Thursday, 12th December 2024

ಆಜಾದಿ ಭಾರತಕ್ಕೆ ಆಜಾದ್‌ ಕೊಡುಗೆಯೇನು ?

ಅಭಿಪ್ರಾಯ

ಮಣ್ಣೆ ಮೋಹನ್

mohan68micropower@gmail.com

ವಿಪರ್ಯಾಸವೇನು ಗೊತ್ತೇ? ಮುಸ್ಲಿಂ ಸಮುದಾಯದ ಪ್ರತಿನಿಧಿಯಾಗಿ ನೆಹರು ಸಂಪುಟದಲ್ಲಿ ಶಿಕ್ಷಣ ಖಾತೆ ಗಿಟ್ಟಿಸಿಕೊಂಡು,ಅವರ ಸರ್ವತೋಮುಖ ಅಭಿವೃದ್ಧಿಗೆ ಏನನ್ನೂ ಮಾಡದ, ಈ ಭವ್ಯ ಭಾರತದ ಇತಿಹಾಸವನ್ನು ತಪ್ಪಾಗಿ ಅರ್ಥೈಸುವ ಪಠ್ಯವನ್ನಿಟ್ಟು ನೈಜ ಇತಿಹಾಸವನ್ನು ಜನರಿಂದ ಮರೆಮಾಚಿದ, ಆಜಾದ್ ಜನ್ಮದಿನವನ್ನು (ನ. ೧೧) ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸುತ್ತಿದ್ದೇವೆ!

ಸ್ವಾತಂತ್ರದ ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ನಮಗೆಲ್ಲರಿಗೂ ನಾವು ಎಷ್ಟೊಂದು ಮೋಸ ಹೋಗಿದ್ದೇವೆಂಬುದರ ಅರಿವಾಗುತ್ತಿದೆ. ಆರಂಭದಲ್ಲಿ ನಮ್ಮನ್ನಾಳಿದವರು ಈ ದೇಶಕ್ಕೆ ಮತ್ತು ದೇಶದ ಜನರಿಗೆ ಮಾಡಿರುವ ಮೋಸಗಳು, ನಂಬಿಕೆದ್ರೋಹಗಳು ಒಂದೊಂದಾಗಿ ಹೊರಬರುತ್ತಿವೆ. ಕೇವಲ ಅಲ್ಪ ಸಂಖ್ಯಾತ ರನ್ನು ಓಲೈಸುವ ಕಡೆಗೆ ಗಮನ ಕೇಂದ್ರೀಕರಿಸಿ, ಈ ದೇಶದ ಮೂಲನಿವಾಸಿಗಳಾದ ಹಿಂದೂಗಳಿಗೆ ಇನ್ನಿಲ್ಲ ದಂತೆ ಮೋಸ ಮಾಡಿರುವ, ನಂಬಿಕೆ ದ್ರೋಹ ಬಗೆದಿರುವ ಒಂದೊಂದೇ ಕಥೆಗಳು ಇದೀಗ ಅನಾವರಣ ವಾಗುತ್ತಿವೆ.

