ತನ್ನಿಮಿತ್ತ
ಸೌಮ್ಯ ಗಾಯತ್ರಿ
ಬಾಲಿವುಡ್ ಬಣ್ಣದ ಲೋಕದ ಬಾದ್ಷಾಹ್, ಮಾಂತ್ರಿಕ, ಕಿಂಗ್ ತಮ್ಮ ಎರಡೂ ಕೈಗಳನ್ನು ಚಾಚಿ ತುಟಿಯಂಚಿನ ನಗುವಿನ ಪ್ರಣಯ ಪೂರಿತ ಭಂಗಿಯೊಂದಿಗೆ ಹೆಚ್ಚಾಗಿ ಗುರುತಿಸಿಕೊಂಡಿರುವ ನಮ್ಮ ಅನೇಕರ ನೆಚ್ಚಿನ ಸ್ಟಾರ್ ಶಾರುಕ್ ಖಾನ್ರವರ ಪುತ್ರ ಆರ್ಯನ್ ಖಾನ್ (23) ನನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ರೇವ್ ಪಾರ್ಟಿಯ ಸಂಘಟನೆ, ನಂತರ ಮಾದಕ ವಸ್ತು ಸೇವನೆ, ಮಾರಾಟ ಮತ್ತು ಮಾದಕ ದ್ರವ್ಯಗಳ ಖರೀದಿ ಆರೋಪದ ಮೇಲೆ ಬಂಽಸಿದೆ.
ಮುಂಬಯಿಯ ಕರಾವಳಿಯಲ್ಲಿ ಐಷಾರಾಮಿ ಕ್ರೂಸ್ ರ್ಕಾರ್ಡೇಲಿಯಾ ಹಡಗಿನಿಂದ ಅಕ್ಟೋಬರ್ 2ರಂದು NCB ಅಧಿಕಾರಿಗಳು ಆರ್ಯನ್ ಖಾನ್ , ಅರ್ಬಾಜ್ ಮರ್ಚೆಂಟ್ ಮತ್ತು ಮುಮ್ನುನ್ ಧಮೇಚಾ ಸೇರಿದಂತೆ ಇತರ ಏಳು ಮಂದಿಯನ್ನು ಬಂಧಿಸಿ ಮುಂಬೈಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರು
ಪಡಿಸಿದರು.
ಅಕ್ಟೋಬರ್7ರಂದು ಮುಂಬೈ ನ್ಯಾಯಾಲಯವು ಬಂಧಿತರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಆರ್ಯನ್ ಪರ ವಕೀಲ ಸತೀಶ್ ಮಾನಶಿಂದೆ ಅವರು ಜಾಮೀನು ಅರ್ಜಿ ಸಲ್ಲಿಸಿದ್ದರು. ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್, ಅರ್ಬಾಜ್ ಖಾನ್ ಮತ್ತು ಮುನ್ ಧಮೇಚಾ ಅವರ ಜಾಮೀನು ಅರ್ಜಿಯನ್ನು ಮುಂಬೈನ ಸೆಸ್ಸನ್ಸ್ ನ್ಯಾಯಾಲಯ ಶುಕ್ರವಾರ (ಅಕ್ಟೋಬರ್ 8) ತಿರಸ್ಕರಿಸಿದ್ದರ ಪರಿಣಾಮ ಅಕ್ಟೋಬರ್ 11 ರಂದು, ಸತೀಶ್ ಮಾನ ಶಿಂದೆ ಅವರು ವಿಶೇಷ NDPS ನ್ಯಾಯಾಲಯದಲ್ಲಿ ಜಾಮೀನು ಅರ್ಜಿಸಲ್ಲಿಸಿದರು.
