿ ಹೇಳಕೆ ನೀಡಿ ಮಾಧ್ಯಮಗಳ ಮುಂದೆ ಕಣ್ಣೀರ ಕೋಡಿ ಹರಿಸಿದ್ದರು.

ಆದರೆ ಇದೇ ನವೆಂಬನರ್‌ಲ್ಲಿ ಈಕೆ ಮತ್ತು ಪತಿ ಸಹಿತ ನಾಲ್ವರಿಗೆ ಚತ್ತೀಸ್‌ಗಢ ಕೋರ್ಟ್ ೧೦ ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಈಕೆ ನಾನಾ ಬ್ಯಾಂಕ್‌ನ ೫೦ ಶಾಖೆಗಳ ನೆಟ್ ಬ್ಯಾಂಕಿಂಗ್ ಮೂಲಕ ೫ ಕೋಟಿಗೂ ಹೆಚ್ಚು ಹಣ ವರ್ಗಾವಣೆ ಮಾಡಿದ್ದಳು. ಪಾಕಿಸ್ಥಾನದಲ್ಲಿರುವ ಐಎಸ್‌ಐ ಏಜೆಂಟ್ ಇಬ್ರಾಹಿಂ ಎಂಬಾತನ ನಿರ್ದೇಶನದಂತೆ ಈಕೆ ಹವಾಲಾ ಹಣ ರವಾನೆ ಯಲ್ಲಿ ನಿರತಳಾಗಿದ್ದಳು ಎನ್ನುವುದು ಕೋರ್ಟ್ ವಿಚಾರಣೆ ವೇಳೆ ಸಾಬೀತಾಗಿದೆ. ಐಎಂ ಸಂಸ್ಥಾಪಕ ರಿಯಾಜ್ ಭಟ್ಕಳನೇ ಇಂಥ ಲವ್ ಜಿಹಾದ್ ಮತಾಂತರದ ತಂತ್ರ ಹೆಣೆದು ಜಾರಿಗೊಳಿಸಿದವನು.

ಆಯಿಷಾ ಬಾನು ಪ್ರಕರಣಕ್ಕೆ ಮುನ್ನವೇ ರಿಯಾಜ್ ಭಟ್ಕಳ್ ತಂಡದಲ್ಲಿದ್ದ ಬೋಳಂತೂರು ರಫೀಕ್ ಮತ್ತು ಕಾಪುವಿನ ಅಕ್ಬರ್ ಅಲಿ ಹಿಂದೂ ಯುವತಿಯರನ್ನು
ಪ್ರೀತಿಸಿ ಮತಾಂತರ ಮಾಡಿ ಉಗ್ರ ಕೃತ್ಯಗಳಿಗೆ ಬಳಸಿ ಕೊಂಡಿದ್ದರು. ಇವರು ಮೋಸ್ಟ್ ವಾಂಟೆಡ್ ಉಗ್ರರ ಜತೆ ಕೊಪ್ಪ ಹಕ್ಕಲಮನೆ ಮತ್ತು ವಿಠಲಮಕ್ಕಿಯಲ್ಲಿ ಬಾಂಬ್ ತಯಾರಿ ನಡೆಸುತ್ತಿದ್ದ ವೇಳೆ ಮತಾಂತರಗೊಂಡ ಹಿಳೆಯರು ಮನೆ ಕೆಲಸ, ಟೆಂಟ್ ಹಾಕುವ ಇನ್ನಿತರ ಕೆಲಸಕ್ಕೆ ನೆರವಾಗುತ್ತಿದ್ದರು. ಈ ಲವ್ ಜಿಹಾದ್ ಕೃತ್ಯಗಳಿಗೆ ‘ಸುನಾಮಿ ರೀಲಿಫ್ ಫಂಡ್’ ಹೆಸರಲ್ಲಿ ಇರಾನ್, ಫಿಲಿಪ್ಪೀನ್ಸ್ ದೇಶಗಳಿಂದ ಹಣ ಬರುತ್ತಿತ್ತು.

