ಪ್ರಚಲಿತ
ಸುನೀತಾ ಎನ್.ಗೌಡ
ಜಗತ್ತಿನೆಡೆ ಪರಿಸರದ ಸಂರಕ್ಷಣೆಗಾಗಿ ಹಲವಾರು ವ್ಯಕ್ತಿಗಳು ವೈಯಕ್ತಿಕವಾಗಿ ಜಾಗೃತಿ ಮೂಡಿಸುತ್ತಿರುವುದು ಪ್ರಮುಖ ವಿಧಾನ. ಇಲ್ಲಿ ಸಂಘಟನೆ, ಒಪ್ಪಂದ ದಂತಹ ಯೋಜಿತ ನಡೆದಿರುವುದಿಲ್ಲ. ವೈಯಕ್ತಿಕವಾಗಿ ಪ್ರಾಕೃತಿಕ ಸಂಪನ್ಮೂಲ ಮತ್ತು ಇತರ ವಸ್ತುವಿಷಯಗಳ ಕುರಿತು ಸಾಕಷ್ಟು ಪರಿಸರವಾದಿಗಳು ಜಾಗೃತಿ ಕೈಗೊಂಡಿದ್ದಾರೆ.
ಪರಿಸರ ಜಾಗೃತಿ ಅಂದಿನ ಇಂದಿನ ನಮ್ಮ ಅಗತ್ಯತೆ.. ಅನಿವಾರ್ಯ.. ನಾವೆಲ್ಲಾ ಇಂದು ನಿರಾಳವಾಗಿ ಉಸಿರಾಡುತ್ತಿದ್ದೇವೆ ಎಂದರೆ ಆಕ್ಸಿಜನ್‌ನಿಂದ ಮಾತ್ರ. ‘ನದಿ ಮೂಲ, ಖುಷಿ ಮೂಲ, ಹೆಣ್ಣಿನ ಮೂಲ’ ಹುಡುಕಬಾರದು ಎನ್ನುವ ಗಾದೆ ಮಾತಿದೆ. ಹೌದು, ಅದು ನಿಜ.. ಆದರೆ ಇಲ್ಲಿ ನಾವು ಆಕ್ಸಿಜನ್ ಮೂಲ ಹುಡುಕಲೇ ಬೇಕಾಗಿದೆ. ಅದರ ಮೂಲ ಹುಡುಕಿ ಅದನ್ನು ಭದ್ರ ಪಡಿಸದಿದ್ದರೆ, ಈಗ ಅನುಭವಿಸುತ್ತಿರುವ ನಗರ ಅಲ್ಲ, ಇದನ್ನು ಮೀರಿದ್ದು, ಭವಿಷ್ಯದಲ್ಲಿ ಕಾಣುತ್ತೇವೆ. ಆ ದಿನ ಗಳು ತುಂಬ ದೂರವಿಲ್ಲ ಬಿಡಿ. ಸದ್ಯದಲ್ಲೇ ನೋಡುತ್ತೇವೆ.
ಈ ರಹಸ್ಯವನ್ನು ಮನಗಂಡ ಎಷ್ಟೋ ಮಹಾತ್ಮರು ಅರಣ್ಯ, ವನ್ಯ ಸಂಪತ್ತನ್ನು ರಕ್ಷಿಸಿ, ಬೆಳೆಸುವ ವಿಧಾನದಲ್ಲಿ ಶ್ರಮಿಸಿದ್ದಾರೆ. ಆಫ್ರಿಕಾದ ವಾಂಗರಿ ಮಥಾಯ್ ಅವರಿಂದ ಮೊದಲ್ಗೊಂಡು ಇಂದಿನ ಗ್ರೇಟಾ ಥನ್ಬರ್ಗ್ ವರೆಗೆ ಈ ವಿಧಾನ ಮುಂದುವರಿದಿದೆ. ಭಾರತದಲ್ಲಿ ಸುಂದರ್ ಲಾಲ್ ಬಹುಗುಣ, ರಾಜೇಂದ್ರಕುಮಾರ್, ಸಾಲುಮರದ ತಿಮ್ಮಕ್ಕ, ಕುಸುಮಾ ಸೊರಬ, ಶಿವರಾಮ ಕಾರಂತ ಅವರಿಂದ ಉರಗ ತಜ್ಞರು, ಪ್ರಾಣಿ ಸಂರಕ್ಷಕರಾದ ಉಸ್ ಕಾರಂತ್, ಸ್ನೇಕ್ ಶ್ಯಾಮ,
ಸೂರ್ಯಕೀರ್ತಿ ಮೊದಲಾದವರು ಅಹರ್ನಿಶಿ ಶ್ರಮಿಸಿದ್ದಾರೆ.