ವಿಚಾರಣೆಯು ಅಕ್ಟೋಬರ್ 13 ರಂದು ನಡೆದಿದ್ದು ಅನೇಕ ವಾದವಿವಾದಗಳನ್ನು ಕೇಳಿದ ನಂತರ ತೀರ್ಪನ್ನು ನಾಳೆಗೆ ಕಾಯ್ದಿರಿಸಿದೆ ನ್ಯಾಯಾಲಯ. ಇಂದು ರಾತ್ರಿಆರ್ಯನ್ ಜೈಲ್ನಲ್ಲಿಯೇ ಉಳಿಯಬೇಕು. ಈ ಬಂಧನದ ಪ್ರಕರಣವನ್ನು 3 ಆಯಾಮಗಳಲ್ಲಿ ಚಿತ್ರಿಸಿ, ಚಿಂತಿಸಿ ತಿಳಿಯಲೆತ್ನಿಸಿದಾಗ ಅನೇಕ ಸಂಗತಿಗಳು ಪ್ರಶ್ನಾತೀತವಾಗಿ ಸಮಂಜಸ ಉತ್ತರವಿಲ್ಲದೆ ಹಾಗೆಯೇ ಉಳಿಯುವುದು ನಗ್ನಸತ್ಯ. ಮೊದಲನೆಯ ಆಯಾಮ: ರಾಜಕೀಯ ಪಿತೂರಿ? ಮಾದಕ ವಸ್ತುಗಳ ಸೇವನೆ, ಮಾರಾಟ, ಖರೀದಿ ಇವೆಲ್ಲ ಸಮಾಜದ ದೊಡ್ಡ ಪಿಡುಗಾಗಿ ಮಾರ್ಪಾಡಾಗಿರುವ ನಮ್ಮ ಈ ನವಸಮಾಜದಲ್ಲಿ ಅದೆಷ್ಟೋ ಕಡೆ ಈ ರೀತಿಯ ಮಾರಾಟ,
ರೇವ್ ಪಾರ್ಟಿಗಳು ನಡೆಯುತ್ತಲೇ ಇವೆ. ಹಾಗೆ ನೋಡಿದಲ್ಲಿ ದಿನಕ್ಕೆ ಎಷ್ಟು ಜನರನ್ನು ಬಂಧಿಸಿ, NCB ನ್ಯಾಯಾಂಗ ತನಿಖೆಗೆ ಒಪ್ಪಿಸುತ್ತದೆ? ಖ್ಯಾತನಾಮರನ್ನು ಬಂಧಿಸಿ, ಅವರೊಂದಿಗೆ ಜಾಮೀನು ನಿರಾಕರಣೆ ಮತ್ತು ಜೈಲುವಾಸದಂತಹ ಪ್ರಹಸನಗಳು ಹಲವಾರು ಬಾರಿ ನೋಡಿದ್ದೇವೆ. ಕೊನೆಗೆ ಅದೇನಾದರೂ ರೋಮಾಂಚನ ಹುಟ್ಟಿಸಿದಂತಹ ಕೊನೆ ಮುಟ್ಟಿರುವುದಕ್ಕೆ ನಿದರ್ಶನಗಳಿವೆಯೇ? ಖಂಡಿತ ಇಲ್ಲ. ಎಲ್ಲೋ ಹಳಿ ತಪ್ಪಿ, ಕೇಸಿನ ಮೇಲಿನ ಹಿಡಿತ ತಪ್ಪಿ ಕೊನೆಗೆ ಆ ವಿಚಾರಣೆ ಯ ಕಡತ ಮೂಲೆ ಗುಂಪಾಗಿರುವ ಪ್ರಸಂಗಗಳೇ ಹೆಚ್ಚು.
ಎನ್ಸಿಪಿ ನಾಯಕ ಮತ್ತು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಆರ್ಯನ್ ಖಾನ್ ಬಂಧನ ಪೂರ್ವ ಯೋಜಿತ ಮತ್ತು ನಕಲಿ ಎಂದು ಆರೋಪಿಸಿರುವುದು ಗಮನಾರ್ಹ ಅಂಶ. ಅವರು ತಮಗೆ ತಿಳಿಯ ಬಂದಿರುವ ಸುದ್ದಿಯ ಪ್ರಕಾರ ಕಳೆದ ಒಂದುತಿಂಗಳಿನಿಂದ ಕ್ರೈಂ ವರದಿಗಾರರಿಗೆ ಮುಂದಿನ ಗುರಿ ನಟಶಾರುಕ್ ಎಂಬ ಸಂದೇಶ ನಿರಂತರ ರವಾನೆಯಾಗಿದೆ, ಇದಕ್ಕೆ ಪ್ರತಿಕ್ರಿಯಿಸಿದ ಎನ್ಸಿಬಿ, ದುರುದ್ದೇಶದಿಂದ ಮತ್ತು ಯಾವುದೋ ರಾಜಕೀಯ ಹುನ್ನಾರದೊಂದಿಗೆ ಈ ಕಾರ್ಯಾಚರಣೆ ನಡೆಸಿದೆ ಎಂದು ಆರೋಪಿಸಿದ್ದಾರೆ.