ಯಾರೀತ ಅಕ್ಬರ್ ಅಲಿ? ಮೂಲತಃ ಕಾಪು ನಿವಾಸಿ ಯಾಗಿದ್ದ ಅಕ್ಬರ್ ಯಾನೆ ಅಲಿಭಾಯ್ ೭ನೇ ತರಗತಿಗೇ ಡುಮ್ಕಿ ಹೊಡೆದು, ಗ್ಯಾರೇಜ್‌ನಲ್ಲಿ ಕೆಲಸ ಮಾಡು ತ್ತಿದ್ದ. ಕೆಲಕಾಲ ಬಸ್ ಕ್ಲೀನರ್ ಸಹ ಆಗಿ, 2005ರಲ್ಲಿ ಶಿರ್ವದ ಇಸ್ಲಾಂ ಶಾಲೆಯಲ್ಲಿ ವ್ಯಾನ್ ಚಾಲಕನಾಗಿ ಸೇರಿಕೊಂಡ. ಅಲ್ಲಿನ ಟೀಚರ್ ದಿವ್ಯಶ್ರೀ ಸುವರ್ಣ ಅವರನ್ನು ಪ್ರೀತಿಸತೊಡಗಿದ. ಇದು ದಿವ್ಯಶ್ರೀ ಹೆತ್ತವರಿಗೆ ಗೊತ್ತಾಗಿ ವಿರೋಧ ವ್ಯಕ್ತಪಡಿಸಿದರು. ತಕ್ಷಣ ಆಕೆಯನ್ನು ಕೇರಳ ಪೊನ್ನಾಣಿ ಕೇಂದ್ರಕ್ಕೊಯ್ದು ಮತಾಂತರ ಮಾಡಿ ‘ಮರಿಯಂ’ ಎಂದು ಹೆಸರಿಟ್ಟರು.

ಇದೇ ಅಕ್ಬರ್ ಅಲಿ ಯನ್ನು 2009ರಂದು ಡಿವೈಎಸ್ಪಿ ಸುಭಾಶ್ಚಂದ್ರ ಬಂಧಿಸಿದ್ದರು. ರಫೀಕ್ ಎಂಬಾತನ ಪ್ರಕರಣ ಗಮನಿಸಿ. ಬೋಳಂ ತೂರು ರಫೀಕ್ ಹಿಂದೂ ಯುವತಿ ಚಂದ್ರಿಕಾಳನ್ನು ಪ್ರೀತಿಸಿ, ಮತಾಂತರ ಮಾಡಿದ್ದ. 2005ರ ಜ.೨೪ರಂದು ಚಂದ್ರಿಕಾಳನ್ನು ಬಂಟ್ವಾಳದಿಂದ ಮಂಗಳೂರಿಗೆ ಕರೆಸಿ ಕೊಂಡು ಗೆಳೆಯನ ಕಾರಿನಲ್ಲಿ ಉಚ್ಚಿಲ ಮೂಳೂರಿಗೆ ಕರೆ ದೊಯ್ದಿದ್ದ. ಅಲ್ಲಿ ರಿಯಾಜ್ ಭಟ್ಕಳ್ ಮನೆಗೇ ಧರ್ಮ ಗುರುವನ್ನು ಕರೆಯಿಸಿ ಚಂದ್ರಿಕಾಳನ್ನು ಇಸ್ಲಾಂಗೆ ಮತಾಂತರ ಮಾಡಿ ‘ರುಬೀನಾ’ ಎಂದು ಹೆಸರು ಬದಲಿಸಿದರು.

