ಪ್ರತಿಫಲನ
ಸುಜಯ ಆರ್.ಕೊಣ್ಣೂರ್
ನಕಲಿ ಸುದ್ದಿ ಪ್ರಸಾರಕರು ಹಾಗೂ ಇಸ್ಲಾಮಿಕ್ ಉಗ್ರಗಾಮಿ ಗುಂಪುಗಳ ಬೆಂಬಲಿಗರಾದ ಮಜಿದ್ ಫ್ರೀಮನ್‌ನಂತಹ ವ್ಯಕ್ತಿಗಳಿಗೆ, ಗಾರ್ಡಿಯನ್, ಬಿಬಿಸಿಗಳಂತಹ ಮುಖ್ಯವಾಹಿನಿಯ ಯುಕೆ ಮಾಧ್ಯಮಗಳು ಹಿಂದೂಗಳ ವಿರುದ್ಧ ಆನ್ಲೈನ್ ಮತ್ತು ಆಫ್ ಲೈನ್‌ನಲ್ಲಿ ಹಿಂಸಾಚಾರವನ್ನು ಪ್ರಚೋದಿಸಲು ಸುಳ್ಳು ಮಾಹಿತಿಯನ್ನು ಹರಡಲು ಅನುವು ಮಾಡಿ ಕೊಟ್ಟವು.
ಯುನೈಟೆಡ್ ಕಿಂಗ್ ಡಂನಲ್ಲಿರುವ ಹಿಂದೂ ಸಮುದಾಯದ ಹೃದಯಭಾಗವಾದ ಲೆಸ್ಟರ್, ಯುರೋಪ್‌ನಲ್ಲಿ ಎರಡನೇ ಅತಿ ದೊಡ್ಡ ಹಿಂದೂ ಜನಸಂಖ್ಯೆಯ ನೆಲೆ. ಪ್ರಪಂಚ ದಾದ್ಯಂತ ಹಿಂದೂ ಸಂಸ್ಕೃತಿ ಮತ್ತು ಸಂಭ್ರಮದ ಹಿಂದೂ ಹಬ್ಬಗಳಿಗೆ ಲೆಸ್ಟರ್
ಹೆಸರುವಾಸಿ. ಇಂಥ ಲೆಸ್ಟರ್‌ನಲ್ಲಿ ಹಿಂದೂ ವಿರೋಧಿ ಹಿಂಸಾಚಾರವನ್ನು ಪ್ರಚೋದಿಸುವ, ಹಿಂದೂಗಳ ವಿರುದ್ಧ ದ್ವೇಷ ಮತ್ತು ವದಂತಿಗಳನ್ನು ನಿರೂಪಣೆಗಳನ್ನು ಹರಡುವ ಉದ್ದೇಶದಿಂದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮಾದರಿಗಳು ಸಾಮಾಜಿಕ ಮಾಧ್ಯಮ ಹಾಗೂ ಜಾಲತಾಣಗಳನ್ನು ಅಸ್ತ್ರವಾಗಿಸಿಕೊಂಡಿವೆ.
ಆಗಸ್ಟ್ 2022ರ ಅಂತ್ಯದಿಂದ ಸೆಪ್ಟೆಂಬರ್ 2022ರವರೆಗೆ, ನಗರದ ಅಲ್ಪಸಂಖ್ಯಾತ ಬ್ರಿಟಿಷ್ ಹಿಂದೂ ಸಮುದಾಯವು ಉದ್ದೇಶ ಪೂರ್ವಕ, ಸಂಘಟಿತ ಮತ್ತು ವ್ಯವಸ್ಥಿತ ಹಿಂಸಾಚಾರಕ್ಕೆ ಗುರಿಯಾಯಿತು. ದಕ್ಷಿಣ- ಏಷ್ಯಾದ ಮೂಲದ ಮುಸ್ಲಿಮರು ಸ್ಥಳೀಯ ಹಿಂದೂ ದೇವಾಲ ಯವನ್ನು ಧ್ವಂಸಗೊಳಿಸುವ ಪ್ರಯತ್ನ ನಡೆಸಿದರು.