ಕಾರ್ಡೆಲಿಯಾ ಕ್ರೂಸ್ ಹಡಗಿನಲ್ಲಿ ಎನ್ಸಿಬಿ ದಾಳಿಯಲ್ಲಿ ಬಿಜೆಪಿಗೆ ಸೇರಿದ ಖಾಸಗಿ ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂದು ಅವರು ತಿಳಿಸುತ್ತಾ ಬಂಧಿಸಿದವರನ್ನು ಎನ್ಸಿಬಿ ಕಚೇರಿಗೆ ಕರೆದೊಯ್ಯುವುದನ್ನು ತೋರಿಸುವ ದೃಶ್ಯಗಳನ್ನು ಬಿಡುಗಡೆ ಮಾಡಲಾಗಿದ್ದು ಅದರಲ್ಲಿ ಆರ್ಯನ್ ಖಾನ್ನ ಕೈ ಹಿಡಿದು ಎನ್ಸಿಬಿ ಕಚೇರಿಯ ಒಳಗೆ ಕರೆದುಕೊಂಡು ಹೋಗುತ್ತಿರುವ ವ್ಯಕ್ತಿಯ ಹೆಸರು ಕೆ.ಪಿ.ಗೋಸಾವಿ. NCB ಅಧಿಕಾರಿ ಗಳು ನಂತರ ಗೋಸಾವಿ NCB ಅಧಿಕಾರಿಯಲ್ಲ ಎಂದು ಹೇಳಿದ್ದಾರೆ. ಅವರು ಅಽಕಾರಿಯಲ್ಲದಿದ್ದರೆ, ಅವರು ಖಾನ್ ಜತೆ ಘೆಇಆ ಕಚೇರಿಯೊಳಗೆ ಏನು ಮಾಡುತ್ತಿದ್ದರು? ಎಂಬುದು ಮಲಿಕ್ ಅವರ ವಾದ.
ಪ್ರಕರಣದಲ್ಲಿ ಮತ್ತೊಬ್ಬ ಬಂಧಿತ ಅರ್ಬಾಜ್ ಮರ್ಚೆಂಟ್ ಕೈ ಹಿಡಿದು NCB ಕಚೇರಿಗೆ ಕರೆದೊಯ್ಯುವ ಎರಡನೇ ವ್ಯಕ್ತಿ ಮನೀಶ್ ಬಾನುಶಾಲಿ. ಅವರದೇ ಸಾಮಾಜಿಕ ತಾಣಗಳ ಪ್ರಕಾರ, ಅವರು ಬಿಜೆಪಿ ಉಪಾಧ್ಯಕ್ಷ ಸ್ಥಾನವನ್ನು ಹೊಂದಿದ ವರಾಗಿದ್ದಾರೆ. ಪ್ರಧಾನಿ ಮೋದಿ ಮತು ದೇವೇಂದ್ರ ಫಡ್ನವೀಸ್ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರೊಂದಿಗೆ ಅವರ ಹಲವಾರು ಚಿತ್ರಗಳಿವೆ. ದಾಳಿಯ ಸಮಯದಲ್ಲಿ ಈ ವ್ಯಕ್ತಿ ಏಕೆ ಅವರ ಜತೆಗಿದ್ದರು ಎಂಬುದನ್ನು NCB
ವಿವರಿಸಲಿ ಎಂದು ತಮ್ಮ ಬೇಡಿಕೆಯಿಟ್ಟರು. NCB ನಲ್ಲಿ ಈ ರೀತಿದಾಳಿಗಳನ್ನು ನಡೆಸಲು ಖಾಸಗಿ ನಾಗರಿಕರ ಸಹಾಯವನ್ನು ತೆಗೆದುಕೊಳ್ಳುವ ನೀತಿ ಇದೆಯೇ? ಎಂಬ ಪ್ರಶ್ನೆ ಮಲಿಕ್ ಅವರದ್ದು.
