Thursday, 12th December 2024

ಆರಾಧನೆಯಲ್ಲಿ ಕಾಣುವ ಸ್ಪಷ್ಟತೆ ಆಕರ್ಷಣೆಯಲ್ಲಿ ಮಸುಕಾದೀತು !

ಪರಿಶ್ರಮ

ಪ್ರದೀಪ್ ಈಶ್ವರ‍್

parishramamd@gmail.com

ನೀವು ಇಷ್ಟಪಡುವ ಹುಡುಗಿಯನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಪ್ರಮಾಣಿಕತೆಯಿದ್ದರೆ, ಮೊದಲು ಬದುಕುವ ದಾರಿ ಹೇಗೆಂದು ಹುಡುಕಿ, ಶ್ರದ್ಧೆಯಿಂದ ಒಂದು ಒಳ್ಳೆ ಕೆಲಸ ಹುಡುಕಿಕೊಳ್ಳಿ. ಕಷ್ಟವೋ, ಸುಖವೋ ಒಂದು ಕೆಲಸದಲ್ಲಿ ಕೆಲವು ವರ್ಷ ದುಡಿಯಿರಿ. ‘ಐ ಲವ್ ಯು’ ಎಂದು ಹೇಳಲು ಆ ಕ್ಷಣದ ಎಮೋಷನ್ಸ್ ಸಾಕು. ಬದುಕಿಗೆ ಸಿಕ್ಕಾಪಟ್ಟೆ ಕಾನ್‌ಸಂಟ್ರೇಷನ್ ಬೇಕು!

೧. ಮನಸ್ಸಿಗೆ ಬಂದವಳು ಮನೆಗೆ ಬಾರಳೆ? ಅದಕ್ಕೂ ಮುನ್ನ ಗೆಲುವು ನಿಮ್ಮ ಮನೆಗೆ ಬರಲಿ : ಪ್ರಾಯದ ಸಮಸ್ಯೆ, ಹದಿಹರೆಯದ ವಯಸ್ಸಿನ ಹುಚ್ಚುತನ, ಹಾರ್ಮೋನ್‌ಗಳ ಎಡವಟ್ಟಿನಿಂದ ಹಾದಿ ತಪ್ಪುವ ಯೋಚನೆಗಳು, ವಯಸ್ಸಿಗೆ ಬಂದಾಗ ಗರ್ಲ್ ಪ್ರೆಂಡ್ ಇರಲೇ ಬೇಕು ಎಂದು ಬಯಸುವ ಮೊಂಡುತನ, ನನಗೆ ಯಾರಾದರೂ ಬೀಳ್ತಾರ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಯತ್ನ, ಮನೆಯಲ್ಲಿ ಸಿಗದ ಪ್ರೀತಿಯನ್ನ ಮತ್ತೆ ಹುಡುಕುವ ತಹತಹಿಕೆ, ಕಾಲೇಜಿನ ದಿನಗಳಲ್ಲಿ ಆದ ನೋವಿನ ಕ್ಷಣಗಳನ್ನು ಮರೆಯುವ ತೀರ್ಮಾನ, ಕಿತ್ತು ತಿನ್ನುವ ಬಡತನಕ್ಕೆ ಪ್ರೀತಿಯೊಂದೇ ಉತ್ತರವೆಂದು ತೀರ್ಮಾನಿಸಿ ತೆಗೆದುಕೊಳ್ಳುವ ನಿರ್ಧಾರ, ಅರ್ಥಮಾಡಿಕೊಳ್ಳದ ಗೆಳೆಯರಿಗೆ ನಾನೇನೆಂದು ತೋರಿ ಸ್ತಿನಿ, ನೋಡಿ ಎಂದು ಪ್ರೂವ್ ಮಾಡುವ ಬಯಕೆ, ಉದ್ದಾರ ಆಗೋದು ಕಲಿ ಎಂದು ಸುಮ್ಮ ಸುಮ್ಮನೆ ವಿಮರ್ಶಿಸುವ ಸಂಬಂಧಿಕ ರಿಗೆ ಕೊಡಬೇಕಾದ ಉತ್ತರಕ್ಕೆ ಪ್ರತಿಫಲ ವಾಗಿ ಹುಡುಕಬಾರದ ವಯಸ್ಸಲ್ಲಿ ಹುಡುಗರು ಜೀವದ ಗೆಳತಿಗಾಗಿ ಹುಡುಕಾಡಲಾ ರಂಭಿಸುತ್ತಾರೆ.

