ವೀಕೆಂಡ್ ವಿತ್ ಮೋಹನ್
ಮೋಹನ್ ವಿಶ್ವ
camohanbn@gmail.com
ಪ್ರಜಾಪ್ರಭುತ್ವದಲ್ಲಿ ಬಹು ದೊಡ್ಡ ಸುಧಾರಣೆಯಾಗಬೇಕಾದರೆ ಜನ ನಾಯಕನಾದವನು ತನ್ನ ಪ್ರಜೆಗಳ ಊಟ, ಬಟ್ಟೆ, ವಸತಿ ಹಾಗೂ ಆರೋಗ್ಯವನ್ನು ಕಾಪಾಡ ಬೇಕು. ‘ಆರೋಗ್ಯವೇ ಭಾಗ್ಯ’ವೆಂಬ ಮಾತಿದೆ, ಸ್ವಾಸ್ತ್ಯಆರೋಗ್ಯವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು.
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಉತ್ತಮ ಆರೋಗ್ಯವಿರ ಬೇಕೆಂದರೆ ವೈದ್ಯಕೀಯ ಮೂಲಭೂತ ಸೌಲಭ್ಯಗಳ ಅಗತ್ಯತತೆ ಹೆಚ್ಚಿರಬೇಕು. ಸರಕಾರವು ಹೆಚ್ಚಿನ ಹಣ ವನ್ನು ವೈದ್ಯಕೀಯ ಕ್ಷೇತ್ರಕ್ಕಾಗಿ ಮೀಸಲಿಡಬೇಕು, ಆದರೆ ದುರದೃಷ್ಟ ವಷಾತ್ 70 ವರ್ಷಗಳ ಕಾಲ ನಮ್ಮನ್ನಾಳಿದ ಕಾಂಗ್ರೆಸ್ ಪಕ್ಷವು ಆರೋಗ್ಯದ ಮೂಲಭೂತ ಸೌಲಭ್ಯಗಳ ಕಡೆ ಹೆಚ್ಚಿನಗಮನ ನೀಡಲಿಲ್ಲ. ‘ಕೋವಿಡ್’ನಂತಹ ಸಂದರ್ಭದಲ್ಲಿ ಸರಿಯಾದಂತಹ ವೈದ್ಯಕೀಯ ಸೌಲಭ್ಯಗಳಿಲ್ಲದೆ ಜನರು ಅನುಭವಿಸಿದಯಾತನೆ ಇನ್ನು ಕಣ್ಣ ಮುಂದಿದೆ.
ಭಾರತೀಯ ಆಸ್ಪತ್ರೆಗಳನ್ನು ನಂಬದ ‘ಅಂಟೋನಿಯೋ ಮೈನೋ’ ತಮ್ಮ ಚಿಕಿತ್ಸೆಗಾಗಿ ಅಮೆರಿಕ ದೇಶಕ್ಕೆ ಹೋಗಿ ಬರುತ್ತಾರೆಂದರೆ, ಯಾವ ಮಟ್ಟದ ಮೂಲ ಭೂತ ಸೌಕರ್ಯಗಳನ್ನು ನಿರ್ಮಿಸಿದ್ದಾರೆಂದು ಯೋಚಿಸಿ ನೋಡಿ. ಆರೋಗ್ಯದ ವಿಚಾರದಲ್ಲಿ ವೈದ್ಯರನ್ನು ಎದುರು ಹಾಕಿಕೊಳ್ಳಲಾಗುವುದಿಲ್ಲ, ಅವರ ಬೇಡಿಕೆ ಗಳನ್ನೆಲ್ಲವನ್ನೂ ಈಡೇರಿಸಲೇಬೇಕು. ವೈದ್ಯಕೀಯ ವ್ಯವಸ್ಥೆಯೇ ಬಹು ದೊಡ್ಡ ದಂಧೆಯಾಗಿ ಬೆಳೆದಿರುವಾಗ ಅವರನ್ನು ಎದುರು ಹಾಕಿಕೊಳ್ಳುವುದು ಸುಲಭದ ಮಾತಲ್ಲ. ಈಡೇರಿಸದಿದ್ದರೆ ಪ್ರತಿಭಟನೆಗೆ ನಿಲ್ಲುತ್ತಾರೆ, ಒಮ್ಮೆ ನಿಂತರೆ ರೋಗಿಗಳು ಪರದಾಡ ಬೇಕಾಗುತ್ತದೆ.
ವೈದ್ಯಕೀಯ ವೆಚ್ಚಗಳ ಮೇಲೂ ಅಷ್ಟು ಸುಲಭವಾಗಿ ಕಡಿವಾಣ ಹಾಕಲಾಗುವುದಿಲ್ಲ, ಕಡಿವಾಣ ಹಾಕಿದರೆ ಮತ್ತೆ ಪ್ರತಿಭಟನೆಗೆ ನಿಲ್ಲುತ್ತಾರೆ. ಇದು ಕೇವಲ ಭಾರತದ ಸಮಸ್ಯೆಯಲ್ಲ ಇಡೀ ಜಗತ್ತಿನ ಸಮಸ್ಯೆ, ಜಗತ್ತಿನ ದೊಡ್ಡಣ್ಣ ಅಮೆರಿಕವೇ ಇದಕ್ಕೆ ಹೊರತಲ್ಲ. ಅಲ್ಲಿಯೂ ಅಷ್ಟೇ ಇಡೀ ದೇಶವನ್ನು ಆಳುತ್ತಿರುವುದು ‘ಮೆಡಿಕಲ್ ಮಾಫಿಯಾ’, ತಾನೊಬ್ಬ ದೊಡ್ಡ ಸಮಾಜ ಸೇವಕನೆಂದು ಹೇಳಿಕೊಳ್ಳುವ ‘ಬಿಲ್‌ಗೇಟ್ಸ್’ ಕರೋನ ಲಸಿಕೆಯ ‘ಪೇಟೆಂಟ್’ ವಿಚಾರದಲ್ಲಿ ತೀವ್ರವಾಗಿ ವಿರೋಧಿಸಿದ್ದ, ಪೇಟೆಂಟ್ ತೆಗೆದು ಹಾಕಿದರೆ ಬಿಲಿಯನ್ ಗಟ್ಟಲೆ ಹಣವು ತನ್ನ ಕಿಸೆಗೆ ಬರುವುದಿಲ್ಲವೆಂಬ ಸ್ವಾರ್ಥ ಆತನಿ ಗಿದೆ.