ಸುಮಾರು ಒಂದು ತಿಂಗಳ ಕಾಲ, ಹಿಂದೂಗಳ ಮೇಲೆ ಇರಿತದ ಯತ್ನ, ಲೂಟಿ, ಅಪರಾಧ ಕೃತ್ಯಗಳಿಗಾಗಿ ಸಮುದಾಯವನ್ನು ಸಂಘಟಿಸುವ ಮೂಲಕ ವಿಧ್ವಂಸಕ ಕೃತ್ಯಗಳನ್ನೆಸಗಲಾಯಿತು. ದ್ವೇಷ ಹಾಗೂ ಪಚೋದನಾತ್ಮಕ ಭಾಷಣಗಳಿಂದ ದಂಗೆ ಎಬ್ಬಿಸಲಾಯಿತು. ಈ ಎಲ್ಲ ಹಿಂಸಾತ್ಮಕ ದಳ್ಳುರಿಗೆ ಹಿಂದೂಗಳು ಬಲಿಪಶುಗಳಾದರು. ಜತೆಗೆ, ಸ್ಥಳೀಯ ಅಧಿಕಾರಿಗಳು ಮತ್ತು ಲೆಸ್ಟರ್ ಶೈರ್ ಪೋಲಿಸ್ ಸುರಕ್ಷತೆಯ ಭರವಸೆಗಳು, ರಾಜಕೀಯ ವ್ಯಕ್ತಿಗಳ ಆಶ್ವಾಸನೆಗಳಂತೆ ಆಶ್ವಾಸನೆಗಳಾಗಿಯೇ ಉಳಿದವು.
ಸಂಘಟಿತ, ಹಿಂಸಾತ್ಮಕ ಇಸ್ಲಾಮಿ ಜನಸಮೂಹಗಳು, ಬ್ರಿಟಿಷ್ ಹಿಂದೂ ಮನೆಗಳನ್ನು ಮತ್ತು ಲೆಸ್ಟರ್‌ನಲ್ಲಿರುವ ವ್ಯಾಪಾರ
ಸಂಸ್ಥೆಗಳನ್ನು ಗುರಿಯಾಗಿಸಿಕೊಂಡವು. ಯುನೈಟೆಡ್ ಕಿಂಗ್ಡಮ್‌ನಲ್ಲಿನ ತೀವ್ರವಾದ ಇಸ್ಲಾಮಿಸ್ಟ್ ಗುಂಪುಗಳು, ಲೆಸ್ಟರ್‌ನಲ್ಲಿನ ಬ್ರಿಟಿಷ್ ಹಿಂದೂಗಳ ವಿರುದ್ಧ ವ್ಯವಸ್ಥಿತವಾದ ಭಯೋತ್ಪಾದನಾ ಅಭಿಯಾನ ಪ್ರಾರಂಭಿಸಿ,ಅವರನ್ನು ತೀವ್ರ ಬೆದರಿಕೆ, ಆಕ್ರಮಣ ಮತ್ತು ಆಘಾತಗಳಿಗೆ ಒಳಪಡಿಸಿದ್ದು ಗುಟ್ಟಾಗಿ ಉಳಿದಿಲ್ಲ.
ಹಿಂದೂ ಜನಸಂಖ್ಯೆಯನ್ನು ಹಾನಿ ಮಾಡುವ ಉದ್ದೇಶದಿಂದ ಲೆಸ್ಟರ್‌ನಲ್ಲಿ ಹಿಂಸಾತ್ಮಕ ಉಗ್ರಗಾಮಿ ಇಸ್ಲಾಮಿಸ್ಟ್‌ಗಳು ಬೃಹತ್
ವೇದಿಕೆಯನ್ನು ಸಜ್ಜುಗೊಳಿಸಿಕೊಂಡರು. ಹಿಂದೂಗಳ ವಿರುದ್ಧ ದ್ವೇಷದ ಮನಸ್ಥಿತಿಯನ್ನು ಪ್ರಚೋದಿಸಲು, ತಪ್ಪು ಮಾಹಿತಿ ಯನ್ನು ಹರಡಲು ಹಾಗೂ ಹಿಂಸಾತ್ಮಕ ನಡೆಗೆ ಯುನೈಟೆಡ್ ಕಿಂಗ್ಡಮ್ ನ ಒಳಗೆ ಮತ್ತು ಹೊರಗೆ ಆನ್‌ಲೈನ್ ಅಭಿಯಾನ ವನ್ನು ಹಮ್ಮಿಕೊಂಡವು.