ಅಪ್ಪನ ಕಷ್ಟದ ಬಗ್ಗೆ ಎಷ್ಟು ಗೌರವವಿದ್ದರೂ ಅಮ್ಮನ ಪ್ರೀತಿಯ ಬಗ್ಗೆ ಎಷ್ಟು ನಂಬಿಕೆ ಯಿದ್ದರೂ ಬಹಳಷ್ಟು ಹುಡುಗರು ಯಾವುದೋ ಹೃದಯಕ್ಕೆ ಪ್ರೀತಿಯನ್ನ ಅರ್ಪಿಸಿ ಬಿಡುತ್ತಾರೆ. ನೈವೇದ್ಯ ಸಲ್ಲಿಸುವ ಘಳಿಗೆಗೆ ಕಾದುಕುಳಿತಿರುತ್ತಾರೆ.

೨, ಆಕರ್ಷಣೆಗೆ ಕೊಟ್ಟ ಮೊದಲ ಇನ್ಸ್ಟಾಲ್‌ಮೆಂಟ್ – ಮೊದಲ ಸೋಲು: ಆರಾಧಿಸುವ ಪ್ರೀತಿ ಬೇರೆ, ಆಕರ್ಷಣೆ ಬೇರೆ. ಆರಾಧಿಸುವ ಪ್ರೀತಿಯಲ್ಲಿ ಸ್ಪಷ್ಟತೆಯಿರುತ್ತದೆ. ಇಷ್ಟಪಟ್ಟವಳು ಸಂತೋಷದಿಂದ ಇರಬೇಕೆಂಬ ಬಯಕೆಯಿರುತ್ತೆ. ಆಸೆ ಪಟ್ಟವನು ಏನಾದರೂ ಸಾಽಸ ಬೇಕೆಂಬ ಆಕಾಂಕ್ಷೆ ಇರುತ್ತದೆ. ಆದರೆ ಆಕರ್ಷಣೆ ಹಾಗಲ್ಲ, ಇಷ್ಟಪಟ್ಟವಳು ಗಂಟೆಗಟ್ಟಲೆ ಫೋನ್‌ನಲ್ಲಿ ಮಾತನಾಡಬೇಕು. ಕರೆದಾಗ ಪಾರ್ಕಿಗೆ, ಸಿನಿಮಾಗೆ ಬರಬೇಕು. ಕರೆದ ತಕ್ಷಣ ವಿಕೆಂಡಲ್ಲಿ ಲಾಂಗ್‌ಡ್ರೈವ್‌ಗೆ ಬರಬೇಕು. ಏನು ಹೇಳಿದರೂ ನೊ ಎನ್ನಬಾರದು ಎಂಬ ಡಿಮ್ಯಾಂಡ್ ಇರುತ್ತದೆ. ಆರಾಧಿಸುವ ಪ್ರೀತಿಯಲ್ಲಿ ಸಹನೆ ಇರುತ್ತೆ. ನನ್ನವಳು ತಾನೇ ಸಿಕ್ಕೇ ಸಿಗ್ತಾಳೆ ಎಂಬ ಭರವಸೆಯೊಂದಿಗೆ ಬದುಕುವ ಧೈರ್ಯವಿರುತ್ತದೆ. ಯಾವತ್ತಿದ್ದರೂ ಅವನು ನನ್ನವನು, ಜೀವನ ಪೂರ್ತಿ ಜತೆಯ ಇದ್ದೀವಿ, ಈಗ ಕೆರಿಯರ್ ಕಾನ್ಸಂಟ್ರೇಟ್ ಮಾಡೋಣ ಎಂಬ ಭರವಸೆ ಇರುತ್ತದೆ. ಆರಾಧಿಸುವ ಪ್ರೀತಿಯಲ್ಲಿ ನೂರು ವರ್ಷ ಯಶಸ್ವಿ ದಾಂಪತ್ಯದ ಮುನ್ನುಡಿ ಇರುತ್ತೆ. ಸಂಸಾರ ಸಾಗವರನ್ನು ಬೇಕಿರುವ ಸಾಮರ್ಥ್ಯವಿರುತ್ತದೆ.

