Thursday, 12th December 2024

ಬ್ಯಾಕ್ಟೀರಿಯಾದ ತೀವ್ರ ಸೋಂಕಿಗೆ ಫೇಜ್ ಚಿಕಿತ್ಸೆ

ವೈದ್ಯ ವೈವಿಧ್ಯ

drhsmohan@gmail.com

ಬ್ಯಾಕ್ಟೀರಿಯೋ-ಜ್‌ಗಳು ಉತ್ತಮ ಪರ್ಯಾಯ ಚಿಕಿತ್ಸೆ ಎಂದು ಜಗತ್ತಿನಾದ್ಯಂತ ಹಲವಾರು ವೈದ್ಯರ ಅಭಿಮತ ಎಂದು ಮೇಲಿನ ಚಿಕಿತ್ಸೆ ಮತ್ತು ಅಧ್ಯಯನಕ್ಕೆ ಏನೂ ಸಂಬಂಧವಿಲ್ಲದ ಇಂಗ್ಲೆಂಡಿನ ಲೀಸ್ಟರ್‌ನ ಹೆಸರಾಂತ ಮೈಕ್ರೋಬಯಾಲಜಿಸ್ಟ್ ಪ್ರೊ. ಮಾರ್ತಾ ಕ್ಲೋಕಿ ಅಭಿಪ್ರಾಯಪಡುತ್ತಾರೆ.

ಸೋಂಕು ರೋಗಗಳಿಗೆ ಆಂಟಿಬಯೋಟಿಕ್ ಔಷಧಗಳನ್ನು ಉಪಯೋಗಿಸುವುದು ಹೆಚ್ಚಿನ ಎಲ್ಲರಿಗೂ ತಿಳಿದ ವಿಚಾರ. ಆದರೆ ಉನ್ನತ ಶ್ರೇಣಿಯ ಆಂಟಿಬಯೋಟಿಕ್ ಚಿಕಿತ್ಸೆಗೂ ಬಗ್ಗದೆ ಇರುವ ಎಷ್ಟೋ ಸೋಂಕು ರೋಗಗಳು ಅದರಲ್ಲಿಯೂ ಬ್ಯಾಕ್ಟೀರಿಯಾ ಸೋಂಕುಗಳು ಇತ್ತೀಚಿನ ದಿನಗಳಲ್ಲಿ ಜಾಸ್ತಿಯಾಗುತ್ತಿವೆ. ಚಿಕಿತ್ಸೆ ಮಾಡುವ ವೈದ್ಯರುಗಳಿಗೆ ಈ ತರಹದ ಡ್ರಗ್ ರೆಸಿಸ್ಟಂಟ್ ಬ್ಯಾಕ್ಟೀರಿಯಾಗಳು ತೀವ್ರ
ಸಮಸ್ಯೆ ಆಗುವುದೇ ಅಲ್ಲದೆ, ಅವು ಜಗತ್ತಿನಾದ್ಯಂತ ಹಲವು ಲಕ್ಷ ಜನರ ಮರಣಕ್ಕೆ ಕಾರಣವಾಗುತ್ತಿವೆ ಎಂಬುದು ಆತಂಕಕಾರಿ ಸಂಗತಿ.

ಉದಾಹರಣೆಗೆ 2019ರಲ್ಲಿ ಔಷಧಗಳಿಗೆ ಬಗ್ಗದ ಬ್ಯಾಕ್ಟೀರಿಯಾಗಳ ಸೋಂಕಿನಿಂದ 1.2 ಮಿಲಿಯನ್ ಅಂದರೆ ಸುಮಾರು 12 ಲಕ್ಷ ಜನರು ನೇರವಾಗಿ ಅಸುನೀಗಿದ್ದಾರೆ. ಹಲವು ಔಷಧಗಳ ರೆಸಿಸ್ಟಂಟ್ ಬ್ಯಾಕ್ಟೀರಿಯಾಗಳಿಂದ ಒಟ್ಟೂ 5 ಮಿಲಿಯನ್ ಜನರು ಮರಣ ಹೊಂದಿ ದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಇತ್ತೀಚಿನ ಹೊಸ ಚಿಕಿತ್ಸಾಕ್ರಮ ಆಶಾಕಿರಣ ವಾಗಿ ಗೋಚರಿಸುತ್ತಿದೆ.