ಸ್ವತಃ ಅಮೆರಿಕ ಅಧ್ಯಕ್ಷ ‘ಜೋ ಬೈಡೆನ್’ ಪೇಟೆಂಟ್ ತೆಗೆದು ಹಾಕುವ ಮಾತನಾಡಿದರೂ ‘ಬಿಲ್‌ಗೇಟ್ಸ್’ ಒಪ್ಪಲಿಲ್ಲ. ಅಮೆರಿಕ ದೇಶವು ಜಗತ್ತಿನ ದುಬಾರಿ ವೈದ್ಯಕೀಯ ವೆಚ್ಚ ಹೊಂದಿರುವ ದೇಶ, ಮೆಡಿಕಲ್ ಮಾಫಿಯಾವನ್ನು ಎದುರು ಹಾಕಿಕೊಳ್ಳಲಾಗದೆ ‘ವಿಮೆ’ಯ ಮೂಲಕ ಅಲ್ಲಿನ ಪ್ರಜೆಗಳಿಗೆ ಉತ್ತಮ ವೈದ್ಯಕೀಯ ಸೌಲಭ್ಯ ನೀಡುವಲ್ಲಿ ಯಶಸ್ವಿಯಾಗಿದೆ. ‘ವಿಮೆ’ಯೊಂದೇ ಪರಿಹಾರವೆಂಬುದನ್ನು ಅರಿತಿದ್ದ ಅಮೆರಿಕ ದೇಶ ಬಹಳ ಹಿಂದೆಯೇ ತನ್ನ ವೈದ್ಯಕೀಯ ಸೌಲಭ್ಯ ನೀತಿ ಯಲ್ಲಿ ‘ವಿಮೆ’ಯನ್ನುಜಾರಿಗೆ ತಂದಿತ್ತು, ತನ್ನ ದೇಶದ ಪ್ರಜೆಗಳಿಗೂ ವಿಮೆಯನ್ನು ನೀಡುವ ಮೂಲಕ ವೈದ್ಯಕೀಯ ಸುರಕ್ಷೆಯನ್ನು ನೀಡಿತ್ತು.
ಭಾರತದಲ್ಲಿಯೂ ವೈದ್ಯಕೀಯ ವೆಚ್ಚವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಬಡವನ ಕೈಗೆಟುಕದ ವೆಚ್ಚವಾಗಿ ಹೋಗಿದೆ. ವೈದ್ಯ ವೃತ್ತಿಯನ್ನು ಸೇವೆಯಂದು ಪರಿಗಣಿಸದ ಹಲವು ಯುವ ವೈದ್ಯರು ಸರಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ಇಚ್ಛಿಸುತ್ತಿಲ್ಲ, ಇಚ್ಛಿಸಿದರೂ ಆದಷ್ಟು ಬೇಗ ಖಾಸಗಿ ಆಸ್ಪತ್ರೆಗಳೆಡೆಗೆ ತೆರಳು ತ್ತಿದ್ದಾರೆ. ಭಾರತದಲ್ಲಿಯೂ ವೈದ್ಯಕೀಯ ಕ್ಷೇತ್ರದ ಸಮಸ್ಯೆಗಳಿಗೆ ‘ವಿಮೆ’ ಯೊಂದೇ ಪರಿಹಾರವೆಂಬುದನ್ನುಅರಿತ ನರೇಂದ್ರ ಮೋದಿಯವರು ‘ಅಯುಷ್ ಮಾನ್ ಭಾರತ್’ ಮೂಲಕ ಬಹುತೇಕರಿಗೆ ವಿಮೆ ಸೌಲಭ್ಯ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಸರಕಾರಿ ಯೋಜನೆಯನ್ನು ಬೇಡ ಎನ್ನುವವರು ಖಾಸಗಿ ‘ವಿಮಾ’ ಕಂಪನಿಗಳ ಮೊರೆ ಹೋಗುತ್ತಾರೆ. ಖಾಸಗಿ ವಿಮಾ ಕಂಪನಿಗಳ ‘ಪ್ರೀಮಿಯಂ’ ಹೆಚ್ಚೇನೂ ಇಲ್ಲ, 10000 ಪ್ರೀಮಿಯಂ ಕಟ್ಟಿದರೆ 500000 ವಿಮೆ ನೀಡುವ ಹಲವು ಕಂಪನಿಗಳಿವೆ. ಒಂದು ಕಾಲದಲ್ಲಿ 500000 ವಿಮೆಸಿಗ ಬೇಕಾದರೆ 30 ರಿಂದ 40 ಸಾವಿರ ಪ್ರೀಮಿಯಂ ಕಟ್ಟಬೇಕಿತ್ತು, ನರೇಂದ್ರ ಮೋದಿಯವರ ಸರಕಾರ ‘ವಿಮಾ’ ಕ್ಷೇತ್ರದಲ್ಲಿ ‘ವಿದೇಶಿ ನೇರ ಬಂಡವಾಳ’ವನ್ನು ಹೆಚ್ಚು ಮಾಡಿದ್ದರ ಪರಿಣಾಮವಾಗಿ ನೂರಾರು ಕಂಪನಿಗಳು ಭಾರತಕ್ಕೆ ಬಂದು ಅತ್ಯಂತ ಕಡಿಮೆ ‘ಪ್ರೀಮಿಯಂ’ನಲ್ಲಿ ವಿಮೆಯನ್ನು ನೀಡುತ್ತಿವೆ. ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಅತೀ ಹೆಚ್ಚು ವೈದ್ಯಕೀಯ ವೆಚ್ಚಕ್ಕೆ ಸಹಾಯವಾದದ್ದು ‘ವಿಮೆ’. ಒಂದು ಅಂದಾಜಿನ ಪ್ರಕಾರ ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಸುಮಾರು 14000 ಕೋಟಿ ಯಷ್ಟು ಹಣವನ್ನು ‘ವಿಮೆ’ ಕಂಪನಿಗಳು ಕೋವಿಡ್ ರೋಗಿಗಳಿಗೆ ವೈದ್ಯಕೀಯ ವೆಚ್ಚವಾಗಿ ನೀಡಿವೆ.
