Saturday, 12th October 2024

ಸತ್ತಮೇಲೆಯೇ ಹೆಚ್ಚು ಆಪ್ಯಾಯಮಾನ ಅಪ್ಪು !

ಹಂಪಿ ಎಕ್ಸ್’ಪ್ರೆಸ್

ದೇವಿ ಮಹೇಶ್ವರ ನಾಯ್ಡು

ಅಷ್ಟು ಚಿಕ್ಕ ವಯಸ್ಸಿನಲ್ಲಿ ಇಂಥ ಸಾಮಾಜಿಕ ಕಳಕಳಿ, ಈ ಮಟ್ಟದ ಸಾಮಾಜಿಕ ಸೇವೆಗಳನ್ನು ಮಾನವ ಸಹಜ ಹೃದಯವಂತಿಕೆಯನ್ನು ಅಪ್ಪು ಮೆರೆದಿದ್ದಾ ರೆಂದರೆ, ಇನ್ನು ಶಿವಣ್ಣನಂತೆ ವರ್ಷಕ್ಕೆ ನಾಲ್ಕೈದು ಚಿತ್ರಗಳಲ್ಲಿ ನಟಿಸಿಕೊಂಡು ನೂರಾರು ಚಿತ್ರಗಳನ್ನು ಮಾಡಿ ಇನ್ನೂ ಇಪ್ಪತ್ತು ವರ್ಷಗಳು ಬದುಕಿದಿದ್ದರೆ ಅಪ್ಪು ಇನ್ನೆಷ್ಟು ನೀರನ್ನು ಕೆರೆಗೆ ಚೆಲ್ಲುತ್ತಿದ್ದರು!

ಆಗ ೧೯೮೩ರ ಸಮಯ, ಬಾಲಿವುಡ್‌ನಲ್ಲಿ ಅಮಿತಾಭ್ ಬಚ್ಚನ್ ತಾರಕಕ್ಕೇರಿದ ನಟ. ಅವರ ಮಹತ್ವಾಕಾಂಕ್ಷಿ ‘ಕೂಲಿ’ ಚಲನಚಿತ್ರದ ಬಹುಪಾಲು ಚಿತ್ರೀಕರಣ
ಬೆಂಗಳೂರಿನ ರೈಲ್ವೇ ನಿಲ್ದಾಣದ ನಡೆಯುತ್ತಿತ್ತು. ಪ್ರಯಾಣಿಕರ ಲಗೇಜನ್ನು ಹೊತ್ತೊಯ್ಯುವ ಕೂಲಿ ಕಾರ್ಮಿಕನ ಪಾತ್ರ ಮಾಡುತ್ತಿದ್ದ ಬಚ್ಚನ್ ಅವರ ಪಾತ್ರದ ಚಿತ್ರೀಕರಣ ವಾರಗಳಕಾಲ ನಡೆಯಿತು. ಆಗಂತೂ ಕನ್ನಡದಲ್ಲಿ ವರನಟ ರಾಜಣ್ಣ ನಾಡಿನ ಅಗ್ರಗಣ್ಯ ವ್ಯಕ್ತಿ.

ಕೂಲಿ ಚಿತ್ರದ ನಿರ್ದೇಶಕ ಮನಮೋಹನ ದೇಸಾಯಿ ಮತ್ತು ಬಚ್ಚನ್ ಅವರಿಗೆ ತಮ್ಮ ಚಿತ್ರದಲ್ಲಿ ಸ್ಥಳೀಯ ನೈಜತೆ ಬಿಂಬಿಸುವ ಮನಸ್ಸಾಗುತ್ತದೆ. ಅವರು ಅಂದುಕೊಂಡಿ ದ್ದೇನೆಂದರೆ ರೈಲೊಂದು ನಿಲ್ದಾಣಕ್ಕೆ ಬಂದು ನಿಲ್ಲುತ್ತದೆ, ಅದರಿಂದ ರಾಜಣ್ಣ ಬೋಗಿಯಗಿಲ ಬಳಿ ಬರುತ್ತಾರೆ. ಆಗ ಬಚ್ಚನ್ ಕೂಲಿಯಾಗಿ ಬಂದು ರಾಜಣ್ಣನವರಿಗೆ ವಂದಿಸಿ ಅವರ ಕೈಲಿದ್ದ ಬ್ಯಾಗುಗಳನ್ನು ಪಡೆದುಕೊಂಡು ಅವರೊಂದಿಗೆ ಮಾತನಾಡಿಕೊಂಡು ಹೋಗುವ ದೃಶ್ಯ ಸೇರಿಸಲು ನಿರ್ಧರಿಸುತ್ತಾರೆ. ಅದಕ್ಕಾಗಿ ರಾಜ್ ಅವರೊಂದಿಗೆ ಮಾತುಕತೆ ನಡೆಸುತ್ತಾರೆ.