ಪರಿಸರ ಸಂರಕ್ಷಣೆಗೆ ಅವರ ವೃತ್ತಿಯಾಗಲೀ, ವೈಯಕ್ತಿಕ ಜೀವನವಾಗಲೀ, ಇಂದಿನ ಒತ್ತಡದ ಸಮಯವಾಗಲೀ, ಸಂಪತ್ತಾಗಲೀ, ಜೀವನ ಶೈಲಿಯಾಗಲಿ ಯಾವುದೂ ಅಡ್ಡ ಬರುವುದಿಲ್ಲ.. ಬರಲೂಬಾರದು ಅನ್ನುವುದಕ್ಕೆ ಇಲ್ಲಿಯವರೆಗೂ ನಾವು ಅನೇಕರನ್ನು ನೋಡಿದ್ದೇವೆ. ಇಂಥವರ ಸಾಲಿಗೆ ಅಲ್ಲದಿದ್ದರೂ, ಪರಿಸರ ರಕ್ಷಣೆ ಹಾಗೂ ಅದನ್ನು ಬೆಳೆಸಲು ತನ್ನ ವೃತ್ತಿಯೇ ಯಾಕೆ ಒಂದು ಭಾಗವಾಗಬಾರದು ಎಂದು ತಿಳಿದು, ತನ್ನ ಕೈಲಾದಷ್ಟು ಅಳಿಲು ಸೇವೆಯನ್ನು ನೀಡಲು ಹೊರಟಿ ದ್ದಾರೆ ಇಲ್ಲೊಬ್ಬ ಜ್ಯೋತಿಷಿ. ಅವರೇ ಅಂತಾರಾಷ್ಟ್ರೀಯ ವೈಜ್ಞಾನಿಕ ಜ್ಯೋತಿಷಿ ಡಾ. ದಿನೇಶ್ ಗುರೂಜಿ.
25 ವರ್ಷಗಳಿಂದ ಜ್ಯೋತಿಷ್ಯದಲ್ಲೇ ಪಾಂಡಿತ್ಯ ಪಡೆದಿರುವ ಖ್ಯಾತ ಅಸ್ಟ್ರಲಜರ್ ಇವರು. ಅಷ್ಟೇ ಅಲ್ಲದೇ ತನ್ನ ಶಿಷ್ಯವೃಂದಕ್ಕೂ ಮರಗಳನ್ನು ಬೆಳೆಸಲು ಹೇಳಿ ಪ್ರೇರಣೆ ಯಾಗಿದ್ದಾರೆ. ಜ್ಯೋತಿಷ್ಯ ವಾಣಿಯಿಂದಲೇ ಪರಿಸರಕ್ಕೆ ಸ್ವಲ್ಪ ಮಟ್ಟಿಗಾದರೂ ಅನುಕೂಲವಾಗಲಿ ಎಂದು ಬಹುಶಃ ಪಣ ತೊಟ್ಟಿದ್ದಾರೆ. ಅದು ಹೇಗೆ ಸಾಧ್ಯ? ಜ್ಯೋತಿಷ್ಯದಿಂದ ಹೇಗೆ ಪರಿಸರ ರಕ್ಷಣೆ ಎಂಬುದು ಎಲ್ಲರ ಪ್ರಶ್ನೆಯಾಗಿರಬಹುದು. ಜೀವನದಲ್ಲಿ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇದ್ದೇ ಇರುತ್ತದೆ. ಸ್ವಾರ್ಥ ಬಿಟ್ಟು ಅದನ್ನು ಹುಡುಕಬೇಕು ಅಷ್ಟೇ.
ಜ್ಯೋತಿಷ್ಯವು ಬಾಹ್ಯಾಕಾಶದ ಕಾಯಗಳ ಸ್ಥಾನಗಳ ಆಧಾರದ ಮೇಲೆ ಮಾನವನ ವ್ಯಕ್ತಿತ್ವ, ಜೀವನ, ಭವಿಷ್ಯ ಇತ್ಯಾದಿಗಳನ್ನು ತಿಳಿಯಬಹುದೆಂಬ ನಂಬಿಕೆ. ಜ್ಯೋತಿಷ್ಯದಿಂದ ಕೇವಲ ಮಾನವನ ಭವಿಷ್ಯವಲ್ಲದೇ, ರಾಜಕೀಯ, ದೇಶ, ಆರ್ಥಿಕತೆ ಹೀಗೆ ಹತ್ತು ಹಲವುಗಳ ಬಗ್ಗೆ ಭವಿಷ್ಯವನ್ನು ತಿಳಿಯಬಹುದು. ಮನುಷ್ಯ ಅಂದಮೇಲೆ ಕಷ್ಟಗಳು ಕಟ್ಟಿಟ್ಟ ಬುತ್ತಿ. ಅವುಗಳನ್ನು ನಾವು ಹುಡುಕಿಕೊಂಡು ಹೋಗಬಹುದು ಅಥವಾ ಅವೇ ನಮ್ಮನ್ನು ಹಿಂಬಾಲಿಸಿ ಬರಬಹುದು. ಕಷ್ಟ, ನೋವು,
ಸಮಸ್ಯೆಗಳು ಬಂದಾಗ ಸಾಮಾನ್ಯವಾಗಿ ನಾವು ಅದಕ್ಕೆ ಪರಿಹಾರಗಳನ್ನು ಕಂಡುಕೊಳ್ಳುತ್ತೇವೆ. ಅದರಲ್ಲಿ ಒಂದು ಭಾಗವೇ ಜ್ಯೋತಿಷ್ಯ ಅಥವಾ ಅಸ್ಟ್ರಲಜಿ. ನಮಗೆ ತಿಳಿದಿರುವ, ಇಲ್ಲ ಸ್ನೇಹಿತರು, ಸಂಬಂಽಕರು ಹೇಳುವ ಜ್ಯೋತಿಷಿಗಳ ಬಳಿ ಹೋಗುತ್ತೇವೆ. ಜ್ಯೋತಿಷಿಗಳು ನಮ್ಮ ಕಷ್ಟಗಳನ್ನು ಕೇಳಿ, ಪರಿಹಾರ ಹೇಳುತ್ತಾರೆ.