ಮಾಧ್ಯಮಗಳು ಸಹ ಆರಂಭದಲ್ಲಿ ಲೆಸ್ಟರ್ ನಲ್ಲಿನ ಹಿಂದೂ-ವಿರೋಧಿ ಹಿಂಸಾಚಾರವನ್ನು ಜನಾಂಗೀಯ ಮತ್ತು ಆಕ್ರಮಣಕಾರಿ ಪಾಕಿಸ್ತಾನಿ ವಿರೋಧಿ ಘೋಷಣೆಗಳಿಂದ ಪ್ರಚೋದಿಸಲಾಗಿದೆ ಎಂದು ನಿರೂಪಿಸಿದವು. ಅದೇನೇ ಇದ್ದರೂ, ಹಿಂದೂಗಳ ಮೇಲಿನ ಯೋಜಿತ, ವ್ಯವಸ್ಥಿತ ಮತ್ತು ಸಂಘಟಿತ ದಾಳಿಯನ್ನು ಎಂದಿಗೂ ಪ್ರಸ್ತಾಪಿಸಲಿಲ್ಲ ಅಥವಾ ಒಪ್ಪಿಕೊಳ್ಳಲಿಲ್ಲ. ಭಯಾನಕ ಹಿಂದೂ ವಿರೋಧಿ ಹಿಂಸಾಚಾರವನ್ನು ಖಂಡಿಸುವ ಹೇಳಿಕೆಗಳನ್ನು ಮಾಧ್ಯಮಗಳು ಹಗುರವಾಗಿ ತೇಲಿಸಿ ವರದಿ ಮಾಡಿದವು.
ನಕಲಿ ಸುದ್ದಿ ಪ್ರಸಾರಕರು ಹಾಗೂ ಇಸ್ಲಾಮಿಕ್ ಉಗ್ರಗಾಮಿ ಗುಂಪುಗಳ ಬೆಂಬಲಿಗರಾದ ಮಜಿದ್ ಫ್ರೀಮನ್‌ನಂತಹ ವ್ಯಕ್ತಿಗಳಿಗೆ, ಗಾರ್ಡಿಯನ್, ಬಿಬಿಸಿಗಳಂತಹ ಮುಖ್ಯವಾಹಿನಿಯ ಯುಕೆ ಮಾಧ್ಯಮಗಳು ಹಿಂದೂಗಳ ವಿರುದ್ಧ ಆನ್ಲೈನ್ ಮತ್ತು ಆಫ್ಲೈ ನ್‌ನಲ್ಲಿ ಹಿಂಸಾಚಾರವನ್ನು ಪ್ರಚೋದಿಸಲು ಸುಳ್ಳು ಮಾಹಿತಿಯನ್ನು ಹರಡಲು ಅನುವು ಮಾಡಿಕೊಟ್ಟವು. ಇದೇ ರೀತಿ
ಪ್ರಚೋದನಕಾರಿ ಸಂದೇಶಗಳನ್ನು ಟ್ವೀಟ್ ಮಾಡುವ ಮೂಲಕ ಈ ಪ್ರದೇಶದಲ್ಲಿ ಹಿಂದೂ ದ್ವೇಷವನ್ನು ಪ್ರಚೋದಿಸಿದ ಮತ್ತು ಹಿಂಸಾಚಾರವನ್ನು ಹುಟ್ಟುಹಾಕಿದ ಸನ್ನಿ ಹುಂಡಾಲ್ ನಂಥವರಿಗೆ ಈ ಮಾಧ್ಯಮಗಳು ಹಿಂದೂ ಫೋಬಿಯಾ ಮತ್ತು ಉಗ್ರಗಾಮಿ ದೃಷ್ಟಿಕೋನಗಳನ್ನು ಮತ್ತಷ್ಟು ಹರಡಲು ವೇದಿಕೆಯನ್ನು ನೀಡಿದವು.