ಅದೇ ವರ್ಷ ಫೆ ೧೩ರಂದು ನಿಖಾ ಮಾಡಿಕೊಂಡಿದ್ದರು. ಬಳಿಕ ಕೊಪ್ಪದ ಹಕ್ಕಲಮನೆಯಲ್ಲಿ ಮೂರೂವರೆ ವರ್ಷಅವರಿಬ್ಬರೂ ವಾಸವಾಗಿದ್ದರು. ೨೦೦೮ರ ಸೆ.೨೮ರವರೆಗೂ ರಿಯಾಜ್ ಭಟ್ಕಳ್ ಗ್ಯಾಂಗ್‌ಗೆ ಇವರು ನೆರವಾಗಿದ್ದರು. ಬಳಿಕ ರಫೀಕ್‌ನನ್ನು ಅಂದಿನ ಡಿಸಿಐಬಿ ಇನ್ಸ್ಪೆಕ್ಟರ್ ಡಾ.ಎಚ್. ಎನ್.ವೆಂಕಟೇಶ್ ಪ್ರಸನ್ನ ಬಂಧಿಸಿದ್ದರು. ಇಷ್ಟಕ್ಕೆ ಮುಗಿಯುವುದಿಲ್ಲ. ಇತ್ತೀಚೆಗೆ ಉಳ್ಳಾಲ ಕ್ಷೆತ್ರದ ಮಾಜಿ ಶಾಸಕ ದಿ. ಬಿ. ಎಂ. ಇದಿನಬ್ಬ ಅವರ ಪುತ್ರ ಬಾಷಾ ಅವರ ಮನೆ ಮೇಲೆ ಎನ್‌ಐಎ ಅಽಕಾರಿಗಳು ದಾಳಿ ನಡೆಸಿ, ಬಾಷಾರ ಕಿರಿಯ ಪುತ್ರ ಅಮ್ಮರ್ ಅಬ್ದುಲ್‌ನನ್ನು ವಶಕ್ಕೆ ಪಡೆದಿದ್ದರಷ್ಟೇ? ಬಾಷಾರ ೩ನೇ ಪುತ್ರ ಅನಾಸ್‌ನ ಪತ್ನಿ
ಮರಿಯಮ್. ಆಕೆಯ ಮೇಲೂ ಉಗ್ರ ನಿಗ್ರಹ ದಳದ ಅಧಿಕಾರಿಗಳಿಗೆ ಕಣ್ಣಿಟ್ಟಿದ್ದಾರೆ. ಈಕೆಯೂ ಮೂಲತಃ ಹಿಂದು; ಮಡಿಕೇರಿಯ ದೀಪ್ತಿ ಮಾಲರ್. ದಂತ ವೈದ್ಯೆ
ಯಾಗುವ ಹಂಬಲದಿಂದ ಮಂಗಳೂರಿಗೆ ಬಂದವಳನ್ನು ಅನಾಸ್ ಪ್ರೀತಿಸಿ ಮದುವೆಯಾದ ಬಳಿಕ ಮರಿಯಂ ಎಂದು ಹೆಸರು ಬದಲಿಸಿಕೊಂಡಿದ್ದಳು. ಈಕೆ ಇಸಿಸ್ ಸೇರುವ ನಿರ್ಧಾರದಿಂದ ಸಿರಿಯಾಕ್ಕೆ ತೆರಳಿದ್ದರೂ ಅದು ಸಾಧ್ಯ ವಾಗದೇ ಮರಳಿದ್ದಾಳೆ.