ಅಂದು ಅವರು ತೋರಿದ ದಿವ್ಯ ನಿರ್ಲಕ್ಷ್ಯ ಹಾಗೂ ತೆಗೆದುಕೊಂಡ ತಪ್ಪು ನಿರ್ಧಾರಗಳ ಪ್ರತಿಫಲವಾಗಿ ಇಂದು ಗಡಿಯುದ್ದಕ್ಕೂ ಉದ್ವಿಗ್ನ ಸ್ಥಿತಿ ತಲೆದೋರು ವಂತಾಗಿದೆ. ೧೯೪೭ರಲ್ಲಿ ಭಾರತ- ಪಾಕಿಸ್ತಾನ ವಿಭಜನೆಯಾ ದಾಗ ಪಾಕ್‌ನಲ್ಲಿದ್ದ ಹಿಂದೂಗಳು ಶೇ. ೨೨.೪೫ರಷ್ಟು. ಆದರೂ ಅವರು ತಮ್ಮ ದೇಶವನ್ನು ಮುಸ್ಲಿಂ ರಾಷ್ಟ್ರ ವೆಂದು ಘೋಷಿಸಿಕೊಂಡರು. ಪೂರ್ವ ಪಾಕ್ ವಿಭಜನೆಯಾಗಿ ರಚನೆಯಾದ ಬಾಂಗ್ಲಾ ದೇಶವನ್ನು ಪಾಕಿಸ್ತಾನದ ಆಡಳಿತದಿಂದ ಬೇರ್ಪಡಿಸಿ, ಸ್ವತಂತ್ರ ದೇಶದ ಸ್ಥಾನಮಾನ ಕಲ್ಪಿಸಿಕೊಟ್ಟವರು ನಾವು. ಆ ಸಂದರ್ಭ ಅಲ್ಲಿದ್ದ ಹಿಂದೂಗಳ ಸಂಖ್ಯೆ ಶೇ.೪೦. ಆದರೂ ಅವರೂ ತಮ್ಮ ದೇಶವನ್ನು
ಮುಸ್ಲಿಂ ರಾಷ್ಟ್ರವನ್ನಾಗಿ ಘೋಷಿಸಿಕೊಂಡರು.

ಆದರೆ ಸ್ವತಂತ್ರ ಭಾರತದಲ್ಲಿದ್ದ ಶೇ.೯೦ ಹಿಂದೂಗಳಿಗಾಗಿ ಈ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಏಕೆ ಮಾಡಲಿಲ್ಲ? ಬದಲಿಗೆ ನಮ್ಮ ದೇಶದ ಉಳಿದಿದ್ದ ಕೇವಲ ಶೇ.೭.೮೮ ಮುಸ್ಲಿಮರ ಓಲೈಕೆಗಾಗಿ ಪ್ರಥಮ ಪ್ರಧಾನಿ ನೆಹರು ಈ ದೇಶವನ್ನು ಜಾತ್ಯತೀತ ರಾಷ್ಟ್ರವನ್ನಾಗಿ ಘೋಷಿಸಿದರು. ಇದು ಹಿಂದೂಗಳಿಗೆ ಮಾಡಿದ ಅನ್ಯಾಯವಲ್ಲವೇ? ಹೊಸ ಪಾಕಿಸ್ತಾನಲ್ಲಿ ಹಿಂದೂಗಳ ಮೇಲೆ ದಾಳಿ ಆಗುತ್ತಿದ್ದಂತೆ ಖಂಡಿಸಿ, ಎಚ್ಚರಿಕೆಯ ಸಂದೇಶ ಕಳಿಸಿದ್ದರೆ, ಇಂದು ಅಲ್ಲಿನ ಹಿಂದೂಗಳ ಸಂಖ್ಯೆ ಶೇ.೧.೫ಕ್ಕೆ ಕುಸಿಯುತ್ತಿರಲಿಲ್ಲ. (೧೯೪೭ರಲ್ಲಿ ಶೇ.೭.೮೮ರಷ್ಟಿದ್ದ ಭಾರತದಲ್ಲಿದ್ದ ಮುಸ್ಲಿಮರ ಸಂಖ್ಯೆ ಇಂದು ಶೇ.೧೮.೮೮ರಷ್ಟಾಗಿದೆ) ಇದು ಕೇವಲ ಪರ್ಸೆಂಟೇಜ್ ಲೆಕ್ಕವಲ್ಲ. ಅಲ್ಲಿನ ಹಿಂದೂಗಳು ನಿರಂತರ ಅನುಭವಿಸಿರುವ ಮಾನಸಿಕ, ದೈಹಿಕ ಯಾತನೆಗಳ ನರಕಸದೃಶ ಬದುಕು.