ಆಗ ರಾಜ ಹೇಳಿದ್ದೇನು ಗೊತ್ತೇ? ‘ನನಗೆ ಹಿಂದಿ ಭಾಷೆಯ ಪರಿಚಯವಿಲ್ಲ. ಒಂದು ಭಾಷೆಯ ಅರಿವಿಲ್ಲದೆ ಅದರಲ್ಲಿ ತೊಡಗಿಸಿಕೊಳ್ಳುವುದು ಯೋಗ್ಯವಲ್ಲ’ ಎಂದು ಆ ಕ್ಷಣದಲ್ಲಿ ಹಿಂಜರಿಯುತ್ತಾರೆ. ಇಡೀ ಚಿತ್ರದ ಮಹತ್ವದ ಸನ್ನಿವೇಶವಾಗುವಂಥ ಅವಕಾಶವನ್ನು ದಕ್ಕಿಸಿಕೊಳ್ಳುವ ಸ್ವಾರ್ಥವಿಲ್ಲದೇ ನಿರಾಕರಿಸಿಬಿಡುತ್ತಾರೆ.
ಹೀಗಿತ್ತು ರಾಜ್ ಅವರಲ್ಲಿನ ಬದ್ಧತೆ, ಪ್ರಾಮಾಣಿಕತೆ ಮತ್ತು ಭಾಧಿಆ ನಿಲುವಿನ ಸ್ಪಷ್ಟತೆ. ರಾಜ್ ಅವರಲ್ಲಿ ಇಂಥವುಗಳೆಲ್ಲ ಹುಟ್ಟಿನಿಂದಲೇ ಬಂದಿತ್ತು. ಅವರು ತಮ್ಮ ಅಭಿನಯ ಕ್ಷೇತ್ರವನ್ನು ಮೀರಿ ನಾಡಿನ ಪರಂಪರೆ-ಸಂಸ್ಕೃತಿಯ ಪ್ರತೀಕವಾಗಿ ಬೆಳೆದಿದ್ದರು. ಆದರೆ ಅವರ ಮರಣದ ನಂತರ ಅಂಥ ಒಬ್ಬ ಕಲಾವಿದ, ಮುಗ್ಧಜೀವಿ,
ಮಾನವೀಯ ಮೌಲ್ಯಗಳ ಸರಳ, ಸಜ್ಜನ ವ್ಯಕ್ತಿ ಇನ್ನು ಹುಟ್ಟಿಬರಲು ಸಾಧ್ಯವೇ ಇಲ್ಲವೆಂದು ಕನ್ನಡಿಗರು ನಿರ್ಧರಿಸಿಬಿಟ್ಟಿದ್ದರು. ಮುಂದೆ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಶಿವಣ್ಣನವರಲ್ಲಿ ರಾಜ್ ಅವರನ್ನು ಕಾಣಲು ಸಾಧ್ಯವಾಗಲೇ ಇಲ್ಲ.