‘ವಿಮೆ’ ವಿಭಾಗದಲ್ಲಿ ವಿದೇಶಿ ನೇರ ಬಂಡವಾಳ ಹೆಚ್ಚಾಗಿದ್ದಕ್ಕೆ, ಮೋದಿ ದೇಶವನ್ನು ಮಾರಲು ಹೊರಟಿದ್ದಾರೆಂಬ ಸುಳ್ಳು ಆರೋಪ ಮಾಡಿದ ಕಾಂಗ್ರೆಸ್ಸಿಗೆ,
ಕೋವಿಡ್ ಸಮಯದಲ್ಲಿ ‘ವಿಮೆ’ ಇಲ್ಲದಿದ್ದರೆ ಜನರೆಷ್ಟು ಕಷ್ಟಪಡುತ್ತಿದ್ದರೆಂಬ ಅರಿವಿಲ್ಲ. ವಿದೇಶಿ ಬಂಡವಾಳ ಹರಿದು ಬಂದಿದ್ದರ ಪರಿಣಾಮವಾಗಿ ಮಧ್ಯಮ ವರ್ಗದ ಬಹುಪಾಲು ಜನರು ‘ವಿಮೆ’ ಮಾಡಿಸಲು ಸಾಧ್ಯವಾಯಿತು. ಒಂದು ಕಾಲದಲ್ಲಿ ದುಡಿಮೆಯ ಉಳಿತಾಯದಲ್ಲಿ ಚಿನ್ನವನ್ನು ಖರೀದಿಸಿ, ಕಷ್ಟಕಾಲಕ್ಕೆ ಬಳಸಿಕೊಳ್ಳ ಲಾಗುತ್ತಿತ್ತು. ಆದರೆ ಈಗ ಹಾಗಿಲ್ಲ, ಕಡಿಮೆ ಪ್ರೀಮಿಯಂ ಕಟ್ಟಿದರೆ ಸಿಗುವ ‘ವಿಮೆ’ಯ ಪರಿಣಾಮದಿಂದಾಗಿ ಬಹುತೇಕರು ಕಷ್ಟಕಾಲದಲ್ಲಿ ನಿಟ್ಟುಸಿರು ಬಿಡು ವಂತಾಗಿದೆ.
ಕೋವಿಡ್ ಸಂದರ್ಭದಲ್ಲಿ ಉಂಟಾದ ಅನುಭವದಿಂದಾಗಿ ಬೃಹತ್ ಮಟ್ಟದ ‘ಆರೋಗ್ಯ ಮೂಲಭೂತ ಸೌಕರ್ಯ’ ಗಳನ್ನು ನಿರ್ಮಿಸಲು ಸಾಧ್ಯವಾಯಿತು. ‘ಆಯುಷ್‌ಮಾನ್ ಭಾರತ್’ ಮೂಲಕ ಕೆಳ ವರ್ಗದ ಜನರ ಮನೆಗೆ ಆರೋಗ್ಯ ವಿಮೆ ತಲುಪಿದೆ, ಇದರ ಮುಂದುವರೆದ ಭಾಗವಾಗಿ ಕೆಲ ದಿನಗಳ ಹಿಂದೆ ಪ್ರಧಾನಿ ‘ನರೇಂದ್ರ ಮೋದಿ’ಯವರು ‘ಅಯುಷ್‌ಮಾನ್ ಭಾರತ್ ಡಿಜಿಟಲ್ ಮಿಷನ್’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಯುಗದಲ್ಲಿ ಆರೋಗ್ಯ ವ್ಯವಸ್ಥೆಯನ್ನು ಡಿಜಿಟಲ್ ಮಾಡುವುದು ಅತೀಮುಖ್ಯ. ಈ ಮಿಷನ್ ಅಡಿಯಲ್ಲಿ ಪ್ರತಿಯೊಬ್ಬ ಭಾರತೀಯನಿಗೂ ‘ಡಿಜಿಟಲ್ ಆರೋಗ್ಯ ಕಾರ್ಡ್’ ನೀಡಲಾಗುತ್ತದೆ, ಕಾರ್ಡಿನಲ್ಲಿ ಪ್ರತಿಯೊಬ್ಬರಿಗೂ 14 ಅಂಕೆಗಳ ಒಂದು ‘ಡಿಜಿಟಲ್ ಐಡೆಂಟಿಟಿ ಸಂಖ್ಯೆ’ಯನ್ನು ನೀಡಲಾಗುತ್ತದೆ.