ಇನ್ನು ನಮ್ಮ ಕಾಶ್ಮಿರದಲ್ಲಿ ನೆಹರು ಮಾಡಿದ್ದಾದರೂ ಏನು? ಮೂಲನಿವಾಸಿಗಳಾದ ಪಂಡಿತರನ್ನು ಅಲ್ಲಿನ ಮುಸ್ಲಿಮರು ಅತ್ಯಾಚಾರ-ಅನಾಚಾರಗಳಿಂದ ಹೊರ
ದಬ್ಬತೊಡಗಿದರು. ಇಷ್ಟಾಗುವಾಗಲೂ, ಇಡೀ ದೇಶಕ್ಕೆ ಒಂದು ನೀತಿಯಾದರೆ ಕಾಶ್ಮೀರಕ್ಕೆ ಮಾತ್ರ ಇನ್ನೊಂದು ನೀತಿ ಎಂಬಂತೆ ಇನ್ನಿಲ್ಲದಷ್ಟು ಪ್ರಾಶಸ್ತ್ಯ ನೀಡಿ ಕಾಶ್ಮೀರಿ ಪಂಡಿತರ ಬದುಕನ್ನು ಮತ್ತಷ್ಟು ನರಕಸದೃಶಗೊಳಿಸಿದರು ನೆಹರು. ನೆಹರೂ ಸಹ ತಮ್ಮ ಹೆಸರಿನ ಮುಂದೆ ಪಂಡಿತ್ ಎಂಬ ನಾಮಧೇಯವಿದ್ದರೂ ಈ ಅನ್ಯಾಯವನ್ನು ಕಂಡೂ ಕಾಣದಂತಿದ್ದದ್ದು, ಅವರೊಬ್ಬ ನಕಲಿ ಪಂಡಿತರೆಂಬುದನ್ನು ರುಜುವಾತುಪಡಿಸಿತು.

ನೆಹರು ಮುಸ್ಲಿಮ್ ಓಲೈಕೆ ಕಥನಗಳು ಒಂದೆರಡಲ್ಲ. ಸ್ವತಂತ್ರ ಭಾರತದ ಮೊದಲ ಶಿಕ್ಷಣ ಮಂತ್ರಿಯನ್ನಾಗಿ ಮೌಲಾನಾ ಅಬುಲ್ ಕಲಾಂ ಆಜಾದ್ (ಅವಽ: ಆಗಸ್ಟ್ ೧೯೪೭ – -ಬ್ರವರಿ ೧೯೫೮)ಅವರನ್ನು ನೇಮಿಸಿಕೊಂಡರು. ಸುಮಾರು ೧೧ ವರ್ಷಗಳ ಕಾಲ ನೆಹರು ಮಂತ್ರಿ ಮಂಡಲದಲ್ಲಿ ಅವರು ಶಿಕ್ಷಣಮಂತ್ರಿ. ಹಾಗಾದರೆ ೧೧ ವರ್ಷಗಳ ದೀರ್ಘ ಕಾಲಾವಧಿಯಲ್ಲಿ ನೆರು -ಆಜಾದ್ ಜೋಡಿ ಅಲ್ಪಸಂಖ್ಯಾತರ ಶಿಕ್ಷಣಕ್ಕೆ ನೀಡಿದ ಕೊಡುಗೆ ಏನು? ಇವತ್ತಿಗೂ ಬಹುಪಾಲು ಮುಸ್ಲೀಮ್ ಸಮುದಾಯದ ಸದಸ್ಯರು ವಿದ್ಯೆಯಿಂದ ವಂಚಿತವಾಗಿರುವುದು ಏತಕ್ಕೆ? ಮದರಸಾಗಳಲ್ಲಿ ಅವರಿಗೆ ಕೇವಲ ಧಾರ್ಮಿಕ ಶಿಕ್ಷಣ ನೀಡಿ, ಆಧುನಿಕ ಶಿಕ್ಷಣದಿಂದ ಅವರನ್ನು ವಂಚಿತಗೊಳಿಸಿ, ನಿಜವಾದ ಅರ್ಥದಲ್ಲಿ ಅವರನ್ನು ವಿದ್ಯಾವಂತರನ್ನಾಗಿಸದೆ, ಇಡೀ ಅಲ್ಪಸಂಖ್ಯಾತ ಸಮುದಾಯ ಬಡತನದ
ಉಳಿಯುವಂತೆ ಮಾಡಿದ್ದು ಈ ಜೋಡಿಯಲ್ಲವೇ? ಅಸಲಿಗೆ ಆಜಾದ್‌ರವರೇ ಶಾಲೆಯಲ್ಲಿ ಔಪಚಾರಿಕ ಶಿಕ್ಷಣವನ್ನು ಪಡೆದಿರಲಿಲ್ಲ, ತಮ್ಮ ತಂದೆಯವರ ಬಳಿಯೇ
ಸಾಂಪ್ರದಾಯಿಕ ಇಸ್ಲಾಮಿಕ್ ಶಿಕ್ಷಣ ಪಡೆದಿದ್ದವರು.