ಎನ್ಸಿಪಿಯ ನವಾಬ್ ಮಲಿಕ್ ಅವರು ತನ್ನವಿರುದ್ಧ ತಪ್ಪು ಆರೋಪ ಮಾಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತ ಮನೀಶ್ ಬಾನುಷಾ ಹೇಳಿದ್ದಾರೆ. ಬಿಜೆಪಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಬಿಜೆಪಿಯಲ್ಲಿ ನನಗೆ ಯಾವುದೇ ಅಧಿಕೃತ ಸ್ಥಾನವಿಲ್ಲ. ನಾನು ದೇಶದ ಸಕ್ರಿಯ ನಾಗರಿಕನಾಗಿ ಈ ಮಾಹಿತಿಯನ್ನು ನೀಡಿ ದ್ದೇನೆ. ಅಕ್ಟೋಬರ್ 1 ರಂದು ಡ್ರಗ್ಸ್ ಪಾರ್ಟಿ ನಡೆಸುವ ಬಗ್ಗೆ ನನಗೆ ಮಾಹಿತಿ ಸಿಕ್ಕಿದ್ದು ಹೆಚ್ಚಿನ ಮಾಹಿತಿಗಾಗಿ ನಾನು ಎನ್ಸಿಬಿ ಅಧಿಕಾರಿಗಳೊಂದಿಗೆ
ಸಂಪರ್ಕ ದಲ್ಲಿದ್ದೆ ಮತ್ತು ಅವರೊಂದಿಗೆ ಅಂದು ಹಡಗಿನಲ್ಲಿದ್ದೆ ಎಂದು ಭಾನು ಷಾ ಹೇಳಿದರು. ಯಾವ ರಾಜಕೀಯ ಪಕ್ಷಕ್ಕೆ ಯಾವ ರೀತಿಯ ಲಾಭ ಬೇಕಾಗಿ ದೆಯೋ? ಶಾರುಕ್ ಖಾನ್ ನಿಂದ ಯಾವ ರೀತಿಯ ರಾಜಕೀಯ ಲಾಭವಿದೆಯೋ? ಇದರ ಹಿಂದೆ ಯಾರ ರಾಜಕೀಯ ಮುತ್ಸದ್ದಿತನದ ಹುನ್ನಾರವಿದೆಯೋ? ಇವೆಲ್ಲ ಜನಸಾಮಾನ್ಯರ ಬುದ್ದಿವಂತಿಕೆಗೆ ಮೀರಿದ್ದು ಎನ್ನುವುದು ಮಾತ್ರ ಸತ್ಯಾಂಶ.
ಎರಡನೆಯ ಆಯಾಮ : ಜನ ಸಾಮಾನ್ಯನ ತರ್ಕ ಪ್ರತಿ ದಿನ ನೀಡಿದ ಮಾಹಿತಿಯನ್ನೇ ಪುನರಾವರ್ತಿಸುತ್ತಾ, ಹೇಳಿದ್ದನ್ನೇ ಹೇಳುತ್ತಾ, ಅರಚುತ್ತಾ ಕೂಗುತ್ತ ಸುದ್ದಿ ಬಿತ್ತರಿಸುವ ನಮ್ಮ ಸುದ್ದಿನ ವಾಹಿನಿಗಳನ್ನು ನೋಡುತ್ತಾ, ಕೇಳುತ್ತಾ, ಮುಂಜಾನೆಯ ಬಿಸಿ ಕಾಫಿ ಅಥವಾ ಚಹಾ ಹೀರುತ್ತಾ ಸುದ್ದಿ ಪತ್ರಿಕೆಯಲ್ಲಿ ಈ ರೀತಿಯ ಹಗರಣಗಳ ಮೇಲೆ ದೃಷ್ಟಿ ಹಾಯಿಸುವುದು ಶ್ರೀಸಾಮಾನ್ಯನ ದೈನಂದಿನ ಕಾರ್ಯಕ್ರಮ. ಶಾರುಕ್ ಖಾನ್ ಮಗ ಅಂದ್ರೆ ಸುಮ್ನೆನ? ಶ್ರೀಮಂತಿಕೆಯಲ್ಲಿ ಬೆಳೆಸಿರು ತ್ತಾರೆ. ಅವರಿಗೆಲ್ಲಿ ಸಂಸ್ಕಾರ, ಒಳ್ಳೆಯದು ಕೆಟ್ಟದರ ತರ್ಕ, ಜೀವನದಲ್ಲಿ ಎಲ್ಲ ಸುಲಭವಾಗಿ ದೊರಕುತ್ತಲ್ಲ, ಅದೇ ದುರಹಂಕಾರ.