ಆದರೆ ಕೇವಲ ಇಪ್ಪತ್ತೈದು ಚಿತ್ರಗಳಲ್ಲಿ ನಟಿಸಿದ ಪುನಿತ್ ಅವರಲ್ಲೂ ರಾಜ್ ಅವರನ್ನು ಕಾಣುವುದನ್ನೇ ಜನ ಮರೆತುಬಿಟ್ಟಿದ್ದರು. ಇಂದಿನ ಇಂಟರ್ನೆಟ್ ಮೊಬೈಲ್ ಕಾಲದಲ್ಲಿ ನಟರುಗಳಿಗೆ ಸ್ಟಾರ್ ಪಟ್ಟ ಕಟ್ಟುವ ಅಭಿಮಾನಿಗಳ ಮತ್ತು ಚಿತ್ರರಸಿಕರ ಮನಸ್ಥಿತಿಯೂ ಬದಲಾಗಿಹೋಯ್ತು. ಹೀಗಾಗಿ ಎಲ್ಲ ನಟರೂ ಕೇವಲ ಪರ
ದೆಯ ಮೇಲಷ್ಟೇ ನಾಯಕರು, ನಿಜಜೀವನದಲ್ಲಿ ಎಲ್ಲರೂ ಬ್ಯುಸಿನೆಸ್‌ಮನ್‌ಗಳು, ಸ್ವಾರ್ಥಿಗಳು ಎಂಬ ಅಲಿಖಿತ ಅಭಿಪ್ರಾಯ ಹೊಂದುತ್ತಿದ್ದಾರೆ. ಪುನೀತ್ ಅವರಿಗಿಂತ ಶಿವಣ್ಣನೇ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದರು. ಪುನೀತ್ ವರ್ಷಕ್ಕೆ ಒಂದೋ ಎರಡೋ ಸಿನಿಮಾ ಮಾಡಿ ದರೂ ಅವರದೇ ಆದ ಒಂದಷ್ಟು ಅಭಿಮಾನಿಗಳು ಸಂಭ್ರಮ ಪಡುತ್ತಿದ್ದರು. ‘ರಾಜಕುಮಾರ’ ಚಿತ್ರ ಮಾಡಿದಾಗ ಅಭಿಮಾನಿಗಳಲ್ಲದೇ ಎಲ್ಲ ಭಾಷಿಗರೂ ಆ ಸಿನಿಮಾ ನೋಡಿ ಪುನೀತ್ ಅವರನ್ನು ಇಷ್ಟಪಟ್ಟರು.

ಆದರೆ ಮೊನ್ನೆ ಪುನೀತ್ ಅವರು ಉಸಿರು ಬಿಟ್ಟರ! ಅಲ್ಲಿಯವರೆಗೂ ಜನ ಕಂಡಿದ್ದ ಪುನೀತ್ ರಾಜ್‌ಕುಮಾರೇ ಬೇರೆ, ಉಸಿರು ತೊರೆದು ಹೋದ ಪುನೀತ್ ರಾಜ್
ಕುಮಾರೇ ಬೇರೆ ಎನ್ನುವಷ್ಟರಮಟ್ಟಿಗೆ ತನ್ನ ಬದುಕನ್ನು ಬಿಟ್ಟು ಹೋಗಿದ್ದರು. ಆಗಲೇ ನೋಡಿ ಪುನೀತ್ ಅವರಲ್ಲಿ ಅವಿತುಕೊಂಡಿದ್ದ ಬದ್ಧತೆ, ಪ್ರಬುದ್ಧತೆ, ಸಾಮಾಜಿಕ ಶ್ರದ್ಧೆ ಮಾನವೀಯ ಮೌಲ್ಯಗಳು ಒಂದೊಂದಾಗಿ ಹೊರಜಗತ್ತಿಗೆ ಅನುಭೂತಿಯಾದದ್ದು. ತನ್ನಲ್ಲಿನ ಸಜ್ಜನಿಕೆಯನ್ನು ತನ್ನಷ್ಟಕ್ಕೇ ತನ್ನೊಳಗೇ
ಇರಿಸಿಕೊಂಡು ಮತ್ತೊಬ್ಬರಿಗೆ ಕಾಣದಂತೆ, ಎಲ್ಲಿಯೂ ತೋರಿಸಿಕೊಳ್ಳದೆ ಸಮಾಜಕ್ಕೆ ಸ್ಪಂದಿಸಿ ಬದುಕಿದ್ದರು. ಸಾಮಾನ್ಯವಾಗಿ ಇಂಥ ಗುಣಗಳು ಮುಕ್ಕಾಲು ವಯಸ್ಸು ಕ್ರಮಿಸಿದ ಮೇಲೆಯೇ ಸಿದ್ಧಿಸುತ್ತದೆ. ಆದರೆ ಪುನೀತ್ ಅವರಲ್ಲಿ ಕೇವಲ ಮೂವತ್ತು ವಯಸ್ಸಿನ ಇಂಥ ದೊಡ್ಡಗುಣ ಗಳು ನೆಲೆಯಾದವಲ್ಲ, ಅದು ಖಂಡಿತಾ ಸಾಮಾನ್ಯವಲ್ಲ.