ಸೋಲು ಗೆಲುವನ್ನು ಲೆಕ್ಕಿಸದೇ ಸ್ಥಿರತೆಯಿಂದ ಬದುಕುವ ಛಲವಿರುತ್ತದೆ. ವೀಕೆಂಡಿಗೊಂದು ವಿಮರ್ಶೆ ಬಂದರೂ ದಾಂಪತ್ಯವನ್ನ ಉಳಿಸಿ ಕೊಳ್ಳುವ ನಂಬಿಕೆ ಇರುತ್ತದೆ. ಆದರೆ ಆಕರ್ಷಣೆ ಹಾಗಲ್ಲ ಭವಿಷ್ಯಕ್ಕಿಂತ ಹೆಚ್ಚಾಗಿ ವರ್ತಮಾನದಲ್ಲಿ ನಡೆಯುವ ಸ್ಪರ್ಶಗಳ ಸಹವಾಸ ವಿರುತ್ತೆ. ನೂರು ವರ್ಷದ ನೆಮ್ಮದಿಗಿಂತ ನಡೆದು ಹೋಗಬೇಕಾದ ಕಾರ್ಯದ ಕನವರಿಕೆಯಿರುತ್ತೆ. ಇಷ್ಟಪಟ್ಟವಳ ಸಂತೋಷಕ್ಕಿಂತ
ಅನಿವಾರ್ಯವನ್ನ ಈಡೇರಿಸಿಕೊಳ್ಳುವ ಭಯಕ ಇರುತ್ತೆ. ಪ್ರೀತಿಯನ್ನ ಪ್ರಾಮಾಣಿಕವಾಗಿ ಗೌರವಿಸುವ ಪ್ರತಿಯೊಬ್ಬರಿಗೂ ಒಂದು ಮಾತ್ ಹೇಳ್ತಿನಿ ಕೇಳಿ, ನೀವು ಇಷ್ಟಪಡುವ ಹುಡುಗಿಯನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಪ್ರಮಾಣಿಕತೆಯಿದ್ದರೆ, ಮೊದಲು ಬದುಕುವ ದಾರಿ ಹೇಗೆಂದು ಹುಡುಕಿ, ಶ್ರದ್ಧೆಯಿಂದ ಒಂದು ಒಳ್ಳೆ ಕೆಲಸ ಹುಡುಕಿಕೊಳ್ಳಿ, ಕಷ್ಟವೋ, ಸುಖವೋ ಒಂದು ಕೆಲಸದಲ್ಲಿ ಕೆಲವು ವರ್ಷಗಳು ಶ್ರದ್ಧೆಯಿಂದ ದುಡಿಯಿರಿ, ಮೂಗಿನ ಮೇಲಿರುವ ಕೋಪವನ್ನ ಕಡಿಮೆ ಮಾಡಿಕೊಳ್ಳಿ, ಐ ಲವ್ ಯು ಎಂದು ಹೇಳಲು ಆ ಕ್ಷಣದ ಎಮೋಷನ್ಸ್
ಸಾಕು. ಬಟ್ ಐ ಮ್ಯಾರಿ ಯೂ ಎಂದು ಹೇಳಲು ತುಂಬ ಧೈರ್ಯವಿರಬೇಕು.