ಯಾವ ರೀತಿಯ ಆಂಟಿಬಯೋಟಿಕ್ ಔಷಧಗಳಿಗೂ ಬಗ್ಗದ ತೀವ್ರ ಸೋಂಕು ಹೊಂದಿದ್ದ ರೋಗಿಗಳನ್ನು ಒಂದು ಹೊಸ ರೀತಿಯ ಚಿಕಿತ್ಸೆಯಿಂದ ಗುಣಪಡಿಸಿದ ವಿದ್ಯಮಾನ ಅಮೆರಿಕದಿಂದ ಇತ್ತೀಚೆಗೆ ವರದಿಯಾಗಿದೆ. ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ವೈರಸ್‌ ಗಳನ್ನು ಜೆನೆಟಿಕ್ ಎಂಜಿನಿಯರಿಂಗ್‌ಗೆ ಒಳಪಡಿಸಿ ಇಂತಹ ಅಪರೂಪದ ಚಿಕಿತ್ಸೆ ಕೈಗೊಳ್ಳಲಾಯಿತು. ಇದಕ್ಕೆ ಫೇಜ್ ಚಿಕಿತ್ಸೆ ಅಥವಾ ಫೇಜ್ ಥೆರಪಿ ಎನ್ನುತ್ತಾರೆ. ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ವೈರಸ್‌ಗಳಿಗೆ ‘ಬ್ಯಾಕ್ಟೀರಿಯೋ-ಜಸ್’ ಎನ್ನುತ್ತಾರೆ. ಇದನ್ನೇ ಸಂಕ್ಷಿಪ್ತ ಮಾಡಿ ಫೇಜಸ್ ಎಂದು ಕರೆಯುತ್ತಾರೆ.

ಔಷಧಗಳಿಗೆ ಬಗ್ಗದ ಬ್ಯಾಕ್ಟೀರಿಯಾಗಳ ಸೋಂಕುಗಳಲ್ಲಿ ಈ ಫೇಜ್ ಚಿಕಿತ್ಸೆ ಉಪಯೋಗವಾಗಬಹುದೇ ಎಂಬ ಆಶಾ ಭಾವನೆ ವ್ಯಕ್ತವಾಗಿದೆ. ಅಮೆರಿಕದಿಂದ ವರದಿಯಾದ ರೋಗಿಗಳ ವಿವರಗಳನ್ನು ಗಮನಿಸೋಣ. ೨೬ ವರ್ಷದ ಜರೋಡ್ ಜಾನ್ಸನ್ ದೀರ್ಘಕಾಲದ ತೀವ್ರ ರೀತಿಯ ಜೆನೆಟಿಕ್ ಶ್ವಾಸಕೋಶದ ಸೋಂಕು – ಸಿಸ್ಟಿಕ್ ಫೈಬ್ರೋಸಿಸ್ ನಿಂದ ಬಳಲುತ್ತಿದ್ದ. ನಾನಾ ಆಂಟಿಬಯೋ ಟಿಕ್ ಔಷಧ ಗಳಿಂದ ಆತನಿಗೆ ಸುದೀರ್ಘ ೬ ವರ್ಷಗಳ ಕಾಲ ಚಿಕಿತ್ಸೆ ಕೊಟ್ಟರೂ ಆತನ ಸೋಂಕು, ಔಷಧಗಳಿಗೆ ಬಗ್ಗದೇ ಗಂಭೀರ ಪ್ರಮಾಣದಲ್ಲಿ ಜಾಸ್ತಿಯಾಗುತ್ತ ಬರತೊಡಗಿತು. ಆತನಿಗೆ ಮರಣ ಹೆಚ್ಚು ದಿನಗಳಿಲ್ಲ ಎಂಬ ಪರಿಸ್ಥಿತಿಯಲ್ಲಿ ವೈದ್ಯರು ಈ ಫೇಜ್ ಚಿಕಿತ್ಸೆಯನ್ನು ಪ್ರಯತ್ನಿಸಿದರು. ಈ ಚಿಕಿತ್ಸೆಯ ನಂತರ ಈತನ ಶ್ವಾಸಕೋಶ ಸಂಪೂರ್ಣ ಸೋಂಕು ರಹಿತಗೊಂಡು, ನಂತರ ಈತನಿಗೆ ಶ್ವಾಸ ಕೋಶದ ಕಸಿ ಶಸ್ತ್ರ ಕ್ರಿಯೆ ಮಾಡಲಾಯಿತು.