ಪ್ರಾಚೀನ ಭಾರತದಲ್ಲಿದ್ದ ಗುರುಕುಲ ಪದ್ಧತಿಯನ್ನು ಬ್ರಿಟಿಷರು ನಿಷೇಧಿಸಿದ್ದರು. ಕಾರಣ ನಮ್ಮನ್ನು ಗುಲಾಮರನ್ನಾಗಿಸಿ ಆಳಬೇಕೆಂಬ ದುರಾಸೆ ಮತ್ತು ದುರುದ್ದೇಶ ಅವರದಾಗಿತ್ತು. ಸ್ವಾತಂತ್ರ್ಯಾನಂತರ ಅಧಿಕಾರಕ್ಕೆ ಬಂದ ನೆಹರು ಸರಕಾರ ಮತ್ತೆ ಗುರುಕುಲ ಪದ್ಧತಿಯ ಯಾಕೆ ಜಾರಿಗೊಳಿಸಲಿಲ್ಲ? ಕೇವಲ ಮುಸ್ಲಿಮರಿಗೇಕೆ ಮದರಸಾ ಶಿಕ್ಷಣ ಪದ್ಧತಿಯನ್ನು ಒಪ್ಪಿಕೊಂಡರು?  ಇಷ್ಟಕ್ಕೇ ಮುಗಿಯುವುದಿಲ್ಲ. ಇದರ ಹಿಂದೆ ಇನ್ನೊಂದು ಕರಾಳ ಮುಖ ಕೂಡ ಇದೆ. ಇಂತಹ ಶಿಕ್ಷಣ ಪದ್ಧತಿಯನ್ನು ಮತ್ತು ನಕಲಿ ಜಾತ್ಯತೀತವಾದಿಗಳನ್ನು ರೂಪಿಸಿದ್ದೇ ಬ್ರಿಟಿಷರು ಮತ್ತು ಆನಂತರ ನೆಹರು- ಆಜಾದ್ ಜೋಡಿ. ಈ ಜೋಡಿ ಬರೆಸಿದ ಇತಿಹಾಸದಲ್ಲಿ ತಾಜ್ ಮಹಲ್ ಜಗತ್ತಿನ ಅದ್ಭುತವಾಗಿ ದಾಖಲಾಗುತ್ತದೆ. ಆದರೆ ಭಾರತದುದ್ದಗಲಕ್ಕೂ ಸಾವಿರಾರು ವರ್ಷಗಳಿಂದ ತಲೆಎತ್ತಿ ನಿಂತಿರುವ ವಾಸ್ತುಶಿಲ್ಪ-ಶಿಲ್ಪಕಲೆಗಳ ಕಲಾ ವೈಭವದ ಸಾವಿರಾರು ಮಂದಿರಗಳು ಇವರ ಕಣ್ಣಿಗೆ ಏಕೆ ಬೀಳಲಿಲ್ಲ? ಭೂಮಿಯ ಭಾಗವಾಗಿದ್ದ ಬಂಡೆಯೊಂದರಲ್ಲಿ ಅದ್ಭುತ ಶಿಲ್ಪಕಲೆಯನ್ನು ಅರಳಿಸಿರುವ ಅಜಂತಾ ಎರ ದೇಗುಲಕ್ಕಿಂತ ಇನ್ನೊಂದು ಅಚ್ಚರಿ ಈ ಜಗತ್ತಿನಲ್ಲಿ ಇರಲು ಸಾಧ್ಯವೆ? ಕಲ್ಲಿನ ಕಂಬವೊಂದರಲ್ಲಿ ನಾನಾ ಬಗೆಯ ವಾದ್ಯ ನಿನಾದಗಳನ್ನು ನುಡಿಸುವ ನಮ್ಮದೇ ರಾಜ್ಯದ ಹಂಪೆಯ ವಿಜಯ ವಿಠ್ಠಲ ಆಲಯ ಅಚ್ಚರಿಯಲ್ಲವೇ? ಬೇಲೂರು ಹಳೆಬೀಡಿನ ಶಿಲ್ಪಕಲಾ ವೈಭವವನ್ನು ಜಗತ್ತಿನ
ಯಾವುದಾದರೂ ಮೂಲೆಯಲ್ಲಿ ಕಾಣಲು ಸಾಧ್ಯವೇ? ಭಾರತದುದ್ದಕ್ಕೂ ಇಂತಹ ಸಾವಿರಾರು ಅಚ್ಚರಿಗಳನ್ನು ನಾವು ಕಾಣಬಹುದಾಗಿದೆ