ಪ್ರೀತಿಯಲ್ಲಿದ್ದಾಗ ಇಷ್ಟಪಟ್ಟವಳಿಗೆ ಡೈರಿಮಿಲ್ಕ್ ಚಾಕಲೇಟ್ ಕೊಡಿಸೋದು ತುಂಬಾ ಈಸಿ, ಆದರೆ ಮದುವೆ ಆದ ಮೇಲೆ ಬೆಳಗಿನ ಹಾಲಿನ ಪ್ಯಾಕೆಟ್ ನಿಂದ ರಾತ್ರಿಯ ಗುಡ್ ನೈಟ್ ಕಾಯಿಲ್‌ವರೆಗೆ ಸಾವಿರ ಕಮಿಟ್‌ಮೆಂಟ್ ಇರುತ್ತೆ. ಇವೆಲ್ಲ ಯೋಚಿಸದೆ ಬಿಲ್ಡಪ್ ಕೊಟ್ಟು ಬೀದಿಗೆ ಬೀಳಬೇಡಿ. ಏಕೆಂದರೆ ಒಳ್ಳೆಯ ಪ್ರೀತಿಗೆಲ್ಲಬೇಕು ಅಷ್ಟೇ.

೩, ಅವಳದ್ದು ಅದ್ಭುತವಾದ ಸ್ಕಿನ್‌ಟೋನ್- ಆಗಲೇ ಶುರುವಾಗಿದ್ದು ಪ್ರೀತಿಯ ರಿಂಗ್‌ಟೋನು: ಕೆಲವು ಹುಡುಗಿಯರ ಸೌಂದರ್ಯವನ್ನ
ವರ್ಣಿಸುವುದು ತುಂಬಾ ಕಷ್ಟ. ಆಕ್ಸ್ಫರ್ಡ್ ಡಿಕ್ಷನರಿಯೂ ಕಡಿಮೆ ಎನ್ನಿಸುವಷ್ಟು ಕೆಲವು ಹುಡುಗಿಯರು ಚೆಂದವಿರುತ್ತಾರೆ. ಯಾವ ಕ್ರೀಂ ಹಚ್ಚುತ್ತಾರೋ ಗೊತ್ತಿಲ್ಲ, ಅದ್ಹೇಗೆ ಅಷ್ಟು ಸುಂದರವಾಗೇ ಇರಲು ಸಾಧ್ಯವಾಗುತ್ತದೋ ಗೊತ್ತಾಗೋದೇ ಇಲ್ಲ. ತುಂಬಾ ಕಂಪನಿಗಳವರು ಸಿನಿ ಹೀರೋಯಿನ್‌ಗಳನ್ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿ ಅವರ ಕ್ರೀಂಗಳನ್ನ ಪ್ರಮೋಟ್ ಮಾಡ್ತಾರೆ. ಆದರೆ ತುಂಬಾ ಕಂಪನಿಗಳ ಮಾರ್ಕೆಟಿಂಗ್ ಹೆಡ್‌ಗಳಿಗೆ ಗೊತ್ತಿಲ್ಲದಿರುವ ಸಂಗತಿ ಏನೆಂದರೆ ಹೀರೋಯಿನ್‌ಗಳು ಹೊಟ್ಟೆ ಕಿಚ್ಚು ಪಡುವಷ್ಟು ಸೌಂದರ್ಯ ವನ್ನ ಪಡೆದಿರುವ ಬಹಳಷ್ಟು ಹುಡುಗಿಯರು ಅವರ ಗಮನಕ್ಕೇ ಬರುವುದಿಲ್ಲ.