ಆನಂತರ ಈತ ತನ್ನ ದೈನಂದಿನ ಕೆಲಸಗಳನ್ನು ನಿರ್ವಹಿಸುವಂತಾದ. ಅಮೆರಿಕದ ಡೆನ್ವರ್ ನಿವಾಸಿಯಾದ ಈತ ಇನ್ನೇನು ತನ್ನ ಮರಣ
ಹತ್ತಿರವಾಗಿದೆ ಎನಿಸಿದ ಸಂದರ್ಭದಲ್ಲಿ ಈ ಪವಾಡ ರೀತಿಯ ಚಿಕಿತ್ಸೆಯನ್ನು ಕೈಗೊಂಡು ಜೀವವುಳಿಸಿದ ವೈದ್ಯರನ್ನು ಮನಸಾ ಕೊಂಡಾಡಿ ಅವರಿಗೆ ತಾನು ಬಹಳ ಆಭಾರಿ ಎಂದು ನುಡಿಯುತ್ತಾನೆ. ಇನ್ನೊಬ್ಬ ರೋಗಿ, ೫೬ ವರ್ಷದವ. ತೀವ್ರ ರೀತಿಯ ಸಂಧಿವಾತ ದಿಂದ ಬಳಲುತ್ತಿದ್ದ. ಜತೆ ಯಲ್ಲಿ ಈತನಿಗೆ ಚಿಕಿತ್ಸೆಗೆ ಬಗ್ಗದ ಚರ್ಮದ ಸೋಂಕು. ಅದು ಆತನ ಜೀವವನ್ನೇ ಬಲಿ ತೆಗೆದುಕೊಳ್ಳುವ ಹಂತಕ್ಕೆ ಹೋಯಿತು.

ಎಲ್ಲ ರೀತಿಯ ಲಭ್ಯ ಆಂಟಿಬಯೋಟಿಕ್‌ಗಳ ಚಿಕಿತ್ಸೆ ನಿರರ್ಥಕವೆನಿಸಿತು. ಕೊನೆಗೆ ಫೇಜ್ ಚಿಕಿತ್ಸೆ ಕೈಗೊಂಡಾಗ ಈತನ ಪ್ರಾಣಾಪಾಯ ತಪ್ಪಿ ಗಮನಾರ್ಹ ಚೇತರಿಕೆಯಾಯಿತು. ಇತ್ತೀಚಿನ ಈ ಎರಡು ವರದಿಗಳು ಈ ಚಿಕಿತ್ಸೆಯ ಬಗ್ಗೆ ಕ್ಲಿನಿಕಲ್ ಟ್ರಯಲ್ ಆರಂಭಿಸುವಷ್ಟು ಪ್ರಬಲವಾಗಿವೆ ಎಂದು ಈ ಅಧ್ಯಯನ ಕೈಗೊಂಡ ತಂಡ ಅಭಿಪ್ರಾಯ ಪಡುತ್ತದೆ. ಬಹುಶಃ ಇದರ ಕ್ಲಿನಿಕಲ್ ಟ್ರಯಲ್‌ಗಳು ಮುಂದಿನ ವರ್ಷ ಆರಂಭವಾಗಬಹುದು ಎಂಬ ನಿರೀಕ್ಷೆ ವೈದ್ಯಕೀಯ ವಲಯದಲ್ಲಿದೆ.