ಒಬ್ಬ ವ್ಯಕ್ತಿಯ ಹುಟ್ಟಿನಿಂದ ಸಾಯುವವ ರೆಗಿನ ಆರೋಗ್ಯದ ವಿವರವನ್ನುಈ ‘ಡಿಜಿಟಲ್ ಐಡಿ’ಯಲ್ಲಿ ಸಂಪೂರ್ಣವಾಗಿ ಶೇಖರಿಸಿಡಲಾಗುತ್ತದೆ. ಒಂದು ಆಸ್ಪತ್ರೆ ಯಿಂದ ಮತ್ತೊಂದು ಆಸ್ಪತ್ರೆಗೆ ಹೋಗುವಾಗ ರೋಗಿಯ ‘ಡಿಜಿಟಲ್ ಐಡಿ’ ಇದ್ದರೆ ಸಾಕು, ಆತನ ಸಂಪೂರ್ಣ ವೈದ್ಯಕೀಯ ಇತಿಹಾಸ ದೊರಕುತ್ತದೆ. ರೋಗಿಯು ಪ್ರತಿಯೊಂದು ಬಾರಿಯೂ ತನ್ನ ಹಳೆಯ ‘ವೈದ್ಯಕೀಯ ಕಡತ’ಗಳನ್ನು ಆಸ್ಪತ್ರೆಯಿಂದ ಆಸ್ಪತ್ರೆಗೆ ತೆಗೆದುಕೊಂಡು ಅಲೆಯುವ ಪ್ರಮೇಯವೇ ಬರುವುದಿಲ್ಲ.
ಹಲವು ಬಾರಿ ರೋಗಿಗಳಿಗೆ ಈ ಹಿಂದೆ ತಮಗೆ ನಡೆಸಿದ್ದಂತಹ ಪರೀಕ್ಷೆಗಳ ಬಗ್ಗೆತಿಳಿದಿರುವುದಿಲ್ಲ ಅಥವಾ ಯಾವ ಮಾತ್ರೆಯನ್ನುತೆಗೆದು ಕೊಂಡಿದ್ದರೆಂಬ ಬಗ್ಗೆ ಮರೆತು ಹೋಗಿರುತ್ತದೆ, ಇಂತಹ ಸಂದರ್ಭದಲ್ಲಿ ‘ಡಿಜಿಟಲ್ ಐಡಿ’ ಸಹಾಯವಾಗುತ್ತದೆ, ವೈದರಿಗೂ ಚಿಕಿತ್ಸೆ ಮುಂದುವರೆಸಲು ಸಹಾಯವಾಗುತ್ತದೆ.
ಈಗಿನ ಇಂಟರ್ನೆಟ್ ಯುಗದಲ್ಲಿ ಹಳ್ಳಿಹಳ್ಳಿಗೂ ‘ಸ್ಮಾರ್ಟ್ ಮೊಬೈಲ್’ಗಳು ತಲುಪಿವೆ, ಹಳ್ಳಿಯ ಭಾಗದ ಜನರಿಗೆ ‘ಡಿಜಿಟಲ್ ಐಡಿ’ ನೀಡುವುದು ಕಷ್ಟದ ಕೆಲಸವೇ ನಲ್ಲ. ಹತ್ತಿರದ ಆಸ್ಪತ್ರೆಗೆ ದಾಖಲಾಗುವ ಮುಂಚೆಯೇ ರೋಗಿಯ ‘ಡಿಜಿಟಲ್ ಐಡಿ’ ಮೂಲಕ ವೈದ್ಯರಿಗೆ ಆತನ ಚಿಕಿತ್ಸೆಯ ಬಗ್ಗೆ ಮಾಹಿತಿ ದೊರಕುತ್ತದೆ, ದಾಖಲಾತಿಯ ಸಮಯದಲ್ಲಿ ಹಳೆಯ ಕಡತಗಳನ್ನು ನೋಡುವ ಅವಶ್ಯಕತೆ ಇರುವುದಿಲ್ಲ. ವೈದ್ಯರಿಗೆ ರೋಗಿಗೆ ಆದಷ್ಟು ಬೇಗ ಚಿಕಿತ್ಸೆ ನೀಡುವುದು ಸುಲಭ ವಾಗುತ್ತದೆ. ಪ್ರತಿಯೊಬ್ಬರಿಗೂ ‘ಡಿಜಿಟಲ್ ಐಡಿ’ ನೀಡುವ ಮೂಲಕ ಸರಕಾರವು ರೋಗಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬಹುದು, ಆತನ ಸಂಪೂರ್ಣ
ವೈದ್ಯಕೀಯ ಇತಿಹಾಸ ತಿಳಿಯುವುದರಿಂದ ಸರಕಾರದ ಜನಪರ ಯೋಜನೆಗಳಿಗೆ ನೆರವಾಗುತ್ತದೆ.
ರೋಗಿಯ ಹಳೆಯ ಕಡತಗಳನ್ನು ಸರಕಾರಕ್ಕಾಗಲಿ ಅಥವಾ ಖಾಸಗೀಯವರಿಗೆ ಹಂಚಿಕೊಳ್ಳುವ ಹಕ್ಕು ‘ರೋಗಿಯ’ ಬಳಿಯೇ ಇರುತ್ತದೆ, ಹಾಗಾಗಿ ತನ್ನ ಖಾಸಗೀ ಕಡತಗಳು ಸೋರಿಕೆಯಾಗುವುದರ ಬಗ್ಗೆ ರೋಗಿಯು ಚಿಂತಿಸಬೇಕಿಲ್ಲ. ವ್ಯಕ್ತಿಯ ಸಂಪೂರ್ಣ ಒಪ್ಪಿಗೆ ಪಡೆದ ನಂತರವಷ್ಟೇ ಕಡತಗಳನ್ನು ಹಂಚಿಕೊಳ್ಳ ಲಾಗುತ್ತದೆ. ವ್ಯಕ್ತಿಯ ‘ಡಿಜಿಟಲ್ ಐಡಿ’ ನೋಂದಣಿಯಾಗುವಾಗ ತನ್ನಕುಟುಂಬದವರನ್ನು ‘ನಾಮ ನಿರ್ದೇಶಿತರನ್ನಾಗಿ’ ಮಾಡಬಹುದು, ತುರ್ತು ಸಂದರ್ಭದಲ್ಲಿ ರೋಗಿಯು ಕಡತಗಳನ್ನು ಹಂಚಿಕೊಳ್ಳಲು ಒಪ್ಪಿಗೆ ಕೊಡಲು ಸಮಸ್ಯೆಯಾದಾಗ ನಾಮನಿರ್ದೇಶಿತ ವ್ಯಕ್ತಿಯು ಒಪ್ಪಿಗೆ ನೀಡಬಹುದು. ‘ಡಿಜಿಟಲ್ ಐಡಿ’ ರಚಿಸುವ ಮೂಲಕ ವ್ಯಕ್ತಿಯೊಬ್ಬನಿಗೆ ಅಗತ್ಯವಿರುವ ಚಿಕಿತ್ಸೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಬಹುದಾಗಿದೆ.
ಹತ್ತಿರದ ವೈದ್ಯರ ಮಾಹಿತಿ ಅಥವಾ ಹತ್ತಿರದ ರೋಗನಿರ್ಣಯ ಕೇಂದ್ರ ಅಥವಾ ಹತ್ತಿರದ ಆಸ್ಪತ್ರೆ ಅಥವಾ ಹತ್ತಿರದ ತಜ್ಞ ವೈದ್ಯರ ಮಾಹಿತಿಗಳನ್ನುತ್ವರಿತವಾಗಿ
ನೀಡಬಹುದಾಗಿದೆ. ಬೆಂಗಳೂರಿನ ತಜ್ಞ ವೈದ್ಯರೊಬ್ಬರು ಹಳ್ಳಿಯಲ್ಲಿನ ರೋಗಿಯೊಬ್ಬನಿಗೆ ಚಿಕಿತ್ಸೆ ನೀಡಲು ನೂರಾರು ಕಿಲೋಮೀಟರ್ ಕ್ರಮಿಸುವ ಅಗತ್ಯ ವಿರುವುದಿಲ್ಲ, ಆತನ ‘ಡಿಜಿಟಲ್ ಐಡಿ’ ಮೂಲಕ ಹಳೆಯ ಇತಿಹಾಸವನ್ನುತಿಳಿದುಕೊಂಡು ‘ಟೆಲಿ ಸಮಾಲೋಚನೆ’ ನಡೆಸಿ ‘ಪ್ರಿಸ್ಕ್ರಿಪ್ಷನ್’ ನೀಡಬಹುದು ಅಥವಾ ‘ವಿಡಿಯೋ ಕಾನರೆನ್ಸಿಂಗ್’ ಮೂಲಕ ಸಮಾಲೋಚನೆ ನಡೆಸಬಹುದು.
ವೈದ್ಯರು ನೀಡಿದ ‘ಪ್ರಿಸ್ಕ್ರಿಪ್ಷನ್’ನಲ್ಲಿ ‘ಡಿಜಿಟಲ್ ಸಹಿ’ ಹಾಕುವ ವ್ಯವಸ್ಥೆಯನ್ನು ಕಲ್ಪಿಸಿದರೆ ರೋಗಿಯ ಮನೆಯವರು ‘ಮೆಡಿಕಲ್ ಸ್ಟೋರ್’ಗಳಲ್ಲಿ ಯಾವ
ತೊಂದರೆಯಿಲ್ಲದೆ ಔಷಧಿಯನ್ನು ತರಬಹುದು. ಮುಂದುವರೆದ ತಂತ್ರಜ್ಞಾನವನ್ನು ಬಳಸಿಕೊಂಡು ಹಳ್ಳಿಹಳ್ಳಿಗೂ ವೈದ್ಯಕೀಯ ವ್ಯವಸ್ಥೆಯನ್ನು ತಲುಪಿಸಿ ದಂತಾಗುತ್ತದೆ. ಕಡಿಮೆ ರೋಗಿಗಳಿರುವ ವೈದ್ಯರಿಗೆ ಎಲ್ಲೋ ಇರುವ ರೋಗಿಗೆ ಚಿಕಿತ್ಸೆ ನೀಡುವ ಅವಕಾಶ ಒದಗಿ ಬರುತ್ತದೆ, ಬೆಂಗಳೂರಿನಲ್ಲಿರುವ ರೋಗಿ ಯೊಬ್ಬನು ದೆಹಲಿಯ ‘ಏಮ್ಸ್’ ಆಸ್ಪತ್ರೆ ವೈದ್ಯರ ಬಳಿ ಚಿಕಿತ್ಸೆ ತೆಗೆದುಕೊಳ್ಳಬಹುದು, ಎಲ್ಲೋ ಹಳ್ಳಿಯಲ್ಲಿ ಕುಳಿತ ಬಡ ರೋಗಿಯೊಬ್ಬನು ‘ಡಿಜಿಟಲ್ ಐಡಿ’
ಮೂಲಕ ಮುಂಬೈ ನಗರದ ಪ್ರತಿಷ್ಠಿತ ಆಸ್ಪತ್ರೆಯ ಸದುಪಯೋಗ ಪಡೆಯಬಹುದು.