ಈಕೆಗೆ ಐಸಿಸ್ ಜತೆ ನಂಟು ಹೊಂದಿದ್ದ ಕೇರಳದ ರಶೀದ್‌ಅಬ್ದುಲ್ಲ ಜತೆ ಸಂಪರ್ಕವಿತ್ತು. ಮಾತ್ರವಲ್ಲದೆ ಕ್ರಾನಿಕಲ್ ಫೌಂಡೇಶನ್‌ಎಂಬ ಇನ್ಸ್ಟಾಗ್ರಾಂ ಪೇಜ್‌ನಲ್ಲಿ ಇಸಿಸ್ ಪರ ಅಜೆಂಡಾ ಹರಡುತ್ತಿದ್ದ ಆರೋಪವೂ ಈಕೆಯ ಮೇಲಿದೆ. ಹಣ ಸಂಗ್ರಹದ ಆರೋಪವೂ ಈಕೆಯ ಮೇಲಿದೆ. ತನ್ನ ನಾದಿನಿಯ ಪುತ್ರಿ ಅಜ್ಮಲಾಳ ಜತೆ
ಸಂಪರ್ಕವಿತ್ತು ಎನ್ನುವುದನ್ನು ಒಪ್ಪಿಕೊಂಡಿದ್ದಾಳೆ. ಕೇರಳದಲ್ಲಿ ಇತ್ತಿಚಿಗೆ ಪತ್ತೆಯಾಗಿದ್ದ ಇಸಿಸ್ ಶಂಕಿತ ಉಗ್ರ ಮಹಮ್ಮದ್ ಅಮೀನ್ ಬೆನ್ನು ಹತ್ತಿದ್ದಾಗ ಕರ್ನಾ
ಟಕದಲ್ಲಿ ಇಸಿಸ್ ಸಂಪರ್ಕ ಜಾಲದ ಬಗ್ಗೆ ಸಿಕ್ಕಿದ ಮಾಹಿತಿ ಆಧರಿಸಿ ಈ ಕಾರ್ಯಾಚರಣೆ ನಡೆದಿದೆ.

ತನಿಖೆ ವೇಳೆ ಉಳ್ಳಾಲದ ಇದಿನಬ್ಬ ಅವರ ಮೊಮ್ಮಗ ಅಮ್ಮರ್ ಅಬ್ದುಲ್ ರಹಮಾನ್ ಹಾಗೂ ಬೆಂಗಳೂರಿನ ಶಂಕರ್ ವೆಂಕಟೇಶ್ ಪೆರುಮಾಳ್ ಅಲಿಯಾಸ್ ಅಲಿ ಮೌವಿಯಾ ಸೇರಿದಂತೆ ನಾಲ್ವರು ಆರೋಪಿಗಳ ಪಾತ್ರ ಪತ್ತೆಯಾಯಿತು. ಈ ನಾಲ್ವರು ಸಹ, ಧರ್ಮ ಬೋಧನೆ ಮಾಡಿ ಜಿಹಾದಿ ಹೋರಾಟದ ನೆಪದಲ್ಲಿ ಯುವಕರನ್ನು ಇಸಿಸ್ ಸಂಘಟನೆಗೆ ನೇಮಕ ಮಾಡುತ್ತಿದ್ದರು ಎಂದು ಎನ್‌ಐಎ ಆರೋಪ.

ಸಿರಿಯಾದಲ್ಲಿ ಇಸಿಸ್ ಆಡಳಿತಕ್ಕೆ ಹಿನ್ನಡೆ ಉಂಟಾದ ಬಳಿಕ ಕಾಶ್ಮಿರಕ್ಕೆ ಧಾರ್ಮಿಕ (ಹಿಜರಾಹ್) ವಲಸೆಗೆ ಬಂದ ಮಹಮ್ಮದ್ ಹಾಗೂ ಆತನ ಸಹಚರರು, ಕಾಶ್ಮಿರದ ಉಗ್ರ ವಕಾರ್ ಲೋನ್ ಅಲಿಯಾಸ್ ವಿಲ್ಸನ್ ಜತೆ ಸೇರಿದ್ದರು. ಆನಂತರ ಉಗ್ರ ಸಂಘಟನೆಗೆ ದೇಣಿಗೆ ಸಂಗ್ರಹಿಸಿ ಆನ್ ಲೈನ್‌ನಲ್ಲಿ ವ್ಯವಹರಿಸುತ್ತಿದ್ದರು ಎನ್ನುವ ಆರೋಪ ಇದೆ. ಇಷ್ಟೊಂದು ಗುರುತರ ಆರೋಪಗಳು ಕನ್ನಡ ಹೋರಾಟಗಾರ, ಮಾಜಿ ಶಾಸಕರ ಮನೆತನಕ್ಕೆ ಅಂಟಿರುವುದು
ಮಾತ್ರ ಅತ್ಯಂತ ಖೇದಕರ ವಿಚಾರ. ಇಂತಹ ಪ್ರಮುಖ ಪ್ರಕರಣಗಳ ಹೊರತಾಗಿಯೂ ಹಿಂದೂ ಯುವತಿಯರನ್ನು ಪ್ರೀತಿಸಿ ಇಸ್ಲಾಂಗೆ ಮತಾಂತರಿಸುವ ಪ್ರಕರಣಗಳು ಮಂಗಳೂರಲ್ಲಿ ದಿನೇ ದಿನೇ ಹೆಚ್ಚುತ್ತಿದೆ.