ನಾಲ್ಕು ಸಾವಿರಕ್ಕಿಂತಲೂ ಹೆಚ್ಚು ಹೆಣ್ಣು ಮಕ್ಕಳನ್ನು ತನ್ನ ಮೊಘಲ್‌ನ ಹರೆಮ್‌ನಲ್ಲಿ ಇಟ್ಟುಕೊಂಡಿದ್ದ ಅಕ್ಬರ್, ಇವರಿಗೆ ‘ದಿ ಗ್ರೇಟ್’ ಆಗುತ್ತಾನೆ. ಆದರೆ ಹಾದಿ
ಯುದ್ದಕ್ಕೂ ಮರಗಿಡಗಳನ್ನು ನೆಟ್ಟು, ಅರವಟಿಗೆಗಳನ್ನು ಇಟ್ಟು, ಮಾದರಿ ರಾಜ್ಯವಾಳಿದ ಅಶೋಕ ದಿ ಗ್ರೇಟ್ ಆಗುವುದಿಲ್ಲ. ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ
ಯಲ್ಲಿದ್ದ ದೇವಾಲಯವನ್ನು ಒಡೆದು ಅಲ್ಲಿ ಮಸೀದಿ ಕಟ್ಟಿ, ಸಾವಿರಾರು ಹಿಂದೂಗಳ ಕಗ್ಗೊಲೆಗೆ ಕಾರಣನಾದ ಬಾಬರ್ ಇವರಿಗೆ ಜಾತ್ಯತೀತ ರಾಜನಾಗಿ ಕಾಣುತ್ತಾನೆ.