ಎಲ್ಲ ಕೆಟ್ಟ ಚಟಗಳೂ ಅಂಟಿರುತ್ತೆ ಈ ಮುಂಡೇವಕ್ಕೆ. ಡ್ರಗ್ಸ್ಅನ್ನೋದು ಇವರಿಗೆ ಚಿಕ್ಕಂದಿನಿಂದ ಅಭ್ಯಾಸ ಆಗಿರುತ್ತೆ. ಹೈ ಕಾಸ್ಟ್ಲೀ ಜೀವನ ಶೈಲಿ ಅಲ್ವ. ಮಕ್ಕಳ
ದೇನು ತಪ್ಪು? ಪೋಷಕರದ್ದೇ ತಪ್ಪು. ಲಂಗುಲಗಾಮಿಲ್ಲದೆ ಬೆಳೆಸಿರುತ್ತಾರೆ. ಈ ಬಣ್ಣದ ಲೋಕಾನೇ ಹೀಗೆ. ಇವ್ರಿಗೆಲ್ಲ ಮಕ್ಕಳು ಯಾಕಪ್ಪ? ಹೀಗೆ ಡ್ರಗ್ಸ್ ತಿನ್ಕೊಂಡು ಹಾಳಾಗಾಕ್ಕ? ಇರ್ಲಿಬಿಡಿ ಜೈಲ್ನಲ್ಲಿ ಏನು ಸಾಮಾನ್ಯ ಖೈದಿಗಳ ತಾರಾ ಇರ್ತಾರ? ಅವರಿಗೆ ರಾಜೋಪಚಾರ ಇರುತ್ತೆ. ಸುಮ್ನೆ ನಾಮ ಕಾ ವಾಸ್ತೆ ಜೈಲು.
ಪಾಪ ಶಾರುಕ್ ಖಾನ್, ಸಿಕ್ಕಾಪಟ್ಟೆ ದುಡ್ಡು ಇಟ್ಟಿದ್ದಾನೆ. ಭೂಗತ ಲೋಕದಲ್ಲಿ ದುಡ್ಡು ಕೇಳಿರ್ಬೇಕು. ಇವ್ನುಇಲ್ಲ ಕೊಡಲ್ಲ ಅಂದಿರ್ತಾನೆ ಅದಕ್ಕೆ ಮಗನ್ನ ಫಿಕ್ಸ್ ಮಾಡಿ ಬಿಟ್ರು. ಇಲ್ಲ ಯಾವುದೋ ರಾಜಕೀಯ ಪಕ್ಷ ಹಣ ಕೇಳಿರ್ಬೇಕು ಇಲ್ಲವೇ ಏನೋ ಸಹಾಯ ಕೇಳಿರ್ತಾರೆ, ಇವನು ಆಗಲ್ಲ ಅಂದಿರ್ತಾನೆ ಅದಕ್ಕೆ ಮಗನನ್ನ ಡ್ರಗ್ ಕೇಸ್ನಲ್ಲಿ ಅಂದರ್ ಮಾಡಿದ್ದಾರೆ. ದುಡ್ಡು ಹೆಚ್ಚಿದ್ರೆ ಏನು ಲಾಭ, ಈಗ ಮನ ಶಾಂತಿ ಇಲ್ವಲ್ಲ. ಪಾಪ ಮಗ ಏನು ತಿಂತಾನೋ, ಹೇಗಿರ್ತಾನೋ? ಜೈಲುವಾಸ ಹೇಗಿದೆಯೋ ಅನ್ನೋ ಚಿಂತೆಲಿ ಊಟ ನಿದ್ದೆ ಬಿಟ್ಟು ಮನೋರೋಗಕ್ಕೆ ಬಲಿಯಾಗೋ ಹಾಗಾಗಿದೆ. ಈ ದುಡ್ಡು, ಖ್ಯಾತಿ ಯಾವುದೂ ಬೇಡಪ್ಪ. ನಾವಿರೋ ಹಾಗೆ
ಇರೋದೇ ಒಳ್ಳೇದು. ಏನ್ ಕರ್ಮಾನೋ ಇವೆಲ್ಲ. ಹೀಗೆಲ್ಲ ಅನೇಕ ಚರ್ಚೆಗಳನ್ನು ಮಾಡುತ್ತಾ ಶಾರುಖ್ ಅನ್ನುಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಹಿಂಬಾಲಿಸುತ್ತ ಸುದ್ದಿ ಗ್ರಹಿಸಿ ತಮ್ಮ ಅನಿಸಿಕೆಯ ಒಗ್ಗರಣೆ ಹಾಕಿ ಅಭಿಪ್ರಾಯತಿಳಿಸುವುದು ನಮ್ಮ ಶ್ರೀ ಸಾಮಾನ್ಯನ ಮೂಲ ಭೂತ ಹಕ್ಕು ಮತ್ತು ಅಧಿಕಾರ.