‘ಡಿಜಿಟಲ್ ಆರೋಗ್ಯ ಕಾರ್ಡ್’ನಲ್ಲಿ ವ್ಯಕ್ತಿಯ ಹಳೆಯ ಪರೀಕ್ಷೆಗಳ ಇತಿಹಾಸವಿರುವ ಕಾರಣ, ಈ ಹಿಂದೆ ಮಾಡಿರುವ ವೈದ್ಯಕೀಯ ಪರೀಕ್ಷೆಗಳು ಪುನರಾವರ್ತನೆ ಯಾಗುವುದನ್ನು ತಡೆಯಬಹುದಾಗಿದೆ. ಪ್ರಸ್ತುತ ವ್ಯವಸ್ಥೆಯಲ್ಲಿ ಹಳೆಯ ವೈದ್ಯಕೀಯ ಪರೀಕ್ಷೆಗಳ ವಿವರಗಳು ಸರಿಯಾಗಿ ಸಿಗುವುದಿಲ್ಲ, ಅನಾರೋಗ್ಯ ಕ್ಕೊಳಗಾದಂತಹ ವ್ಯಕ್ತಿಯು ಹಳೆಯ ವೈದ್ಯಕೀಯ ಪರೀಕ್ಷೆಗಳ ದಾಖಲೆಗಳನ್ನುಕಳೆದಿರುವ ಸಾಧ್ಯತೆಯೇ ಹೆಚ್ಚು. ‘ಡಿಜಿಟಲ್ ಇಂಡಿಯಾ’ ಅಡಿಯಲ್ಲಿ ನಡೆದ ಹಣಕಾಸಿನ ಕ್ರಾಂತಿಯಲ್ಲಿ, ರಸ್ತೆ ಬದಿಯಲ್ಲಿ ‘ಎಳ ನೀರು’ ಮಾರುವವರೂ ಸಹ ‘ಗೂಗಲ್ ಪೇ’ ಹಾಗೂ ‘ಫೋನ್ ಪೇ’ ಮೂಲಕ ಹಣ ಪಡೆಯುವ ಕ್ರಾಂತಿಕಾರಿ
ವ್ಯವಸ್ಥೆ ಕಳೆದ ಮೂರು ವರ್ಷಗಳಲ್ಲಿ ನಡೆದು ಹೋಯಿತು.
ಅದೇ ನಿಟ್ಟಿನಲ್ಲಿ ‘ಡಿಜಿಟಲ್ ಆರೋಗ್ಯ ಕಾರ್ಡ್’ ಕೂಡ ಹೆಜ್ಜೆ ಹಾಕಲಿದ್ದು, ದೇಶದ ಪ್ರತಿಯೊಬ್ಬ ವ್ಯಕ್ತಿಯನ್ನು ‘ಡಿಜಿಟಲ್ ಐಡಿ’ ಮೂಲಕ ತಲುಪಿ ಕ್ರಾಂತಿಕಾರಕ ಆರೋಗ್ಯ ವ್ಯವಸ್ಥೆಯನ್ನು ನಿರ್ಮಿಸುವ ಗುರಿಯಿದೆ. ಪ್ರತಿಯೊಬ್ಬರ ಆರೋಗ್ಯ ಇತಿಹಾಸವು ಸಿಗುವ ಕಾರಣ, ಸರಕಾರವು ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಅರೋಗ್ಯ ಶೈಲಿಗಳನ್ನುಜನರಿಗೆ ಮನವರಿಕೆ ಮಾಡುವಲ್ಲಿ ಸಹಕಾರಿಯಾಗುತ್ತದೆ. ಉತ್ತಮ ಆರೋಗ್ಯ ಕಾಪಾಡಿಕೊಂಡಿರುವ ವ್ಯಕ್ತಿಗಳನ್ನುಗುರುತಿಸಿ ಅವರ ಜೀವನ ಶೈಲಿಯ ಬಗ್ಗೆ ಇತರರಿಗೆ ಮನವರಿಕೆ ಮಾಡುವುದರಲ್ಲಿ ಸಹಕಾರಿಯಾಗುತ್ತದೆ. ಇದರ ಜತೆಗೆ ‘ವಿಮೆ’ ಕಂಪನಿಗಳು ತಮ್ಮಲ್ಲಿ ವಿಮೆ ಕೊಳ್ಳಬಯಸುವ ವ್ಯಕ್ತಿಗಳ ‘ವೈದ್ಯಕೀಯ ಇತಿಹಾಸ’ದ ಕಡತಗಳನ್ನುಬಹಳ ವೇಗವಾಗಿ ಬಳಸಿ ಕೊಳ್ಳಬಹುದು.
ಉತ್ತಮ ಆರೋಗ್ಯ ಇತಿಹಾಸ ವಿರುವ ವ್ಯಕ್ತಿಯ ‘ವೈದ್ಯಕೀಯ ಪರೀಕ್ಷೆ’ಯೇ ಬೇಕಿಲ್ಲದಂತಾಗುತ್ತದೆ, ಅಂತಹ ವ್ಯಕ್ತಿಗಳ ‘ವಿಮೆ’ ‘ಪ್ರೀಮಿಯಂ’ನಲ್ಲಿ ದೊಡ್ಡ ಮಟ್ಟದ
ರಿಯಾಯಿತಿಯನ್ನು ನೀಡಬಹುದಾಗಿದೆ. 2020ರ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಯವರು ಕೆಂಪು ಕೋಟೆಯ ಮೇಲಿನ
ಭಾಷಣದಲ್ಲಿ ‘ಡಿಜಿಟಲ್ ಆರೋಗ್ಯ ಮಿಷನ್ ’ ಬಗ್ಗೆ ಘೋಷಿಸಿದ್ದರು, ಕಳೆದ ಒಂದು ವರ್ಷದಿಂದ ಪ್ರಾಯೋಗಿಕ ವಾಗಿ ಈಗಾಗಲೇ 100000 ‘ಡಿಜಿಟಲ್ ಐಡಿ’ಗಳನ್ನು 6 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನೀಡಲಾಗಿದ್ದು,ದೇಶದಾದ್ಯಂತ ವಿಸ್ತರಿಸುವತ್ತ ಸಾಗುತ್ತಿದ್ದಾರೆ.