ಮೊಘಲರಿಂದ ಧ್ವಂಸವಾಗಿದ್ದ ಗುಜರಾತಿನ ಸೋಮನಾಥ ದೇವಾಲಯವನ್ನು ಸರ್ದಾರ್ ವಲ್ಲಭಭಾಯಿ ಪಟೇಲ್ ಪುನರ್ ನಿರ್ಮಿಸಲು ಬಯಸಿದರೆ ಅದನ್ನು ವಿರೋಧಿಸಿ, ಜಾಮಾ ಮಸೀದಿ ಪುನರುತ್ಥಾನಗೊಳಿಸುವ ಒತ್ತಾಯ ಇವರ ಅವಽಯಲ್ಲಿ ಕೇಳಿಬರುತ್ತದೆ. ಹಿಂದೂ ಧರ್ಮ ಮತ್ತು ಜನಾಂಗದ ಬದ್ಧ ದ್ವೇಷಿಯಾಗಿ
ಸಾವಿರಾರು ಹಿಂದೂಗಳನ್ನು ಬಲವಂತದಿಂದ ಮತಾಂತರಗೊಳಿಸಿದ, ಒಪ್ಪದವರನ್ನು ಕಗ್ಗೊಲೆ ಮಾಡಿದ, ಸಾವಿರಾರು ಹಿಂದೂ ದೇಗುಲ ನೆಲಸಮಗೊಳಿಸಿದ್ದ ಔರಂಗಜೇಬನೆಂಬ ಕ್ರೂರಿಯ ಕಥನ, ನಮ್ಮ ಇತಿಹಾಸ ಪುಸ್ತಕಗಳಲ್ಲಿ ಮಹಾನ್ ಸಾಧಕ ನಾಯಕನೆಂಬಂತೆ ಒಂದು ಅಧ್ಯಾಯದಷ್ಟು ವಿಸ್ತಾರವಾಗಿ ಕಾಣಸಿಗುತ್ತದೆ. ಆದರೆ ಎಂಟನೇ ವಯಸ್ಸಿನಲ್ಲಿಯೇ ತನ್ನ ಮನೆ ತೊರೆದು ಹೊರಟ ಬಾಲಕನೊಬ್ಬ, ಭರತಖಂಡದಾದ್ಯಂತ ಮೂರು ಬಾರಿ ಕಾಲ್ನಡಿಗೆಯಲ್ಲಿ
ಕ್ರಮಿಸಿ, ಅವನತಿಯ ಅಂಚಿನಲ್ಲಿದ್ದ ಹಿಂದೂಧರ್ಮದ ಮಹತ್ವವನ್ನುಎಡೆ ಸಾರಿ, ಭಾರತದ ನಾಲ್ಕು ದಿಕ್ಕಿನಲ್ಲಿ ಯೂ ಮಠಗಳನ್ನು ಸ್ಥಾಪಿಸಿದ ಶಂಕರರು ಕೊನೆಗೆ ಸರ್ವಜ್ಞ ಪೀಠವನ್ನೇರಿದ್ದು ನಮ್ಮ ಇತಿಹಾಸದ ಪಠ್ಯದಲ್ಲಿ ಏಳೆಂಟು ಸಾಲುಗಳಲ್ಲಿ ಚಿತ್ರಿತವಾಗಿದೆ.

ನಾವು ಓದುತ್ತಿರುವ ಭಾರತೀಯ ಇತಿಹಾಸ, ಜಗತ್ತಿನ ಅತಿ ದೊಡ್ಡ ಸುಳ್ಳು ಎಂಬ ಮಾತಿಗೆ ಇದಕ್ಕಿಂತ ಸಾಕ್ಷಿ ಬೇಕೆ? ಬ್ರಿಟಿಷರು ನಮ್ಮ ದೇಶವನ್ನು ಆಳಲು ಅನುಸರಿಸಿದ ಕುತಂತ್ರ ಬುದ್ಧಿ ಫಲವಾಗಿ ರೂಪುಗೊಂಡ ಥಕಥಕಿತ ಕಟ್ಟುಕತೆಯ ಇತಿಹಾಸವನ್ನೇ ಇವರು ಮುಂದುವರಿಸುತ್ತಾರೆ. ಆರ್ಯರು- ದ್ರಾವಿಡರೆಂದು ವಿಂಗಡಿಸಿ, ಉತ್ತರ ಭಾರತದವರು- ದಕ್ಷಿಣ ಭಾರತದವರೆಂದು ಪ್ರತ್ಯೇಕಿಸಿ, ಕುಲಕಸುಬಿನ ಮೇಲೆ ವಿಂಗಡಿಸಿದ್ದ ಬ್ರಾಹ್ಮಣ್ಯ, ವೈಶ್ಯ, ಶೂದ್ರ, ಕ್ಷತ್ರಿಯ ಗುಂಪುಗಳನ್ನೇ ಜಾತಿಗಳ ಗುರಾಣಿಯ ನ್ನಾಗಿಸಿ, ಒಡೆದಾಳುವ ಬ್ರಿಟಿಷ್ ಪರಂಪರೆಯನ್ನೇ ಈ ಜೋಡಿ ಮುಂದುವರಿಸುತ್ತದೆ.