ಏಕೆಂದರೆ ಪ್ರಚಾರಕ್ಕಾಗೇ ಎಲ್ಲವನ್ನೂ ಮಾಡುವ(ಅಥವಾ ಹಾಗೆ ತೋರಿಸುವ) ಜನರ ನಡುವೆ ಮಾಡಿದ ದಾನ, ತೋರಿದ ಅನುಕಂಪವನ್ನು ಮಾಧ್ಯಮಗಳಿಗೆ ಗೊತ್ತಾಗದಂತೆ ಪ್ರಚಾರವಾಗದಂತೆ ನೋಡಿಕೊಂಡು ಬಂದರಲ್ಲ, ಅದೇ ಇಂದು ನಡೆಯುತ್ತಿರುವ ಪುನೀತ ಪರ್ವ. ಸರಿ ಯಾಗಿ ಹೇಳಬೇಕೆಂದರೆ ಪುನೀತ್ ಸತ್ತಮೇಲೆಯೇ ಹೆಚ್ಚು ಆಪ್ಯಾಯಮಾನವಾಗಿ ಬದುಕುತ್ತಿದ್ದಾರೆ. ಅವರು ಅಭಿನಯಿಸಿದ ಚಿತ್ರಗಳು ಇಂದು ನೆಪವಷ್ಟೇ. ಆದರೆ ಅವರು ನಲವತ್ತಾರು ವಯಸ್ಸಿಗೇ ತೋರಿದ ಮಾನವೀಯ ಮೌಲ್ಯಗಳಿವೆಯಲ್ಲ ಅದೇ ಅವರನ್ನು ಅಜರಾಮರವಾಗಿಸಿಬಿಡುತ್ತಿದೆ. ಇಂದು ಪುನೀತ್ ಕೇವಲ ಒಬ್ಬ ಸ್ಟಾರ್ ನಟನಾಗಿ ಉಳಿದಿಲ್ಲ ಅವರೊಬ್ಬ ಇತಿಹಾಸ ಪುರುಷನಂತೆ ಬದಲಾಗಿದ್ದಾರೆ. ಅವರ ಸಾಮಾಜಿಕ ಸತ್ಕಾರ್ಯಗಳನ್ನು, ಮಾನವೀಯತೆಯ ಕುರುಹುಗಳನ್ನು ಅವರೊಂದಿಗೆ ಸಮಯಕಳೆದ, ವ್ಯವಹರಿಸಿದ, ಅವರನ್ನು ಹತ್ತಿರದಿಂದ ಬಲ್ಲವರು ಮಾಧ್ಯಮಗಳಲ್ಲಿ ಒಂದೊಂದೇ ಹೇಳಿಕೊಳ್ಳುತ್ತಿದ್ದಾರಲ್ಲ ಇದು ಅವರ ಪಾರ್ಥಿವ ಶರೀರದ
ದರ್ಶನಕ್ಕಾಗಿ ಮತ್ತು ಸಮಾಽಯ ಬಳಿ ಇಂದಿಗೂ ಜನಸಾಗರವನ್ನು ದಿನೇದಿನೇ ಹೆಚ್ಚಿಸುತ್ತಿದೆ.