ನೆಟ್‌ವರ್ಕ್ ಕಂಟೇಜಿಯನ್ ರೀಸರ್ಚ್ ಇನ್ಸ್ಟಿಟ್ಯೂಟ್ (ಎನ್ಸಿಆರ್‌ಐ) ಬಿಡುಗಡೆ ಮಾಡಿದ Cyber Social Swarming Precedes
Real World Riots in Leicester: How Social Media Became a Weapon for Violence ಸಂಶೋಧನೆಯಲ್ಲಿ ಇದರ ಬಗ್ಗೆ ಹೆಚ್ಚಿನ ಅಂಶಗಳನ್ನು ದೃಢಪಡಿಸಲಾಗಿದೆ. ಸಾಮಾಜಿಕ ಮಾಧ್ಯಮವು ಹಿಂಸೆಗೆ ಹೇಗೆ ಅಸವಾಯಿತು ಎಂಬ ಶೀರ್ಷಿಕೆಯ ವರದಿಯಲ್ಲಿ ಎನ್ಸಿಆರ್‌ಐ Instagram, YouTube, TikTok ಮತ್ತು Twitter ನಿಂದ ಲೆಸ್ಟರ್‌ನಲ್ಲಿನ ಘಟನೆಗಳ ಕುರಿತು ಡೇಟಾ ವನ್ನು ಸಂಗ್ರಹಿಸಿದೆ. ಈ ವರದಿಯು ವಿವಿಧ ತಾಂತ್ರಿಕ ಪರಿಕರಗಳು, ಮಷಿನ್ ಲರ್ನಿಂಗ್, ಓಪನ್ ಸೋರ್ಸ್ ಇಂಟಲಿಜೆನ್ಸ್ ಮತ್ತು ನ್ಯಾಚುರಲ್ ಲಾಂಗ್ವೆಜ್ ಪ್ರೊಸೆಸ್ಸಿಂಗ್ (NLP)ಗಳನ್ನು ಅವಲಂಬಿಸಿವೆ.
ಮೊದಲಿಗೆ ಹಿಂದೂಗಳ ವಿರುದ್ಧ ಆನ್‌ಲೈನ್‌ನಲ್ಲಿ ಹಿಂಸಾಚಾರವನ್ನು ಉತ್ತೇಜಿಸಲು ಬಾಟ್‌ಗಳು ಸೈಬರ್ ಸ್ವಾರ್ಮಿಂಗ್ ಅನ್ನು ಬಳಸಿದವು ಎಂದು ವರದಿಗಳ ಸಂಶೋಧನೆಗಳು ತೋರಿಸುತ್ತವೆ, ಅದು ಅಂತಿಮವಾಗಿ ನೈಜ ಘಟನೆಯಾಗಿ ಪರಿವರ್ತನೆ ಯಾಯಿತು. ಹಿಂದೂಗಳ ವಿರುದ್ಧದ ನೈಜ- ಪ್ರಪಂಚದ ಹಿಂಸಾಚಾರ, ದ್ವೇಷದ ಮಾತುಗಳು ಮತ್ತು ನಿಂದನೆಗಳು, ಹಿಂದೂ ದೇವಾಲಯಗಳ ಧ್ವಂಸ ಮತ್ತು ಬೆದರಿಕೆಗಳು ಸಾಮಾಜಿಕವಾಗಿ ಭೌತಿಕವಾಗಿ ಈ ವರದಿಯಲ್ಲಿ ಅಭಿವ್ಯಕ್ತವಾಗಿವೆ.
ಲೆಸ್ಟರ್‌ನಲ್ಲಿ ಈ ಹಿಂಸಾಚಾರದ ಕಿಡಿಯನ್ನು ಹೊತ್ತಿಸಿದ್ದ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊ tragicbud ಅಪರಿಚಿತ ಖಾತೆಯಿಂದ ಹಂಚಿಕೊಳ್ಳಲಾಗಿದೆ. ವೀಡಿಯೊದಲ್ಲಿ, ಕ್ರಿಕೆಟ್ ಅಭಿಮಾನಿಗಳು (ಹಿಂದೂ ಗಳೇ ಆಗಿರಬೇಕೆಂ ದೇನೂ ಇಲ್ಲ) ‘ಡೆತ್ ಟು ಪಾಕಿಸ್ತಾನ್’ ಎಂಬ ಪದಗುಚ್ಛಗಳನ್ನು ಹಾಡುವುದನ್ನು ಕೇಳಬಹುದು. Tragicbud ಬಳಕೆದಾರರು ವೀಡಿಯೊದಲ್ಲಿನ ಘೋಷಣೆಯನ್ನು ಹಿಂದುತ್ವದೊಂದಿಗೆ ಸಮೀಕರಿಸಿದ್ದಾರೆ, ಇದರಿಂದಾಗಿ ಕ್ರಿಕೆಟ್ ಪಂದ್ಯದಲ್ಲಿ ಭಾರತದ ಗೆಲುವಿಗೆ ಜನಾಂಗೀಯ ಅರ್ಥವನ್ನು ನೀಡಿದ್ದಾರೆ.