ಮೂರನೆಯ ಆಯಾಮ : ಪೋಷಕರ ದೃಷ್ಟಿಕೋನ ಒಬ್ಬ ಪೋಷಕರ ದೃಷ್ಟಿಯಲ್ಲಿ ಈ ಪ್ರಕರಣವನ್ನು ಕೂಲಂಕುಷವಾಗಿ ಪರಿಶೀಲಿಸಿದಾದ, ಯಾವ ತಂದೆ ಅಥವಾ
ತಾಯಿಯೂ ತಮ್ಮ ಮಕ್ಕಳು ಕೆಟ್ಟದಾರಿ ಹಿಡಿಯಬೇಕು ಎಂದು ಎಂದಿಗೂ ಬಯಸುವುದಿಲ್ಲ. ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳು ಉತ್ತಮ ಪ್ರಜೆಗಳಾಗ ಬೇಕು. ಒಳ್ಳೆಯ ಹೆಸರು ಮಾಡಬೇಕು. ಸಮಾಜದಲ್ಲಿ ಗೌರವಯು ತವಾಗಿ ಗುರುತಿಸಲ್ಪಡಬೇಕು ಎಂಬ ಆಶಯವನ್ನೇ ಹೊಂದಿರುತ್ತಾರೆ.
ಇಂತಹ ಘಟನೆಗಳು ಸಂಭವಿಸಿದಾಗ ಅಪರಾಧಿ ಸ್ಥಾನದಲ್ಲಿ ನಿಂತಿರುವ ತಮ್ಮ ಮಕ್ಕಳನ್ನುನೋಡಿದಾಗ ಎಂತಹ ಪೋಷಕರೇ ಆಗಿರಲಿ ಕರುಳು ಕಿತ್ತು ಬರುತ್ತದೆ. ಐಷಾರಾಮಿ ಜೀವನ ಸಾಗಿಸುತ್ತ ಎಲ್ಲ ಸೌಲಭ್ಯ ಸವಲತ್ತುಗಳೊಂದಿಗೆ ಬೆಳೆದ ಮಕ್ಕಳು ಜೈಲು ವಾಸ ಮಾಡಬೇಕೆನ್ನುವ ಯೋಚನೆಯೇ ಪೋಷಕರಿಗೆ ನುಂಗ ಲಾರದ ಬಿಸಿತುಪ್ಪವಾಗುತ್ತದೆ. ಸ್ವಲ್ಪ ಯೋಚಿಸಿ ನೋಡೋಣ, ನಮ್ಮ ಮಕ್ಕಳು ಶಾಲೆಯಲ್ಲಿ ಏನೋ ತಪ್ಪು ಮಾಡಿ ಅವರನ್ನು ಶಿಕ್ಷಕರು, ಪ್ರಾಂಶುಪಾಲರು
ಅವರ ಕೋಣೆಗೆ ಕರೆದೊಯ್ದು ಅವರಿಗೆ ಶಿಕ್ಷೆ ನೀಡಿ ಪೋಷಕರನ್ನು ಕರೆದಾಗ, ಮಕ್ಕಳು ತಪ್ಪು ಮಾಡಿಯೋ, ಮಾಡದೆಯೋ ಆ ತಪ್ಪಿತಸ್ಥಭಾವನೆಯೊಂದಿಗೆ ನಮ್ಮ ಪೋಷಕರು ಏನು ಮಾಡುತ್ತಾರೋ ಎಂಬ ಭಯದ ಯೋಚನೆಯಲ್ಲಿ ನಿಂತಿರುವುದನ್ನು ನೋಡಿದಾಗ ಪ್ರತಿಯೊಬ್ಬ ಪೋಷಕನ ಕರುಳು ಕಿವಿಚಿದಂತಾಗುವು ದಿಲ್ಲವೇ? ಕ್ಷಣಮಾತ್ರಕ್ಕಾದರೂ ಶಿಕ್ಷಕರ ಮೇಲೆ ಕ್ರೋಽತಗೊಳ್ಳುವುದು ಬಹಳ ಸಹಜ ಕ್ರಿಯೆ ಎಂದೆನಿಸುತ್ತದೆ.