ನೆಹರು ಹಾಕಿಕೊಟ್ಟ ದಾರಿಯಲ್ಲಿ ಕಾಂಗ್ರೆಸ್ ಇಂದಿಗೂ ನಡೆಯುತ್ತಿದೆ. ನಾವು ಅಽಕಾರಕ್ಕೆ ಬಂದರೆ ಕಾಶ್ಮಿರದಲ್ಲಿ ೩೭೦ನೇ ವಿಧಿಯನ್ನು ಮತ್ತೆ ಜಾರಿಗೊಳಿಸುತ್ತೇವೆಂದು ಒಬ್ಬರು ಹೇಳುತ್ತಾರೆ. ಸೈನಿಕರಿಗೆ ಪರಮಾಧಿಕಾರ ತೆಗೆದು ಹಾಕುತ್ತೇವೆಂದು ಇನ್ನೊಬ್ಬರು ಕಿರುಚುತ್ತಾರೆ. ರಾಮ ಮಂದಿರ ನಿಧಿ ಸಮರ್ಪಣೆಗೆ ಹಣ ನೀಡಬೇಡಿರೆಂದು ಮಾಜಿ ಮುಖ್ಯಮಂತ್ರಿಯೊಬ್ಬರು ಹೇಳುತ್ತಾರೆ. ಆದರೆ ಹಿಂದೂ ದೇವಾಲಯಗಳ ಹುಂಡಿಗಳಿಂದ ಸಂಗ್ರಹವಾದ
ಹಣವನ್ನು ಚರ್ಚು ಮತ್ತು ಮಸೀದಿಗಳಿಗೆ ಧಾರಾಳವಾಗಿ ನೀಡುವ ಕುಹಕ ಬುದ್ಧಿಯನ್ನು ಪ್ರದರ್ಶಿಸುತ್ತಾರೆ. ಟಿಪ್ಪು ಜಯಂತಿ ಆಚರಿಸಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುತ್ತಾರೆ. ಬಹಿರಂಗ ಸಭೆಗಳಲ್ಲಿ ಮುಸ್ಲಿಮರಿಂದ ಆಜಾನ್ ಕೂಗಿತ್ತಾರೆ- ಹೀಗೆ ಒಂದೇ ಎರಡೇ?.