‘ಡಿಜಿಟಲ್ ಐಡಿ’ ಮೂಲಕ ರೋಗಿಯ ಇತಿಹಾಸವನ್ನು ವೈದ್ಯರು ಉತ್ತಮವಾಗಿ ಅರ್ಥ ಮಾಡಿಕೊಳ್ಳುವುದರಿಂದ ಆಸ್ಪತ್ರೆಗಳಲ್ಲಿ ಕೆಲವೊಮ್ಮೆ ಉಂಟಾಗುವ ಸಣ್ಣಪುಟ್ಟ ವೈದ್ಯಕೀಯ ಅವಘಡಗಳನ್ನು ತಪ್ಪಿಸಬಹುದು, ವೈದ್ಯರ ದಕ್ಷತೆಯೂ ಹೆಚ್ಚಾಗುತ್ತದೆ. ‘ವೈದ್ಯೋ ನಾರಾಯಣ ಹರಿ’ ಎಂಬಂತೆ ಆಸ್ಪತ್ರೆ ಹಾಗೂ ರೋಗಿಯ ಮಧ್ಯೆ ಉತ್ತಮ ಭಾಂಧವ್ಯ ಬೆಳೆಯುವಲ್ಲಿ ನೂತನ ವ್ಯವಸ್ಥೆ ಉಪಯೋಗವಾಗಲಿದೆ. ‘ಫೋರ್ಟಿಸ್ ಆಸ್ಪತ್ರೆಯ’ ಮುಖ್ಯಸ್ಥರಾದಂತಹ ‘ಡಾ. ಅಶುತೋಷ್ ಸೂರ್ಯವಂಶಿ’ ’ಅಯುಷ್‌ಮಾನ್ ಭಾರತ್ ಡಿಜಿಟಲ್ ಮಿಷನ್’ ಒಂದು ಕ್ರಾಂತಿಕಾರಕ ನಿರ್ಧಾರವಾಗಿದ್ದು, ಇದರ ಉಪಯೋಗಗಳು ಇಂದು ಕಣ್ಣಿಗೆ ಕಾಣುವುದಕ್ಕಿಂತಲೂ ಮುಂದಿನ ದಿನಗಳಲ್ಲಿ ಅದರ ಅನುಭವವು ಹೆಚ್ಚು ತಿಳಿಯಲಿದೆಯೆಂದು ಹೇಳಿದ್ದಾರೆ.
ಒಂದು ರೀತಿಯ ‘ನರ ಮಂಡಲ’ ವ್ಯವಸ್ಥೆಯ ರೀತಿಯಲ್ಲಿ ಈ ಮಿಷನ್ ಕೆಲಸ ಮಾಡಲಿದ್ದು, ಇಡೀ ವೈದ್ಯಕೀಯ ಕ್ಷೇತ್ರದ ಮೂಲೆ ಮೂಲೆಗಳನ್ನುಸಂಪರ್ಕಿಸುವ ಸಾಮರ್ಥ್ಯವಿದೆಯೆಂದು ಹೇಳಿದ್ದಾರೆ. ‘ಪೋರೇಟ ಮೆಡಿಕಲ್’ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ‘ವೈಭವ್ ತಿವಾರಿ’ ಮಾತನಾಡಿ ರೋಗಿಯ ವೈದ್ಯಕೀಯ ಇತಿಹಾಸವನ್ನು ಡಿಜಿಟಲೈಸ್ ಮಾಡುವ ಮೂಲಕ ಆಸ್ಪತ್ರೆಗಳಲ್ಲಿನ ‘ಹೊರ ರೋಗಿಗಳ ಚಿಕಿತ್ಸೆ’ಯಲ್ಲಿ ಬಹುದೊಡ್ಡ ಬದಲಾವಣೆಯಾಗಲಿದ್ದು, ಎಲ್ಲಿಂದಲೋ ಕುಳಿತ ವೈದ್ಯರು ಚಿಕಿತ್ಸೆ ನೀಡುವ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಹೇಳಿದರು. ಜಗತ್ತಿನ ಬಹುತೇಕ ದಿಗ್ಗಜ ವೈದ್ಯರು, ಉದ್ಯಮಿಗಳು, ವಿಜ್ಞಾನಿ ಗಳು ‘ಅಯುಷ್‌ಮಾನ್ ಭಾರತ್ ಡಿಜಿಟಲ್ ಮಿಷನ್’ ಒಂದು ಕ್ರಾಂತಿಕಾರಕ ಯೋಜನೆಯೆಂದು ಹೇಳಿದ್ದಾರೆ.
ತನ್ನ 70 ವರ್ಷದ ಆಡಳಿತದಲ್ಲಿ ಸರಿಯಾದಂತಹ ‘ಆಮ್ಲಜನಕ’ ವ್ಯವಸ್ಥೆಯಿರುವ ಆಸ್ಪತ್ರೆಗಳನ್ನು ಸ್ಥಾಪಿಸಲು ಸಾಧ್ಯವಾಗದ ಕಾಂಗ್ರೆಸ್ ಉತ್ತಮ ಬೆಳವಣಿಗೆಗಳ ಬಗ್ಗೆ ಮಾತನಾಡುತ್ತಿಲ್ಲ. ಕರೋನ ಸಮಯದಲ್ಲಿ ಸಾವಿನಲ್ಲೂ ರಾಜಕೀಯ ಮಾಡಿದಂತಹ ವಿರೋಧ ಪಕ್ಷಗಳು ಉತ್ತಮ ಯೋಜನೆಯೊಂದನ್ನು ಜಾರಿಗೆ ತಂದಾಗ ಕನಿಷ್ಠ ಪಕ್ಷ ಬೆಂಬಲಿಸ ಬೇಕೆಂಬ ಪ್ರೌಢಿಮೆಯನ್ನೂತೋರಿಸಿಲ್ಲ. ‘ಸಾಕ್ಷರತಾ ಪ್ರಮಾಣ’ ಹೆಚ್ಚಿರುವ ರಾಜ್ಯವೆಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುವ ಕೇರಳದಲ್ಲಿ ಇಂದಿಗೂ ಕರೋನ ಸೋಂಕಿನ ಸಂಖ್ಯೆ ಕಡಿಮೆಯಾಗಿಲ್ಲ, ಕೋವಿಡ್ ಅಲೆಯನ್ನುಅಚ್ಚುಕಟ್ಟಾಗಿ ಎದುರಿಸಿದ ಕೇರಳ ರಾಜ್ಯವೆಂದು ಕಮ್ಯುನಿಸ್ಟರು ಹೇಳಿದ್ದೋ ಹೇಳಿದ್ದೋ, ಕೇರಳ ರಾಜ್ಯದಲ್ಲಿನ ವೈದ್ಯಕೀಯ ಸೌಕರ್ಯಗಳ ಬಗ್ಗೆ ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಚಾರ ನೀಡಿದ ಮಾಧ್ಯಮಗಳು ‘ಆಯುಷ್‌ಮಾನ್ ಭಾರತ್ ಡಿಜಿಟಲ್ ಮಿಷನ್’ ಬಗ್ಗೆ ಚಕಾರವೆತ್ತುತ್ತಿಲ್ಲ.