ಈ ರೀತಿಯ ಸೋಂಕಿನ ಸಂದರ್ಭಗಳಲ್ಲಿ ಲಭ್ಯ ಶಕ್ತಿಶಾಲಿ ಆಂಟಿಬಯೋಟಿಕ್‌ಗಳು ಚಿಕಿತ್ಸೆ ಮಾಡಲು ವಿಫಲವಾದಾಗ ಈ ಫೇಜ್ ಥೆರಪಿ ಖಂಡಿತಾ ಬಳಸಬಹುದು. ಹಾಗೆಯೇ ಈ ರೀತಿಯ ಉನ್ನತ ಶ್ರೇಣಿಯ ಆಂಟಿಬಯೋಟಿಕ್‌ಗಳಿಂದ ದೇಹಕ್ಕೆ ಆಗಬಹುದಾದ ಕೆಟ್ಟ ಪರಿಣಾಮಗಳನ್ನು ತಡೆಯಬಹುದು ಎಂದು ಈ ಚಿಕಿತ್ಸೆ ಅಭಿವೃದ್ಧಿ ಪಡಿಸಿದ ತಂಡದ ಮುಖ್ಯಸ್ಥ ಅಮೆರಿಕದ ಪಿಟ್ ಬರ್ಗ್ ವಿಶ್ವವಿದ್ಯಾ ಲಯದ ಪ್ರೊ.ಗ್ರಹಾಂ ಹತ್ ಫುಲ್ ಅಭಿಪ್ರಾಯ ಪಡುತ್ತಾರೆ. ದೇಹಕ್ಕೆ ಮಾರಕವಾದ ಇಂತಹ ಸೋಂಕು ರೋಗಗಳಲ್ಲಿ ಬೇರೆ ಚಿಕಿತ್ಸೆ ಲಭ್ಯವಿಲ್ಲದ ಸಂದರ್ಭಗಳಲ್ಲಿ ಈ ರೀತಿಯ ಬ್ಯಾಕ್ಟೀರಿಯೋಫೇಜ್ ಗಳು ಉತ್ತಮ ಪರ್ಯಾಯ ಚಿಕಿತ್ಸೆ ಎಂದು ಜಗತ್ತಿನಾದ್ಯಂತ ಹಲವಾರು ವೈದ್ಯರ ಅಭಿಮತ ಎಂದು ಮೇಲಿನ ಚಿಕಿತ್ಸೆ ಮತ್ತು ಅಧ್ಯಯನಕ್ಕೆ ಏನೂ ಸಂಬಂಧವಿಲ್ಲದ ಇಂಗ್ಲೆಂಡಿನ ಲೀಸ್ಟರ್ ನ ಹೆಸರಾಂತ ಮೈಕ್ರೋಬಯಾಲಜಿಸ್ಟ್ ಪ್ರೊ. ಮಾರ್ತಾ ಕ್ಲೋಕಿ ಅಭಿಪ್ರಾಯ ಪಡುತ್ತಾರೆ.

ಹಾಗೆಯೇ ಆಂಟಿಬಯೋಟಿಕ್‌ಗಳಿಗೆ ಸೂಕ್ತ ಪರ್ಯಾಯ ಔಷಧಗಳ ಅಗತ್ಯತೆ ಬಹಳ ತುರ್ತಾಗಿ ಈಗ ಇದೆ ಎಂಬುದೂ ಅವರ ಅನಿಸಿಕೆ. ಬ್ಯಾಕ್ಟೀರಿಯೋ-ಜ್‌ಗಳು ಅಥವಾ ಫೇಜ್ ಗಳು ಒಂದು ರೀತಿಯ ವೈರಸ್‌ಗಳು. ಇವು ಬ್ಯಾಕ್ಟೀರಿಯಾಗಳ ಸಹಜವಾದ ವೈರಿಗಳು. ಹಾಗೆಂದು ಇವು ಮಾನವನಿಗೆ ಏನೂ ಅಪಾಯಕಾರಿಯಲ್ಲ. ಮೊದಲು ತಿಳಿಸಿದ ಪಿಟ್ಸ್‌ಬರ್ಗ್ ವಿಶ್ವವಿದ್ಯಾಲಯದ ಬಯೋಟೆಕ್ನಾಲಜಿ ವಿಭಾಗದ ಹತ್ -ಲ್ ಅವರು ಫೇಜಸ್ ಬಗ್ಗೆ ವಿಶೇಷ ಆಸಕ್ತಿಯುಳ್ಳವರು.