ಚೆಂದವಾದ ಹುಡುಗಿಯರಿಗೆ ಕಾಲೇಜುಗಳಲ್ಲಿ ಹಿಂಬಾಲಕರು ಜಾಸ್ತಿ ಇದ್ದಾರೆ. ಕೆಲವರು ಸ್ನೇಹಿತರಂತೆ ವರ್ತಿಸಿ ಬಲೆ ಬೀಸಲು
ಸಿದ್ಧವಾಗುವ ಮನಃಸ್ಥಿತಿ ಒಂದು ಕಡೆ, ಇಷ್ಟಪಡ್ತಿನಿ ಅಂತ ಡೈರೆಕ್ಟಾಗಿ ಹೇಳಿ ತುಂಬಾ ಮಂದಿಯನ್ನ ಎದುರು ಹಾಕಿಕೊಳ್ಳುವ ತಂಡ ಮತ್ತೊಂದು ಕಡೆ. ಇವರ ಕಿತ್ತಾಟದಲ್ಲಿ ಸುಂದರ ಯುವತಿಯರು ನಲುಗಿಹೋಗುತ್ತಾರೆ. ಚಂದವಾದ ಬೆಡಗಿಯನ್ನ ಯಾರಾದರೂ ಒಬ್ಬರು ತಪ್ಪದೇ ಇಂಪ್ರೆಸ್ ಮಾಡಿರ‍್ತಾರೆ.

ಏಕೆಂದರೆ ಎಲ್ಲ ಹುಡುಗಿಯರಿಗೆ ಪ್ರೀತಿಸಬೇಕೆಂದು ಬಯಕೆ ಇರುತ್ತೆ. ಸರಿಯಾದವನು ಕನೆಕ್ಟ್ ಆಗಲಿ ಎಂದು ಕಾಯ್ತಿರುತ್ತಾರೆ. ಅಂದವಾದ ಬ್ಯೂಟಿಗಳಿಗೆ ಪ್ರೀತಿಯ ಫಾಸ್ಟ್‌ಟ್ರಾಕ್ ಓಪನ್ ಇರುತ್ತೆ. ಸೌಂದರ್ಯ ಕಡಿಮೆ ಇದ್ದಾಗಲೇ ಟೋಲ್‌ನಲ್ಲಿ ಘಂಟಗಟ್ಟಲೆ ಕಾಯಬೇಕು.

೪. ಆಗಾಗ ಹಾಗಿದ್ದ ಲೈನು, ಜೀವಕ್ಕೆ ಕಟ್ಟಬೇಕಾಯ್ತು ದೊಡ್ಡ ಫೋನು : ಲೈನ್ ಹಾಕೋದು ಈವತ್ತಿನ ಜನರೇಷನ್ನಿಗೆ ಟ್ರೆಂಡ್ ಆಗಿ ಬಿಟ್ಟಿದೆ. ಮೊದಲೆಲ್ಲ ಡಿಗ್ರಿ ಮುಗಿದ ಮೇಲೆ ಅಥವಾ ಕೆಲಸಕ್ಕೆ ಸೇರಿದಾಗ ಪ್ರಾರಂಭವಾಗುತ್ತಿದ್ದ ಭಾವನೆಗಳು ಈಗ ಹೈಸ್ಕೂಲ್ ಡೇಸ್‌ಗೇ ಶುರುವಾಗಿವೆ. ಇನ್ನೂ ಸರಿಯಾಗಿ ಸ್ಕೇಲ್ ಇಟ್ಟುಕೊಂಡು ಗೆರೆ ಹಾಕಲೇ ಬರದ ವಯಸ್ಸಿಗೇ ಹುಡುಗಿಯರಿಗೆ ಲೈನ್ ಹಾಕಲು ಶುರು ಮಾಡ್ತಾರೆ. ‘ಮಗ ಅವಳು ನನ್ ಹುಡುಗಿ. ನೋಡುನನ್ನೇ ನೋಡ್ತಾಳೆ, ಈ ಸಲ ಹೇಳೇ ಹೇಳ್ತೀನಿ’ ಅಂತ ಹತ್ತನೇ ತರಗತಿಗೆ ಬರುವ ಮುನ್ನವೇ ಪ್ರೀತಿಯ ವಿಮಾನವನ್ನ ಹತ್ತಿಬಿಡುತ್ತಾರೆ.