ಮೊನ್ನೆ ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಪುನೀತ್ ಅವರು ನಡೆಸುತ್ತಿದ್ದ ಮೈಸೂರಿನ ಶಕ್ತಿಧಾಮ ಆಶ್ರಮದಿಂದ ಹೆಣ್ಣುಮಕ್ಕಳು ಬಂದು ಗೋಳಿಟ್ಟರಲ್ಲ, ಅದು ಅಪ್ಪುವಿನ ಅಸಲಿ ಹೃದಯವಂತಿಕೆಯನ್ನು ಜಗತ್ತಿಗೆ ತೆರೆದಿಟ್ಟಿದೆ. ಬೇರೇನೂ ಬೇಡ, ಪುನೀತ್ ಅವರು ವಿಧಿವಶರಾದಾಗ ದೂರದಲ್ಲಿದ್ದ ಇಳಿಯರಾಜರಂಥ
ದೊಡ್ಡವ್ಯಕ್ತಿ ಕೂಡಲೇ ದೇವಾಲಯಕ್ಕೆ ತೆರಳಿ ಅಪ್ಪು ಆತ್ಮಕ್ಕೆ ಶಾಂತಿಕೋರಿ ವಿಶೇಷ ಪೂಜೆ ಸಲ್ಲಿಸಿದ್ದು ಮತ್ತು ರಾಜ್ ಕುಟುಂಬವನ್ನು ತಮಿಳರ ವಿರೋಽ ಎಂದು ಪರಿಗಣಿಸಿದ್ದ ತಮಿಳುನಾಡಿನ ದೇವಾಲಯದಲ್ಲಿ ಪುನೀತ್ ಚಿತ್ರವಿಟ್ಟ ಪೂಜಿಸಿದ್ದು, ಅಪ್ಪು ಕಟ್ಟಿಕೊಂಡ ವ್ಯಕ್ತಿತ್ವ ಸಾಮಾನ್ಯವಲ್ಲ ಎಂಬುದನ್ನು ನಿರೂಪಿಸಿದೆ.
ಚಿತ್ರರಂಗದವರು ಮಾತ್ರವಲ್ಲದೇ, ನಾಡಿನ ಎಲ್ಲ ಮಠಾಽಶರು, ರಾಜಕಾರಣಿಗಳು, ಕ್ರೀಡಾಪಟುಗಳು, ಎಲ್ಲ ಕ್ಷೇತ್ರಗಳ ಜನರು ಪುನೀತ್ ಅವರ ಸಾವಿಗೆ ಪ್ರತಿಕ್ರಿಯಿಸಿ, ಸಮಾಽ ಮತ್ತು ಮನೆಗೆ ತೆರಳಿ ಸಾಂತ್ವನ ಹೇಳುತ್ತಿದ್ದಾರೆ.

ಜಗತ್ತಿನಾದ್ಯಂತ ಅನೇಕ ಸುದ್ದಿವಾಹಿನಿಗಳೂ ಪುನೀತ್ ಅವರ ಸಾವಿನ ಸುದ್ದಿಯನ್ನು ದಾಖಲಿಸಿವೆ. ನೇತ್ರದಾನದ ಜಾಗೃತಿ ಮತ್ತು ನೋಂದಣಿಯಂತೂ ದಿನೇ
ದೀನೇ ಹೆಚ್ಚುತ್ತಿದೆ. ಇದರಿಂದ ದೃಷ್ಟಿಯಿಲ್ಲದ ಅನೇಕ ಮಂದಿಗೆ ಇಂದಲ್ಲ ನಾಳೆ ಜಗತ್ತನ್ನು ನೋಡಬಹುದೆಂಬ ಆಶಾಕಿರಣ ಗೋಚರಿಸುವಂತಾಗಿದೆ. ಮೊನ್ನೆ ಅವರ ಹನ್ನೊಂದನೆ ದಿನದ ಕಾರ್ಯಕ್ರಮದ ನಂತರವಂತೂ ರಾಜ್ಯೋತ್ಸವ ದೊಂದಿಗೆ ಅನ್ನದಾನ ರಕ್ತದಾನ ಶಿಬಿರಗಳು ಹೆಚ್ಚು ಶ್ರದ್ಧೆಯಿಂದ ನಡೆಯುತ್ತಿದೆ. ಎಲ್ಲಕ್ಕಿಂತ ಮಿಗಿಲಾಗಿ ದಾನವೆಂಬುದನ್ನು ಹೇಗೆ ಮಾಡಬೇಕೆಂದು ರಾಜಕಾರಣಿಗಳಾದಿಯಾಗಿ ಸಾಮಾನ್ಯನೂ ಅರಿತುಕೊಂಡಿದ್ದಾನೆ. ಇನ್ನು ಅನೇಕ ನಟರು,
ರಾಜಕಾರಣಿಗಳು ಪುನೀತ್ ಅವರು ನಡೆಸಿಕೊಂಡು ಹೋಗುತ್ತಿದ್ದ ಸಾಮಾಜಿಕ ಕಾರ್ಯಗಳಿಗೆ ಹೆಗಲು ನೀಡುವ ಮಾತನ್ನಾಡಿದ್ದಾರೆ. ಅಷ್ಟಲ್ಲದೇ ವೃದ್ಧಾಶ್ರಮಗಳು ಅನಾಥಾಶ್ರಮಗಳಿಗೆ ನೆರವಾಗುವ ಅನೇಕ ಮನಸ್ಸುಗಳನ್ನು ಪುನೀತ್ ಸಾವು ಸೃಷ್ಟಿಸಿದೆ.

ಅನೇಕ ಅಭಿಮಾನಿಗಳಲ್ಲಿ ತಮ್ಮ ದುಡಿಮೆಯ ಒಂದು ಭಾಗವನ್ನು ಅನಾಥ ವರ್ಗಕ್ಕೆ ಮಿಸಲಿಡಬೇಕೆಂಬ ಒಂದು ನಿರ್ಧಾರ, ಒಂದು ಛಲ ಮೂಡುತ್ತಿದೆ.
ಇಲ್ಲಿ ಗಮನಿಸಬೇಕಾದ ಒಂದು ವಿಷಯವೆಂದರೆ ಪುನೀತ್ ಅವರ ಸಾವಿಗೆ ಬರಿಯ ಅಭಿಮಾನಿಗಳು ಮಾತ್ರವಲ್ಲ, ಸಮಾಜದ ಎಲ್ಲ ಜಾತಿ ಧರ್ಮ ಬಡವ ಶ್ರೀಮಂತರು, ಪರಭಾಷಿಗರು ಸಹ ‘ಅಯ್ಯಯ್ಯೋ’ ಎಂದು ವ್ಯಥೆಪಟ್ಟಿದ್ದಾರೆ. ಇಷ್ಟು ಬೇಗ ಸಾಯಬಾರದಿತ್ತು ಎಂದು ನಿರಾಶೆ ವ್ಯಕ್ತಪಡಿಸುತ್ತಿzರೆ. ಅನೇಕ
ಶ್ರೀಮಂತರು, ಪುಢಾರಿಗಳು, ಉದ್ಯಮಿಗಳು ತಾವು ತೋರಿಕೆಗಾಗಿ ಮಾಡುತ್ತಿದ್ದ ಅನೇಕ ಸಾಮಾಜಿಕ ಸೇವೆಗಳ ಬಗ್ಗೆ ತಮ್ಮಲ್ಲಿಯೇ ಒಂದು ಅಸಹ್ಯ ಪಟ್ಟಿಕೊಳ್ಳುತ್ತಿದ್ದಾರೆ. ಅಕ್ರಮವಾಗಿ ಬಂಗಲೆ ಕಾರು ಸಂಪಾದಿಸಿಕೊಂಡು ವೈಟ್ ಅಂq ವೈಟ್ ಧರಿಸಿಕೊಂಡು ಪೊಲೀಸರು ಹಿಡಿದರೆ ದಂಡಕಟ್ಟಬೇಕಾಗುತ್ತದೆಂದು ಕಾರಿನ ಹಿಂದೆಮುಂದೆ ತಾನು ಅದರ ಅಧ್ಯಕ್ಷ ಇದರ ಸಂಸ್ಥಾಪಕ ಎಂದೆಲ್ಲ ಬೋರ್ಡ್ ತಗಲಿಸಿಕೊಂಡು ಓಡಾಡುವ ರೋಲ್ಕಾಲ್ ಗಿರಾಕಿಗಳೆಲ್ ಸಿಕ್ಕಸಿಕ್ಕ
ಜಾಗದಲ್ಲಿ ಸಮಾಜ ಸೇವಕ ಎಂದು ಬರೆದುಕೊಂಡು ಕರೆಸಿಕೊಂಡು ಬದುಕಿದ್ದವರೆಲ್ಲ ಇಂದು ಪುನೀತ್ ಅವರ ಪರಿಶುದ್ಧ ಸಾಮಾಜಿಕ ಕಾರ್ಯಗಳನ್ನು ಕಂಡು ಮುಖಮುಚ್ಚಿಕೊಳ್ಳುವಂತಾಗಿದೆ.

ಹಾಗೆ ನೋಡಿದರೆ ಪುನೀತ್ ಅವರ ಆರಂಭದ ಐದಾರು ಚಿತ್ರಗಳನ್ನು ಪಾರ್ವತಮ್ಮನವರೇ ನಿರ್ಮಿಸಿದ್ದರು. ಅಪ್ಪು ಒಂದು ಚಿತ್ರಕ್ಕೆ ಇಂತಿಷ್ಟು ಸಂಭಾವನೆ ಎಂದು ಪಡೆದು ಅಭಿನಯಿಸಿದ್ದು ಕೇವಲ ಇಪ್ಪತ್ತು ಚಿತ್ರಗಳಿರಬಹುದು. ಅದರಲ್ಲೂ ಸಂಭಾವನೆಯನ್ನು ಬಿಟ್ಟುಕೊಟ್ಟ ಕೆಲ ಚಿತ್ರಗಳೂ ಇರಬಹುದು. ಇನ್ನುಳಿದ ಚಿತ್ರಗಳಲ್ಲಿ ಪ್ರತಿಭೆಯಿಂದಲೇ ಅಭಿನಯಿಸಿ ಇನ್ನೆಷ್ಟು ಮಹಾ ಕೋಟಿಗಳನ್ನು ಸಂಪಾದಿಸಲು ಸಾಧ್ಯ‘ ಸಾಮಾನ್ಯವಾಗಿ ಮನುಷ್ಯನಿಗೆ ಎಲ್ಲ ರೀತಿಯ ಕಷ್ಟಸುಖಗಳ
ಅನುಭವವಾಗಿ ದಾನಧರ್ಮ, ಸಮಾಜಕ್ಕಾಗಿ ಮಿಡಿಯುವಂಥ ಪಕ್ವತೆ ಬರುವುದು ವೃದ್ಧಾಪ್ಯ ಸಮೀಪಿಸುತ್ತಿದ್ದಾಗ.

ಆದರೆ ಅಪ್ಪು ನಾಯಕ ನಟನಾಗಿದ್ದು ಕೇವಲ ಇಪ್ಪತ್ತೈದು ವರ್ಷಗಳಿದ್ದಾಗ. ಅಂದರೆ ಇಪ್ಪತ್ತು ವರ್ಷಗಳ ಹಿಂದೆಯಷ್ಟೇ. ವಿಽಯ ಚಿತ್ರಕಥೆ ಹೇಗಿದೆ ನೋಡಿ, ಹಿಂದಿನ
ವರ್ಷ ಚಿರಂಜೀವಿಸರ್ಜಾ ಮತ್ತು ಅನೇಕ ಗಣ್ಯರು ಅಗಲಿದಾಗ ಕರೋನಾ ಕಟ್ಟುಪಾಡುಗಳು, ಲಾಕ್‌ಡೌನ್ ವಿಽಗಳಿದ್ದವು. ಸಾವಿಗೆ ಇಪ್ಪತ್ತು, ಮದುವೆಗೆ ಐವತ್ತು ಎಂಬ ನಿಯಮವಿತ್ತು. ಆದರೆ ಸಾಯಲು ಯಾವುದೇ ಕಾರಣಗಳಿಲ್ಲದಿದ್ದರೂ ಮನೆಯಿಂದ ಸಹಜವಾಗಿ ನಡೆದುಕೊಂಡು ಹೊರಬಂದು ಕೇವಲ ಅರ್ಧ ತಾಸಿನಲ್ಲಿ ಪತ್ನಿಯೊಂದಿಗೆ ಮಾತನಾಡುತ್ತಲೇ ಅವರ ತೊಡೆಯ ಮೇಲೆ ಸಾವಿಗೆ ಶರಣಾದ ಪುನೀತ್ ಅವರು ಈ ಮಟ್ಟದ ಲೋಕಾನುಭೂತಿಗೆ ಒಳಪಡುತ್ತಾರೆ. ನಂತರ ಅದಕ್ಕೆ ಪೂರಕವಾಗಿ ಇಂದು ಕರೋನಾ ಕಟ್ಟುಪಾಡುಗಳಿರಲಿಲ್ಲ.