ಸುದೀರ್ಘಕಾಲ ಅಧ್ಯಯನ ಕೈಗೊಂಡವರು. ಕಳೆದ 40 ವರ್ಷಗಳಿಂದ ಅವುಗಳನ್ನು 20 ಸಾವಿರ ಶೀತಲೀಕರಿಸಿದ ವಯಲ್‌ಗಳಲ್ಲಿ ಶೇಖರಿಸಿ ಇಟ್ಟಿದ್ದಾರೆ ಎಂದರೆ ಅವರ ಅಗಾಧ ಸಂಗ್ರಹವನ್ನು ಗಮನಿಸಿ. ನಾವು ನಮ್ಮ ಲ್ಯಾಬ್‌ನಲ್ಲಿ ಅಗಾಧ ಪ್ರಮಾಣದ ಫೇಜ್‌ಗಳನ್ನು ಶೇಖರಸಿದ್ದೇವೆ. ಅವುಗಳಲ್ಲಿ 4000 ಫೇಜ್‌ಗಳನ್ನು ಸೀಕ್ವೆನ್ಸ್ (ಜೆನೆಟಿಕ್ ಸೀಕ್ವೆನ್ಸ್) ಮಾಡಿದ್ದೇವೆ. ಹಾಗಾಗಿ ಅವುಗಳ ಜೀನೋಮಿಕ್ ಪ್ರೊಫೈಲ್‌ಗಳ ಪರಿಚಯ ಮತ್ತು ಅವುಗಳ ಪರಸ್ಪರ ಸಂಬಂಧಗಳ ಬಗ್ಗೆ ತುಂಬಾ ವಿವರವಾಗಿ ಅಧ್ಯಯನ ಮಾಡಿದ್ದೇವೆ ಎಂದು ಅವರು ನುಡಿಯುತ್ತಾರೆ.

೨೦೧೯ರಲ್ಲಿ ಬ್ರಿಟನ್‌ನ ಒಬ್ಬ ಹದಿ ಹರಯದ ಯುವತಿಗೆ ಒಂದು ಗಂಭೀರ ರೀತಿಯ ಸೋಂಕು ಆದಾಗ ಅಲ್ಲಿನ ವೈದ್ಯರುಗಳ ಮನವಿಗೆ ಸ್ಪಂದಿಸಿ ಪ್ರೊ. ಹತ್-ಲ್‌ರ ಲ್ಯಾಬ್‌ನಿಂದ ಕಳುಹಿಸಿದ ಫೇಜ್ ನಿಂದ ಚಿಕಿತ್ಸೆ ಮಾಡಿದ ನಂತರ ಆಕೆ ಇನ್ನೇನು ಮರಣ ಸನ್ನಿಹಿತವಾಯಿತು ಎಂಬ ಹಂತದಿಂದ ಪವಾಡ ಸದೃಶ ರೀತಿ ಬದುಕುಳಿದಳು. ಇದು ಆಗ ಈ ರೀತಿ ವೈರಸ್‌ನಿಂದ ಮಾಡಿದ ಚಿಕಿತ್ಸೆಯ ಮೊದಲ ಪ್ರಕರಣ ವಾಗಿತ್ತು (ಜಗತ್ತಿನಲ್ಲಿ). ಈ ಘಟನೆಯ ನಂತರ ಪ್ರಪಂಚದ ಹಲವು ಭಾಗಗಳಿಂದ ಇವರ ಲ್ಯಾಬ್‌ಗೆ ಫೇಜ್‌ಗಳನ್ನು ಹುಡುಕಿ ಒದಗಿಸುವಂತೆ ಮನವಿಗಳು ಬರತೊಡಗಿದವು.