ಪೊನ್ನಾಣಿ ಮುಸ್ಲಿಂ ಧಾರ್ಮಿಕ ಅಧ್ಯಯನ ಕೇಂದ್ರದಲ್ಲಿ ೧೫೦ಕ್ಕೂ ಹೆಚ್ಚು ಹಿಂದೂ ಯುವತಿಯರಿzರೆ ಎಂದು ಬಂಟ್ವಾಳದ ಶ್ರುತಿ ಎಂಬಾಕೆ ಹಿಂದೊಮ್ಮೆ ಮಾಹಿತಿ ನೀಡಿದ್ದರು. ತೀರಾ ಇತ್ತೀಚೆಗೆ ಡಿ.೮ಕ ಮಂಗಳೂರಿನ ಮಾರ್ಗ ನ್ಸ್ ಗೇಟ್‌ನಲ್ಲಿ ಇದೇ ಪಿಡುಗಿನಿಂದ ಹಿಂದೂ ಸಮುದಾಯಕ್ಕೆ ಸೇರಿದ ನಾಲ್ವರ ದಾರುಣ ಅಂತ್ಯವಾಯಿತು. ಕುಟುಂಬದ ಆತ್ಮಹತ್ಯೆಗೆ ಮತಾಂತರ ಯತ್ನವೇ ಕಾರಣ ಎನ್ನುವುದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ. ಈ ಸಂಬಂಧ ನೂರು ಜಹಾನ್ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ಇಂತಹ ಪ್ರಕರಣ ಗಳ ಕುರಿತು ಗಂಭೀರವಾಗಿ ಚಿಂತಿಸಬೇಕಿದೆ. ಇದರ ಹಿಂದೆ ದೊಡ್ಡ ಜಾಲವೂ ಇರಬಹುದು, ಹಿಂದಿನ ಪ್ರಕರಣಗಳ ನೋಡುವಾಗ ಮತಾಂತರ
ಗೊಂಡ ಮಹಿಳೆಯರನ್ನು ದುಷ್ಕೃತ್ಯಗಳಿಗೆ ಬಳಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಅವರೇ ವಿಧಾನಸಭೆಯಲ್ಲಿ ತಮ್ಮ ತಾಯಿ ಬಲವಂತವಾಗಿ ಮತಾಂತರ ಆಗಿದ್ದಾರೆ ಮತ್ತು ತಮ್ಮ ಕ್ಷೇತ್ರದಲ್ಲಿ ಸರಿಸುಮಾರು ೨೦ ಸಾವಿರ ಜನರನ್ನು ಆಮಿಷಗಳ ಮೂಲಕ ಕ್ರೈಸ್ತ ಮತಕ್ಕೆ
ಮತಾಂತರ ಮಾಡಿದ್ದಾರೆ ಎಂದು ಅಲವತ್ತುಕೊಳ್ಳುವ ಪರಿಸ್ಥಿತಿ !