ಹಣೆ ಬರಹ ಬರೆದ ಬ್ರಹ್ಮನಿಗೂ ತಲೆಕೆಡಿಸುವಷ್ಟು, ರೊಮ್ಯಾಂಟಿಕ್ ಸಿನಿಮಾ ತೆಗೆಯುವ ನಿರ್ದೇಶಕನಿಗೂ ಸಾಧ್ಯವಾಗದಷ್ಟು
ವೇಗ ವಾಗಿ ಜನರೇಷನ್ ಸಾಗಿಬಿಡುತ್ತದೆ. ನನಗೂ ಒಬ್ಬ ಗರ್ಲ್‌ಪ್ರೆಂಡ್ ಇರಲಿ, ನನ್ನನ್ನೂ ಯಾರಾದರೂ ಇಷ್ಟಪಡ್ತಾರ ಎಂಬ ಪ್ರಶ್ನೆಗಳಿಗೆ ಉತ್ತರವಾಗಿ ಪ್ರೌಢಶಾಲೆಯಲ್ಲಿ ಪ್ರಾಯದ ತೀವ್ರಕ್ಕೆ ಟೇಪ್ ಕಟ್ ಮಾಡಲಾಗಿರುತ್ತೆ. ಇನ್ನು ಭಯದ ನಡುವೆಯೇ ಹೈಸ್ಕೂಲ್ ದಿನಗಳು ಮುಗಿದು ಹೋಗುತ್ತವೆ. ನಂತರ ಪಿಯುಸಿಗೆ ಪದಾರ್ಪಣೆ.ಪಿ.ಯು.ಸಿ ಪ್ರಾರಂಭದಲ್ಲಿ ಶ್ರದ್ಧೆಯಿಂದ ಓದಲು ಮಾತ್ರ ಬಂದಿರೋದು ಎಂದು
ಬಿಲ್ಡಪ್ ಕೊಟ್ಟು ನಂತರ ವರ್ಷವೆಲ್ಲ ಓದುವುದನ್ನ ಬಿಟ್ಟು ಮಿಕ್ಕ ಎಲ್ಲ ವಿಚಾರಕ್ಕೂ ಜೈ ಎನ್ನುತ್ತಾರೆ.

ಕನ್ನಡಿಯ ಮುಂದೆ ಗಂಟೆಗಟ್ಟಲೇ ಕಳೆದು, ಯಾವ ಎಕ್ಸಪರ್ಟು ಅಡ್ರೆಸ್ ಮಾಡದಷ್ಟು ಬಾರಿ ಮುಖವನ್ನ ತೊಳೆದು, ಕಾಲೇಜಿಗೆ ಬರುವ ಯುವಕ – ಯುವತಿಯರು ಮೊದಲ ಕೆಲವೇ ತಿಂಗಳುಗಳಲ್ಲಿ ಪ್ರೀತಿಯ ಮ್ಯಾಚ್‌ಗ್ರೌಂಡ್ ರೆಡಿ ಮಾಡಿಕೊಳ್ಳುತ್ತಾರೆ. ಸ್ವಲ್ಪ ದಿನಗಳು ಕಳೆಯುತ್ತಿದ್ದಂತೆ ಪ್ರೀತಿಯನ್ನ ಹುಡುಗ – ಹುಡುಗಿಗೆ ಹೇಳಿಬಿಡ್ತಾನೆ. ಪ್ರಾರಂಭದಲ್ಲಿ ತುಂಬಾ ಹುಡುಗಿಯರು ‘ವಾಟ್ !