ಈ ಲೇಖನದ ಆರಂಭದಲ್ಲಿ ತಿಳಿಸಿದ ಜರೋಡ್ ಜಾನ್ಸನ್‌ರದ್ದೂ ಅದೇ ರೀತಿಯದು. ಅಮೆರಿಕದ ಡೆನ್ವರ್‌ನ ರಾಷ್ಟ್ರೀಯ ಜ್ಯೂವಿಷ್
ಹೆಲ್ತನ ಸಿಸ್ಟಿಕ್ -ಬ್ರೋಸಿಸ್ ಕಾರ್ಯಕ್ರಮದ ನಿರ್ದೇಶಕ ಡಾ. ಜೆರ್ರಿನಿಕ್‌ರ ಮನವಿಯ ಮೇರೆಗೆ ಜರಾಡ್‌ಗೆ ಫೇ ಚಿಕಿತ್ಸೆ ಕೈಗೊಳ್ಳಲಾಗಿತ್ತು.
ಮೊದಲು ತಿಳಿಸಿದಂತೆ ಆತನಿಗೆ ಶ್ವಾಸಕೋಶದ ಜೆನೆಟಿಕ್ ಕಾಯಿಲೆ ಸಿಸ್ಟಿಕ್ ಫೈಬ್ರೋಸಿಸ್ ಆಗಿತ್ತು. ಈ ಕಾಯಿಲೆಯಲ್ಲಿ ಶ್ವಾಸಕೋಶ ದಲ್ಲಿ ಪದೇ ಪದೇ ಸೋಂಕು ಆಗಿ ಶ್ವಾಸಕೋಶವು ಮ್ಯೂಕಸ್ ಎಂಬ ದೇಹಕ್ಕೆ ಅಗತ್ಯವಿಲ್ಲದ ದ್ರವದಿಂದ ತುಂಬಿಕೊಳ್ಳುತ್ತ ಬರುತ್ತದೆ.

೨೦೨೦ ರ ಹೊತ್ತಿಗೆ ಆತನ ಶ್ವಾಸಕೋಶದ ಶೇಕಡ ೬೫ ಕ್ಕಿಂತ ಹೆಚ್ಚಿನ ಭಾಗದಲ್ಲಿ ಮ್ಯೂಕಸ್ ದ್ರವ ತುಂಬಿ ಶ್ವಾಸಕೋಶದ ಸಾಮರ್ಥ್ಯ ಶೇಕಡ ೩೫ ರಷ್ಟು ಮಾತ್ರ ಇತ್ತು. ಆತನಿಗೆ ಆರು ವರ್ಷಗಳ ಸುದೀರ್ಘ ಅವಧಿಯಿಂದ ಈ ಸೋಂಕು ಇತ್ತು. ಅಂತಹ ಸಂದರ್ಭಗಳಲ್ಲಿ ಶ್ವಾಸಕೋಶದ ಕಸಿ ಚಿಕಿತ್ಸೆಯನ್ನು ವೈದ್ಯರು ಸಲಹೆ ಮಾಡುತ್ತಾರೆ. ಆದರೆ ಕಸಿ ಶಸ್ತ್ರಕ್ರಿಯೆಯ ಸಂದರ್ಭದಲ್ಲಿ ಇಮ್ಯುನೋಸ ಪ್ರೆಸಂಟ್ ಔಷಧಗಳನ್ನು ದೀರ್ಘಕಾಲ ನೀಡಬೇಕಾಗುತ್ತದೆ. ಹಾಗೆ ಮಾಡಿದಾಗ ಇರುವ ಸೋಂಕು ತೀವ್ರವಾಗಿ ಹರಡಬಹುದೆಂದು ಶ್ವಾಸಕೋಶದ ಕಸಿ ಶಸ್ತ್ರಕ್ರಿಯೆಗೆ ಆತ ಸೂಕ್ತ ರೋಗಿಯಲ್ಲ ಎಂದು ವೈದ್ಯರು ಆತನಿಗೆ ಕಸಿ ಚಿಕಿತ್ಸೆ ಮಾಡಲಿಲ್ಲ.

ಫೇಜ್ ಚಿಕಿತ್ಸೆಯ ಮೊದಲು ಆತ ೧೧ ಬಾರಿ ಆಸ್ಪತ್ರೆಗೆ ದಾಖಲಾಗಿದ್ದ. ಹಾಗೆಯೇ ಒಟ್ಟಾಗಿ ೨೦೦ ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ. ಫೇಜ್ ಚಿಕಿತ್ಸೆ ಕೈಗೊಳ್ಳದಿದ್ದರೆ ಆತ ಮರಣ ಹೊಂದುವುದು ಖಾತ್ರಿಯಾಗಿತ್ತು. ೨೦೧೬ ರಲ್ಲಿಯೇ ಜಾನ್ಸನ್‌ನ ಶ್ವಾಸಕೋಶದಿಂದ
ಮೈಕೋಬ್ಯಾಕ್ಟೀರಿಯ ಅಬ್ಸೆಸಸ್ ಬ್ಯಾಕ್ಟೀರಿಯಾದ ಸ್ಯಾಂಪಲ್‌ಗಳನ್ನು ಡಾ. ನಿಕ್ ಮತ್ತು ಸಹೋದ್ಯೋಗಿಗಳು ಹತ್ ಫುಲ್‌ರ ಲ್ಯಾಬಿಗೆ ಕಳಿಸಿದ್ದರು. ಆ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುವ ಫೇಜ್‌ಗಳನ್ನು ಹುಡುಕಿ ಕಳುಹಿಸಲಿ ಎಂಬುದು ಅವರ ಉದ್ದೇಶವಾಗಿತ್ತು.