ಹೀಗಾಗಿ ಪ್ರವಾಹೋಪಾದಿಯಲ್ಲಿ ಜನರು ಒಂದೆಡೆ ಸೇರುವಂತೆ ಆ ವಿಧಿಯೇ ವ್ಯವಸ್ಥೆ ಮಾಡಿಕೊಟ್ಟಿದೆ. ಇಲ್ಲದಿದ್ದರೆ ಕರೋನಾ ನಿಯಮದಿಂದಾಗಿ ನೂರು ಜನರೂ ಸೇರದಂತೆ ಆಗಿದ್ದರೆ ಪುನಿತ್ ಪರ್ವ ಸಮಾಜಕ್ಕೆ ತಿಳಿಯುತ್ತಿರಲಿಲ್ಲವೇನೋ. ಇದನ್ನೇ ಅಣ್ಣಾವ್ರು ಹೇಳಿದ್ದು ‘ಆಡಿಸುವಾತನ ಕೈಚಳಕದಲಿ ಎಲ್ಲ ಅಡಗಿದೇ..’
ಎಂದು.

ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿನ ನಟರು -ಟು, ಡ್ಯಾನ್ಸ್ ಮಾಡುತ್ತಿದ್ದಾಗ, ಅವರಿಗೆಲ್ಲ ಸರಿಸಮನಾಗಿ ನಿಲ್ಲಬಲ್ಲ ಒಬ್ಬ ನಟ ನಮ್ಮ  ನ್ನಡದಲ್ಲೂ ಇzರೆ ಎಂದು ಹೆಮ್ಮೆ ಪಡಲು ಅವರೊಬ್ಬರಿದ್ದರು. ಸದ್ಯಕ್ಕೆ ಅಂಥ ವ್ಯಕ್ತಿಯನ್ನು ನಾಡು ಕಳೆದುಕೊಂಡಿದೆ. ಕೊನೆಯದಾಗಿ ಹೆಂಡವನ್ನು ಇಳಿಸಿ ತಂದು ಮಾರಿ ಬದುಕು ನಡೆಸುವ ಮೂಲಕಸುಬಿನ ಈಡಿಗ ಸಮಾಜದವರಾದ ರಾಜಣ್ಣನವರು ತಮ್ಮ ‘ಜೀವನ ಚೈತ್ರ’ ಚಿತ್ರದಲ್ಲಿ ಕುಡಿತದ ವಿರುದ್ಧವೇ ದಂಗೆ ಏಳುವ ಸಂದೇಶ ನೀಡುತ್ತಾರೆ. ಅದೇ ನೋಡಿ ಅವರಲ್ಲಿದ್ದ ನೈಜ ಸಾಮಾಜಿಕ ಕಾಳಜಿ, ಬದ್ಧತೆ ಮತ್ತು ಪವಿತ್ರ ಜಾತ್ಯತೀತತೆ. ಅದು ಅಪ್ಪುವಿನಲ್ಲೂ ಬೆಳೆದುಬಂದಿತ್ತು. ಸ್ವಜಾತಿಯ ವಿರುದ್ಧವೇ ಸಂದೇಶ ಸಾರುವ ಯಮಗುಂಡಿಗೆ ಇಂದು ಯಾವ ಮಗನಿಗಿದೆ ಹೇಳಿ? ನಿಜಕ್ಕೂ ದೊಡ್ಮನೆಯ ಮೇಲೆ ಹೆಮ್ಮೆ ಇದೆ.