ಸಾಮಾನ್ಯವಾಗಿ ಅವರು ಹೇಳುವ ಪರಿಹಾರಗಳು ಪೂಜೆ, ಹೋಮ – ಹವನ, ದಾನ – ಧರ್ಮ, ಶಾಂತಿ ಹೀಗೆ ಹತ್ತು ಹಲವು. ಪ್ರತಿ ಜ್ಯೋತಿಷ್ಯಕಾರರು ವ್ಯಕ್ತಿ ಹುಟ್ಟಿದ ದಿನಾಂಕ, ಸಮಯ ಮತ್ತು ಸ್ಥಳದ ಆಧಾರದ ಮೇಲೆ ಪಂಚಾಂಗ, ಗ್ರಹಗಳ ಸ್ಥಾನ (ರಾಶಿ, ಲಗ್ನ, ದಶ, ಭುಕ್ತಿ ಮತ್ತು ಅಂತರ್‌ಭುಕ್ತಿಯಲ್ಲಿ ನೋಡುವುದು), ವೀಕ್ಷಣೆ, ಯೋಗಗಳು, ವಕ್ರೀ, ಕೇಂದ್ರ ತ್ರಿಕೋನ ನೋಡಿ ವ್ಯಕ್ತಿಯ ಭವಿಷ್ಯವನ್ನು ನಿರ್ಧರಿಸುತ್ತಾರೆ (ಪಂಚಾಂಗ ಪುಸ್ತಕದಲ್ಲಿ ತಿಥಿ, ವಾರಾದಿಗಳ ಜತೆಗೆ ಸಂವತ್ಸರ, ಆಯನ, ಮಾಸಾದಿಗಳು, ಮಾಸದಲ್ಲಿ ಗತಿಸಿದ ದಿನಗಳು, ಗ್ರಹಣ, ಮೌಢ್ಯಾದಿಗಳು, ಇವುಗಳಲ್ಲದೆ ಜಾತಕ ಮುಹೂರ್ತಗಳಿಗೆ ಉಪಯುಕ್ತಗಳಾದ ಗ್ರಹಗಳ ಸ್ಥಿತಿಗಳು, ವಿಷ, ಅಮೃತ ಘಳಿಗೆಗಳು, ಇತರ ಧಾರ್ಮಿಕ ಪರ್ವದಿನಗಳೂ ಬರೆದಿರುತ್ತದೆ. ಇವುಗಳ ಜತೆಗೆ ಈ ಪಂಚ ಅಂಗಗಳನ್ನು ಅವುಗಳ ಆದ್ಯಕ್ಷರವನ್ನು ಬರೆಯುವುದರ ಮೂಲಕ ಸಂಕ್ಷಿಪ್ತವಾಗಿ ವಿವರಿಸಲಾಗುತ್ತದೆ). ಆ ವ್ಯಕ್ತಿಯ ಜಾತಕದಲ್ಲಿ ಕೆಲವು ಗ್ರಹಗಳು ಕೆಟ್ಟ ಫಲವನ್ನು ಅಥವಾ ಕಟ್ಟ ಕರ್ಮವನ್ನು ನೀಡುತ್ತಿದ್ದರೆ, ಆ ಗ್ರಹಗಳ ಕೆಟ್ಟ ಫಲವನ್ನು ನಮ್ಮಿಂದ ದೂರ ಮಾಡಲು (ಶೇ.30) ಅವುಗಳ ಸೂಚಕಾರ್ಥ ಧಾನ್ಯ ಹಾಗೂ ವಸ್ತುಗಳನ್ನು ದಾನ ಮಾಡಲು ಹೇಳುತ್ತಾರೆ.