ಆದರೆ ಈ ಫೇಜ್‌ಗಳು ನಿರ್ದಿಷ್ಟ ಬ್ಯಾಕ್ಟೀರಿಯಾಗಳನ್ನು ಮಾತ್ರ ನಾಶಪಡಿಸಲು ಶಕ್ತವಾಗುತ್ತವೆ. ಒಂದು ಡಜನ್‌ಗೂ ಜಾಸ್ತಿ ಫೇಜ್‌ಗಳನ್ನು ಸ್ಕ್ರೀನ್ ಮಾಡಿದರೂ ಸೂಕ್ತ ಫೇಜ್ ಅವರಿಗೆ ಆಗ ಲಭ್ಯವಾಗಲಿಲ್ಲ. ಕೊನೆಯಲ್ಲಿ ಆ ಲ್ಯಾಬ್‌ನವರು ಎರಡು ಫೇಜ್‌ಗಳನ್ನು ನಿರ್ದಿಷ್ಟವಾಗಿ ಅಂತಿಮಗೊಳಿಸಿದರು. ನಂತರ ಅವುಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಜೆನೆಟಿಕ್ ಎಂಜಿನಿಯರಿಂಗ್ ತಂತ್ರಜ್ಞಾನ ಬಳಸಲಾಯಿತು.
ಜಾನ್ಸನ್‌ಗೆ ನಂತರ -ಜಸ್ ಮತ್ತು ಆಂಟಿಬಯೋಟಿಕ್ ಎರಡನ್ನೂ ಬಳಸಿ ಒಂದು ವರ್ಷಕ್ಕೂ ಹೆಚ್ಚು ಕಾಲ ಚಿಕಿತ್ಸೆ ಮಾಡಲಾಯಿತು. ಪ್ರತಿ ದಿನ ೨ ಇಂಜೆಕ್ಷನ್‌ಗಳನ್ನು ರಕ್ತನಾಳದ (ವೇಯ್ನ್) ಮೂಲಕ ಕೊಡಲಾಯಿತು.

ಅಂತಿಮವಾಗಿ ಆತನ ಸೋಂಕು ಸಂಪೂರ್ಣವಾಗಿ ಇಲ್ಲವಾದ ನಂತರ ಆತನಿಗೆ ಶ್ವಾಸಕೋಶದ ಕಸಿ ಚಿಕಿತ್ಸೆ ಕೈಗೊಳ್ಳಲಾಯಿತು.
ಆನಂತರ ಆತ ಸಂಪೂರ್ಣವಾಗಿ ಆರೋಗ್ಯವಂತನಾಗಿ ಕಾಲೇಜು ಶಿಕ್ಷಣ ಮುಂದುವರಿಸಿ ಸೂಕ್ತ ವೃತ್ತಿ ಆಯ್ಕೆ ಮಾಡಿ ಕೆಲಸಕ್ಕೂ ಸೇರಿ ದನು. ಬ್ಯಾಕ್ಟೀರಿಯೋಫೈಜ್‌ಗಳು ಅಥವಾ ಫೇಜ್ ಗಳು ಬ್ಯಾಕ್ಟೀರಿಯಾದ ಜೀವಕೋಶಗಳಿಗೇ ಸೋಂಕು ಉಂಟು ಮಾಡಿ ಅವುಗಳನ್ನು ನಿಧಾನವಾಗಿ ಕೊಲ್ಲುತ್ತವೆ. ಆದರೆ ಅವು ತುಂಬಾ ಸ್ಪೆಸಿಫಿಕ್. ಅಂದರೆ ನಿರ್ದಿಷ್ಟ ಫೇಜ್‌ಗಳು ನಿರ್ದಿಷ್ಟ ಬ್ಯಾಕ್ಟೀರಿಯಾಗಳನ್ನು ಮಾತ್ರ ಕೊಲ್ಲಬಹುದು.