ಇದರ ನಂತರ, ಪಾಕಿಸ್ತಾನದ ಒಲವು ಹೊಂದಿರುವ ಟ್ವಿಟರ್ ಹ್ಯಾಂಡಲ್‌ಗಳು ಸೈಬರ್ ಸ್ವಾರ್ಮಿಂಗ್ ಅನ್ನು ಬಳಸಿದವು ಮತ್ತು ಅವರ ಅನುಯಾಯಿಗಳಿಗೆ ಸೂಚಿಸಲು ಪ್ರಾರಂಭಿಸಿದವು. ಸೈಬರ್ ಮತ್ತು ನೈಜ ಜಗತ್ತಿನಲ್ಲಿ ಕ್ರಮ ಕೈಗೊಳ್ಳಲು ಕರೆ ನೀಡುವಂತೆ ಪ್ರಚೋದಿಸಿದವು. ಈ ಮೂರು ಟ್ವೀಟ್‌ಗಳನ್ನು ಇಲ್ಲಿ ನಮೂದಿಸಲಾಗಿದೆ.
ಬಾಟ್‌ಗಳಿಗೆ ಜೋಡಿಸಲಾದಂತಹ ಚಟುವಟಿಕೆಗಳಲ್ಲಿ ‘ಹಿಂದೂ-ಬಿಕ್’ ಮತ್ತು ‘ಇಸ್ಲಾಮೋ ಫೋಬಿಕ್’ ಎರಡನ್ನೂ ಗುರುತಿಸ ಲಾಗಿದೆ. ಎರಡೂ ಸಮುದಾಯಗಳು ಒಬ್ಬರ ಮೇಲೆ ಒಬ್ಬರು ಹಿಂಸಾಚಾರದ ಹೊಣೆಗಾರಿಕೆಯನ್ನು ಹೇರಿದವು.
ಹಿಂಸಾಚಾರದ ಸಂಪೂರ್ಣ ಅವಧಿಯಲ್ಲಿ ವಿಷಯದ ತ್ವರಿತ ಮತ್ತು ವರ್ಧಿತ ಪ್ರಸಾರಕ್ಕಾಗಿ ಬಾಟ್ ಗಳನ್ನು ನಿಯೋಜಿಸಿzರೆ ಎಂದು ತರ್ಕಿಸಲಾಗಿದೆ.
ಎರಡೂ ವಿಷಯಗಳ ವಿಶ್ಲೇಷಣೆಯು ಹಿಂದೂ ಫೋಬಿಕ್ ವಿಷಯಕ್ಕೆ ಹೋಲಿಸಿದರೆ ಇಸ್ಲಾಮೋ ಫೋಬಿಕ್ ವಿಷಯವು ಹೆಚ್ಚು ವಿಶಿಷ್ಟ ಗಮನವನ್ನು ಪಡೆದುಕೊಂಡಿದೆ ಎಂದು ತೋರಿಸುತ್ತದೆ. ಎನ್ಸಿಆರ್‌ಐ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಘಟನೆಗಳ ಸಂದರ್ಭದಲ್ಲಿ, ಹಿಂಸಾತ್ಮಕ ಕ್ರಮಕ್ಕಾಗಿ ಸುಮಾರು ಶೇ.70ಎ ಕರೆಗಳು ಹಿಂದೂಗಳ ಕಡೆಗೆ ನಿರ್ದೇಶಿಸಲ್ಪಟ್ಟವು. ಸಂಶೋಧನೆಗಳ
ವರದಿಯ ಪ್ರಕಾರ ಲೆಸ್ಟರ್‌ನಲ್ಲಿನ ಇತ್ತೀಚಿನ ಹಿಂಸಾಚಾರವು ಸಂಪೂರ್ಣವಾಗಿ ಸಹಜವಾಗಿ ನಡೆಸಲ್ಪಟ್ಟಿಲ್ಲ ಎನ್ನುತ್ತದೆ.
ದುರುದ್ದೇಶಪೂರಿತವಾಗಿ ದ್ವೇಷದ ಮನೋಭಾವನೆಯನ್ನು ಹರಡಲು ಸಾಮಾಜಿಕ ಹಾಗೂ ಮಾಧ್ಯಮ ವೇದಿಕೆಗಳನ್ನು
ಸಾಧನವಾಗಿ ಬಳಸಿಕೊಂಡು ಈ ಹಿಂಸಾಚಾರವನ್ನು ವ್ಯವಸ್ಥಿತವಾಗಿ ಸಂಘಟಿಸಲಾಯಿತು ಮತ್ತು ಪ್ರಚಾರ ಮಾಡಲಾಯಿತು.