ಉದಾಹರಣೆಗೆ ಹೇಳುವುದಾದರೆ ಸೂರ್ಯ, ಚಂದ್ರ, ಮಂಗಳ (ಕುಜ), ಬುಧ, ಗುರು, ಶುಕ್ರ, ಶನಿ, ರಾಹು, ಕೇತು ಇವು 9 ಗ್ರಹಗಳು. ಈ ಗ್ರಹಗಳಿಗೆ ದಾನ ಮಾಡುವ ಧಾನ್ಯಗಳು ಅಂದರೆ, ಸೂರ್ಯ- ಗೋಧಿ, ಚಂದ್ರ-ಅಕ್ಕಿ, ಮಂಗಳ (ಕುಜ)- ತೊಗರಿಬೇಳೆ, ಬುಧ- ಹೆಸರುಕಾಳು, ಗುರು-ಕಡಲೆಬೇಳೆ, ಶುಕ್ರ- ಅವರೆಬೇಳೆ, ಶನಿ- ಕಪ್ಪು ಎಳ್ಳು, ರಾಹು- ಉದ್ದಿನ ಬೇಳೆ, ಕೇತು- ಹುರುಳಿ ಕಾಳು ಇನ್ನು ಹಲವು ಬಗೆಯ ವಸ್ತುಗಳ ಉಂಟು. ಆದರೆ ಡಾ. ದಿನೇಶ್ ಗುರೂಜಿ
ಅವರು ಇಲ್ಲೇ ತಮ್ಮ ವಿವೇಚನಾ ಶಕ್ತಿಯನ್ನು ಉಪಯೋಗಿಸಿ, ಸಮಾಜಕ್ಕೆ ಒಳಿತನ್ನು ಮಾಡಲು ಮುಂದಾಗಿದ್ದಾರೆ. ಈ ಧಾನ್ಯಗಳ ಬದಲಾಗಿ ಗ್ರಹಗಳನ್ನು ಸೂಚಿಸುವ ಸಸಿಗಳನ್ನು ನೆಡಿ ಎಂದು ಹೊಸ ಆಯಾಮವನ್ನು ಶುರು ಮಾಡಿದ್ದಾರೆ.
ಉದಾಹರಣೆಗೆ ರವಿ- ಬಿಳಿಎಕ್ಕ (ಶ್ವೇತಾರ್ಕ), ಚಂದ್ರ- ಮುತ್ತುಗ (ಪಾಲಾಶ), ಮಂಗಳ (ಕುಜ)- ಕಗ್ಗಲಿ (ಖದಿರ), ಬುಧ- ಉತ್ತಾರಣಿ (ಆಪಾಮಾರ್ಗ), ಗುರು – ಅರಳಿ (ಅಶ್ವತ್ಥ), ಶುಕ್ರ- ಅತ್ತಿ (ಔದುಂಬರ), ಶನಿ- ಬನ್ನಿ (ಶರ್ಮಿ), ರಾಹು- ಗರಿಕೆ (ದೂರ್ವಂ), ಕೇತು- ದರ್ಭೆ(ದರ್ಭ). ಕೆಲವು ಮರಗಳ ಬಗ್ಗೆ ಅಥವಾ ಅವುಗಳ ಉಪಯೋಗಗಳ ಬಗ್ಗೆ ಸಾಮಾನ್ಯವಾಗಿ ತಿಳಿಯುವುದಾದರೆ, ಅರಳಿ ಮರ(ಫಿಕಸ್ ರಿಲಿಜಿಯೋಸಾ)ಕ್ಕೆ 800-1500 ವರ್ಷಗಳ ಸರಾಸರಿ ಜೀವಿತಾವಧಿ. ಕೆಲವು ಮರಗಳು 3000 ವರ್ಷಗಳಿಗಿಂತ ಹೆಚ್ಚು ಕಾಲ ವಾಸಿಸುತ್ತಿವೆ ಎಂಬ ವರದಿ ಇದೆ. ಪೀಪಲ್ ಮರವು ತನ್ನ ದೀರ್ಘ ಜೀವಿತಾವಧಿಯಲ್ಲಿ ದಣಿವರಿಯಿಲ್ಲದೆ 24 ಗಂಟೆಗಳ ಕಾಲ ಆಮ್ಲಜನಕವನ್ನು (ಹಗಲು- ರಾತ್ರಿ) ಒದಗಿಸುತ್ತದೆ. ಓಜೋನ್ ಪದರವನ್ನು ರಕ್ಷಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಇದು ಕಾರ್ಬನ್ ಮಾನಾಕ್ಸೈಡ್, ಸಲ್ಫರ್ ಡೈ ಆಕ್ಸೈಡ್ ಮುಂತಾದ ಹಾನಿಕಾರಕ ಅನಿಲಗಳನ್ನು ಹೀರಿಕೊಳ್ಳುತ್ತದೆ. ಇದರ ಎಲೆಗಳು ವಾಯುಮಾಲಿನ್ಯಕ್ಕೆ ಹೆಚ್ಚು ಸೂಕ್ಷ ವಾಗಿರುತ್ತದೆ. ಮರದ ಕೆಳಗೆ ಹುಲ್ಲು ಬೆಳೆಯಲು ಬಿಡುವುದಿಲ್ಲ. ಈ ಮರವು ಅತಿಸಾರ, ಅಪಸ್ಮಾರ ಮತ್ತು ಗ್ಯಾಸ್ಟ್ರಿಕ್ ತೊಂದರೆ ಗಳನ್ನು ಒಳಗೊಂಡಂತೆ 50 ಅಸ್ವಸ್ಥತೆಗಳನ್ನು ಗುಣಪಡಿಸುತ್ತದೆ. ಇನ್ನು ಬಿಲ್ವಪತ್ರೆ ಅಥವಾ ಬನ್ನಿ(ಏಗಲ್ ಮಾರ್ಮೆಲೋಸ್) ಮರವು 30-60 ವರ್ಷಗಳು ಇರುತ್ತದೆ.