ವಾಟ್ ! ನಾನ್ಸೆನ್ಸ್’ ಎಂದು ಪ್ರಕ್ರಿಯೆ ಕೊಟ್ಟರು, ಬಹಳಷ್ಟು ಹುಡುಗಿಯರು ‘ಯೆಸ್!’ ಎಂದು ಕಮಿಟ್ ಆಗಿಬಿಡುತ್ತಾರೆ. ಪಿಯುಸಿಯಲ್ಲಿ ಇzಗ ಒಬ್ಬ ಹುಡುಗ ‘ಎಷ್ಟು ಪ್ರಯತ್ನಪಟ್ಟರೂ ನಾನು ಅವಳನ್ನೆ ಮದುವೆ ಆಗೋದು, ಅವಳಿಲ್ಲ ಅಂದ್ರ ನಾನ್ ಬೇರೆಯವರನ್ನ ಮದುವೆ ಆಗೋದೇ ಇಲ್ಲ’ ವೆಂದು ರಾಜಾರೋಷವಾಗಿ ಹೇಳುತ್ತಾರೆ. ಪಿಯುಸಿ ಮುಗಿದ ಮೇಲೆ ಪರಿಸ್ಥಿತಿಗಳು ಬೇರೆಯ ರೀತಿ ಇರುತ್ತವೆ. ಇನ್ನು ಹುಡುಗಿಯರೂ ಅಷ್ಟೇ ‘ಅವನು ನನ್ನ ಪ್ರಾಣ, ತುಂಬಾ ಒಳ್ಳೆಯವನು, ನಾನ್ ಅವನನ್ನೇ ಮದುವೆ ಆಗೋದು, ಅವನು ಸಿಗಲಿಲ್ಲವೆಂದರೆ
ಸತ್ತೋಗ್ತಿನಿ’ ಎಂದು ಎಷ್ಟೇ ಹೇಳಿದರೂ ಆಮೇಲೆ ಆದ್ಯತೆಗಳು ಬದಲಾಗುತ್ತವೆ.

ಸಹಜವಾಗಿ ಪ್ರೀತಿಯಲ್ಲಿ, ಹದಿಹರೆಯದ ವಯಸ್ಸಿನಲ್ಲಿ ಆಗುವ ಸಮಸ್ಯೆಯೆಂದರೆ ಏಕಾಗ್ರತೆ ಬೀದಿ ಪಾಲಾಗುತ್ತೆ. ಓದಬೇಕು ಅನ್ನುವ ಆಸಕ್ತಿ ಸತ್ತೇ ಹೋಗಿರುತ್ತೆ. ಅಕೌಂಟ್ಸ್‌ಗಿಂತ ಜಾಸ್ತಿ ಅವನ ನೆನಪೇ ಕಾಡುತ್ತೆ. ಸೈನ್ಸ್‌ಗಿಂತ ಜಾಸ್ತಿ ‘ಸರಿಯಾಗಿ ನೆನಪಿದೆ ನನಗೆ…’ ಹಾಡೇ ನೆನಪಾಗುತ್ತೆ. ಮ್ಯಾಥ್ಸ್ ಓದುವಾಗ ಮೊಗ್ಗಿನ ಮನಸ್ಸು ಸೀನ್ಸ್ ನೆನಪಾಗುತ್ತೆ. ‘ಅದೇನ್ ಹೀಗೆ ಹೇಳ್ತೀರ? ನಾವು ಹಾಗಲ್ಲ’ ಅಂತ ನೀವು ಅಂದ್ರು, ನೀವು ಒಳ್ಳೆಯವರೇ ಆಗಿದ್ದರೂ ನಿಮ್ಮ ವಯಸ್ಸಿನ ಬಗ್ಗೆ ನಂಬಿಕೆ ಕಡಿಮೆ; ಏನಂತೀರಾ?