ದೇಶದಲ್ಲಿ ಹೆಚ್ಚಿನ ಕರೋನ ಚುಚ್ಚು ಮದ್ದನ್ನುನೀಡಿರುವ ಕೇರಳ ರಾಜ್ಯದಲ್ಲಿ ಕರೋನ ನಿಯಂತ್ರಣಕ್ಕೆ ಬಾರದಿರುವುದು ಅಲ್ಲಿನ ಸರಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ, ಚೀನಾ ಮಾದರಿಯಲ್ಲಿ ಸುಳ್ಳು ವಿವರಗಳನ್ನು ನೀಡಿ ತನ್ನನ್ನು ತಾನು ವೈದ್ಯಕೀಯ ಸೌಕರ್ಯದಲ್ಲಿ ದೊಡ್ಡಣ್ಣನೆಂದು ಹೇಳಿಕೊಳ್ಳುತ್ತಿದಂತಹ ರಾಜ್ಯದ ಬಣ್ಣ ಈಗ ಬಟಾಬಯಲಾಗಿದೆ, ಮತ್ತೊಮ್ಮೆ ಕಮ್ಯುನಿಸ್ಟರು ಸಾಮಾನ್ಯ ಜನರ ಕಷ್ಟಗಳಿಗೆ ಸ್ಪಂದಿಸುವುದಿಲ್ಲವೆಂಬುದು ಸ್ಪಷ್ಟವಾಗಿದೆ. ಅಮೆಜಾನ್ ಸಂಸ್ಥಾಪಕ ’Jeff Bezos’ ಹಾಗೂ ಟೆಸ್ಲಾ ಕಂಪನಿಯ ’Elon Musk’ ಭಾರತದಲ್ಲಿ ‘ಉಪ ಗ್ರಹ ತಂತ್ರಜ್ಞಾನ’ದ ಇಂಟರ್ನೆಟ್ ಸೇವೆಯನ್ನು ಒದಗಿಸುವ ಉದ್ದೇಶ ದಿಂದ ನೂತನ ಸಂಸ್ಥೆಯನ್ನುಸ್ಥಾಪಿಸಲು ಸರಕಾರಕ್ಕೆ ‘ಪರವಾನಗಿ ಪ್ರಸ್ತಾವನೆ’ ಸಲ್ಲಿಸಿದ್ದಾರೆ.
1000 ಅಡಿಗಳ ಎತ್ತರದಲ್ಲಿ ಸುತ್ತುವ ಸಣ್ಣ ಉಪಗ್ರಹಗಳ ಸಹಾಯದಿಂದ ಇಂಟರ್ನೆಟ್ ಜಗತ್ತಿನಲ್ಲಿ ಕ್ರಾಂತಿಯೊಂದನ್ನು ನಡೆಸಲು ಇವರಿಬ್ಬರು ಚಿಂತನೆ ನಡೆಸಿ ದ್ದಾರೆ. ಪರವಾನಗಿ ಸಿಕ್ಕರೆ ಮರುಭೂಮಿಯ ನಡುವಣ ಹಳ್ಳಿಗಳು, ಕಾಡಿನ ಮದ್ಯೆಯಿರುವ ಕುಗ್ರಾಮಗಳು, ನಕ್ಸಲ್ ಪೀಡಿತ ಹಳ್ಳಿಗಳು, ಹಿಮಾಲಯದಲ್ಲಿನ ಹಳ್ಳಿಗಳೂ ಸಹ ಇಂಟರ್ನೆಟ್ ಸೇವೆ ಲಭ್ಯವಿರಲಿದೆ. ಈ ಮಟ್ಟದ ಸೌಲಭ್ಯ ದೊರಕಿದರೆ ಇಂಟರ್ನೆಟ್ ಬಳಸಿ ಕಷ್ಟ ಸಾಧ್ಯವಾದಂತಹ ಹಳ್ಳಿಗಳಿಗೂ ಆರೋಗ್ಯ ಸೇವೆಯನ್ನುತಲುಪಿಸುವ ವ್ಯವಸ್ಥೆಯನ್ನು ‘ಅಯುಷ್‌ಮಾನ್ ಭಾರತ್ ಡಿಜಿಟಲ್ ಮಿಷನ್’ ಮಾಡಲಿದೆ.
ಶತಮಾನದ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲು ತಂತ್ರಜ್ಞಾನವು ಹೆಚ್ಚು ಪರಿಣಾಮಕಾರಿಯೆಂಬ ಅಂಶವನ್ನುಮನ ಗೊಂಡಿರುವ ಪ್ರಧಾನಿ ಮೋದಿ,
‘ಆಯುಷ್‌ಮಾನ್ ಭಾರತ್ ಡಿಜಿಟಲ್ ಮಿಷನ್’ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ದೊಂದು ಕ್ರಾಂತಿಯನ್ನೇ ಮಾಡುವತ್ತ ಹೆಜ್ಜೆ ಇಟ್ಟಿದ್ದಾರೆ.