ಬೇಲ್ ಸಸ್ಯವು ರಾಸಾಯನಿಕ ಮಾಲಿನ್ಯಕಾರಕಗಳಿಗೆ ‘ಸಿಂಕ್’ ಆಗಿ ಕಾರ್ಯನಿರ್ವಹಿಸುತ್ತದೆ. ಏಕೆಂದರೆ ಅದು ವಾತಾವರಣ ದಿಂದ ವಿಷಕಾರಿ ಅನಿಲಗಳನ್ನು ಹೀರಿಕೊಳ್ಳುತ್ತದೆ ಮತ್ತು ಅವುಗಳನ್ನು ಜಡ ಅಥವಾ ತಟಸ್ಥಗೊಳಿಸುತ್ತದೆ. ಇದು ‘ಕ್ಲೈಮೇಟ್ ಪ್ಯೂರಿಫೈಯರ್ಸ್’ ಎಂದು ಕರೆಯಲ್ಪಡುವ ಸಸ್ಯ ಪ್ರಭೇದಗಳ ಗುಂಪಿನ ಸದಸ್ಯರಾಗಿದ್ದು, ಇತರ ಮರಗಳಿಗೆ ಹೋಲಿಸಿದರೆ ಸೂರ್ಯನ ಬೆಳಕಿನಲ್ಲಿ ಹೆಚ್ಚಿನ ಪ್ರಮಾಣದ ಆಮ್ಲಜನಕವನ್ನು ಹೊರಸೂಸುತ್ತದೆ. ಮರವನ್ನು ‘ಪರಿಮಳ ಯುಕ್ತ’ ಪ್ರಭೇದಗಳ ಅಡಿಯಲ್ಲಿ ಪರಿಗಣಿಸಲಾಗುತ್ತದೆ. ಇದರ ಹೂವುಗಳು ಮತ್ತು ಬಾಷ್ಪಶೀಲ ಆವಿ ಕೆಟ್ಟ ವಾಸನೆಯನ್ನು ತಟಸ್ಥಗೊಳಿಸುತ್ತವೆ. ಇದು ಶಿವನಿಗೆ ಅರ್ಪಿತವಾದ ಪವಿತ್ರ ಮರ.
ಬೇಲ್ ಎಲೆಗಳನ್ನು ಅರ್ಪಿಸುವುದು ಬೆಟ್ಟಗಳಲ್ಲಿ ಶಿವನ ಆರಾಧನೆಯ ಕಡ್ಡಾಯ ಆಚರಣೆಯಾಗಿದೆ. ಈ ಮರದ ಟ್ರೈಪೋಲಿಯೇಟ್ ಎಲೆ ತ್ರಿಕಲ್ (ಬ್ರಹ್ಮ, ವಿಷ್ಣು ಮತ್ತು ಮಹೇಶ್)ರ ಸಂಕೇತವಾಗಿದೆ. ಇದು ಹಲವಾರು ಫೈಟೊಕಾನ್ಸ್ಟಿಟ್ಯೂಟ್‌ಗಳನ್ನು ಒಳಗೊಂಡಿದೆ, ಇದು ವಿವಿಧ ಚಿಕಿತ್ಸಕ ಉದ್ದೇಶಗಳಿಗಾಗಿ ಬಳಸುತ್ತಾರೆ. ಉತ್ತರಾಣಿ ಬಗ್ಗೆ ಹೇಳುವುದಾದರೆ, ‘ಉತ್ತರಾಣಿ ಸರ್ವರೋಗ ನಿವಾರಿಣಿ’ ಅಂತಲೇ ಕರೆಯುತ್ತಾರೆ. ಇದು ಬೃಹತ್ ಗಾತ್ರದ ಮರವಲ್ಲ ದಿದ್ದರೂ ನಮ್ಮ ಪುರಾಣ ಗಳಲ್ಲಿ ಆಯರ್ವೇದ ಸಸ್ಯವೆಂದು ಕರೆಯುತ್ತಾರೆ. ಇದರ ಹಸಿ ಕಡ್ಡಿಯನ್ನು ಜಗಿದು ಕುಂಚದಂತೆ ಮಾಡಿ ಹಲ್ಲುಜ್ಜಿದರೆ ಮುಖ ಶುದ್ಧಿಯಾಗಿ ದಂತರೋಗಗಳು
ನಾಶವಾಗುತ್ತವೆ.