ಇದಕ್ಕಾಗಿ ಲ್ಯಾಬ್‌ನಲ್ಲಿ ಲಭ್ಯವಿರುವ ಫೇಜ್‌ಗಳನ್ನು ಆಯ್ದು, ಅವುಗಳ ಜೆನೆಟಿಕ್ ಸೀಕ್ವೆನ್ಸಿಂಗ್ ಮಾಡಿ ಸೋಂಕು ಉಂಟುಮಾಡುತ್ತಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಸಾಮರ್ಥ್ಯ ಇದೆಯೇ ಎಂದು ದೀರ್ಘಕಾಲ ಲ್ಯಾಬ್‌ನಲ್ಲಿ ಪರಿಶೀಲಿಸಿ ನಂತರ ಅಂತಿಮ ನಿರ್ಧಾರಕ್ಕೆ
ಬರಬೇಕಾಗುತ್ತದೆ. ಇವುಗಳು ಬ್ಯಾಕ್ಟೀರಿಯಾಗಳ ವಿರುದ್ಧ ಒಂದು ರೀತಿಯಲ್ಲಿ ಆಂಟಿಬಯೋಟಿಕ್‌ಗಳ ರೀತಿಯಲ್ಲಿಯೇ ಕೆಲಸ ಮಾಡುತ್ತವೆ.

ಮತ್ತೊಬ್ಬ ರೋಗಿ, 56 ವರ್ಷದವ, ಸಂಧಿವಾತದಿಂದ ಬಳಲುತ್ತಿದ್ದ. ಆತನು ಗಂಭೀರವಾದ ಚರ್ಮದ ಸೋಂಕಿಗೆ ಒಳಗಾದ. ಇಮ್ಯುನೊಸಪ್ರೆಸಿವ್ ಔಷಧಗಳಿಂದ ದೀರ್ಘಕಾಲದ ಚಿಕಿತ್ಸೆ ಕೈಗೊಂಡಾಗ ಈ ತರಹದ ಸೋಂಕು ಕೆಲವೊಮ್ಮೆ ಬರುತ್ತದೆ. ಆತನ ಚಿಕಿತ್ಸೆಗೆ ಬೇಕಾದ ಒಂದೇ ಫೇಜ್ ಸ್ವಲ್ಪ ಬೇಗ ದೊರಕಿತು. ಕೆಲವೇ ವಾರಗಳ ಚಿಕಿತ್ಸೆಯ ನಂತರ ಆತನ ಸೋಂಕು ಕಡಿಮೆಯಾಗುತ್ತ ಬಂದಿತು. ಎರಡು ತಿಂಗಳ ನಂತರ ಬಯಾಪ್ಸಿ ಪರೀಕ್ಷೆಯಲ್ಲಿ ಬ್ಯಾಕ್ಟೀರಿಯಾ ಇಲ್ಲವೆಂದು ವರದಿ ಬಂದಿತು.

ಒಟ್ಟಿನಲ್ಲಿ ಆತನಿಗೆ ೮ ತಿಂಗಳ ಚಿಕಿತ್ಸೆ ನೀಡಲಾಗಿತ್ತು. ಹಾಗಾಗಿ ಮುಂದಿನ ದಿನಗಳಲ್ಲಿ ಡ್ರಗ್ ರೆಸಿಸ್ಟಂಟ್ ಬ್ಯಾಕ್ಟೀರಿಯಾಗಳ ವಿರುದ್ಧ ನಿರ್ದಿಷ್ಟ ಫೇಜ್‌ಗಳ ಆಯ್ಕೆ ಮತ್ತು ಚಿಕಿತ್ಸೆ ಎಲ್ಲಾ ಕಡೆಯಲ್ಲೂ ಲಭ್ಯವಾದರೆ ತೀವ್ರ ರೀತಿಯ ಸೋಂಕಿನ ರೋಗಿಗಳಿಗೆ ವರದಾನವಾಗ ಬಲ್ಲದು.