ಹಾಗೆಯೇ ಎಂದಾದರೂ ನಮ್ಮ ಮಕ್ಕಳನ್ನುಪೊಲೀಸರು ಹಿಡಿದು ಲೈಸೆನ್ಸ್ ಎಲ್ಲೋ? ಹೆಲ್ಮೆಟ್ ಎಲ್ಲೋ? ಅಂತ ಕೇಳಿ ಅಂತಹ ಅಸಹಾಯಕ ಸ್ಥಿತಿಯಲ್ಲಿ ಪೋಷಕರು ಪೊಲೀಸರನ್ನು ವಿನಂತಿಸಿ, ತಪ್ಪಾಯ್ತು ಸರ್, ಇನ್ನು ಮುಂದೆ ಹೀಗಾಗದಿರುವಂತೆ ನಾವು ನೋಡಿಕೊಳ್ಳುತ್ತೇವೆ ಅಂತ ಬೇಡುವಾಗ ನಮ್ಮ ಮಕ್ಕಳು ತಪ್ಪೇ ಮಾಡಿದ್ದರೂ ಅವರ ಮೇಲೆ ಇಂತಹ ಅನುಕಂಪ ಮೂಡಿ, ಹೃದಯದಾಳದಿಂದ ವೇದನೆಯ ಕೂಗು ಅವರನ್ನುಕಾಪಾಡುವತ್ತ ಪ್ರೇರೇಪಿಸುತ್ತದೆ.
ಅದೇ ರೀತಿ ಶಾರುಕ್ ಮತ್ತು ಗೌರಿ ದಂಪತಿಗಳ ಪರಿಸ್ಥಿತಿಯನ್ನು ಸ್ವಲ್ಪ ಯೋಚಿಸೋಣ. ಪ್ರತಿಷ್ಠಿತ ಜೋಡಿ, ಸಮಾಜದಲ್ಲಿ ಉತ್ತಮ ಹೆಸರು, ಖ್ಯಾತಿ ಇದೆ. ಹೇರಳವಾಗಿ ಆಸ್ತಿ ಪಾಸ್ತಿ ಯೂ ಇದೆ. ಸುಖ ಸಂಸಾರ. ಏನೋ ಕೆಟ್ಟ ಘಳಿಗೆ ಮಗ ಬಂಧನ ಕ್ಕೊಳಗಾಗಿದ್ದಾನೆ. ತಪ್ಪುಮಾಡಿದ್ದಾನೆಯೋ ಇಲ್ಲವೋ ನ್ಯಾಯಾಲಯ
ತೀರ್ಮಾನಿಸಲಿ ಆದರೆ ವಾರಗ ಟ್ಟಲೆ ಮನೆಯಲಿಲ್ಲದೆ ಮುದ್ದು ಮಗ ಜೈಲುವಾಸ ಅನುಭವಿ ಸುತ್ತಿರುವಾಗ ಪೋಷಕರಿಗೆ ನೆಮ್ಮದಿಯ ನಿದ್ರೆ ಬಂ ದೀತೆ? ಪಂಚಭಕ್ಷ್ಯ ಪರಮಾನ್ನದಿನೇದಿನೇ ಮಾಡಿಸಿಕೊಂಡು ತಿನ್ನುವ ತಾಕತ್ತಿದೆಯಾದರೂ ತಿನ್ನುವ ಮನಸ್ಸಿದ್ದೀತೆ? ಒಬ್ಬ ಪೋಷಕರ ದೃಷ್ಟಿಯಲ್ಲಿ ಅತಿದಾರುಣ ಪರಿಸ್ಥಿತಿ ಅವರದ್ದು.
ಇವೆಲ್ಲ ನಿಜವಾಗಿಯೂ ರಾಜಕೀಯ ಪ್ರೇರಿತವೋ, ಇಲ್ಲವೇ ನಿಜವಾಗಿಯೂ ಆತ ಆರೋಪಿಯೋ ತಿಳಿಯದು. ಆದರೆ ಪೋಷಕರ ದುಃಖ ಶಮನಗೊಂಡು ಇವೆಲ್ಲವೂ ಶಾಂತಿಯುತವಾಗಿ ನ್ಯಾಯಯುತವಾಗಿ ಅಂತ್ಯಕಾಣಲಿ ಎಂಬುದು ಒಬ್ಬ ಶ್ರೀ ಸಾಮಾನ್ಯನ ಬಯಕೆ.