ಮೂಲವ್ಯಾಧಿಯಲ್ಲಿ ರಕ್ತಸ್ರಾವ ಇದ್ದರೆ ಉತ್ತರಾಣಿ ಎಲೆಗಳನ್ನು ಜಜ್ಜಿ ಎಳ್ಳೆಣೆಯಲ್ಲಿ ಕಲಸಿ ಹಚ್ಚಿದರೆ ೭ ದಿನಗಳಲ್ಲಿ ರಕ್ತಸ್ರಾವ ಮತ್ತು ಮೂಲವ್ಯಾಧಿ ಕಡಿಮೆ ಯಾಗುತ್ತದೆ. ಉತ್ತರಾಣಿ ಎಲೆಯ ರಸದಿಂದ ಗಾಯವನ್ನು ತೊಳೆದರೆ ಗಾಯ ಬೇಗ ಮಾಯುತ್ತದೆ. ಮುತ್ತುಗ, ಇದು ಸಹ ಉತ್ತಮ ಆಮ್ಲಜನಕ ನೀಡುವಲ್ಲಿ
ಉಪಯುಕ್ತ. ಇದನ್ನು ಔಷಧ ಮತ್ತು ಬಣ್ಣಕ್ಕಾಗಿ ಬಳಸ ಲಾಗುತ್ತದೆ. ನೋವು ನಿವಾರಕ ಗುಣಲಕ್ಷಣಗಳನ್ನು ಹೊಂದಿದೆ. ಈ ಸಸ್ಯ ಮತ್ತು ಇದರ ಹೂವುಗಳು ಗಾಳಿಯಲ್ಲಿನ ಮಾಲಿನ್ಯವನ್ನು ನಿಯಂತ್ರಿಸಲು ಸಹಕಾರಿಯಾಗುತ್ತವೆ. ಆಯುರ್ವೇದದ ಪ್ರಕಾರ ಮರವು ವಾತಾ ಮತ್ತು ಪಿತ್ತವನ್ನು ಸಮತೋಲನಗೊಳಿಸುತ್ತದೆ. ಇದು ಆಯುರ್ವೇದ ಯುನಾನಿ ಮತ್ತು ಹೋಮಿಯೋಪತಿ ಔಷಧಗಳಲ್ಲಿ ವ್ಯಾಪಕವಾಗಿ ಬಳಸಲ್ಪಟ್ಟಿದೆ.
ಎಲೆಗಳು ಸಂಕೋಚಕ, ರಕ್ತಸಂಬಂಽ, ಉರಿಯೂತವನ್ನು ಗುಣಪಡಿಸಲು ಸಹಾಯಕವಾಗುತ್ತವೆ. ಎಲೆಗಳ ಕಷಾಯವು ಲ್ಯುಕೊರಿಯಾ ಮತ್ತು ಮಧುಮೇಹವನ್ನು ಗುಣಪಡಿಸಲು ಸಹಾಯಕ. ಋತುಚಕ್ರದ ಹರಿವನ್ನು ಉತ್ತೇಜಿಸುತ್ತದೆ. ಪುರುಷರ ಮೂತ್ರಜನಕಾಂಗದ ಪ್ರದೇಶದಲ್ಲಿನ ಕೀವು ರಚನೆ ಯನ್ನು ತಡೆಯುತ್ತದೆ. ಅವು ಚರ್ಮ ರೋಗಗಳು, ಕಿಬ್ಬೊಟ್ಟೆಯ ತೊಂದರೆಗಳು ಮತ್ತು ಗೆಡ್ಡೆಗಳನ್ನು ಗುಣ ಪಡಿಸುತ್ತವೆ. ನೋಯುತ್ತಿರುವ ಗಂಟಲು, ಹುಣ್ಣುಗಳು, ಗೆಡ್ಡೆಗಳು ಮತ್ತು ಹಾವಿನ – ಕಚ್ಚುವ ವಿಷವನ್ನು ತಟಸ್ಥ ಗೊಳಿಸುತ್ತದೆ. ರಾತ್ರಿ ಕುರುಡುತನ ಮತ್ತು ಇತರ ಕಣ್ಣಿನ ದೋಷ ಗಳನ್ನು ಗುಣಪಡಿಸಲು ಸಹಾಯಕ ಮತ್ತು ವಿಪರೀತ ಬೆವರು ಮತ್ತು ಕಾರ್ನಿಯಲ್ ಒಪಾಸಿಟಿಯಾಗಳನ್ನು ಶಮನ ಗೊಳಿಸುತ್ತದೆ.
ಮೂತ್ರಪಿಂಡದ ಕಲ್ಲುಗಳನ್ನು ಕರಗಿಸಲು ಬಳಸಲಾಗುತ್ತದೆ. ಬಿಳಿಎಕ್ಕ, ಕಗ್ಗಲಿ, ಔದುಂಬರ, ಗರಿಕೆ, ದರ್ಭೆ ಇವುಗಳಲ್ಲೋ ಅನೇಕ ಔಷಧಿಯ ಗುಣಗಳನ್ನು ನೋಡಬಹುದು. ನಮ್ಮ ಖುಷಿಮುನಿಗಳು, ಹಿರಿಯರು ಇದೇ ಕಾರಣಕ್ಕೆ ಮರಗಳನ್ನು ಪೂಜಿಸುತ್ತಿದ್ದರು. ದೈವ ಸ್ವರೂಪದಂತೆ ಕಾಣುತ್ತಿದ್ದರು. ಅಂದು ಇಂಥ ಭಯಂಕರ ಕಾಯಿಲೆಗಳು, ಆಕ್ಸಿಜನ್ ಕೊರತೆ, ಮಳೆ, ನೀರಿನ (ನದಿ, ಜಲಾಶಯ, ಕೆರೆ, ಬಾವಿ) ಬರ ಕಾಡುತ್ತಿರಲಿಲ್ಲ. ಏಕೆಂದರೆ ಅರಣ್ಯಗಳು ಯತೇಚ್ಛವಾಗಿ ದ್ದವು. ಕಾಲ ಕಾಲಕ್ಕೆ ಮಳೆ, ಬೆಳೆ, ಆರೋಗ್ಯ ಉತ್ತಮವಾಗಿತ್ತು. ಆ ದಿನಗಳು ಈಗ ನೆನಪು ಮಾತ್ರ. ಇವು ಇಷ್ಟು ಮರಗಳ ಉಪಯೋಗಗಳ ಬಗ್ಗೆ ಒಂದು
ಸಣ್ಣ ತಿಳಿವಳಿಕೆಗೆ ಅಷ್ಟೆ.
ವಿಷಯಕ ಬರೋಣ, ನಮ್ಮ ಜಾತಕದಲ್ಲಿ ಕೆಟ್ಟ ಫಲಗಳನ್ನು ನೀಡುವ ಗ್ರಹಗಳ ಗಿಡಗಳನ್ನು ನೆಟ್ಟಾಗ, ಆ ಗ್ರಹಗಳ ಆಶೀರ್ವಾದ ನಮಗೆ ಲಭಿಸುತ್ತದೆ ಎಂಬುದು ಈ ಜ್ಯೋತಿಷಿಯ ವಾದ. ಕರೋನಾ ಜಗತ್ತಿಗೆ ಅಪ್ಪಳಿಸಲಿದೆ ಎಂದು ಭವಿಷ್ಯ ನುಡಿದಿದ್ದ ದಿನೇಶ್ ಅವರ ಈ ವಾದವನ್ನು ಒಪ್ಪಲೇ ಬೇಕಲ್ಲವೇ? ಎಲ್ಲರೂ ಒಪ್ಪಲೇ ಬೇಕೆಂದೆನಿಲ್ಲ, ನಂಬಿಕೆ ಅವರವರ ಮನಸ್ಸಿಗೆ ಬಿಟ್ಟದ್ದು. ಒಬ್ಬರಿಗೆ ಸರಿ ಅನಿಸಿದ್ದು, ಇನ್ನೊಬ್ಬರಿಗೆ ತಪ್ಪು ಅನ್ನಿಸಬಹುದು. ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ.
ಇಲ್ಲಿ ನಂಬಿಕೆ ಅನ್ನುವ ಪ್ರಶ್ನೆಗಿಂತ ತನ್ನ ವೃತ್ತಿಯ ಮೂಲಕ ಪರಿಸರಕ್ಕೆ ಸಣ್ಣ ಕೊಡುಗೆ ನೀಡಲು ಹೊರಟಿರುವುದು ನಿಜಕ್ಕೂ ಶ್ಲಾಘನೀಯ. ಮರಗಳನ್ನು ಬೆಳೆಸುವು ದರಿಂದ ಮಾನವ ಕುಲಕ್ಕೆ ಉಪಯೋಗ ಎಂಬುದು ಬ್ರಹ್ಮ ರಹಸ್ಯವೇನು ಅಲ್ಲ.
ಇದು ಇಂದಿನ ಬಹಿರಂಗ ಸತ್ಯ. ವಾಸ್ತವ. ಆದರೆ ಮಾನವನ ಅತಿ ಆಸೆ, ಸ್ವಾರ್ಥ, ದುರ್ಬುದ್ಧಿಯಿಂದ ಮಾನವನೇ ಅಲ್ಲ, ಪ್ರಕೃತಿಯೂ ಬಲಿಯಾಗುತ್ತಿದೆ. ಇದಕ್ಕೆ ಇತ್ತೀಚೆಗಷ್ಟೇ ಕರೋನಾ ತಂದ ಅವಾಂತರವೇ ಒಂದು ದೊಡ್ಡ ನಿದರ್ಶನ. ಆಕ್ಸಿಜನ್ ಕೊರತೆ ಉಂಟಾಗಿ, ಸೃಷ್ಟಿಯಾದ ಸಾವು – ನೋವುಗಳು ನಮ್ಮೇಲ್ಲರ ಕಣ್ಣ
ಮುಂದೆ ಹಾಗೇ ಉಳಿದಿವೆ. ದಿನೇದಿನೆ ಪರಿಸರದಲ್ಲಿನ ಏರುಪೇರಿನಿಂದ ಜನಜೀವನದ ಮೇಲೆ ಭೀಕರ ಪರಿಣಾಮ ಬೀಳತೊಡಗಿದೆ. ಈ ಕಂಟಕ ಇಷ್ಟಕ್ಕೆ ಸೀಮಿತವಾಗಿಲ್ಲ.