ದಾವಣಗರೆಯಲ್ಲಿ ವೀರಶೈವ ಮಹಾಸಭಾದ ಸತ್ಯಶೋಧನಾ ಸಮಿತಿ ವರದಿ ಪ್ರಕಾರ ಲಂಬಾಣಿ, ಕುರುಬ, ವೀರಶೈವ, ಬ್ರಾಹ್ಮಣ ಸಮುದಾಯದ ನೂರಾರು ಕುಟುಂಬಗಳು ಕ್ರೈಸ್ತ ಧರ್ಮಕ್ಕೆ ಮತಾಂತರ ಗೊಂಡಿವೆ. ಹಣ ಮತ್ತು ಅನ್ಯ ಆಮಿಷಗಳನ್ನು ಒಡ್ಡಿ ಮತಾಂತರ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

ವೀರಶೈವ ಮಹಾಸಭಾ ಅಧ್ಯಕ್ಷ ಮತ್ತು ಶಾಸಕ ಡಾ. ಶಾಮ ನೂರು ಶಿವಶಂಕರಪ್ಪನವರು ತಮ್ಮ ಪದಾಧಿಕಾರಿಗಳಿಗೆ ಪತ್ರ ಬರೆದಿರುವುದು ಪ್ರಕರಣದ ಗಾಂಭೀರ್ಯ ತೋರಿಸುತ್ತದೆ. ಕಾರ್ಕಳ- ಬೈಲೂರು ಭಾಗದಲ್ಲೂ ೫೦ ವರ್ಷಗಳಿಂದ ಮತಾಂತರ ಪ್ರಕ್ರಿಯೆ ಜಾರಿಯಲ್ಲಿದೆ. ಆ ಭಾಗದಲ್ಲಿ ಇದೇ ಕಾರಣಕ್ಕೆ ಹಿಂದುತ್ವ ಪ್ರತಿಪಾದಕರನ್ನು ಜನಪ್ರತಿನಿಧಿಯಾಗಿ ಆಯ್ಕೆ ಮಾಡಿದರೂ ಮತಾಂತರ ಪ್ರಕರಣಗಳು ಅವ್ಯಾಹತ. ಎಲ್ಲ ಧರ್ಮಗಳ ಸಾರ ಒಂದೇ ಎಂದು ಹೇಳುವವರು ಮತಾಂತರ ಸಮರ್ಥಿಸುವುದು ಏಕೆ ? ಅವರು ಮತಾಂತರ ಮಾಡುತ್ತಿಲ್ಲ ಎಂದಾದರೆ ‘ಮತಾಂತರ ತಡೆ ವಿಧೇಯಕ’ ವಿರೋಧಿಸುವುದು ಏಕೆ? ವಿಷಯ ಇಷ್ಟೆ, ಈಗ ಬಹುಮತಕ್ಕೆ ಮಾನ್ಯತೆ.

ತಮ್ಮ ಧರ್ಮದವರು ಸಂಖ್ಯೆಯಲ್ಲಿ ಹೆಚ್ಚಾದರೆ ಎದುರಾಳಿ ಧರ್ಮದವರನ್ನು ಮಣಿಸಿ, ಕ್ರಮೇಣ ಭಾರತ ವನ್ನು ಆಳಬಹುದು ಎಂಬ ದುರಾಸೆ. ಭಾರತ, ಹಿಂದೂ ಧರ್ಮ ಪ್ರಬಲವಾಗಿದ್ದ ಸಂದರ್ಭದಲ್ಲೂ ಜಾತ್ಯತೀತವಾಗಿ ಉಳಿದುಕೊಂಡಿದೆ. ಉಳಿದ ಮತ-ಧರ್ಮಗಳಿಗೆ ಅಂತಹ ಇತಿಹಾಸ ಇಲ್ಲವೇ ಇಲ್ಲ. ಭಾರತದಲ್ಲಿ ಮೂಲ ಸಂಸ್ಕೃತಿ ಸ್ವಲ್ಪವಾದರೂ ಉಳಿಯ ಬೇಕಾದರೆ ಮತಾಂತರ ತಡೆ ವಿಧೇಯಕ ಅನಿವಾರ್ಯ.