ಇದಲ್ಲದೆ, ಎನ್ಸಿಆರ್‌ಐ ಅಧ್ಯಯನದ ಪ್ರಕಾರ, ಮಾಧ್ಯಮಗಳು ಹಿಂದೂಗಳನ್ನು ರಕ್ತಪಿಪಾಸು ಮತ್ತು ನರಮೇಧದ ದುಷ್ಕರ್ಮಿ ಗಳು ಎಂಬ ಧಾರ್ಮಿಕ ತಪ್ಪು ಭಾವನೆಯನ್ನು ಚಿತ್ರಿಸಿದವು. ಈ ತಪ್ಪು ಚಿತ್ರಣವನ್ನು ಬಳಸಿ, ಹಿಂದೂಗಳ ಮೇಲಿನ ನೈಜ- ಜೀವನದ ದಾಳಿಗಳಿಗೆ ಆನ್‌ಲೈನ್ ಬೆಂಬಲವನ್ನು ಪಡೆಯುವ ಮೂಲಕ ದಾಳಿಗಳು ಯಾವಾಗ ಮತ್ತು ಎಲ್ಲಿ ಸಂಭವಿಸಬೇಕು ಎಂಬುದರ ಮೇಲೆ ಪ್ರಭಾವ ಬೀರಿದವು.
ಬಿಬಿಸಿ, ದಿ ಗಾರ್ಡಿಯನ್, ನ್ಯೂಯಾರ್ಕ್ ಟೈಮ್ಸ್, ಮತ್ತು ಇತರ ಮುಖ್ಯವಾಹಿನಿಯ ಮಾಧ್ಯಮ ಮೂಲಗಳು ಮಜಿದ್ ಫ್ರೀಮನ್ ಬಗ್ಗೆ ಪ್ರಾಮಾಣಿಕವಾಗಿ ವಿಷಯಗಳನ್ನು ಸಂಗ್ರಹಿಸಲು ವಿಫಲವಾದವು. ಇದರಿಂದಾಗಿ, ಮಜೀದ್ ಫ್ರೀಮನ್‌ನಂತಹ, ಪಿತೂರಿ ಸಿದ್ಧಾಂತಿ, ಉಗ್ರಗಾಮಿ ಸಹಿಷ್ಣುವಿಗೆ ಲೆಸ್ಟರ್‌ನ ಪ್ರಮುಖ ಘಟನೆಯ ಪ್ರಚೋದಕನಾಗಿ ಧ್ವನಿ ಎತ್ತಲು ಸಹಕಾರಿಯಾಯಿತು.
ಒಟ್ಟಾರೆಯಾಗಿ ಎನ್‌ಸಿಆರ್‌ಐ ಸಂಶೋಧನೆಯ ಪ್ರಕಾರ, ಸಾಮಾಜಿಕ ಮಾಧ್ಯಮಗಳು ಹಿಂಸಾಚಾರವನ್ನು ಪ್ರಚೋದಿಸುವ ವೇದಿಕೆಗಳಾಗಿವೆ. ಇವು ನೈಜ ಜೀವನದ ಹಿಂಸೆಗೆ ಕಾರಣವಾಗುತ್ತವೆ. ಪ್ರಪಂಚದಾದ್ಯಂತ, ಯುಕೆ ಇನ್ನಿತರ ದೇಶಗಳಲ್ಲಿ ಸಾಮಾಜಿಕ ಮಾಧ್ಯಮಗಳು ಹಿಂದೂಗಳನ್ನು ಮಾನಸಿಕವಾಗಿ, ದೈಹಿಕವಾಗಿ ಹಿಂಸಿಸುವ, ಹೆದರಿಸುವ ಕಾರ್ಯದಲ್ಲಿ ತೊಡಗಿವೆ.
(ಸಂಗ್ರಹ: ಸೆಂಟರ್ ಫಾರ್ ಇಂಟಿಗ್ರೇಷನ್ ಅಂಡ್ ಹೋಲಿಸ್ಟಿಕ್ ಸ್ಟಡೀಸ್, ಸ್ಪೆಷಲ್ ಪಬ್ಲಿಕೇಶನ್ ನಂ.೪೮.)