ರೂಪಾಂತರಿಗೊಳ್ಳುತ್ತ ಸಾಗಿದರೆ ಮುಂದಿನ ಜೀವನ ಊಹಿಸಲೂ ಅಸಾಧ್ಯ. ಇದಕ್ಕೆಲ್ಲಾ ಕಾರಣ ಏನು ಎಂಬುದು ಬದ್ಧಿವಂತರಾದ ನಮಗೆ ತಿಳಿಯದ ಮರ್ಮವೇ ನಲ್ಲ. ಇದನ್ನೆಲ್ಲ ಅರಿತೇ ದಿನೇಶ್ ಅವರು ಪರಿಸರ ರಕ್ಷಣೆಯ ಸನ್ಮಾರ್ಗ, ಸುಗಮ ಹಾದಿಯನ್ನು ಆಯ್ಕೆಮಾಡಿದ್ದಾರೆ. ಈ ಮಾರ್ಗವನ್ನು ವಿವೇಕ ಇರುವ ಮಾನವ ಕುಲ ಅನುಸರಿಸಿದರೆ, ಕರೋನಾದಂಥ ಎಷ್ಟೇ ಸಂಕಷ್ಟಗಳು ಬಂದರೂ ಧೈರ್ಯವಾಗಿ ಎದುರಿಸಬಹುದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ದಿನೇಶ್ ಅವರ ಕಾರ್ಯ ಎಲ್ಲಾ ಜ್ಯೋತಿಷಿಗಳಿಗೆ ಮಾರ್ಗದರ್ಶನ ವಾಗಲಿ.
‘ಮರಗಳನ್ನು ಬೆಳೆಸಲು ಹೇಳುತ್ತಿರುವ ದಿನೇಶ್ ಅವರ ಕಾರ್ಯ ನಿಜಕ್ಕೂ ಅದ್ಭುತ. ನಮ್ಮ ಖುಷಿಮುನಿಗಳು ಅಂದೇ ಕೆಲವು ಮರಗಳನ್ನು ಪವಿತ್ರ ಮರಗಳು ಎಂದು ಹೇಳಿದ್ದಾರೆ. ಜಗತ್ತಿನ ಎಲ್ಲಾ ರೀತಿಯ ಔಷಽಗಳು ನಮ್ಮ ಪ್ರಕೃತಿಯಲ್ಲೇ ಸಿಗುತ್ತದೆ. ನಾವು ತಿಳಿದುಕೊಳ್ಳಬೇಕು ಅಷ್ಟೇ. ದಿನೇಶ್ ಅವರ ರೀತಿ ಎಲ್ಲಾ ಜ್ಯೋತಿಷಿಗಳು ಮರಗಳನ್ನು ನೆಡಲು ಸಲಹೆ ನೀಡಿದರೆ ಈ ಪರಿಸರಕ್ಕೆ ಕೊಡುಗೆ. ಮನುಷ್ಯ ಪರಿಸರದಲ್ಲಿನ ಎಲ್ಲಾ ಆಸ್ತಿಯನ್ನು ಕದಿಯುತ್ತಿದ್ದಾನೆ. ಇಷ್ಟು ದಿನ
ಭೂಮಿಯಲ್ಲಿನ ನೀರನ್ನು ಕದ್ದ, ಈಗ ಗಾಳಿಯಲ್ಲಿ ಆಮ್ಲಜನಕಕ್ಕೆ ಕೈಹಾಕಿದ್ದಾನೆ.
ಕೊನೆಗೆ ಒಂದು ದಿನ ಆಮ್ಲಜನಕವೂ ಸಿಗದ ಪರಿಸ್ಥಿತಿಯನ್ನು ತಲುಪುವುದರಲ್ಲಿ ಅನುಮಾನವಿಲ್ಲ. ಆ ದಿನವೂ ತುಂಬಾ ದೂರವೇನಿಲ್ಲ. ಈಗಲಾದರೂ ಬುದ್ಧಿವಂತ ರಾದ ನಾವು ಬದುಕುಳಿಯಲು ಮರ ಮತ್ತು ಅರಣ್ಯವನ್ನು ಬೆಳೆಸಲು ಯತ್ನಿಸಿದರೆ ಒಳಿತು. ಇಂಥ ಒಂದು ಸೇವೆಯಲ್ಲಿ ಭಾಗಿಯಾಗಿರುವ ಜ್ಯೋತಿಷಿ ದಿನೇಶ್ ಅವರಿಗೆ ನನ್ನ ಮಹಾನ್ ಧನ್ಯವಾದಗಳು’ ಎಂದು ಪರಿಸರ ತಜ್ಞ ಯಲ್ಲಪ್ಪರೆಡ್ಡಿ.