ಹಲವು ಅಪಸವ್ಯ ಮಾಡಿ ಹೋದ ಪ್ರಥಮ ಶಿಕ್ಷಣ ಮಂತ್ರಿ ಆಜಾದ್ ಜನ್ಮದಿನದ ಬದಲಿಗೆ, ನಮ್ಮ ದೇಶದ ಹೆಮ್ಮೆಯ ಸುಪುತ್ರ ಅಬ್ದುಲ್ ಕಲಾಂ ಜನ್ಮದಿನ ರಾಷ್ಟ್ರೀಯ ಶಿಕ್ಷಣ ದಿನವಾಗಲಿ. ಹೊಸ ಶಿಕ್ಷಣ ನೀತಿಯಲ್ಲಿ ಹಳೆ ಪಠ್ಯ ಕ್ರಮ ಕಿತ್ತೊಗೆದು, ನೈಜ ಇತಿಹಾಸ ಪ್ರತಿಬಿಂಬಿತವಾಗಲಿ. ಕಲು ಲಾಲ್ ಶ್ರೀಮಾಲಿ (ಅವಽ: ಫೆಬ್ರವರಿ ೧೯೫೮ ರಿಂದ ಆಗಸ್ಟ ೧೯೬೩)ಯವರನ್ನು ಹೊರತುಪಡಿಸಿ ಹುಮಾಯೂನ್ ಕಬೀರ್ (ಅವಽ: ಸೆಪ್ಟೆಂಬರ್ ೧೯೬೩ ರಿಂದ ನವೆಂಬರ್ ೧೯೬೩),ಮೊಹಮ್ಮದಾಲಿ ಕರೀಮ್ ಚಾಗ್ಲಾ (ಅವಽ: ನವೆಂರ್ಬ ೧೯೬೩ ರಿಂದ ನವೆಂಬರ್ ೧೯೬೬), -ಕ್ರುದ್ದೀನ್ ಅಲಿ ಅಹ್ಮದ್ (ಅವಽ: ನವೆಂಬರ್
೧೯೬೬ ರಿಂದ ಮಾರ್ಚ್ ೧೯೬೭),ಸೈಯಿದ್ ನೂರುಲ್ ಹಸನ್ (ಅವಽ: ಮಾರ್ಚ್ ೧೯೭೨ ರಿಂದ ಮಾರ್ಚ್ ೧೯೭೭)-ಹೀಗೆ ೧೯೪೭- ೧೯೭೭ರ ಅವಽಯ ೩೦ ವರ್ಷಗಳಲ್ಲಿ ೨೦ ವರ್ಷ ಮುಸ್ಲಿಮರೇ ಸ್ವಾತಂತ್ರ್ಯಾನಂತರ ಭಾರತದ ಶಿಕ್ಷಣ ಸಚಿವರಾಗಿದ್ದರೂ ಆ ಜನಾಂಗದ ವಿದ್ಯಾಪ್ರಗತಿಯ ಗ್ರಾಮ ಮೇಲೇಳಲೇ ಇಲ್ಲ ಏಕೆ? ಹಾಗೆಯೇ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರು ಹಿಂದುಳಿದವರಿಗೆ ಮೀಸಲಾತಿಯನ್ನು ರೂಪಿಸಿ, ಅದಕ್ಕೆ ೧೦ ವರ್ಷಗಳ ಕಾಲಮಿತಿಯನ್ನು ವಿಧಿಸಿದ್ದರು.

ಆದರೆ ೬ ದಶಕಗಳಾದರೂ ಕಾಂಗ್ರೆಸ್ ಪಕ್ಷಕ್ಕೆ ಅವರನ್ನು ಬಡತನ ರೇಖೆಗಿಂತ ಮೇಲೆತ್ತಿ, ಮೀಸಲಾತಿ ಇಲ್ಲವಾಗಿಸಲು ಸಾಧ್ಯವಾಗಲಿಲ್ಲ. ಸ್ವಾತಂತ್ರ್ಯೋತ್ತರ ಭಾರತದ ಸರ್ಕಾರದ ಸಾಧನೆಗಳನ್ನು ಒರೆಗಚ್ಚಿ ನೋಡತೊಡಗಿದರೆ, ಇಂತಹ ಹತ್ತಾರು ವಿಪುಲ ವಿಫಲ ಪ್ರಯೋಗಗಳನ್ನು ಕಾಣಬಹುದು. ಹಾಗೆಯೇ ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಉದ್ಧಾರಕ ತಾನೆಂದು ಬಿಂಬಿಸಿಕೊಳ್ಳುತ್ತ, ಇಲ್ಲಿಯವರೆಗೂ ಅವರನ್ನು ಬಡತನದ ಉಳಿಸಿರುವುದು, ೬ ದಶಕಗಳ ಕಾಂಗ್ರೆಸ್ ಸರ್ಕಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿ.